ಮೊದಲು ಸತ್ಯ ತಿಳೀರಿ, ವಿದ್ಯಾರ್ಥಿಗಳ ಪ್ರವೇಶ, ಅಧ್ಯಾಪಕರ ನೇಮಕದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ದೆಹಲಿ ವಿವಿ ತೀವ್ರ ಆಕ್ಷೇಪ

ಮೊದಲು ಸತ್ಯ ತಿಳೀರಿ, ವಿದ್ಯಾರ್ಥಿಗಳ ಪ್ರವೇಶ, ಅಧ್ಯಾಪಕರ ನೇಮಕದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ದೆಹಲಿ ವಿವಿ ತೀವ್ರ ಆಕ್ಷೇಪ

ನವದೆಹಲಿ, ಮಾರ್ಚ್​ 14: ದೆಹಲಿ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಹಾಗೂ ಅಧ್ಯಾಪಕರ ನೇಮಕದ ಕುರಿತು ರಾಹುಲ್ ಗಾಂಧಿ(Rahul Gandhi) ಹೇಳಿಕೆಗೆ ದೆಹಲಿ ವಿವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮೊದಲು ನಿಖರವಾದ ಸಂಗತಿ ಏನೆಂದು ತಿಳಿಯುವುದು ಬಹಳ ಮುಖ್ಯ ಎಂದು ವಿವಿ ಹೇಳಿದೆ.

ದೆಹಲಿ ವಿಶ್ವವಿದ್ಯಾನಿಲಯವು ಅಧಿಕೃತ ಹೇಳಿಕೆಯಲ್ಲಿ, ವಿದ್ಯಾರ್ಥಿಗಳ ಪ್ರವೇಶವು ಪ್ರಾಥಮಿಕವಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಅಂಕಗಳನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಿದೆ. ಹೆಚ್ಚಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂದರ್ಶನಗಳು ಕಡ್ಡಾಯವಲ್ಲ ಎಂದು ವಿಶ್ವವಿದ್ಯಾನಿಲಯವು ವಿವರಿಸಿದೆ. ಆದ್ದರಿಂದ, ಸಂದರ್ಶನಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶದಿಂದ ಹೊರಗಿಡಲಾಗುತ್ತದೆ ಎಂಬ ಹೇಳಿಕೆ ತಪ್ಪಾಗಿದೆ.

ದೆಹಲಿ ವಿಶ್ವವಿದ್ಯಾಲಯ ಹೇಳಿದ್ದೇನು?
ರಾಹುಲ್ ಗಾಂಧಿಯ ಹೇಳಿಕೆಯು ಬೋಧನಾ ಹುದ್ದೆಗಳು ಅಥವಾ ಇತರ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದ್ದಾಗಿದ್ದರೆ, ಅದು ತಪ್ಪು ಎಂದು ದೆಹಲಿ ವಿಶ್ವವಿದ್ಯಾಲಯವು ಸ್ಪಷ್ಟಪಡಿಸಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಸಾವಿರಾರು ಬೋಧನಾ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಗಳು ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತವೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಸ್ಥಾಪಿತ ನಿಯಮಗಳು ಮತ್ತು ಮಾನದಂಡಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ.

ಇಂತಹ ಹೇಳಿಕೆಗಳು ವಿಶ್ವವಿದ್ಯಾಲಯದ ಪರಿಸರದ ಮೇಲೆ ಪರಿಣಾಮ ಬೀರಬಹುದು ಎಂದು ಡಿಯು ಹೇಳಿದೆ. ಸಂಪೂರ್ಣ ಮಾಹಿತಿಯಿಲ್ಲದೆ ನೀಡುವ ಹೇಳಿಕೆಗಳು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಲ್ಲಿ ತಪ್ಪು ತಿಳಿವಳಿಕೆಗೆ ಕಾರಣವಾಗಬಹುದು ಎಂದು ಸಂಸ್ಥೆ ನಂಬಿದೆ. ಆದ್ದರಿಂದ, ಯಾವುದೇ ಪ್ರಮುಖ ಶಿಕ್ಷಣ ಸಂಸ್ಥೆಯ ಬಗ್ಗೆ ಕಾಮೆಂಟ್ ಮಾಡುವ ಮೊದಲು ಸತ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ.

ಮತ್ತಷ್ಟು ಓದಿ: ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಗಾಂಧಿ​ ಮಹತ್ವದ ಸಂದೇಶ

ರಾಹುಲ್ ಗಾಂಧಿ ಹೇಳಿದ್ದೇನು?

ಇತ್ತೀಚೆಗೆ, ಕಾನ್ಶಿರಾಮ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ದೆಹಲಿ ವಿಶ್ವವಿದ್ಯಾಲಯವನ್ನು ಉಲ್ಲೇಖಿಸುತ್ತಾ, ತಾವು ಅಲ್ಲಿಗೆ ಭೇಟಿ ನೀಡಿರುವುದಾಗಿ ಮತ್ತು ವಿದ್ಯಾರ್ಥಿಗಳನ್ನು ಸಂದರ್ಶನಗಳ ಮೂಲಕ ಹೊರಗಿಡುವುದನ್ನು ಕಣ್ಣಾರೆ ಕಂಡಿರುವುದಾಗಿ ಹೇಳಿದರು. ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸಂದರ್ಶನಗಳಲ್ಲಿ ತಿರಸ್ಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ಪಟ್ಟಿಯನ್ನು ಸಂಗ್ರಹಿಸಿದರೆ, ಅದು ಒಬಿಸಿ ಅಥವಾ ಎಸ್‌ಸಿ ಸದಸ್ಯರನ್ನು ಸೇರಿಸುವುದಿಲ್ಲ, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.

ರಾಹುಲ್ ಗಾಂಧಿಯವರ ಈ ಹೇಳಿಕೆಯ ನಂತರ, ದೆಹಲಿ ವಿಶ್ವವಿದ್ಯಾಲಯವು ಪ್ರತಿಕ್ರಿಯಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿತು ಮತ್ತು ವಿಶ್ವವಿದ್ಯಾಲಯದ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಮತ್ತು ನಿಯಮಗಳ ಪ್ರಕಾರವಾಗಿದೆ ಎಂದು ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Cylinder Price Hike: 1700 ರೂ. ಬೆಲೆಯ ಸಿಲಿಂಡರ್ 5000 ರೂ.ಗೆ ಮಾರಾಟ!

ಬೆಂಗಳೂರು, ಮಾರ್ಚ್​ 14: ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜಧಾನಿಯ ಹೋಟೆಲ್‌ಗಳಿಗೂ ತಟ್ಟಿದೆ. ಸಿಲಿಂಡರ್‌ಗಳ ಕೊರತೆಯಿಂದ ಕಾಳ ಸಂತೆಯಲ್ಲಿ 1,700 ರೂ. ಬೆಲೆಯ ಕಮರ್ಷಿಯಲ್ ಸಿಲಿಂಡರ್‌ಗಳು 5,000 ದಿಂದ 5,500 ರೂ.ಗೆ ಮಾರಾಟವಾಗುತ್ತಿವೆ. ಡಿಸ್ಟ್ರಿಬ್ಯೂಟರ್‌ಗಳು ಮತ್ತು ಕೆಲ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಹೋಟೆಲ್ ಮಾಲೀಕರನ್ನು ಸುಲಿಗೆ ಮಾಡುತ್ತಿವೆ ಎನ್ನಲಾಗುತ್ತಿದೆ.

ಈ ಸಂಕಷ್ಟದಿಂದ ಹೋಟೆಲ್ ಮಾಲೀಕರು ತಮ್ಮ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಮತ್ತು ಗ್ರಾಹಕರಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸಿಲಿಂಡರ್‌ಗಳನ್ನು ದುಬಾರಿ ಬೆಲೆಗೆ ಖರೀದಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಹೋಟೆಲ್ ಮೆನುಗಳಲ್ಲಿನ ತಿಂಡಿಗಳ ದರ ಏರಿಕೆಯಾಗಿದೆ. ಈ ಅಕ್ರಮ ಮಾರಾಟದ ಮೇಲೆ ಕಡಿವಾಣ ಹಾಕಲು ಮತ್ತು ಹೋಟೆಲ್‌ಗಳಿಗೆ ಸಮಾನವಾಗಿ ಸಿಲಿಂಡರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಐಪಿಎಲ್​ಗೆ ಟಕ್ಕರ್: ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ

ಪಾಕಿಸ್ತಾನ್ ಸೂಪರ್ ಲೀಗ್​ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿ ಪಿಎಸ್​ಎಲ್​ ಟೂರ್ನಿ ಶುರುವಾಗುವುದು ಮಾರ್ಚ್ 26 ರಿಂದ. ಅಂದರೆ ಐಪಿಎಲ್ ಆರಂಭಕ್ಕೂ ಎರಡು ದಿನ ಮೊದಲು ಪಿಎಸ್​ಎಲ್​ ಟೂರ್ನಿಗೆ ಚಾಲನೆ ನೀಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

ಅಷ್ಟೇ ಅಲ್ಲದೆ ಐಪಿಎಲ್​ನ ಪ್ರತಿ ಪಂದ್ಯಗಳಿಗೂ ಅರ್ಧಗಂಟೆ ಮುಂಚೆಯೇ ಪಾಕಿಸ್ತಾನ್ ಸೂಪರ್ ಲೀಗ್​ನ ಮ್ಯಾಚ್​ಗಳು ಶುರುವಾಗಲಿದೆ. ಅಂದರೆ ಐಪಿಎಲ್​ನ ಮೊದಲ ಪಂದ್ಯ 3.30 ಆರಂಭವಾದರೆ, ಅತ್ತ ಪಿಎಸ್​ಎಲ್​ನ ಮೊದಲ ಪಂದ್ಯ ಭಾರತೀಯ ಕಾಲಮಾನ 3 ಗಂಟೆಗೆ ಶುರುವಾಗಲಿದೆ. ಇನ್ನು ದ್ವಿತೀಯ ಪಂದ್ಯ 7 ಗಂಟೆಗೆ ಆರಂಭವಾಗಲಿದೆ. ಇತ್ತ ಐಪಿಎಲ್​ನ ರಾತ್ರಿಯ ಮ್ಯಾಚ್​ಗಳು ಶುರುವಾಗುವುದು 7.30 ಕ್ಕೆ.

ಇದನ್ನೂ ಓದಿ:

ಅಂದರೆ ಇಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ ಜೊತೆ ಪೈಪೋಟಿ ನೀಡಲು ಪಾಕಿಸ್ತಾನ್ ಸೂಪರ್ ಲೀಗ್ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಅದರಲ್ಲೂ ಐಪಿಎಲ್​ನಲ್ಲಿ ಅವಕಾಶ ವಂಚಿತರಾಗಿದ್ದ 47 ವಿದೇಶಿ ಆಟಗಾರರಿಗೆ ಈ ಬಾರಿ ಪಿಎಸ್​ಎಲ್​ನಲ್ಲಿ ಚಾನ್ಸ್ ನೀಡಲಾಗಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಜೊತೆ ಪೈಪೋಟಿಗಿಳಿಯಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ:

  • ಮಾರ್ಚ್ 26 – ಪಂದ್ಯ 1 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
  • ಮಾರ್ಚ್ 27  ಪಂದ್ಯ 2 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಮಾರ್ಚ್ 28 – ಪಂದ್ಯ 3 – ಪೇಶಾವರ್ ಝಲ್ಮಿ vs ರಾವಲ್ಪಿಂಡಿ ರೈಡರ್ಸ್ – ಪೇಶಾವರ್ – ಮಧ್ಯಾಹ್ನ
  • ಮಾರ್ಚ್ 28 – ಪಂದ್ಯ 4 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ಮುಲ್ತಾನ್ – ರಾತ್ರಿ
  • ಮಾರ್ಚ್ 29 – ಪಂದ್ಯ 5 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಮಾರ್ಚ್ 29 – ಪಂದ್ಯ 6 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಮಾರ್ಚ್ 31 – ಪಂದ್ಯ 7 – ಇಸ್ಲಾಮಾಬಾದ್ ಯುನೈಟೆಡ್ vs ಪೇಶಾವರ್ ಝಲ್ಮಿ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 1 – ಪಂದ್ಯ 8 – ಮುಲ್ತಾನ್ ಸುಲ್ತಾನ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 2 – ಪಂದ್ಯ 9 – ಇಸ್ಲಾಮಾಬಾದ್ ಯುನೈಟೆಡ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ರಾವಲ್ಪಿಂಡಿ – ದಿನ
  • ಏಪ್ರಿಲ್ 2 – ಪಂದ್ಯ 10 – ರಾವಲ್ಪಿಂಡಿ ರೈಡರ್ಸ್ vs ಕರಾಚಿ ಕಿಂಗ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 3 – ಪಂದ್ಯ 11 – ಮುಲ್ತಾನ್ ಸುಲ್ತಾನ್ಸ್ vs ಲಾಹೋರ್ ಖಲಂದರ್ಗಳು – ಮುಲ್ತಾನ್ – ರಾತ್ರಿ
  • ಏಪ್ರಿಲ್ 5 – ಪಂದ್ಯ 12 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 6 – ಪಂದ್ಯ 13 – ಮುಲ್ತಾನ್ ಸುಲ್ತಾನ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 7  – ಪಂದ್ಯ 14 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 8 – ಪಂದ್ಯ 15 – ಹೈದರಾಬಾದ್ ಕಿಂಗ್ಸ್‌ಮೆನ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
  • ಏಪ್ರಿಲ್ 9 – ಪಂದ್ಯ 16 – ಲಾಹೋರ್ ಖಲಂದರ್ಗಳು vs ಇಸ್ಲಾಮಾಬಾದ್ ಯುನೈಟೆಡ್ – ಫೈಸಲಾಬಾದ್ – ಮಧ್ಯಾಹ್ನ
  • ಏಪ್ರಿಲ್ 9 – ಪಂದ್ಯ 17 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
  • ಏಪ್ರಿಲ್ 10 – ಪಂದ್ಯ 18 – ಕರಾಚಿ ಕಿಂಗ್ಸ್ vs ಲಾಹೋರ್ ಖಲಂದರ್ಗಳು – ಕರಾಚಿ – ರಾತ್ರಿ
  • ಏಪ್ರಿಲ್ 11 – ಪಂದ್ಯ 19 – ಪೇಶಾವರ್ ಝಲ್ಮಿ vs ಹೈದರಾಬಾದ್ ಕಿಂಗ್ಸ್‌ಮೆನ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 12 – ಪಂದ್ಯ 20 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಕರಾಚಿ – ರಾತ್ರಿ
  • ಏಪ್ರಿಲ್ 12 – ಪಂದ್ಯ 21 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 15 – ಪಂದ್ಯ 22 – ಹೈದರಾಬಾದ್ ಕಿಂಗ್ಸ್‌ಮೆನ್ vs ಇಸ್ಲಾಮಾಬಾದ್ ಯುನೈಟೆಡ್ – ಕರಾಚಿ – ರಾತ್ರಿ
  • ಏಪ್ರಿಲ್ 16 – ಪಂದ್ಯ 23 – ಪೇಶಾವರ್ ಝಲ್ಮಿ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 16 – ಪಂದ್ಯ 24 – ಹೈದರಾಬಾದ್ ಕಿಂಗ್ಸ್‌ಮೆನ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ಮಧ್ಯಾಹ್ನ
  • ಏಪ್ರಿಲ್ 17 – ಪಂದ್ಯ 25 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಕರಾಚಿ – ರಾತ್ರಿ
  • ಏಪ್ರಿಲ್ 18 – ಪಂದ್ಯ 26 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್ಸ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 19 – ಪಂದ್ಯ 27 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 19 – ಪಂದ್ಯ 28 – ಲಾಹೋರ್ ಖ್ಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 21 – ಪಂದ್ಯ 29 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 21 – ಪಂದ್ಯ 30 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಲಾಹೋರ್ – ರಾತ್ರಿ
  • ಏಪ್ರಿಲ್ 22 – ಪಂದ್ಯ 31 – ರಾವಲ್ಪಿಂಡಿ ರೈಡರ್ಸ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 22 – ಪಂದ್ಯ 32 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 23 – ಪಂದ್ಯ 33 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 23 – ಪಂದ್ಯ 34 – ರಾವಲ್ಪಿಂಡಿ ರೈಡರ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ಮಧ್ಯಾಹ್ನ
  • ಏಪ್ರಿಲ್ 24 – ಪಂದ್ಯ 35 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಏಪ್ರಿಲ್ 24 – ಪಂದ್ಯ 36 – ಇಸ್ಲಾಮಾಬಾದ್ ಗ್ಲಾಡಿಯೇಟರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 25 – ಪಂದ್ಯ 37 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 25 – ಪಂದ್ಯ 38 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
  • ಏಪ್ರಿಲ್ 26 – ಪಂದ್ಯ 39 – ರಾವಲ್ಪಿಂಡಿ ರೈಡರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ಮಧ್ಯಾಹ್ನ
  • ಏಪ್ರಿಲ್ 26 – ಪಂದ್ಯ 40 – ಇಸ್ಲಾಮಾಬಾದ್ ಯುನೈಟೆಡ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 28 – ಪಂದ್ಯ 41 – ಅರ್ಹತಾ ಸುತ್ತು – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 29 – ಪಂದ್ಯ 42 – ಎಲಿಮಿನೇಟರ್ 1 – ಲಾಹೋರ್ – ರಾತ್ರಿ
  • ಮೇ 1 – ಪಂದ್ಯ 43 – ಎಲಿಮಿನೇಟರ್ 2 – ಲಾಹೋರ್ – ರಾತ್ರಿ
  • ಮೇ 3 – ಪಂದ್ಯ 44 – ಫೈನಲ್ – ಲಾಹೋರ್

 

Source link

ಡಿಸಿ, ಎಡಿಸಿ ಡಿಜಿಟಲ್ ಸಹಿ ದುರುಪಯೋಗ! ಸಿಬ್ಬಂದಿ ಸೇರಿ 6 ಜನರ ಮೇಲೆ ಎಫ್​ಐಆರ್

ಚಿತ್ರದುರ್ಗ, ಮಾರ್ಚ್ 14: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಲ್ಲಿ ಚಿತ್ರದುರ್ಗ (Chitradurga) ನಗರಾಭಿವೃದ್ಧಿ ಕೋಶದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಕೆ!

ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಟಿ ಲೆವಲ್ ಟೆಕ್ನಿಕಲ್ ಸೆಲ್ (CLTC) ಸಿಬ್ಬಂದಿಗಳ ವೇತನದ ಹೆಸರಿನಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಈ ಅಕ್ರಮ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮೆಹಬೂಬ್ ಭಾಷಾ ಹಾಗೂ VMH ಎಂಟರ್‌ಪ್ರೈಸಸ್‌ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಮಗುವಿನ ಮುಖ ನೋಡುವ ಮೊದಲೇ ಕಣ್ಮುಚ್ಚಿದ ಮಹಿಳೆ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?

ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ. ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಿಗ್ನೇಚರ್ ಸೆರ್ಟಿಫಿಕೆಟ್ (DSC) ಕೀ ಕಳವು ಮಾಡಿ ದುರುಪಯೋಗಪಡಿಸಿಕೊಂಡಿರುವ ಆರೋಪವೂ ಹೊರಬಂದಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ

ವಡಗೇರ, ಮಾ.14: ತನ್ನ ಪಾಡಿಗೆ ತಾನು ಜಮೀನಿನಲ್ಲಿ ಮನೆ ಮಾಡಿಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧನೊಬ್ಬನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿಯ ವಡಗೇರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. 76 ವರ್ಷದ ಹಂಪಣ್ಣ ಸಜ್ಜನ ಕೊಲೆಯಾದ ದುರ್ದೈವಿ. ಹಂಪಣ್ಣ ಸಜ್ಜನ ಅವರಿಗೆ ಮೂವರು ಗಂಡು ಮಕ್ಕಳಿದ್ದು, 15 ವರ್ಷಗಳ ಹಿಂದೆಯೇ ಆಸ್ತಿ ಹಂಚಿಕೆ ಮಾಡಿ ತನಗಾಗಿ 12 ಎಕರೆ ಜಮೀನು ಉಳಿಸಿಕೊಂಡಿದ್ದರು. 12 ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ, ಮಕ್ಕಳು ಗ್ರಾಮದಲ್ಲಿದ್ದರೂ ಹಂಪಣ್ಣ ಜಮೀನಿನಲ್ಲಿ ಪುಟ್ಟ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ವಾಸವಿದ್ದರು.

ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಹಂಪಣ್ಣ ಮಲಗಿದ್ದಾಗ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಗ್ರಾಮಕ್ಕೆ ಹಾಲು ಪಡೆಯಲು ವೃದ್ಧ ಬಾರದಿದ್ದಾಗ ಅನುಮಾನಗೊಂಡು ಜಮೀನಿಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ವಡಗೇರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಪ್ರಾಥಮಿಕ ತನಿಖೆಯ ವೇಳೆ, ಹಂಪಣ್ಣ ಅವರು ಪರ ಸ್ತ್ರೀಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Jitesh Sharma: ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು!

ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಜಿತೇಶ್ ಶರ್ಮಾ ಕಾಣಿಸಿಕೊಂಡಿರಲಿಲ್ಲ. ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ಭಾಗವಾಗಿದ್ದ ಜಿತೇಶ್ ಅವರನ್ನು ಏಕಾಏಕಿ ತಂಡದಿಂದ ಕೈ ಬಿಡಲಾಗಿತ್ತು. ಹೀಗೆ ತಂಡದಿಂದ ಕೈ ಬಿಟ್ಟಿದ್ದರ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಮನಬಿಚ್ಚಿ ಮಾತನಾಡಿದ್ದಾರೆ.

ಭಾರತ ತಂಡದಿಂದ, ಅದರಲ್ಲೂ ಟಿ20 ವಿಶ್ವಕಪ್​ನಿಂದ ನನ್ನನ್ನು ಕೈ ಬಿಟ್ಟಿದ್ದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಏಕೆಂದರೆ ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ಫೆಬ್ರವರಿ 1 ರಂದು ನನ್ನ ತಂದೆ ತೀರಿಕೊಂಡಿದ್ದಾರೆ. ನಾನು ತಂಡಕ್ಕೆ ಆಯ್ಕೆಯಾಗದ ಕಾರಣ, ನನಗೆ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಇರಲು ಸಾಧ್ಯವಾಯಿತು. “ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು” ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.

ಆರಂಭದಲ್ಲಿ ತಂಡದಿಂದ ಹೊರಬಿದ್ದಾಗ ಬೇಸರವಾಗಿದ್ದರೂ, ತಂದೆಯ ಸಾವಿನ ನಂತರ ಆ ನೋವು ಮಾಯವಾಯಿತು. ಏಕೆಂದರೆ ಒಬ್ಬ ಮಗನಾಗಿ ಅವರ ಕೊನೆಯ ಕ್ಷಣಗಳಲ್ಲಿ ಅವರ ಜೊತೆಗಿದ್ದುದು ನನಗೆ ತೃಪ್ತಿ ತಂದಿದೆ. ಹಾಗಾಗಿ ವಿಶ್ವಕಪ್ ತಪ್ಪಿದ್ದಕ್ಕೆ ನನಗೆ ಈಗ ಯಾವುದೇ ವಿಷಾದವಿಲ್ಲ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ಜಿತೇಶ್ ಶರ್ಮಾ ಅವರ ತಂದೆ ಮೋಹನ್ ಶರ್ಮಾ ಅವರು ಸುದೀರ್ಘ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ತಿಂಗಳು ಒಂದನೇ ತಾರೀಖಿನಂದು ನಿಧನರಾಗಿದ್ದರು. ಆ ಸಮಯದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ನಡೆಯುತ್ತಿತ್ತು. ಜಿತೇಶ್ ಅವರು ತಂಡದಲ್ಲಿ ಸ್ಥಾನ ಪಡೆಯದಿದ್ದಾಗ ಆರಂಭದಲ್ಲಿ ನಿರಾಸೆಗೊಂಡಿದ್ದರು.

ಆದರೆ, ತಂದೆಯ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ, ಅವರು ತಂಡದಲ್ಲಿಲ್ಲದ ಕಾರಣದಿಂದಲೇ ತಮ್ಮ ತಂದೆಯ ಕೊನೆಯ 7 ದಿನಗಳ ಕಾಲ ಅವರ ಜೊತೆಗಿರಲು ಸಾಧ್ಯವಾಯಿತು ಎಂದು ಜಿತೇಶ್ ಶರ್ಮಾ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಇನ್ನು ತಂದೆಯ ನಿಧನದ ನಂತರ, ಮನೆಯ ಹಿರಿಯ ಮಗನಾಗಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ಜಿತೇಶ್ ಶರ್ಮಾ ತಿಳಿಸಿದ್ದಾರೆ. ಕ್ರಿಕೆಟ್ ಜೀವನದ ಏರಿಳಿತಗಳಿಗಿಂತ ಕುಟುಂಬದ ಸಾಮೀಪ್ಯ ದೊಡ್ಡದು ಎಂಬುದು ಅವರ ನಿಲುವು. ಇದೀಗ ಸಂಪೂರ್ಣ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಅವರೊಂದಿಗೆ ನಾನು ಸಮಯ ಕಳೆಯಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!

ಇದೀಗ ಆರ್​ಸಿಬಿ ಕ್ಯಾಂಪ್ ಸೇರಿರುವ ಜಿತೇಶ್ ಶರ್ಮಾ ಮುಂಬರುವ ಐಪಿಎಲ್​ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಐಪಿಎಲ್ 2026 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ ಉಳಿಸಿಕೊಡುವ ಭರವಸೆ ನೀಡಿದ್ದಾರೆ.

 

Source link

‘ಶ್ರೀ ಗಂಧದ ಗುಡಿ’ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ ಬುರ್ಲಿ

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಸಂಜನಾ ಬುರ್ಲಿ ಅವರು ಹೊರ ಬಂದಿದ್ದಾರೆ. ಅವರು ಧಾರಾವಾಹಿಯನ್ನು ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ನಾನು ವಿವಾಹ ಆಗುತ್ತಿರುವ ಕಾರಣದಿಂದ ಧಾರಾವಾಹಿಯಿಂದ ಹೊರ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ. ಹೊಸ ಪಾತ್ರಧಾರಿ, ಸ್ನೇಹಾ ಮಂಜುನಾಥ್​​ಗೂ ಪ್ರೀತಿ ತೋರಿಸುವಂತೆ ಅವರು ಕೋರಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಚುನಾವಣಾ ಆಯೋಗ ಮಾರ್ಚ್​ 16ರಂದು ಪಶ್ಚಿಮ ಬಂಗಾಳ ಚುನಾವಣಾ ದಿನಾಂಕ ಘೋಷಿಸುವ ಸಾಧ್ಯತೆ

ಕೋಲ್ಕತ್ತಾ, ಮಾರ್ಚ್​ 14: ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ  ವಿಧಾನಸಭಾ ಚುನಾವಣಾ( Assembly Election) ದಿನಾಂಕವನ್ನು ಮಾರ್ಚ್​ 16ರಂದು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಮಾರ್ಚ್ 14 ರಂದು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ‘ಪರಿವರ್ತನ್ ಯಾತ್ರೆ’ಯ ಸಮಾರೋಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಾದ ಎರಡು ದಿನಗಳ ನಂತರ, ಅಂದರೆ ಮಾರ್ಚ್ 16 ರಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯುವ ಸಾಧ್ಯತೆಯಿದೆ. ಮೊದಲ ಹಂತವು ಎರಡನೇ ವಾರದ ಕೊನೆಯಲ್ಲಿ ಅಥವಾ ಏಪ್ರಿಲ್ ಮೂರನೇ ವಾರದಲ್ಲಿ ನಡೆಯಬಹುದು. ಬಂಗಾಳವನ್ನು ಹೊರತುಪಡಿಸಿ, ಆಯೋಗವು ಇತರ ನಾಲ್ಕು ರಾಜ್ಯಗಳಾದ ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಅದೇ ದಿನ ಘೋಷಿಸಬಹುದು.

ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜೊತೆಗೆ, ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸೇರಿದಂತೆ ಹೆಚ್ಚಿನ ರಾಜಕೀಯ ಪಕ್ಷಗಳು, ಎರಡು ದಿನಗಳ ರಾಜ್ಯ ಭೇಟಿಯ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ನೇತೃತ್ವದ ಇಸಿಐನ ಪೂರ್ಣ ಪೀಠವನ್ನು ಒಂದು ಹಂತದಲ್ಲಿ ಅಥವಾ ಗರಿಷ್ಠ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿವೆ.

ಮತ್ತಷ್ಟು ಓದಿ: New Year 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀಬಹುದು?

ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವುದರಿಂದ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರವನ್ನು ತಡೆಯಲು ಸಹಾಯವಾಗುತ್ತದೆ, ಏಕೆಂದರೆ ದುಷ್ಕರ್ಮಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿ ಗೊಂದಲ ಸೃಷ್ಟಿಸಲು ಸಮಯ ಪಡೆಯುವುದಿಲ್ಲ.

ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಅಂಶವನ್ನು ಸಹ ಪರಿಗಣಿಸಲಾಗುವುದು ಎಂದು ರಾಷ್ಟ್ರೀಯ ಚುನಾವಣಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ, ಈ 60 ಲಕ್ಷ ಮತದಾರರಲ್ಲಿ ಕೇವಲ 10 ಲಕ್ಷ ಪ್ರಕರಣಗಳನ್ನು ಮಾತ್ರ ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳು ವಿಲೇವಾರಿ ಮಾಡಿದ್ದಾರೆ. ವಿಲೇವಾರಿಯಾದ 10 ಲಕ್ಷ ಪ್ರಕರಣಗಳಲ್ಲಿ, ಸುಮಾರು 3.5 ರಿಂದ 4 ಲಕ್ಷ ಮತದಾರರ ಮತದಾನದ ಹಕ್ಕನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಡಬ್ಲ್ಯೂಬಿಸಿಇಒ) ಮನೋಜ್ ಅಗರ್ವಾಲ್ ಅವರ ಕಚೇರಿಯ ಅಧಿಕಾರಿಗಳ ಒಂದು ವಿಭಾಗವು, ಉಳಿದ 50 ಲಕ್ಷ ಮತದಾರರ ದಾಖಲೆಗಳು ಮತ್ತು ಇತರ ವಿವರಗಳನ್ನು ಸುಮಾರು 800 ನ್ಯಾಯಾಂಗ ಅಧಿಕಾರಿಗಳು 20 ರಿಂದ 25 ದಿನಗಳ ಸೀಮಿತ ಸಮಯದೊಳಗೆ, ಅಂದರೆ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕದವರೆಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ಅವರ ಪ್ರಕರಣಗಳನ್ನು ತೆರವುಗೊಳಿಸುವುದು ಕಷ್ಟಕರ ಎಂದು ಭಾವಿಸಿದ್ದಾರೆ.

ನ್ಯಾಯಾಂಗ ಅಧಿಕಾರಿಗಳಿಂದ ಮತದಾನದ ಹಕ್ಕು ತಿರಸ್ಕರಿಸಲ್ಪಟ್ಟ ಜನರು ಮುಂದಿನ ದಿನಗಳಲ್ಲಿ ಪೂರಕ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಅಳಿಸುವುದನ್ನು ಪ್ರಶ್ನಿಸಿ ನ್ಯಾಯಮಂಡಳಿಯ ಮೆಟ್ಟಿಲೇರಿದರೆ ಈ ಪ್ರಕ್ರಿಯೆಯು ಮತ್ತಷ್ಟು ಅಪಾಯಕ್ಕೆ ಸಿಲುಕಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Bengaluru Air Quality: ಮೈಸೂರಿನಲ್ಲಿ ಮತ್ತಷ್ಟು ಹದಗೆಟ್ಟ ಏರ್ ಕ್ವಾಲಿಟಿ

ಬೆಂಗಳೂರು, ಮಾರ್ಚ್​ 14: ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 155ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –155
  • ಮಂಗಳೂರು-157
  • ಮೈಸೂರು –160
  • ಬೆಳಗಾವಿ – 128
  • ಕಲಬುರ್ಗಿ-151
  • ಶಿವಮೊಗ್ಗ – 155
  • ಬಳ್ಳಾರಿ – 168
  • ಹುಬ್ಬಳ್ಳಿ- 154
  • ಉಡುಪಿ –161
  • ವಿಜಯಪುರ –156

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಜಯ್ ಹೆಸರು ಕೈ ಬಿಡಲು ನಿರ್ಧರಿಸಿದ ಮಗ; ದೊಡ್ಡ ನಿರ್ಧಾರ

ದಳಪತಿ ವಿಜಯ್ ಅವರು (Thalapathy Vijay) ಜೇಸನ್ ಸಂಜಯ್ ಅವರು ಈ ವರ್ಷ ಸಿನಿಮಾ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳು, ಹೀರೋ ಆಗುವ ಪ್ರಯತ್ನ ಮಾಡುತ್ತಾರೆ. ಆದರೆ, ವಿಜಯ್ ಪುತ್ರ ಬೇರೆಯದೇ ರೀತಿಯ ಪ್ಲ್ಯಾನ್ ಹೊಂದಿದ್ದಾರೆ. ಅವರು ತಮ್ಮ ಜೊತೆ ತಂದೆ ಹೆಸರು ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಬದಲಿಗೆ ತಾಯಿ ಹೆಸರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ಅಲ್ಲಿದ್ದಾರೆ.

ದಳಪತಿ ವಿಜಯ್ ಅವರು ನಟಿಯ ಜೊತೆಗೆ ಅಫೇರ್ ಹೊಂದಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದರು. ಈ ಆರೋಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅದು ತ್ರಿಷಾ ಇರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಈ ಚರ್ಚೆಯ ಮಧ್ಯೆ ದಳಪತಿ ವಿಜಯ್ ಅವರನ್ನು ಇನ್​​ಸ್ಟಾಗ್ರಾಮ್ ಅಲ್ಲಿ ಜೇಸನ್ ಅನ್​​ಫಾಲೋ ಮಾಡಿದ್ದಾರೆ. ಈಗ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಸಿಗ್ಮಾ’ ಹೆಸರಿನ ಸಿನಿಮಾನ ಜೇಸನ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿ ಸಿನಿಮಾ ರಿಲೀಸ್ ಆಗುವಾಗ ನಿರ್ದೇಶಕನ ಹೆಸರನ್ನು ದೊಡ್ಡದಾಗಿ ಹಾಕಲಾಗುತ್ತದೆ. ಈ ಮೊದಲು ಜೇಸನ್ ಅವರು ‘ಜೇಸನ್ ಸಂಜಯ್ ವಿ’ ಎಂದು ಇಟ್ಟುಕೊಳ್ಳಲು ನಿರ್ಧರಿಸಿದ್ದರು. ಆದರೆ, ಸದ್ಯದ ಬೆಳವಣಿಗೆಯಿಂದ ಅವರಿಗೆ ಬೇಸರ ಆಗಿದೆ. ಹೀಹಾಗಿ, ವಿ ಬದಲು ಎಸ್​ (ತಾಯಿ ಸಂಗೀತಾ) ಸೇರಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸದ್ಯ ಈ ವಿಷಯ ಇನ್ನೂ ಅಧಿಕೃತ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ವಿಷಯ ತಿಳಿಯಲಿದೆ.

ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ವಿಜಯ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್​ದಾರೆ. ಅವರು ಈಗ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ಸಂಗೀತಾ ಹಾಗೂ ವಿಜಯ್ 1999ರಲ್ಲಿ ವಿವಾಹ ಆದರು. ಈ ದಂಪತಿಗೆ ಜೇಸನ್ ಹಾಗೂ ದಿವ್ಯಾ ಸಾಶಾ ಹೆಸರಿನ ಮಕ್ಕಳಿದ್ದಾರೆ. ಸಂಜಯ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಆ್ಯಕ್ಷನ್ ಅಡ್ವೆಂಚರ್ ಕಾಮಿಡಿ ಶೈಲಿಯಲ್ಲಿ ಮೂಡಿಬರುತ್ತಿದೆ. ಲೈಕಾ ಪ್ರೊಡಕ್ಷನ್ ಇದನ್ನು ನಿರ್ಮಿಸುತ್ತಿದೆ. ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version