ಹಾಸನ, ಮಾರ್ಚ್ 20:ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಚಾರ್ಜ್ಶೀಟ್ನಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಹಾಸನದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸುವ ಯತ್ನ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಟ್ಟು, ಯಾವುದೇ ಸಂಬಂಧವಿಲ್ಲದ 10-12 ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಸಿಲುಕಿಸಲಾಗಿದೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲು, ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿರುವುದನ್ನು ಖಂಡಿಸುತ್ತೇವೆ. ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸರ್ಕಾರ ಹೊರತರಬೇಕು. ಈ ಸಂಬಂಧ ತಮ್ಮ ಪಕ್ಷದ ಕಾರ್ಯಕರ್ತರು ಧೃತಿಗೆಡಬಾರದು ಎಂದು ಮನವಿ ಮಾಡಿರುವ ಅವರು, ಕಾನೂನು ಹೋರಾಟಕ್ಕೆ ಸಿದ್ಧವಾಗಿರೋದಾಗಿ ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 20: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕನೋರ್ವ ಆಕೆಯನ್ನು ಡ್ಯಾಗರ್ನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿ ಹಫೀಜ್ನ ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬಾಕೆಯನ್ನು ಈತ ಹತ್ಯೆಗೈದಿದ್ದು, ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಫೀಜ್ನ ಅರೆಸ್ಟ್ ಮಾಡಲಾಗಿದೆ. ಮಹಿಳೆ ಆರೋಪಿಯನ್ನು ದೂರ ಮಾಡಿದ್ದೇ ಕೊಲೆಗೆ ಕಾರಣವಾಗಿದ್ದು, ಫೀರ್ದೋಸ್ ಬಾನುಗೆ ಆರೋಪಿ ಹಫೀಜ್ ಜತೆ ಸಂಪರ್ಕ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.
ಮೃತ ಫೀರ್ದೋಸ್ ಬಾನು ಮತ್ತು ಆರೋಪಿ ಹಫೀಜ್ ಇಬ್ಬರು ಚೆನ್ನಾಗಿಯೇ ಇದ್ದರು. ಈ ವಿಚಾರ ಮಹಿಳೆ ಕುಟುಂಬಕ್ಕೂ ಗೊತ್ತಿತ್ತು. ಈ ನಡುವೆ ಫೀರ್ದೋಸ್ಗೆ ಕುಟುಂಬದವರು ಬುದ್ಧಿವಾದ ಹೇಳಿದ್ದರು. ಆ ಬಳಿಕ ಫೆ.28ರಂದು ಮಹಿಳೆ ಜತೆ ಹಫೀಜ್ ಗಲಾಟೆ ಮಾಡಿದ್ದ. ಈ ಸಂಬಂಧ ಚಂದ್ರಾಲೇಔಟ್ ಪೊಲೀಸರಿಗೆ ಫೀರ್ದೋಸ್ ಬಾನು ಕುಟುಂಬ ದೂರು ನೀಡಿತ್ತು. ಪ್ರಕರಣ ಸಂಬಂಧ ಆರೋಪಿ ಹಫೀಜ್ನನ್ನು ಠಾಣೆಗೆ ಕರೆದು ಬುದ್ಧಿವಾದ ಹೇಳಲಾಗಿತ್ತು. ಜೊತೆಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿಕೊಂಡಿದ್ದರು. ಕೇಸ್ ಬೇಡ ಮುಚ್ಚಳಿಕೆ ಬರೆಸಿಕೊಡಿ ಎರಡೂ ಕಡೆಯವರು ಎಂದಿದ್ದರು. ಆದರೆ ನಿನ್ನೆ ಸಂಜೆ ಮನೆಗೆ ತೆರಳುವ ದಾರಿಯಲ್ಲಿ ಫೀರ್ದೋಸ್ನ ಹಫೀಜ್ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಬಂಧಿಸಿರುವ ಚಂದ್ರಾಲೇಔಟ್ ಠಾಣೆಯ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಇನ್ನು ಪ್ರಕರಣ ಮಾಹಿತಿ ನೀಡಿರುವ ಪಶ್ಚಿಮ ವಲಯ ಡಿಸಿಪಿ ಯತೀಶ್, ಆರೋಪಿ ಹಫೀಜ್ ಮತ್ತು ಕೊಲೆಯಾಗಿರುವ ಫಿರ್ದೋಸ್ ಬಾನು ಇಬ್ಬರಿಗೂ ಪ್ರತ್ಯೇಕ ಮದುವೆಯಾಗಿ ಮಕ್ಕಳಿದ್ದಾರೆ. ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಹಿಳೆ ನಿನ್ನೆ ಕೆಲಸಕ್ಕೆ ಹೋಗಿ ಬರುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆತ, ಸುಮಾರು ಆರೇಳು ಬಾರಿ ಚಾಕುವಿನಿಂದ ಇರಿದ್ದಿದ್ದಾನೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ, ಮಾ.20: ನಗರದ ಜನನಿಬಿಡ ಪ್ರದೇಶವಾದ ಅಕ್ಕಮಹಾದೇವಿ ವೃತ್ತದಲ್ಲಿ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದ್ದು, ಸೃವದೈವವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ವೇಗವಾಗಿ ಬಂದ ಬ್ರೀಜಾ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಈ ಮೈನವಿರೇಳಿಸುವ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ್ಯಂಬ್ಯುಲೆನ್ಸ್ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್ಗಿಂತಲೂ ದೊಡ್ಡ ಸ್ಟಾರ್ ಆಗಿದ್ದ ಚಿರಂಜೀವಿ, ಭಾರತದಲ್ಲಿ ಒಂದು ಕೋಟಿ ಸಂಭಾವನೆ ಪಡೆದಿದ್ದ ಮೊದಲ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಚಿರಂಜೀವಿ, ಸಿನಿಮಾ ನಟರುಗಳು ಹೇಗೆ ಅಭಿಮಾನಿ ಸಂಘಗಳ ಬಳಸಿ ಎಷ್ಟು ಸಕ್ರಿಯವಾಗಿ ಸಮಾಜ ಸೇವೆ ಮಾಡಬಹುದು ಎಂದು ತೋರಿಸಿಕೊಟ್ಟ ಕೆಲವೇ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೆಗಾಸ್ಟಾರ್ ಅವರು ಪ್ರಾರಂಭಿಸಿದ ಬ್ಲಡ್ ಬ್ಯಾಂಕ್ಗಳು ಸಾವಿರಾರು ಜೀವಗಳನ್ನು ಉಳಿಸಿವೆ. ಈಗಲೂ ಸಹ ಚಿರಂಜೀವಿ ಹಲವು ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಬಹಳ ಮಹತ್ವವಾದ ಒಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದು, ಅದಕ್ಕೆ ಸ್ಪೂರ್ತಿ ತಮಿಳಿನ ಯುವ ಸ್ಟಾರ್ ನಟ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ.
ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಚಿರಂಜೀವಿ ಅವರು ಸಮಾಜಸೇವೆಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ನಡೆಸುತ್ತಾ ಲಕ್ಷಾಂತರ ಜೀವಗಳನ್ನು ಉಳಿಸಿರುವ ಚಿರಂಜೀವಿ, ಈಗ ಶಿಕ್ಷಣ ಕ್ಷೇತ್ರದತ್ತ ಹೆಜ್ಜೆ ಇಟ್ಟಿದ್ದಾರೆ. ತಮಿಳು ನಟ ಸೂರ್ಯ ನಡೆಸುತ್ತಿರುವ ‘ಅಗರಂ ಫೌಂಡೇಶನ್’ ಇಂದು ಸ್ಪೂರ್ತಿ ಪಡೆದು ಈ ಹೊಸ ಹೆಜ್ಜೆ ಇಟ್ಟಿರುವುದಾಗಿ ಚಿರಂಜೀವಿ ಹೇಳಿದ್ದಾರೆ. ಹಿರಿಯ ನಟರಾದರೂ ಕಿರಿಯ ನಟನಿಂದ ಸ್ಪೂರ್ತಿ ಪಡೆದಿರುವುದಾಗಿ ಯಾವುದೇ ಅಹಂ ಇಲ್ಲದೆ ಹೇಳಿಕೊಂಡಿದ್ದಾರೆ ಚಿರಂಜೀವಿ.
ಆಸಕ್ತಿಕರ ವಿಷಯವೆಂದರೆ ಈ ಹಿಂದೆ ನಟ ಸೂರ್ಯ ಅವರು ತಮ್ಮ ‘ಅಗರಂ ಫೌಂಡೇಶನ್’ನ ಸಮಾರಂಭದಲ್ಲಿ, ಮೆಗಾಸ್ಟಾರ್ ಚಿರಂಜೀವಿ ಅವರ ರಕ್ತದಾನ ಶಿಬಿರಗಳಿಂದ ಸ್ಫೂರ್ತಿ ಪಡೆದು ತಮ್ಮ ಫೌಂಡೇಶನ್ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಈಗ ಅದೇ ಚಿರಂಜೀವಿ ಅವರು ಸೂರ್ಯ ಅವರ ಶಿಕ್ಷಣ ಸೇವೆಯನ್ನು ಕಂಡು, ಅದರಿಂದಲೇ ಸ್ಫೂರ್ತಿ ಪಡೆದು ತೆಲುಗು ರಾಜ್ಯಗಳು ಸೇರಿದಂತೆ ಅಗತ್ಯವಿರುವ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.
ಈ ಯೋಜನೆಯು ಕೇವಲ ಆಂಧ್ರಪ್ರದೇಶ ಅಥವಾ ತೆಲಂಗಾಣಕ್ಕೆ ಸೀಮಿತವಾಗಿರದೆ, ದೇಶದ ಯಾವುದೇ ಭಾಗದಲ್ಲಿ ಶಿಕ್ಷಣದ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದೆಯಂತೆ. ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಯೋಜನೆಯ ರೂಪುರೇಷೆ ಮತ್ತು ಅನುಷ್ಠಾನದ ಬಗ್ಗೆ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವುದಾಗಿ ಚಿರಂಜೀವಿ ತಿಳಿಸಿದ್ದಾರೆ.
‘ಒಬ್ಬ ವ್ಯಕ್ತಿ ಸುಶಿಕ್ಷಿತನಾದರೆ ಆ ಇಡೀ ಕುಟುಂಬವೇ ಅಭಿವೃದ್ಧಿ ಹೊಂದುತ್ತದೆ. ರಕ್ತದಾನವು ಜೀವ ಉಳಿಸಿದರೆ, ಶಿಕ್ಷಣವು ಒಂದು ತಲೆಮಾರಿನ ಭವಿಷ್ಯವನ್ನೇ ಬದಲಿಸುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಚಿರಂಜೀವಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ರಕ್ತದಾನ ಮತ್ತು ನೇತ್ರದಾನದ ಮೂಲಕ ಜನಸಾಮಾನ್ಯರ ಆಪದ್ಬಾಂಧವರಾಗಿರುವ ಚಿರಂಜೀವಿ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮತ್ತು ಸಮಾಜದ ಗಣ್ಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ತಮ್ಮ ಅಣ್ಣನ ಈ ಉದಾತ್ತ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಬಾಲಿವುಡ್‌ನಲ್ಲಿ ನಾನಾ ಪಾಟೇಕರ್ ತಮ್ಮ ಅದ್ಭುತ ನಟನೆಗೆ ಮಾತ್ರವಲ್ಲದೆ ತಮ್ಮ ನೇರ ಮಾತು ಹಾಗೂ ಸ್ವಭಾವಕ್ಕೂ ಹೆಸರುವಾಸಿಯಾಗಿದ್ದಾರೆ. ನಾನಾ ತನ್ನ ಮನಸ್ಸಿಗೆ ಬಂದದ್ದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಈ ಮೊದಲು ಪಂಕಜ್ ತ್ರಿಪಾಠಿಗೆ ಹೊಡೆಯೋದಾಗಿ ಬೆದರಿಕೆ ಹಾಕಿದ್ದರು. ಅದಕ್ಕೆ ಕಾರಣವೂ ಇತ್ತು.
ನಾನಾ ಪಾಟೇಕರ್ ಅವರ ಸ್ವಭಾವ ಅವರ ಹೃದಯದಷ್ಟೇ ಕಠಿಣ. ಆದರೆ, ಅವರಲ್ಲಿ ಒಳ್ಳೆಯ ಮನಸ್ಸು ಕೂಡ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಹೊಸ ಕಲಾವಿದರನ್ನು ಪ್ರೋತ್ಸಾಹಿಸುವುದು ಅವರ ಸ್ವಭಾವ. 2018ರಲ್ಲಿ, ನಾನಾ ಪಾಟೇಕರ್ ರಜನಿಕಾಂತ್ ಅವರ ‘ಕಾಲಾ’ದಲ್ಲಿ ಖಳನಾಯಕ ‘ಹರಿದೇವ್ ಅಭ್ಯಂಕರ್’ ಪಾತ್ರವನ್ನು ನಿರ್ವಹಿಸಿದರು. ಚಿತ್ರದ ಸೆಟ್ ಅಲ್ಲಿ ಪಂಕಜ್ ತ್ರಿಪಾಠಿ ಕೂಡ ಇದ್ದರು.
ಪಂಕಜ್ ಅವರನ್ನು ನೋಡಿ ನಾನಾ ಸಂಪೂರ್ಣವಾಗಿ ಮೂಕವಿಸ್ಮಿತರಾಗಿದ್ದರು. ಪಂಕಜ್ ತ್ರಿಪಾಠಿ ‘ಕಾಲಾ’ದಲ್ಲಿ ಪೊಲೀಸ್ ಅಧಿಕಾರಿಯಾಗಿ ಒಂದು ಸಣ್ಣ ಪಾತ್ರವನ್ನು ಮಾತ್ರ ನಿರ್ವಹಿಸಿದ್ದರು. ಅಂತಹ ಪಾತ್ರವನ್ನು ಯಾವುದೇ ಸಾಮಾನ್ಯ ಕಲಾವಿದನಿಗೆ ಸುಲಭವಾಗಿ ನೀಡಬಹುದಿತ್ತು. ಆದರೆ ಇಂತಹ ಪ್ರತಿಭಾನ್ವಿತ ನಟನನ್ನು ಇಷ್ಟು ಸಣ್ಣ ಪಾತ್ರದಲ್ಲಿ ನೋಡಿ, ನಾನಾ ಕೋಪಗೊಂಡರು.
‘ಪಂಕಜ್, ನೀವು ಇಲ್ಲಿ ಏನು ಮಾಡುತ್ತಿದ್ದೀರಿ?’ ಎಂದು ನಾನಾ ಕೇಳಿದರು. ಪಂಕಜ್ ತುಂಬಾ ಸರಳವಾಗಿ ಮತ್ತು ವಿನಮ್ರವಾಗಿ “ಸರ್, ನನಗೆ ಒಂದು ಸಣ್ಣ ಪಾತ್ರವಿದೆ. ನಾನು ನಿಮ್ಮ ಮತ್ತು ರಜನಿಕಾಂತ್ ಸರ್ ಜೊತೆ ಕೆಲಸ ಮಾಡಲು ಬಂದಿದ್ದೇನೆ’ ಎಂದರು. ಇದನ್ನು ಕೇಳಿದ ನಾನಾ ಅವರಿಗೆ ಕೋಪ ಬಂತು. ‘ನೀವು ಇಷ್ಟು ದೊಡ್ಡ ನಟ, ನೀವು ಯಾಕೆ ಇಷ್ಟು ಸಣ್ಣ ಪಾತ್ರಗಳನ್ನು ಮಾಡುತ್ತಿದ್ದೀರಿ? ನಮ್ಮೊಂದಿಗೆ ಕೆಲಸ ಮಾಡುವುದರಿಂದ ನೀವು ದೊಡ್ಡವರಾಗುವುದಿಲ್ಲ. ನೀವು ಈಗಾಗಲೇ ನಿಮ್ಮ ನಟನೆ ಮತ್ತು ಕಲೆಯಿಂದ ಸಾಕಷ್ಟು ಬೆಳೆದಿದ್ದೀರಿ. ನೀವು ಮತ್ತೆ ಇಂತಹ ಸಣ್ಣ ಪಾತ್ರಗಳನ್ನು ಒಪ್ಪಿಕೊಂಡರೆ, ನಾನು ನಿಮ್ಮನ್ನು ಹಿಡಿದು ಕೊಲ್ಲುತ್ತೇನೆ’ ಎಂದು ಹೇಳಿದ್ದರಂತೆ.
‘ಇಲ್ಲ ಸರ್. ನಾನು ನಿಮ್ಮಂತಹ ದಿಗ್ಗಜರೊಂದಿಗೆ ಕೆಲಸ ಮಾಡಲು ಬಯಸಿದ್ದೆ’ ಎಂದು ಹೇಳಿದರು. ಆದರೆ ನಾನಾಗೆ ಮನವರಿಕೆಯಾಗಲಿಲ್ಲ. ಅವರ ಪ್ರಕಾರ, ಒಬ್ಬ ಕಲಾವಿದ ತನ್ನ ಪ್ರತಿಭೆಯನ್ನು ಗೌರವಿಸಬೇಕು. ದೊಡ್ಡ ನಟರೊಂದಿಗೆ ಕೆಲಸ ಮಾಡಬಲ್ಲನೆಂಬ ಕಾರಣಕ್ಕಾಗಿ ತನ್ನ ಮೌಲ್ಯವನ್ನು ಕುಗ್ಗಿಸುವ ಪಾತ್ರಗಳನ್ನು ಒಪ್ಪಿಕೊಳ್ಳುವುದು ಕಲೆಗೆ ಮಾಡುವ ಅವಮಾನ ಎಂದು ಅವರು ನಂಬುತ್ತಾರೆ.
ನವದೆಹಲಿ, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಮತ್ತು ಅದರ ಆರ್ಥಿಕ ಪರಿಣಾಮಗಳಿಂದಾಗಿ ಭಾರತೀಯ ರೂಪಾಯಿ ಮೌಲ್ಯ (Rupee value) ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಸದ್ಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 93 ರ ಗಡಿ ದಾಟಿದೆ. ಕಚ್ಚಾತೈಲ ಬೆಲೆ ಗಗನಕ್ಕೇರಿಕೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಚ್ಚಾತೈಲ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಯುದ್ಧ ಹೀಗೆಯೇ ಮುಂದುವರಿದರೆ 180-200 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ದೇಶಗಳು ಎಚ್ಚರಿಕೆ ನೀಡಿವೆ.
ಮತ್ತೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 93ರ ಗಡಿ ದಾಟಿರುವುದು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದೆ. ರೂಪಾಯಿ ಮೌಲ್ಯ ಕುಸಿದಾಗ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ.
ಯಾವೆಲ್ಲಾ ವಸ್ತುಗಳು ದುಬಾರಿಯಾಗಬಹುದು?
ಭಾರತವು ಶೇ 80 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ಕುಸಿದಾಗ, ತೈಲ ಕಂಪನಿಗಳು ಹೆಚ್ಚು ಹಣ ಪಾವತಿಸಬೇಕಾಗುತ್ತದೆ, ಇದರಿಂದ ಪೆಟ್ರೋಲ್ ದರ ಏರಿಕೆಯಾಬಹುದು.
ಪಾಮ್ ಆಯಿಲ್ ಸೇರಿದಂತೆ ಅನೇಕ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲಿದೆ.
ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ರೆಫ್ರಿಜರೇಟರ್‌ಗಳ ಬಿಡಿಭಾಗಗಳು ವಿದೇಶದಿಂದ ಬರುವುದರಿಂದ ಇವುಗಳ ಬೆಲೆ ಶೇ 5-10 ರಷ್ಟು ಹೆಚ್ಚಾಗಬಹುದು.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್‌ನಲ್ಲಿ ವ್ಯವಹಾರ ಮಾಡುವುದರಿಂದ ರೂಪಾಯಿ ಕುಸಿತವಾದಾಗ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.
ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಫೀಸ್ ಮತ್ತು ಪ್ರವಾಸದ ಖರ್ಚು ಡಾಲರ್ ಲೆಕ್ಕದಲ್ಲಿರುವುದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಲಿದೆ.
ರೂಪಾಯಿ ಮೌಲ್ಯ ಕುಸಿತದ ಸಕಾರಾತ್ಮಕ, ನಕಾರಾತ್ಮಕ ಪರಿಣಾಮಗಳೇನು?
ರೂಪಾಯಿ ಮೌಲ್ಯ ಕುಸಿತದಿಂದ ಸಾರಿಗೆ ವೆಚ್ಚ (ಡೀಸೆಲ್ ಬೆಲೆ) ಏರುವುದರಿಂದ ತರಕಾರಿ, ಬೇಳೆಕಾಳು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತದೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಉತ್ಪಾದನಾ ವಲಯದ ಕಂಪನಿಗಳ ಲಾಭ ಕಡಿಮೆಯಾಗುತ್ತದೆ. ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆದ ಕಂಪನಿಗಳಿಗೆ ಬಡ್ಡಿ ಪಾವತಿಸುವುದು ದುಬಾರಿಯಾಗುತ್ತದೆ.
ಮತ್ತೊಂದೆಡೆ, ವಿದೇಶಕ್ಕೆ ರಫ್ತು ಮಾಡಿ ಡಾಲರ್ ರೂಪದಲ್ಲಿ ಹಣ ಪಡೆಯುವುದರಿಂದ ಐಟಿ ಕಂಪನಿಗಳು, ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮದವರಿಗೆ ಹೆಚ್ಚಿನ ಲಾಭ ಸಿಗಬಹುದು. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು ತವರಿಗೆ ಹಣ ಕಳುಹಿಸಿದಾಗ, ಹೆಚ್ಚಿನ ರೂಪಾಯಿಗಳು ಕೈಸೇರಲಿವೆ. ವಿದೇಶಿ ಪ್ರವಾಸ ದುಬಾರಿಯಾದಾಗ ಜನರು ದೇಶದೊಳಗಿನ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದರೆ, ಇದರಿಂದ ಸ್ಥಳೀಯ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದು.
ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಲೋಕಸಭೆ ಅಧಿವೇಶನದಲ್ಲಿಯೂ ಸಹ ಹಾಡಿನ ಕುರಿತು ಚರ್ಚೆ ಆಗಿದೆ. ಇದೀಗ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಮೌಲ್ವಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಕನ್ನಡ ಚಿತ್ರ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ’ ಹಾಡಿನಲ್ಲಿನ ಅವರ ಅಶ್ಲೀಲ ನೃತ್ಯ ಪ್ರದರ್ಶನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ. ಹಾಡಿನಲ್ಲಿರುವ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ‘ಅಶ್ಲೀಲ’ವಾಗಿದ್ದು, ಇಸ್ಲಾಮಿಕ್ ಬೋಧನೆಗಳು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ. ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ತಿಳಿಸಿದ್ದಾರೆ.
ಹಾಡು ‘ಪ್ರಚೋದನಾತ್ಮಕ ಮತ್ತು ಅಶ್ಲೀಲ’ ದೃಶ್ಯಗಳ ಬಗ್ಗೆ ಸಮಸ್ಯೆ ಇದೆ ಎಂದು ಮುಖ್ಯ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು ಫತ್ವಾ ಹೊರಡಿಸಿದ್ದಾರೆ. ಅಂತಹ ವಿಷಯವು ಹರಾಮ್ ಮತ್ತು ಗುನಾಹ್-ಎ-ಕಬೀರಾ (ಗಂಭೀರ ಪಾಪ) ಎಂದಿದ್ದು ಅಂತಹ ವಿಷಯಗಳಲ್ಲಿ ಭಾಗವಹಿಸುವುದು ಅಥವಾ ಪ್ರಚಾರ ಮಾಡುವುದು ಧಾರ್ಮಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಫತ್ವಾ ಎನ್ನುವುದು ಇಸ್ಲಾಂನಲ್ಲಿ ಮುಫ್ತಿ ಎಂದು ಕರೆಯಲ್ಪಡುವ ಧಾರ್ಮಿಕ ಕಾನೂನು ತಜ್ಞರು ನಿರ್ದಿಷ್ಟ ವಿಷಯದ ಕುರಿತು ನೀಡುವ ಅಭಿಪ್ರಾಯವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ.
ಈ ಹಾಡಿನ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ಹಾಡನ್ನು ಬ್ಯಾನ್ (ನಿಷೇಧ) ಮಾಡಲಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಹಾಡಿನಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂಬ ದೂರಿನ ಮೇರೆಗೆ ರಾಷ್ಟ್ರೀಯ ಮಹಿಳಾ ಆಯೋಗವು (NCW) ನೋರಾ ಫತೇಹಿ, ಸಂಜಯ್ ದತ್ ಮತ್ತು ಗೀತರಚನೆಕಾರ ರಕೀಬ್ ಆಲಂ ಅವರಿಗೆ ಸಮನ್ಸ್ ನೀಡಿದೆ.
ಈ ವಿವಾದದ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ‘ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ಆ ಸಮಯದಲ್ಲಿ ಚಿತ್ರತಂಡ ನೀಡಿದ ವಿವರಣೆಯನ್ನು ನಂಬಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅದರ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಸಾಹಿತ್ಯ ಮತ್ತು ಡಬ್ಬಿಂಗ್ ನನ್ನ ಗಮನಕ್ಕೆ ಬಾರದೆ ನಡೆದಿದೆ’ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯಲು ಪ್ರಯತ್ನಿಸಿದ್ದಾರೆ.
ಬಡತನ, ಹಸಿವು ಸಣ್ಣ ವಯಸ್ಸಿನಲ್ಲಿ ಜೀವನ ಪಾಠವನ್ನು (life lesson) ಚೆನ್ನಾಗಿ ಕಲಿಸಿ ಬಿಡುತ್ತದೆ. ಹೀಗಾಗಿ ಕೆಲ ಪುಟಾಣಿಗಳದ್ದು ಓದುವ ವಯಸ್ಸಿನಲ್ಲಿ ಹೆತ್ತವರಿಗೆ ಹೆಗಲಾಗುವ ಕನಸು. ಶಿಕ್ಷಣದ ಸಮಯದಲ್ಲಿ ಸಾಕಷ್ಟು ಆರ್ಥಿಕ ಅಡೆತಡೆಗಳು ಎದುರಾಗುವುದು ಸಹಜ. ಮನೆಯಲ್ಲಿ ಸೌಲಭ್ಯವಿಲ್ಲದಿದ್ದರೂ ಓದಬೇಕೆನ್ನುವ ಛಲ. ಸಾಧಿಸುವ ಮುಖ್ಯ ಛಲ ಮುಖ್ಯ ಎನ್ನುವುದಕ್ಕೆ ಈ ವಿಡಿಯೋ ನೈಜ ಉದಾಹರಣೆ. ತನ್ನ ತಂದೆಯ ತರಕಾರಿ ಅಂಗಡಿಯ ಕೆಳಗೆ ಕುಳಿತು ಓದುತ್ತಿರುವ ಮಕ್ಕಳ (children) ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ. ಸೌಲಭ್ಯ ಕೊರತೆ ಇದ್ರೂ ಓದಿನ ಮೇಲೆ ಈ ಪುಟಾಣಿಗಳಿರುವ ಆಸಕ್ತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
nimavatnikhil ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಗಳ ಹೋರಾಟದ ಬದುಕನ್ನು ಕಾಣಬಹುದು. ತಂದೆಯೂ ತರಕಾರಿ ಮಾರುತ್ತಿದ್ದರೆ ಮಕ್ಕಳು ಅಂಗಡಿ ಕೆಳಗೆ ಕುಳಿತು ಓದುತ್ತಿರುವುದನ್ನು ನೋಡಬಹುದು.
ಈ ವಿಡಿಯೋ ಎರಡು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಂಗೆ ಗೊತ್ತು ಈ ಪುಟಾಣಿಗಳು ಮುಂದೊಂದು ದಿನ ಅರಮನೆಯಲ್ಲಿ ಉಳಿಯುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉಜ್ವಲ ಭವಿಷ್ಯದೊಂದಿಗೆ ಪುಟಾಣಿಗಳಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಭವಿಷ್ಯದ ಐಎಎಸ್ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟ ಡ್ಯಾನ್ಸ್ ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಐದನೇ ಸೀಸನ್ ಪ್ರಸಾರ ಕಂಡಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ ಕ್ವಾಟರ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಶನಿವಾರ ಹಾಗೂ ಭಾನುವಾರ ಪ್ರಸಾರ ಕಾಣಲಿದೆ. ಅಲ್ಲದೆ, ಒಬ್ಬರಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಅದು ಯಾರಿಗೆ ಎಂಬ ಕುತೂಹಲ ಮೂಡಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಶಿವಣ್ಣ ಅವರು
ಬೆಂಗಳೂರು, ಮಾ.20: ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ದೊಡ್ಡ ತಲೆ ನೋವು. ಪ್ರತಿದಿನ ಈ ಬಗ್ಗೆ ಒಂದಾದರೂ ಪೋಸ್ಟ್ ವೈರಲ್ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ನಿರಾಸೆ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ರೆಡ್ಡಿಟ್ನಲ್ಲಿ ಯುವಕನೊಬ್ಬ ಹಂಚಿಕೊಂಡಿದ್ದಾನೆ. ಕೋರಮಂಗಲ ಅಥವಾ HSR ಲೇಔಟ್‌ನಂತಹ ಪ್ರದೇಶಗಳಲ್ಲಿ 3BHK ಫ್ಲಾಟ್ ಪಡೆಯಲು ಸಹಾಯ ಮಾಡುವವರಿಗೆ ಅರ್ಧ ತಿಂಗಳ ಬಾಡಿಗೆಯನ್ನು ನೀಡುತ್ತೇನೆ ಎಂದು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ನಲ್ಲಿ “ನನಗೆ 3bhk ಮನೆ ಹುಡುಕಿ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ! ನೀವು ಯಾರೇ ಆಗಿರಲಿ, ಬಾಡಿಗೆಗೆ 2.5/3bhk ಒಳ್ಳೆಯ ಮನೆಯನ್ನು ಹೊಂದಿರುವ ಯಾರಾದರೂ ನಿಮಗೆ ತಿಳಿದಿದ್ದರೆ ಮತ್ತು ನಾನು ಆ ಆಸ್ತಿಯನ್ನು ತೆಗೆದುಕೊಂಡರೆ, ನಾನು ನಿಮಗೆ ಅರ್ಧ ತಿಂಗಳ ಬಾಡಿಗೆಯನ್ನು ಕೊಡುತ್ತೇನೆ. ಒಳ್ಳೆಯ ಮನೆಗಳನ್ನು ಹುಡುಕುತ್ತಾ ನಾನು ತುಂಬಾ ನಿರಾಶೆಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವೈರಲ್ ಪೋಸ್ಟ್:
Bengaluru 3bhk Rent Crisis (1)
ಕೋರಮಂಗಲ, ಎಚ್‌ಎಸ್‌ಆರ್, ಕೂಡ್ಲು ಗೇಟ್ ಅಥವಾ ಹಲಸೂರಿನಲ್ಲಿ 45,000 ರೂ. ಗರಿಷ್ಠ ಬಜೆಟ್‌ನೊಂದಿಗೆ ಮನೆಗಳನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಏಪ್ರಿಲ್ 1 ರೊಳಗೆ ಈ ಹೊಸ ಮನೆಗೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಲು ಮುಖಾಮುಖಿಯಾಗಿ ಸಿಗಬಹುದು ಅಥವಾ ಈ ಮನೆಯನ್ನು ನೋಡಲು ನನ್ನ ಜತೆಗೆ ಬರಬಹುದು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದೆ. ಒಬ್ಬರು 50 ಸಾವಿರ ರೂ.ಗೆ 2BHK ಮನೆ ಸಿಗಬಹುದು. ನನ್ನ ಸ್ವಂತ ಕಟ್ಟಡದಲ್ಲಿ 35 ಸಾವಿರ ರೂ.ಗೆ 2BHK ನೀಡುತ್ತಿದ್ದೇನೆ. ದೊಡ್ಡ ಅಪಾರ್ಟ್ಮೆಂಟ್ ಸಮುದಾಯದ ಬದಲು ಸ್ವತಂತ್ರ ಮನೆಯಲ್ಲಿ ವಾಸಿಸಲು ಪ್ರಯತ್ನಿಸಿ ಎಂದು ಹೇಳಿದ್ದಾರೆ. ನೀವು ಹೇಳಿದ ಪ್ರದೇಶಗಳಲ್ಲಿ ತಿಂಗಳಿಗೆ 50k ಗಿಂತ ಕಡಿಮೆ ಬೆಲೆಗೆ 3bhk?! ಒಂದು ವೇಳೆ ಸಿಕ್ಕರೇ ನನಗೆ ಹೇಳಿ. ನಾನು ಅದೇ ಪ್ರದೇಶಗಳಲ್ಲಿ 3bhk ಗೆ ಬರಲು ನೋಡುತ್ತಿದ್ದೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕುಡ್ಲು ಗೇಟ್ ಬಳಿ ಇಷ್ಟು ಕಡಿಮೆ, 3 ಬಿಹೆಚ್ಕೆ ಮನೆ ಸಿಗುವುದು ಕಷ್ಟ ಎಂದು ಮತ್ತೊಬ್ಬರು ಹೇಳಿದ್ದಾರೆ.