Horoscope Today 13​​​​​​​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಶುಭ

Horoscope Today 13​​​​​​​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಶುಭ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 13​​​​​​​​, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ದಶಮಿ, ಪೂರ್ವಾಷಾಢ ನಕ್ಷತ್ರ, ವ್ಯತೀಪಾತ ಯೋಗ ಮತ್ತು ವಣಿಜ ಕರಣದ ವಿಶೇಷತೆಗಳನ್ನು ತಿಳಿಸಲಾಗಿದೆ.

ಇಂದು ಸಂಜೆ 7:13 ರಿಂದ ಶನಿ ಗ್ರಹವು 40 ದಿನಗಳ ಕಾಲ ಅಸ್ತಂಗತ ಸ್ಥಿತಿಗೆ ಪ್ರವೇಶಿಸಲಿದೆ. ಏಪ್ರಿಲ್ 22 ರವರೆಗೆ ಈ ಸ್ಥಿತಿ ಮುಂದುವರಿಯಲಿದ್ದು, ಶನಿಯ ಶಕ್ತಿ ಕೊಂಚ ಕಡಿಮೆಯಾಗಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನಸ್ಸು ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ಶ್ರೀ ಮಹಾಲಕ್ಷ್ಮಿ, ಆಂಜನೇಯ ಸ್ವಾಮಿ, ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ರಥೋತ್ಸವಗಳು ನಡೆಯಲಿವೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಗಳಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು, ಪ್ರಯಾಣ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ದೈನಂದಿನ ಜಪ ಮಂತ್ರಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

 

 

 

Source link

66ನೇ ವರ್ಷಕ್ಕೆ ಪ್ರೆಗ್ನೆಂಟ್ ಆದ ನೀನಾ ಗುಪ್ತಾ? ಖುಷಿಯಾಗುತ್ತಿದೆ ಎಂದ ನಟಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ತುಂಬಾನೇ ವೇಗ ಪಡೆದುಕೊಂಡಿದೆ. ಒಂದು ಸಣ್ಣ ಫೋಟೋದಿಂದ ದೊಡ್ಡ ವಿವಾದ ಹಾಗೂ ಗುಲ್ಲು ಹಬ್ಬಿ ಬಿಡುತ್ತದೆ. ಈಗ ನೀನಾ ಗುಪ್ತಾಗೂ (Neena Gupta) ಹಾಗೆಯೇ ಆಗಿದೆ. ಅವರು ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಾಗ, ಹೊಟ್ಟೆ ಹಿಡಿದುಕೊಂಡಿದ್ದರು. ಹೊಟ್ಟೆ ದೊಡ್ಡದಾಗಿ ಕಾಣಿಸುತ್ತಾ ಇತ್ತು. ಈ ಕಾರಣದಿಂದ ಅವರು ಪ್ರೆಗ್ನೆಂಟ್ ಎಂಬ ವಿಷಯ ಹಬ್ಬಿತ್ತು. ಇದಕ್ಕೆ ಉತ್ತರಿಸಿರೋ ಅವರು, ‘ನನಗೆ ಬೇಕಾಗಿರಿದೋ ಇಷ್ಟೇ, ನಿಜ ಜೀವನದ ಬಧಾಯಿ ಹೋ’ ಎಂದಿದ್ದಾರೆ.

‘ಯಾವುದೇ ಖುಷಿ ಸುದ್ದಿ ಇಲ್ಲ. ನಾನು ಪ್ರೆಗ್ನೆಂಟ್ ಅಲ್ಲ. ಅಸಲಿ ವಿಷಯ ಏನೆಂದರೆ ಸೀರೆಯ ಮಟೀರಿಯಲ್ ದಪ್ಪವಾಗಿತ್ತು. ಈ ಕಾರಣಕ್ಕೆ ಹೊಟ್ಟೆ ದಪ್ಪವಾಗಿ ಕಾಣಿಸುತ್ತಿತ್ತು. ಈ ವಯಸ್ಸಿನಲ್ಲಿ ನಾನು ಪ್ರೆಗ್ನೆಂಟ್ ಎಂಬ ವದಂತಿ ಹರಿದಾಡುತ್ತಿರುವುದನ್ನು ಕೇಳುತ್ತಿದ್ದರೆ ಖುಷಿಯಾಗುತ್ತಿದೆ. ನಾವು ಒಂದು ರಾಷ್ಟ್ರವಾಗಿ ವಿಕಸನಗೊಳ್ಳುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ’ ಎಂದಿದ್ದಾರೆ ನೀನಾ.

ಇದನ್ನೂ ಓದಿ: ಮದುವೆ ಆಗದೆ ವಿವಿ ರಿಚರ್ಡ್​ರಿಂದ ಮಗು ಪಡೆದಿದ್ದ ನೀನಾ ಗುಪ್ತಾ

ನೀನಾ ಗುಪ್ತಾ ಅವರು ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ರಿಸೆಪ್ಶನ್​ ಅಲ್ಲಿ ಭಾಗಿ ಆಗಿದ್ದರು. ಅವರು ಈವೆಂಟ್​​​ಗೆ ಬಂದು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಈ ಸಂದರ್ಭದ ವಿಡಿಯೋ ಇದಾಗಿದೆ. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಯಿತು. ಕೆಲವರು, ನಟಿಗೆ ಬೇಬಿ ಬಂಪ್ ಬಂದಿದೆ ಎಂದೆಲ್ಲ ಹೇಳಿದರು. ಈ ವಿಷಯ ನೀನಾ ಕಿವಿಗೂ ಬಿದ್ದಂತೆ ಇದೆ. ಹೀಗಾಗಿ, ಸ್ಪಷ್ಟನೆ ಕೊಟ್ಟಿದ್ದಾರೆ.

ನೀನಾ ಗುಪ್ತಾ ಅವರು ವಿವಾಹ ಆಗದೆ ಮಗು ಪಡೆದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. 1980ರಲ್ಲಿ ನೀನಾ ಗುಪ್ತಾ ಅವರು ವೆಸ್ಟ್ ಇಂಡೀಸ್​ನ ಅಂದಿನ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ರಿಲೇಶನ್​​ಶಿಪ್​​ನಲ್ಲಿದ್ದರು. ಇದರಿಂದ ಮಗು ಕೂಡ ಜನಿಸಿತು. ಆದರೆ, ರಿಚರ್ಡ್ ವಿವಾಹ ಆಗಲು ನಿರಾಕರಿಸಿದರು. ಮಗುವನ್ನು ದೂರ ಮಾಡದೇ ನೀನಾ ಸಾಕಲು ನಿರ್ಧರಿಸಿದರು. ಆಗಿನ ಸಮಾಜ ಇದನ್ನು ಅಷ್ಟಾಗಿ ಒಪ್ಪುತ್ತಿರಲಿಲ್ಲ. ಆದರೂ ನೀನಾ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಮಗುವನ್ನು ಸಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆಶಿ ಮಾಸ್ಟರ್ ಪ್ಲಾನ್, ರೆಸಾರ್ಟ್ ರಾಜಕೀಯ ಶುರು: ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

ಬೆಂಗಳೂರು, ಮಾರ್ಚ್ 13: ಒಡಿಶಾದಲ್ಲಿ (Odisha) ನಡೆಯಲಿರುವ ರಾಜ್ಯಸಭಾ ಚುನಾವಣೆಯ (Rajyasabha Election) ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ (Congress) ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ. ಈ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುರುವಾರ ರಾತ್ರಿ ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಒಡಿಶಾದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಬೆಂಗಳೂರಿಗೆ ಆಗಮಿಸಿದರು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಬಂದ ಶಾಸಕರನ್ನು ಡಿಕೆ ಶಿವಕುಮಾರ್ ಆಪ್ತರು ಸ್ವಾಗತಿಸಿದರು.

ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ.

ಈ ತಂಡದಲ್ಲಿ ಶಾಸಕರಾದ ಮಂಗು ಖಿಲಾ, ಅಪ್ಪಲ ಸ್ವಾಮಿ, ರಾಜನ್ ಎಕ್ಕಾ, ಅಶೋಕ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಜೊತೆಗೆ ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು ಸುಮಾರು 14 ಮಂದಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಸಭೆ ಚುನಾವಣೆ: ಅಖಾಡಕ್ಕಿಳಿದ ಟ್ರಬಲ್ ಶೂಟರ್ ಡಿಕೆಶಿ

ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯಲು ಈ ತಂತ್ರ ರೂಪಿಸಲಾಗಿದೆ.

ಒಡಿಶಾ ವಿಧಾನಸಭೆ ಬಲಾಬಲ ಹೀಗಿದೆ

147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ 50 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಬಳಿ 14 ಶಾಸಕರು ಇದ್ದಾರೆ. ಬಿಜೆಡಿ ಅಧಿಕೃತ ಅಭ್ಯರ್ಥಿಯಾಗಿ ಡಾ. ಸ್ಯಾಂಟ್ರಪ್ಟ್ ಮಿಶ್ರಾ ಅವರನ್ನು ನಾಮನಿರ್ದೇಶನ ಮಾಡಿದೆ ಮತ್ತು ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಡಾ. ದತ್ತೇಶ್ವರ್ ಹೋಟಾ ಅವರನ್ನು ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ, ಕಾಂಗ್ರೆಸ್ ಅವರ ಉಮೇದುವಾರಿಕೆಗೆ ಬೆಂಬಲ ನೀಡಿದೆ. ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ 79 ಶಾಸಕರ ಬೆಂಬಲ ಹೊಂದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಸಹ ಬೆಂಬಲ ನೀಡಿದೆ.

ಅಡ್ಡ ಮತದಾನ ನಿರ್ಣಾಯಕವೇಕೆ?

ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯವಿದೆ. ಬಿಜೆಡಿ ತನ್ನ ಅಧಿಕೃತ ಅಭ್ಯರ್ಥಿ ಡಾ. ಸಂತ್ರಪ್ಟ್ ಮಿಶ್ರಾ ಗೆಲುವನ್ನು ಖಚಿತಪಡಿಸಿಕೊಳ್ಳಲು ಅನುಕೂಲಕರ ಸ್ಥಾನದಲ್ಲಿದೆ. ಆದಾಗ್ಯೂ, ಡಾ. ದತ್ತೇಶ್ವರ್ ಹೋಟಾ ಗೆಲುವು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಅವಲಂಬಿಸಿರುತ್ತದೆ. ಮತ್ತೊಂದೆಡೆ, ಬಿಜೆಪಿ ಬೆಂಬಲಿಸಿರುವ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ, ಎದುರಾಳಿಗಳಿಂದ ಕನಿಷ್ಠ ಎಂಟು ಶಾಸಕರ ಬೆಂಬಲವನ್ನು ಪಡೆದರೆ ಮಾತ್ರ ಗೆಲುವು ಸಾಧಿಸಬಹುದು. ಇದು ಸ್ಪರ್ಧೆಯಲ್ಲಿ ಅಡ್ಡ ಮತದಾನವನ್ನು ನಿರ್ಣಾಯಕ ಅಂಶವಾಗಿಸುತ್ತದೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ಈ ಹಿನ್ನೆಲೆ ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟಿಗೆ ಇರಿಸಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗುವಂತೆ ಮಾಡಲು ಬೆಂಗಳೂರಿಗೆ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ರಾಜ್ಯಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ನೋವನ್ನು ಹಂಚಿಕೊಳ್ಳುವವರು ಸಿಗರು

ಮೇಷ ರಾಶಿ:

ಇಂದು ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಶಾಂತಿಯುತ ಪರಿಹಾರವನ್ನು ಕಂಡುಹಿಡಿಯುವುದು ಮುಖ್ಯ. ವ್ಯಾಪಾರ ಚಟುವಟಿಕೆಗಳು ಸುಗಮವಾಗಿ ನಡೆಯಲಿವೆ. ತಂಡವಾಗಿ ಕೆಲಸ ಮಾಡಿದರೆ ಗೆಲವು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ನೌಕರರನ್ನು ಯೋಗ್ಯ ರೀತಿಯಲ್ಲಿ ಕಂಡುಕೊಂಡು ಬೇಕಾದುದನ್ನು ಮಾಡಿಸಿಕೊಳ್ಳುವಿರಿ.‌ ನಿಮ್ಮ ಬಗ್ಗೆ ಯಾರು ಏನೇ ಎಂದರೂ ಸ್ವಭಾವವನ್ನು ಬದಲಿಸಲಾರಿರಿ.

ವೃಷಭ ರಾಶಿ:

ಇಂದು ಸಂಗಾತಿಯು ನಿಮ್ಮ ನಿಜವಾದ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಬಯಕೆಗಳಿಗೆ ಅಲ್ಪವಿರಾಮ ಹಾಕಿ. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಚಿಂತೆಯಾಗುವುದು. ಅದಕ್ಕಾಗಿ ಖರೀದಿಯನ್ನು ಮುಂದೂಡುವಿರಿ.

ಮಿಥುನ ರಾಶಿ:

ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಸಂಗಾತಿಯ ಸಹಕಾರವನ್ನು ಪಡೆಯಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾಗಿ ತಿಳಿಯಿರಿ. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನ ಮಾಡುವುದು. ಇಂದು ಎಲ್ಲರ ಜೊತೆ ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು.

ಕರ್ಕಾಟಕ ರಾಶಿ:

ಕೆಲವು ಪ್ರಶ್ನೆಗೆ ಮೌನವೂ ಉತ್ತರವಾದೀತು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು‌. ಅಪವಾದ ಸುತ್ತಿಕೊಂಡು ಕೆಲ ಕಾಲ ಸಂಕಟಪಡುವಿರಿ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ಅವಿವಾಹಿತರು ವಿವಾಹದ ಬಗ್ಗೆ ಚಿಂತೆ ಮಾಡುವರು. ದೈವದ ಮೇಲಿನ ಶ್ರದ್ಧೆಯು ಕಡಿಮೆಯಾಗದು. ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಎಲ್ಲದಕ್ಕೂ ಕೋಪವೊಂದೇ ಪರಿಹಾರವಾಗದು.

ಸಿಂಹ ರಾಶಿ:

ಇಂದು ನಿಮ್ಮ ಉತ್ಪಾದನೆ ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ನಕಾರಾತ್ಮಕ ಚಟುವಟಿಕೆಯನ್ನು ಕೋಪದ ಬದಲು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ಪಾಲುದಾರಿಕೆ ವ್ಯವಹಾರವು ಯಶಸ್ವಿಯಾಗಬಹುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು.

ಕನ್ಯಾ ರಾಶಿ:

ಒತ್ತಡದ ಕಾರಣದ ದೈನಂದಿನ ಕ್ರಿಯೆಯಲ್ಲಿ ಅಸ್ತವ್ಯಸ್ತತೆ. ಉದ್ಯೋಗದಲ್ಲಿ ರಾಜಕೀಯ ಪ್ರವೇಶ ಮಾಡಲಿದೆ. ವಿವಾಹ ಸಂಬಂಧವನ್ನು ಚೆನ್ನಾಗಿ ಇಡುವ ಯೋಚಿಸಿ. ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ.

ತುಲಾ ರಾಶಿ:

ಸಂಬಂಧದಲ್ಲಿ ಸ್ನೇಹಭಾವವನ್ನು ಕಾಪಾಡಿಕೊಳ್ಳಿ. ಕೆಲವು ಕಾರಣಗಳಿಗಾಗಿ ನೀವು ವ್ಯಾಪಾರದ ಮೇಲೆ ಗಮನ ಆಗದು. ಅತಿಯಾದ ಕೆಲಸದ ಕಾರಣದಿಂದಾಗಿ ಸಂಗಾತಿಯ ಜೊತೆ ಸಮಯವನ್ನು ನೀಡಲು ಸಾಧ್ಯವಾಗದು. ಚರಾಸ್ತಿಯು ಅನ್ಯರ ಪಾಲಾಗಬಹುದು. ಇಂದು ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ತಪ್ಪನ್ನು ಸಮರ್ಥಿಸಿ ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರಿಗೆ ನೋವಾದೀತು. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ.

ವೃಶ್ಚಿಕ ರಾಶಿ:

ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ‌ ಸಹಕಾರವು ನಿಮಗೆ ಸಿಗಲಿದೆ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸಬಹುದು‌. ವಿದೇಶೀಯ ಹಣವನ್ನು ಪಡೆದುಕೊಳ್ಳುವಾಗ ಎಚ್ಚರ. ವಹಿಸಿಕೊಂಡ ಕಾಮಗಾರಿಯನ್ನು ಮುಗಿಸುವಿರಿ.

ಧನು ರಾಶಿ:

ನಿಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಹುದು. ಅಂತಹ ಜನರ ಸಂಪರ್ಕವನ್ನು ಮಾಡದಿರುವುದು ಉತ್ತಮ. ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕಬ್ಬಿಣ ಮುಂತಾದ ವ್ಯಾಪಾರವನ್ನು ಮಾಡುವವರಿಗೆ ಆದಾಯವು ಹೆಚ್ಚಾಗುವುದು. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಸಣ್ಣ ವ್ಯಾಪರಿಗಳಿಗೆ ಉತ್ತಮ ಲಾಭವಿರಲುದೆ. ಇಂದು ನಿಮ್ಮ ಕಾರ್ಯಗಳನ್ನು ಇನ್ನೊಬ್ಬರು ಮಾಡಬಹುದು.

ಮಕರ ರಾಶಿ:

ಇಂದು ವ್ಯಾಪಾರದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿರಿ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ತಂದೆ ಹಾಗೂ ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ.

ಕುಂಭ ರಾಶಿ:

ಚಂಚಲವಾದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಗಮನ ಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ‌ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ.

ಮೀನ ರಾಶಿ:

ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಬಹುದು. ಹಿರಿಯರ ವಿಚಾರಕ್ಕೆ ದಾಂಪತ್ಯದ ನಡುವೆ ಕೆಲವು ವಿವಾದಗಳು ಉಂಟಾಗಬಹುದು. ಶತ್ರುಗಳು ಅನ್ಯ ಕಾರ್ಯದಲ್ಲಿ ತೊಡಗಿರುವ ಕಾರಣ ನಿಮಗೆ ಬಾಧೆ ಇರದು. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು. ಒಂದೇ ಸಾರಿ ಖರ್ಚಿನ ಎಲ್ಲ ಅವಕಾಶಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಬಂಧುಗಳ‌ ಮನೊಲಿಸುವುದು ವ್ಯರ್ಥವೆನಿಸಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ವಣಿಜ, ಸೂರ್ಯೋದಯ – 06 – 34 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:44 – 12:34, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:04 – 09:34

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 13ರ ದಿನಭವಿಷ್ಯ

ಇಂದು ಲಕ್ಷ್ಮಿ ನಾರಾಯಣ ಪೂಜೆ ಮಾಡಿ. ಹಳದಿ ಬಣ್ಣದ ಹೂವುಗಳನ್ನು ವಿಷ್ಣುವಿಗೆ ಅರ್ಪಿಸಿ. ಬಾಕಿ ಹಣ ವಾಪಸ್ ಬರಲು ಇದು ಸಹಕಾರಿ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಇನ್ನು ಸಾಕು ಎಂದು ನಿರ್ಧಾರ ಮಾಡಿ ನೀವಾಗಿಯೇ ಕೆಲವು ಸಂಬಂಧ, ಸ್ನೇಹದಿಂದ ದೂರವಾಗುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಅದರಲ್ಲೂ ನಿಮ್ಮಲ್ಲಿ ಕೆಲವರು ಸಂಬಂಧಪಟ್ಟವರಿಗೆ ನೇರವಾಗಿ ಈ ಬಗ್ಗೆ ಹೇಳಿಯೇ ದೂರವಾಗಲಿದ್ದೀರಿ. ಮುಖ್ಯವಾಗಿ ನಿಮಗೆ ಹಳೇ ಸಂಗತಿಗಳು ವಿಪರೀತ ಕಾಡಲಿವೆ. ಎಷ್ಟೇ ಪ್ರೀತಿ- ವಿಶ್ವಾಸ ತೋರಿದರೂ ಯಾಕೆ ಕೆಲವರಲ್ಲಿ ನಂಬಿಕೆ ಮೂಡಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹೊಸದಾಗಿ ಹಣ ಹೂಡಿಕೆ ಮಾಡಿ, ಷೇರು- ಮ್ಯೂಚುವಲ್ ಫಂಡ್ ಗಳ ಮೂಲಕವಾಗಿ ಅಥವಾ ಕಮಾಡಿಟಿ ಮಾರ್ಕೆಟ್ ನಲ್ಲಿ ಟ್ರೇಡಿಂಗ್ ಮಾಡಬೇಕು ಎಂದುಕೊಂಡಿರುವವರಿಗೆ ತುಂಬ ಸಹಾಯ ಆಗುವಂಥ ವ್ಯಕ್ತಿಯೊಬ್ಬರ ಪರಿಚಯ ಆಗಲಿದೆ. ಅವರ ಸಲಹೆ- ಸೂಚನೆಗಳಿಂದ ನಿಮಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮಗೆ ಇಷ್ಟದ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಆಗಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಂಗಾತಿ ಜತೆಗಿನ ಬಾಂಧವ್ಯ ಗಟ್ಟಿಯಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ತುಂಬ ಸಂತೋಷವಾಗಿ ದಿನ ಕಳೆಯುವಂಥ ಯೋಗ ಇದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಮಟ್ಟದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಈ ತನಕ ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯಲಿದ್ದು, ಮನಸ್ಸಿಗೆ ಸಮಾಧಾನ ದೊರೆಯಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 13ರ ದಿನಭವಿಷ್ಯ

ಕೃಷಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣಕಾಸಿನ ಹೊಂದಾಣಿಕೆ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಮುಖ್ಯವಾದ ಮಾತುಕತೆ ನಡೆಸುವುದಕ್ಕೆ ತೆರಳುವಾಗ ಹಸಿರು ಬಣ್ಣದ ಕರ್ಚೀಫ್ ಅಥವಾ ವಸ್ತ್ರವನ್ನು ಬಳಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವಿವಿಧ ವಿಚಾರಗಳಿಗೆ ಅಭಿಪ್ರಾಯ ಭೇದಗಳು ಉದ್ಭವ ಆಗಲಿದೆ. ಒಂದು ವೇಳೆ ನೀವು ಇದನ್ನು ಕೂತು, ಮಾತನಾಡಿ ಬಗೆಹರಿಸಿಕೊಳ್ಳದೇ ಹೋದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ಬೇರೆಯವರಿಗೆ ಒಪ್ಪಿಸಿ, ಮುಗಿಸಬೇಕು ಎಂದು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಹೋದೀತು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಕೃಷಿಕರಿದ್ದಲ್ಲಿ ಬೆಳೆ ನಷ್ಟ ಅಥವಾ ಬೇರೆ ಯಾವುದಾದರೂ ರೀತಿಯಿಂದ ಹಣಕಾಸಿನ ವಿಚಾರದಲ್ಲಿ ನಿಮಗೆ ನಷ್ಟ ಆಗುವಂಥ ಯೋಗ ಇದೆ. ಯಾರಿಗಾದರೂ ವಸ್ತುವನ್ನು ಕೊಡುವುದಾಗಿಯೋ ಅಥವಾ ಇಂಥ ಕೆಲಸವನ್ನು ಇಷ್ಟೇ ಸಮಯದಲ್ಲಿ ಮಾಡಿಕೊಡುತ್ತೇನೆ ಎಂದು ಮಾತು ನೀಡುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಸಾಧ್ಯಾಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಡೆಯುವಷ್ಟು ದಿನ ನಾಣ್ಯ ಎಂಬಂತೆ ಕೆಲವು ಕೆಲಸಗಳನ್ನು ಡೆಡ್ ಲೈನ್ ಇಟ್ಟುಕೊಂಡು ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಒಂದು ಹಂತದ ನಂತರ ಆ ಕೆಲಸವನ್ನು ಮಾಡಬಾರದು ಎಂಬ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ನಿಮ್ಮ ಈ ದಿನದ ನಡವಳಿಕೆ ಹಾಗೂ ಮಾತುಕತೆ ಆಪ್ತರಾದವರಿಗೆ ಆಶ್ಚರ್ಯ ಹಾಗೂ ಗಾಬರಿ ಉಂಟುಮಾಡುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 13ರ ದಿನಭವಿಷ್ಯ

ಇಂದು ಸಂಜೆ ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಿ “ಲಕ್ಷ್ಮಿ ಅಷ್ಟೋತ್ತರ” ಪಠಿಸುವುದು ಆರ್ಥಿಕ ಒತ್ತಡ ಕಡಿಮೆ ಮಾಡಲು ಸಹಕಾರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಧೈರ್ಯದ ತೀರ್ಮಾನ ಈ ದಿನ ಉತ್ತಮವಾದ ಫಲ ನೀಡಲಿದೆ. ಇತರರು ನಿಮ್ಮನ್ನು ಎಚ್ಚರಿಸಿ, ಯಾವುದನ್ನು ಮಾಡಬಾರದು ಎಂದು ಹೇಳಿರುತ್ತಾರೋ ಅದೇ ಲಾಭದಾಯಕವಾಗಿ ಮಾರ್ಪಡಲಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಇತರರು ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಹಾಗೂ ಲಾಭದಾಯಕವಾಗಿಯೂ ಮಾಡಿ ಮುಗಿಸಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗೆ ನೀವೇ ದೊಡ್ಡ ಮಟ್ಟದ ಬೆಂಚ್ ಮಾರ್ಕ್ ಹಾಕಿಕೊಂಡು ಅದನ್ನು ನಿಮ್ಮಿಂದ ಮಾಡುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಳ್ಳುವುದಕ್ಕೆ ಹೋಗಬೇಡಿ. ಆಸ್ತಿ- ಜಮೀನು ವಿಚಾರದಲ್ಲಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ದಾರಿಗಳು ಗೋಚರ ಆಗಲಿವೆ. ನಿಮ್ಮಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂಥ ಅವಕಾಶಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹಣಕಾಸಿನ ವಿಚಾರದಲ್ಲಿ ಯಾರು ವಿಪರೀತ ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿದ್ದೀರಿ ಅಂಥವರಿಗೆ ಅದರಿಂದ ಹೊರಬರುವುದಕ್ಕೆ ಇತರರು ಸಹಾಯ ಮಾಡುವ ಸಾಧ್ಯತೆ ಇದೆ. ಅಥವಾ ಒಂದು ವೇಳೆ ನಿಮ್ಮದೇ ವ್ಯವಹಾರಗಳು ಅಥವಾ ವ್ಯಾಪಾರದಲ್ಲಿ ಬರಬೇಕಾದ ಹಣವು ಬಾಕಿ ನಿಂತಿದ್ದಲ್ಲಿ ಅದನ್ನು ವಾಪಸ್ ಪಡೆಯುವುದಕ್ಕೆ ಅವಕಾಶಗಳಿವೆ. ಉದ್ಯೋಗ ವಿಚಾರವಾಗಿ ಯಾರಾದರೂ ಹೊಸ ಆಫರ್ ಹೇಳಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ.

ಲೇಖನ- ಸ್ವಾತಿ ಎನ್.ಕೆ.

Source link

Money9 Financial Freedom Summit: ಚಿಲ್ಲರೆ ಹೂಡಿಕೆದಾರರೇ ಷೇರು ಮಾರುಕಟ್ಟೆಯ ಬೆನ್ನೆಲುಬು; ಬರುಣ್ ದಾಸ್

ನವದೆಹಲಿ, ಮಾರ್ಚ್​​ 12: ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಯ ಬೆನ್ನೆಲುಬು. ಕಳೆದ ಎರಡು ವರ್ಷಗಳಲ್ಲಿ ಷೇರು ಮಾರುಕಟ್ಟೆಯ ನಿಜವಾದ ಹೀರೋಗಳೆಂದರೆ ರಿಟೇಲ್ ಹೂಡಿಕೆದಾರರು ಹೊರತು ಸಾಂಸ್ಥಿಕ ಹೂಡಿಕೆದಾರರಲ್ಲ. ಚಿಲ್ಲರೆ ಹೂಡಿಕೆದಾರರೇ ನವ ಭಾರತದ ಶಕ್ತಿ ಎಂದು ಮನಿ9 ಫೈನಾನ್ಶಿಯಲ್ ಫ್ರೀಡಂ ಶೃಂಗಸಭೆ 2026ರಲ್ಲಿ (Money9 Financial Summit) ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್​​ (Barun Das) ಹೇಳಿದ್ದಾರೆ.

ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದೇ ನಮ್ಮ ಗುರಿ: ಬರುಣ್ ದಾಸ್

ಮನಿ9 ಫೈನಾನ್ಶಿಯಲ್ ಫ್ರೀಡಂ ಶೃಂಗಸಭೆ 2026 ರಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಟಿವಿ9 ನೆಟ್‌ವರ್ಕ್‌ನಲ್ಲಿ ಮನಿ9 ಅನ್ನು ನಾವು ಒಂದು ವಿಶೇಷ ಉದ್ದೇಶದೊಂದಿಗೆ ಆರಂಭಿಸಿದ್ದೇವೆ. ಭಾರತೀಯ ಭಾಷೆಗಳಲ್ಲೇ ಹಣಕಾಸು ಜ್ಞಾನವನ್ನು ಜನರಿಗೆ ತಲುಪಿಸುವ ಮೂಲಕ ಆ ನಿಟ್ಟಿನಲ್ಲಿ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯ ಮಾಡುವುದು ನಮ್ಮ ಉದ್ದೇಶ. ನಮ್ಮಲ್ಲಿ ಬಹುತೇಕ ಜನರು ಹಣಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ನಮ್ಮಗಾಗಿ ಹಣ ದುಡಿಯಲಾರಂಭಿಸಿದಾಗ ನಾವು ಆರ್ಥಿಕವಾಗಿ ಸ್ವಾತಂತ್ರ್ಯರಾಗುತ್ತೇವೆ ಎಂದರು.

2024 ಮತ್ತು 2025ರಲ್ಲಿ ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿದ್ದರೂ, ಆ ಸಮಯದಲ್ಲಿ ಚಿಲ್ಲರೆ ಹೂಡಿಕೆದಾರರು ಷೇರು ಮಾರುಕಟ್ಟೆಯ ಬೆನ್ನೆಲುಬಾದರು. ಕಳೆದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ದ್ವಿಗುಣವಾಗಿದೆ. ಭಾರತೀಯ ಕುಟುಂಬಗಳು ತಮ್ಮ ಪಾರಂಪರಿಕ ಸಂಪತ್ತಾದ ಚಿನ್ನದಿಂದ ಗಳಿಸಿದ ಮೌಲ್ಯವು, ಸಂಪೂರ್ಣ ಷೇರು ಮಾರುಕಟ್ಟೆಯ ಮಾರುಕಟ್ಟೆ ಮೌಲ್ಯದಿಂದ ಬಂದ ಲಾಭಕ್ಕೆ ಸಮಾನವಾಗಿದೆ ಎಂದು ಅವರು ತಿಳಿಸಿದರು.

ಭಾರತೀಯ ಕುಟುಂಬಗಳ ನಿಜವಾದ ಶಕ್ತಿಯೇ ಚಿನ್ನ

ನನಗೆ ಹಲವಾರು ಬಾರಿ ನಮ್ಮ ಅಜ್ಜಿ–ಅಜ್ಜಿಯವರು ಹೇಳಿದ್ದೇ ಸರಿ ಎನ್ನಿಸುತ್ತದೆ. ಚಿನ್ನ ನಿಜವಾಗಿಯೂ ಸಂಕಷ್ಟದ ಸಂದರ್ಭಗಳಲ್ಲಿ ನೆರವಾಗುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು ಒಂದು ಲಕ್ಷ ರೂಪಾಯಿವರೆಗೆ ಏರಿಕೆಯಾಗಿದೆ. ಭಾರತೀಯ ಕುಟುಂಬಗಳಲ್ಲಿ ಸುಮಾರು 27 ಸಾವಿರ ಟನ್ ಚಿನ್ನವಿದ್ದು, ಇದರ ಪರಿಣಾಮವಾಗಿ ಅವರ ಸಂಪತ್ತಿನಲ್ಲಿ ಸುಮಾರು 100 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ. ಇದೇ ಭಾರತೀಯ ಕುಟುಂಬಗಳ ನಿಜವಾದ ಶಕ್ತಿ. ಜಗತ್ತಿನಲ್ಲೇ ಚಿನ್ನದ ಮೇಲೆ ಅತ್ಯಧಿಕ ಸ್ವಾಮ್ಯ ಹೊಂದಿರುವವರು ಭಾರತೀಯರು ಎಂದರು.

ಎಸ್‌ಐಪಿ ಹೂಡಿಕೆಯಲ್ಲಿ ದಾಖಲೆ

ಇತ್ತೀಚಿನ ದಿನಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ಅಂದರೆ ಎಸ್​​ಐಪಿ ಮೂಲಕ ನಡೆಯುತ್ತಿರುವ ಹೂಡಿಕೆಗಳು ಗಮನಾರ್ಹವಾಗಿವೆ. 2025ರ ಡಿಸೆಂಬರ್ ಮತ್ತು 2026ರ ಜನವರಿ ತಿಂಗಳಲ್ಲಿ ಮಾಸಿಕವಾಗಿ ಸುಮಾರು 31 ಸಾವಿರ ಕೋಟಿ ರೂ ಎಸ್‌ಐಪಿ ಹೂಡಿಕೆ ನಡೆದಿದೆ. ಜನವರಿ ವೇಳೆಗೆ ದೇಶದಲ್ಲಿ 26 ಕೋಟಿಗೂ ಹೆಚ್ಚು ಎಸ್‌ಐಪಿ ಖಾತೆಗಳು ಇದ್ದವು.

ಇದನ್ನೂ ಓದಿ: Money9 Summit: 2047ರೊಳಗೆ ಮಹಾರಾಷ್ಟ್ರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ: ಮಹಾರಾಷ್ಟ್ರ ಸಿಎಂ ಫಡ್ನವಿಸ್

ಇನ್ನು ಭಾರತದಲ್ಲಿ ಚಿಲ್ಲರೆ ಹೂಡಿಕೆದಾರರು ಇದೀಗ ಪ್ರಬುದ್ಧರಾಗಿದ್ದು, ಜೊತೆಗೆ ಬುದ್ಧಿವಂತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಹಣಕಾಸು ಒಳಗೊಳ್ಳುವಿಕೆ ಅಭಿಯಾನದ ಪ್ರಯೋಜನವನ್ನು ಅವರು ಸಮರ್ಪಕವಾಗಿ ಪಡೆದುಕೊಂಡಿದ್ದಾರೆ. ‘ಮ್ಯೂಚುವಲ್ ಫಂಡ್ ಸರಿಯೇ’ ಎಂಬ ಸಂದೇಶವನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಕ್ರಮಬದ್ಧ ಹೂಡಿಕೆಗಳ ಮೂಲಕವೇ ಭವಿಷ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯಲ್ಲಿ ನಿಜವಾದ ಸಂಪತ್ತು ನಿರ್ಮಾಣ ಸಾಧ್ಯವೆಂದು ಅವರು ಅರಿತುಕೊಂಡಿದ್ದಾರೆ ಎಂದು ಬರುಣ್ ದಾಸ್ ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​​ನಲ್ಲಿ ಮತ್ತೊಂದು ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ಬೆಂಗಳೂರು, (ಮಾರ್ಚ್ 12): 2026ನೇ ಸಾಲಿನ ಕರ್ನಾಟಕ ಬಜೆಟ್ ಮುಗಿಯುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್​​ನ್ಲಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಸಿಎಂ ಪಟ್ಟಕ್ಕಾಗಿ ಹಠಕ್ಕೆ ಬಿದ್ದಿರುವ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಅಲ್ಲದೆ ಇತ್ತ ಅವರ ಬೆಂಬಲಿಗರು ಗೌಪ್ಯ ಸಭೆ ನಡೆಸುತ್ತಿದ್ದಾರೆ. ಈ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ನಡುವೆ ಸಂಪುಟ ಪುನಾರಚನೆಯ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ ಸಚಿವಾಕಾಂಕ್ಷಿಗಳು ಇಂದು (ಮಾರ್ಚ್ 12) ಪ್ರತ್ಯೇಕ ಸಭೆ ನಡೆಸಿರುವ ಭಾರೀ ಸಂಚನ ಮೂಡಿಸಿದೆ. ಹೌದು…ಬೆಂಗಳೂರಿನ ಬೌರಿಂಗ್ ಕ್ಲಬ್​ನಲ್ಲಿ ಸಿಎಂ‌ ಹಾಗೂ ಡಿಸಿಎಂ ಬಣಗಳ ಶಾಸಕರು ಒಟ್ಟಾಗಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಇನ್ನು ಈ ಸಭೆ ಬಗ್ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದ್ದು, ಏನೆಲ್ಲಾ ಹೇಳಿದ್ದಾರೆ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ- ಎಸ್​ಆರ್​ಹೆಚ್

2026 ರ ಐಪಿಎಲ್ ವೇಳಾಪಟ್ಟಿಯ (IPL 2026 schedule) ಮೊದಲ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 28 ರಂದು ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುಂಚೆಯೇ ಎರಡೂ ತಂಡಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿವೆ. ವಾಸ್ತವವಾಗಿ, ಎರಡೂ ತಂಡಗಳ ಇಬ್ಬರು ಸ್ಟಾರ್ ಆಟಗಾರರು ಮೊದಲ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ಗಾಯಗಳಿಂದ ಬಳಲುತ್ತಿರುವ ಮತ್ತು ಇನ್ನೂ ಫಿಟ್‌ನೆಸ್ ಮರಳಿ ಪಡೆಯದ ಜೋಶ್ ಹೇಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್ ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನ. ಪ್ಯಾಟ್ ಕಮ್ಮಿನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರೆ, ಜೋಶ್ ಹೇಜಲ್‌ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಜೀವಾಳವಾಗಿದ್ದಾರೆ. ಹೀಗಾಗಿ ಇವರಿಬ್ಬರ ಅಲಭ್ಯತೆ ಎರಡೂ ತಂಡಗಳಿಗೆ ದೊಡ್ಡ ತಲೆನೋವಾಗಿದೆ.

ಪ್ಯಾಟ್ ಕಮ್ಮಿನ್ಸ್-ಹೇಜಲ್‌ವುಡ್ ಡೌಟ್

ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹೇಜಲ್‌ವುಡ್ ಗಾಯದ ಕಾರಣದಿಂದಾಗಿ 2026 ರ ಟಿ20 ವಿಶ್ವಕಪ್​ನಿಂದಲೂ ಹೊರಬಿದಿದ್ದರು. ಇದೀಗ ಇವರಿಬ್ಬರು ಐಪಿಎಲ್ 2026 ರ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ವರದಿಯಾಗಿದೆ. ಇಬ್ಬರೂ ಆಟಗಾರರು ಇನ್ನೂ ಚೇತರಿಕೆಯ ಹಾದಿಯಲಿದ್ದು, ವೈದ್ಯಕೀಯ ಅನುಮತಿ ಪಡೆದ ನಂತರವೇ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಪ್ಯಾಟ್ ಕಮ್ಮಿನ್ಸ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಜುಲೈ 2025 ರ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಈ ಗಾಯಕ್ಕೆ ತುತ್ತಾದ ಕಮ್ಮಿನ್ಸ್, ಇದರಿಂದಾಗಿ ಆಶಸ್ ಸರಣಿಯ ಆರಂಭಿಕ ಪಂದ್ಯಗಳಿಂದ ಹೊರಬಿದ್ದರು. ಆದರೆ ಅವರ ಚೇತರಿಕೆ ಪೂರ್ಣಗೊಳ್ಳದ ಕಾರಣ ಅವರನ್ನು 2026 ರ ಟಿ20 ವಿಶ್ವಕಪ್‌ನಿಂದಲೂ ಹೊರಗಿಡಲಾಯಿತು. ಇನ್ನು ವೇಗಿ ಹೇಜಲ್‌ವುಡ್ ಮಂಡಿರಜ್ಜು ಗಾಯ ಮತ್ತು ಅಕಿಲೀಸ್ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದಾರೆ. ನವೆಂಬರ್ 2025 ರಲ್ಲಿ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಮಯದಲ್ಲಿ ಹೇಜಲ್‌ವುಡ್ ಈ ಗಾಯಕ್ಕೆ ತುತ್ತಾದರು. ಇದರಿಂದಾಗಿ ಅವರು ಆಶಸ್‌ ಸರಣಿಯಿಂದಲೂ ಹೊರಗುಳಿದರು. ಅವರ ಚೇತರಿಕೆ ನಿಧಾನವಾಗಿದ್ದರಿಂದ 2026 ರ ಟಿ20 ವಿಶ್ವಕಪ್‌ನಿಂದಲೂ ಅವರನ್ನು ಹೊರಗಿಡಲಾಯಿತು.

IPL 2026: 6 ಉದ್ಘಾಟನಾ ಪಂದ್ಯಗಳನ್ನಾಡಿರುವ ಆರ್​ಸಿಬಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

ಕಮ್ಮಿನ್ಸ್-ಹೇಜಲ್‌ವುಡ್ ಐಪಿಎಲ್ ಪ್ರದರ್ಶನ

ಪ್ಯಾಟ್ ಕಮ್ಮಿನ್ಸ್ 72 ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಓವರ್‌ಗೆ 8.8 ರನ್‌ಗಳ ಎಕಾನಮಿ ದರದೊಂದಿಗೆ 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ವರ್ಷ 14 ಪಂದ್ಯಗಳನ್ನಾಡಿದ ಕಮ್ಮಿನ್ಸ್ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಇತ್ತ ಹೇಜಲ್‌ವುಡ್ 39 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಹೇಜಲ್​ವುಡ್ ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರ ಈ ಪ್ರದರ್ಶನವು ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version