ನಿರ್ದೇಶಕನಿಗೆ ಐಶಾರಾಮಿ ಕಾರು ಕೊಟ್ಟು ಗಾಸಿಪ್​​ಗೆ ತೆರೆ ಎಳೆದ ನಟ ಸೂರ್ಯ – Kannada News | Actor Suriya gifted SUV car to Karuppu movie director RJ Balaji

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಕಳೆದ ಕೆಲ ವರ್ಷಗಳಿಂದ ಹಿಟ್ ಸಿನಿಮಾ ನೀಡಿರಲಿಲ್ಲ. ಅವರು ನಟಿಸಿದ್ದ ‘ಇಟಿ’, ‘ಕಂಗುವ’ ಮತ್ತು ‘ರೆಟ್ರೊ’ ಸಿನಿಮಾಗಳು ಒಂದರ ಹಿಂದೊಂದರಂತೆ ಸೋತವು. ಸೂರ್ಯ ಅವರಿಗೆ ಹಿಟ್ ಸಿನಿಮಾದ ತೀವ್ರ ಅವಶ್ಯಕತೆ ಇತ್ತು. ಆ ಅವಶ್ಯಕತೆಯನ್ನು ಪೂರ್ಣಗೊಳಿಸಿದೆ ‘ಕರುಪ್ಪು’ ಸಿನಿಮಾ. ಆರ್​​ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ದೊಡ್ಡ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಸುಮಾರು 400 ಕೋಟಿ ರೂಪಾಯಿ ಹಣ ಗಳಿಸಿದೆ. ಇದೀಗ ತಮಗೆ ಹಿಟ್ ಕೊಟ್ಟ ನಿರ್​ದೇಶಕನಿಗೆ ಐಶಾರಾಮಿ ಎಸ್​​ಯುವಿ ಕಾರೊಂದನ್ನು ನಟ ಸೂರ್ಯ ಉಡುಗೊರೆಯಾಗಿ ನೀಡಿದ್ದಾರೆ. ಮಾತ್ರವಲ್ಲದೆ, ಅದರಲ್ಲಿ ನಿರ್ದೇಶಕನನ್ನು ಕರೆದುಕೊಂಡು ನಗರದಲ್ಲಿ ರೌಂಡ್ ಸಹ ಹೊಡೆದಿದ್ದಾರೆ.

ಬಾಲಾಜಿ ಅವರಿಗೆ ಸೂರ್ಯ ಅವರು ಟೊಯೊಟಾ ಇನ್ನೋವ ಹೈಕ್ರಾಸ್ ಟಾಪ್ ಎಂಡ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಖುದ್ದು ಅವರೇ ಸೂರ್ಯ ಅವರನ್ನು ಕರೆದುಕೊಂಡು ಹೊಸ ಕಾರಿನಲ್ಲಿ ರೌಂಡ್ ಹೊಡೆಸಿದ್ದಾರೆ. ವಿಡಿಯೋ ಅನ್ನು ನಿರ್ದೇಶಕ ಬಾಲಾಜಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೋಂಡಿದ್ದಾರೆ. ಆರ್​​ಜೆ ಬಾಲಾಜಿ, ‘ತುಂಬಾ ಚೆನ್ನಾಗಿದೆ ಸರ್, ತುಂಬಾ ಥ್ಯಾಂಕ್ಸ್’ ಎಂದು ಸೂರ್ಯ ಅವರಿಗೆ ಹೇಳುತ್ತಿರುವ ವಿಡಿಯೋ ಅನ್ನು ಬಾಲಾಜಿ ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದವರು, ಸೂರ್ಯ ಅವರ ಕಾರ್ಯವನ್ನು ಕೊಂಡಾಡುತ್ತಿದ್ದಾರೆ.

ಆದರೆ ಕೆಲವು ದಿನಗಳ ಹಿಂದೆಯಷ್ಟೆ, ಸೂರ್ಯ ಅವರು ‘ಕರುಪ್ಪು’ ನಿರ್ದೇಶಕ ಬಾಲಾಜಿ ಮೇಲೆ ಬೇಸರಗೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಂದರ್ಶನಗಳಲ್ಲಿ ‘ಕರುಪ್ಪು’ ಸಿನಿಮಾ ವಿಜಯ್ ಅವರಿಗಾಗಿ ಮಾಡಿದ್ದು, ಅವರು ಒಪ್ಪಿಕೊಳ್ಳಲಿಲ್ಲ ಅದಕ್ಕೆ ಸೂರ್ಯ ಅವರಿಗೆ ಕತೆ ಹೇಳಿದೆ ಎಂದು ಬಾಲಾಜಿ ಹೇಳಿದ್ದರು. ಇದು ಸೂರ್ಯ ಅವರಿಗೆ ಬೇಸರ ತಂದಿದೆ ಎನ್ನಲಾಗಿತ್ತು. ಅದೇ ಸಮಯದಲ್ಲಿ ಸೂರ್ಯ ಅವರು ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣ ಪೋಸ್ಟ್ ಒಂದನ್ನು ಸಹ ಇದಕ್ಕೇ ಲಿಂಕ್ ಮಾಡಿ, ಬಾಲಾಜಿ ಮತ್ತು ಸೂರ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂದಿದ್ದರು. ಆದರೆ ಅದನ್ನೆಲ್ಲ ಸುಳ್ಳು ಮಾಡಿ, ಇದೀಗ ಖುದ್ದು ಸೂರ್ಯ ಅವರು ಬಾಲಾಜಿ ಅವರನ್ನು ಕರೆಸಿ ಅವರಿಗೆ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:ಸೂರ್ಯವಂಶಿ ಟೀಮ್ ಇಂಡಿಯಾ ಡೆಬ್ಯೂ ವಿಳಂಬ? ಎದುರಾಯ್ತು ಅಡಚಣೆ

ಹಿಟ್ ಸಿನಿಮಾ ನೀಡಿದ ನಿರ್ದೇಶಕರುಗಳಿಗೆ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿದೆ. ‘ಜೈಲರ್’ ಸಿನಿಮಾ ಹಿಟ್ ಆದಾಗ ರಜನೀಕಾಂತ್, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರಿಗೆ ನಿರ್ಮಾಪಕ ಕಲಾನಿಧಿ ಮಾರನ್ ಕೋಟ್ಯಂತರ ಮೌಲ್ಯದ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆ ಬಳಿಕ ಉದಯನಿಧಿ ಸ್ಟಾಲಿನ್ ಅವರು ನಿರ್ದೇಶಕ ಮಾರಿ ಸೆಲ್ವರಾಜ್ ಅವರಿಗೆ ಮಿನಿ ಕೂಪರ್ ಕಾರು ಉಡುಗೊರೆಯಾಗಿ ಕೊಟ್ಟರು. ಲೋಕೇಶ್ ಕನಗರಾಜ್ ಅವರಿಗೆ ಕಮಲ್ ಹಾಸನ್ ಕಾರು ಉಡುಗೊರೆಯಾಗಿ ಕೊಟ್ಟರು. ಇನ್ನೂ ಹಲವು ನಿರ್ದೇಶಕರುಗಳಿಗೆ ಕಾರುಗಳು ಉಡುಗೊರೆಯಾಗಿ ದೊರೆತವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ – Kannada News | New Zealand Legend Kane Williamson Bids Adieu: End of a Glorious Cricket Era

ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಳೆಪ ಫಾರ್ಮ್​ನಿಂದ ಬಳಲುತ್ತಿದ್ದ ವಿಲಿಯಮ್ಸನ್ ತಮ್ಮ 35 ನೇ ವಯಸ್ಸಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಆಟದ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಅಂದರೆ 2025 ರಲ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ಕೇನ್, ಬಹಳ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ ತಮ್ಮ 16 ವರ್ಷಗಳ ವೃತ್ತಿಜೀವನಕ್ಕೆ ಪೂರ್ಣವಿರಾಮವನ್ನಿಟ್ಟಿರುವ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪರ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಿವೀಸ್ ಪರ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನೆನಿಸಿಕೊಂಡಿರುವ ಕೇನ್, ಇದುವರೆಗೆ ಆಡಿರುವ 378 ಪಂದ್ಯಗಳಲ್ಲಿ 19,346 ರನ್ ಗಳಿಸಿದ್ದಾರೆ. ಇದರಲ್ಲಿ 48 ಶತಕಗಳು ಸೇರಿವೆ. ಆಟಗಾರನಾಗಿ ಮಾತ್ರವಲ್ಲದೆ ನಾಯಕನಾಗಿಯೂ ತಂಡವನ್ನು ಮುನ್ನಡೆಸಿರುವ ವಿಲಿಯಮ್ಸನ್, ತಮ್ಮ ನಾಯಕತ್ವದಲ್ಲಿ ತಂಡವನ್ನು ಎರಡು ಐಸಿಸಿ ಪಂದ್ಯಾವಳಿಗಳ ಫೈನಲ್‌ಗೆ ಕೊಂಡೊಯ್ದಿದ್ದರು. ಅದರಲ್ಲಿ ಒಮ್ಮೆ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

Published On – 4:18 pm, Fri, 12 June 26

Source link

ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್​​ – Kannada News | Tamil Nadu CM Vijay Offers Special Prayers at Kollur Mookambika Temple

ಉಡುಪಿ, ಜೂನ್​​ 12: ತಮಿಳುನಾಡು ಸಿಎಂ ವಿಜಯ್​​ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿದ್ದು, ಮೂಕಾಂಬಿಕಾ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂಜೆಗೆ ಸಂಕಲ್ಪ ನೆರವೇರಿಸಿದ್ದು, ದೇವಸ್ಥಾನದ ಅರ್ಚಕರು ಸಿಎಂ ವಿಜಯ್ ಕೈಗೆ ರಕ್ಷಾ ದಾರ ಕಟ್ಟಿದ್ದಾರೆ. ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ದೇಗುಲಕ್ಕೆ ಆಗಮಿಸಿದ ತಮಿಳುನಾಡು ಸಿಎಂಗೆ ಬೊಕ್ಕೆ ನೀಡಿ ಅರ್ಚಕರು ಸ್ವಾಗತಿಸಿದ್ದು, ರಾಜ್ಯ ಸರ್ಕಾರದ ವತಿಯಿಂದ ಕುಂದಾಪುರ ಎಸಿ ರಶ್ಮಿ ಕೂಡ ವಿಜಯ್​​ರನ್ನು ದೇಗುಲಕ್ಕೆ ಬರಮಾಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಂದು ನೀವೇ ಸಿಎಂ ಆಗಿ ಅಂದಿದ್ದೆ, ಆಗದ್ದಕ್ಕೆ ಕಾಂಗ್ರೆಸ್ಸಿಗರೇ ಕಾರಣ’: ಡಾ. ಪರಮೇಶ್ವರ್​​ಗೆ ಹೆಚ್​.ಡಿ.ಕುಮಾರಸ್ವಾಮಿ ಟಾಂಗ್

ಬೆಂಗಳೂರು, ಜೂ.12: ತಮಗೆ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದ ಕುರಿತು ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ. ‘ಡಾ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಲು ಅವರದೇ ಪಕ್ಷದವರಾದ ಕಾಂಗ್ರೆಸ್ಸಿಗರೇ ನೇರ ಕಾರಣ, ಈ ಬಗ್ಗೆ ಪರಮೇಶ್ವರ್ ಅವರು ನಮ್ಮನ್ನು ಕೇಳುವ ಬದಲು ಮೊದಲು ತಮ್ಮದೇ ಪಕ್ಷದವರ ಜೊತೆ ಕೂತು ಚರ್ಚೆ ಮಾಡಲಿ. ಅಂದು ಅವರು ನನ್ನ ಜೊತೆ ಬಂದಾಗ ನಾನು ಸಿಎಂ ಆಗಬೇಡಿ ಅಂತಾ ಹೇಳಿದ್ನಾ? ನೀವೇ ಮುಖ್ಯಮಂತ್ರಿಯಾಗಿ ಎಂದು ನಾನೇ ಖುದ್ದಾಗಿ ಹೇಳಿದ್ದೆ. ನೀವೇ ಸಿಎಂ ಆಗಿ ಎಂದಾಗಲೂ ಅವರು ಆಗಲಿಲ್ಲವಲ್ಲ ಎಂದು ಟಾಂಗ್ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ವೈಭವ್ ಮಾತ್ರ ಅಲ್ಲ, ನಮ್ ಹುಡುಗ್ರು ಆಡ್ತಾರೆ; ಯೂನಿವರ್ಸಲ್ ಬೇಬಿ ಬಾಸ್ ಬಗ್ಗೆ ದ್ರಾವಿಡ್ ಮಾತು – Kannada News | Maharaja T20 Trophy: Rahul Dravid Praises Vaibhav Sooryavanshi as Unique Talent

ಐದನೇ ಆವೃತ್ತಿಯ ಮಹಾರಾಜ ಟಿ20 ಟ್ರೋಫಿ (Maharaja T20 Trophy) ಇದೇ ಜೂನ್ 20 ರಿಂದ ಆರಂಭವಾಗಲಿದ್ದು, ಜುಲೈ 12 ರವರೆಗೆ ನಡೆಯಲಿದೆ. ಈ ಟೂರ್ನಿಗೆ ಈಗಾಗಲೇ ಹರಾಜು ಕೂಡ ನಡೆದಿದೆ. ಈ ಲೀಗ್​ನಲ್ಲಿ ಭಾಗವಹಿಸುತ್ತಿರುವ ಐದು ಫ್ರಾಂಚೈಸಿಗಳು ಕೂಡ ಬಲಿಷ್ಠ ತಂಡಗಳನ್ನು ಕಟ್ಟಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿವೆ. ಅದರ ಭಾಗವಾಗಿ ಈ ಟೂರ್ನಿಗೆ ಆತಿಥ್ಯವಹಿಸುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಜೂನ್ 11 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಕೂಡ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ದ್ರಾವಿಡ್, ತಮ್ಮ ಶಿಷ್ಯ ವೈಭವ್ ಸೂರ್ಯವಂಶಿಯನ್ನು (Vaibhav Sooryavanshi) ಹೊಗಳಿ ಮಾತನಾಡಿದ್ದಾರೆ.

ಹೋಲಿಕೆ ಮಾಡುವುದು ಸರಿಯಲ್ಲ

ಮೊದಲಿಗೆ ಮಹಾರಾಜ ಟ್ರೋಫಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ರಾಹುಲ್ ಉತ್ತರಿಸಿದರು. ಇದೇ ವೇಳೆ ಪತ್ರಕರ್ತರೊಬ್ಬರು, ‘ವೈಭವ್ ಸೂಯವಂಶಿಯಂತಹ ಆಟಗಾರರು ಕರ್ನಾಟಕದಲ್ಲೂ ಹುಟ್ಟಿಕೊಳ್ತಾರಾ ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ದ್ರಾವಿಡ್, ಎಲ್ಲಾ ಆಟಗಾರರನ್ನು ವೈಭವ್ ಸೂರ್ಯವಂಶಿಗೆ ಹೋಲಿಕೆ ಮಾಡುವುದು ಸರಿಯಲ್ಲ. ವೈಭವ್ ಒಬ್ಬ ಅಪರೂಪದ ಆಟಗಾರ. ಸಚಿನ್ ತೆಂಡೂಲ್ಕರ್ ಬಳಿಕ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಆಟಗಾರ ವೈಭವ್. ಸಚಿನ್​ ರೀತಿ ಮತ್ತೊಬ್ಬ ಆಟಗಾರ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು 40 ವರ್ಷಗಳು ಬೇಕಾಯ್ತು.

ಆತ ವಿಶೇಷ ಪ್ರತಿಭೆ

ಹೀಗಾಗಿ 40 ಆದ ಬಳಿಕ ಮತ್ತೊಬ್ಬ ವೈಭವ್ ಸೂರ್ಯವಂಶಿ ಹುಟ್ಟಿಕೊಳ್ತಾನೆ. ಹಾಗಂತ ಯಾರನ್ನು ಹೋಲಿಕೆ ಮಾಡಲು ಹೋಗಬಾರದು. ನಮ್ಮ ಹುಡುಗರು ಕೂಡ ಚೆನ್ನಾಗಿ ಆಡ್ತಾರೆ. ಆದ್ರೆ ವೈಭವ್ ಒಬ್ಬ ಯೂನಿಕ್ ಪ್ಲೇಯರ್ ನಾವು ಅದನ್ನು ಒಪ್ಪಿಕೊಳ್ಳಬೇಕು. ಆತ ಅದ್ಭುತವಾಗಿ ಆಡುತ್ತಿದ್ದಾನೆ. ಆತ ವಿಶೇಷ ಪ್ರತಿಭೆ. ಆತ ಮುಂದೆಯೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುತ್ತಾನೆ ಅಂತ ಭಾವಿಸಿದ್ದೇನೆ. ಆತ ಚೆನ್ನಾಗಿ ಆಡಿ ತಂಡವನ್ನು ಗೆಲ್ಲಿಸಲಿ’ ಎಂದು ದ್ರಾವಿಡ್ ಹೇಳಿದ್ದಾರೆ.

ಸಚಿನ್​ರಂತೆಯೇ ವೈಭವ್ ಸೂರ್ಯವಂಶಿಗೂ ವಿಶೇಷ ವಿನಾಯಿತಿ ನೀಡಿದ ಬಿಸಿಸಿಐ

ತ್ರಿಕೋನ ಸರಣಿಯಲ್ಲಿ ವೈಭವ್ ಪ್ರದರ್ಶನ

ದ್ರಾವಿಡ್ ಹೇಳಿಕೆಯಂತೆ ವೈಭವ್ ಸೂರ್ಯವಂಶಿ ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಈಗಷ್ಟೇ ಮುಗಿದ ಐಪಿಎಲ್‌ನಲ್ಲಿ 776 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಇದರ ಫಲವಾಗಿ ವೈಭವ್​ಗೆ ಭಾರತ ಎ ತಂಡ, ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಟಿ20 ತಂಡದಲ್ಲೂ ಅವಕಾಶ ನೀಡಲಾಗಿದೆ. ಪ್ರಸ್ತುತ ಭಾರತ ಎ ತಂಡದೊಂದಿಗೆ ಶ್ರೀಲಂಕಾ ಪ್ರವಾಸ ಮಾಡಿರುವ ವೈಭವ್, ಶ್ರೀಲಂಕಾ ಎ ವಿರುದ್ಧದ ಮೊದಲ ಪಂದ್ಯದಲ್ಲಿ 12 ಎಸೆತಗಳಲ್ಲಿ 14 ರನ್ ಬಾರಿಸಿದರೆ, ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 22 ಎಸೆತಗಳಲ್ಲಿ 44 ರನ್ ಬಾರಿಸಿದರು.

Published On – 4:06 pm, Fri, 12 June 26

Source link

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ ರಾಜ್ ಹೆಸರು ತಳಕು: ನಟನ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ – Kannada News | Sri Rama Sene Protests Against Actor Prakash Raj in Belagavi Over Dharmasthala Case Link

ಬೆಳಗಾವಿ, ಜೂನ್​​ 12: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್​​ಗೆ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಪ್ರಕಾಶ್ ರಾಜ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ. ಪ್ರತಿಭಟನಾಕಾರರು ಧರ್ಮದ್ರೋಹಿ ಪ್ರಕಾಶ್ ರಾಜ್ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೇಕ್​ಆಫ್ ವೇಳೆ ಲಕ್ನೋದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ! – Kannada News | Delhi Bound IndiGo Flight gets Bomb Threat Minutes Before Takeoff From Lucknow

ಲಕ್ನೋ, ಜೂನ್ 12: ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ವಿಮಾನ ಹಾರಾಟ ಆರಂಭಿಸುವ ಕೆಲವೇ ಕ್ಷಣಗಳ ಮುನ್ನ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದೆ. ಇಂಡಿಗೋ ವಿಮಾನವು ರನ್‌ವೇ ಕಡೆಗೆ ಚಲಿಸಲು ಸಜ್ಜಾಗುತ್ತಿದ್ದಾಗ, ವಿಮಾನ ನಿಲ್ದಾಣದ ಏರ್‌ಲೈನ್ಸ್ ಕಂಟ್ರೋಲ್ ರೂಮ್‌ಗೆ ಈ ವಿಮಾನದಲ್ಲಿ ಬಾಂಬ್ (Bomb Threat) ಇಡಲಾಗಿದೆ ಎಂಬ ಅನಾಮಧೇಯ ಬೆದರಿಕೆ ಸಂದೇಶ ಬಂದಿದೆ. ಇದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಪೈಲಟ್ ಮತ್ತು ಎಟಿಎಸ್ (Air Traffic Control) ಅಧಿಕಾರಿಗಳು ಹಾರಾಟವನ್ನು ತುರ್ತಾಗಿ ಸ್ಥಗಿತಗೊಳಿಸಿದರು.

ಬಾಂಬ್ ಬೆದರಿಕೆಯ ಚೀಟಿ ಪತ್ತೆಯಾದ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳಿಗೆ ತುರ್ತು ಮಾಹಿತಿ ನೀಡಲಾಯಿತು. ಭದ್ರತಾ ಸಿಬ್ಬಂದಿಯು ನಿಗದಿಪಡಿಸಿದ ಸುರಕ್ಷತಾ ನಿಯಮಾವಳಿಗಳ ಪ್ರಕಾರ ವಿಮಾನದಾದ್ಯಂತ ಸಮಗ್ರ ತಪಾಸಣೆ ನಡೆಸಿದರು.

ಇದನ್ನೂ ಓದಿ: ಇಂಡಿಗೋ ವಿಮಾನದೊಳಗೆ 25 ನಿಮಿಷ ಎಸಿ, ಕರೆಂಟ್ ಇಲ್ಲದೆ ಕತ್ತಲಲ್ಲಿ ಒದ್ದಾಡಿದ ಪ್ರಯಾಣಿಕರು

ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ವಿಮಾನವನ್ನು ತಕ್ಷಣವೇ ರನ್‌ವೇಯಿಂದ ದೂರವಿರುವ ಸುರಕ್ಷಿತ ‘ಐಸೊಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಅತ್ಯಂತ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳವು (BDS) ತರಬೇತಿ ಪಡೆದ ಶ್ವಾನದಳದೊಂದಿಗೆ ವಿಮಾನದ ಒಳಭಾಗ, ಇಂಜಿನ್ ಹಾಗೂ ಪ್ರಯಾಣಿಕರ ಎಲ್ಲಾ ಲಗೇಜ್‌ಗಳನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಇಡೀ ವಿಮಾನವನ್ನು ಸಂಪೂರ್ಣ ಮರು-ಪರಿಶೀಲನೆಗೆ ಒಳಪಡಿಸಬೇಕಾಗಿ ಬಂದಿದ್ದರಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾಯಬೇಕಾಯಿತು.

ಇದನ್ನೂ ಓದಿ: ಬೆಂಗಳೂರು-ದೆಹಲಿ ಇಂಡಿಗೋ ಫ್ಲೈಟ್‌ನಲ್ಲಿ ಹುಸಿ ಬಾಂಬ್ ಬೆದರಿಕೆ!

ಇತ್ತೀಚಿನ ದಿನಗಳಲ್ಲಿ ಭಾರತೀಯ ವಿಮಾನಗಳಿಗೆ ಇಂತಹ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದು ಹೆಚ್ಚಾಗುತ್ತಿದ್ದು, ಈ ಕರೆಯ ಹಿಂದೆ ಯಾರಿದ್ದಾರೆ ಮತ್ತು ಸಂದೇಶ ಎಲ್ಲಿಂದ ಬಂದಿದೆ ಎಂಬುದರ ಕುರಿತು ಲಕ್ನೋ ಸೈಬರ್ ಕ್ರೈಮ್ ಮತ್ತು ಸ್ಥಳೀಯ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ದಾಳಿ; ಅಮೆರಿಕದ ರಾಯಭಾರಿಗೆ ಭಾರತ 2ನೇ ಬಾರಿ ಸಮನ್ಸ್ – Kannada News | India summons US diplomat for second time over attacks on ships with India crew

ನವದೆಹಲಿ, ಜೂನ್ 12: ಅಮೆರಿಕ ಪಡೆಗಳು ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಿಬ್ಬಂದಿಯಿದ್ದ ವಾಣಿಜ್ಯ ಹಡಗುಗಳ ಮೇಲೆ ನಡೆಸುತ್ತಿರುವ ಸರಣಿ ಕ್ಷಿಪಣಿ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ನವದೆಹಲಿಯಲ್ಲಿರುವ ಅಮೆರಿಕದ (United States) ಹಿರಿಯ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಕೇವಲ 2 ದಿನಗಳಲ್ಲಿ ಎರಡನೇ ಬಾರಿಗೆ ಸಮನ್ಸ್ ಜಾರಿಗೊಳಿಸಿದೆ. ಪಶ್ಚಿಮ ಏಷ್ಯಾ ಮತ್ತು ಒಮಾನ್ ಕರಾವಳಿಯ ಬಳಿ ಭಾರತೀಯ ನಾವಿಕರನ್ನು ಒಳಗೊಂಡ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕದ ಮಿಲಿಟರಿ ಪಡೆಗಳು ನಡೆಸುತ್ತಿರುವ ಸರಣಿ ದಾಳಿಗಳು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ಬಿರುಕು ಮೂಡಿಸಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಅಮೆರಿಕದ ಪ್ರಭಾರ ರಾಯಭಾರಿ ಜೇಸನ್ ಮೀಕ್ಸ್ ಅವರನ್ನು ಕರೆಸಿಕೊಂಡು ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಮೆರಿಕ ಪಡೆಗಳು ಇರಾನ್ ತೈಲ ದಿಗ್ಬಂಧನ ಉಲ್ಲಂಘನೆಯ ಆರೋಪದ ಮೇಲೆ ‘ಎಂ/ಟಿ ಜಲವೀರ್’ ಎಂಬ ಹಡಗಿನ ಇಂಜಿನ್ ಕೋಣೆಗೆ ಎರಡು ‘ಹೆಲ್‌ಫೈರ್ ಕ್ಷಿಪಣಿ’ಗಳನ್ನು ಉಡಾಯಿಸಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ ಭಾರತ ಈ ಕಠಿಣ ಕ್ರಮ ಕೈಗೊಂಡಿದೆ. ಈ ಹಡಗಿನಲ್ಲಿ ಭಾರತೀಯ ಸಿಬ್ಬಂದಿ ಕೂಡ ಇದ್ದರು.

ಇದನ್ನೂ ಓದಿ: ಒಮಾನ್ ಬಳಿ ಭಾರತೀಯ ಸಿಬ್ಬಂದಿಯಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ಹಡಗುಗಳ ಮೇಲೆ ಇತ್ತೀಚೆಗೆ ನಡೆದ ಮೂರು ದಾಳಿಗಳು ಈ ಕಠಿಣ ನಿರ್ದೇಶನಕ್ಕೆ ಕಾರಣವಾಗಿವೆ. ಇದರಲ್ಲಿ ಓಮನ್ ಕರಾವಳಿಯ ಬಳಿ ನಡೆದ ಒಂದು ಭೀಕರ ದಾಳಿಯು ಮೂವರು ಭಾರತೀಯ ನಾವಿಕರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಅಧಿಕೃತ ಅಂದಾಜಿನ ಪ್ರಕಾರ, ಭಾರತದ ಧ್ವಜವನ್ನು ಹೊಂದಿರುವ 13 ಹಡಗುಗಳಲ್ಲಿ ಸದ್ಯ 622 ಭಾರತೀಯ ನಾವಿಕರು ಹಾರ್ಮುಜ್ ಜಲಸಂಧಿಯ ಪೂರ್ವ ಮತ್ತು ಪಶ್ಚಿಮದ ಕಡಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದು ಕೇವಲ ಒಂದೇ ವಾರದಲ್ಲಿ ಭಾರತೀಯ ನಾವಿಕರಿದ್ದ ಹಡಗುಗಳ ಮೇಲೆ ನಡೆದ ಮೂರನೇ ದಾಳಿಯಾಗಿದೆ. ಇದಕ್ಕೂ ಮುನ್ನ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರ ಮುಂದೆ ಪ್ರಮುಖವಾಗಿ ಮೂರು ಬೇಡಿಕೆ ಹಾಗೂ ಆಕ್ಷೇಪಗಳನ್ನು ಮಂಡಿಸಿದ್ದಾರೆ.

ಇದನ್ನೂ ಓದಿ: Kharg Island: ವೆನೆಜುವೆಲಾ ಬಳಿಕ ಖಾರ್ಗ್ ದ್ವೀಪದ ಮೇಲೆ ಕಣ್ಣಿಟ್ಟ ಟ್ರಂಪ್; ಇರಾನ್​ಗೆ ಈ ಸಣ್ಣ ಪ್ರದೇಶವೇಕೆ ಬಹಳ ಮುಖ್ಯ?

ಕಡಲ ವ್ಯಾಪಾರ ಮಾರ್ಗಗಳಲ್ಲಿ ಸಂಚರಿಸುವ ಯಾವುದೇ ದೇಶದ ಹಡಗುಗಳಾಗಿದ್ದರೂ, ಅದರಲ್ಲಿರುವ ನಾಗರಿಕ ಸಿಬ್ಬಂದಿ ಮತ್ತು ಭಾರತೀಯ ನಾವಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ನಿರಪರಾಧಿ ನಾವಿಕರ ಜೀವಕ್ಕೆ ಕುತ್ತು ತರುವ ಇಂತಹ ದಾಳಿಗಳು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ. ಗಲ್ಫ್ ಮತ್ತು ಒಮಾನ್ ಕರಾವಳಿ ವಲಯದಲ್ಲಿ ಅಮೆರಿಕ ಮಿಲಿಟರಿ ನಡೆಸುತ್ತಿರುವ ಇಂತಹ ಏಕಪಕ್ಷೀಯ ಆಕ್ರಮಣಕಾರಿ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಎಲ್ಲಾ ದೇಶಗಳು ಸಂಯಮ ಕಾಯ್ದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಆರ್ಥಿಕ ಬೆನ್ನೆಲುಬಾಗಿರುವ ತೈಲ ಮಾರುಕಟ್ಟೆಯನ್ನು ಧ್ವಂಸಗೊಳಿಸಲು ಮತ್ತು ಖಾರ್ಗ್ ದ್ವೀಪವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಡಲ ದಿಗ್ಬಂಧನ ವಿಧಿಸಿದ್ದಾರೆ. ಈ ದಿಗ್ಬಂಧನವನ್ನು ಮೀರಿ ಇರಾನ್ ತೈಲ ಸಾಗಿಸುವ ಹಡಗುಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ದಾಳಿ ಮಾಡುತ್ತಿವೆ. ಆದರೆ, ಇಲ್ಲಿನ ಬಹುತೇಕ ಅಂತಾರಾಷ್ಟ್ರೀಯ ಹಡಗುಗಳಲ್ಲಿ ಭಾರತದ ನಾವಿಕರು ಕೆಲಸ ಮಾಡುತ್ತಿರುವುದರಿಂದ ಭಾರತವು ಈಗ ನೇರವಾಗಿ ಅಮೆರಿಕದ ಕೃತ್ಯದ ವಿರುದ್ಧ ರಾಜತಾಂತ್ರಿಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ? – Kannada News | After Break, Katrina Kaif Ready for Comeback: Is Chandni Bar 2 Her Next Film

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಸದ್ಯದಲ್ಲೇ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ಬಿಟೌನ್‌ನಲ್ಲಿ ಕೇಳಿಬರುತ್ತಿದೆ. ನಟ ವಿಕ್ಕಿ ಕೌಶಲ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ಬಳಿಕವೂ ಅವರು ಸಿನಿಮಾ ಮಾಡಿದರು. ಆದರೆ, ಮಗು ಜನಿಸಿದ ನಂತರದಲ್ಲಿ ಕತ್ರಿನಾ ಕೈಫ್ ಅವರು ಯಾವುದೇ ಸಿನಿಮಾ ಘೋಷಣೆ ಮಾಡಿರಲಿಲ್ಲ. ಬ್ರೇಕ್ ನಂತರ ಅವರು ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎಂದು ವರದಿ ಆಗಿದೆ.

ಸಿನಿಮಾಗಳಿಂದ ಕತ್ರಿನಾ ಕೈಫ್ ಸುದೀರ್ಘ ಬ್ರೇಕ್ ಪಡೆದಾಗ, ಚಿತ್ರರಂಗದಲ್ಲಿ ಒಂದು ದೊಡ್ಡ ವದಂತಿ ಹಬ್ಬಿತ್ತು. ನಟಿ ಅನುಷ್ಕಾ ಶರ್ಮಾ ಅವರು ತಾಯಿಯಾದ ಮೇಲೆ ಹೇಗೆ ಸಿನಿಮಾಗಳಿಂದ ಸಂಪೂರ್ಣ ದೂರ ಸರಿದು ಸಂಸಾರದತ್ತ ಗಮನ ಹರಿಸಿದರೋ, ಅದೇ ರೀತಿ ಕತ್ರಿನಾ ಕೂಡ ಚಿತ್ರರಂಗಕ್ಕೆ ಗುಡ್‌ಬೈ ಹೇಳಲಿದ್ದಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈಗ ಕೇಳಿಬರುತ್ತಿರುವ ಹೊಸ ಅಪ್ಡೇಟ್‌ಗಳು ಆ ಎಲ್ಲಾ ಮಾತುಗಳೂ ಬರಿ ಸುಳ್ಳು ಎಂಬುದನ್ನು ಸಾಬೀತುಪಡಿಸಿವೆ. ಕತ್ರಿನಾ ಚಿತ್ರರಂಗ ತೊರೆಯುತ್ತಿಲ್ಲ, ಬದಲಿಗೆ ಭರ್ಜರಿ ಕಂಬ್ಯಾಕ್‌ಗೆ ರೆಡಿಯಾಗುತ್ತಿದ್ದಾರೆ.

‘ಚಾಂದಿನಿ ಬಾರ್ 2’ ನಲ್ಲಿ ಕತ್ರಿನಾ ಕಮಾಲ್?

ಫಿಲ್ಮ್ ಫೇರ್ ವರದಿಯ ಪ್ರಕಾರ, 2001 ರ ಕ್ಲಾಸಿಕ್ ಹಿಟ್ ಸಿನಿಮಾ ‘ಚಾಂದಿನಿ ಬಾರ್’ ಚಿತ್ರದ ಸೀಕ್ವೆಲ್‌ನಲ್ಲಿ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಜಯ್ ಬಹ್ಲ್ ನಿರ್ದೇಶಿಸಲಿರುವ ‘ಚಾಂದಿನಿ ಬಾರ್ 2’ ಚಿತ್ರದ ತಾರಾಗಣ ಪಟ್ಟಿಯಲ್ಲಿ ಕತ್ರಿನಾ ಹೆಸರು ಇದೆ ಎನ್ನಲಾಗಿದೆ. ವಿಶೇಷವೆಂದರೆ, ಮೊದಲ ಭಾಗದಲ್ಲಿ ಅದ್ಭುತವಾಗಿ ನಟಿಸಿದ್ದ ಖ್ಯಾತ ನಟಿ ಟಬು ಕೂಡ ಈ ಸೀಕ್ವೆಲ್‌ನಲ್ಲಿ ಭಾಗವಾಗಲಿದ್ದಾರೆ ಎಂಬ ವದಂತಿ ಇದೆ.

ಕತ್ರಿನಾ ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು ಡಿಸೆಂಬರ್ 2024 ರಲ್ಲಿ ಬಿಡುಗಡೆಯಾದ ‘ಮೇರಿ ಕ್ರಿಸ್ಮಸ್’ ಚಿತ್ರದಲ್ಲಿ. ಸಿನಿಮಾಗಳಿಂದ ದೂರವಿದ್ದರೂ ಅವರ ಜನಪ್ರಿಯತೆ ಮಾತ್ರ ತಗ್ಗಿಲ್ಲ. 2025ರ ಒರ್ಮ್ಯಾಕ್ಸ್ ಮೀಡಿಯಾ ಸಮೀಕ್ಷೆಯ ಪ್ರಕಾರ, ಆಲಿಯಾ ಭಟ್, ದೀಪಿಕಾ ಪಡುಕೋಣೆ ಅವರೊಂದಿಗೆ ಕತ್ರಿನಾ ಇಂದಿಗೂ ಬಾಲಿವುಡ್‌ನ ‘ಟಾಪ್ 5’ ಪ್ರೀತಿಯ ನಟಿಯರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿ ಮಗನನ್ನು ಪರಿಚಯಿಸಿದ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್: ಆದರೆ ಒಂದು ಷರತ್ತು

ಇತ್ತೀಚೆಗಷ್ಟೇ ಕತ್ರಿನಾ ಒಟಿಟಿ (OTT) ಪ್ರಾಜೆಕ್ಟ್‌ಗಳ ಸ್ಕ್ರಿಪ್ಟ್ ಕೇಳುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಸದ್ಯಕ್ಕೆ ‘ಚಾಂದಿನಿ ಬಾರ್ 2’ ಚಿತ್ರತಂಡವಾಗಲಿ ಅಥವಾ ಕತ್ರಿನಾ ಕೈಫ್ ಅವರಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮುದ್ರೆ ಒತ್ತಿಲ್ಲ. ಆದರೂ, ಕತ್ರಿನಾ ಕೈಫ್ ಮತ್ತೆ ಬೆಳ್ಳಿಪರದೆಗೆ ಮರಳುವುದು ಗ್ಯಾರಂಟಿ ಎಂಬ ಸುದ್ದಿ ಕೇಳಿ ಅವರ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ – Kannada News | Big Relief For NEET Aspirants: No Hike In Medical And Dental Course Fees In Karnataka For 2026

ಬೆಂಗಳೂರು, ಜೂ.12: ನೀಟ್ (NEET) ಮರುಪರೀಕ್ಷೆಯ ತೀವ್ರ ಒತ್ತಡ ಮತ್ತು ಆತಂಕದಲ್ಲಿರುವ ರಾಜ್ಯದ ವೈದ್ಯಕೀಯ ಸೀಟ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ರಾಜ್ಯ ಸರ್ಕಾರವು ಭರ್ಜರಿ ರಿಲೀಫ್ ನೀಡಿದೆ. ಪ್ರಸಕ್ತ ಸಾಲಿನ (2026-27) ವೈದ್ಯಕೀಯ (MBBS) ಮತ್ತು ದಂತ ವೈದ್ಯಕೀಯ (BDS) ಕೋರ್ಸ್‌ಗಳ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದೆ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ ವರ್ಷ (2025-26ನೇ ಸಾಲು) ನಿಗದಿಪಡಿಸಲಾಗಿದ್ದ ಹಳೆಯ ಶುಲ್ಕ ರಚನೆಯೇ ಈ ವರ್ಷಕ್ಕೂ ಅನ್ವಯಿಸಲಿದೆ ಎಂದು ಸ್ಪಷ್ಟಪಡಿಸಿದರು. ಈ ಮಹತ್ವದ ತೀರ್ಮಾನವು ರಾಜ್ಯದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳೆರಡಕ್ಕೂ ಸಮಾನವಾಗಿ ಅನ್ವಯಿಸಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕೆಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು ಮತ್ತು ಈ ಸಂಬಂಧ ಮನವಿಯನ್ನೂ ಸಲ್ಲಿಸಿದ್ದವು. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕರ ಆರ್ಥಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಸಂಸ್ಥೆಗಳ ಶುಲ್ಕ ಹೆಚ್ಚಳದ ಬೇಡಿಕೆಯನ್ನು ರಾಜ್ಯ ಸರ್ಕಾರವು ಕಠಿಣವಾಗಿ ತಿರಸ್ಕರಿಸಿದೆ. “ಶುಲ್ಕ ಹೆಚ್ಚಳದ ಕುರಿತು ಹರಡುತ್ತಿರುವ ಯಾವುದೇ ರೀತಿಯ ಊಹಾಪೋಹಗಳಿಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕಿವಿಗೊಡಬಾರದು” ಎಂದು ಸಚಿವರು ಇದೇ ವೇಳೆ ಮನವಿ ಮಾಡಿದರು. ಈಗಾಗಲೇ ದೇಶಾದ್ಯಂತ ನೀಟ್ ಗೊಂದಲಗಳಿಂದ ಕಂಗಾಲಾಗಿದ್ದ ವಿದ್ಯಾರ್ಥಿ ವಲಯಕ್ಕೆ ರಾಜ್ಯ ಸರ್ಕಾರದ ಈ ನಿರ್ಧಾರವು ಆರ್ಥಿಕವಾಗಿ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ.

ಪ್ರಸಕ್ತ ಸಾಲಿನ ಶುಲ್ಕದ ವಿವರ ಇಲ್ಲಿದೆ:

ಎಂಬಿಬಿಎಸ್ (MBBS) ಕೋರ್ಸ್ ಶುಲ್ಕ:

ಸರ್ಕಾರಿ ಕಾಲೇಜುಗಳು: 55,000

ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 11,88,167

ದಂತ ವೈದ್ಯಕೀಯ (BDS) ಕೋರ್ಸ್ ಶುಲ್ಕ:

ಸರ್ಕಾರಿ ಕಾಲೇಜುಗಳು: 40,000

ಖಾಸಗಿ ಕಾಲೇಜುಗಳು (ಸರ್ಕಾರಿ ಕೋಟಾ): 7,32,625

ಇದನ್ನೂ ಓದಿ: ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

ಜೂನ್ 21 ನೀಟ್ ಯುಜಿ ಮರು ಪರೀಕ್ಷೆ:

ಇತ್ತೀಚಿನ ಗೊಂದಲಗಳಿಗೆ ತೆರೆ ಎಳೆದು, ಪ್ರತಿಯೊಬ್ಬ ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗೂ ಸಮಾನ ಹಾಗೂ ನ್ಯಾಯಯುತವಾದ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರ ನೀಟ್ ಯುಜಿ(NEET UG) 2026ರ ಮರು ಪರೀಕ್ಷೆಯು ಜೂನ್ 21ರಂದು ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವಿದ್ಯಾರ್ಥಿಗಳಿಗಾಗಿ ಎನ್​ಟಿಎ ವಿಶೇಷ ಕ್ರಮಗಳನ್ನು ಘೋಷಿಸಿದೆ. ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದೆ. ನೀಟ್ ಯುಜಿ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ಜೂನ್ 14 ರಂದು ಬಿಡುಗಡೆ ಮಾಡಲಾಗುವುದು. ರಫ್​ ವರ್ಕ್​ಗೆ ಕೂಡ ಹೆಚ್ಚು ಸ್ಥಳಾವಕಾಶವನ್ನು ಪೇಪರ್​ನಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version