Headlines

ಕೊಪ್ಪಳಕ್ಕೆ ಎರಡು ಸಚಿವ ಸ್ಥಾನ: ‘ಒಂದು ಕೋಟಾ, ಮತ್ತೊಂದು ಪೇಮೆಂಟ್ ಕೋಟಾ’: ಬಿಜೆಪಿ ಶಾಸಕ ಗಂಭೀರ ಆರೋಪ – Kannada News | BJP MLA Doddanagouda Patil Alleges One Koppal Minister Got Post Under Quota, Another Under ‘Payment Quota’

ಶಿವರಾಜ ತಂಗಡಗಿ, ದೊಡ್ಡನಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ Image Credit source: tv9 kannada ಕೊಪ್ಪಳ, ಆಗಸ್ಟ್​​ 03: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ (Karnataka Cabinet) ಬೆನ್ನಲ್ಲೇ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ (Doddanagouda Patil) ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕೊಪ್ಪಳದಂತಹ ಸಣ್ಣ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ನೀಡಿರುವುದನ್ನು ಸ್ವಾಗತಿಸುತ್ತಲೇ, ಇದರಲ್ಲಿ ‘ಒಂದು ಸ್ಥಾನ ಜಿಲ್ಲೆಯ ಕೋಟಾವಾದರೆ, ಮತ್ತೊಂದು ಪೇಮೆಂಟ್ ಕೋಟಾ’ ಎಂದು ಗಂಭೀರ ಆರೋಪ ಮಾಡಿದ್ದಾರೆ….

Read More

Viral: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ – Kannada News | An employee expressed concern about job insecurity in the corporate world

ಕಾರ್ಪೊರೇಟ್ ಜಗತ್ತಿನಲ್ಲಿ (Corporate) ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಿ ಪ್ರಯೋಜನವಿಲ್ಲ. ಕಂಪನಿ ಯಾವಾಗ ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಹೇಳಲಾಗದು. ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಇದೀಗ ಉದ್ಯೋಗಿ ಕಾರ್ಪೊರೇಟ್ ಉದ್ಯೋಗಿಯ ರೆಡ್ಡಿಟ್ ಪೋಸ್ಟ್ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರೂ ಸಹೋದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಕಂಡು ಉದ್ಯೋಗಿ ತನಗಾದ ಆತಂಕವನ್ನು ಹೊರಹಾಕಿದ್ದಾರೆ. ಈ ರೆಡ್ಡಿಟ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ವರ್ಕ್ ಪ್ಲೇಸ್ (r/indianworkplace) ಹೆಸರಿನ ರೆಡ್ಡಿಟ್ ಪೋಸ್ಟ್…

Read More

ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ? – Kannada News | EPFO wage ceiling to be raised to Rs 25,000 from Rs 15,000, gets Fin Ministry approval

ನವದೆಹಲಿ, ಆಗಸ್ಟ್ 3: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್​ಒ (EPFO) ತನ್ನ ಕಡ್ಡಾಯ ಸಾಮಾಜಿಕ ಭದ್ರತಾ ವ್ಯಾಪ್ತಿಯ ವೇತನ ಮಿತಿಯನ್ನು (Wage Ceiling) ಪ್ರಸ್ತುತ ಇರುವ ₹15,000 ರಿಂದ ₹25,000 ಕ್ಕೆ ಹೆಚ್ಚಿಸಲು ಕೇಂದ್ರ ವಿತ್ತ ಸಚಿವಾಲಯ (Ministry of Finance) ಅನುಮೋದನೆ ನೀಡಿದೆ. ಇದು ಜಾರಿಯಾದಲ್ಲಿ 2014 ರ ನಂತರ, ಅಂದರೆ ಸುಮಾರು 12 ವರ್ಷಗಳ ಬಳಿಕ ಇಪಿಎಫ್‌ಒ ವೇತನ ಮಿತಿಯಲ್ಲಿ ಈ ಮಹತ್ವದ ಪರಿಷ್ಕರಣೆ ಮಾಡಿದಂತಾಗುತ್ತದೆ. ಇದರಿಂದ ಸಂಘಟಿತ ವಲಯದ ಲಕ್ಷಾಂತರ ಉದ್ಯೋಗಿಗಳಿಗೆ…

Read More

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸದಿರಲು ಬದ್ಧ; ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ – Kannada News | Serious On Commitment To not filing FIRs against students protesters Government Tells Supreme Court

ನವದೆಹಲಿ, ಆಗಸ್ಟ್ 3: ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಖಂಡಿಸಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಅಥವಾ ಕಾನೂನು ಕ್ರಮ ಜರುಗಿಸುವುದಿಲ್ಲ ಎಂಬ ತನ್ನ ಆಶ್ವಾಸನೆಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಆದರೆ, ಗಂಭೀರ ಹಾಗೂ ಘೋರ ಅಪರಾಧಗಳಲ್ಲಿ ಭಾಗಿಯಾದವರಿಗೆ ಯಾವುದೇ ರೀತಿಯ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದೆ. ಜುಲೈ 20ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯ…

Read More

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಅಜಯ್ ಸಿಂಗ್‌ಗೆ ಸಚಿವ ಸ್ಥಾನ, ತಾಯಿ ಪ್ರಭಾವತಿ ಧರ್ಮಸಿಂಗ್ ಕಣ್ಣೀರು – Kannada News | Karnataka Cabinet Expansion: Ajay Singhs Ministerial Berth Brings Tears of Joy to Mother Prabhavati Dharam Singh

ಕಲಬುರಗಿ, ಆಗಸ್ಟ್​​ 03: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿಯ ಶಾಸಕ ಅಜಯ್ ಸಿಂಗ್‌ಗೆ ಸಚಿವ ಸ್ಥಾನ ಲಭಿಸಿದ್ದು, ಇದು ಅವರ ಕುಟುಂಬದಲ್ಲಿ ಹರ್ಷ ತಂದಿದೆ. ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆ ಅಜಯ್ ಸಿಂಗ್ ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಅವರು ಆನಂದಭಾಷ್ಪ ಸುರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿ ಜಿಲ್ಲೆಗೆ ವಿಶೇಷ ಪ್ರಾಮುಖ್ಯತೆ ಲಭಿಸಿದೆ. ಬೆಂಗಳೂರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಸಚಿವ ಸ್ಥಾನಗಳನ್ನು ಪಡೆದ ಜಿಲ್ಲೆ ಕಲಬುರಗಿಯಾಗಿದೆ. ಅಜಯ್ ಸಿಂಗ್ ಜೊತೆಗೆ ಪ್ರಿಯಾಂಕ್…

Read More

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಭಾರಿ ಶಾಕ್: ಶಾಸಕ ಸ್ಥಾನಕ್ಕೆ ಬೇಳೂರು, ಯಶವಂತರಾಯಗೌಡ ರಾಜೀನಾಮೆ ಘೋಷಣೆ – Kannada News | MLA Dissatisfaction After Karnataka Cabinet Reshuffle

ಬೆಂಗಳೂರು, ಆ. 3: ರಾಜ್ಯ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ. ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಟಿವಿ9ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಇನ್ನು ಹಲವು ಶಾಸಕರು ಅಸಮಾಧನ ಹೊರಹಾಕಿದ್ದಾರೆ. ಇದೀಗ ಹಲವು ಕಡೆ ಶಾಸಕರಿಗೆ…

Read More

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆಯೇ? ಡೆಂಗ್ಯೂ, ಮಲೇರಿಯಾದಿಂದ ತಪ್ಪಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ – Kannada News | How to Prevent Mosquito Bites During the Rainy Season

ಮಳೆಗಾಲ ಆರಂಭವಾದಾಗ ವಾತಾವರಣ ತಂಪಾಗಿದ್ದು ಆಹ್ಲಾದಕರವಾಗಿರುತ್ತದೆ. ಆದರೆ ಇದೇ ಸಮಯದಲ್ಲಿ ಸೊಳ್ಳೆಗಳ ಸಂಖ್ಯೆ ಕೂಡ ವೇಗವಾಗಿ ಹೆಚ್ಚಾಗುತ್ತದೆ. ಮಳೆನೀರು ಮನೆ ಸುತ್ತಮುತ್ತ, ಹೂವಿನ ಕುಂಡ, ಕೂಲರ್, ಹಳೆಯ ಟೈರ್‌ಗಳು, ಡ್ರಮ್‌ಗಳು ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ಸಂಗ್ರಹವಾಗುವುದರಿಂದ ಸೊಳ್ಳೆಗಳು ಸುಲಭವಾಗಿ ಸಂತಾನೋತ್ಪತ್ತಿ ಮಾಡುತ್ತವೆ. ಪರಿಣಾಮವಾಗಿ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ, ಜೀಕಾ ವೈರಸ್ ಮತ್ತು ವೆಸ್ಟ್ ನೈಲ್ ವೈರಸ್‌ಗಳಂತಹ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು,…

Read More

CWG 2026: ಏಕೈಕ ಕಂಚಿನ ಪದಕಕ್ಕೆ ತೃಪ್ತಿಪಟ್ಟ ಪಾಕಿಸ್ತಾನ; ಒಲಿಂಪಿಕ್ಸ್ ಹೀರೋ ಅರ್ಷದ್ ನದೀಮ್ ಕಥೆ ಏನಾಯ್ತು? – Kannada News | Pakistan’s CWG Performance: Fatima Zahra’s Bronze Saves Face in 36 Year Low

ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ತೆರೆಬಿದ್ದಿದೆ. 11 ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 74 ದೇಶಗಳು ಭಾಗವಹಿಸಿದ್ದವು. ಅದರಲ್ಲಿ ಆಸ್ಟ್ರೇಲಿಯಾ ಅತ್ಯಧಿಕ 171 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, 110 ಪದಕ ಗೆದ್ದ ಇಂಗ್ಲೆಂಡ್​ಗೆ ಎರಡನೇ ಸ್ಥಾನ ಲಭಿಸಿತು. 3ನೇ ಸ್ಥಾನ ಪಡೆದ ಕೆನಡಾ 63 ಪದಕಗಳನ್ನು ಗೆದ್ದರೆ, ಭಾರತ ಒಟ್ಟು 39 ಪದಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಕಳೆದ ಆವೃತ್ತಿಗೆ ಹೋಲಿಸಿಕೊಂಡರೆ ಈ ಬಾರಿ ಭಾರತದ ಪ್ರದರ್ಶನ…

Read More

‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಸಚಿವ ಸ್ಥಾನ ಸಿಕ್ಕಿದ್ದಕ್ಕೆ ವರಿಷ್ಠರಿಗೆ ಧನ್ಯವಾದ ಹೇಳಿದ ಶಿವಲಿಂಗೇಗೌಡ – Kannada News | Shivalinge Gowda Says He Will Work Regardless of Portfolio, Thanks Party Leadership for Ministerial Post

ಬೆಂಗಳೂರು, ಆಗಸ್ಟ್​​ 03:  ರಾಜ್ಯ ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಅರಸೀಕೆರೆ ಕ್ಷೇತ್ರದ ಶಾಸಕ ಕೆ. ಎಂ. ಶಿವಲಿಂಗೇಗೌಡ, ತಮ್ಮನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್‌ ಸೇರಿದಂತೆ ಸಿಎಂ ಹಾಗೂ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ತಮಗೆ ಸಚಿವ ಸ್ಥಾನ ಸಿಗಲು ಕಾರಣಕರ್ತರಾದ ಅರಸೀಕೆರೆ ಕ್ಷೇತ್ರದ ಜನತೆಗೆ, ಹಾಸನ ಜಿಲ್ಲೆಯ ಜನತೆಗೆ ಹಾಗೂ ರಾಜ್ಯದ ಜನತೆಗೆ ಪ್ರಥಮವಾಗಿ ಧನ್ಯವಾದ ತಿಳಿಸಿದರು. ಇದರೊಂದಿಗೆ, ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಮಾಜಿ ಸಿಎಂ…

Read More

ಹಳೆಯ ವಿಡಿಯೋದಲ್ಲಿ ಪೂಜಾ ಹೆಗ್ಡೆ ಗುರುತಿಸಲು ಸಾಧ್ಯವೇ ಇಲ್ಲ; ಇಲ್ಲಿದೆ ಝಲಕ್ – Kannada News | Unseen Video of 18 Year Old Pooja Hegde From Miss India 2009 Days Goes Viral

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಅವರು 2009ರ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದಿನಗಳ ವಿಡಿಯೋ ಆಗಿದೆ. ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಪೂಜಾ ಹೆಗ್ಡೆ ಅವರು (Pooja Hegde) ಮಾಡೆಲಿಂಗ್ ಲೋಕದಲ್ಲಿ ಹೇಗೆ ಕಾಣಿಸುತ್ತಿದ್ದರು ಎಂಬುದನ್ನು ಈ ವಿಡಿಯದಲ್ಲಿ ನೋಡಬಹುದಾಗಿದೆ. ಅಂದಿನ ಅವರ ಲುಕ್ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೊದಲ್ಲಿ ತಮ್ಮನ್ನು…

Read More