ಕಾಂಗ್ರೆಸ್​​​​ನ ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು! – Kannada News | NCLT Bengaluru Declares Congress MLC Naseer Ahmed Bankrupt Over RS 1,454 Crore Personal Guarantee Dues, so he Faces Disqualification

ಬೆಂಗಳೂರು, (ಜೂನ್ 12): ಬೆಂಗಳೂರಿನಲ್ಲಿರುವ ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್‌ನ 1,454 ಕೋಟಿ ರೂಪಾಯಿ ಬಾಕಿ ಸಾಲವನ್ನು ಮರುಪಾವತಿಸಲು ವಿಫಲರಾದ ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್  (Congress MLC Naseer Ahmed  )ಅವರನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT)ಯ ಬೆಂಗಳೂರು ಪೀಠ ‘ದಿವಾಳಿ’ ಎಂದು ಘೋಷಿಸಿದೆ. ಇದರಿಂದಾಗಿ ಇದೀಗ ಅವರ MLC ಸ್ಥಾನಕ್ಕೆ ಕುತ್ತು ಬಂದಿದೆ. IBC-2016ರ ಅಡಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಜೂನ್ 8ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ NCLT, ಇಂದು (ಜೂನ್ 12) ಈ ಆದೇಶವನ್ನು ನೀಡಿದೆ. ಹೀಗಾಗಿ ಎಂಎಲ್​​​ಸಿ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Source link

‘ಕರುಪ್ಪು’ ಸೂಪರ್ ಹಿಟ್ ಆದರೆ ಹಣ ಬಂದಿಲ್ಲವೆಂದ ಫೈನ್ಯಾನ್ಶಿಯರ್, ನಿರ್ದೇಶಕನ ಮೇಲೆ ಆಕ್ರೋಶ – Kannada News | Financier said Karuppu movie became super hit but he did not get money

ತಮಿಳು ಸ್ಟಾರ್ ನಟ ಸೂರ್ಯ (Suriya) ಅವರ ಇತ್ತೀಚಿನ ಚಿತ್ರ ‘ಕರುಪ್ಪು’ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 350 ಕೋಟಿಗೂ ಹೆಚ್ಚು ಮೊತ್ತ ಕಲೆ ಹಾಕಿದೆ ಎನ್ನಲಾಗುತ್ತಿದೆ. ನಿರ್ದೇಶಕ ಆರ್ ಬಾಲಾಜಿಯಂತೂ ಯಶಸ್ಸಿನ ಖುಷಿಯನ್ನು ಅನುಭವಿಸುತ್ತಿದ್ದಾರೆ. ನಟ ಸೂರ್ಯ ಅವರು, ಬಾಲಾಜಿಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ಸಹ ನೀಡಿದ್ದಾರೆ. ಸಿನಿಮಾ ಹಿಟ್ ಎಂದು ನಿರ್ದೇಶಕ, ನಟ ಹೇಳುತ್ತಿರುವಾಗಲೇ ಆ ಸಿನಿಮಾಕ್ಕೆ ಫೈನ್ಯಾನ್ಸ್ ಮಾಡಿದ ವ್ಯಕ್ತಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಹಾಕಿದ ಬಂಡವಾಳದ 50% ಮಾತ್ರವೆ ಮರಳಿ ಬಂದಿದೆ ಎಂದಿದ್ದಾರೆ. ಆ ಮೂಲಕ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಸುದ್ದಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ.

ತಮಿಳು ಚಿತ್ರರಂಗದ ಹಿರಿಯ ಫೈನಾನ್ಸಿಯರ್ ಮತ್ತು ವಿತರಕ ತಿರುಪುರ್ ಸುಬ್ರಮಣಿಯಂ ಸಂದರ್ಶನವೊಂದರಲ್ಲಿ ಮಾತನಾಡಿ, ತಾವು ಸಹ ‘ಕರಪ್ಪು’ ಸಿನಿಮಾದ ಮೇಲೆ ಹೂಡಿಕೆ ಮಾಡಿದ್ದು, ತಾವು ಹೂಡಿಕೆ ಮಾಡಿದ ಹಣದಲ್ಲಿ ಕೇವಲ ಅರ್ಧದಷ್ಟು ಮಾತ್ರ ವಾಪಸ್ ಬಂದಿದೆ ಎಂದಿದ್ದಾರೆ. ಅಲ್ಲದೆ, ಸಂದರ್ಶನದಲ್ಲಿ ಸಿನಿಮಾದ ನಿರ್ದೇಶಕ ಆರ್​​ಜೆ ಬಾಲಾಜಿ ವಿರುದ್ಧ ಆಕ್ರೋಶ ಮತ್ತು ಅಸಮಾಧಾನವನ್ನು ಸಹ ಹೊರ ಹಾಕಿದ್ದಾರೆ.

‘ಕರುಪ್ಪು’ ಸಿನಿಮಾ ಬಿಡುಗಡೆಗೆ ಅಡೆ-ತಡೆ ಎದುರಾಗಿತ್ತು. ನಿಗದಿತ ದಿನಾಂಕದಂದು ಸಿನಿಮಾ ಬಿಡುಗಡೆ ಆಗಲಿಲ್ಲ. ಆ ದಿನ ಕಾರಲ್ಲಿ ಕೂತು ವಿಡಿಯೋ ಮಾಡಿದ್ದ ನಿರ್ದೇಶಕ ಬಾಲಾಜಿ, ಕಣ್ಣೀರು ಹಾಕಿದ್ದರು. ಈ ಬಗ್ಗೆ ತಿರುಪುರ್ ಸುಬ್ರಹ್ಮಣಿಯಂ ಅವರು ಟೀಕೆ ಮಾಡಿದ್ದು, ಶ್ರೀ ಶಕ್ತಿ ಸಿನೆಮಾಸ್ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿರುವ ಅವರು, ‘ಬಿಡುಗಡೆಗೆ ಎರಡು ದಿನಗಳ ಮೊದಲು ನಾವು ಎದುರಿಸಿದ ಸಮಸ್ಯೆಗಳ ಬಗ್ಗೆ ನಮಗೆ ತಿಳಿದಿದೆ. ನಿರ್ದೇಶಕರು ನಮ್ಮೊಂದಿಗೆ ಬಂದು ಆ ಸಮಸ್ಯೆಗಳನ್ನು ಎದುರಿಸಬೇಕಿತ್ತು, ಆದರೆ ಅವರು ಅದಕ್ಕೆ ಬದಲಾಗಿ ಕಾರಿನಲ್ಲಿ ಕುಳಿತು ಅಳುತ್ತಿರುವ ವಿಡಿಯೋ ಮಾಡಿಕೊಂಡರು. ಈಗ ಸಿನಿಮಾ ಹಿಟ್ ಆಗಿದೆ ಎಂದು ನಿರ್ದೇಶಕರು ಬೀಗುತ್ತಿದ್ದಾರೆ. ಆದರೆ, ಸಿನಿಮಾ ತೆರೆ ಕಾಣಲು ನಟ ಸೂರ್ಯ ಮಾತ್ರ ಮುಂದೆ ಬಂದು ಸಹಾಯ ಮಾಡಿದರು. ಸೂರ್ಯ ಅವರನ್ನು ಬಿಟ್ಟರೆ, ಸಮಸ್ಯೆಯನ್ನು ಬಗೆಹರಿಸಲು ಬೇರೆ ಯಾರೂ ಮುಂದೆ ಬರಲಿಲ್ಲ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ನ ಸೀಕ್ವೆಲ್ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕತ್ರಿನಾ ಕೈಫ್ ರೆಡಿ?

‘ಈ ಚಿತ್ರವು 2025ರ ದೀಪಾವಳಿಗೆ ಬಿಡುಗಡೆಯಾಗಬೇಕಿತ್ತು, ಆದರೆ ಎಂಟು ತಿಂಗಳ ನಂತರ ಬಿಡುಗಡೆಯಾಯಿತು. ₹30-40 ಕೋಟಿ ಬಜೆಟ್ ಎಂದು ಹೇಳುತ್ತಾರೆ, ಅದು 45 ಕೋಟಿಯವರೆಗೆ ಹೋದರೆ ಪರವಾಗಿಲ್ಲ, ಆದರೆ ಅದು 80 ಕೋಟಿಗೆ ತಲುಪಿದರೆ ಏನು ಮಾಡಲು ಸಾಧ್ಯ? ಇದು ನಿರ್ಮಾಪಕರು ಮತ್ತು ಫೈನಾನ್ಸಿಯರ್‌ಗಳನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಈ ಚಿತ್ರದ ಬಿಡುಗಡೆಗಾಗಿ ನಾನು ನನ್ನ ಸ್ವಂತ ಹಣವನ್ನು ಹೂಡಿಕೆ ಮಾಡಿದ್ದೆ. ಅದರಲ್ಲಿ ನನಗೆ ಸಿಕ್ಕಿದ್ದು ಕೇವಲ 50 ಪ್ರತಿಶತ ಮಾತ್ರ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕರುಪ್ಪು’ ಚಿತ್ರವು ಮೂಲತಃ ಮೇ 14 ರಂದು ಬಿಡುಗಡೆಯಾಗಬೇಕಿತ್ತು ಮತ್ತು ಮುಖ್ಯಮಂತ್ರಿ ವಿಜಯ್ ಅವರು ಬೆಳಿಗ್ಗೆ 9 ಗಂಟೆಯ ಪ್ರದರ್ಶನಕ್ಕೆ ಅನುಮೋದನೆ ನೀಡಿದ್ದರು. ಆದರೆ, ಕೊನೆಯ ನಿಮಿಷದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು. ರಾಜ್ಯದಾದ್ಯಂತ ಚಿತ್ರಮಂದಿರಗಳು “ಅನಿವಾರ್ಯ ಕಾರಣಗಳು” ಮತ್ತು “ಆರ್ಥಿಕ ಕಾರಣಗಳಿಂದಾಗಿ” ಪ್ರದರ್ಶನಗಳನ್ನು ರದ್ದುಗೊಳಿಸುತ್ತಿರುವುದಾಗಿ ಘೋಷಿಸಿದ್ದವು. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆಯು ನೀಡಬೇಕಿದ್ದ 10 ಕೋಟಿ ಬಾಕಿ ಪಾವತಿಯಾಗದಿದ್ದೇ ಈ ವಿಳಂಬಕ್ಕೆ ಕಾರಣವಾಗಿತ್ತು. ತಮಿಳು ಚಿತ್ರರಂಗದಲ್ಲಿ, ಬಾಕಿ ಹಣ ಪಾವತಿಯಾಗುವವರೆಗೆ ವಿತರಕರು ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅಗತ್ಯವಾದ ಡಿಜಿಟಲ್ ಕೀಯನ್ನು (KDM) ತಡೆಹಿಡಿಯುವುದು ಸಾಮಾನ್ಯ. ಅಂತಿಮವಾಗಿ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯಿತು. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ ಎನ್ನಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್

Source link

ಕೊಲ್ಲೂರು ಮೂಕಾಂಬಿಕೆಗೆ ಸಿಎಂ ವಿಜಯ್, ವಿಶೇಷ ಪೂಜೆ: ಕ್ಷೇತ್ರದ ಮಹಿಮೆ, ದೇವಿ ಶಕ್ತಿ ಬಗ್ಗೆ ವಿವರಿಸಿದ ಆಧ್ಯಾತ್ಮಕ ಚಿಂತಕ

ಉಡುಪಿ, (ಜೂನ್​​ 12): ತಮಿಳುನಾಡು ಸಿಎಂ ಆದ ಬಳಿಕ ವಿಜಯ್ ಅವರು ಮೊದಲ ಬಾರಿಗೆ​​ ಇಂದು (ಜೂನ್ 12) ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿಗೆ ಭೇಟಿ ನೀಡಿದ್ದು, ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗರು ಪೂಜೆಗೆ ಸಂಕಲ್ಪ ನೆರವೇರಿಸಿದ್ದು, ದೇವಸ್ಥಾನದ ಅರ್ಚಕರು ಸಿಎಂ ವಿಜಯ್ ಕೈಗೆ ರಕ್ಷಾ ದಾರ ಕಟ್ಟಿದರು. ಇನ್ನು 30 ನಿಮಿಷಗಳ ಕಾಲ ದೇವಸ್ಥಾನದಲ್ಲಿದ್ದ ವಿಜಯ್, ಅವರು ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿ ತೆರಳಿದ್ದಾರೆ. ಇನ್ನು ವಿಜಯ್ ಅವರ ಪೂಜೆ ಬಗ್ಗೆ ಆಧ್ಯಾತ್ಮಕ ಚಿಂತಕ ಪ್ರಕಾಶ್ ಅಮ್ಮಣ್ಣಾಯ ಟಿವಿ9 ಜೊತೆ ಮಾತನಾಡಿದ್ದು, ವಿಜಯ್ ಅವರ ಪೂಜೆ ಹಾಗೂ ಮೂಕಾಂಬಿಕಾ ದೇವಿಯ ವಿಶೇಷತೆಯನ್ನು ವಿವರಿಸಿದ್ದಾರೆ.

ಇದನ್ನೂ ನೋಡಿ: ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ತಮಿಳುನಾಡು ಸಿಎಂ ವಿಜಯ್​​

Source link

ಮುಂದಿನ 7 ದಿನ ರಾಜ್ಯಾದ್ಯಂತ ವರುಣನ ಆರ್ಭಟ: ಕರಾವಳಿಯಲ್ಲಿ ಜೂನ್ 15ರವರೆಗೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – Kannada News | Coastal Karnataka Orange Alert: Monsoon 2026 Brings Heavy Rains and Storms

ಬೆಂಗಳೂರು, ಜೂ.12 : ನೈಋತ್ಯ ಮುಂಗಾರು (Monsoon 2026) ಕರ್ನಾಟಕದಾದ್ಯಂತ ಚುರುಕುಗೊಂಡಿದ್ದು, ಮುಂದಿನ 7 ದಿನಗಳ ಕಾಲ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ರಾಜ್ಯದ ಹಲವು ಭಾಗಗಳಿಗೆ ಮಹತ್ವದ ಮುನ್ನೆಚ್ಚರಿಕೆಗಳನ್ನು ರವಾನಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಜೂನ್ 12 ರಂದು (ಇಂದು) ಕರಾವಳಿಯ ಕೆಲವೆಡೆ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತದನಂತರ ಜೂನ್ 13 ರಿಂದ ಜೂನ್ 15 ರವರೆಗೆ ಕರಾವಳಿಯಾದ್ಯಂತ ಸತತವಾಗಿ ಭಾರಿ ಮಳೆಯಾಗಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಕರಾವಳಿ ತೀರದ ಜನರಿಗೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡುಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಅಲ್ಲಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಬಿರುಗಾಳಿ (ಗಂಟೆಗೆ 30-40 ಕಿ.ಮೀ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ದಕ್ಷಿಣ ಒಳನಾಡು ಮೈಸೂರು, ಮಂಡ್ಯ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

ರಾಜಧಾನಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಬೆಳಗ್ಗಿನ ಅವಧಿಯಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಹವಾಮಾನ ಇಲಾಖೆಯು ಇಡೀ ರಾಜ್ಯಕ್ಕೆ ಒಟ್ಟಾರೆಯಾಗಿ ಹಳದಿ ಅಲರ್ಟ್ (Yellow Alert) ಘೋಷಿಸಿದ್ದು, ಸಾರ್ವಜನಿಕರು ಸಿಡಿಲು ಮತ್ತು ಬಿರುಗಾಳಿಯ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದೆ.

ಇದನ್ನೂ ಓದಿ; ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಕರಾವಳಿ ಕರ್ನಾಟಕ- ಆರೆಂಜ್ ಅಲರ್ಟ್

ಜೂನ್ 12 (ಇಂದು): ಅತಿ ಭಾರಿ ಮಳೆ ಜೊತೆಗೆ ಬಲವಾದ ಗಾಳಿ ಬೀಸಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜೂನ್ 13 ರಿಂದ ಜೂನ್ 15: ಮೂರು ದಿನಗಳ ಕಾಲ ಸತತವಾಗಿ ಭಾರಿ ಮಳೆ ಹಾಗೂ ಬಲವಾದ ಗಾಳಿ ಇರಲಿದ್ದು, ಹಳದಿ ಅಲರ್ಟ್ ಇರಲಿದೆ.

ಜೂನ್ 16 ರಿಂದ ಜೂನ್ 18: ಯಾವುದೇ ಮಳೆ ಎಚ್ಚರಿಕೆ ಇರುವುದಿಲ್ಲ.

ಉತ್ತರ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್

ಜೂನ್ 12 ಮತ್ತು ಜೂನ್ 13: ಮುಂದಿನ ಎರಡು ದಿನಗಳ ಕಾಲ ಕೆಲವು ಕಡೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು, ಸಿಡಿಲು ಸಹಿತ ಭೀಕರ ಬಿರುಗಾಳಿ ಬೀಸಲಿದೆ.

ಜೂನ್ 14 ಮತ್ತು ಜೂನ್ 15: ಮಳೆಯ ಪ್ರಮಾಣ ಸ್ವಲ್ಪ ತಗ್ಗಲಿದೆಯಾದರೂ, ಗುಡುಗು, ಸಿಡಿಲು ಮತ್ತು ಗಾಳಿಯ ಆರ್ಭಟ ಮುಂದುವರಿಯಲಿದೆ.

ಜೂನ್ 16 ರಿಂದ ಜೂನ್ 18: ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಎಚ್ಚರಿಕೆ ಇರುವುದಿಲ್ಲ.

ದಕ್ಷಿಣ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್

ಜೂನ್ 12 ಮತ್ತು ಜೂನ್ 13: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಲವಾದ ಮೇಲ್ಮೈ ಗಾಳಿ ಬೀಸಲಿದೆ.

ಜೂನ್ 14 ಮತ್ತು ಜೂನ್ 15: ಭಾರಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಜೋರಾದ ಗಾಳಿ ಬೀಸುವಿಕೆ ಮುಂದುವರಿಯಲಿದೆ.

ಜೂನ್ 16 ರಿಂದ ಜೂನ್ 18: ಮಳೆ ಮತ್ತು ಗಾಳಿಯ ತೀವ್ರತೆ ಸಂಪೂರ್ಣ ಕಮ್ಮಿಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ಇಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಹುಟ್ಟುಹಬ್ಬ: ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

ನಟ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಅವರ ಜನ್ಮದಿನ ಹತ್ತಿರವಿದೆ. ಜೂನ್ 22 ರಂದು ವಿಜಯ್ ಹುಟ್ಟುಹಬ್ಬ ಇದ್ದು, ವಿಜಯ್ ಅವರ ಅಭಿಮಾನಿಗಳ ಪಾಲಿಗೆ ಈ ಹುಟ್ಟುಹಬ್ಬ ತುಸು ಭಿನ್ನ ಆಗಿರಲಿದೆ. ಈ ಹುಟ್ಟುಹಬ್ಬಕ್ಕೆ ವಿಜಯ್ ನಟನಾಗಿಲ್ಲ ಬದಲಿಗೆ ರಾಜ್ಯದ ಸಿಎಂ ಆಗಿದ್ದಾರೆ. ಆದರೆ ವಿಜಯ್ ಅವರ ಅಭಿಮಾನಿಗಳಿಗೆ, ವಿಜಯ್ ಹುಟ್ಟುಹಬ್ಬದಂದು ಸಂಭ್ರಮಿಸಲು ಕಾರಣವೊಂದು ದೊರೆತಿದೆ. ವಿಜಯ್ ಅವರ ಹಳೆಯ ಸೂಪರ್ ಹಿಟ್ ಸಿನಿಮಾ ಒಂದು ಅವರ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ.

ಜೂನ್ 22 ರಂದು ವಿಜಯ್ ಅವರ ಜನ್ಮದಿನವಿದ್ದು, ಆ ವಿಶೇಷ ದಿನವನ್ನು ಆಚರಿಸುವ ಸಲುವಾಗಿ ವಿಜಯ್ ಅವರ ಸೂಪರ್ ಹಿಟ್ ಸಿನಿಮಾ ‘ಮರ್ಸೆಲ್’ ಅನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವು ಚೆನ್ನೈ ಮತ್ತು ಚೆಂಗಲ್ಪಟ್ಟುವಿನ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ. ತಮಿಳುನಾಡಿನಾದ್ಯಂತ ಬಿಡುಗಡೆ ಆಗುತ್ತಿಲ್ಲ. ಆದರೂ ಸಹ ವಿಜಯ್ ಅವರ ಅಭಿಮಾನಿಗಳು ಬೇರೆ ಬೇರೆ ಕಡೆಗಳಿಂದ ಚೆನ್ನೈಗೆ ಆಗಮಿಸಿ ಸಿನಿಮಾ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಅಟ್ಲಿ ನಿರ್ದೇಶನದ ‘ಮೆರ್ಸಲ್’ ಚಿತ್ರದಲ್ಲಿ ವಿಜಯ್ ತಂದೆ ಮತ್ತು ಇಬ್ಬರು ಮಕ್ಕಳ ಪಾತ್ರಗಳಲ್ಲಿ ತ್ರಿಪಾತ್ರಾಭಿನಯ ಮಾಡಿದ್ದರು. ಈ ಚಿತ್ರವು ರೋಗಿಗಳಿಂದ ಕಡಿಮೆ ಶುಲ್ಕ ಪಡೆಯುವ ಸಹಾನುಭೂತಿಯುಳ್ಳ ವೈದ್ಯನ ಕಥೆಯನ್ನು ಒಳಗೊಂಡಿದೆ, ಜೊತೆಗೆ ಗುಪ್ತವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾರೆ. ಆದರೆ ವಿಜಯ್ ಬಂಧನದ ಬಳಿಕ ಅವರ ಹಿಂದಿನ ಕತೆಗಳು ಹೊರಗೆ ಬರುತ್ತವೆ. ಒಟ್ಟಾರೆ ಸಖತ್ ಮಾಸ್ ಆದ ಸಿನಿಮಾ ‘ಮರ್ಸೆಲ್’ ಆಗಿತ್ತು. 2017 ರಲ್ಲಿ ಈ ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ವಿವಾದವೂ ಆಗಿತ್ತು. ಈಗ ಮತ್ತೆ ಅದೇ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಕೊಲ್ಲೂರಿಗೆ ಸಿಎಂ ವಿಜಯ್ ಭೇಟಿ ಹಿನ್ನೆಲೆ ಭಕ್ತರ ದರ್ಶನಕ್ಕೆ 1 ಗಂಟೆ ಬ್ರೇಕ್!

‘ಮರ್ಸೆಲ್’ ಸಿನಿಮಾ ಬಿಡುಗಡೆ ಆದಾಗ ಬಿಜೆಪಿಯು ಸಿನಿಮಾದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿಯನ್ನು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಅಂಶಗಳು ಸಿನಿಮಾನಲ್ಲಿವೆ ಎಂದಿದ್ದು, ಸಿನಿಮಾದ ನಿಷೇಧಕ್ಕೆ ಒತ್ತಾಯಿಸಲಾಗಿತ್ತು. ಆ ಸಮಯದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರು, ವಿಜಯ್ ಅವರು ಕ್ರಿಶ್ಚಿಯನ್ ಆಗಿದ್ದು, ಇದೇ ಕಾರಣಕ್ಕೆ ಅವರು ಮೋದಿಯನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಮರ್ಸಲ್ ಸಿನಿಮಾನಲ್ಲಿ ಕಾಜಲ್ ಅಗರ್ಲಾವ್, ಎಸ್​​ಜೆ ಸೂರ್ಯ, ಸಮಂತಾ ಋತ್ ಪ್ರಭು, ನಿತ್ಯಾ ಮೆನನ್, ವಡಿವೇಲು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಅನ್ನು ಅಟ್ಲಿ ನಿರ್ದೇಶನ ಮಾಡಿದ್ದು, ತೆಂಡಾಲ್ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಇದೀಗ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ‘ಮರ್ಸೆಲ್’ ಮರು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Bidadi Township: ವಿವಾದದ ನಡುವೆಯೂ ಬಿಡದಿ ಟೌನ್​ ಶಿಪ್​​​ಗೆ​ ಅಂತಿಮ ಅಧಿಸೂಚನೆ ಪ್ರಕಟ, ರೈತರ ಮುಂದೆ 2 ಆಯ್ಕೆ – Kannada News | Karnataka government notifies Land acquisition for bidadi township, here Is More Details

ಬೆಂಗಳೂರು, (ಜೂನ್ 12): ರೈತರ (Farmers) ವಿರೋಧದ ನಡುವೆಯೂ ರಾಜ್ಯ ಸರ್ಕಾರ (Karnataka Governmnet) ಬಿಡದಿ ಟೌನ್ ಶಿಪ್‌ಗೆ (Bidadi Township) ಅಂತಿಮ ಅಧಿಸೂಚನೆ ಪ್ರಕಟಿಸಿದೆ. ರಾಜಕೀಯ ತಿಕ್ಕಾಟ, ಪ್ರತಿಭಟನೆಗಳ ನಡುವೆಯೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 519 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ. ಮೊದಲ ಹಂತದ ಭೂ ಸ್ವಾಧೀನ ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿದ್ದು, ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿ ರೂಪಾಯಿವರೆಗೂ ದರ ನಿಗದಿ ಮಾಡಲಾಗಿದೆ.ಅಥವಾ ಶೇ.50ರಷ್ಟು ಅಭಿವೃದ್ಧಿ ಪಡಿಸಿರುವ ಭೂಮಿ ನೀಡಲು ಆದೇಶಿಸಲಾಗಿದೆ.

ಮುಖ್ಯಾಂಶಗಳು

  • ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರಕ್ಕೆ ಅಧಿಸೂಚನೆ
  • ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕು ವ್ಯಾಪ್ತಿಯ ಬಿಡದಿ
  • 3 ಗ್ರಾಮಗಳ ಒಟ್ಟು 519 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ
  • ಕೆಂಪಯ್ಯನಪಾಳ್ಯದ 384 ಎಕರೆ 22 ಗುಂಟೆ, ಮಂಡಲಹಳ್ಳಿಯ 71 ಎಕರೆ 13 ಗುಂಟೆ, ವಡೇರಹಳ್ಳಿಯ 63 ಎಕರೆ 10 ಗುಂಟೆ ಭೂಸ್ವಾಧೀನ.
  • ರಾಜಕೀಯ ತಿಕ್ಕಾಟ, ಪ್ರತಿಭಟನೆಗಳ ನಡುವೆ ಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ
  • ಪ್ರತಿ ಎಕರೆಗೆ 2.07 ಕೋಟಿಯಿಂದ 2.50 ಕೋಟಿವರೆಗೂ ದರ ನಿಗದಿ

3 ಗ್ರಾಮಗಳ ಒಟ್ಟು 519 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು,ಕೆಂಪಯ್ಯನಪಾಳ್ಯದ 384 ಎಕರೆ 22 ಗುಂಟೆ, ಮಂಡಲಹಳ್ಳಿಯ 71 ಎಕರೆ 13 ಗುಂಟೆ ಹಾಗೂ ವಡೇರಹಳ್ಳಿಯ 63 ಎಕರೆ 10 ಗುಂಟೆ ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ತನ್ನ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: ಸ್ವಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ಕೊಟ್ಟ ಸಿಎಂ ಡಿಕೆ ಶಿವಕುಮಾರ್, ಜತೆಗೊಂದು ಕಿವಿಮಾತು

ರೈತರ ಮುಂದೆ ಎರಡು ಆಯ್ಕೆ ಇಟ್ಟ ಸರ್ಕಾರ

ಬಿಡದಿ ಟೌನ್​ ಶಿಪ್​​​ಗಾಗಿ ಭೂಸ್ವಾಧೀನಕ್ಕೆ ಪರಿಹಾರವಾಗಿ ಪ್ರತಿ ಎಕರೆ ಭೂಮಿಗೆ ಕನಿಷ್ಠ 2.07 ಕೋಟಿ ರಿಂದ 2.5 ಕೋಟಿ ರೂಪಾಯಿ ವರೆಗೆ ನೀಡುವಂತೆ ಪ್ರಸ್ತಾಪಿಸಲಾಗಿದೆ. ಮತ್ತೊಂದು ಆಯ್ಕೆಯಾಗಿ, ಶೇ.50 ರಷ್ಟು ಅಭಿವೃದ್ಧಿಪಡಿಸಿದಭೂಮಿಯನ್ನು ರೈತರಿಗೆ ಹಿಂತಿರುಗಿಸಿ ನೀಡುವ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ. ಅಂದರೆ, ರೈತರು ಹಣ ಅಥವಾ ಅಭಿವೃದ್ಧಿಪಡಿಸಿದ ಭೂಮಿ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು. ಆದ್ರೆ, ರೈತರ ನಡೆ ಏನು ಎನ್ನುವುದು ಕಾದುನೋಡಬೇಕಿದೆ.

ಒಟ್ಟು 754 ರೈತರ ಭೂಮಿ ಸ್ವಾಧೀನಕ್ಕೆ ನರ್ಧಾರ

ಒಟ್ಟು 754 ರೈತರ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಈ ರೈತರಿಗೆ ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಲು ಸೂಚಿಸಲಾಗಿದೆ. ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿರೂ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಂದರೆ, ಇದಕ್ಕಿಂತ ಕಡಿಮೆ ದರಕ್ಕೆ ಭೂಮಿ ತೆಗೆದುಕೊಳ್ಳಬಾರದು ಎಂಬ ಭರವಸೆಯನ್ನು ಸರ್ಕಾರ ನೀಡಲು ಪ್ರಯತ್ನಿಸಿದೆ.

ರೈತರ ವಿರೋಧ, ಸ್ಥಳೀಯರ ಅಸಮಾಧಾನ ಇದ್ದರೂ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರದ ನಿಲುವು ಪ್ರಕಾರ, ಟೌನ್ ಶಿಪ್ ಯೋಜನೆ ಮೂಲಕ ಪ್ರದೇಶದಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗಾವಕಾಶಗಳು ಹೆಚ್ಚುವುವು ಎಂದು ಹೇಳಲಾಗುತ್ತಿದೆ. ಆದರೆ ರೈತರಿಗೆ ತಮ್ಮ ಭೂಮಿ, ಜೀವನ, ಭವಿಷ್ಯ ಬಗ್ಗೆ ಆತಂಕ ಇದೆ.

ಕುಮಾರಸ್ವಾಮಿ ಹೇಳಿದ್ದೇನು?

ಇನ್ನು ಈ ಬಗ್ಗೆ ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ, ಸರ್ಕಾರ ಫೈನಲ್ ನೋಟಿಫಿಕೇಶನ್ ಮಾಡಿದೆ. ಆದ್ರೆ, ಕಳೆದ 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆ ಜಾಗದಲ್ಲಿ ಯಶಸ್ವಿಯಾಗಿ ಕೃಷಿ ಕೆಲಸ ನಡೆಯುತ್ತಿದೆ.ಇವತ್ತು ಅವರನ್ನ ಒಕ್ಕಲಿಬ್ಬಿಸುವ ಕೆಲಸವನ್ನು ಸರ್ಕಾರ ಅಲ್ಲಿ ಪ್ರತಿಭಟನೆ ಮಾಡ್ಲಿಕ್ಕೆ ಹೊರಟಿರುವ ರೈತರ ಮೇಲೆ ಎಫ್ಐಆರ್ ಹಾಕುತ್ತಾರೆ. ನಾನು ಈಗಿನ ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ಯಾವುದು ಎಫ್​​​ಐಆರ್ ಹಾಕಿಲ್ಲ ಎಂದು ಈಗಿನ ಗೃಹ ಸಚಿವರು ಹೇಳುತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ನಡೆಸುತ್ತಿದೆ. ಇದರ ಜೊತೆಗೆ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಜನಪ್ರತಿನಿಧಿಗಳು ಕೂಡ ಸೇರ್ಕೊಂಡಿದ್ದಾರೆ. ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಿದರೂ ಅದಕ್ಕೆ ರೈತರ ಒಪ್ಪಿಗೆ ಬೇಕು ಎಂದರು.

ರೈತರ ಭಾವನೆಗೆ ಬೆಲೆಕೊಟ್ಟು ಯೋಜನೆ ಸ್ಥಗಿತ ಮಾಡಿದ್ದೆ

ಯಾವುದೇ ಮೀಟಿಂಗ್ ಸಹ ಮಾಡಿಲ್ಲ. ಶೇ. 80% ಪರ್ಸೆಂಟ್ ರೈತರ ವಿರೋಧ ಇದೆ.ಸರ್ಕಾರ ನಾವು ಮಾಡಿದ್ದೇ ತೀರ್ಮಾನ ಅಂತ ದಬ್ಬಾಳಿಕೆಯಲ್ಲಿ ಹೊರಟಿದ್ದಾರೆ. ಹಲವು ಪ್ರದೇಶಗಳಲ್ಲಿ ಡ್ರೈ ಲ್ಯಾಂಡ್ ಏರಿಯಾ ಇದೆ. ಅದನ್ನ ಐಡೆಂಟಿಫೈ ಮಾಡಿ ಇವತ್ತಿನ ಸಮಸ್ಯೆಗೆ ಜಾಗಗಳನ್ನು ಹುಡುಕಿ. ಈ ಹಿಂದೆ 2006ರಲ್ಲಿ ಐದು ಟೌನ್ ಶಿಪ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೆ.ಅದಕ್ಕೆ ರೈತರ ವಿರೋಧ ಬಂದಿತ್ತು. ಬೆಂಗಳೂರಲ್ಲಿ ಜನ ಸಂದಣಿ ಜಾಸ್ತಿಯಾಗಿದೆ. ಅದಕ್ಕಾಗಿ ಸುತ್ತ ಮೂವತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಟೌನ್ ಶಿಪ್ ಪ್ಲಾನಿಂಗ್ ಮಾಡಿದ್ದೆ. ಕಾಂಗ್ರೆಸ್ ಅವರು ಇದಕ್ಕೆ ವಿರೋಧ ಮಾಡಿದ್ರು. ಅವರ ವಿರೋಧ ಹಾಗೂ ರೈತರ ಭಾವನೆಗೆ ಬೆಲೆಕೊಟ್ಟು ಯೋಜನೆಯನ್ನು ಸ್ಥಗಿತ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ಈಗ ಬೆಂಗಳೂರು ದಕ್ಷಿಣ ಅಂತ ಮಾಡಿ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈಗ ಅಲ್ಲಿನ ರೈತರಿಗೆ ಇರುವಂತದ್ದು ಕಾನೂನು ಹೋರಾಟ ಮಾಡಬೇಕು ಅಂತ. ಪ್ರಿಯಾಂಕ ಖರ್ಗೆ ಅವರು ಸಹ ಹೇಳಿದ್ದಾರೆ ಕಾನೂನು ಹೋರಾಟ ಮಾಡಲಿ ಎಂದು. ಇದರಿಂದ ರೈತರ ಬಗ್ಗೆ ಎಷ್ಟು ಗೌರವ ಇದೆ ಎಂದು ಗೊತ್ತಾಗುತ್ತೆ. ದೊಡ್ಡಬಳ್ಳಾಪುರ ಭಾಗದಲ್ಲಿ ಕೂಡ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಕಿಡಿಕಾರಿದರು.

Published On – 4:00 pm, Fri, 12 June 26

Source link

ಕೊಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಅತಿದೊಡ್ಡ ಬೆಂಕಿ ಅವಘಡ; 4,000 ಇವಿಎಂಗಳು ಸುಟ್ಟು ಕರಕಲು – Kannada News | 4000 EVMs destroyed in Kolkata government building massive fire

ಕೊಲ್ಕತ್ತಾ, ಜೂನ್ 12: ಪಶ್ಚಿಮ ಬಂಗಾಳದಲ್ಲಿ 4,000 ಇವಿಎಂ (EVM) ಯಂತ್ರಗಳು ನಾಶವಾಗಿವೆ. ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ ಎಂದು ಪಶ್ಚಿಮ ಬಂಗಾಳದ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕೊಲ್ಕತ್ತಾದ ಅಲಿಪೋರ್ ಪ್ರದೇಶದಲ್ಲಿರುವ 9 ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಈ ಬೃಹತ್ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಇತರ ಇಲಾಖೆಗಳ ಕಚೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು.

“ಬೆಂಕಿಯ ಜ್ವಾಲೆಗೆ ಸುಮಾರು 4,000 ಇವಿಎಂ ಯಂತ್ರಗಳು ನಾಶವಾಗಿವೆ. ಈ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 10 ಮತಕ್ಷೇತ್ರಗಳಲ್ಲಿ ಈ ಇವಿಎಂಗಳನ್ನು ಬಳಸಲಾಗಿತ್ತು,” ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ರಾಜ್ಯ ಸಚಿವರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಕೌಶಿಕ್ ಚೌಧರಿ, “ಇದು ಸಾಮಾನ್ಯ ಅಗ್ನಿ ಆಕಸ್ಮಿಕದಂತೆ ಕಂಡುಬರುತ್ತಿಲ್ಲ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಕಟ್ಟಡದ ಮೇಲಿನ ಅಂತಸ್ತುಗಳಿಗೆ ಬೆಂಕಿ ಹೇಗೆ ತಲುಪಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ಮೊದಲಿಗೆ ಕಟ್ಟಡದ ಎರಡನೇ ಮತ್ತು ಮೂರನೇ ಅಂತಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. “4, 5 ಮತ್ತು 6ನೇ ಅಂತಸ್ತುಗಳಿಗೆ ಯಾವುದೇ ಹಾನಿ ಮಾಡದ ಬೆಂಕಿ, ನೇರವಾಗಿ 7 ಮತ್ತು 8ನೇ ಅಂತಸ್ತುಗಳಿಗೆ ಹೇಗೆ ಹರಡಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಸುಮಾರು 24 ಗಂಟೆಗಳ ನಂತರವೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.

ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ದಕ್ಷಿಣ 24 ಪರಗಣ ಜಿಲ್ಲಾಡಳಿತವು ಅಲಿಪೋರ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದೆ. ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಈ ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ನೋಂದಾಯಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರ ಯಾವುದೇ ಕಾರಣದಿಂದ ಬೆಂಕಿ ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಈ ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಹಲವಾರು ಅಂತಸ್ತುಗಳಿಗೆ ಬೆಂಕಿ ಹರಡಿದ ಜಾಲದ ಶೈಲಿಯನ್ನು ತನಿಖಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ, ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಭದ್ರತೆ ಒದಗಿಸಲಾಗಿದೆ. ಪೊಲೀಸರು ಕಟ್ಟಡದ ಸುತ್ತಮುತ್ತ ಕಣ್ಗಾವಲು ಹೆಚ್ಚಿಸಿದ್ದಾರೆ. ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಯ ಮೂಲವನ್ನು ಪತ್ತೆಹಚ್ಚಲು ಮಾದರಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಈ ಬೆಂಕಿ ದುರಂತ ಕೇವಲ ಆಕಸ್ಮಿಕವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯವೇ ಎಂಬುದನ್ನು ನಿರ್ಧರಿಸಲು ಫೋರೆನ್ಸಿಕ್ ವರದಿ ಅತ್ಯಂತ ಪ್ರಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಪಿತೂರಿಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರೆ, ಬಿಜೆಪಿ ನಾಯಕ ರಾಕೇಶ್ ಸಿಂಗ್ ಇದು ಪೂರ್ವಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ – Kannada News | Father surprises daughter by giving her entry into his office

ಅಪ್ಪ ಮಗಳ (father- daughter) ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ ಎಲ್ಲವೂ ಆಗಿರುತ್ತಾನೆ. ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಮಗಳಿಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ತಂದೆಯೊಬ್ಬರು ಮಗಳಿಗೆ ಸರ್ಪ್ರೈಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗಳು ಕೆಲಸ ಮಾಡುವ ಸ್ಥಳಕ್ಕೆ ಹೂಗುಚ್ಛ ಹಿಡಿದುಕೊಂಡು ಬಂದ ತಂದೆಯನ್ನು ನೋಡಿ ಮಗಳು ಆಶ್ಚರ್ಯ ಚಕಿತಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕವಿಯಾ (kaviyaa.dr_) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ತಂದೆಯೊಬ್ಬರು ಸರ್ಪ್ರೈಸ್ ನೀಡಿರುವುದನ್ನು ನೀವು ನೋಡಬಹುದು. ನಾನು ಒಂದು ವಾರದ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡೆ. ನನ್ನ ತಂದೆ ಇಂದು ನನ್ನ ಕಚೇರಿಗೆ ನನ್ನನ್ನು ಭೇಟಿ ಮಾಡಲು ಬಂದರು ಎನ್ನುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ.

ವೈರಲ್ ವಿಡಿಯೋ ಇಲ್ಲಿದೆ

ಕವಿಯಾ ತನ್ನ ಆಫೀಸಿನ ಒಳಗೆ ಇದ್ದಾಗ ತಂದೆ ಕಿಟಕಿಯಿಂದ ಹೊರಗೆ ನೋಡಲು ಹೇಳಿದ್ದಾರೆ. ಆಕೆ ಕೆಳಗೆ ನೋಡಿದಾಗ, ತನ್ನ ಅಪ್ಪನು ಕಟ್ಟಡದ ಹೊರಗೆ ಕೈಯಲ್ಲಿ ಹೂಗುಚ್ಛದೊಂದಿಗೆ ನಿಂತಿರುವುದನ್ನು ಗಮನಿಸಿದ್ದಾಳೆ. ಬಹಳ ಉತ್ಸುಕತೆ ಹಾಗೂ ಆಶ್ಚರ್ಯದಿಂದ ತಂದೆಯನ್ನು ಭೇಟಿಯಾಗಲು ಕೆಳಗೆ ಧಾವಿಸುವುದನ್ನು ನೀವು ನೀಡಬಹುದು. ಆ ಬಳಿಕ ತಂದೆ ಹೂಗುಚ್ಛ, ಚೀಟಿ ಹಾಗೂ ಚಾಕೊಲೇಟ್ ನ್ನು ನೀಡಿರುವುದನ್ನು ನೀವು ಗಮನಿಸಬಹುದು.

ಈ ಚೀಟಿಯಲ್ಲಿ ನಾನು ಆಫೀಸ್ ಪರಿಶೀಲಿಸಲು ಇಲ್ಲಿಗೆ ಬಂದಿಲ್ಲ. ನನ್ನ ಮಗಳು ತನ್ನ ವೃತ್ತಿಜೀವನವನ್ನು ಎಲ್ಲಿ ನಿರ್ಮಿಸಲು ಪ್ರಾರಂಭಿಸಿದ್ದಾಳೆಂದು ನೋಡಲು ನಾನು ಇಲ್ಲಿದ್ದೇನೆ ಎಂಬ ಸಂದೇಶವನ್ನು ಬರೆಯಲಾಗಿದೆ. ಅಪ್ಪನ ಕಾಳಜಿಯುತ ಸಂದೇಶವು ಮಗಳನ್ನು ಭಾವುಕಳಾಗಿಸಿದೆ. ಕವಿಯಾ ತನ್ನ ತಂದೆಗೆ ಬಹಳ ಹೆಮ್ಮೆಯಿಂದ ತನ್ನ ಆಫೀಸಿನ ಕಟ್ಟಡವನ್ನು ತೋರಿಸಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ಮಗಳು ತನ್ನ ತಂದೆಯ ಜತೆಗೆ ಸೆಲ್ಫಿಗೆ ಪೋಸ್ ಕೊಟ್ಟಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಪ್ಪನ ಪ್ರೀತಿಯೇ ಹಾಗೆ, ಮಕ್ಕಳ ಯಶಸ್ಸಿನಲ್ಲಿ ತಂದೆಯ ಖುಷಿ ಅಡಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸಂತೂರ್ ತಂದೆಯ ಹಿಂದಿನ ರಹಸ್ಯವೇನು ಎಂದು ಕೇಳಿದ್ದಾರೆ. ಮತ್ತೊಬ್ಬರು, ಇದುವರೆಗಿನ ಅತ್ಯಂತ ಸಂತೋಷಕರ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಷೇರುಬಜಾರಿನಲ್ಲಿ ಭಾರಿ ಗೂಳಿ ಓಟ; ಗರಿಬಿಚ್ಚಿದ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆಯ ಭರ್ಜರಿ ಆಟಕ್ಕೆ ಕಾರಣಗಳೇನು? – Kannada News | Indian Stock Market Surges: Sensex Jumps 1700 Pts, Nifty Crosses 23600 – Why?

ನವದೆಹಲಿ, ಜೂನ್ 12: ಭಾರತೀಯ ಷೇರು ಮಾರುಕಟ್ಟೆ (India Stock Market) ಇಂದು ಶುಕ್ರವಾರ ಭಾರಿ ಏರಿಕೆ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) ಸುಮಾರು 1,700 ಅಂಕಗಳಷ್ಟು ಜಿಗಿತ ಸಾಧಿಸಿದರೆ, ಎನ್‌ಎಸ್‌ಇ ನಿಫ್ಟಿ (NSE Nifty 50) ಮತ್ತೆ 23,600 ರ ಮಟ್ಟವನ್ನು ದಾಟಿದೆ. ಈ ಭರ್ಜರಿ ಚೇತರಿಕೆಯಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಸುಮಾರು 7 ಲಕ್ಷ ಕೋಟಿ ರೂಗಿಂತಲೂ ಹೆಚ್ಚು ಹೆಚ್ಚಾಗಿದೆ. ಮಾರುಕಟ್ಟೆ ಇವತ್ತು ಶೇ. 2ರಷ್ಟು ಜಿಗಿತ ಕಂಡಿರುವುದು ವಿಶೇಷ. ಸೆನ್ಸೆಕ್ಸ್ 75,527 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿದೆ. ನಿಫ್ಟಿ ಸೂಚ್ಯಂಕ 23,622 ಅಂಕಗಳೊಂದಿಗೆ ಅಂತ್ಯಗೊಂಡಿದೆ. ಭಾರತದ ಷೇರು ಮಾರುಕಟ್ಟೆ ಈ ಪರಿ ಭರ್ಜರಿ ಏರಿಕೆಗೆ ಏನು ಕಾರಣ? ಇಲ್ಲಿದೆ ಡೀಟೇಲ್ಸ್.

ಯುಎಸ್-ಇರಾನ್ ಶಾಂತಿ ಒಪ್ಪಂದದ ಭರವಸೆ

ಜಾಗತಿಕವಾಗಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಲು ಪ್ರಮುಖ ಕಾರಣ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ. ಅಮೆರಿಕ ಮತ್ತು ಇರಾನ್ ನಡುವೆ ಈ ವಾರಾಂತ್ಯದಲ್ಲೇ ಶಾಂತಿ ಒಪ್ಪಂದ ಏರ್ಪಡಬಹುದು ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಭರವಸೆ ಮೂಡಿಸಿದೆ.

ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ಯುದ್ಧದ ಆತಂಕ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ (Crude Oil) ಬೆಲೆ ಬ್ಯಾರೆಲ್‌ಗೆ 88.80 ಡಾಲರ್‌ಗೆ ಕುಸಿದಿದೆ. ಇದು ಕಳೆದ ಎರಡು ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದೆ. ತೈಲ ಬೆಲೆ ಇಳಿಕೆಯು ಭಾರತದಂತಹ ದೊಡ್ಡ ಆಮದು ದೇಶದ ಆರ್ಥಿಕತೆಗೆ ವರದಾನವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಡವರ ಪಟ್ಟಿಗೆ 6 ವರ್ಷದಲ್ಲಿ 2.7 ಕೋಟಿ ಜನರ ಸೇರ್ಪಡೆ; ಬಡತನ ಶೇ. 7ರಷ್ಟು ಹೆಚ್ಚಳ

ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಟ್ರೆಂಡ್

ಟ್ರಂಪ್ ಅವರ ಶಾಂತಿ ಸಂಕೇತದಿಂದಾಗಿ ಏಷ್ಯಾದ ಪ್ರಮುಖ ಷೇರು ಮಾರುಕಟ್ಟೆಗಳಾದ ಜಪಾನ್‌ನ ಟೋಪಿಕ್ಸ್ (Topix), ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಗಳು ಶೇಕಡಾ 1 ರಿಂದ 1.5 ರಷ್ಟು ಏರಿಕೆ ಕಂಡವು. ಯುಎಸ್ ಮಾರುಕಟ್ಟೆಯ ಫ್ಯೂಚರ್ಸ್ ಕೂಡ ಲಾಭದಲ್ಲಿದ್ದವು.

ಬಲಗೊಂಡ ಭಾರತೀಯ ರೂಪಾಯಿ

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 60 ಪೈಸೆಗಿಂತಲೂ ಹೆಚ್ಚು ಜಿಗಿತ ಕಂಡು 95.25 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ರೂಪಾಯಿ ಬಲಗೊಂಡಿರುವುದು ವಿದೇಶಿ ಹೂಡಿಕೆದಾರರಲ್ಲಿ (FIIs) ಭಾರತೀಯ ಮಾರುಕಟ್ಟೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.

ಆರ್‌ಬಿಐ (RBI) ತೆಗೆದುಕೊಂಡ ಮಹತ್ವದ ಕ್ರಮಗಳು

ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ರೂಪಾಯಿ ಮೌಲ್ಯಕ್ಕೆ ಬೆಂಬಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೆಲವು ಪ್ರಮುಖ ನೀತಿ ಕ್ರಮಗಳನ್ನು ಪ್ರಕಟಿಸಿದೆ. ಇದು ಕೂಡ ಮಾರುಕಟ್ಟೆಯ ಇಂದಿನ ಮುನ್ನಡೆಗೆ ಮತ್ತೊಂದು ಪ್ರಮುಖ ಶಕ್ತಿಯಾಗಿದೆ.

ಇದನ್ನೂ ಓದಿ: ಈಗಲೂ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ವಿಶ್ವಬ್ಯಾಂಕ್ ವರದಿ

ಬ್ಯಾಂಕಿಂಗ್, ಆಟೋಮೊಬೈಲ್, ಮೆಟಲ್ ಮತ್ತು ಐಟಿ ಸೇರಿದಂತೆ ಎಲ್ಲಾ ವಲಯದ ಷೇರುಗಳೂ ಇಂದು ಹಸಿರು ನಿಶಾನೆ (ಲಾಭ) ಕಂಡಿವೆ. ಶ್ರೀರಾಮ್ ಫೈನಾನ್ಸ್, ಟ್ರೆಂಟ್, ಎಲ್‌ಆಂಡ್‌ಟಿ ಮತ್ತು ಬಜಾಜ್ ಫೈನಾನ್ಸ್ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ. ನಿಫ್ಟಿ ಬ್ಯಾಂಕ್ ಬಹುತೇಕ ಶೇ. 3ರ ಸಮೀಪದಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಫಿನಾನ್ಷಿಯಲ್ ಸರ್ವಿಸ್ ಇಂಡೆಕ್ಸ್ ಸಾಧಿಸಿದ ಹೆಚ್ಚಳವು ಶೇ. 3 ಅನ್ನು ದಾಟಿ ಹೋಗಿದೆ. ಬಿಎಸ್​ಇನಲ್ಲೂ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ಸಖತ್ ಹಿಗ್ಗಿವೆ. ಹೆಚ್ಚಿನ ಇಂಡೆಕ್ಸ್​ಗಳು ಪಾಸಿಟಿವ್ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version