ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ದೀಪ್ತಿ ಶರ್ಮಾ – Kannada News | Deepti Sharma’s T20I World Record: 1000 Runs & 150 Wickets in India’s SL Series Win

ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಭಾರತ ಮಹಿಳಾ ತಂಡ ವಶಪಡಿಸಿಕೊಂಡಿದೆ. ತಿರುವನಂತಪುರದಲ್ಲಿ ನಡೆದ ಸರಣಿಯ ಮೂರನೇ ಪಂದ್ಯವನ್ನು ಭಾರತ ತಂಡ 8 ವಿಕೆಟ್​ಗಳಿಂದ ಗೆದ್ದುಕೊಂಡಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್‌ರೌಂಡರ್ ದೀಪ್ತಿ ಶರ್ಮಾ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆಯನ್ನು ಸೃಷ್ಟಿಸಿದರು. ಇದೀಗ ದೀಪ್ತಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 1000 ರನ್ ಹಾಗೂ 150 ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಹಾಗೆಯೇ ಜಂಟಿಯಾಗಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಕೇವಲ ಇಬ್ಬರು ಬೌಲರ್‌ಗಳು ಮಾತ್ರ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರಲ್ಲಿ ಒಬ್ಬರು ಆಸ್ಟ್ರೇಲಿಯಾದ ಮೇಗನ್ ಶುಟ್, ಅವರು 123 ಪಂದ್ಯಗಳಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ದೀಪ್ತಿ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದು, 131 ಪಂದ್ಯಗಳಲ್ಲಿ 151 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ದೀಪ್ತಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದೀಪ್ತಿ 1,000 ರನ್ ಮತ್ತು 150 ವಿಕೆಟ್‌ಗಳ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Source link

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ

ಬೆಳಗಾವಿ, (ಡಿಸೆಂಬರ್ 27): ಕರ್ನಾಟಕದಲ್ಲಿ (Karnataka) ಸಿಎಂ ಬದಲಾವಣೆಯ ಚರ್ಚೆ ಜೋರಾಗಿದೆ. ಈ ಬಾರಿ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಅಹಿಂದ ಕೂಗು ಜೋರಾಗಿದೆ. ಮತ್ತೊಂದೆಡೆ, ಹೈಕಮಾಂಡ್ ಮನವೊಲಿಕೆಗೆ ಡಿಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇನ್ನೂ ಇದೀಗ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಿಎಂ ಕುರ್ಚಿ ಕಾದಾಟದ ವಿಚಾರವಾಗಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ( kodi mutt seer) ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.

ಬೆಳಗಾವಿಯಲ್ಲಿಂದು ಮಾತನಾಡಿರುವ ಕೋಡಿಶ್ರೀ, ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭದ ಮಾತಲ್ಲ, ಅದು ತುಂಬಾ ಕಷ್ಟ. ಸ್ವತಃ ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯರಿಗೆ ಅವಕಾಶ ಸಿಗಬಹುದು ಎಂದು ಕೋಡಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ತಾನೇ ಅಧಿಕಾರದಿಂದ ಕೆಳಗೆ ಇಳಿಯುವವರೆಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಸಿಗುವುದಿಲ್ಲ ಎಂದು ಪರೋಕ್ಷವಾಗಿಯೇ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಕ್’ ಚಿತ್ರದ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸಿಕ್ತು ಸ್ಪಷ್ಟನೆ – Kannada News | Kichcha Sudeep Reveal the real Number of Mark Movie First Day Collection

‘ಮಾರ್ಕ್’ ಸಿನಿಮಾ ಮೊದಲ ದಿನ ‘45’ ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಎಂಟರ್​​ಟೇನ್​​ಮೆಂಟ್ ಟ್ರ್ಯಾಕರ್ ರಮೇಶ್ ಬಾಲ ಅವರು 15 ಕೋಟಿ ರೂಪಾಯಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್​ನ ಸುದೀಪ್ ರೀಟ್ವೀಟ್ ಮಾಡಿಕೊಂಡರು. ಈ ಬಗ್ಗೆ ಸುದೀಪ್​​ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸುದೀಪ್ ಉತ್ತರಿಸಿದ್ದಾರೆ. ‘ಅಷ್ಟು ಹಣ ನಮ್ಮ ಖಾತೆಗೆ ಬಂದಿದೆ ಎಂಬುದಷ್ಟೇ ಗೊತ್ತಿದೆ. ಹಂಚಿಕೆದಾರರು ಖುಷಿಯಾಗಿದ್ದಾರೆ, ನಿರ್ಮಾಪಕರು ಖುಷಿಯಾಗಿದ್ದಾರೆ’ ಎಂದು ಸುದೀಪ್ ವಿವರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್ – Kannada News | Kichcha Sudeep Says He will not Give Any Taunt to anybody In Movie

ಕಿಚ್ಚ ಸುದೀಪ್ ಅವರ ಸಿನಿಮಾಗಳಲ್ಲಿ ಸಾಕಷ್ಟು ಡೈಲಾಗ್ ಇರೋದನ್ನು ನೀವು ನೋಡಬಹುದು. ಈ ಡೈಲಾಗ್ ಅನ್ನು ಬೇರೆ ಬೇರೆ ಹೀರೋಗಳಿಗೆ ಹೇಳೋದು ಎಂದು ಬಿಂಬಿಸಲಾಗುತ್ತದೆ. ಆದರೆ, ಹಾಗಲ್ಲ ಎಂದು ಸುದೀಪ್ ಹೇಳಿದರು. ‘ನಾನು ಯಾವಾಗಲೂ ನೇರವಾಗಿ ಹೇಳುತ್ತೇನೆ. ಸಿನಿಮಾ ಡೈಲಾಗ್​​ಗಳನ್ನು ಅಲ್ಲಿಗೆ ಮಾತ್ರ ಸೀಮಿತವಾಗಿ ಇರುತ್ತದೆ. ಸಿನಿಮಾ ಡೈಲಾಗ್​​ಮೂಲಕ ಯಾರಿಗೂ ಟಾಂಟ್ ಕೊಡಲ್ಲ’ ಎಂದು ಸುದೀಪ್​ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರಗಳ್ಳರ ಹಾವಳಿಗೆ ಮಹಿಳೆಯ ಕಿವಿ ಕಟ್; ಹೊಲಿಗೆ ಹಾಕಿದ ವೈದ್ಯರು: ಆಗಿದ್ದೇನು? – Kannada News | Vijayapura Chain Snatching: Woman Ear Severed, Gold Stolen

ವಿಜಯಪುರ, ಡಿಸೆಂಬರ್​ 27: ವಿಜಯಪುರ ನಗರದಲ್ಲಿ ಸರಗಳ್ಳರ (Chain Snatching) ಹಾವಳಿ ಮುಂದುವರಿದಿದೆ. ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಮಹಿಳೆ (woman) ಮೇಲೆ ಹಲ್ಲೆ ಮಾಡಿ ಇಬ್ಬರು ಮುಸುಕುಧಾರಿಗಳು ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿರುವಂತಹ ಘಟನೆ ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿ ಶುಕ್ರವಾರ ನಡೆದಿದೆ. ಕಲಾವತಿ ಗಾಯಕವಾಡ್(45) ಹಲ್ಲೆಗೊಳಗಾದ ಮಹಿಳೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ನಡೆದದ್ದೇನು?

ಕಲಾವತಿ ಗಾಯ್ಕವಾಡ್​​ ಹಾಲು ತರಲು ಅಂಗಡಿಗೆ ತೆರಳುತ್ತಿದ್ದರು. ಈ ವೇಳೆ ಮಹಿಳೆ ಮೇಲೆ ಹಲ್ಲೆ ಮಾಡಿ ಇಬ್ಬರು ಮುಸುಕುಧಾರಿಗಳು ಮಾಂಗಲ್ಯ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕಿವಿಯೋಲೆ ಕಿತ್ತುಕೊಳ್ಳುವ ವೇಳೆ ಕಲಾವತಿ ಅವರ ಕಿವಿ ಕತ್ತರಿಸಿದೆ. ಮುಖ, ಬಾಯಿಗೂ ಹಲ್ಲೆ ಮಾಡಿರುವ ಕಳ್ಳರು 10 ಗ್ರಾಂ ಚಿನ್ನದ ಮಾಂಗಲ್ಯ ಸರ, 1 ಗ್ರಾಂ ಚಿನ್ನದ ಕಿವಿಯೋಲೆ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Video: 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್

ಗಾಂಜಾ ಮತ್ತಿನಲ್ಲಿ ಇಬ್ಬರು ಯುವಕರು ಮುಖಕ್ಕೆ ಮುಖವಾಡ ಹಾಕಿಕೊಂಡು ಕಲಾವತಿ ಅವರ ಮೇಲೆ ಅಮಾನುಷ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಲಾವತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕತ್ತರಿಸಿದ ಕಿವಿಗೆ ಸ್ಟಿಚ್ ಹಾಕಿ ಚಿಕಿತ್ಸೆ ನೀಡಲಾಗಿದೆ.

ಖೋಟಾನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳ ಸೆರೆ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ಐವರು ಆರೋಪಿಗಳನ್ನು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಪ್ರಸಾದ್(32), ಬಿ.ಬಾಬು(28), ಟಿ.ಕುಮಾರಸ್ವಾಮಿ(40), ಮೊಹಮ್ಮದ್ ಅಖಿಲ್(21) ಮತ್ತು ಮೊಹಮ್ಮದ್ ರಿಯಾನ್(22) ಬಂಧಿತರು.

ಅರಸೀಕೆರೆ ಪೊಲೀಸರಿಂದ ಖೋಟಾನೋಟು ಅಡ್ಡೆಯ ಮೇಲೆ ಕಾರ್ಯಾಚರಣೆ ಮಾಡಲಾಗಿದೆ. 500 ರೂ. ಮುಖಬೆಲೆಯ 92 ಖೋಟಾನೋಟು ಹಾಗೂ ಒಂದು ಆಟೋ ವಶಕ್ಕೆ ಪಡೆಯಲಾಗಿದೆ. ಯುವಕರೇ ಹೆಚ್ಚಾಗಿ ಭಾಗಿಯಾಗಿದ್ದು, ಜಾತ್ರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಹೀಗಾಗಿ ಇನ್ನಷ್ಟು ಸ್ಥಳಗಳ ಮೇಲೆ ಪೊಲೀಸರು ದಾಳಿ‌ ಮಾಡಿದ್ದಾರೆ.

ಇದನ್ನೂ ಓದಿ: ಕಾಕನೂರು SBI ದರೋಡೆ ಕೇಸ್​​: ಮತ್ತಿಬ್ಬರು ಆರೋಪಿಗಳು ಲಾಕ್​​; ಹಣ, ಬಂಗಾರ ಜಪ್ತಿ

ಅರಸೀಕೆರೆ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ಆರೋಪಿಗಳು ಖೋಟಾನೋಟು ಚಲಾವಣೆ ಮಾಡಿದ್ದಾರೆ.  ಖೋಟಾನೋಟು ಚಲಾವಣೆ ಮಾಡುತ್ತಿದ್ದರು ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅವರೇ ಮೇಳದಲ್ಲಿ ಮಹಿಳೆಯೊಬ್ಬರು ಡಿಕೆಶಿಗೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ – Kannada News | DCM Sir When You CM? Woman Asks Question To DK Shivakumar In Bengaluru

ಬೆಂಗಳೂರು, (ಡಿಸೆಂಬರ್ 27): ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ (DK Shivakumar) ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೂ ಸ್ವಲ್ಪ ದಿನದಲ್ಲಿ ಡಿಕೆಶಿ ಸಿಎಂ ಆಗುವುದು ಗ್ಯಾರಂಟಿ ಎಂದು ಅವರ ಅಭಿಮಾನಿಗಳು ವಿಶ್ವಾದ ಮಾತುಗಳನ್ನಾಡುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರೇ ಐದು ವರ್ಷ ಪೂರ್ಣಗೊಳಿಸಲಿದ್ದಾರೆ ಎನ್ನುತ್ತಿದ್ದಾರೆ. ಇದರ ನಡುವೆ ಮಹಿಳೆಯೊಬ್ಬರು, ಡಿಸಿಎಂ ಸರ್‌ ಯಾವಾಗ ಸಿಎಂ ಆಗ್ತೀರಾ ಎಂದು ಡಿಕೆಶಿಗೆ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಅವರೇಬೇಳೆ ಮೇಳದಲ್ಲಿ ಈ ಪ್ರಸಂಗ ನಡೆದಿದೆ.

ಹೌದು…ಬೆಂಗಳೂರಿನ ಬಸವನಗುಡಿಯ ಅವರೇಬೇಳೆ ಮೇಳದಲ್ಲಿ ಡಿಕೆ ಶಿವಕುಮಾರ್ ಭಾಷಣ ಮುಗಿಸಿ ಹೊರಟ್ಟಿದ್ದರು. ಈ ವೇಳೆ ಮಹಿಳೆಯೊಬ್ಬರು ಡಿಸಿಎಂ ಸರ್ ನೀವು ಸಿಎಂ ಆಗುವುದು ಯಾವಾಗ ಎಂದು ಡಿಕೆಶಿಗೆ ಕೇಳಿದ್ದಾರೆ. ಇದನ್ನು ಕೇಳಿಸಿಕೊಂಡು ಡಿಕೆ ಶಿವಕುಮಾರ್, ಏನೂ ಉತ್ತರಿಸದೆ ತೆರಳಿದರು.

Source link

ಕೋಗಿಲು ಬಡಾವಣೆ ತೆರವು: ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ ಎಂದ ಸಿಎಂ ಸಿದ್ಧರಾಮಯ್ಯ – Kannada News | Bengaluru Kogilu Demolition: Unauthorised Structures Razed, Migrants to Receive Aid

ಬೆಂಗಳೂರು, ಡಿ.27: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ಹಲವು ಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿದೆ. 2021ರಿಂದಲೂ ಈ ಪ್ರದೇಶದಲ್ಲಿನ ನಿವಾಸಿಗಳು ಅನಧಿಕೃತವಾಗಿ ನೆಲೆಸಿದ್ದರು. ಈ ವಸತಿಗಳು ಐದು ಎಕರೆ ವಿಸ್ತೀರ್ಣದ ತ್ಯಾಜ್ಯ ನಿರ್ವಹಣಾ ಸ್ಥಳದ ಸಮೀಪದಲ್ಲಿದ್ದ ಕಾರಣ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತಿದ್ದವು. ನಿವಾಸಿಗಳಿಗೆ ಈ ಹಿಂದೆ ನೋಟಿಸ್ ನೀಡಿದ್ದರೂ, ಅವರು ಜಾಗ ಖಾಲಿ ಮಾಡಿರಲಿಲ್ಲ. ಇದಾದ ಬಳಿಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕಮಿಷನರ್ ಮತ್ತು ಸೆಕ್ರೆಟರಿಗಳೊಂದಿಗೆ ಮಾತನಾಡಿ, ತೆರವುಗೊಂಡ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಅವರಲ್ಲಿ ಹೆಚ್ಚಿನವರು ವಲಸಿಗರು. ಬೇರೆ ಕಡೆಯಿಂದ ಬಂದಿರುವವರು. ನಾವು ಮಾನವೀಯತೆ ದೃಷ್ಟಿಯಿಂದ ಅವರಿಗೆ ಪರ್ಯಾಯವಾಗಿ ಜಾಗ ನೀಡಿ, ವಸತಿ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ambedkar University Delhi: ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ 71 ಪ್ರಾಧ್ಯಾಪಕ ಮತ್ತು ಇತರೆ ಹುದ್ದೆಗಳಿಗೆ ನೇಮಕಾತಿ – Kannada News | Ambedkar University Delhi Jobs: Professor Vacancy, 71 Posts | Apply Before Jan 9

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯ (AUD) ಪ್ರಾಧ್ಯಾಪಕ ಹುದ್ದೆ ಸೇರಿದಂತೆ ಹಲವಾರು ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಒಟ್ಟು 71 ಹುದ್ದೆಗಳಿಗೆ ನೇಮಕಾತಿ ಲಭ್ಯವಿದೆ. ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 9 ವರೆಗೆ ಇರಲಿದೆ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆದಾಗ್ಯೂ, ಅರ್ಜಿಗಳ ಹಾರ್ಡ್ ಪ್ರತಿಗಳನ್ನು ಜನವರಿ 16 ರವರೆಗೆ ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಬಹುದು.

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ವಿವಿಧ ಹುದ್ದೆಗಳಿಗೆ ಜನವರಿ 9 ರವರೆಗೆ audrec.samarth.edu.inc ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು . ಅರ್ಜಿ ನಮೂನೆಯ ಮುದ್ರಿತ ಪ್ರತಿಯನ್ನು ಜನವರಿ 16 ರೊಳಗೆ ಕಾಲೇಜಿಗೆ ಸಲ್ಲಿಸಬೇಕು. ಯಾವುದೇ ವಯಸ್ಸಿನ ಮಿತಿಯಿಲ್ಲ. ಅರ್ಜಿ ಶುಲ್ಕ 1,000 ರೂ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ, ಮುದ್ರಿತ ಪ್ರತಿಯನ್ನು ಉಪ ರಿಜಿಸ್ಟ್ರಾರ್ (ನೇಮಕಾತಿ ಮತ್ತು ಪ್ರಚಾರ ಕೋಶ), ಕೊಠಡಿ ಸಂಖ್ಯೆ 31A, ಡಾ. ಬಿಆರ್ ವಿಶ್ವವಿದ್ಯಾಲಯ, ದೆಹಲಿ, ಕಾಶ್ಮೀರಿ ಗೇಟ್ ಕ್ಯಾಂಪಸ್ 110006 ಗೆ ಸಲ್ಲಿಸಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಆಯ್ಕೆ ಹೇಗೆ ಮತ್ತು ಸಂಬಳ ಎಷ್ಟು?

ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವು ನಡೆಸುವ ಈ ನೇಮಕಾತಿಗಳಿಗೆ ಆಯ್ಕೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ, ಅರ್ಜಿಗಳನ್ನು ಪರಿಶೀಲಿಸಿ ನಂತರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಈ ಹುದ್ದೆಗಳಿಗೆ ನಿಗದಿಪಡಿಸಿದ ವೇತನಕ್ಕೆ ಸಂಬಂಧಿಸಿದಂತೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 57,000 ರಿಂದ 2,18,200 ರೂ. ರವರೆಗೆ ವೇತನ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಮೈಝುಮ್ಮೆನಿಸುವಷ್ಟು ಜಿಗಿದ ಚಿನ್ನ, ಬೆಳ್ಳಿ ಬೆಲೆ – Kannada News | Gold Price Today on 27th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 27: ಚಿನ್ನ, ಬೆಳ್ಳಿ ಬೆಲೆಗಳ ಸತತ ಏರಿಕೆ ಮುಂದುವರಿಯುತ್ತಲೇ ಇದೆ. ಶನಿವಾರ ಚಿನ್ನದ ಬೆಲೆ (Gold Rate) 110 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ ಚೆನ್ನೈನಲ್ಲಿ 13,000 ರೂ ಗಡಿ ಮುಟ್ಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಂದು ಏರಿದೆ. ಬೆಳ್ಳಿ ಬೆಲೆಯಂತೂ ಜಿಗಿಜಿಗಿದು ಓಡುವುದು ಮುಂದುವರಿದಿದೆ. ಶನಿವಾರ ಒಂದು ಗ್ರಾಮ್ ಬೆಳ್ಳಿ ಬೆಲೆ 11 ರೂ ಹೆಚ್ಚಳಗೊಂಡು 251 ರೂ ಮುಟ್ಟಿದೆ. ಚೆನ್ನೈನಲ್ಲಂತೂ ಇದರ ಬೆಲೆ 274 ರೂಗೆ ಏರಿದೆ. ವರ್ಷದ ಹಿಂದೆ ನೂರು ರೂ ಒಳಗಿದ್ದ ಇದರ ಬೆಲೆ ಈಗ ಮೈಝುಮ್ಮೆನಿಸುವಷ್ಟು ಏರಿರುವುದು ಕುತೂಹಲ ಮೂಡಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 27ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,945 ರೂ
  • ಚೆನ್ನೈ: 13,000 ರೂ
  • ಮುಂಬೈ: 12,945 ರೂ
  • ದೆಹಲಿ: 12,960 ರೂ
  • ಕೋಲ್ಕತಾ: 12,945 ರೂ
  • ಕೇರಳ: 12,945 ರೂ
  • ಅಹ್ಮದಾಬಾದ್: 12,950 ರೂ
  • ಜೈಪುರ್: 12,960 ರೂ
  • ಲಕ್ನೋ: 12,960 ರೂ
  • ಭುವನೇಶ್ವರ್: 12,945 ರೂ

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 575 ರಿಂಗಿಟ್ (12,754 ರುಪಾಯಿ)
  • ದುಬೈ: 505 ಡಿರಾಮ್ (12,223 ರುಪಾಯಿ)
  • ಅಮೆರಿಕ: 141.50 ಡಾಲರ್ (12,706 ರುಪಾಯಿ)
  • ಸಿಂಗಾಪುರ: 180.30 ಸಿಂಗಾಪುರ್ ಡಾಲರ್ (12,604 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (12,418 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,330 ರುಪಾಯಿ)
  • ಓಮನ್: 53.65 ಒಮಾನಿ ರಿಯಾಲ್ (12,514 ರುಪಾಯಿ)
  • ಕುವೇತ್: 41.04 ಕುವೇತಿ ದಿನಾರ್ (11,993 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 251 ರೂ
  • ಚೆನ್ನೈ: 274 ರೂ
  • ಮುಂಬೈ: 251 ರೂ
  • ದೆಹಲಿ: 251 ರೂ
  • ಕೋಲ್ಕತಾ: 251 ರೂ
  • ಕೇರಳ: 274 ರೂ
  • ಅಹ್ಮದಾಬಾದ್: 251 ರೂ
  • ಜೈಪುರ್: 251 ರೂ
  • ಲಕ್ನೋ: 251 ರೂ
  • ಭುವನೇಶ್ವರ್: 274 ರೂ
  • ಪುಣೆ: 251

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಪುಂಸಕ, ಗಂಡಸೇ ಅಲ್ಲ: ಹೆಂಡ್ತಿ ಕುಟುಂಬಸ್ಥರ ಆರೋಪ, ಮನನೊಂದು ಪತಿ ಸಾವಿಗೆ ಶರಣು – Kannada News | Bengaluru Husband Suraj Also Commits Suicide In nagpur after Wife Ganvi Death In bengaluru

ಬೆಂಗಳೂರು, (ಡಿಸೆಂಬರ್ 27): ರಾಮಮೂರ್ತಿ ನಗರದಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ (Ganavi Suicide Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ (Suraj) ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ(Nagpura) ತೆರಳಿದ್ದು ನಿನ್ನೆ ಸಂಜೆ ಜಯಂತಿ, ಸೂರಜ್ ಸೋನೆಗಾಂವ್‌ನಲ್ಲಿರುವ ರಾಯಲ್‌ ವಿಲ್ಲಾ ಹೋಟೆಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸೂರಜ್‌ ಮೃತಪಟ್ಟಿದ್ದರೆ, ಜಯಂತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಸೂರಜ್ ನಪುಂಸಕ, ಗಂಡಸೇ ಅಲ್ಲ. ಶ್ರೀಲಂಕಾಕ್ಕೆ ಹನಿಮೂನ್​​ಗೆ ಹೋದರೂ ಹೆಂಡ್ತಿಯನ್ನು ಮುಟ್ಟೇ ಇಲ್ಲ ಅಂತೆಲ್ಲಾ ಮೃತ ಗಾನವಿ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ಮನೆ ಮುಮದೆ ಹೋಗಿ ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಅಲ್ಲದೇ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್​​ಪೆಕ್ಟರ್​​ ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ನವವಿವಾಹಿತೆ ಸೂಸೈಡ್ ಕೇಸ್​ಗೆ ಬಿಗ್ ಟ್ವಿಸ್ಟ್: ನಾಗಪುರದಲ್ಲಿ ಆತ್ಮಹತ್ಯೆಗೆ ಶರಣಾದ ಗಾನವಿ ಪತಿ ಸೂರಜ್!

 

Source link

Exit mobile version