ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್ – Kannada News
ರಾಮ್ ಚರಣ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ (Peddi) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಮೂವರು ಮಕ್ಕಳ ತಂದೆಯಾಗಿರುವ ಜವಾಬ್ದಾರಿಯ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ತಂದೆ ಹೌದಾದರೂ, ಮಕ್ಕಳ ಡೈಪರ್ ಬದಲಾಯಿಸುವ ವಿಷಯ ಬಂದಾಗ ಅಲ್ಲಿಂದ ಕಾಲ್ಕಿಳುತ್ತಿರುವುದಾಗಿ ರಾಮ್ ಚರಣ್ ಒಪ್ಪಿಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿದ ರಾಮ್ ಚರಣ್, ‘ನಾನು ಒಳ್ಳೆಯ…