ಬೆಂಗಳೂರು, ಮಾರ್ಚ್ 13: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಬಗ್ಗೆ ಸ್ವಪಕ್ಷ ಶಾಸಕ ಇಕ್ಬಾಲ್ ಹುಸೇನ್ ನೀಡಿದ್ದ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಇಕ್ಬಾಲ್ ಹುಸೇನ್ ಮಾತ್ರವಲ್ಲ, ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಚರ್ಚಿಸಬಾರದು. ಯಾವುದೇ ಸಮಸ್ಯೆಗಳಿದ್ದರೂ, ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಮಾಧ್ಯಮಗಳ ಮುಂದೆ ಮಾತನಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಸಮಾಧಾನ ತಂದಿಲ್ಲ. ಆಯವ್ಯಯ ಮಂಡನೆಗೂ ಮುನ್ನವೇ ಸಿಎಂ ಭೇಟಿಯಾಗಿ ಕ್ಷೇತ್ರಗಳ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೆ. ಹೀಗಾಗಿ ಹೆಚ್ಚಿನ ಅನುದಾನದ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದರು.
ಗುವಾಹಟಿ, ಮಾರ್ಚ್ 13: ರೈತರಿಗೆಂದು ಕೇಂದ್ರ ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan scheme) 22ನೇ ಕಂತಿನ ಹಣ ಇಂದು ಶುಕ್ರವಾರ ಬಿಡುಗಡೆ ಆಗುತ್ತಿದೆ. ಅಸ್ಸಾಮ್ ರಾಜಧಾನಿಯಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಪ್ರಧಾನಿಗಳು ಹಣ ಬಿಡುಗಡೆ ಮಾಡಲಿದ್ದಾರೆ. 9 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ ಹಣ ನೇರವಾಗಿ ಜಮೆಯಾಗಲಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ 2025ರ ನವೆಂಬರ್ 19ರಂದು 21ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9 ಕೋಟಿಗೂ ಅಧಿಕ ರೈತರಿಗೆ ಒಟ್ಟು 18,000 ಕೋಟಿ ರೂ ಹಣವನ್ನು ನೇರವಾಗಿ ಕೊಡಲಾಗಿತ್ತು. ಅದಕ್ಕೂ ಹಿಂದಿನ 20ನೇ ಕಂತಿನ ಹಣವನ್ನು ಆಗಸ್ಟ್ ತಿಂಗಳಲ್ಲಿ 9.8 ಕೋಟಿ ರೈತರಿಗೆ ನೀಡಲಾಗಿತ್ತು.
ಕಳೆದ ಮೂರು ತಿಂಗಳಲ್ಲಿ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮರು-ಕೆವೈಸಿ ಮಾಡಲು ತಿಳಿಸಿತ್ತು. ಕೆವೈಸಿ ಅಪ್ಡೇಟ್ ಮಾಡಲು ಮೂರ್ನಾಲ್ಕು ಮಾರ್ಗಗಳ ಆಫರ್ ಕೊಡಲಾಗಿತ್ತು. ಸಮೀಪದ ರೈತ ಸಂಪರ್ಕ ಕೇಂದ್ರ, ಪಿಎಂ ಕಿಸಾನ್ ಮೊಬೈಲ್ ಆ್ಯಪ್, ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಕೆವೈಸಿ ಅಪ್ಡೇಟ್ ಮಾಡಬಹುದು. ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಈ ಹಿಂದೆ ಎಲ್ಲಾ ಕಂತುಗಳನ್ನು ಪಡೆದಿರುವ ಫಲಾನುಭವಿಗಳು ರೀ-ಕೆವೈಸಿ ಮಾಡದೇ ಇದ್ದರೆ 22ನೇ ಕಂತಿನ ಹಣ ಸಿಗುವುದಿಲ್ಲ. ವರದಿಗಳ ಪ್ರಕಾರ, ಈ ಬಾರಿ 22ನೇ ಕಂತಿನ ಹಣದಿಂದ ವಂಚಿತರಾಗುವ ಫಲಾನುಭವಿಗಳ ಸಂಖ್ಯೆ ಹಲವು ಲಕ್ಷಗಳೆನ್ನಲಾಗಿದೆ.
ಈ ಕೆಳಗಿನ ಫಲಾನುಭವಿಗಳಿಗೆ ಸಿಗೋದಿಲ್ಲ ಹಣ
ಇಕೆವೈಸಿ ಅಪ್ಡೇಟ್ ಮಾಡದಿದ್ದವರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಫಲಾನುಭವಿಗಳ ಕುಟುಂಬದಲ್ಲಿ ಯಾರಾದರೂ ಕೂಡ ಸರ್ಕಾರಿ ಅಧಿಕಾರಿಯೋ, ಶಾಸಕರೋ, ಸಂಸದರೋ, ಜಿಪಂ ಸದಸ್ಯರೋ, ವೃತ್ತಿಪರರೋ, ಐಟಿ ಪಾವತಿದಾರರೋ ಇದ್ದರೆ ಅಂಥವರು ರೈತರಾಗಿದ್ದಾಗ್ಯೂ ಯೋಜನೆಗೆ ಅರ್ಹರಿರುವುದಿಲ್ಲ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ 2019ರ ಫೆಬ್ರುವರಿ 1ರ ನಂತರ ಜಮೀನು ಮಾಲಕತ್ವ ಪಡೆದ ರೈತರಿಗೆ ಪಿಎಂ ಕಿಸಾನ್ ಹಣ ಸಿಕ್ಕೋದಿಲ್ಲ. ಒಂದೇ ಕುಟುಂಬದ ಇಬ್ಬರು ಸದಸ್ಯರು ಪ್ರತ್ಯೇಕ ಜಮೀನು ಮಾಲಕತ್ವ ಹೊಂದಿದ್ದರೂ ಒಬ್ಬರು ಮಾತ್ರವೇ ಯೋಜನೆಗೆ ಅರ್ಹರಾಗಿರುವುದು.
ಬೆಂಗಳೂರು, ಮಾರ್ಚ್ 13: ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್ನ ಕೊನೆಯಲ್ಲಿ ಜಿಎಸ್‌ಟಿ (GST) ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial cylinder) ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ (Gas Fee)’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ.
ಚೆನ್ನೈಯಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ತಿಂದಿದ್ದಾರೆ. ನಂತರ ಬಿಲ್ ಕೇಳಿದಾಗ, ಹೋಟೆಲ್ ಮ್ಯಾನೇಜರ್ ಬಿಲ್‌ನಲ್ಲಿ ತಿಂಡಿ ಜೊತೆಗೆ ಗ್ಯಾಸ್ ಶುಲ್ಕವನ್ನು ಜಿಎಸ್‌ಟಿ ಜತೆ ಸೇರಿಸಿದ್ದಾರೆ. ‘ಗ್ಯಾಸ್ ಶುಲ್ಕ – 9.52 ರೂ.’ ಎಂದು ನಮೂದಾಗಿದ್ದುದನ್ನು ನೋಡಿ ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ. ನಂತರ, ಅವರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘‘ಇದು ವಿಚಾರ. ಇಂಥಾ ದಿನ ಬರಬಹುದೆಂದು ನಾವು ಊಹಿಸಿದ್ದೆವಾ’’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಫೋಟೊ ಸದ್ಯ ವೈರಲ್ ಆಗುತ್ತಿದೆ.
— Guru Dharanidhar Medasani (B -ve Blood Group) (@GuruDharanidhar) March 12, 2026
ಇದೀಗ ಹೋಟೆಲ್ಗಳ ಬಿಲ್‌ನಲ್ಲಿ ಗ್ಯಾಸ್ ಶುಲ್ಕ ಸೇರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇನ್ನು ಕೆಲವು ಹೋಟೆಲ್ಗಳ ಬಿಲ್ಗಳಲ್ಲಿ ಗ್ಯಾಸ್ ಶುಲ್ಕ ಎಂದು ನಮೂದಿಸದಿದ್ದರೂ, ಎಲ್‌ಪಿಜಿ ಪೂರೈಕೆ ಸಮಸ್ಯೆಯ ನೆಪವೊಡ್ಡಿ ಗ್ರಾಹಕರಿಂದ ಹೆಚ್ಚು ದುಡ್ಡು ವಸೂಲಿ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿಯೂ ಅದೇ ಕಥೆ!
ಚೆನ್ನೈಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತದ ಅನೇಕ ಪ್ರಮುಖ ನಗರಗಳಲ್ಲಿಯೂ ಈ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಕೂಡ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ನಗರದ ಹೋಟೆಲ್‌ಗೆ ಊಟಕ್ಕೆ ಹೋದ ಗ್ರಾಹಕನಿಗೆ ಗ್ಯಾಸ್ ಚಾರ್ಜ್ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Already in Bangalore PG announced food shortages and won’t be varieties. Went to hotel they are charging for gas shortage. Such a scam, they looting us every possible way @BlrCityPolice@CPBlrpic.twitter.com/ssBmc26DaA
ಗ್ಯಾಸ್ ಕೊರತೆಯಿಂದಾಗಿ ಪಿಜಿಗಳಲ್ಲಿ ಆಹಾರವನ್ನು ನೀಡುತ್ತಿಲ್ಲ ಮತ್ತು ಇದರಿಂದಾಗಿ ಹೋಟೆಲ್‌ಗೆ ಹೋದರೆ ಅವರು ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಎಕ್ಸ್ನಲ್ಲಿ ಹೋಟೆಲ್ ಬಿಲ್ ಪೋಸ್ಟ್ ಮಾಡಿ, ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಸದ್ಯ ಹೋಟೆಲ್ ಬಿಲ್ಗಳಲ್ಲಿ ಗ್ಯಾಸ್ ಶುಲ್ಕಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ಹೋಟೆಲ್ ಆಡಳಿತ ಮಂಡಳಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕೊರತೆ ಇದ್ದರೆ, ಅವರು ಮುಂಚಿತವಾಗಿ ಸ್ಟಾಕ್ ತರಬೇಕಿತ್ತು. ಅದು ಬಿಟ್ಟು ಆ ಹೊರೆಯನ್ನು ಗ್ರಾಹಕರ ಮೇಲೆ ಏಕೆ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧ, ಮಧ್ಯಪ್ರಾಚ್ಯ ಸಂಘರ್ಷ ಭಾರತದ ಹೋಟೆಲ್ಗಳ ಬಿಲ್ಗಳಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಗೆ ಕಾರಣವಾಗಿದ್ದು ಸುಳ್ಳಲ್ಲ!
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೊಬೈಲ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಯಾವಾಗಲೂ ಜಾಗರೂಕರಾಗಿರುವುದು ಮುಖ್ಯ.ಜಾಗರೂಕತೆಯ ಹೊರತಾಗಿಯೂ, ಕೆಲವೊಮ್ಮೆ ಜನರನ್ನು ದಿಗ್ಭ್ರಮೆಗೊಳಿಸುವ ಘಟನೆಗಳು ಸಂಭವಿಸುತ್ತವೆ.ಒಬ್ಬ ಪುಟ್ಟ ಹುಡುಗಿ ತನ್ನ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು, ಆದರೆ ಕೆಲವೇ ಸೆಕೆಂಡುಗಳ ನಂತರ ಮೊಬೈಲ್ ಸ್ಫೋಟಗೊಳ್ಳುತ್ತದೆ. ಕೂಡಲೇ ಮೊಬೈಲ್ ಕೆಳಗೆ ಹಾಕಿ ಆಕೆ ಓಡಿ ಹೋಗಿದ್ದಾಳೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಈ 10 ಸೆಕೆಂಡುಗಳ ವೀಡಿಯೊವನ್ನು 257,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಬೆಂಗಳೂರು, ಮಾರ್ಚ್ 13: ಬೇರೆ ಬೇರೆ ಭಾಷೆಗಳಲ್ಲಿರುವ ಪುಸ್ತಕ ಓದುಗರಿಗೆ ಅವರದ್ದೇ ಆದ ಭಾಷೆಯಲ್ಲಿ ಸಿಕ್ಕಿದಾಗ ಅದು ಹೆಚ್ಚಿನ ಸಂತ್ರಪ್ತಿ ನೀಡಬಲ್ಲದು. ಜೊತೆಗೆ ಬಹು ಭಾಷೆಗಳ ಅರಿವಿಲ್ಲದವರಿಗೂ ಆ ವಿಷಯವನ್ನು ಸುಲಭವಾಗಿ ಮುಟ್ಟಿಸಬಹುದು ಎಂಬ ಕಾರಣಕ್ಕೆ ಅದೆಷ್ಟೋ ಪುಸ್ತಗಳು ಈ ವರೆಗೆ ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರ ಮನಸ್ಸನ್ನೂ ಗೆದ್ದಿವೆ. ಆದರೆ ಈ ಅನುವಾದದ ಕೆಲಸ ಬಹಳ ಕಠಿಣವಾದುದ್ದು. ಮೂಲ ಬರಹಗಾರರು ಹೇಳಿರುವ ವಿಷಯವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಭಟ್ಟಿ ಇಳಿಸಬೇಕಾಗುತ್ತದೆ. ಹೀಗಾಗಿ ಪುಸ್ತಕವೊಂದರ ಅನುವಾದಕ್ಕೆ ಬಹಳ ಸಮಯವೂ ಹಿಡಿಯುತ್ತದೆ. ಆದರೆ ಜಗತ್ತಿನ ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿರುವ ಕೃತಕ ಬುದ್ಧಿಮತ್ತೆ (Artificial Intelligence – AI) ಈ ವಿಚಾರದಲ್ಲಿಯೂ ಈಗ ಸದ್ದು ಮಾಡಿದೆ.
ಹೌದು, ಎಐ (AI) ಬಳಸಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಲಾದ ‘My Name is Gauhar Jaan’ ಪುಸ್ತಕದ ಕನ್ನಡ ಆವೃತ್ತಿ ಮಾ.15ರ ಭಾನುವಾರ ಬಿಡುಗಡೆಯಾಗಲಿದ್ದು, ಮೂಲ ಪುಸ್ತಕವನ್ನು ವಿಕ್ರಮ್ ಸಂಪತ್ ವರೆದಿದ್ದಾರೆ. ಇದು ಭಾರತದ ಮೊದಲ ಸೆಲೆಬ್ರಿಟಿ ಗಾಯಕಿ ಗೌಹರ್ ಜಾನ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಈ ಪುಸ್ತಕದ ಕನ್ನಡ ಅನುವಾದದ ಕೆಲಸಕ್ಕಾಗಿ ಬೆಂಗಳೂರು ಮೂಲದ ‘ನಾವ್ AI’ (Naav AI) ಕಂಪನಿಯು ಅಭಿವೃದ್ಧಿಪಡಿಸಿರುವ ಅನುವಾದ ಸಾಧನವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಒಂದು ಪುಸ್ತಕವನ್ನು ಅನುವಾದಿಸಲು ಮೂರುರಿಂದ ನಾಲ್ಕು ತಿಂಗಳು ಬೇಕಾಗಬಹುದು. ಆದರೆ ಎಐನಿಂದಾಗಿ ಈ ಪುಸ್ತಕದ ಮೊದಲ ಕರಡು ಕೇವಲ 30 ನಿಮಿಷಗಳಲ್ಲಿ ಸಿದ್ಧವಾಗಿದೆ. ನಂದರ ಅವುಗಳ ಪರಿಶೀಲನೆ, ತಿದ್ದುಪಡಿ ಕೆಲಸಗಳಿಗೆ ಒಂದು ತಿಂಗಳ ಸಮಯ ಬೇಕಾಗಿದೆ ಎನ್ನಲಾಗಿದೆ.
ಇನ್ನು ಎಐ ಅನುವಾದ ಸಂದರ್ಭ, ಶೈಲಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಕಂಡುಬಂದಿವೆ. ಕನ್ನಡದಲ್ಲಿ ಒಂದು ಪದಕ್ಕೆ ಸಂದರ್ಭದ ಮೇಲೆ ಅವಲಂಬಿಸಿ ಹಲವು ಅರ್ಥಗಳು ಇರಬಹುದು. ಹೀಗಿದ್ದರೂ ಎಐ ಆಯ್ಕೆ ಮಾಡಿದ ಅರ್ಥವು ಕೆಲವೊಮ್ಮೆ ಪರಿಸ್ಥಿತಿಗೆ ಸರಿಹೊಂದಿದೆ. ಪುಸ್ತಕದ ಸಂಗೀತ ಸಂಬಂಧ ವಿಚಾರಗಳನ್ನು ಹೊಂದಿರುವ ಕಾರಣ ಕೆಲ ಸವಾಲುಗಳು ಉದ್ಭವಿಸಿದ್ದು, ರಾಗಗಳ ಉಲ್ಲೇಖಗಳು, ಅವುಗಳ ಹೆಸರು ಮತ್ತು ಅಕ್ಷರ ವಿನ್ಯಾಸಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆಯಾಗಿ ಎಐ ಮಾನವ ಅನುವಾದಕರನ್ನು ಬದಲಿಸುವುದಕ್ಕಿಂತ ಸಹಾಯ ಮಾಡುವ ಸಾಧನವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘ಕನ್ನಡ ಓದುಗರಿಗೆ ವರದಾನ’
ಇನ್ನುಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ವಸುಧೇಂದ್ರ, ಭಾಷೆಯ ಗಡಿಯನ್ನು ದಾಟುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇದು ಕನ್ನಡದ ಓದುಗರಿಗೆ ವರದಾನವಾಗಿಯೇ ಪರಿಣಮಿಸುತ್ತದೆ. ಹೇಗೆ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನಮ್ಮ ಜನ ಕನ್ನಡದಲ್ಲಿಯೇ ನೋಡಲು ಶುರು ಮಾಡಿದ್ದಾರೋ, ಅದೇ ರೀತಿ ಜಗತ್ತಿನ ಸಾಹಿತ್ಯವೆಲ್ಲವೂ ನಮಗೆ ದಕ್ಕುವ ದಿನಗಳು ದೂರವಿಲ್ಲವೆನ್ನಿಸುತ್ತದೆ. ಓಟಿಟಿಯಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಭಾಷೆಯನ್ನು ನಿರ್ಧರಿಸುವ ಬಟನ್ ಒತ್ತುತ್ತೇವಲ್ಲವೆ, ಹಾಗೆಯೇ ಅಮೆಜಾನ್‌ನಲ್ಲಿ ಪುಸ್ತಕ ಆರ್ಡರ್ ಮಾಡುವಾಗ ‘ಭಾಷೆ’ಯ ಆಯ್ಕೆಯನ್ನು ಮಾಡಿಕೊಳ್ಳುವ ದಿನಗಳು ದೂರವಿಲ್ಲ ಎಂದಿದ್ದಾರೆ.
ಬೆಂಗಳೂರು, ಮಾರ್ಚ್ 13: ಇರಾನ್, ಇಸ್ರೇಲ್ ಯುದ್ಧದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್ ಕೊರತೆ (LPG cylinder crisis)ತೀವ್ರವಾಗಿದೆ. ವಾಣಿಜ್ಯ ಸಿಲಿಂಡರ್ ಸಿಗದೆ ಅದೆಷ್ಟೋ ಹೋಟೆಲ್‌ಗಳು ಸಮಸ್ಯೆಗೀಡಾಗಿವೆ. ಅಡುಗೆ ಮಾಡಲು ಇಂಧನವಿಲ್ಲದೆ ಹೋಟೆಲ್‌ಗಳು ಬಾಗಿಲು ಮುಚ್ಚುವ ಹಂತಕ್ಕೆ ತಲುಪಿವೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಕಡೆ ಎಲ್‌ಪಿಜಿ ಸಿಲಿಂಡರ್ ಬದಲಾಗಿ ಸೌದೆ ಬಳಸಿಯೂ ಅಡುಗೆ ಮಾಡಲಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಮರದ ಇಂಧನದ ಬೇಡಿಕೆ ಹೆಚ್ಚಾಗಿದೆ. ಹೀಗೆ ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌದೆ ಒಲೆ ಬಳಸುವವರಿಗೆ ಅರಣ್ಯ ಇಲಾಖೆ ಎಚ್ಚರಿಕೆ
ಅನೇಕ ಹೋಟೆಲ್‌ಗಳು, ಪಿಜಿಗಳು ಹಾಗೂ ಇತರ ಅಡುಗೆ ಕೇಂದ್ರಗಳು ಮತ್ತೆ ಸಾಂಪ್ರದಾಯಿಕ ಸೌದೆ ಒಲೆಯತ್ತ ಮುಖ ಮಾಡುತ್ತಿರುವುದರಿಂದ ಮರದ ಬಳಕೆ ಹೆಚ್ಚುತ್ತಿರುವುದು ಕಂಡುಬಂದಿದೆ. ಸಧ್ಯದ ಮಟ್ಟಿಗೆ ಇದು ಇಂಧನ ಸಮಸ್ಯೆಗೆ ಸಿಕ್ಕ ದೊಡ್ಡ ಪರಿಹಾರವೆನಿಸಿದರೂ ಈ ಪರಿಸ್ಥಿತಿ ಮುಂದುವರಿದರೆ ಅಕ್ರಮವಾಗಿ ಮರ ಕಡಿಯುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಗುರುವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಕುರಿತು ಆದೇಶ ಹೊರಡಿಸಿದ್ದು, ಅರಣ್ಯ ಪ್ರದೇಶಗಳಲ್ಲಷ್ಟೇ ಅಲ್ಲದೆ ಸರ್ಕಾರದ ಜಾಗಗಳು, ಉದ್ಯಾನವನಗಳು ಹಾಗೂ ಇತರ ಹಸಿರು ಪ್ರದೇಶಗಳಲ್ಲಿಯೂ ಅಕ್ರಮ ಮರ ಕಡಿಯುವ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಎಲ್‌ಪಿಜಿ ಕೊರತೆಯಿಂದ ಅನೇಕ ಹೋಟೆಲ್ ಮಾಲೀಕರು ಮತ್ತು ಅಡುಗೆ ಕೇಂದ್ರಗಳು ಮರದ ಇಂಧನ ಬಳಕೆಗೆ ಮರಳುತ್ತಿರುವುದರಿಂದ ಕಟ್ಟಿಗೆಗೆ ಬೇಡಿಕೆ ಏರಿಕೆಯಾಗಿದೆ. ಹೀಗೆ ಹೆಚ್ಚು ಮರಗಳನ್ನು ಕಡಿದರೆ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶಗಳು ಹಾಗೂ ಹಸಿರು ವಲಯಗಳಲ್ಲಿ ಹೆಚ್ಚುವರಿ ಪೆಟ್ರೋಲಿಂಗ್ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಲಾವಣ್ಯ ತ್ರಿಪಾಠಿ (Lavanya Tripathi) ಮೆಗಾ ಪ್ರಿನ್ಸ್ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆಯಾದರು. ಅವರಿಗೆ ಗಂಡು ಮಗು ಜನಿಸಿತು. ಪ್ರಸ್ತುತ, ತನ್ನ ಮಗುವನ್ನು ಬೆಳೆಸುವಲ್ಲಿ ನಿರತರಾಗಿರುವ ಲಾವಣ್ಯ ಮೊದಲಿನಂತೆ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅವರು ತಮಗೆ ಹೊಂದುವ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದಾರೆ. ಮದುವೆಯ ನಂತರ ಲಾವಣ್ಯ ತ್ರಿಪಾಠಿ ಅವರ ಮೊದಲ ಚಿತ್ರ ‘ಸತಿ ಲೀಲಾವತಿ’ ಈಗ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 06 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಸ್ವಲ್ಪ ಸಮಯದ ಹಿಂದೆ ಪೂರ್ಣಗೊಂಡಿತು. ಆದಾಗ್ಯೂ, ವಿವಿಧ ಕಾರಣಗಳಿಂದ ಅದು ಮುಂದೂಡಲ್ಪಟ್ಟಿತು. ಈ ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಿಡುಗಡೆಯಾಗಲಿದೆ. ಈಗ ಅವರು ಒಂದು ವಿಷಯ ರಿವೀಲ್ ಮಾಡಿದ್ದಾರೆ.
ಲಾವಣ್ಯ ಪ್ರಸ್ತುತ ‘ಸತಿ ಲೀಲಾವತಿ’ ಚಿತ್ರದ ಪ್ರಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರು ಸತತವಾಗಿ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ, ನಿರೂಪಕರೊಬ್ಬರು ಲಾವಣ್ಯ ಅವರಿಗೆ ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದರು. ‘ಯಾವುದೇ ಸಿನಿಮಾಗಳನ್ನು ತಿರಸ್ಕರಿಸಿದ ನಂತರ ನೀವು ಎಂದಾದರೂ ವಿಷಾದಿಸಿದ್ದೀರಾ?’ ಎಂಬ ಪ್ರಶ್ನೆಗೆ ಲಾವಣ್ಯ ಈ ಉತ್ತರವನ್ನು ನೀಡಿದರು.
‘ನಾನು ಇಲ್ಲಿಯವರೆಗೆ ಸಿನಿಮಾಗಳನ್ನು ಹೆಚ್ಚು ತಿರಸ್ಕರಿಸಿಲ್ಲ ಮತ್ತು ಸಿನಿಮಾಗಳ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನನ್ನ ವೃತ್ತಿಜೀವನದ ಆರಂಭದಲ್ಲಿ, ನಾನು ಒಂದು ಸಿನಿಮಾಗೆ ಬೇಡ ಅಂದಿದ್ದೆ. ನಾನು ಒಪ್ಪಿಕೊಂಡ ನಂತರವೂ ಆ ಸಿನಿಮಾದ ಅವಕಾಶವನ್ನು ಕಳೆದುಕೊಂಡೆ. ರಶ್ಮಿಕಾ ಆ ಚಿತ್ರದಲ್ಲಿ ನಟಿಸಿ ಯಶಸ್ಸನ್ನು ಗಳಿಸಿದರು. ಈ ಚಿತ್ರದ ಕಥೆಯನ್ನು ಕೇಳುವ ಮೊದಲು ನಾನು ಬೇಡ ಅಂದಿದ್ದೆ. ಆದರೆ ಕಥೆಯನ್ನು ಕೇಳಿದ ನಂತರ, ನಾನು ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದೆ. ನಂತರ ಏನೋ ಆಗಿ ಸಿನಿಮಾ ಅಂತಿಮವಾಗಿ ರಶ್ಮಿಕಾಗೆ ಹೋಯಿತು. ಈ ಚಿತ್ರ ಸೂಪರ್ ಸಕ್ಸಸ್ ಆಗಿತ್ತು. ಈಗ ಅವರು ಮದುವೆಯಾಗಿದ್ದಾರೆ’ ಎಂದು ಲಾವಣ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರನ್ನು ಅಭಿನಂದಿಸಿದರು.
ಲಾವಣ್ಯ ತ್ರಿಪಾಠಿ ಮಾಡಬೇಕಿದ್ದ ಸಿನಿಮಾ ಬೇರೆ ಯಾವುದೂ ಅಲ್ಲ ‘ಗೀತ ಗೋವಿಂದಂ’. ಪ್ರಸ್ತುತ, ಲಾವಣ್ಯ ಅವರ ಕಾಮೆಂಟ್‌ಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ. ಈ ಮೊದಲು ಐಶ್ವರ್ಯಾ ಅರ್ಜುನ್ ಕೂಡ ತಮಗೂ ‘ಗೀತ ಗೋವಿಂದಂ’ ಆಫರ್ ಬಂದಿತ್ತು ಎಂದಿದ್ದರು.
ಜ್ಯೋತಿಷ್ಯ ಮತ್ತು ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದು ಅರ್ಥವಿರುತ್ತದೆ. ಹಳೆಯ ಕಾಲದಲ್ಲಿ ಪ್ರಕೃತಿಯ ಬದಲಾವಣೆಗಳ ಮೂಲಕ ಅದೃಷ್ಟವನ್ನು ಅಳೆಯಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಸುಪ್ತ ಮನಸ್ಸು ಕನಸುಗಳ ರೂಪದಲ್ಲಿ ಮುಂಬರುವ ಸಂಪತ್ತು ಮತ್ತು ಯಶಸ್ಸಿನ ಸೂಚನೆಗಳನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ಕನಸಿನಲ್ಲಿ ಈ ಐದು ಅದ್ಭುತ ದೃಶ್ಯಗಳು ಕಂಡರೆ, ನೀವು ಶ್ರೀಮಂತರಾಗುವ ಕಾಲ ಹತ್ತಿರದಲ್ಲಿದೆ ಎಂದರ್ಥ.
ಬಿಳಿ ಕುದುರೆಗಳ ಓಟ; ವಿಜಯದ ಸಂಕೇತ:
ಕನಸಿನಲ್ಲಿ ಬಿಳಿ ಕುದುರೆಗಳು ಅಥವಾ ರೆಕ್ಕೆಯ ಕುದುರೆಗಳು ಕಾಣಿಸಿಕೊಳ್ಳುವುದು ಅತ್ಯಂತ ಶುಭ ಶಕುನ. ಇದು ಕೇವಲ ಬಾಲ್ಯದ ಫ್ಯಾಂಟಸಿ ಅಲ್ಲ, ಬದಲಿಗೆ ನಿಮ್ಮ ಜೀವನದಲ್ಲಿ ಬರಲಿರುವ ಅನಿರೀಕ್ಷಿತ ಆರ್ಥಿಕ ಲಾಭ ಮತ್ತು ಉನ್ನತ ಸ್ಥಾನಮಾನದ ಸೂಚನೆ. ನೀವು ಮಾಡುವ ಕೆಲಸದಲ್ಲಿ ಜಯ ಸಿಗಲಿದೆ ಎಂಬುದಕ್ಕೆ ಇದು ಸಾಕ್ಷಿ.
ಐರಾವತ ಅಥವಾ ಬಿಳಿ ಆನೆ; ರಾಜಯೋಗದ ಮುನ್ಸೂಚನೆ:
ದೇವತೆಗಳ ರಾಜ ಇಂದ್ರನ ವಾಹನವಾದ ‘ಐರಾವತ’ ಅಥವಾ ಬಿಳಿ ಆನೆ ಕನಸಿನಲ್ಲಿ ಬಂದರೆ ಅದು ಸಾಕ್ಷಾತ್ ರಾಜಯೋಗ. ಇದು ಬುದ್ಧಿವಂತಿಕೆ, ಸ್ಥಿರವಾದ ಸಂಪತ್ತು ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವುದನ್ನು ಸೂಚಿಸುತ್ತದೆ. ಐಶ್ವರ್ಯದ ಅಧಿದೇವತೆ ನಿಮ್ಮ ಮೇಲೆ ಪ್ರಸನ್ನಳಾಗಿದ್ದಾಳೆ ಎಂಬುದರ ಸಂಕೇತವಿದು.
ಆಕಾಶದಲ್ಲಿ ಹಾರಾಟ; ಪ್ರಗತಿಯ ಪಥ:
ನೀವು ಆಕಾಶದಲ್ಲಿ ಹಾರುತ್ತಿರುವಂತೆ ಅಥವಾ ವಿಮಾನದಲ್ಲಿ ವೇಗವಾಗಿ ಪ್ರಯಾಣಿಸುತ್ತಿರುವಂತೆ ಕನಸು ಕಂಡರೆ, ನೀವು ಜೀವನದ ಸವಾಲುಗಳನ್ನು ಮೀರಿ ಉನ್ನತ ಮಟ್ಟಕ್ಕೆ ಏರುತ್ತಿದ್ದೀರಿ ಎಂದು ಅರ್ಥ. ಇದು ವೃತ್ತಿಜೀವನದಲ್ಲಿನ ಭರ್ಜರಿ ಬಡ್ತಿ ಅಥವಾ ವ್ಯಾಪಾರದಲ್ಲಿನ ಅಗಾಧ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಹಾಲಿನಂತೆ ಬೆಳ್ಳಗಿರುವ ಅಂತ್ಯವಿಲ್ಲದ ಕ್ಷೀರ ಸಮುದ್ರವನ್ನು ನೋಡುವುದು ಆಧ್ಯಾತ್ಮಿಕ ಮತ್ತು ಭೌತಿಕ ಉನ್ನತಿಯ ಸಂಕೇತ. ಈ ಸಮುದ್ರವು ಶಾಂತವಾಗಿದ್ದರೆ ನಿಮ್ಮ ಜೀವನದಲ್ಲಿ ಶಾಂತಿ ನೆಲೆಸುವುದರ ಜೊತೆಗೆ ಅಪಾರ ಸಂಪತ್ತು ಹರಿದು ಬರಲಿದೆ ಎಂದರ್ಥ. ಆದರೆ, ಅದರಲ್ಲಿ ಮುಳುಗುವ ಭಯವಿರಬಾರದು ಎಂಬುದು ಇಲ್ಲಿನ ಮುಖ್ಯ ಅಂಶ.
ಹೂವಿನ ಮಳೆ: ದೈವಾನುಗ್ರಹದ ಹರಕೆ
ಆಕಾಶದಿಂದ ಹೂವುಗಳು ಮಳೆಯಂತೆ ಸುರಿಯುತ್ತಿರುವ ಕನಸು ಕಂಡರೆ ಅದು ದೈವಿಕ ಆಶೀರ್ವಾದ. ಇದು ಮುಂಬರುವ ದಿನಗಳಲ್ಲಿ ನಿಮಗೆ ಸಿಗಲಿರುವ ದೊಡ್ಡ ಯಶಸ್ಸು ಮತ್ತು ಸಂತೋಷವನ್ನು ಸೂಚಿಸುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಬಂದಿದೆ ಎಂದರ್ಥ.
ನೆನಪಿರಲಿ: ಕನಸುಗಳು ಸೂಚನೆ ನೀಡುತ್ತವೆ ನಿಜ, ಆದರೆ ಕಠಿಣ ಪರಿಶ್ರಮವೇ ಆ ಅದೃಷ್ಟವನ್ನು ದ್ವಿಗುಣಗೊಳಿಸುತ್ತದೆ. ಈ ಕನಸುಗಳು ಪದೇ ಪದೇ ಮರುಕಳಿಸುತ್ತಿದ್ದರೆ, ಸಕಾರಾತ್ಮಕವಾಗಿ ಪ್ರಯತ್ನ ಮುಂದುವರಿಸಿ; ಯಶಸ್ಸು ಖಂಡಿತ ನಿಮ್ಮದಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 13: ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ(Menstrual Leave) ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎನ್ನುವ ಬೇಡಿಕೆಯನ್ನು ತಿರಸ್ಕರಿಸಿದೆ.ಅಂತಹ ಕಾನೂನು ಜಾರಿಗೆ ತಂದರೆ ಕಚೇರಿಗಳನ್ನು ಹೆಣ್ಣುಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಲ್ಲಿ ಮಾಲೀಕರು ಹಿಂದೇಟು ಹಾಕುತ್ತಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ಹೇಳಿದ್ದಾರೆ.
ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಇಂದು(ಮಾರ್ಚ್13)ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ಇಂತಹ ಕಾನೂನು ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಅನಿಸಿಕೆಯನ್ನು ಉಂಟುಮಾಡುತ್ತದೆ. ಅವರು ಪುರುಷರಿಗಿಂತ ಕಡಿಮೆ ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ ಎಂದು ವಾದಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ಈ ಕಾನೂನನ್ನು ಕಡ್ಡಾಯ ಮಾಡಿದರೆ ಹೆಣ್ಣುಮಕ್ಕಳಿಗೆ ಯಾರೂ ಕೆಲಸ ಕೊಡುವುದಿಲ್ಲ ಬದಲಾಗಿ, ಅಲ್ಲಿಗೆ ಅವರ ವೃತ್ತಿ ಜೀವನ ಕೊನೆಗೊಳ್ಳುತ್ತದೆ, ನೀವು ಮನೆಯಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳುತ್ತಾರೆ ಎಂದರು.
ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಬೇರೆ, ಆದರೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ನೀವು ತಂದ ತಕ್ಷಣ, ಯಾರೂ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ, ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಜಿದಾರರು ಹೆಣ್ಣುಮಕ್ಕಳು, ಅದು ವಿದ್ಯಾರ್ಥಿನಿಯರಾಗಿರಲಿ ಅಥವಾ ಕೆಲಸ ಮಾಡುವ ವೃತ್ತಿಪರರಾಗಿರಲಿ, ಮುಟ್ಟಿನ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
2013 ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು ಎಂದು ಹಿರಿಯ ವಕೀಲ ಎಂ.ಆರ್. ಶಂಶಾದ್ ಹೇಳಿದ್ದಾರೆ. ಆಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಧಾರವು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಬದ್ಧತೆಯ ಭಾಗವಾಗಿದೆ ಎಂದು ಹೇಳಿದ್ದರು.ಖಾಸಗಿ ಕಂಪನಿಗಳು ಇದೇ ರೀತಿಯ ಸಡಿಲಿಕೆಗಳನ್ನು ಮಾಡಿವೆ ಎಂದು ಶಂಶಾದ್ ಎಂದರು.
ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿನ ನೈರ್ಮಲ್ಯದ ಬಗ್ಗೆ ನಿರ್ಣಾಯಕ ತೀರ್ಪು ನೀಡಿತು, ಅದು ‘ಹೆಣ್ಣು ಮಗುವಿನ ಜೀವನ, ಘನತೆ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಅವಿಭಾಜ್ಯ ಅಂಗ’ ಎಂದು ಹೇಳಿತ್ತು.
ಉಚಿತ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕ್ರಿಯಾತ್ಮಕ ಲಿಂಗ-ಪ್ರತ್ಯೇಕ ಶೌಚಾಲಯಗಳು ಮತ್ತು ಮುಟ್ಟಿನ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಡೆಸಲು ನ್ಯಾಯಾಲಯವು ಎಲ್ಲಾ ಸರ್ಕಾರಗಳಿಗೆ ಕಡ್ಡಾಯ ನಿರ್ದೇಶನಗಳನ್ನು ನೀಡಿತು.
‘ಧುರಂಧರ್ 2’ ಸಿನಿಮಾ ರಿಲೀಸ್ಗೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಮಾರ್ಚ್ 18ರಂದು ಸಂಜೆ 5 ಗಂಟೆಗೆ ಪ್ರೀಮಿಯರ್ ಶೋಗಳು ಆರಂಭ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ಅಧಿಕೃತವಾಗಿ ತೆರೆಗೆ ಬರುತ್ತಿದೆ. ಈ ಚಿತ್ರದ ಟಿಕೆಟ್ಗಳು ಸುಮಾನಿ ರೀತಿಯಲ್ಲಿ ಬುಕ್ ಆಗುತ್ತಿದೆ. ಮಾರ್ಚ್ 12ರಂದು ‘ಧುರಂಧರ್’ ರೀ-ರಿಲೀಸ್ ಆಗಿದೆ ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ ‘ಧುರಂಧರ್’ ಸಿನಿಮಾ (Dhurandhar) ಹೊಸ ದಾಖಲೆ ಒಂದನ್ನು ಬರೆದಿದೆ. ಥಿಯೇಟರ್ ಅಲ್ಲಿ ಸಿನಿಮಾ 100 ದಿನವನ್ನು ಪೂರ್ಣಗೊಳಿಸುತ್ತಿದೆ. ಕೊವಿಡ್ ಬಳಿಕ ನೂರು ದಿನ ಪೂರೈಸಿದ ಏಕೈಕ ಸಿನಿಮಾ ಇದು ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.
ಡಿಸೆಂಬರ್ 5ರಂದು ‘ಧುರಂಧರ್’ ರಿಲೀಸ್ ಆಯಿತು. ಮಾರ್ಚ್ 14ರಂದು ಸಿನಿಮಾ 100ನೇ ದಿನ ಪೂರೈಸುತ್ತಿದೆ. ಥಿಯೇಟರ್ನಲ್ಲಿ ಚಿತ್ರ ಗ್ರ್ಯಾಂಡ್ ಆಗಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಿನಿಮಾ ಒಟಿಟಿಗೆ ಕಾಲಿಟ್ಟ ಹೊರತಾಗಿಯೂ ಅನೇಕ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಾ ಇತ್ತು. ಈಗ ಬ್ಲಾಕ್ಬಸ್ಟರ್ ಚಿತ್ರ ಹೊಸ ದಾಖಲೆ ಬರೆಯಲು ರೆಡಿ ಆಗಿದೆ. ಬಾಲಿವುಡ್ ಚಿತ್ರ ಮಾಡಿದ ಈ ಸಾಧನೆಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಒಟಿಟಿಗೆ ಕಾಲಿಟ್ಟ ಬಳಿಕ ಚಿತ್ರ ಥಿಯೇಟರ್ನಿಂದ ಕಾಲ್ಕೀಳುತ್ತವೆ. ಆದರೆ ‘ಧುರಂಧರ್’ ಸಿನಿಮಾ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ಚಿತ್ರವನ್ನು ಒಟಿಟಿ ಜೊತೆಗೆ ಥಿಯೇಟರ್ನಲ್ಲೂ ವೀಕ್ಷಿಸಿದ್ದಾರೆ ಅನ್ನೋದು ವಿಶೇಷ. ಅಚ್ಚರಿಯ ವಿಷಯ ಎಂದರೆ ವಿಶ್ವಾದ್ಯಂತ ಸಾವಿರ ಪರದೆಗಳಲ್ಲಿ ಈ ಚಿತ್ರ ರನ್ ಆಗುತ್ತಿದ್ದು, 1250 ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ.
ಇನ್ನು, ಸೀಕ್ವೆಲ್ ರಿಲೀಸ್ ಸಂದರ್ಭದಲ್ಲಿ ಮೊದಲ ಪಾರ್ಟ್ ರನ್ ಆಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ‘ಧುರಂಧರ್’ ರಿಲೀಸ್ ಆದ ಬಳಿಕ ‘ಧುರಂಧರ್ 2’ ತುಂಬಾನೇ ಕಡಿಮೆ ಅವಧಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಕೂಡ ಈ ಹೊಸ ದಾಖಲೆ ನಿರ್ಮಿಸಲು ಕಾರಣ.