ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು
ಕೊಡಗು, ಮಾರ್ಚ್ 18: ಇಬ್ಬರು ಬಾಲಕರು ಒಂದು ವರ್ಷ ಕಷ್ಟಪಟ್ಟು ಎಸ್ಎಸ್ಎಲ್ಸಿ ಪರೀಕ್ಷೆಗೆ (SSLC Exam) ತಯಾರಾಗಿದ್ದರು. ಇನ್ನೇನು ಇಂದು ಬೆಳಗ್ಗೆ ನಾವು ಪರೀಕ್ಷೆ ಬರೆಯುತ್ತೇವೆ ಅಂತ ಖುಷಿಯಾಗಿದ್ದರು. ಆದರೆ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು ಬಂದ ಅದೊಂದು ಸುದ್ದಿ ಅವರಿಬ್ಬರನ್ನ ಪರೀಕ್ಷೆಗೆ ಕೂರದೇ ಇರುವ ಹಾಗೆ ಮಾಡಿದೆ. ಯಾರದ್ದೋ ಎಡವಟ್ಟಿಗೆ ಇಬ್ಬರು ಬಾಲಕರು ಮತ್ತು ಪೋಷಕರು ಕಣ್ಣೀರಿಟ್ಟ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮದ ಉದಯ ಪ್ರೌಢಶಾಲೆ ಆವರಣದಲ್ಲಿ ನಡೆದಿದೆ. ಹಾಲ್ ಟಿಕೆಟ್ ಇಲ್ಲದೆ…