ಹಿಂದಿನ ತಪ್ಪು ನಿರ್ಧಾರಗಳಿಂದ ಪಾಠ ಕಲಿತ ‘ಕೈ’ ಕಮಾಂಡ್: ಕರ್ನಾಟಕ ವಿಷಯದಲ್ಲಿ ಎಚ್ಚರಿಕೆಯ ನಡೆ
ಬೆಂಗಳೂರು, ಮೇ 28: ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಡವಿದ್ದ ಕಾಂಗ್ರೆಸ್ (Congress) ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ನಲ್ಲಿ ತಲೆದೋರಿದ್ದ ಅಧಿಕಾರ ಹಂಚಿಕೆಯ ಕಗ್ಗಂಟನ್ನು ಯಶಸ್ವಿಯಾಗಿ ಬಿಡಿಸಿದೆ. ಸಿಎಂ ಬದಲಾವಣೆ ಎಂಬ ಬೆಟ್ಟದಂತ ಸಮಸ್ಯೆ ಯನ್ನು ವರಿಷ್ಠರು ಯಶ್ವಸಿಯಾಗಿ ನಿರ್ವಹಿಸಿದೆ. ಈ ಹಿಂದೆ ವಿವಿಧ ರಾಜ್ಯ್ಲಲ್ಲಿ ನಾಯಕರ ತಪ್ಪು ನಿರ್ಧಾರದಿಂದ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಿತ್ತು. ಹಲವು ರಾಜ್ಯಗಳೇ ಕಾಂಗ್ರೆಸ್ ಕೈತಪ್ಪಿ ಹೋಗಿತ್ತು ಎನ್ನುವುದು ಇತಿಹಾಸ. ಪಂಜಾಬ್ನಲ್ಲಿ ಅಮರಿಂದರ್ ಸಿಂಗ್ vs ಸಿಧು ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್…