World Art Day 2026: ಏಪ್ರಿಲ್ 15 ರಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ? – Kannada News | World Art Day 2026: Do you know why World Art Day is celebrated on April 15th?
ಕಲೆಗಳು (Art) ನಮ್ಮ ಸಂಸ್ಕೃತಿಯ ಜೀವಂತಿಕೆಯಾಗಿದ್ದು, ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ಕಲೆಗಳು ಜನಜೀವನದೊಂದಿಗೆ ಬೆರೆತು ಹೋಗಿವೆ. ಅಲ್ಲದೆ ಕಲೆಗಳು ಮಾನವನ ಭಾವನೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವೂ ಹೌದು. ಈ ಜಗತ್ತಿನಾದ್ಯಂತ ಅನೇಕಾರು ಕಲಾ ಪ್ರಕಾರಗಳಿವೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ಕ್ಷೀಣಿಸುತ್ತಾ ಬರುತ್ತಿದೆ. ಹಾಗಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಕಲೆಯ ಮಹತ್ವವನ್ನು ಉತ್ತೇಜಿಸಲು, ಕಲೆ ಹಾಗೂ ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏಪ್ರಿಲ್ 15 ರಂದು…