‘ನನ್ನ ಸೋಶಿಯಲ್ ಮೀಡಿಯಾ, ನಾನು ಏನು ಬೇಕಾದ್ರೂ ಪೋಸ್ಟ್ ಮಾಡ್ತೀನಿ’; ಅನುಪಮಾ ಪರಮೇಶ್ವರನ್ – Kannada News | Anupama Parameswaran Addresses Breakup Rumours and Cryptic Instagram Posts

ಮಲಯಾಳಂ ಮೂಲದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಹಾಗೂ ಅವರ ಸಹನಟ ಧ್ರುವ್ ವಿಕ್ರಮ್ ನಡುವೆ ಬ್ರೇಕಪ್ ಆಗಿದೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಅನುಪಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಕ್ರಿಪ್ಟಿಕ್ ಪೋಸ್ಟ್‌ಗಳನ್ನು ಹಂಚಿಕೊಂಡ ಬೆನ್ನಲ್ಲೇ ಈ ಚರ್ಚೆ ಶುರುವಾಗಿತ್ತು. ಈ ಪೋಸ್ಟ್​​ಗಳ ಬಗ್ಗೆ ನಟಿ ಅನುಪಮಾ ಕಾರ್ಯಕ್ರಮವೊಂದರಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ನಡೆದ ಅವರ ಮುಂಬರುವ ಚಿತ್ರದ ಇವೆಂಟ್‌ನಲ್ಲಿ ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ‘ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನೀವು ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳ ಮೂಲಕ ನಿಮ್ಮ ಒಳಗಿನ ನೋವನ್ನು ಹೊರಹಾಕುತ್ತಿದ್ದೀರಾ? ಇದು ನಿಜಕ್ಕೂ ಅಗತ್ಯವಿತ್ತಾ?’ ಎಂದು ಪ್ರಶ್ನಿಸಲಾಗಿದೆ.

ಇದಕ್ಕೆ ಉತ್ತರಿಸಿದ ನಟಿ, ’ಇದು ನನ್ನ ಸೋಶಿಯಲ್ ಮೀಡಿಯಾ ಖಾತೆ. ಅದರಲ್ಲಿ ಏನನ್ನು ಪೋಸ್ಟ್ ಮಾಡಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ನಾನು ನನ್ನ ಒಳಗಿನ ಬೇಸರವನ್ನೇನೂ ಹೊರಹಾಕುತ್ತಿರಲಿಲ್ಲ. ಬದಲಿಗೆ, ಮಹಿಳೆಯೊಬ್ಬಳ ಜೀವನದ ಬದಲಾವಣೆಗಳ ಬಗ್ಗೆ ಮಾತನಾಡುತ್ತಿದ್ದೆ. ಹಾಗೆ ಮಾಡಿದ್ದಕ್ಕೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ಧ್ರುವ್ ವಿಕ್ರಮ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್

‘ಇದು ನಿಮ್ಮ ಎದುರಾಳಿಯನ್ನು ದೂಷಿಸುವ ತಂತ್ರ ಅಲ್ಲವೇ’ ಎಂದು ಮರು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ನಟಿ ಮತ್ತಷ್ಟು ಗರಂ ಆಗಿದ್ದಾರೆ. ‘ನಿಮಗೆ ನನ್ನ ಬಗ್ಗೆ ಏನು ಗೊತ್ತು? ನನ್ನ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಏನು ತಿಳಿದಿದೆ? ಯಾರಿಗೂ ಏನೂ ಗೊತ್ತಿಲ್ಲ. ಆದ್ದರಿಂದ ಇದು ಸರಿ ಅಲ್ಲ. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟ ಬಂದಿದ್ದನ್ನು ನಾನು ಪೋಸ್ಟ್ ಮಾಡುತ್ತೇನೆ’ ಎಂದು ಹೇಳುವ ಮೂಲಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವದಂತಿ ಹಬ್ಬಿಸುವವರಿಗೆ ನೇರವಾಗಿಯೇ ತಪರಾಕಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರೀಸ್​ನಲ್ಲಿ ಕಾಡ್ಗಿಚ್ಚು ನಂದಿಸುವಾಗ ಭೀಕರ ದುರಂತ, ಆಕಾಶದಲ್ಲೇ ಡಿಕ್ಕಿಯಾದ ಹೆಲಿಕಾಪ್ಟರ್​ಗಳು, ಇಬ್ಬರು ಸಿಬ್ಬಂದಿ ಸಾವು – Kannada News | Mid Air Collision During Greece Wildfire Mission Leaves Two Firefighting Crew Dead

ಅಥೆನ್ಸ್​, ಆಗಸ್ಟ್​ 03: ಗ್ರೀಕ್ ರಾಜಧಾನಿ ಅಥೆನ್ಸ್​​ನ ಪಶ್ಚಿಮಕ್ಕೆ ಹರಡಿರುವ ಅರಣ್ಯದಲ್ಲಿ ಹಬ್ಬಿದ್ದ ಕಾಡ್ಗಿಚ್ಚು                              ನಂದಿಸುವ ಕಾರ್ಯಾಚರಣೆಯಲ್ಲಿದ್ದ ಎರಡು ಅಗ್ನಿಶಾಮಕ ಹೆಲಿಕಾಪ್ಟರ್​(Helicopter)ಗಳು ಆಕಾಶದಲ್ಲೇ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಥೆನ್ಸ್‌ನ ಪಶ್ಚಿಮಕ್ಕೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಪೋರ್ಟೊ ಜೆರ್ಮೆನೊ ಬಳಿಯ ಪ್ಸಾಥಾ ಅರಣ್ಯ ಪ್ರದೇಶದ ಮೇಲೆ ಈ ಭೀಕರ ಅಪಘಾತ ಸಂಭವಿಸಿದೆ. ‘ಬೆಲ್’ ಮಾದರಿಯ ಎರಡು ಹೆಲಿಕಾಪ್ಟರ್‌ಗಳು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ನೀರು ಹಾಕುತ್ತಿದ್ದಾಗ, ಒಂದಕ್ಕೊಂದು ಡಿಕ್ಕಿಯಾಗಿವೆ. ಒಂದು ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಅಪ್ಪಳಿಸಿದರೆ, ಮತ್ತೊಂದು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದೆ.

ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಗ್ರೀಕ್ ಮೂಲದ ಅಗ್ನಿಶಾಮಕ ಅಧಿಕಾರಿ ಹಾಗೂ ಡೆನ್ಮಾರ್ಕ್ ಮೂಲದ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡನೇ ಹೆಲಿಕಾಪ್ಟರ್‌ನಲ್ಲಿದ್ದ ಬ್ರಿಟನ್ ಪೈಲಟ್ ಹಾಗೂ ಗ್ರೀಕ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರೀಸ್‌ನಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಂಡಮಾರುತದ ಗಾಳಿ ಬೀಸುತ್ತಿದ್ದು, ತೀವ್ರ ಶಾಖದ ಕಾರಣದಿಂದಾಗಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕ್ಷಣಾರ್ಧದಲ್ಲಿ ಹರಡುತ್ತಿದೆ.

ರಸ್ತೆ ಮಾರ್ಗಗಳು ಹೊಗೆಯಿಂದ ಆವೃತವಾಗಿದ್ದರಿಂದ ಕರಾವಳಿ ಗ್ರಾಮಗಳ ನೂರಾರು ಜನರನ್ನು ನೌಕೆಗಳು ಹಾಗೂ ಬೋಟ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ. ಘಟನೆಯ ಕುರಿತು ತೀವ್ರ ಕಂಬನಿ ಮಿಡಿದ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್, ಪರಿಸ್ಥಿತಿಯು ಮಾನವನ ಸಿದ್ಧತೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನೂ ಮೀರಿ ವಿಕೋಪಕ್ಕೆ ತಿರುಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಏರ್ ಇಂಡಿಯಾ ಅಪಘಾತ; ವಿಮಾನದ ಇಂಧನ ಸ್ವಿಚ್‌ನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಸಂಸತ್​ಗೆ ಸರ್ಕಾರ ಮಾಹಿತಿ

ಕೇವಲ ಗ್ರೀಸ್ ಮಾತ್ರವಲ್ಲದೆ ಫ್ರಾನ್ಸ್ ಹಾಗೂ ಸ್ಪೇನ್ ದೇಶಗಳಲ್ಲೂ ಬೃಹತ್ ಪ್ರಮಾಣದಲ್ಲಿ ಕಾಡ್ಗಿಚ್ಚು ಹರಡಿದ್ದು, ಲಕ್ಷಾಂತರ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರೀಸ್‌ನಲ್ಲಿ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದ್ದು, ಐರೋಪ್ಯ ಒಕ್ಕೂಟದ (EU) ಕೌಟುಂಬಿಕ ತುರ್ತು ಒಪ್ಪಂದದಡಿ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ರೊಮೇನಿಯಾದ ವೈಮಾನಿಕ ತಂಡಗಳು ಗ್ರೀಸ್‌ಗೆ ನೆರವು ನೀಡುತ್ತಿವೆ.
2018 ರ ದುರಂತದ ನೆನಪು: 2018 ರಲ್ಲಿ ಮಾತಿ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಕಾಡ್ಗಿಚ್ಚಿಗೆ 104 ಜನರು ಬಲಿಯಾಗಿದ್ದರು. ಪ್ರಸ್ತುತ ಅಥೆನ್ಸ್ ಸುತ್ತಮುತ್ತಲಿನ ಬೆಂಕಿ ಅದೇ ಪ್ರಮಾಣದ ಅನಾಹುತ ಸೃಷ್ಟಿಸುವ ಭೀತಿಯನ್ನು ಒಡ್ಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2027: ಮುಂಬೈ ಯುವ ಪ್ರತಿಭೆಗಳೇ ಟಾರ್ಗೆಟ್: ಡೆಲ್ಲಿ ಕ್ಯಾಪಿಟಲ್ಸ್ ಟ್ರಯಲ್ಸ್ ಶುರು! – Kannada News | IPL 2027: Delhi Capitals Begin Player Trials in Bengaluru

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್‌ಗಾಗಿ ಎಲ್ಲಾ ಫ್ರಾಂಚೈಸಿಗಳು ಈಗಿನಿಂದಲೇ ತೆರೆಮರೆಯ ಸಿದ್ಧತೆಗಳನ್ನು ಆರಂಭಿಸಿವೆ. ಇದರ ಭಾಗವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೇಶಿ ಕ್ರಿಕೆಟ್‌ನ ಯುವ ಮತ್ತು ಸ್ಫೋಟಕ ಆಟಗಾರರನ್ನು ಶೋಧಿಸಲು ಇಂದಿನಿಂದ ಬೆಂಗಳೂರಿನಲ್ಲಿ ಪ್ರಾಯೋಗಿಕ ಪಂದ್ಯಗಳು ಹಾಗೂ ಟ್ರಯಲ್ಸ್‌ಗಳನ್ನು ಹಮ್ಮಿಕೊಂಡಿದೆ.

ವೆಸ್ಟ್ ಝೋನ್ (ಪಶ್ಚಿಮ ವಲಯ) ಮತ್ತು ಸೌತ್ ಝೋನ್ (ದಕ್ಷಿಣ ವಲಯ) ವ್ಯಾಪ್ತಿಯ ಪ್ರತಿಭಾವಂತ ಯುವ ಆಟಗಾರರನ್ನು ಈ ಕ್ಯಾಂಪ್‌ಗೆ ಆಹ್ವಾನಿಸಲಾಗಿದೆ. ಇದರಲ್ಲಿ ಮುಂಬೈ ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಮೂವರು ಯುವ ಆಟಗಾರರಾದ ಆಯುಷ್ ವರ್ತಕ್, ಅಯಾಝ್ ಖಾನ್ ಮತ್ತು ದಿವ್ಯಾಂಶ್ ಸಕ್ಸೇನಾ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮುಂಬೈ ಬ್ಯಾಟರ್‌ಗಳ ಮೇಲೆ ಕಣ್ಣಿಟ್ಟ ಡಿಸಿ:

ಇತ್ತೀಚೆಗೆ ಮುಂಬೈನ ಸ್ಥಳೀಯ ಕ್ರಿಕೆಟ್ ಟೂರ್ನಿಗಳಾದ ‘ಟೈಮ್ಸ್ ಶೀಲ್ಡ್’ ಹಾಗೂ ವಿವಿಧ ವಯೋಮಿತಿ ಕ್ರಿಕೆಟ್‌ನಲ್ಲಿ ಈ ಮೂವರು ಆಟಗಾರರು ರನ್ ಮಳೆ ಹರಿಸಿದ್ದಾರೆ.

  • ದಿವ್ಯಾಂಶ್ ಸಕ್ಸೇನಾ: ಎಡಗೈ ಬ್ಯಾಟರ್ ಆಗಿರುವ ದಿವ್ಯಾಂಶ್ ಈಗಾಗಲೇ ಭಾರತದ ಅಂಡರ್-19 ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಭರ್ಜರಿ ಶತಕಗಳನ್ನು ಸಿಡಿಸಿ ಮಿಂಚಿದ್ದರು.
  • ಆಯುಷ್ ವರ್ತಕ್ ಹಾಗೂ ಅಯಾಝ್ ಖಾನ್: ಇವರಿಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಬಿಗ್ ಹಿಟ್ಟಿಂಗ್ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ. ಟಿ20 ಕ್ರಿಕೆಟ್‌ಗೆ ಬೇಕಾದ ಅದ್ಭುತ ಸ್ಟ್ರೈಕ್ ರೇಟ್ ಹೊಂದಿರುವುದು ಡೆಲ್ಲಿ ಫ್ರಾಂಚೈಸಿಯ ಗಮನ ಸೆಳೆಯಲು ಪ್ರಮುಖ ಕಾರಣವಾಗಿದೆ.

ಮುಂಚಿತವಾಗಿಯೇ ಸಿದ್ಧತೆ ಏಕೆ?

ಐಪಿಎಲ್‌ನ ಮುಂದಿನ ಆವೃತ್ತಿಗೆ ಇನ್ನು ಸಾಕಷ್ಟು ಸಮಯವಿದ್ದರೂ, ಫ್ರಾಂಚೈಸಿಗಳು ಯುವ ಆಟಗಾರರ ಫಿಟ್‌ನೆಸ್, ತಾಂತ್ರಿಕ ಕೌಶಲ್ಯ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹತ್ತಿರದಿಂದ ನೋಡಲು ಬಯಸುತ್ತವೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಟ್ರಯಲ್ಸ್‌ನಲ್ಲಿ ತರಬೇತುದಾರರು ಮತ್ತು ಸ್ಕೌಟಿಂಗ್ ತಂಡವು ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಇಲ್ಲಿ ಮಿಂಚುವ ಆಟಗಾರರಿಗೆ ಮುಂಬರುವ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತದ ಅದೃಷ್ಟ ಖುಲಾಯಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.

Source link

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ 3.49 ಲಕ್ಷ ರೂ. ವಂಚನೆ: ಖದೀಮರ ಪ್ಲ್ಯಾನ್​​ ಹೇಗಿತ್ತು ಗೊತ್ತಾ? – Kannada News | Voter ID Scam: Bengaluru Man Conned of 3.49 Lakh Over Fake Election Commission WhatsApp Link

ಬೆಂಗಳೂರು, ಆಗಸ್ಟ್​​ 03: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಸೈಬರ್​​ ವಂಚಕರು ವ್ಯಕ್ತಿಯೋರ್ವರಿಂದ ಹಂತ ಹಂತವಾಗಿ 3 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾರ್ಥಸಾರಥಿ ಎಂಬ ವ್ಯಕ್ತಿಗೆ ECI ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ಕರೆ ಮಾಡಿದ್ದ ಖದೀಮ, ಈಗಾಗಲೇ ನೀವು ಸಲ್ಲಿಸಿರೋ SIR ಅರ್ಜಿ ರಿಜೆಕ್ಟ್ ಆಗಿದೆ. ಹೀಗಾಗಿ ಹೊಸ ಅರ್ಜಿ ಹಾಕಬೇಕು ಎಂದು ಲಿಂಕ್ ಒಂದನ್ನ ಕಳುಹಿಸಿದ್ದ. ಆತನ ಮಾತು ನಂಬಿ ಇವರು ಕೂಡ ಆನ್ಲೈನ್ ಮೂಲಕ ಹೆಸರು, ವಿಳಾಸ ಸೇರಿ ಮಾಹಿತಿ ತುಂಬಿದ್ದರು ಎನ್ನಲಾಗಿದೆ.

ಅರ್ಜಿ ಸ್ವೀಕಾರ ಸಂಬಂಧ ಖದೀಮ 5 ರೂಪಾಯಿ ಕೇಳಿದ್ದ. ಕ್ರೆಡಿಟ್​​ ಕಾರ್ಡ್​​ ಮೂಲಕ ಪೇ ಮಾಡಿದಾಗ ಟ್ರಾನ್ಸ್ಯಾಕ್ಷನ್​​ ಫೇಲ್​​ ಆಗಿತ್ತು. ಹೀಗಾಗಿ ಆತ ಕ್ಯೂಆರ್​​ ಕೋಡ್​​ ಕಳುಹಿಸಿದ್ದ ಎನ್ನಲಾಗಿದೆ. ಅದಾದ ಬಳಿಕ ದೂರುದಾರರ ಅಕೌಂಟ್​​ನಿಂದ ಹಂತ ಹಂತವಾಗಿ 3 ಲಕ್ಷದ 49 ಸಾವಿರದ 999 ರೂ. ಕಟ್ ಆಗಿದೆ. ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಪಾರ್ಥಸಾರಥಿ ಅವರು ಜೀವನ್ ಭಿಮಾನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸೈಬರ್ ಹೂಡಿಕೆ ವಂಚನೆ ಪ್ರಕರಣಗಳು! ಸಾರ್ವಜನಿಕರಿಗೆ ಪೊಲೀಸರ ಸೂಚನೆ

SIR ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಎಚ್ಚರಿಕೆ

ಸೈಬರಾಬಾದ್ ಪೊಲೀಸರು ಹಾಗೂ ಸೈಬರ್ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿ, BLO ಅಥವಾ ಮತದಾರರ ಪಟ್ಟಿ ಪರಿಶೀಲನಾ ತಂಡದವರಂತೆ ಕರೆ ಮಾಡಬಹುದು. ವೈಯಕ್ತಿಕ ಮಾಹಿತಿ, ದಾಖಲೆಗಳು ಅಥವಾ OTP ಕೇಳಬಹುದು. SIR ಪರಿಶೀಲನೆಗಾಗಿ ಹಣ ಪಾವತಿಸಲು ಹೇಳಬಹುದು. ವಾಟ್ಸಾಪ್ ಮೂಲಕ ಲಿಂಕ್ ಅಥವಾ ನಕಲಿ ಆ್ಯಪ್ ಕಳುಹಿಸಬಹುದು. ಆದರೆ ಗಮನದಲ್ಲಿರಲಿ, SIR ಪರಿಶೀಲನೆಗೆ ಚುನಾವಣಾ ಆಯೋಗ ಯಾವುದೇ ಹಣ ಕೇಳುವುದಿಲ್ಲ. ಚುನಾವಣಾ ಆಯೋಗ APK ಫೈಲ್ ಅಥವಾ ಆ್ಯಪ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದಿಲ್ಲ. ಮತದಾರರ ಪರಿಶೀಲನೆ ವಾಟ್ಸಾಪ್ ಮೂಲಕ ನಡೆಯುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಸುರಕ್ಷಿತವಾಗಿರಲು ಏನು ಮಾಡಬೇಕು?

ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಪರಿಚಯವಿಲ್ಲದ ಆ್ಯಪ್ ಅಥವಾ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಹೋಗಬೇಡಿ. OTP, ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾವುದೇ ಅನುಮಾನಾಸ್ಪದ ಕರೆ ಬಂದರೆ ತಕ್ಷಣ 1930 ಸಹಾಯವಾಣಿ ಅಥವಾ cybercrime.gov.in ಮೂಲಕ ದೂರು ನೀಡಿ ಎಂದು ತಜ್ಞರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಚಿವ ಸಂಪುಟ ವಿಸ್ತರಣೆ: ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ – Kannada News | Karnataka Cabinet Expansion: New Ministers Oath Ceremony Today at Lok Bhavan

ಬೆಂಗಳೂರು, ಆಗಸ್ಟ್ 03: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಒಂದೆಡೆ ಕಾವೇರಿ ನದಿ ನೀರು ಹಂಚಿಕೆ ಹಾಗೂ ಪ್ರವಾಹದ ತೀವ್ರ ಸಂಕಷ್ಟ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಮತ್ತೊಂದೆಡೆ, ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಹಾಗೂ ದೆಹಲಿ ಮಟ್ಟದ ಸರಣಿ ಸಭೆಗಳು ಕೂಡ ಸಮಾನಾಂತರವಾಗಿ ತೀವ್ರ ಕುತೂಹಲ ಕೆರಳಿಸಿದ್ದವು. ಇದೀಗ ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಾವು ತಂಗಿದ್ದು, ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.

ಶಾಸಕರ ನಡುವೆ ಭಾರೀ ಪೈಪೋಟಿ

ಹೈಕಮಾಂಡ್‌ ಅಂತಿಮಗೊಳಿಸಿದೆ ಎನ್ನಲಾಗುತ್ತಿರುವ ಸಂಭಾವ್ಯ ಪಟ್ಟಿಯಲ್ಲಿ ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ನಾಯಕರ ಹೆಸರುಗಳು ತೀವ್ರ ಚರ್ಚೆಯಲ್ಲಿತ್ತು. ಇವರಲ್ಲಿ ಕೆಲವರು ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಮತ್ತೆ ಸಂಪುಟ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗಿತ್​ತು. ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ಭಿನ್ನಮತ ಶಮನಗೊಳಿಸುವ ವಿಚಾರದಲ್ಲಿ ಶಾಸಕರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಚೇರಿಯಿಂದ ಲೋಕಭವನಕ್ಕೆ ಮೌಖಿಕ ಮಾಹಿತಿ ನೀಡಲಾಗಿದೆಯಾದರೂ, ಇದುವರೆಗೆ ಲಿಖಿತವಾಗಿ ಯಾವುದೇ ಅಧಿಕೃತ ಸೂಚನೆ ಎನ್ನಲಾಗಿತ್ತು. ಆದರೀಗ ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ ಹೊರಬಿದ್ದಿದೆ.

ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ

  • ಪಿಎಂ ನಾರಾಯಣ ಸ್ವಾಮಿ
  • ಶಿವರಾಜ್ ತಂಗಡಗಿ
  • ರುದ್ರಪ್ಪ ಲಮಾಣಿ
  • ಟಿ. ರಘುಮೂರ್ತಿ
  • ಬಿ ನಾಗೇಂದ್ರ
  • ಜಮೀರ್
  • ರಿಜ್ವಾನ್ ಅರ್ಷದ್
  • ಸಂತೋಷ್ ಲಾಡ್
  • ಮಧು ಬಂಗಾರಪ್ಪ
  • ಪುಟ್ಟರಂಗ ಶೆಟ್ಟಿ
  • ಮಂಕಾಳ್ ವೈದ್ಯ
  • ಅಜಯ್ ಸಿಂಗ್
  • ಚೆಲುವರಾಯಸ್ವಾಮಿ
  • ಎಂ ಶಿವಲಿಂಗೇಗೌಡ
  • ಹೆಚ್‌ ಸಿ ಬಾಲಕೃಷ್ಣ
  • ಶಾಂತವೀರೇಗೌಡ
  • ವಿಜಯಾನಂದ ಕಾಶಪ್ಪನವರ್
  • ಲಕ್ಷ್ಮಣ್ ಸವದಿ
  • ಬಸವರಾಜ್ ರಾಯರೆಡ್ಡಿ

ಕೊನೆಗೂ ಸಂಪುಟ ವಿಸ್ತರಣೆಯ ಸುದೀರ್ಘ ಚರ್ಚೆಗಳಿಗೆ ತೆರೆ ಬಿದ್ದಿದ್ದು, ನೂತನ ಸಚಿವರ ಪ್ರಮಾಣವಚನದತ್ತ ಎಲ್ಲರ ಕಣ್ಣು ನೆಟ್ಟಿದೆ. ಹೊಸ ಸಚಿವರ ಅಧಿಕಾರ ಸ್ವೀಕಾರದ ನಂತರವಷ್ಟೇ ಖಾತೆ ಹಂಚಿಕೆ ಹಾಗೂ ರಾಜ್ಯದ ಆಡಳಿತ ಯಂತ್ರಕ್ಕೆ ಹೊಸ ವೇಗ ಸಿಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:49 am, Mon, 3 August 26

Source link

Gold Rates 03 Aug: ಹತ್ತು ಗ್ರಾಮ್ ಚಿನ್ನದ ಬೆಲೆ 6 ತಿಂಗಳಲ್ಲಿ 31,750 ರೂ ಇಳಿಕೆ – Kannada News | Gold Price Today on 3rd August 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಆಗಸ್ಟ್ 3: ಚಿನ್ನದ ಬೆಲೆ ಕಳೆದ ಆರು ತಿಂಗಳಲ್ಲಿ ಗ್ರಾಮ್​ಗೆ 3,175 ರೂಗಳಷ್ಟು ಇಳಿಕೆಯಾಗಿದೆ. ಜನವರಿ 29ರಂದು ಆಭರಣ ಚಿನ್ನದ ಬೆಲೆ (Gold Price) 16,395 ರೂಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಈಗ ಅದು 13,220 ರೂಗೆ ಇಳಿದಿದೆ. ಬೆಳ್ಳಿ ಬೆಲೆಯೂ ಗರಿಷ್ಠ 410 ರೂನಿಂದ 235 ರೂಗೆ ಇಳಿದಿದೆ. ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭದಲ್ಲೂ ಚಿನ್ನದ ಬೆಲೆ ಏರಿಕೆ ಕಾಣದಿರುವುದು ಗಮನಾರ್ಹ. ಇವತ್ತು ಸೋಮವಾರವಾರ ಈ ಎರಡೂ ಲೋಹಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಆಗಸ್ಟ್ 3ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,816 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,220 ರೂ
  • ಚೆನ್ನೈ: 13,220 ರೂ
  • ಮುಂಬೈ: 13,220 ರೂ
  • ದೆಹಲಿ: 13,235 ರೂ
  • ಕೋಲ್ಕತಾ: 13,220 ರೂ
  • ಕೇರಳ: 13,220 ರೂ
  • ಅಹ್ಮದಾಬಾದ್: 13,225 ರೂ
  • ಜೈಪುರ್: 13,235 ರೂ
  • ಲಕ್ನೋ: 13,235 ರೂ
  • ಭುವನೇಶ್ವರ್: 13,220 ರೂ

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 546 ರಿಂಗಿಟ್ (12,697 ರುಪಾಯಿ)
  • ದುಬೈ: 487.25 ಡಿರಾಮ್ (12,624 ರುಪಾಯಿ)
  • ಅಮೆರಿಕ: 133.50 ಡಾಲರ್ (12,703 ರುಪಾಯಿ)
  • ಸಿಂಗಾಪುರ: 177.60 ಸಿಂಗಾಪುರ್ ಡಾಲರ್ (13,189 ರುಪಾಯಿ)
  • ಕತಾರ್: 488.50 ಕತಾರಿ ರಿಯಾಲ್ (12,752 ರೂ)
  • ಸೌದಿ ಅರೇಬಿಯಾ: 502 ಸೌದಿ ರಿಯಾಲ್ (12,720 ರುಪಾಯಿ)
  • ಓಮನ್: 51.70 ಒಮಾನಿ ರಿಯಾಲ್ (12,778 ರುಪಾಯಿ)
  • ಕುವೇತ್: 40.80 ಕುವೇತಿ ದಿನಾರ್ (12,618 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 235 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 235 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 235 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:35 am, Mon, 3 August 26

Source link

ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ – Kannada News | Bengaluru Cocaine Racket: Drug Peddler Arrested Near Chamarajpet Police Station, Rs 50 Lakh Cocaine Seized

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನ (Bengaluru) ಚಾಮರಾಜಪೇಟೆ ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲೇ ಬೈಕ್ ಆಧಾರಿತ ಡೆಲಿವರಿ ಸೇವೆ ಬಳಸಿಕೊಂಡು ಕೊಕೇನ್ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನುಮಾನಾಸ್ಪದವಾಗಿ ಪದೇಪದೆ ಡೆಲಿವರಿ ಬೈಕ್‌ಗಳು ಅಪಾರ್ಟ್‌ಮೆಂಟ್ ಬಳಿ ಬರುತ್ತಿರುವುದನ್ನು ಗಮನಿಸಿದ ಪೊಲೀಸರಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 50 ಲಕ್ಷ ರೂ. ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಉತ್ತರ ಪ್ರದೇಶ ಮೂಲದ, ಬೆಂಗಳೂರಿನ ಬೇಗೂರು ಮೇನ್‌ರೋಡ್ ನಿವಾಸಿ 30 ವರ್ಷದ ರಾಜು ಎಂದು ಗುರುತಿಸಲಾಗಿದೆ. ಜುಲೈ 19ರ ಮಧ್ಯರಾತ್ರಿ ಕನ್ಸರ್ವೆನ್ಸಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ಬಳಿ ಪ್ರತಿ 15ರಿಂದ 20 ನಿಮಿಷಕ್ಕೊಮ್ಮೆ ಲಾಜಿಸ್ಟಿಕ್ಸ್ ಸೇವೆಯ ಬೈಕ್‌ಗಳು ಬರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

ಪಾರ್ಸೆಲ್ ನೀಡುವ ಬದಲು ಸಣ್ಣ ಪ್ಯಾಕೆಟ್ ಪಡೆಯುತ್ತಿದ್ದ ಡೆಲಿವರಿ ಬಾಯ್!

ಡೆಲಿವರಿ ಸಿಬ್ಬಂದಿ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪಾರ್ಸೆಲ್ ನೀಡುವ ಬದಲು, ಕಾರಿನ ಬಳಿ ನಿಂತಿದ್ದ ವ್ಯಕ್ತಿಯಿಂದ ಸಣ್ಣ ಪ್ಯಾಕೆಟ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಡೆಲಿವರಿ ರೈಡರ್‌ವೊಬ್ಬರನ್ನು ತಡೆದು ವಿಚಾರಣೆ ನಡೆಸಿದಾಗ, ಪಾರ್ಸೆಲ್‌ಗಳನ್ನು ರಾಜು ಬುಕ್ ಮಾಡಿರುವುದು ಗೊತ್ತಾಗಿದೆ.

ಪೊಲೀಸರ ಪ್ರಕಾರ, ಕೇವಲ 50 ರೂ. ಡೆಲಿವರಿ ಶುಲ್ಕವಿದ್ದರೂ, ವೇಗವಾಗಿ ಡೆಲಿವರಿ ಮಾಡಿಸಲು ಹಾಗೂ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ರಾಜು ಪ್ರತಿ ರೈಡರ್‌ಗೆ ಸುಮಾರು 300 ರೂ. ಟಿಪ್ ನೀಡುತ್ತಿದ್ದ ಎನ್ನಲಾಗಿದೆ.

ಚಾಕೊಲೇಟ್ ಬಾಕ್ಸ್ ಒಳಗೆ ಕೊಕೇನ್ ಸಾಗಾಟ

ಪಾರ್ಸೆಲ್ ಪರಿಶೀಲಿಸಿದಾಗ ಸಣ್ಣ ಚಾಕೊಲೇಟ್ ಬಾಕ್ಸ್‌ಗಳ ಒಳಗೆ ಕೊಕೇನ್‌ ಅನ್ನು ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಸ್ಥಳದಲ್ಲೇ ರಾಜುವನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಮತ್ತೊಬ್ಬ ಆರೋಪಿ ಅಕ್ಷಿತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

ಕೊಕೇನ್, ಕಾರು ಜಪ್ತಿ

ಪೊಲೀಸರು 116.3 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದು, ಇದರ ಅಂದಾಜು ಮೌಲ್ಯ ಸುಮಾರು 50 ಲಕ್ಷ ರೂ. ಎಂದು ತಿಳಿದುಬಂದಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜುವಿನ ಗ್ರಾಹಕರಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಹಾಗೂ ಉದ್ಯಮಿಗಳು ಇದ್ದಿರಬಹುದು ಎಂದು ಶಂಕಿಸಲಾಗಿದೆ.

ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧಿತ ರಾಜುವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಕೇನ್ ಎಲ್ಲಿಂದ ಬರುತ್ತಿತ್ತು, ಯಾರಿಗೆ ಪೂರೈಕೆ ಮಾಡಲಾಗುತ್ತಿತ್ತು, ಎಷ್ಟು ದಿನಗಳಿಂದ ಈ ದಂಧೆ ನಡೆಸಲಾಗುತ್ತಿತ್ತು ಮತ್ತು ಇದರ ಹಿಂದೆ ದೊಡ್ಡ ಅಂತರರಾಜ್ಯ ಡ್ರಗ್ಸ್ ಜಾಲವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಾರಣಾಸಿ’ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸುತ್ತಿರುವುದೇಕೆ? ಕಾರಣ ತಿಳಿಸಿದ ರಾಜಮೌಳಿ – Kannada News | SS Rajamouli Explains the Reason Behind Shooting ‘Varanasi’ for IMAX Format

ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ (SS Rajamouli) ‘ವಾರಣಾಸಿ’ ಸಿನಿಮಾ ಸದ್ಯ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಜಾಗತಿಕ ಸಾಹಸ ಪ್ರಧಾನ ಚಿತ್ರವನ್ನು ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಪ್ರೀಮಿಯಂ ಲಾರ್ಜ್-ಫಾರ್ಮ್ಯಾಟ್ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಅಸಲಿ ಕಾರಣವನ್ನು ರಾಜಮೌಳಿ ಅವರು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಚಿತ್ರದ ದೃಶ್ಯ ವೈಭವ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಲಿದೆ.

ಫ್ರೆಂಚ್ ನಿಯತಕಾಲಿಕೆಯೊಂದರ ಸಂದರ್ಶನದಲ್ಲಿ ರಾಜಮೌಳಿ ಈ ರಹಸ್ಯ ಬಿಚ್ಚಿಟ್ಟಿದ್ದಾರೆ. ‘ಈ ಚಿತ್ರದ ಕಥಾಹಂದರ ಮತ್ತು ಶೈಲಿ ಅತ್ಯಂತ ವಿಶಾಲವಾಗಿದೆ. ಇಂತಹ ಬೃಹತ್ ದೃಶ್ಯಗಳನ್ನು ಸಾಮಾನ್ಯ ಪರದೆಯ ಮೇಲೆ ತೋರಿಸಲು ಸಾಧ್ಯವಿಲ್ಲ. ಚಿತ್ರದಲ್ಲಿ 300 ಅಡಿ ಎತ್ತರದ ಅಂಟಾರ್ಟಿಕಾದ ಹಿಮದ ಬಂಡೆಗಳು ಇರಲಿವೆ. ಇದರೊಂದಿಗೆ ರಾಮಾಯಣದ ಬೃಹತ್ ವಾನರ ಸೇನೆಯ ದೃಶ್ಯಗಳು ಕೂಡ ಇರಲಿವೆ. ಐಮ್ಯಾಕ್ಸ್ ಪರದೆಯು ಈ ದೃಶ್ಯಗಳ ಭವ್ಯತೆಯನ್ನು ಸಂಪೂರ್ಣವಾಗಿ ಹಿಡಿದಿಡಬಲ್ಲದು. ಹಾಗಾಗಿ ಈ ತಂತ್ರಜ್ಞಾನವನ್ನು ಬಳಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿದ್ದರೂ ಬಿಡುವಿಲ್ಲದ ಪೃಥ್ವಿರಾಜ್; ಬ್ಯಾಕ್ ಟು ಬ್ಯಾಕ್ ಚಿತ್ರಗಳ ಮೂಲಕ ದಾಖಲೆ

ಚಿತ್ರದ ಕಥೆಯನ್ನು ರಾಜಮೌಳಿ ಸದ್ಯಕ್ಕೆ ರಹಸ್ಯವಾಗಿಟ್ಟಿದ್ದಾರೆ. ಆದರೆ ಅವರ ಮಾತುಗಳು ಚಿತ್ರದ ದೃಶ್ಯ ವೈಭವದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿವೆ. ಈಗಾಗಲೇ ಚಿತ್ರದ ಪ್ರಮುಖ ಸಾಹಸ ದೃಶ್ಯಗಳ ಚಿತ್ರೀಕರಣ ಮುಕ್ತಾಯಗೊಂಡಿದೆ. ಸಿನಿಮಾದ ಶೇಕಡಾ 80 ರಷ್ಟು ಶೂಟಿಂಗ್ ಪೂರ್ಣಗೊಂಡಿದೆ.

ಈ ಚಿತ್ರದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವು 2027ರ ಏಪ್ರಿಲ್ ಅಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ – Kannada News | Bengaluru Cylinder Theft: Gang Steals LPG Cylinders in Auto, CCTV Footage Captured in Soladevanahalli

ಬೆಂಗಳೂರು, ಆಗಸ್ಟ್ 03: ಸಿಲಿಂಡರ್ ಸಮಸ್ಯೆ ಈಗಷ್ಟೇ ಸುಧಾರಿಸಿದೆ ಎಂದು ನಿಟ್ಟುಸಿರುವ ಬಿಡುವ ಹೊತ್ತಿನಲ್ಲೇ ನಗರದಲ್ಲಿ ಆಟೋದಲ್ಲಿ ಬಂದು ಕ್ಷಣಾರ್ಧದಲ್ಲಿ ಮನೆಗಳ ಸಿಲಿಂಡರ್ ಕದಿಯುವ ಖತರ್ನಾಕ್ ಗ್ಯಾಂಗ್ ಸಕ್ರಿಯವಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಹಾಗೂ ಲಕ್ಷ್ಮೀಪುರ ವ್ಯಾಪ್ತಿಯಲ್ಲಿ ಹಗಲು-ರಾತ್ರಿ ಎನ್ನದೆ ರಾಜಾರೋಷವಾಗಿ ಮನೆ ಗೇಟ್ ತೆರೆದು ನುಗ್ಗಿ 10ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಆಟೋದಲ್ಲಿ ಬರುವ ಇಬ್ಬರು ಖತರ್ನಾಕ್‌ ಕಳ್ಳರು ಕ್ಷಣಾರ್ಧದಲ್ಲಿ ಸಿಲಿಂಡರ್ ಎಗರಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ: ಬ್ರಿಜ್‌ಭೂಷಣ್ ಶರಣ್ ಸಿಂಗ್ ಖುಲಾಸೆ – Kannada News | Court Clears Brij Bhushan Sharan Singh in Wrestlers’ Complaint Case

ನವದೆಹಲಿ, ಆಗಸ್ಟ್​ 03: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರು ಮಂದಿ ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಬ್ರಿಜ್‌ಭೂಷಣ್ ಹಾಗೂ ಡಬ್ಲ್ಯೂಎಫ್​ಐ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಸುಮಾರು ಎರಡು ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಪೀಠವು ಈ ನಿರ್ಣಾಯಕ ತೀರ್ಪನ್ನು ಪ್ರಕಟಿಸಿದೆ. ಖುಲಾಸೆಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್‌ಭೂಷಣ್, ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿತ್ತು, ನ್ಯಾಯಾಲಯದ ತೀರ್ಪಿಗೆ ನಾನು ತಲೆಬಾಗುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

2023 ರಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಪ್ರಮುಖ ಜಾಗತಿಕ ಪದಕ ವಿಜೇತ ಕುಸ್ತಿಪಟುಗಳು ಬ್ರಿಜ್‌ಭೂಷಣ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ತಿಂಗಳುಗಳ ಕಾಲ ಬೃಹತ್ ಪ್ರತಿಭಟನೆ ನಡೆಸಿದ್ದರು. ಕುಸ್ತಿಪಟುಗಳ ಧರಣಿಯ ನಂತರ ಸುಪ್ರೀಂ ಕೋರ್ಟ್ ಸೂಚನೆಯಂತೆ ದೆಹಲಿ ಪೊಲೀಸರು ಬ್ರಿಜ್‌ಭೂಷಣ್ ವಿರುದ್ಧ ಪೋಕ್ಸೋ (POCSO) ಮತ್ತು ಲೈಂಗಿಕ ಕಿರುಕುಳ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು.

ಮತ್ತಷ್ಟು ಓದಿ: ಬೆಂಗಳೂರು ಪಬ್​​ನಲ್ಲಿ ಮಹಿಳೆಯ ಸೊಂಟದ ಕೆಳಗೆ ಹೊಡೆದ ವ್ಯಕ್ತಿ, ಮುಂದೇನಾಯಿತು ನೋಡಿ?

ಲೋಕಸಭಾ ಟಿಕೆಟ್ ಮಿಸ್ ಮತ್ತು ರಾಜಕೀಯ ಪರಿಣಾಮ
ಮಗನಿಗೆ ಟಿಕೆಟ್: ಲೈಂಗಿಕ ಕಿರುಕುಳ ಆರೋಪ ತೀವ್ರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತ ಮಂಡಳಿಯು 2024 ರ ಲೋಕಸಭಾ ಚುನಾವಣೆಯಲ್ಲಿ ಕೈಸರ್‌ಗಂಜ್ ಕ್ಷೇತ್ರದಿಂದ ಬ್ರಿಜ್‌ಭೂಷಣ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಬದಲಾಗಿ ಅವರ ಮಗ ಕರಣ್ ಭೂಷಣ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಕರಣ್ ಭೂಷಣ್ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಸಂಸದರಾಗಿದ್ದರು.

ಇದೀಗ ನ್ಯಾಯಾಲಯದಿಂದ ಸಂಪೂರ್ಣ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಬ್ರಿಜ್‌ಭೂಷಣ್ ಶರಣ್ ಸಿಂಗ್ ಮತ್ತೆ ಮುಂಬರುವ ಚುನಾವಣೆಗಳಲ್ಲಿ ಸಕ್ರಿಯ ರಾಜಕೀಯಕ್ಕೆ ಮರಳಲಿದ್ದಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ. ಈ ತೀರ್ಪು ಸುದೀರ್ಘ ಕಾನೂನು ಹೋರಾಟದ ಪ್ರಮುಖ ಮೈಲಿಗಲ್ಲಾಗಿದ್ದರೂ, ದೂರು ನೀಡಿದ್ದ ಮಹಿಳಾ ಕುಸ್ತಿಪಟುಗಳು ಮತ್ತು ಕ್ರೀಡಾ ವಲಯದಲ್ಲಿ ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ (Appeal) ಸಲ್ಲಿಸುವ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.

ಈ ವಿವಾದದ ನಂತರ ಭಾರತೀಯ ಕುಸ್ತಿ ಫೆಡರೇಶನ್‌ನ ಆಡಳಿತ ಮಂಡಳಿಯಲ್ಲಿ ಜಾಗತಿಕ ಕ್ರೀಡಾ ಸಂಸ್ಥೆಗಳ (UWW) ಮೇಲ್ವಿಚಾರಣೆಯಲ್ಲಿ ಭಾರಿ ಬದಲಾವಣೆಗಳನ್ನು ತರಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version