ಎಐ ಬಳಸಿ ಯುವತಿಯ ಅಶ್ಲೀಲ ವಿಡಿಯೋ, ಹಣಕ್ಕೆ ಡಿಮ್ಯಾಂಡ್​​: ಇಬ್ಬರು ಆರೋಪಿಗಳು ಅಂದರ್​​ – Kannada News | Deepfake Blackmail Case: Two Arrested for Extorting Girl’s Family in Chikkamagaluru

ಚಿಕ್ಕಮಗಳೂರು, ಜೂನ್​​ 12: ಯುವತಿಯೋರ್ವಳ ಫೋಟೋವನ್ನು ಪೇಸ್​​ಬುಕ್​ನಿಂದ ಪಡೆದು ಅದನ್ನು ಬಳಸಿ ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿ ಹಣಕ್ಕೆ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. AI, ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಬಳಸಿ ಮಾಡಿದ ವಿಡಿಯೋವನ್ನು ಯುವತಿಯ ತಾಯಿಗೆ ಕಳುಹಿಸಿದ್ದ ಆರೋಪಿಗಳು, ದುಡ್ಡಿಗಾಗಿ ಪೀಡಿಸಿದ್ದರು. ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕಿದ್ದರು. ನೊಂದ ಯುವತಿಯ ಕಡೆಯವರು ಲಕ್ಕವಳ್ಳಿ ಪೊಲೀಸರಿಗೆ ನೀಡಿದ್ದ ದೂರಿನ ಅಧಾರದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್ ಹಾಗೂ ಸಾಹುಲ್ ಎಂಬವರನ್ನು ಅರೆಸ್ಟ್​​ ಮಾಡಲಾಗಿದೆ.

ಯೋಗೇಶ್​​ ಎಂಬ ಹೆಸರಲ್ಲಿ ಬ್ಲ್ಯಾಕ್​​ಮೇಲ್​

ಬಾವಿಕೆರೆ ಗ್ರಾಮದ 25 ವರ್ಷದ ಯುವತಿಯ ಪೋಟೋವನ್ನ ಫೇಸ್ಬುಕ್​​ನಿಂದ ಪಡೆದುಕೊಂಡಿದ್ದ ಆರೋಪಿಗಳು ಅಶ್ಲೀಲ ವಿಡಿಯೋ ಕ್ರಿಯೇಟ್ ಮಾಡಿದ್ದರು. ಆ ಬಳಿಕ ಯುವತಿಯ ತಾಯಿಗೆ ಬೆಂಗಳೂರು ಮೂಲದ ಯೋಗೇಶ್ ಎಂಬ ಹೆಸರಿನಲ್ಲಿ ಪದೇಪದೇ ಕರೆ ಮಾಡಿ ಹಣ ಕೇಳಿದ್ದರು. ಆರೋಪಿಗಳು ನಿರಂತರ ಬ್ಲ್ಯಾಕ್​​ಮೇಲ್​​ ಮಾಡಲಾರಂಭಿಸಿದಾಗ ಯುವತಿ ಕಡೆಯವರು ಈ ಸಂಬಂಧ ಯೋಗೇಶ್​​ ಎಂಬ ಹೆಸರನ್ನೇ ಉಲ್ಲೇಖಿಸಿ ದೂರು ನೀಡಿದ್ದರು. ಆದರೆ ಪೊಲೀಸ್​​ ತನಿಖೆ ವೇಳೆ ಆರೋಪಿಗಳ ಕಳ್ಳಾಟ ಬಯಲಾಗಿದ್ದು, ಹಣಕ್ಕಾಗಿ ಬ್ಲ್ಯಾಕ್​​ಮೇಲ್​​ ಮಾಡುತ್ತಿದ್ದ ಅಸಲಿ ಆರೋಪಿಗಳು ಅದೇ ಬಾವಿಕೆರೆ ಗ್ರಾಮದ ಸಾಹುಲ್ ಮತ್ತು ಅಕ್ಷಯ್​​ ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ; ಕಳ್ಳತನಕ್ಕೆಂದು ಹೋದವನೀಗ ಖಾಕಿ ಅತಿಥಿ!

ಇನ್ನು ಆರೋಪಿಗಳು ಮೈತುಂಬ ಸಾಲಮಾಡಿಕೊಂಡಿದ್ದರು. ಹೀಗಾಗಿ ಹೇಗಾದರೂ ಹಣ ಮಾಡಬೇಕೆಂಬ ಆಸೆಗೆ ಬಿದ್ದು ಈ ರೀತಿಯ ಕೆಲಸಕ್ಕೆ ಕೈಹಾಕಿದ್ದರು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಮಾಡಬಾರದ್ದು ಮಾಡಲು ಹೋದವರೀಗ ಜೈಲು ಸೇರಿದ್ದಾರೆ. ಒಳ್ಳೆ ಕೆಲಸಗಳಿಗೆ ಬಳಕೆಯಾಗಬೇಕಿದ್ದ ತಂತ್ರಜ್ಞಾನವನ್ನು ಇಂತಹ ಕೆಟ್ಟ ಕೆಲಸಕ್ಕೆ ಬಳಕೆ ಮಾಡಿಕೊಂಡು ಹಣ ಮಾಡಲು ಹೋದವರೀಗ ತಕ್ಕ ಶಾಸ್ತಿಯಾಗಿದೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?

ತಮಿಳುನಾಡು ಸಿಎಂ ವಿಜಯ್ (Vijay) ಅವರು ಇಂದು (ಜೂನ್ 12) ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಆದ ಬಳಿಕ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುತ್ತಿರುವ ಮೂರನೇ ತಮಿಳುನಾಡು ಸಿಎಂ ಆಗಿದ್ದಾರೆ ವಿಜಯ್. ದಳಪತಿ ವಿಜಯ್ ಬರುತ್ತಿದ್ದ ಕಾರಣಕ್ಕೆ ಒಂದು ಗಂಟೆ ಕಾಲ ಇತರೆ ಭಕ್ತಾದಿಗಳಿಗೆ ದೇವಾಲಯದ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ವಿಜಯ್ ಅವರು ದೇವಾಲಯಕ್ಕೆ ಬಂದು ಮಾಡಿಸಿದ ಪೂಜೆಯ ಬಗ್ಗೆ ದೇವಾಲಯದ ಅರ್ಚಕರಾದ ನಿತ್ಯಾನಂದ ಅಡಿಗ ಅವರು ಟಿವಿ9 ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅರ್ಚಕರು ಹೇಳಿರುವಂತೆ ವಿಜಯ್ ಅವರಿಗಾಗಿ ವಿಶೇಷ ಪೂಜೆಗಳನ್ನೇನೂ ಮಾಡಿಲ್ಲವಂತೆ ಬದಲಿಗೆ ಸಾಮಾನ್ಯ ಪೂಜೆಯನ್ನೇ ಮಾಡಲಾಗಿದೆಯಂತೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಟ್ರಾವೆಲ್ ಮಾಡುವಾಗ ಮಲಬದ್ಧತೆ ಸಮಸ್ಯೆ ಕಂಡುಬರುತ್ತಾ? ಹಾಗಿದ್ರೆ ಈ ರೀತಿ ಮಾಡುವುದನ್ನು ಮರೆಯಬೇಡಿ – Kannada News | Travel Digestive Problems: Best Ways To Avoid Constipation

ಪ್ರಯಾಣ (Travel) ಮಾಡುವುದು ಎಲ್ಲರಿಗೂ ಇಷ್ಟ. ಆದರೆ ದೂರ ದೂರದ ಪ್ರಯಾಣ, ಆಹಾರದ ಬದಲಾವಣೆ, ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಹಾಗೂ ನೀರಿನ ಕೊರತೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಹಲವರಿಗೆ ಪ್ರಯಾಣದ ಸಮಯದಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನೇ “ಟ್ರಾವೆಲ್ ಕಾಂಸ್ಟಿಪೇಶನ್” ಎಂದು ಕರೆಯಲಾಗುತ್ತದೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಪ್ರಯಾಣದ ವೇಳೆ ದಿನಚರಿಯಲ್ಲಿ ಆಗುವಂತಹ ಬದಲಾವಣೆಗಳಿಂದ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಪ್ರವಾಸ ಮಾಡುವಾಗ ಇರಬೇಕಾದ ಸಂತೋಷ, ಉತ್ಸಾಹ ಎಲ್ಲವೂ ಕಡಿಮೆಯಾಗಬಹುದು. ಅದಕ್ಕಾಗಿಯೇ ಅತಿಯಾಗಿ ಪ್ರಯಾಣ ಮಾಡುವವರು ಮತ್ತು ಟ್ರಿಪ್ ಹೋಗುವ ಸಮಯದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಪ್ರಯಾಣದ ವೇಳೆ ಮಲಬದ್ಧತೆ ಏಕೆ ಕಂಡುಬರುತ್ತದೆ?

ನೀರಿನ ಕೊರತೆ: ಗಂಟೆಗಳ ಕಾಲ ಬಸ್, ಕಾರು ಅಥವಾ ವಿಮಾನದಲ್ಲಿ ಪ್ರಯಾಣಿಸುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಲ ಗಟ್ಟಿಯಾಗಿ ಹೊರಬರಲು ಕಷ್ಟವಾಗುತ್ತದೆ.

ದೈಹಿಕ ಚಟುವಟಿಕೆ ಕಡಿಮೆಯಾಗುವುದು: ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಹೆಚ್ಚಾಗಿ ದೈಹಿಕ ಚಟುವಟಿಕೆ ಇರುವುದಿಲ್ಲ. ಇದರಿಂದ ಮಲಬದ್ಧತೆ ಸಮಸ್ಯೆ ಕಂಡುಬರಬಹುದು.

ಆಹಾರ ಪದ್ಧತಿಯಲ್ಲಿ ಬದಲಾವಣೆ: ಪ್ರಯಾಣದ ವೇಳೆ ಹೊರಗಿನ ಆಹಾರ, ಫಾಸ್ಟ್ ಫುಡ್ ಅಥವಾ ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು ಜೀರ್ಣಕ್ರಿಯೆಯನ್ನು ಹಾಳು ಮಾಡಬಹುದು.

ಮಲವಿಸರ್ಜನೆಗೆ ಹೋಗದಿರುವುದು: ಸರಿಯಾದ ಟಾಯ್ಲೆಟ್ ಸೌಲಭ್ಯ ಇಲ್ಲದಿರುವುದು ಅಥವಾ ಹೊಸ ಸ್ಥಳದಲ್ಲಿ ಅಸೌಕರ್ಯ ಅನುಭವಿಸುವುದರಿಂದ ಹಲವರು ಮಲವಿಸರ್ಜನೆಯನ್ನು ತಡೆಹಿಡಿಯುತ್ತಾರೆ. ಇದು ಮಲಬದ್ಧತೆಗೆ ಪ್ರಮುಖ ಕಾರಣ.

ಲಕ್ಷಣಗಳು ಹೇಗಿರುತ್ತವೆ?

  • ವಾರದಲ್ಲಿ ತುಂಬಾ ಕಡಿಮೆ ಬಾರಿ ಮಲವಿಸರ್ಜನೆ ಆಗುವುದು
  • ಮಲ ಗಟ್ಟಿಯಾಗಿ ಹೊರಬರುವುದು
  • ಹೊಟ್ಟೆ ಉಬ್ಬರ ಮತ್ತು ನೋವು
  • ಮಲವಿಸರ್ಜನೆ ವೇಳೆ ಹೆಚ್ಚು ಒತ್ತಡ ಹಾಕಬೇಕಾಗುವುದು
  • ಹೊಟ್ಟೆ ಸಂಪೂರ್ಣ ಖಾಲಿಯಾಗದ ಭಾವನೆ

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ವೈದ್ಯರು ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿ

ಈ ಸರಳ ಸಲಹೆಗಳನ್ನು ಅನುಸರಿಸಿ:

ಸಾಕಷ್ಟು ನೀರು ಕುಡಿಯಿರಿ: ಪ್ರಯಾಣದ ವೇಳೆ ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವುದು ಮುಖ್ಯ.

ಫೈಬರ್ ಅಂಶವಿರುವ ಆಹಾರ ಸೇವಿಸಿ: ಹಣ್ಣು, ತರಕಾರಿ, ಧಾನ್ಯಗಳು ಹಾಗೂ ನಟ್ಸ್‌ಗಳಲ್ಲಿ ಇರುವ ಫೈಬರ್ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.

ಬಿಡುವಿದ್ದಾಗ ವಾಕಿಂಗ್ ಮಾಡಿ: ದೀರ್ಘ ಪ್ರಯಾಣದ ವೇಳೆ ಸ್ವಲ್ಪ ಹೊತ್ತು ನಡೆದು ದೇಹಕ್ಕೆ ಚಲನೆ ನೀಡುವುದು ಒಳ್ಳೆಯದು.

ಸಮಯಕ್ಕೆ ಸರಿಯಾಗಿ ಊಟ ಮಾಡಿ: ಸರಿಯಾದ ಸಮಯದಲ್ಲಿ ಊಟ ಮಾಡದಿದ್ದಾಗ ಇದು ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಿಸುತ್ತದೆ.

ಮಲವಿಸರ್ಜನೆಯನ್ನು ತಡೆಯಬೇಡಿ: ಅವಶ್ಯಕತೆ ಬಂದಾಗ ತಕ್ಷಣ ಟಾಯ್ಲೆಟ್‌ಗೆ ಹೋಗುವ ಅಭ್ಯಾಸ ಮಾಡಿಕೊಳ್ಳಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಪ್ರಯಾಣ ಮುಗಿದ ನಂತರವೂ ಮಲಬದ್ಧತೆ ಕಡಿಮೆಯಾಗದಿದ್ದರೆ ಅಥವಾ ಹೊಟ್ಟೆ ನೋವು, ವಾಂತಿ, ಮಲದಲ್ಲಿ ರಕ್ತ, ತೂಕ ಏಕಾಏಕಿ ಕಡಿಮೆಯಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿ ಮಾತ್ರ ನಮ್ಮ ನಾಯಕಿ, ಅಭಿಷೇಕ್ ಅಲ್ಲ; ಟಿಎಂಸಿ ಬಂಡಾಯದ ನಡುವೆ ಶತ್ರುಘ್ನ ಸಿನ್ಹಾ ಹೇಳಿಕೆ – Kannada News | Only Mamata Banerjee is my leader not Abhishek Banerjee Shatrughan Sinha amid TMC Rebel Crisis

ಕೊಲ್ಕತ್ತಾ, ಜೂನ್ 12: ಸಂಸತ್ತಿನಲ್ಲಿ ಪ್ರತ್ಯೇಕ ಬಣ ರಚಿಸಲು ಮುಂದಾಗಿರುವ ಟಿಎಂಸಿಯ 19 ಬಂಡಾಯ ಸಂಸದರ ಪಟ್ಟಿಯಲ್ಲಿ ತಮ್ಮ ಹೆಸರು ಕೇಳಿಬಂದ ಮರುದಿನವೇ, ತೃಣಮೂಲ ಕಾಂಗ್ರೆಸ್ (TMC) ಸಂಸದ ಶತ್ರುಘ್ನ ಸಿನ್ಹಾ ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ನಿಷ್ಠೆಯನ್ನು ಪುನರುಚ್ಚರಿಸಿದ್ದಾರೆ. ಕಷ್ಟದ ಸಮಯದಲ್ಲಿ ನಾನು ಎಂದಿಗೂ ಮಮತಾ ಬ್ಯಾನರ್ಜಿ ಅವರ ಕೈ ಬಿಡುವುದಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಮಮತಾ ಸಹಾಯ ಮಾಡಿದ್ದಾರೆ. ಈಗ ನನ್ನ ಸರದಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅಭಿಷೇಕ್ ಬ್ಯಾನರ್ಜಿ ಆಗಲಿ ಅಥವಾ ಬೇರೆ ಯಾರೇ ಆಗಲಿ ನನ್ನ ನಾಯಕರಲ್ಲ. ಮಮತಾ ಬ್ಯಾನರ್ಜಿ ಮಾತ್ರ ನಮ್ಮ ನಾಯಕಿ” ಎಂದು ಹೇಳಿರುವ ಶತ್ರುಘ್ನ ಸಿನ್ಹಾ ತಾವು ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲೇ ಕೆಲಸ ಮುಂದುವರಿಸುವುದಾಗಿ ಶಪಥ ಮಾಡಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ

ಇದೇ ವೇಳೆ ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ಶತ್ರುಘ್ನ ಸಿನ್ಹಾ, ನನಗೆ ಬಿಜೆಪಿಯಲ್ಲಿ ಹಲವು ಸ್ನೇಹಿತರಿದ್ದಾರೆ. ಅವರು ನನಗೆ ಏನನ್ನಾದರೂ ಆಫರ್ ಮಾಡಿದ್ದರೆ ಅದು ಒಳ್ಳೆಯ ಉದ್ದೇಶದಿಂದಲೇ ಇರಬಹುದು.ಆದರೆ ನನಗೆ ಮಮತಾ ಬ್ಯಾನರ್ಜಿ ಅವರೊಂದಿಗೆ ಇರುವುದೇ ಅತ್ಯಂತ ಸೂಕ್ತವಾದುದು ಎಂದು ಒಪ್ಪಿಕೊಂಡಿದ್ದಾರೆ.

ಟಿಎಂಸಿ ಎದುರಿಸುತ್ತಿರುವ ಈ ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ತಾವು ಪಕ್ಷ ಬದಲಾಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಶತ್ರುಘ್ನ ಸಿನ್ಹಾ ಒತ್ತಿ ಹೇಳಿದ್ದಾರೆ. “ನಾನು ಯಾವಾಗಲೂ ಮಮತಾ ಬ್ಯಾನರ್ಜಿ ಅವರೊಂದಿಗೆ ಇರುತ್ತೇನೆ. ನಾನು ಒಬ್ಬನೇ ಉಳಿದರೂ ‘ಏಕ್ಲಾ ಚಲೋ’ ಎನ್ನುತ್ತಾ ಅವರೊಂದಿಗೇ ಇರುತ್ತೇನೆ. ಸದ್ಯಕ್ಕೆ ನಾನು ಎಲ್ಲಿಗೂ ಹೋಗುವ ಆಲೋಚನೆ ಮಾಡಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ನಾನು ಬೇಕಾ, ಅಭಿಷೇಕ್ ಬ್ಯಾನರ್ಜಿ ಬೇಕಾ ನಿರ್ಧರಿಸಿ; ಮಮತಾಗೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸವಾಲು

ಮಮತಾ ಬ್ಯಾನರ್ಜಿ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ವ್ಯಾಪಕವಾಗಿ ಬಿಂಬಿತವಾಗಿರುವ ಅಭಿಷೇಕ್ ಬ್ಯಾನರ್ಜಿ ಅವರೇ ಪಕ್ಷದ ನಾಯಕತ್ವದ ಶೈಲಿಯನ್ನು ಪ್ರಶ್ನಿಸುತ್ತಿರುವ ಅತೃಪ್ತ ನಾಯಕರ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಇತ್ತೀಚೆಗಷ್ಟೇ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 19 ಅತೃಪ್ತ ಟಿಎಂಸಿ ಸಂಸದರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು, ತಾವು ಸಂಸತ್ತಿನಲ್ಲಿ ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುವುದಾಗಿ ಮತ್ತು ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿ ಮಮತಾ ಬ್ಯಾನರ್ಜಿಗೆ ದೊಡ್ಡ ಆಘಾತ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ, ಶತ್ರುಘ್ನ ಸಿನ್ಹಾ ಅವರು ತಾವು ಬಂಡಾಯ ಬಣದಲ್ಲಿಲ್ಲ, ಮಮತಾ ಬ್ಯಾನರ್ಜಿ ಅವರ ಪರವಾಗಿಯೇ ಇರುವುದಾಗಿ ಪ್ರಕಟಿಸಿರುವುದು ಮಮತಾ ಬ್ಯಾನರ್ಜಿ ಅವರಿಗೆ ಸ್ವಲ್ಪ ನಿರಾಳತೆ ತಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​​​​ನ ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು! – Kannada News | NCLT Bengaluru Declares Congress MLC Naseer Ahmed Bankrupt Over RS 1,454 Crore Personal Guarantee Dues, so he Faces Disqualification

ಬೆಂಗಳೂರು, (ಜೂನ್ 12): ಬೆಂಗಳೂರಿನಲ್ಲಿರುವ ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‌ನ 1,454 ಕೋಟಿ ರೂಪಾಯಿ ಬಾಕಿ ಸಾಲವನ್ನು ಮರುಪಾವತಿಸಲು ವಿಫಲರಾದ ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್  (Congress MLC Naseer Ahmed  )ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಬೆಂಗಳೂರು ಪೀಠ ‘ದಿವಾಳಿ’ ಎಂದು ಘೋಷಿಸಿದೆ. ಇದರಿಂದಾಗಿ ಇದೀಗ ಅವರ MLC ಸ್ಥಾನಕ್ಕೆ ಕುತ್ತು ಬಂದಿದೆ. IBC-2016ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಜೂನ್ 8ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ NCLT, ಇಂದು (ಜೂನ್ 12) ಈ ಆದೇಶವನ್ನು ನೀಡಿದೆ. ಹೀಗಾಗಿ ಎಂಎಲ್​​​ಸಿ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Source link

‘ಕರುಪ್ಪು’ ಸೂಪರ್ ಹಿಟ್ ಆದರೆ ಹಣ ಬಂದಿಲ್ಲವೆಂದ ಫೈನ್ಯಾನ್ಶಿಯರ್, ನಿರ್ದೇಶಕನ ಮೇಲೆ ಆಕ್ರೋಶ – Kannada News | Financier said Karuppu movie became super hit but he did not get money

ತಮಿಳು ಸ್ಟಾರ್ ನಟ ಸೂರ್ಯ (Suriya) ಅವರ ಇತ್ತೀಚಿನ ಚಿತ್ರ ‘ಕರುಪ್ಪು’ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ ಎನ್ನಲಾಗುತ್ತಿದೆ. ನಿರ್ದೇಶಕ ಆರ್ ಬಾಲಾಜಿಯಂತೂ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದಾರೆ. ನಟ ಸೂರ್ಯ ಅವರು, ಬಾಲಾಜಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ಸಹ ನೀಡಿದ್ದಾರೆ. ಸಿನಿಮಾ ಹಿಟ್ ಎಂದು ನಿರ್ದೇಶಕ, ನಟ ಹೇಳುತ್ತಿರುವಾಗಲೇ ಆ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡಿದ ವ್ಯಕ್ತಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಹಾಕಿದ ಬಂಡವಾಳದ 50% ಮಾತ್ರವೆ ಮರಳಿ ಬಂದಿದೆ ಎಂದಿದ್ದಾರೆ. ಆ ಮೂಲಕ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸುದ್ದಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ.

ತಮಿಳು ಚಿತ್ರರಂಗದ ಹಿರಿಯ ಫೈನಾನ್ಸಿಯರ್ ಮತ್ತು ವಿತರಕ ತಿರುಪುರ್ ಸುಬ್ರಮಣಿಯಂ ಸಂದರ್ಶನವೊಂದರಲ್ಲಿ ಮಾತನಾಡಿ, ತಾವು ಸಹ ‘ಕರಪ್ಪು’ ಸಿನಿಮಾದ ಮೇಲೆ ಹೂಡಿಕೆ ಮಾಡಿದ್ದು, ತಾವು ಹೂಡಿಕೆ ಮಾಡಿದ ಹಣದಲ್ಲಿ ಕೇವಲ ಅರ್ಧದಷ್ಟು ಮಾತ್ರ ವಾಪಸ್ ಬಂದಿದೆ ಎಂದಿದ್ದಾರೆ. ಅಲ್ಲದೆ, ಸಂದರ್ಶನದಲ್ಲಿ ಸಿನಿಮಾದ ನಿರ್ದೇಶಕ ಆರ್​​ಜೆ ಬಾಲಾಜಿ ವಿರುದ್ಧ ಆಕ್ರೋಶ ಮತ್ತು ಅಸಮಾಧಾನವನ್ನು ಸಹ ಹೊರ ಹಾಕಿದ್ದಾರೆ.

‘ಕರುಪ್ಪು’ ಸಿನಿಮಾ ಬಿಡುಗಡೆಗೆ ಅಡೆ-ತಡೆ ಎದುರಾಗಿತ್ತು. ನಿಗದಿತ ದಿನಾಂಕದಂದು ಸಿನಿಮಾ ಬಿಡುಗಡೆ ಆಗಲಿಲ್ಲ. ಆ ದಿನ ಕಾರಲ್ಲಿ ಕೂತು ವಿಡಿಯೋ ಮಾಡಿದ್ದ ನಿರ್ದೇಶಕ ಬಾಲಾಜಿ, ಕಣ್ಣೀರು ಹಾಕಿದ್ದರು. ಈ ಬಗ್ಗೆ ತಿರುಪುರ್ ಸುಬ್ರಹ್ಮಣಿಯಂ ಅವರು ಟೀಕೆ ಮಾಡಿದ್ದು, ಶ್ರೀ ಶಕ್ತಿ ಸಿನೆಮಾಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿರುವ ಅವರು, ‘ಬಿಡುಗಡೆಗೆ ಎರಡು ದಿನಗಳ ಮೊದಲು ನಾವು ಎದುರಿಸಿದ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ. ನಿರ್ದೇಶಕರು ನಮ್ಮೊಂದಿಗೆ ಬಂದು ಆ ಸಮಸ್ಯೆಗಳನ್ನು ಎದುರಿಸಬೇಕಿತ್ತು, ಆದರೆ ಅವರು ಅದಕ್ಕೆ ಬದಲಾಗಿ ಕಾರಿನಲ್ಲಿ ಕುಳಿತು ಅಳುತ್ತಿರುವ ವಿಡಿಯೋ ಮಾಡಿಕೊಂಡರು. ಈಗ ಸಿನಿಮಾ ಹಿಟ್ ಆಗಿದೆ ಎಂದು ನಿರ್ದೇಶಕರು ಬೀಗುತ್ತಿದ್ದಾರೆ. ಆದರೆ, ಸಿನಿಮಾ ತೆರೆ ಕಾಣಲು ನಟ ಸೂರ್ಯ ಮಾತ್ರ ಮುಂದೆ ಬಂದು ಸಹಾಯ ಮಾಡಿದರು. ಸೂರ್ಯ ಅವರನ್ನು ಬಿಟ್ಟರೆ, ಸಮಸ್ಯೆಯನ್ನು ಬಗೆಹರಿಸಲು ಬೇರೆ ಯಾರೂ ಮುಂದೆ ಬರಲಿಲ್ಲ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

‘ಈ ಚಿತ್ರವು 2025ರ ದೀಪಾವಳಿಗೆ ಬಿಡುಗಡೆಯಾಗಬೇಕಿತ್ತು, ಆದರೆ ಎಂಟು ತಿಂಗಳ ನಂತರ ಬಿಡುಗಡೆಯಾಯಿತು. ₹30-40 ಕೋಟಿ ಬಜೆಟ್ ಎಂದು ಹೇಳುತ್ತಾರೆ, ಅದು 45 ಕೋಟಿಯವರೆಗೆ ಹೋದರೆ ಪರವಾಗಿಲ್ಲ, ಆದರೆ ಅದು 80 ಕೋಟಿಗೆ ತಲುಪಿದರೆ ಏನು ಮಾಡಲು ಸಾಧ್ಯ? ಇದು ನಿರ್ಮಾಪಕರು ಮತ್ತು ಫೈನಾನ್ಸಿಯರ್‌ಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಈ ಚಿತ್ರದ ಬಿಡುಗಡೆಗಾಗಿ ನಾನು ನನ್ನ ಸ್ವಂತ ಹಣವನ್ನು ಹೂಡಿಕೆ ಮಾಡಿದ್ದೆ. ಅದರಲ್ಲಿ ನನಗೆ ಸಿಕ್ಕಿದ್ದು ಕೇವಲ 50 ಪ್ರತಿಶತ ಮಾತ್ರ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರುಪ್ಪು’ ಚಿತ್ರವು ಮೂಲತಃ ಮೇ 14 ರಂದು ಬಿಡುಗಡೆಯಾಗಬೇಕಿತ್ತು ಮತ್ತು ಮುಖ್ಯಮಂತ್ರಿ ವಿಜಯ್ ಅವರು ಬೆಳಿಗ್ಗೆ 9 ಗಂಟೆಯ ಪ್ರದರ್ಶನಕ್ಕೆ ಅನುಮೋದನೆ ನೀಡಿದ್ದರು. ಆದರೆ, ಕೊನೆಯ ನಿಮಿಷದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ರಾಜ್ಯದಾದ್ಯಂತ ಚಿತ್ರಮಂದಿರಗಳು “ಅನಿವಾರ್ಯ ಕಾರಣಗಳು” ಮತ್ತು “ಆರ್ಥಿಕ ಕಾರಣಗಳಿಂದಾಗಿ” ಪ್ರದರ್ಶನಗಳನ್ನು ರದ್ದುಗೊಳಿಸುತ್ತಿರುವುದಾಗಿ ಘೋಷಿಸಿದ್ದವು. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ನೀಡಬೇಕಿದ್ದ 10 ಕೋಟಿ ಬಾಕಿ ಪಾವತಿಯಾಗದಿದ್ದೇ ಈ ವಿಳಂಬಕ್ಕೆ ಕಾರಣವಾಗಿತ್ತು. ತಮಿಳು ಚಿತ್ರರಂಗದಲ್ಲಿ, ಬಾಕಿ ಹಣ ಪಾವತಿಯಾಗುವವರೆಗೆ ವಿತರಕರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅಗತ್ಯವಾದ ಡಿಜಿಟಲ್ ಕೀಯನ್ನು (KDM) ತಡೆಹಿಡಿಯುವುದು ಸಾಮಾನ್ಯ. ಅಂತಿಮವಾಗಿ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯಿತು. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್

Source link

ಕೊಲ್ಲೂರು ಮೂಕಾಂಬಿಕೆಗೆ ಸಿಎಂ ವಿಜಯ್, ವಿಶೇಷ ಪೂಜೆ: ಕ್ಷೇತ್ರದ ಮಹಿಮೆ, ದೇವಿ ಶಕ್ತಿ ಬಗ್ಗೆ ವಿವರಿಸಿದ ಆಧ್ಯಾತ್ಮಕ ಚಿಂತಕ

ಉಡುಪಿ, (ಜೂನ್​​ 12): ತಮಿಳುನಾಡು ಸಿಎಂ ಆದ ಬಳಿಕ ವಿಜಯ್ ಅವರು ಮೊದಲ ಬಾರಿಗೆ​​ ಇಂದು (ಜೂನ್ 12) ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿಗೆ ಭೇಟಿ ನೀಡಿದ್ದು, ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂಜೆಗೆ ಸಂಕಲ್ಪ ನೆರವೇರಿಸಿದ್ದು, ದೇವಸ್ಥಾನದ ಅರ್ಚಕರು ಸಿಎಂ ವಿಜಯ್ ಕೈಗೆ ರಕ್ಷಾ ದಾರ ಕಟ್ಟಿದರು. ಇನ್ನು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿದ್ದ ವಿಜಯ್, ಅವರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿ ತೆರಳಿದ್ದಾರೆ. ಇನ್ನು ವಿಜಯ್ ಅವರ ಪೂಜೆ ಬಗ್ಗೆ ಆಧ್ಯಾತ್ಮಕ ಚಿಂತಕ ಪ್ರಕಾಶ್ ಅಮ್ಮಣ್ಣಾಯ ಟಿವಿ9 ಜೊತೆ ಮಾತನಾಡಿದ್ದು, ವಿಜಯ್ ಅವರ ಪೂಜೆ ಹಾಗೂ ಮೂಕಾಂಬಿಕಾ ದೇವಿಯ ವಿಶೇಷತೆಯನ್ನು ವಿವರಿಸಿದ್ದಾರೆ.

ಇದನ್ನೂ ನೋಡಿ: ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್​​

Source link

ಮುಂದಿನ 7 ದಿನ ರಾಜ್ಯಾದ್ಯಂತ ವರುಣನ ಆರ್ಭಟ: ಕರಾವಳಿಯಲ್ಲಿ ಜೂನ್ 15ರವರೆಗೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – Kannada News | Coastal Karnataka Orange Alert: Monsoon 2026 Brings Heavy Rains and Storms

ಬೆಂಗಳೂರು, ಜೂ.12 : ನೈಋತ್ಯ ಮುಂಗಾರು (Monsoon 2026) ಕರ್ನಾಟಕದಾದ್ಯಂತ ಚುರುಕುಗೊಂಡಿದ್ದು, ಮುಂದಿನ 7 ದಿನಗಳ ಕಾಲ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ರಾಜ್ಯದ ಹಲವು ಭಾಗಗಳಿಗೆ ಮಹತ್ವದ ಮುನ್ನೆಚ್ಚರಿಕೆಗಳನ್ನು ರವಾನಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಜೂನ್ 12 ರಂದು (ಇಂದು) ಕರಾವಳಿಯ ಕೆಲವೆಡೆ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತದನಂತರ ಜೂನ್ 13 ರಿಂದ ಜೂನ್ 15 ರವರೆಗೆ ಕರಾವಳಿಯಾದ್ಯಂತ ಸತತವಾಗಿ ಭಾರಿ ಮಳೆಯಾಗಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಕರಾವಳಿ ತೀರದ ಜನರಿಗೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡುಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಅಲ್ಲಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಬಿರುಗಾಳಿ (ಗಂಟೆಗೆ 30-40 ಕಿ.ಮೀ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ದಕ್ಷಿಣ ಒಳನಾಡು ಮೈಸೂರು, ಮಂಡ್ಯ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಬೆಳಗ್ಗಿನ ಅವಧಿಯಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಹವಾಮಾನ ಇಲಾಖೆಯು ಇಡೀ ರಾಜ್ಯಕ್ಕೆ ಒಟ್ಟಾರೆಯಾಗಿ ಹಳದಿ ಅಲರ್ಟ್ (Yellow Alert) ಘೋಷಿಸಿದ್ದು, ಸಾರ್ವಜನಿಕರು ಸಿಡಿಲು ಮತ್ತು ಬಿರುಗಾಳಿಯ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದೆ.

ಇದನ್ನೂ ಓದಿ; ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಕರಾವಳಿ ಕರ್ನಾಟಕ- ಆರೆಂಜ್ ಅಲರ್ಟ್

ಜೂನ್ 12 (ಇಂದು): ಅತಿ ಭಾರಿ ಮಳೆ ಜೊತೆಗೆ ಬಲವಾದ ಗಾಳಿ ಬೀಸಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜೂನ್ 13 ರಿಂದ ಜೂನ್ 15: ಮೂರು ದಿನಗಳ ಕಾಲ ಸತತವಾಗಿ ಭಾರಿ ಮಳೆ ಹಾಗೂ ಬಲವಾದ ಗಾಳಿ ಇರಲಿದ್ದು, ಹಳದಿ ಅಲರ್ಟ್ ಇರಲಿದೆ.

ಜೂನ್ 16 ರಿಂದ ಜೂನ್ 18: ಯಾವುದೇ ಮಳೆ ಎಚ್ಚರಿಕೆ ಇರುವುದಿಲ್ಲ.

ಉತ್ತರ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್

ಜೂನ್ 12 ಮತ್ತು ಜೂನ್ 13: ಮುಂದಿನ ಎರಡು ದಿನಗಳ ಕಾಲ ಕೆಲವು ಕಡೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು, ಸಿಡಿಲು ಸಹಿತ ಭೀಕರ ಬಿರುಗಾಳಿ ಬೀಸಲಿದೆ.

ಜೂನ್ 14 ಮತ್ತು ಜೂನ್ 15: ಮಳೆಯ ಪ್ರಮಾಣ ಸ್ವಲ್ಪ ತಗ್ಗಲಿದೆಯಾದರೂ, ಗುಡುಗು, ಸಿಡಿಲು ಮತ್ತು ಗಾಳಿಯ ಆರ್ಭಟ ಮುಂದುವರಿಯಲಿದೆ.

ಜೂನ್ 16 ರಿಂದ ಜೂನ್ 18: ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಎಚ್ಚರಿಕೆ ಇರುವುದಿಲ್ಲ.

ದಕ್ಷಿಣ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್

ಜೂನ್ 12 ಮತ್ತು ಜೂನ್ 13: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಲವಾದ ಮೇಲ್ಮೈ ಗಾಳಿ ಬೀಸಲಿದೆ.

ಜೂನ್ 14 ಮತ್ತು ಜೂನ್ 15: ಭಾರಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಜೋರಾದ ಗಾಳಿ ಬೀಸುವಿಕೆ ಮುಂದುವರಿಯಲಿದೆ.

ಜೂನ್ 16 ರಿಂದ ಜೂನ್ 18: ಮಳೆ ಮತ್ತು ಗಾಳಿಯ ತೀವ್ರತೆ ಸಂಪೂರ್ಣ ಕಮ್ಮಿಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ಇಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಅವರ ಜನ್ಮದಿನ ಹತ್ತಿರವಿದೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬ ಇದ್ದು, ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಹುಟ್ಟುಹಬ್ಬ ತುಸು ಭಿನ್ನ ಆಗಿರಲಿದೆ. ಈ ಹುಟ್ಟುಹಬ್ಬಕ್ಕೆ ವಿಜಯ್ ನಟನಾಗಿಲ್ಲ ಬದಲಿಗೆ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರ ಅಭಿಮಾನಿಗಳಿಗೆ, ವಿಜಯ್ ಹುಟ್ಟುಹಬ್ಬದಂದು ಸಂಭ್ರಮಿಸಲು ಕಾರಣವೊಂದು ದೊರೆತಿದೆ. ವಿಜಯ್ ಅವರ ಹಳೆಯ ಸೂಪರ್ ಹಿಟ್ ಸಿನಿಮಾ ಒಂದು ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ.

ಜೂನ್ 22 ರಂದು ವಿಜಯ್ ಅವರ ಜನ್ಮದಿನವಿದ್ದು, ಆ ವಿಶೇಷ ದಿನವನ್ನು ಆಚರಿಸುವ ಸಲುವಾಗಿ ವಿಜಯ್ ಅವರ ಸೂಪರ್ ಹಿಟ್ ಸಿನಿಮಾ ‘ಮರ್ಸೆಲ್’ ಅನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವು ಚೆನ್ನೈ ಮತ್ತು ಚೆಂಗಲ್ಪಟ್ಟುವಿನ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ. ತಮಿಳುನಾಡಿನಾದ್ಯಂತ ಬಿಡುಗಡೆ ಆಗುತ್ತಿಲ್ಲ. ಆದರೂ ಸಹ ವಿಜಯ್ ಅವರ ಅಭಿಮಾನಿಗಳು ಬೇರೆ ಬೇರೆ ಕಡೆಗಳಿಂದ ಚೆನ್ನೈಗೆ ಆಗಮಿಸಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಅಟ್ಲಿ ನಿರ್ದೇಶನದ ‘ಮೆರ್ಸಲ್’ ಚಿತ್ರದಲ್ಲಿ ವಿಜಯ್ ತಂದೆ ಮತ್ತು ಇಬ್ಬರು ಮಕ್ಕಳ ಪಾತ್ರಗಳಲ್ಲಿ ತ್ರಿಪಾತ್ರಾಭಿನಯ ಮಾಡಿದ್ದರು. ಈ ಚಿತ್ರವು ರೋಗಿಗಳಿಂದ ಕಡಿಮೆ ಶುಲ್ಕ ಪಡೆಯುವ ಸಹಾನುಭೂತಿಯುಳ್ಳ ವೈದ್ಯನ ಕಥೆಯನ್ನು ಒಳಗೊಂಡಿದೆ, ಜೊತೆಗೆ ಗುಪ್ತವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾರೆ. ಆದರೆ ವಿಜಯ್ ಬಂಧನದ ಬಳಿಕ ಅವರ ಹಿಂದಿನ ಕತೆಗಳು ಹೊರಗೆ ಬರುತ್ತವೆ. ಒಟ್ಟಾರೆ ಸಖತ್ ಮಾಸ್ ಆದ ಸಿನಿಮಾ ‘ಮರ್ಸೆಲ್’ ಆಗಿತ್ತು. 2017 ರಲ್ಲಿ ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದವೂ ಆಗಿತ್ತು. ಈಗ ಮತ್ತೆ ಅದೇ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಕೊಲ್ಲೂರಿಗೆ ಸಿಎಂ ವಿಜಯ್ ಭೇಟಿ ಹಿನ್ನೆಲೆ ಭಕ್ತರ ದರ್ಶನಕ್ಕೆ 1 ಗಂಟೆ ಬ್ರೇಕ್!

‘ಮರ್ಸೆಲ್’ ಸಿನಿಮಾ ಬಿಡುಗಡೆ ಆದಾಗ ಬಿಜೆಪಿಯು ಸಿನಿಮಾದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಅಂಶಗಳು ಸಿನಿಮಾನಲ್ಲಿವೆ ಎಂದಿದ್ದು, ಸಿನಿಮಾದ ನಿಷೇಧಕ್ಕೆ ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರು, ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ದು, ಇದೇ ಕಾರಣಕ್ಕೆ ಅವರು ಮೋದಿಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಮರ್ಸಲ್ ಸಿನಿಮಾನಲ್ಲಿ ಕಾಜಲ್ ಅಗರ್ಲಾವ್, ಎಸ್​​ಜೆ ಸೂರ್ಯ, ಸಮಂತಾ ಋತ್ ಪ್ರಭು, ನಿತ್ಯಾ ಮೆನನ್, ವಡಿವೇಲು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಅನ್ನು ಅಟ್ಲಿ ನಿರ್ದೇಶನ ಮಾಡಿದ್ದು, ತೆಂಡಾಲ್ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಇದೀಗ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಮರ್ಸೆಲ್’ ಮರು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version