Headlines

‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್ – Kannada News | Anupama Parameswaran Addresses Breakup Rumours and Cryptic Instagram Posts

ಮಲಯಾಳಂ ಮೂಲದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಹಾಗೂ ಅವರ ಸಹನಟ ಧ್ರುವ್ ವಿಕ್ರಮ್ ನಡುವೆ ಬ್ರೇಕಪ್ ಆಗಿದೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಅನುಪಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಕ್ರಿಪ್ಟಿಕ್ ಪೋಸ್ಟ್‌ಗಳನ್ನು ಹಂಚಿಕೊಂಡ ಬೆನ್ನಲ್ಲೇ ಈ ಚರ್ಚೆ ಶುರುವಾಗಿತ್ತು. ಈ ಪೋಸ್ಟ್​​ಗಳ ಬಗ್ಗೆ ನಟಿ ಅನುಪಮಾ ಕಾರ್ಯಕ್ರಮವೊಂದರಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಡೆದ ಅವರ ಮುಂಬರುವ ಚಿತ್ರದ ಇವೆಂಟ್‌ನಲ್ಲಿ ಮಾಧ್ಯಮದವರು ಈ ಬಗ್ಗೆ…

Read More

ಗ್ರೀಸ್​ನಲ್ಲಿ ಕಾಡ್ಗಿಚ್ಚು ನಂದಿಸುವಾಗ ಭೀಕರ ದುರಂತ, ಆಕಾಶದಲ್ಲೇ ಡಿಕ್ಕಿಯಾದ ಹೆಲಿಕಾಪ್ಟರ್​ಗಳು, ಇಬ್ಬರು ಸಿಬ್ಬಂದಿ ಸಾವು – Kannada News | Mid Air Collision During Greece Wildfire Mission Leaves Two Firefighting Crew Dead

ಅಥೆನ್ಸ್​, ಆಗಸ್ಟ್​ 03: ಗ್ರೀಕ್ ರಾಜಧಾನಿ ಅಥೆನ್ಸ್​​ನ ಪಶ್ಚಿಮಕ್ಕೆ ಹರಡಿರುವ ಅರಣ್ಯದಲ್ಲಿ ಹಬ್ಬಿದ್ದ ಕಾಡ್ಗಿಚ್ಚು                              ನಂದಿಸುವ ಕಾರ್ಯಾಚರಣೆಯಲ್ಲಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್​(Helicopter)ಗಳು ಆಕಾಶದಲ್ಲೇ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಥೆನ್ಸ್‌ನ ಪಶ್ಚಿಮಕ್ಕೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಪೋರ್ಟೊ ಜೆರ್ಮೆನೊ ಬಳಿಯ ಪ್ಸಾಥಾ ಅರಣ್ಯ ಪ್ರದೇಶದ ಮೇಲೆ ಈ ಭೀಕರ ಅಪಘಾತ ಸಂಭವಿಸಿದೆ. ‘ಬೆಲ್’…

Read More

IPL 2027: ಮುಂಬೈ ಯುವ ಪ್ರತಿಭೆಗಳೇ ಟಾರ್ಗೆಟ್: ಡೆಲ್ಲಿ ಕ್ಯಾಪಿಟಲ್ಸ್ ಟ್ರಯಲ್ಸ್ ಶುರು! – Kannada News | IPL 2027: Delhi Capitals Begin Player Trials in Bengaluru

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್‌ಗಾಗಿ ಎಲ್ಲಾ ಫ್ರಾಂಚೈಸಿಗಳು ಈಗಿನಿಂದಲೇ ತೆರೆಮರೆಯ ಸಿದ್ಧತೆಗಳನ್ನು ಆರಂಭಿಸಿವೆ. ಇದರ ಭಾಗವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೇಶಿ ಕ್ರಿಕೆಟ್‌ನ ಯುವ ಮತ್ತು ಸ್ಫೋಟಕ ಆಟಗಾರರನ್ನು ಶೋಧಿಸಲು ಇಂದಿನಿಂದ ಬೆಂಗಳೂರಿನಲ್ಲಿ ಪ್ರಾಯೋಗಿಕ ಪಂದ್ಯಗಳು ಹಾಗೂ ಟ್ರಯಲ್ಸ್‌ಗಳನ್ನು ಹಮ್ಮಿಕೊಂಡಿದೆ. ವೆಸ್ಟ್ ಝೋನ್ (ಪಶ್ಚಿಮ ವಲಯ) ಮತ್ತು ಸೌತ್ ಝೋನ್ (ದಕ್ಷಿಣ ವಲಯ) ವ್ಯಾಪ್ತಿಯ ಪ್ರತಿಭಾವಂತ ಯುವ ಆಟಗಾರರನ್ನು ಈ ಕ್ಯಾಂಪ್‌ಗೆ ಆಹ್ವಾನಿಸಲಾಗಿದೆ. ಇದರಲ್ಲಿ ಮುಂಬೈ ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಮೂವರು…

Read More

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ 3.49 ಲಕ್ಷ ರೂ. ವಂಚನೆ: ಖದೀಮರ ಪ್ಲ್ಯಾನ್​​ ಹೇಗಿತ್ತು ಗೊತ್ತಾ? – Kannada News | Voter ID Scam: Bengaluru Man Conned of 3.49 Lakh Over Fake Election Commission WhatsApp Link

ಬೆಂಗಳೂರು, ಆಗಸ್ಟ್​​ 03: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಸೈಬರ್​​ ವಂಚಕರು ವ್ಯಕ್ತಿಯೋರ್ವರಿಂದ ಹಂತ ಹಂತವಾಗಿ 3 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾರ್ಥಸಾರಥಿ ಎಂಬ ವ್ಯಕ್ತಿಗೆ ECI ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ಕರೆ ಮಾಡಿದ್ದ ಖದೀಮ, ಈಗಾಗಲೇ ನೀವು ಸಲ್ಲಿಸಿರೋ SIR ಅರ್ಜಿ ರಿಜೆಕ್ಟ್ ಆಗಿದೆ. ಹೀಗಾಗಿ ಹೊಸ ಅರ್ಜಿ ಹಾಕಬೇಕು ಎಂದು ಲಿಂಕ್ ಒಂದನ್ನ ಕಳುಹಿಸಿದ್ದ. ಆತನ ಮಾತು ನಂಬಿ…

Read More

ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ – Kannada News | Karnataka Cabinet Expansion: New Ministers Oath Ceremony Today at Lok Bhavan

ಬೆಂಗಳೂರು, ಆಗಸ್ಟ್ 03: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಒಂದೆಡೆ ಕಾವೇರಿ ನದಿ ನೀರು ಹಂಚಿಕೆ ಹಾಗೂ ಪ್ರವಾಹದ ತೀವ್ರ ಸಂಕಷ್ಟ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ, ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹಾಗೂ ದೆಹಲಿ ಮಟ್ಟದ ಸರಣಿ ಸಭೆಗಳು ಕೂಡ ಸಮಾನಾಂತರವಾಗಿ ತೀವ್ರ ಕುತೂಹಲ ಕೆರಳಿಸಿದ್ದವು. ಇದೀಗ ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ತಂಗಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸಚಿವರ…

Read More

Gold Rates 03 Aug: ಹತ್ತು ಗ್ರಾಮ್ ಚಿನ್ನದ ಬೆಲೆ 6 ತಿಂಗಳಲ್ಲಿ 31,750 ರೂ ಇಳಿಕೆ – Kannada News | Gold Price Today on 3rd August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 3: ಚಿನ್ನದ ಬೆಲೆ ಕಳೆದ ಆರು ತಿಂಗಳಲ್ಲಿ ಗ್ರಾಮ್​ಗೆ 3,175 ರೂಗಳಷ್ಟು ಇಳಿಕೆಯಾಗಿದೆ. ಜನವರಿ 29ರಂದು ಆಭರಣ ಚಿನ್ನದ ಬೆಲೆ (Gold Price) 16,395 ರೂಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಈಗ ಅದು 13,220 ರೂಗೆ ಇಳಿದಿದೆ. ಬೆಳ್ಳಿ ಬೆಲೆಯೂ ಗರಿಷ್ಠ 410 ರೂನಿಂದ 235 ರೂಗೆ ಇಳಿದಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭದಲ್ಲೂ ಚಿನ್ನದ ಬೆಲೆ ಏರಿಕೆ ಕಾಣದಿರುವುದು ಗಮನಾರ್ಹ. ಇವತ್ತು ಸೋಮವಾರವಾರ ಈ ಎರಡೂ ಲೋಹಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ….

Read More

ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ – Kannada News | Bengaluru Cocaine Racket: Drug Peddler Arrested Near Chamarajpet Police Station, Rs 50 Lakh Cocaine Seized

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನ (Bengaluru) ಚಾಮರಾಜಪೇಟೆ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲೇ ಬೈಕ್ ಆಧಾರಿತ ಡೆಲಿವರಿ ಸೇವೆ ಬಳಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಪದೇಪದೆ ಡೆಲಿವರಿ ಬೈಕ್‌ಗಳು ಅಪಾರ್ಟ್‌ಮೆಂಟ್ ಬಳಿ ಬರುತ್ತಿರುವುದನ್ನು ಗಮನಿಸಿದ ಪೊಲೀಸರಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 50 ಲಕ್ಷ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶ ಮೂಲದ, ಬೆಂಗಳೂರಿನ ಬೇಗೂರು ಮೇನ್‌ರೋಡ್ ನಿವಾಸಿ 30 ವರ್ಷದ ರಾಜು…

Read More

‘ವಾರಣಾಸಿ’ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುತ್ತಿರುವುದೇಕೆ? ಕಾರಣ ತಿಳಿಸಿದ ರಾಜಮೌಳಿ – Kannada News | SS Rajamouli Explains the Reason Behind Shooting ‘Varanasi’ for IMAX Format

ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ (SS Rajamouli) ‘ವಾರಣಾಸಿ’ ಸಿನಿಮಾ ಸದ್ಯ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಜಾಗತಿಕ ಸಾಹಸ ಪ್ರಧಾನ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಅಸಲಿ ಕಾರಣವನ್ನು ರಾಜಮೌಳಿ ಅವರು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಚಿತ್ರದ ದೃಶ್ಯ ವೈಭವ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಲಿದೆ. ಫ್ರೆಂಚ್ ನಿಯತಕಾಲಿಕೆಯೊಂದರ ಸಂದರ್ಶನದಲ್ಲಿ ರಾಜಮೌಳಿ ಈ ರಹಸ್ಯ ಬಿಚ್ಚಿಟ್ಟಿದ್ದಾರೆ. ‘ಈ ಚಿತ್ರದ ಕಥಾಹಂದರ ಮತ್ತು ಶೈಲಿ ಅತ್ಯಂತ…

Read More

ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ – Kannada News | Bengaluru Cylinder Theft: Gang Steals LPG Cylinders in Auto, CCTV Footage Captured in Soladevanahalli

ಬೆಂಗಳೂರು, ಆಗಸ್ಟ್ 03: ಸಿಲಿಂಡರ್ ಸಮಸ್ಯೆ ಈಗಷ್ಟೇ ಸುಧಾರಿಸಿದೆ ಎಂದು ನಿಟ್ಟುಸಿರುವ ಬಿಡುವ ಹೊತ್ತಿನಲ್ಲೇ ನಗರದಲ್ಲಿ ಆಟೋದಲ್ಲಿ ಬಂದು ಕ್ಷಣಾರ್ಧದಲ್ಲಿ ಮನೆಗಳ ಸಿಲಿಂಡರ್ ಕದಿಯುವ ಖತರ್ನಾಕ್ ಗ್ಯಾಂಗ್ ಸಕ್ರಿಯವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಹಾಗೂ ಲಕ್ಷ್ಮೀಪುರ ವ್ಯಾಪ್ತಿಯಲ್ಲಿ ಹಗಲು-ರಾತ್ರಿ ಎನ್ನದೆ ರಾಜಾರೋಷವಾಗಿ ಮನೆ ಗೇಟ್ ತೆರೆದು ನುಗ್ಗಿ 10ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಆಟೋದಲ್ಲಿ ಬರುವ ಇಬ್ಬರು ಖತರ್ನಾಕ್‌ ಕಳ್ಳರು ಕ್ಷಣಾರ್ಧದಲ್ಲಿ ಸಿಲಿಂಡರ್ ಎಗರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ…

Read More

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ: ಬ್ರಿಜ್‌ಭೂಷಣ್ ಶರಣ್ ಸಿಂಗ್ ಖುಲಾಸೆ – Kannada News | Court Clears Brij Bhushan Sharan Singh in Wrestlers’ Complaint Case

ನವದೆಹಲಿ, ಆಗಸ್ಟ್​ 03: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರು ಮಂದಿ ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಬ್ರಿಜ್‌ಭೂಷಣ್ ಹಾಗೂ ಡಬ್ಲ್ಯೂಎಫ್​ಐ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಸುಮಾರು ಎರಡು ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಮತ್ತು ವಾದ-ಪ್ರತಿವಾದಗಳನ್ನು…

Read More