ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್: ಬಸ್ಗಳ ಟಿಕೆಟ್ ದರ ದುಪ್ಟಟ್ಟು ಏರಿಕೆ
ಬೆಂಗಳೂರು, ಮಾರ್ಚ್ 18: ಯುಗಾದಿ ಮತ್ತು ರಂಜಾನ್ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ….