ಕೊಪ್ಪಳಕ್ಕೆ ಎರಡು ಸಚಿವ ಸ್ಥಾನ: ‘ಒಂದು ಕೋಟಾ, ಮತ್ತೊಂದು ಪೇಮೆಂಟ್ ಕೋಟಾ’: ಬಿಜೆಪಿ ಶಾಸಕ ಗಂಭೀರ ಆರೋಪ – Kannada News | BJP MLA Doddanagouda Patil Alleges One Koppal Minister Got Post Under Quota, Another Under ‘Payment Quota’

ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ Image Credit source: tv9 kannada

ಕೊಪ್ಪಳ, ಆಗಸ್ಟ್​​ 03: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ (Karnataka Cabinet) ಬೆನ್ನಲ್ಲೇ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ (Doddanagouda Patil)
ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕೊಪ್ಪಳದಂತಹ ಸಣ್ಣ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ನೀಡಿರುವುದನ್ನು ಸ್ವಾಗತಿಸುತ್ತಲೇ, ಇದರಲ್ಲಿ ‘ಒಂದು ಸ್ಥಾನ ಜಿಲ್ಲೆಯ ಕೋಟಾವಾದರೆ, ಮತ್ತೊಂದು ಪೇಮೆಂಟ್ ಕೋಟಾ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಟಾರ್ಗೆಟ್ ರೀಚ್ ಆಗಿರಬೇಕು: ಅದಕ್ಕೆ ಸಂಪುಟ ವಿಸ್ತರಣೆಯಾಗಿದೆ; ದೊಡ್ಡನಗೌಡ ಪಾಟೀಲ್

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ್, ‘ಹಣಕ್ಕಾಗಿ ಸಂಪುಟ ವಿಸ್ತರಣೆಯಾಗುತ್ತಿಲ್ಲ ಎಂದು ಹಿಂದೆ ಹೇಳಲಾಗಿತ್ತು. ಆದರೆ, ಈಗ ಹಣದ ಡೀಲ್ ಮತ್ತು ಸೆಟ್ಲ್‌ಮೆಂಟ್ ಮುಗಿದಿರಬೇಕು, ಟಾರ್ಗೆಟ್ ರೀಚ್ ಆಗಿರಬೇಕು, ಅದಕ್ಕೆ ಇಂದು ಸಂಪುಟ ವಿಸ್ತರಣೆಯಾಗಿದೆ’ ಎಂದು ವ್ಯಂಗ್ಯವಾಡಿದರು.

ಸಚಿವ ಸ್ಥಾನಕ್ಕಾಗಿ 100 ರಿಂದ 150 ಕೋಟಿ ರೂ ಬೇಡಿಕೆ: ಈ ಹೇಳಿಕೆಗೆ ಈಗಲೂ ಬದ್ಧ ಎಂದ ದೊಡ್ಡನಗೌಡ ಪಾಟೀಲ್

ಇನ್ನು ಮುಂದುವರಿದು ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕಾಗಿ 100 ರಿಂದ 150 ಕೋಟಿ ರೂ ಬೇಡಿಕೆ ಇದೆ ಎಂದು ನಾನು ಈ ಹಿಂದೆ ಹೇಳಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸಣ್ಣ ಜಿಲ್ಲೆಯಾಗಿದ್ದರೂ ಕೊಪ್ಪಳಕ್ಕೆ ಎರಡು ಸಚಿವ ಸ್ಥಾನ ಸಿಕ್ಕಿದೆ. ಇವುಗಳಲ್ಲಿ ಯಾರಿಗೆ ‘ಪೇಮೆಂಟ್ ಕೋಟಾ’ ಅಡಿಯಲ್ಲಿ ಸಚಿವ ಸ್ಥಾನ ಸಿಕ್ಕಿದೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಸಚಿವ ಸ್ಥಾನ ಸಿಕ್ಕಿದ್ದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಶಿವಲಿಂಗೇಗೌಡ

ಇದೇ ವೇಳೆ, ನೂತನವಾಗಿ ಸಚಿವ ಸ್ಥಾನ ಪಡೆದಿರುವ ಶಿವರಾಜ ತಂಗಡಗಿ ಹಾಗೂ ಬಸವರಾಜ ರಾಯರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ ಶಾಸಕರು, ‘ಇಬ್ಬರೂ ಸಚಿವರು ತಕ್ಷಣವೇ ಜಿಲ್ಲೆಯ ತ್ವರಿತಗತಿಯ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಿ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ – Kannada News | An employee expressed concern about job insecurity in the corporate world

ಕಾರ್ಪೊರೇಟ್ ಜಗತ್ತಿನಲ್ಲಿ (Corporate) ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಿ ಪ್ರಯೋಜನವಿಲ್ಲ. ಕಂಪನಿ ಯಾವಾಗ ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಹೇಳಲಾಗದು. ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಇದೀಗ ಉದ್ಯೋಗಿ ಕಾರ್ಪೊರೇಟ್ ಉದ್ಯೋಗಿಯ ರೆಡ್ಡಿಟ್ ಪೋಸ್ಟ್ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರೂ ಸಹೋದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಕಂಡು ಉದ್ಯೋಗಿ ತನಗಾದ ಆತಂಕವನ್ನು ಹೊರಹಾಕಿದ್ದಾರೆ. ಈ ರೆಡ್ಡಿಟ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ವರ್ಕ್ ಪ್ಲೇಸ್ (r/indianworkplace) ಹೆಸರಿನ ರೆಡ್ಡಿಟ್ ಪೋಸ್ಟ್ ಕಾರ್ಪೊರೇಟ್ ಉದ್ಯೋಗಿಯೊಬ್ಬರು ಲೇಆಫ್ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಪೋಸ್ಟ್‌ಗೆ ಇಂದು ನಾನು ಕೆಲಸದ ಭದ್ರತೆ ನೋಡುವ ರೀತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್ ನಲ್ಲಿ ನನ್ನ ಕಂಪನಿಯಲ್ಲಿ ಇಂದು ಲೇಆಫ್ ನಡೆದಿತ್ತು. ನನ್ನ ಕೆಲಸವನ್ನು ಉಳಿಸಿಕೊಳ್ಳುವ ಅದೃಷ್ಟ ನನ್ನದಾಗಿತ್ತು, ಆದರೆ ನನ್ನ ಇಬ್ಬರು ತಂಡದ ಸದಸ್ಯರು ಅಷ್ಟು ಅದೃಷ್ಟವಂತರಾಗಿರಲಿಲ್ಲ. ನನ್ನ ಸಹದ್ಯೋಗಿಗಳಿಬ್ಬರು ಹೊರಟು ನಿಂತಾಗ ನಾನು ಉಳಿದಿದ್ದೇನೆ ಎಂಬ ಕಾರಣಕ್ಕೆ ವಿಚಿತ್ರ ಭಾವನೆ, ದುಃಖ, ಭಯ ಮತ್ತು ಅಪರಾಧಿ ಮನೋಭಾವ ನನ್ನನ್ನು ಕಾಡುತ್ತಿದೆ. ಒಂದು ವೇಳೆ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಏನು ಮಾಡುತ್ತಿದ್ದೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದೆ ಎಂದು ಹೇಳಿದ್ದಾರೆ.

ಈಗೀಗ ಉದ್ಯೋಗ ಮಾರುಕಟ್ಟೆ ತುಂಬಾ ಕಠಿಣವಾಗಿದೆ. ರಾತ್ರೋರಾತ್ರಿ ಇಷ್ಟೊಂದು ಬದಲಾವಣೆಗಳು ಸಂಭವಿಸಬಹುದು ಎಂದು ಊಹಿಸುವುದೇ ಭಯಾನಕವಾಗಿದೆ. ಕೆಲಸ ಯಾವುದೇ ಇರಲಿ, ಆದರೆ ಎಷ್ಟು ಸುರಕ್ಷಿತ ಎಂದು ನಾನು ಪ್ರಶ್ನಿಸುತ್ತೇನೆ. ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯೊಂದಿಗೆ ಎಐ, ಆರ್ಥಿಕ ಒತ್ತಡ ಹೀಗೆ ಕಂಪನಿಯಲ್ಲಿ ನಡೆಯುವ ಅನೇಕ ವಿಷಯಗಳು ಉದ್ಯೋಗದ ಭದ್ರತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾಸ್ತವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ ಎದುರಿಸಬೇಕಾದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಭಯವಾಗುತ್ತದೆ. ಅದು ಎಷ್ಟು ಕಷ್ಟಕರವಾಗಿರುತ್ತದೆ ಎಂದು ನನಗೆ ಊಹಿಸಲು ಸಾಧ್ಯವಿಲ್ಲ. ನಿಮ್ಮ ಮೇಲೆ ಇಂತಹ ಪರಿಣಾಮ ಬೀರದಿದ್ದರೂ ಸಹ, ಬೇರೆ ಯಾರಾದರೂ ತಮ್ಮ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ನಂತರ ನಿಮಗೂ ಕೂಡ ಈ ರೀತಿ ಭಾವನೆ ಅನುಭವಿಸಿದ್ದಾರೆಯೇ?. ನೀವು ಈ ಆತಂಕವನ್ನು ಹೇಗೆ ನಿಭಾಯಿಸಿದ್ದೀರಿ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಓವರ್ ಟೈಮ್ ಡ್ಯೂಟಿ ಮಾಡಿದ್ರೂ ಸಂಬಳ ಹೆಚ್ಚು ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಬಳಕೆದಾರರಲ್ಲಿ ಒಬ್ಬರು ನನಗೂ ನಿಮ್ಮ ಹಾಗೆಯೇ ಆತಂಕ, ಭಯ ಕಾಡುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನನ್ನನ್ನು 3 ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಯಿತು. ಆದರೆ ಈ ಜೀವನವು ಕೆಲವೊಮ್ಮೆ ನಿಜವಾಗಿಯೂ ನೋವಿನಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಉದ್ಯೋಗ ಭದ್ರತೆಯಿಲ್ಲ, ನನ್ನ ಪ್ರಕಾರ ಉಳಿತಾಯ ಮಾತ್ರ ಮುಖ್ಯವಲ್ಲ, ತುರ್ತು ನಿಧಿ ಯಾವಾಗಲೂ ಇರಲೇಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:34 pm, Mon, 3 August 26

Source link

ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ? – Kannada News | EPFO wage ceiling to be raised to Rs 25,000 from Rs 15,000, gets Fin Ministry approval

ನವದೆಹಲಿ, ಆಗಸ್ಟ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​ಒ (EPFO) ತನ್ನ ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಯ ವೇತನ ಮಿತಿಯನ್ನು (Wage Ceiling) ಪ್ರಸ್ತುತ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ವಿತ್ತ ಸಚಿವಾಲಯ (Ministry of Finance) ಅನುಮೋದನೆ ನೀಡಿದೆ. ಇದು ಜಾರಿಯಾದಲ್ಲಿ 2014 ರ ನಂತರ, ಅಂದರೆ ಸುಮಾರು 12 ವರ್ಷಗಳ ಬಳಿಕ ಇಪಿಎಫ್‌ಒ ವೇತನ ಮಿತಿಯಲ್ಲಿ ಈ ಮಹತ್ವದ ಪರಿಷ್ಕರಣೆ ಮಾಡಿದಂತಾಗುತ್ತದೆ. ಇದರಿಂದ ಸಂಘಟಿತ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

ಹೆಚ್ಚು ಕಾರ್ಮಿಕರು ಪಿಂಚಣಿ ವ್ಯಾಪ್ತಿಗೆ

ಕಡ್ಡಾಯ ಇಪಿಎಫ್‌ಒ ಯೋಜನೆಯಡಿ ಬರುವ ಮೂಲ ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 1 ಕೋಟಿಗೂ ಹೆಚ್ಚು ಖಾಸಗಿ ಹಾಗೂ ಸಂಘಟಿತ ವಲಯದ ಕಾರ್ಮಿಕರು ಕಡ್ಡಾಯ ಪಿಎಫ್ ಮತ್ತು ಇಪಿಎಸ್ (EPS) ಪಿಂಚಣಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

2014 ರಲ್ಲಿ ಕೊನೆಯ ಬಾರಿಗೆ ಈ ಮಿತಿಯನ್ನು ₹6,500 ರಿಂದ ₹15,000 ಕ್ಕೆ ಏರಿಸಲಾಗಿತ್ತು. ಆ ನಂತರ ಜಾರಿಯಾದ ಹಣದುಬ್ಬರ ಮತ್ತು ವೇತನ ಹೆಚ್ಚಳಕ್ಕೆ ತಕ್ಕಂತೆ ಮಿತಿ ಏರಿಸಬೇಕೆಂಬ ಬೇಡಿಕೆ ಈಗ ಈಡೇರಿದೆ.

ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

ಇಪಿಎಫ್​ಒ ವೇತನ ಮಿತಿ ಎಂದರೇನು?

ಇಪಿಎಫ್​ಒ ನಿಯಮಗಳ ಪ್ರಕಾರ ನಿರ್ದಿಷ್ಟ ವೇತನ ಮಿತಿಯಲ್ಲಿರುವ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಕಂಪನಿಗಳು ಕಡ್ಡಾಯವಾಗಿ ಇಪಿಎಫ್ ಅಕೌಂಟ್​ಗಳನ್ನು ತೆರೆಯಬೇಕು. ಅಂದರೆ, ₹15,000 ಕ್ಕಿಂತ ಹೆಚ್ಚಿನ ಮೂಲ ವೇತನ ಹೊಂದಿರುವವರಿಗೆ ಕಂಪನಿಯು ಇಪಿಎಫ್ ಅಕೌಂಟ್ ತೆರೆಯಬೇಕೆಂಬ ಕಡ್ಡಾಯವೇನಿಲ್ಲ. ಅದೇನಿದ್ದರೂ ಐಚ್ಛಿಕ. ಈಗ ಹೆಚ್ಚಿನ ಕಂಪನಿಗಳು ಹೆಚ್ಚಿನ ವೇತನ ಇರುವ ಉದ್ಯೋಗಿಗಳಿಗೂ ಇಪಿಎಫ್ ಅಕೌಂಟ್ ತೆರೆಯುವುದುಂಟು. ಆದರೆ, 15,000 ರೂ ಲೆಕ್ಕಾಚಾರದಲ್ಲಿ ಮಾತ್ರ ಪಿಎಫ್ ಅಕೌಂಟ್​​ಗೆ ಕೊಡುಗೆ ನೀಡುತ್ತವೆ. ಹೆಚ್ಚಿನ ಕೊಡುಗೆ ನೀಡುವಂತಿರುವುದಿಲ್ಲ.

ಹೊಸ ಮಿತಿ ಏರಿಕೆಯಿಂದ ಉದ್ಯೋಗಿಗಳ ಮೇಲಾಗುವ ಪರಿಣಾಮಗಳು

ಹೊಸ ವೇತನ ಮಿತಿ ಜಾರಿಗೆ ಬಂದಲ್ಲಿ ಪಿಎಫ್ ಅಕೌಂಟ್​ಗೆ ಉದ್ಯೋಗಿಗಳು ಮತ್ತು ಮಾಲೀಕರ ಕೊಡುಗೆ ಹೆಚ್ಚುತ್ತದೆ. ₹25,000 ಹಾಗೂ ಅದಕ್ಕಿಂತ ಹೆಚ್ಚಿನ ಮೂಲವೇತನ ಹೊಂದಿರುವವರಿಗೆ ಕಡ್ಡಾಯ ಪಿಎಫ್ ವಂತಿಗೆ ₹1,800 ನಿಂದ ₹3,000 ಗೆ ಏರಿಕೆಯಾಗುತ್ತದೆ. ಅಂದರೆ, ಉದ್ಯೋಗಿಯ ಸಂಬಳದಿಂದ ಕಡ್ಡಾಯವಾಗಿ ₹3,000 ಮುರಿದುಕೊಳ್ಳಲಾಗುತ್ತದೆ. ಆದರೆ, ಮಾಲಕರ ಶೇ. 12ರ ಕೊಡುಗೆಯಲ್ಲೂ ಹೆಚ್ಚಳವಾಗುತ್ತದೆ. ತಿಂಗಳಿಗೆ ₹1,800 ಕ್ಕೆ ಮಾತ್ರ ಇರುವ ಮಾಲಕರ ಕಮಿಟ್ಮೆಂಟ್ ₹3,000ಕ್ಕೆ ಏರಿಕೆ ಆಗುತ್ತದೆ. ಅಂದರೆ, ಕಂಪನಿ ವತಿಯಿಂದಲೂ ಪಿಎಫ್ ಅಕೌಂಟ್​ಗೆ ಹೆಚ್ಚಿನ ಕೊಡುಗೆ ಬಂದು ಸೇರುತ್ತದೆ.

ನಿವೃತ್ತಿ ಭದ್ರತೆ ಮತ್ತು ಪಿಂಚಣಿ ಹೆಚ್ಚಳ

₹15,000 ರಿಂದ ₹25,000 ನಡುವೆ ಮೂಲ ವೇತನ ಹೊಂದಿರುವ ಉದ್ಯೋಗಿಗಳ ಇಪಿಎಫ್‌ಒ ಖಾತೆಗೆ ತಿಂಗಳ ಕೊಡುಗೆ ಹೆಚ್ಚಾಗುವುದರಿಂದ, ಅವರ ನಿವೃತ್ತಿ ನಿಧಿ (Retirement Corpus) ಗಮನಾರ್ಹವಾಗಿ ಬೆಳೆಯಲಿದೆ. ಜೊತೆಗೆ ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಗೆ ಜಮಾ ಆಗುವ ಮೊತ್ತವೂ ಹೆಚ್ಚುವುದರಿಂದ ಭವಿಷ್ಯದಲ್ಲಿ ಲಭಿಸುವ ತಿಂಗಳ ಪಿಂಚಣಿ ಪ್ರಮಾಣವೂ ಹೆಚ್ಚಲಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ಟೇಕ್-ಹೋಮ್ ಸಂಬಳದಲ್ಲಿ ಸಣ್ಣ ವ್ಯತ್ಯಾಸ

ಕಡ್ಡಾಯ ಪಿಎಫ್ ವಂತಿಗೆಯ ಕಡಿತ (12%) ಹೆಚ್ಚಾಗುವುದರಿಂದ ₹15,000 ಕ್ಕಿಂತ ಹೆಚ್ಚು ಮೂಲ ವೇತನ ಪಡೆಯುವ ಕೆಲವು ಉದ್ಯೋಗಿಗಳ ಕೈಗೆ ಸಿಗುವ ಮಾಸಿಕ ಸಂಬಳ (Take-Home Salary) ಸಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಅದಕ್ಕೆ ಸಮನಾದ ಮೊತ್ತವನ್ನು ಕಂಪನಿ (Employer) ಕೂಡ ಭರಿಸುವುದರಿಂದ ದೀರ್ಘಾವಧಿಯ ಉಳಿತಾಯಕ್ಕೆ ಇದು ಅನುಕೂಲಕರವಾಗಿದೆ.

ಕಂಪನಿಗಳು ಮತ್ತು ಮಾಲೀಕರ ಮೇಲಿನ ಪರಿಣಾಮ

ವೇತನ ಮಿತಿ ಏರಿಕೆಯಿಂದಾಗಿ ಕಂಪನಿಗಳು ಅಥವಾ ಉದ್ಯೋಗದಾತರು ತಮ್ಮ ಸಿಬ್ಬಂದಿಯ ಪಿಎಫ್ ಖಾತೆಗೆ ನೀಡಬೇಕಾದ ಕಡ್ಡಾಯ 12% ವಂತಿಗೆಯ ಪಾಲು ಹೆಚ್ಚಾಗಲಿದೆ. ಇದರಿಂದ ಖಾಸಗಿ ಕಂಪನಿಗಳ ಸಿಬ್ಬಂದಿ ವೆಚ್ಚಗಳು (Payroll Costs) ಸಲ್ಪ ಪ್ರಮಾಣದಲ್ಲಿ ಹೆಚ್ಚಾಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸದಿರಲು ಬದ್ಧ; ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ – Kannada News | Serious On Commitment To not filing FIRs against students protesters Government Tells Supreme Court

ನವದೆಹಲಿ, ಆಗಸ್ಟ್ 3: ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಖಂಡಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಅಥವಾ ಕಾನೂನು ಕ್ರಮ ಜರುಗಿಸುವುದಿಲ್ಲ ಎಂಬ ತನ್ನ ಆಶ್ವಾಸನೆಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಆದರೆ, ಗಂಭೀರ ಹಾಗೂ ಘೋರ ಅಪರಾಧಗಳಲ್ಲಿ ಭಾಗಿಯಾದವರಿಗೆ ಯಾವುದೇ ರೀತಿಯ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ. ಜುಲೈ 20ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯ ಸಮಯದಲ್ಲಿ ನಡೆದ ಹಿಂಸಾಚಾರ ಮತ್ತು ಲಾಠಿಚಾರ್ಜ್‌ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಇಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ನೇತೃತ್ವದ ನ್ಯಾಯಪೀಠ ನಡೆಸಿತು.

ವಿದ್ಯಾರ್ಥಿಗಳಿಗೆ ರಕ್ಷಣೆ:

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಮೇಲೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದಿರಲು ಸರ್ಕಾರ ನಿರ್ಧರಿಸಿದೆ. ಅವರ ಮೇಲಿನ ಕೇಸುಗಳನ್ನು ಹಿಂಪಡೆಯಲು ಅಥವಾ ಮುಕ್ತಾಯಗೊಳಿಸಲು ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿ ಸೂಕ್ತ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಆಯುಕ್ತರ ನೇಮಕಾತಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಸಮರ್ಥನೆ

“ನಾವು ಅರ್ಜಿದಾರರೊಂದಿಗೆ ಮಾತನಾಡಿದ್ದೇವೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲು ನಮಗೆ ಇಷ್ಟವಿಲ್ಲ. ಇದಕ್ಕೆ ಅಗತ್ಯವಿರುವ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ, ವಿದ್ಯಾರ್ಥಿ ಪ್ರತಿಭಟನೆಯ ನೆಪದಲ್ಲಿ ನುಸುಳಿರುವ ಕ್ರಿಮಿನಲ್ ಮತ್ತು ಸಮಾಜಘಾತಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ಹಿಂಪಡೆಯುವ ಕುರಿತು ಹಿರಿಯ ನ್ಯಾಯವಾದಿ ವೃಂದಾ ಗ್ರೋವರ್ ಅವರೊಂದಿಗೂ ಚರ್ಚೆ ನಡೆಸಲಾಗಿದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ತಿಳಿಸಿದರು.

ಸಮಾಜಘಾತಕ ಶಕ್ತಿಗಳಿಗೆ ವಿನಾಯಿತಿ ಇಲ್ಲ:

ಸರ್ಕಾರದ ಈ ಭರವಸೆ ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಮಾತ್ರ ಅನ್ವಯವಾಗುತ್ತದೆ. ಆದರೆ, ಪ್ರತಿಭಟನೆಯ ನೆಪದಲ್ಲಿ ನುಸುಳಿ ಹಿಂಸಾಚಾರ ನಡೆಸಿದ, ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸಮಾಜಘಾತಕ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ರಕ್ಷಣೆ ಅಥವಾ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಲಾಗಿದೆ.

ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನೈಜ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳು ಮತ್ತು ಕ್ರಿಮಿನಲ್​​ಗಳ ಮೇಲಿನ ಪ್ರಕರಣಗಳನ್ನು ತಕ್ಷಣವೇ ಪ್ರತ್ಯೇಕಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಹಾಗೇ, ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಅತಿಯಾದ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ಕುರಿತು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದರ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಅಥವಾ ತನಿಖಾ ತಂಡ (SIT) ರಚಿಸುವ ಕುರಿತು ನ್ಯಾಯಾಲಯ ಚಿಂತಿಸುತ್ತಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ ಮತ್ತಷ್ಟು ಶಕ್ತಿ: ನ್ಯಾಯಮೂರ್ತಿಗಳ ಸಂಖ್ಯೆ 38ಕ್ಕೆ ಹೆಚ್ಚಿಸಲು ಲೋಕಸಭೆಯಲ್ಲಿ ಮಸೂದೆ ಮಂಡನೆ

ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ‘ಅಪರಾಧ ಹಿನ್ನೆಲೆ’ ಎಂಬ ಪದದ ವ್ಯಾಪ್ತಿಯನ್ನು ಸ್ಪಷ್ಟಪಡಿಸಬೇಕು, ಇಲ್ಲವಾದಲ್ಲಿ ಸಣ್ಣಪುಟ್ಟ ರಾಜಕೀಯ ಪ್ರತಿಭಟನೆಗಳು ಅಥವಾ ಕ್ಷುಲ್ಲಕ ಪ್ರಕರಣಗಳನ್ನೂ ಅಪರಾಧ ಹಿನ್ನೆಲೆ ಎಂದು ಪರಿಗಣಿಸುವ ಅಪಾಯವಿದೆ ಎಂದರು.

ಇದಕ್ಕೆ ಸ್ಪಷ್ಟನೆ ನೀಡಿದ ಸುಪ್ರೀಂ ಕೋರ್ಟ್ ‘ಅಪರಾಧ ಹಿನ್ನೆಲೆ’ ಎಂದರೆ ಕೊಲೆ ಅಥವಾ ಇತರೆ ಘೋರ ಅಪರಾಧ ಎದುರಿಸುತ್ತಿರುವವರು ಮಾತ್ರ. ಸಣ್ಣಪುಟ್ಟ ರಾಜಕೀಯ ಪ್ರತಿಭಟನೆಗಳು ಅಥವಾ ಕ್ಷುಲ್ಲಕ ಪ್ರಕರಣಗಳು ಇದರಲ್ಲಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪದ ಕುರಿತಾಗಿಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಅರ್ಜಿದಾರರ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಲಾಠಿಚಾರ್ಜ್ ಮಾಡಲು ಆದೇಶಿಸಿದ ಮತ್ತು ನಡೆಸಿದ ಅಧಿಕಾರಿಗಳ ಗುರುತಿನ ಕುರಿತು ಪ್ರಶ್ನಿಸಿದರು.

ಪೊಲೀಸ್ ಅಧಿಕಾರಿಗಳ ಅತಿಯಾದ ವರ್ತನೆಯನ್ನು ಎಂದಿಗೂ ಸಮರ್ಥಿಸಿಕೊಳ್ಳಲು ಅಥವಾ ರಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೊಲೀಸರ ವರ್ತನೆ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸಬೇಕೇ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯನ್ನು ರಚಿಸಬೇಕೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ ಎಂದು ತಿಳಿಸಿದೆ.

ಆಗಸ್ಟ್ 18ಕ್ಕೆ ಮುಂದಿನ ವಿಚಾರಣೆ:

ಇಂದು ಈ ಪ್ರಕರಣದ ವಿಚಾರಣೆಯ ಕೊನೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದರು. ಅಂದು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಪ್ರಸ್ತಾವಿತ ಸಮಿತಿಯ ರಚನೆ ಮತ್ತು ಅದರ ವ್ಯಾಪ್ತಿಯ ಬಗ್ಗೆ ನಿರ್ಧರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಸಂಬಂಧಪಟ್ಟ ಎಲ್ಲಾ ಕಡೆಯವರು ತಮ್ಮ ಪ್ರತ್ಯುತ್ತರ ಅಥವಾ ಅಫಿಡವಿಟ್‌ಗಳನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಅಜಯ್ ಸಿಂಗ್‌ಗೆ ಸಚಿವ ಸ್ಥಾನ, ತಾಯಿ ಪ್ರಭಾವತಿ ಧರ್ಮಸಿಂಗ್ ಕಣ್ಣೀರು – Kannada News | Karnataka Cabinet Expansion: Ajay Singhs Ministerial Berth Brings Tears of Joy to Mother Prabhavati Dharam Singh

ಕಲಬುರಗಿ, ಆಗಸ್ಟ್​​ 03: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿಯ ಶಾಸಕ ಅಜಯ್ ಸಿಂಗ್‌ಗೆ ಸಚಿವ ಸ್ಥಾನ ಲಭಿಸಿದ್ದು, ಇದು ಅವರ ಕುಟುಂಬದಲ್ಲಿ ಹರ್ಷ ತಂದಿದೆ. ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆ ಅಜಯ್ ಸಿಂಗ್ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಆನಂದಭಾಷ್ಪ ಸುರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿ ಜಿಲ್ಲೆಗೆ ವಿಶೇಷ ಪ್ರಾಮುಖ್ಯತೆ ಲಭಿಸಿದೆ. ಬೆಂಗಳೂರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಸಚಿವ ಸ್ಥಾನಗಳನ್ನು ಪಡೆದ ಜಿಲ್ಲೆ ಕಲಬುರಗಿಯಾಗಿದೆ. ಅಜಯ್ ಸಿಂಗ್ ಜೊತೆಗೆ ಪ್ರಿಯಾಂಕ್ ಖರ್ಗೆ ಮತ್ತು ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್ ಕೂಡ ಸಚಿವರಾಗಿದ್ದಾರೆ. ಇದರಿಂದ ಕಲಬುರಗಿಗೆ ಒಟ್ಟು ಮೂರು ಸಚಿವ ಸ್ಥಾನಗಳು ದೊರೆತಂತಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಭಾರಿ ಶಾಕ್: ಶಾಸಕ ಸ್ಥಾನಕ್ಕೆ ಬೇಳೂರು, ಯಶವಂತರಾಯಗೌಡ ರಾಜೀನಾಮೆ ಘೋಷಣೆ – Kannada News | MLA Dissatisfaction After Karnataka Cabinet Reshuffle

ಬೆಂಗಳೂರು, ಆ. 3: ರಾಜ್ಯ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಟಿವಿ9ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಇನ್ನು ಹಲವು ಶಾಸಕರು ಅಸಮಾಧನ ಹೊರಹಾಕಿದ್ದಾರೆ. ಇದೀಗ ಹಲವು ಕಡೆ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರತಿಭಟನೆ ಕೂಡ ಶುರುವಾಗಿದೆ.

ಈ ಇಬ್ಬರೂ ಹಿರಿಯ ನಾಯಕರ ಬಂಡಾಯವು ಆಡಳಿತಾರೂಢ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಮಗೆ ಉದ್ದೇಶಪೂರ್ವಕವಾಗಿ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಸಾಕಷ್ಟು ನೋವಾಗಿದೆ. ಮೂರು ವರ್ಷ ಮಂತ್ರಿಯಾದವರಿಗೇ ಮತ್ತೆ ಅವಕಾಶ ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಮಕ್ಕಳು ಮತ್ತು ಮಂತ್ರಿಗಳ ಮಕ್ಕಳೇ ಸಚಿವರಾಗಬೇಕಾ? ಹೊಸಬರಿಗೆ ಅವಕಾಶ ನೀಡುತ್ತೇವೆ ಅನ್ನುತ್ತಾರೆ, ಇದೇನಾ ಅವರು ಕೊಟ್ಟಿರುವ ಅವಕಾಶ? ನಾಳೆ ನನ್ನ ಜೊತೆ ಸೇರಿದಂತೆ ಹಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ.” ಎಂದು ಹೇಳಿದ್ದಾರೆ.

“ಪ್ರಾಮಾಣಿಕರಿಗೆ ಕಾಲವಲ್ಲ, ಕೊಟ್ಟ ಮಾತು ತಪ್ಪಿದರು”: ಯಶವಂತರಾಯಗೌಡ ಪಾಟೀಲ್

ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮಗೆ ಸಚಿವ ಸ್ಥಾನ ಕೈತಪ್ಪಿದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಇಂದಿನ ದಿನಗಳಲ್ಲಿ ನಿಷ್ಠಾವಂತರಿಗೆ ಮತ್ತು ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. ಈ ಬಾರಿ ಸಚಿವ ಸ್ಥಾನ ಸಿಗುವ ಪೂರ್ಣ ನಿರೀಕ್ಷೆ ಇತ್ತು ಹಾಗೂ ಪಕ್ಷದ ವರಿಷ್ಠರು ಕೂಡ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈಬಿಟ್ಟು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಇದರಿಂದ ಮನಸ್ಸಿಗೆ ಭಾರಿ ಬೇಸರವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್ ಭೇಟಿಗೆ ಸಮಯ ಕೇಳಿದ್ದೇನೆ. ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ.” ಎಂದು ಹೇಳಿದ್ದಾರೆ.

ಕೋಲಾರ ಜಿಲ್ಲೆಗೆ ನಿರಾಸೆ: ಬಂಗಾರಪೇಟೆ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತ್ಯೇಕ ಸಭೆ

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಬಲಗೈ ಸಮುದಾಯದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯದ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರ ಹೆಸರುಗಳು ಸಚಿವ ಸ್ಥಾನದ ರೇಸ್‌ನಲ್ಲಿದ್ದರೂ ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ. ಮಧ್ಯಾಹ್ನ ಬಂಗಾರಪೇಟೆ ಶಾಸಕರ ಬೆಂಬಲಿಗರು ಭಾರಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ನಾಳೆ ಎಸ್.ಎನ್. ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ತೀರ್ಮಾನಿಸಲಿದ್ದಾರೆ.

ಮೈಸೂರಿನಲ್ಲಿ ತನ್ವೀರ್ ಸೇಠ್ ಬೆಂಬಲಿಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಅವಕಾಶ ನೀಡದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗ ತಬ್ರೇಜ್ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ತಬ್ರೇಜ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಪರಿಸ್ಥಿತಿ ಆತಂಕಕಾರಿಯಾಗಿದೆ.

ಇದನ್ನೂ ಓದಿ: ‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಸಚಿವ ಸ್ಥಾನ ಸಿಕ್ಕಿದ್ದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಶಿವಲಿಂಗೇಗೌಡ

ರಾಯಚೂರು, ಕೊಪ್ಪಳ ಹಾಗೂ ಬೆಂಗಳೂರಿನಲ್ಲಿ ಆಕ್ರೋಶದ ಕಿಡಿ

ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಆಕ್ರೋಶಗೊಂಡ ಬೆಂಬಲಿಗರು ಬೆಂಗಳೂರಿನ ಶಾಸಕರ ಭವನದ ಬಳಿ ಪ್ರತಿಭಟನೆ ನಡೆಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಬೆಂಬಲಿಗರು ನಗರದ ಅಶೋಕ್ ವೃತ್ತದಲ್ಲಿ ಧರಣಿ ನಡೆಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ವಿರುದ್ಧ ಘೋಷಣೆ ಕೂಗಿದರು. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಆನೇಕಲ್ ಶಾಸಕ ಬಿ. ಶಿವಣ್ಣ ಅವರು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆಯೇ? ಡೆಂಗ್ಯೂ, ಮಲೇರಿಯಾದಿಂದ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ – Kannada News | How to Prevent Mosquito Bites During the Rainy Season

ಮಳೆಗಾಲ ಆರಂಭವಾದಾಗ ವಾತಾವರಣ ತಂಪಾಗಿದ್ದು ಆಹ್ಲಾದಕರವಾಗಿರುತ್ತದೆ. ಆದರೆ ಇದೇ ಸಮಯದಲ್ಲಿ ಸೊಳ್ಳೆಗಳ ಸಂಖ್ಯೆ ಕೂಡ ವೇಗವಾಗಿ ಹೆಚ್ಚಾಗುತ್ತದೆ. ಮಳೆನೀರು ಮನೆ ಸುತ್ತಮುತ್ತ, ಹೂವಿನ ಕುಂಡ, ಕೂಲರ್, ಹಳೆಯ ಟೈರ್‌ಗಳು, ಡ್ರಮ್‌ಗಳು ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಸಂಗ್ರಹವಾಗುವುದರಿಂದ ಸೊಳ್ಳೆಗಳು ಸುಲಭವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಪರಿಣಾಮವಾಗಿ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ, ಜೀಕಾ ವೈರಸ್ ಮತ್ತು ವೆಸ್ಟ್ ನೈಲ್ ವೈರಸ್‌ಗಳಂತಹ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಾಗಿ ಎಚ್ಚರಿಕೆ ವಹಿಸಬೇಕು.

ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಮಾರ್ಗಸೂಚಿಗಳ ಪ್ರಕಾರ ಈ ಕ್ರಮಗಳನ್ನು ಪಾಲಿಸುವುದು ಉತ್ತಮ.

ದೇಹವನ್ನು ಸಂಪೂರ್ಣ ಮುಚ್ಚುವ ಉಡುಪು ಧರಿಸಿ: ಅಂದರೆ ಪೂರ್ಣ ತೋಳಿನ ಶರ್ಟ್, ಉದ್ದದ ಪ್ಯಾಂಟ್ ಅಥವಾ ಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಿ. ತೆಳು ಬಣ್ಣದ ಬಟ್ಟೆ ಧರಿಸಿದರೆ ಸೊಳ್ಳೆಗಳನ್ನು ಗಮನಿಸುವುದು ಸುಲಭ.

ಸೊಳ್ಳೆ ನಿವಾರಕಗಳನ್ನು (Mosquito Repellent) ಬಳಸಿ: ಹೊರಗೆ ಹೋಗುವಾಗ DEET, Picaridin ಅಥವಾ IR3535 ಹೊಂದಿರುವ ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ. ಮಕ್ಕಳಿಗೆ ವೈದ್ಯರ ಸಲಹೆಯಂತೆ ಸೂಕ್ತ ಉತ್ಪನ್ನಗಳನ್ನು ಮಾತ್ರ ಬಳಸಿ.

ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ: ಹೂವಿನ ಕುಂಡ, ಕೂಲರ್, ಬಕೆಟ್, ಡ್ರಮ್, ಹಳೆಯ ಟೈರ್, ತೆರೆದ ನೀರಿನ ಪಾತ್ರೆಗಳಲ್ಲಿರುವ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ. ಏಕೆಂದರೆ ಇವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪ್ರಮುಖ ತಾಣಗಳಾಗಿವೆ.

ಇದನ್ನೂ ಓದಿ: ಕೈ ತೊಳೆಯುವ ಸರಿಯಾದ ವಿಧಾನ? ಸೋಂಕು ತಡೆಯಲು ಈ ನಿಯಮಗಳನ್ನು ಪಾಲಿಸಿ

ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಅಳವಡಿಸಿ: ಮನೆಗೆ ಸೊಳ್ಳೆಗಳು ಪ್ರವೇಶಿಸದಂತೆ ಜಾಲರಿ ಬಳಸಿ. ಅಗತ್ಯವಿದ್ದರೆ ರಾತ್ರಿ ವೇಳೆ ಸೊಳ್ಳೆ ಪರದೆ (Mosquito Net) ಬಳಸಿ ಮಲಗಿ.

ಸಂಜೆ ವೇಳೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ: ವಿಶೇಷವಾಗಿ Aedes ಸೊಳ್ಳೆಗಳು ಬೆಳಗ್ಗೆ ಹಾಗೂ ಸಂಜೆ ಹೆಚ್ಚು ಕಚ್ಚುತ್ತವೆ. ಆದ್ದರಿಂದ ಈ ಸಮಯದಲ್ಲಿ ಹೊರಾಂಗಣದಲ್ಲಿ ಹೆಚ್ಚು ಕಾಲ ಇರುವುದನ್ನು ತಪ್ಪಿಸಿ.

ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಸೊಳ್ಳೆ ಕಚ್ಚಿದ ಕೆಲವು ದಿನಗಳ ನಂತರ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

  • ತೀವ್ರ ಜ್ವರ
  • ತಲೆನೋವು
  • ಕಣ್ಣುಗಳ ಹಿಂದೆ ನೋವು
  • ಕೀಲು ಹಾಗೂ ಸ್ನಾಯು ನೋವು
  • ದೇಹದಲ್ಲಿ ಕೆಂಪು ಚುಕ್ಕೆಗಳು
  • ವಾಂತಿ ಅಥವಾ ವಾಕರಿಕೆ
  • ತೀವ್ರ ಆಯಾಸ
  • ನಿರಂತರ ಜ್ವರ

ಇವು ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಸೇರಿದಂತೆ ಗಂಭೀರ ಸೋಂಕಿನ ಲಕ್ಷಣಗಳಾಗಿರಬಹುದು.

ಸೊಳ್ಳೆಗಳ ಸಂಖ್ಯೆ ಕಡಿಮೆ ಮಾಡಲು ಮನೆಮಟ್ಟದಲ್ಲಿ ಏನು ಮಾಡಬಹುದು?

  • ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಮತ್ತು ಕೂಲರ್ ಸ್ವಚ್ಛಗೊಳಿಸಿ.
  • ಕಸದ ರಾಶಿ ಮತ್ತು ತೆರೆದ ಪಾತ್ರೆಗಳನ್ನು ತೆರವುಗೊಳಿಸಿ.
  • ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ.
  • ಅಗತ್ಯವಿದ್ದರೆ ಸ್ಥಳೀಯ ಆರೋಗ್ಯ ಇಲಾಖೆ ಸೂಚಿಸುವ ಫಾಗಿಂಗ್ ಕಾರ್ಯಕ್ಕೆ ಸಹಕರಿಸಿ.
  • ಸೊಳ್ಳೆ ನಿವಾರಕ ಸಸ್ಯಗಳಾದ ತುಳಸಿ, ಲೆಮನ್‌ಗ್ರಾಸ್ ಅಥವಾ ಸಿಟ್ರೊನೆಲ್ಲಾ ಬೆಳೆಸಬಹುದು. (ಇವು ಸಂಪೂರ್ಣ ರಕ್ಷಣೆ ನೀಡುವುದಿಲ್ಲ; ಪೂರಕ ಕ್ರಮವಾಗಿ ಮಾತ್ರ ಪರಿಗಣಿಸಿ.)
  • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಜ್ವರ ಅಥವಾ ಇತರ ಗಂಭೀರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Source link

CWG 2026: ಏಕೈಕ ಕಂಚಿನ ಪದಕಕ್ಕೆ ತೃಪ್ತಿಪಟ್ಟ ಪಾಕಿಸ್ತಾನ; ಒಲಿಂಪಿಕ್ಸ್ ಹೀರೋ ಅರ್ಷದ್ ನದೀಮ್ ಕಥೆ ಏನಾಯ್ತು? – Kannada News | Pakistan’s CWG Performance: Fatima Zahra’s Bronze Saves Face in 36 Year Low

ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ತೆರೆಬಿದ್ದಿದೆ. 11 ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳು ಭಾಗವಹಿಸಿದ್ದವು. ಅದರಲ್ಲಿ ಆಸ್ಟ್ರೇಲಿಯಾ ಅತ್ಯಧಿಕ 171 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, 110 ಪದಕ ಗೆದ್ದ ಇಂಗ್ಲೆಂಡ್​ಗೆ ಎರಡನೇ ಸ್ಥಾನ ಲಭಿಸಿತು. 3ನೇ ಸ್ಥಾನ ಪಡೆದ ಕೆನಡಾ 63 ಪದಕಗಳನ್ನು ಗೆದ್ದರೆ, ಭಾರತ ಒಟ್ಟು 39 ಪದಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಬಾರಿ ಭಾರತದ ಪ್ರದರ್ಶನ ಕೊಂಚ ನಿರಸವಾಗಿತ್ತು. ಇದಕ್ಕೆ ಕಾರಣ ಈ ಆವೃತ್ತಿಯಲ್ಲಿ ಭಾರತ ಪದಕ ಗೆಲ್ಲುವಂತಹ ಕೆಲವು ಸ್ಪರ್ಧೆಗಳನ್ನು ಕೈಬಿಟ್ಟಿದ್ದು, ಭಾರತದ ಪದಕಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಇನ್ನು ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಎಷ್ಟು ಪದಕಗಳನ್ನು ಗೆದ್ದಿತು ಎಂಬುದನ್ನು ನೋಡುವುದಾದರೆ.. ಪಾಕಿಸ್ತಾನದ ಪದಕಗಳ ಖಾತೆಗೆ ಬಿದ್ದಿದ್ದು, ಏಕೈಕ ಕಂಚಿನ ಪದಕ ಮಾತ್ರ.

ಕಂಚು ಗೆದ್ದ ಫಾತಿಮಾ ಜಹ್ರಾ

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಪ್ರದರ್ಶನ ಕಳಪೆಯಾಗಿತ್ತು. ಈ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಒಟ್ಟು 21 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಪದಕ ಗೆದ್ದಿದ್ದು ಮಾತ್ರ ಏಕೈಕ ಸ್ಪರ್ಧಿ ಮಾತ್ರ. 60ಕೆಜಿ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಮಹಿಳಾ ಬಾಕ್ಸರ್ ಫಾತಿಮಾ ಜಹ್ರಾ ಕಂಚಿನ ಪದಕ ಗೆದ್ದು ಪಾಕಿಸ್ತಾನದ ಮಾನ ಉಳಿಸಿದರು. ಇದರೊಂದಿಗೆ, ಫಾತಿಮಾ ಜಹ್ರಾ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹೀಗಾಗಿಯೇ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಫಾತಿಮಾ ದೇಶದ ಧ್ವಜಧಾರಿಯಾಗಿದ್ದರು. ಫಾತಿಮಾ ಅವರ ಕಂಚಿನ ಪದಕದಿಂದಾಗಿ ಪಾಕಿಸ್ತಾನ ಪದಕಗಳ ಪಟ್ಟಿಯಲ್ಲಿ ಜಂಟಿಯಾಗಿ 36 ನೇ ಸ್ಥಾನ ಪಡೆದುಕೊಂಡಿತು. ಇನ್ನು ಇಲ್ಲೊಂದು ಗಮನಿಸಬೇಕಾದ ಸಂಗತಿಯೆಂದರೆ ಫಾತಿಮಾ ಜಹ್ರಾ ಕಂಚಿನ ಪದಕ ಗೆದ್ದ ಇದೇ ವಿಭಾಗದಲ್ಲಿ ಭಾರತದ ಮಹಿಳಾ ಬಾಕ್ಸರ್ ಪ್ರಿಯಾ ಘಂಘಾಸ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಅತ್ಯಂತ ಕಳಪೆ ಪ್ರದರ್ಶನ

ಕಳೆದ 36 ವರ್ಷಗಳಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನದ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಈ ಹಿಂದೆ ಅಂದರೆ 1990 ರ ಆವೃತ್ತಿಯಲ್ಲಿ ಪಾಕಿಸ್ತಾನ ಯಾವುದೇ ಪದಕವನ್ನು ಗೆದ್ದಿರಲಿಲ್ಲ. ಉಳಿದಂತೆ 1998 ರಲ್ಲಿ ಏಕೈಕ ಬೆಳ್ಳಿ ಪದಕವನ್ನು ಗೆದ್ದಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ಅಂದರೆ 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಎರಡು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಒಳಗೊಂಡಂತೆ ಏಳು ಪದಕಗಳನ್ನು ಗೆದ್ದಿತ್ತು.

9ನೇ ಸ್ಥಾನ ಪಡೆದ ಅರ್ಷದ್ ನದೀಮ್

ಈ ಬಾರಿ ಪಾಕಿಸ್ತಾನದ ಚಿನ್ನದ ಪದಕದ ಭರವಸೆ ಇದ್ದಿದ್ದು ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್ ಅವರ ಮೇಲೆ. ಹೀಗಾಗಿ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನದ ಧ್ವಜಧಾರಿಯಾಗಿದ್ದರು. ಆದರೆ ನದೀಮ್ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 77.41 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಒಂಬತ್ತನೇ ಸ್ಥಾನ ಪಡೆದರು. ಹೀಗಾಗಿ ಪಾಕಿಸ್ತಾನದ ಚಿನ್ನದ ಪದಕದ ಕನಸು ಅರ್ಷದ್ ನದೀಮ್ ಸೋಲಿನೊಂದಿಗೆ ಕಮರಿ ಹೋಯಿತು. ಇನ್ನು 2030 ರಲ್ಲಿ ಭಾರತದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪಾಕಿಸ್ತಾನ ತನ್ನ ಸ್ಪರ್ಧಿಗಳನ್ನು ಕಳುಹಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಸಚಿವ ಸ್ಥಾನ ಸಿಕ್ಕಿದ್ದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಶಿವಲಿಂಗೇಗೌಡ – Kannada News | Shivalinge Gowda Says He Will Work Regardless of Portfolio, Thanks Party Leadership for Ministerial Post

ಬೆಂಗಳೂರು, ಆಗಸ್ಟ್​​ 03:  ರಾಜ್ಯ ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಅರಸೀಕೆರೆ ಕ್ಷೇತ್ರದ ಶಾಸಕ ಕೆ. ಎಂ. ಶಿವಲಿಂಗೇಗೌಡ, ತಮ್ಮನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್‌ ಸೇರಿದಂತೆ ಸಿಎಂ ಹಾಗೂ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ತಮಗೆ ಸಚಿವ ಸ್ಥಾನ ಸಿಗಲು ಕಾರಣಕರ್ತರಾದ ಅರಸೀಕೆರೆ ಕ್ಷೇತ್ರದ ಜನತೆಗೆ, ಹಾಸನ ಜಿಲ್ಲೆಯ ಜನತೆಗೆ ಹಾಗೂ ರಾಜ್ಯದ ಜನತೆಗೆ ಪ್ರಥಮವಾಗಿ ಧನ್ಯವಾದ ತಿಳಿಸಿದರು. ಇದರೊಂದಿಗೆ, ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಸೇರಿದಂತೆ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.’ ಇನ್ನು ಈ ವೇಳೆ ‘ಯಾವುದೇ ಖಾತೆಯ ನಿರೀಕ್ಷೆ ಇಲ್ಲ. ಯಾವುದು ಕೊಟ್ಟರೂ ಕೆಲಸ ಮಾಡುತ್ತೇನೆ. ಜನತೆಯ ಕೆಲಸ, ರಾಜ್ಯದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಹಳೆಯ ವಿಡಿಯೋದಲ್ಲಿ ಪೂಜಾ ಹೆಗ್ಡೆ ಗುರುತಿಸಲು ಸಾಧ್ಯವೇ ಇಲ್ಲ; ಇಲ್ಲಿದೆ ಝಲಕ್ – Kannada News | Unseen Video of 18 Year Old Pooja Hegde From Miss India 2009 Days Goes Viral

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಅವರು 2009ರ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಿನಗಳ ವಿಡಿಯೋ ಆಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಪೂಜಾ ಹೆಗ್ಡೆ ಅವರು (Pooja Hegde) ಮಾಡೆಲಿಂಗ್ ಲೋಕದಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಈ ವಿಡಿಯದಲ್ಲಿ ನೋಡಬಹುದಾಗಿದೆ. ಅಂದಿನ ಅವರ ಲುಕ್ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೊದಲ್ಲಿ ತಮ್ಮನ್ನು ತಾವು ಮುಂಬೈನ 18 ವರ್ಷದ ಯುವತಿ ಎಂದು ಪರಿಚಯಿಸಿಕೊಳ್ಳುವ ಪೂಜಾ, ‘ಜೀವನದಲ್ಲಿ ಗೆಲ್ಲಬೇಕಾದರೆ ಕಠಿಣ ಪರಿಶ್ರಮ, ಮಾಡುವ ಕೆಲಸದ ಮೇಲೆ ತೀವ್ರ ಆಸಕ್ತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು’ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇದರೊಂದಿಗೆ ತಾವು ಮೊದಲ ಬಾರಿಗೆ ರಾಂಪ್ ವಾಕ್ ಮಾಡಿದಾಗ ಸಣ್ಣದಾಗಿ ಎಡವಿದ್ದ ರಹಸ್ಯವನ್ನೂ ಅವರು ಹಂಚಿಕೊಂಡಿದ್ದಾರೆ.

ಬಿಕಿನಿ ರೌಂಡ್ ಹಾಗೂ ಸಾಂಪ್ರದಾಯಿಕ ಉಡುಪುಗಳಲ್ಲಿ ರಾಂಪ್ ಮೇಲೆ ಹೆಜ್ಜೆ ಹಾಕಿರುವ ಪೂಜಾ ಹೆಗ್ಡೆ ಅವರ ಅಂದಿನ ರೂಪಕ್ಕೂ, ಇಂದಿನ ಗ್ಲಾಮರಸ್ ಲುಕ್‌ಗೂ ತುಂಬಾನೇ ವ್ಯತ್ಯಾಸವಿದ್ದು, ಬದಲಾವಣೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಕಡಿಮೆ ಸ್ಕ್ರೀನ್ ಟೈಮ್ ಇದ್ದರೂ ‘ಜನ ನಾಯಗನ್’ ಒಪ್ಪಿದ್ದೇಕೆ ಪೂಜಾ ಹೆಗ್ಡೆ? ಅಸಲಿ ಕಾರಣ ಇಲ್ಲಿದೆ

ಪೂಜಾ ಹೆಗ್ಡೆ ಅವರ ಸಿನಿಮಾ ಜರ್ನಿ

ಮಾಡಡೆಲಿಂಗ್ ಲೋಕದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ ಅವರು 2012ರ ತಮಿಳಿನ ‘ಮುಗಮೂಡಿ’ ಚಿತ್ರದ ಮೂಲಕ ನಟನೆ ಆರಂಭಿಸಿದರು. ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಭಾರಿ ಯಶಸ್ಸು ಕಂಡ ಅವರು ‘ಅರವಿಂದ ಸಮೇದ’, ‘ಮಹರ್ಷಿ’, ಮತ್ತು ‘ಅಲಾ ವೈಕುಂಠಪುರಮುಲೋ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದರು. ಹೃತಿಕ್ ರೋಷನ್ ಅಭಿನಯದ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಪೂಜಾ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ‘ರಾಧೆ ಶ್ಯಾಮ್’ ಹಾಗೂ ವಿಜಯ್ ಅಭಿನಯದ ‘ಬೀಸ್ಟ್’ ಚಿತ್ರಗಳಲ್ಲೂ ಕಾಣಿಸಿಕೊಂಡು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಅವರ ನಟನೆಯ ‘ಜನ ನಾಯಗನ್’ ಇತ್ತೀಚೆಗೆ ತೆರೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:47 pm, Mon, 3 August 26

Source link

Exit mobile version