ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ, ಶಂಕಿತ ಆತ್ಮಹತ್ಯೆ – Kannada News | Turkey School Shooting 4 Dead and 20 Injured Suspect Kills Himself

ನವದೆಹಲಿ, ಏಪ್ರಿಲ್ 15: ಟರ್ಕಿಯ ಕಹ್ರಮನ್‌ಮರಾಸ್ ಪ್ರಾಂತ್ಯದ ಮಾಧ್ಯಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 20 ಜನರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆಯ್ಸರ್ ಕ್ಯಾಲಿಕ್ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಶಸ್ತ್ರಸಜ್ಜಿತ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬ ಶಿಕ್ಷಕ ಮತ್ತು ಮೂವರು ವಿದ್ಯಾರ್ಥಿಗಳು ಸೇರಿದ್ದಾರೆ. ಗುಂಡು ಹಾರಿಸಿದ ವಿದ್ಯಾರ್ಥಿ ತನ್ನ ಬ್ಯಾಗ್‌ನಲ್ಲಿ ತನ್ನ ತಂದೆಯ ಗನ್ ತಂದಿದ್ದ. ಗುಂಡು ಹಾರಿಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

Source link

ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ ರವಾನೆ

ದಾವಣಗೆರೆ, (ಏಪ್ರಿಲ್ 15): ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಟಿಕೆಟ್ ಸಂಬಂಧ ಕಾಂಗ್ರೆಸ್​​ನಲ್ಲಿ ಶುರುವಾದ ಯುದ್ಧ ಇದೀಗ ತಲೆದಂಡದ ಹಂತಕ್ಕೆ ಬಂದು ನಿಂತಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪ ಮೇಲೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಇದರಿಂದ ಅವರ ಅಭಿಮಾನಿಗಳು ಹಾಗೂ ಮುಸ್ಲಿಮರು ಆಕ್ರೋಶಗೊಂಡಿದ್ದು, ದಾವಣಗೆರೆಯಲ್ಲಿ ಜಸ್ಟೀಸ್ ಫಾರ್ ಅಬ್ದುಲ್ ಜಬ್ಬಾರ್ ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಅಬ್ದುಲ್ ಜಬ್ಬಾರ್ ಅಭಿಮಾನಿಯೋರ್ವ ಮಾತನಾಡಿ, ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Source link

ನಮ್ಮ ವಿರೋಧ ಮಹಿಳಾ ಮೀಸಲಾತಿಗಲ್ಲ; ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ – Kannada News | We are Against Centre’s Approach not women’s reservation Mallikarjun Kharge After Key Meet

ನವದೆಹಲಿ, ಏಪ್ರಿಲ್ 15: ಹಲವಾರು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿನ ಕ್ಷೇತ್ರ ಪುನರ್ವಿಂಗಡಣೆ ನಿಬಂಧನೆಗಳ ವಿರುದ್ಧ ಒಗ್ಗಟ್ಟಿನಿಂದ ಮತ ಚಲಾಯಿಸಲು ನಿರ್ಧರಿಸಿವೆ. ಆದರೆ ಮಹಿಳಾ ಮೀಸಲಾತಿಯನ್ನು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ನಮ್ಮ ವಿರೋಧ ಕೇಂದ್ರ ಸರ್ಕಾರ ಮಸೂದೆಯನ್ನು ಜಾರಿಗೆ ತರುತ್ತಿರುವ ವಿಧಾನಕ್ಕೇ ವಿನಃ ಮಹಿಳಾ ಮೀಸಲಾತಿಗಲ್ಲ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷ (ಎಎಪಿ) ಹೊರತುಪಡಿಸಿ, ಇಂಡಿಯಾ ಬಣದ ಹಲವಾರು ಪಕ್ಷಗಳ ನಾಯಕರು ಇಂದು ದೆಹಲಿಯ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ಸೇರಿದ್ದರು. ಗುರುವಾರದಿಂದ ಪ್ರಾರಂಭವಾಗುವ ಮೂರು ದಿನಗಳ ವಿಶೇಷ ಸಂಸತ್ತಿನ ಅಧಿವೇಶನದಲ್ಲಿ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಸಭೆ ನಡೆಸಲಾಯಿತು.

ಈ ಸಭೆಯ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ನಾವೆಲ್ಲರೂ ಮಹಿಳಾ ಮೀಸಲಾತಿ ಮಸೂದೆಯ ಪರವಾಗಿದ್ದೇವೆ, ಆದರೆ ಅದನ್ನು ತರುವ ವಿಧಾನಕ್ಕೆ ನಮ್ಮ ವಿರೋಧ ಇದೆ. ಇದು ರಾಜಕೀಯ ಪ್ರೇರಿತ ನಡೆಯಾಗಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಮತ್ತು ನಿಗ್ರಹಿಸಲು, ಸರ್ಕಾರ ಈ ರೀತಿ ಮಾಡುತ್ತಿದೆ. ನಾವು ನಿರಂತರವಾಗಿ ಮಹಿಳಾ ಮೀಸಲಾತಿಯನ್ನು ಬೆಂಬಲಿಸುತ್ತಿದ್ದೇವೆ. ಅಂಗೀಕರಿಸಲಾದ ಹಿಂದಿನ ತಿದ್ದುಪಡಿಯನ್ನು ಜಾರಿಗೆ ತರಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಬಿಜೆಪಿ ನೇತೃತ್ವದ ಸರ್ಕಾರ ಸೀಮಾ ನಿರ್ಣಯದೊಂದಿಗೆ ತಂತ್ರಗಳನ್ನು ಆಡುತ್ತಿದ್ದಾರೆ. ಆದ್ದರಿಂದ, ಈ ಮಸೂದೆಯನ್ನು ವಿರೋಧಿಸಲು ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದ ನಿರ್ಧಾರ ತೆಗೆದುಕೊಂಡಿವೆ” ಎಂದು ಸಭೆಯ ನಂತರ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವೇದಿಕೆ ಸಜ್ಜು; ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸಲು ಮೋದಿ ಸರ್ಕಾರ ಪ್ರಸ್ತಾಪ

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾತನಾಡಿ, ಸೀಮಾ ನಿರ್ಣಯ ಆಡಳಿತ ಪಕ್ಷಕ್ಕೆ ಬಹುಮತವನ್ನು ಗಳಿಸುವ ಸಾಧನವಾಗಿದೆ ಎಂಬುದು ಸ್ಪಷ್ಟವಾಗಿದೆ. ಸೀಮಾ ನಿರ್ಣಯ ಕ್ರಮಕ್ಕೆ ನಾವು ಸಂಪೂರ್ಣವಾಗಿ ವಿರೋಧಿಯಾಗಿದ್ದೇವೆ. ಮಹಿಳಾ ಮೀಸಲಾತಿ ಜಾರಿಗೆ ತರಬೇಕು, ಆದರೆ ನಾವು ಕ್ಷೇತ್ರ ಪುನರ್ವಿಂಗಡಣೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನ ಏಪ್ರಿಲ್ 16ರಿಂದ 18ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಕಡ್ಡಾಯಗೊಳಿಸುವ ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುವುದು. 2029ರಲ್ಲಿ ಇದನ್ನು ಜಾರಿಗೆ ತರಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs LSG: ಬರೋಬ್ಬರಿ 102 ಮೀಟರ್; ಸ್ಟೇಡಿಯಂನಿಂದ ಹೊರ ಹೋದ ಚೆಂಡು – Kannada News | IPL 2026: Mitchell Marsh’s Monstrous 102m Six Off Bhuvneshwar Kumar Goes Viral

ಐಪಿಎಲ್ 2026 ರ 23ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಆರ್‌ಸಿಬಿಯ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್‌ನಲ್ಲಿ ಅಮೋಘ ಸಿಕ್ಸರ್ ಬಾರಿಸಿದರು. ಮಾರ್ಷ್​ ಅವರ ಮಸಲ್ ಪವರ್ ಎಷ್ಟಿತ್ತೆಂದರೆ ಬ್ಯಾಟ್​ಗೆ ಬಡಿದ ಚೆಂಡು ಸ್ಟೇಡಿಯಂನಿಂದ ಹೊರ ಹೋಯಿತು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಮಾಡಿತು. ಮೂರನೇ ಓವರ್‌ ಎಸೆದ ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ಮಿಚೆಲ್ ಮಾರ್ಷ್ ಬೃಹತ್ ಸಿಕ್ಸರ್ ಬಾರಿಸಿದರು. ಭುವನೇಶ್ವರ ಕುಮಾರ್ ಅವರ ಶಾರ್ಟ್ ಎಸೆತವನ್ನು ಆನ್‌ಸೈಡ್ ಕಡೆಗೆ ಮಾರ್ಷ್​ ಪುಲ್ ಶಾಟ್ ಹೊಡೆದರು. ಕ್ರೀಡಾಂಗಣದ ಛಾವಣಿಯ ಮೇಲೆ ಹಾರಿದ ಚೆಂಡು 102 ಮೀಟರ್ ದೂರ ಹೋಗಿ ಬಿತ್ತು. ಇದು ಈ ಆವೃತ್ತಿಯ ಮೂರನೇ ಅತಿ ಉದ್ದದ ಸಿಕ್ಸ್ ಆಗಿದೆ.

ಐಪಿಎಲ್ 2026 ರ ಅತಿ ಉದ್ದದ ಸಿಕ್ಸ್ ಪ್ರಸ್ತುತ ಟಿಮ್ ಡೇವಿಡ್ ಅವರ ಹೆಸರಿನಲ್ಲಿದೆ. ಅವರು ಇದೇ ಮೈದಾನದಲ್ಲಿ 106 ಮೀಟರ್ ಸಿಕ್ಸ್ ಹೊಡೆದಿದ್ದರು. ಕೂಪರ್ ಕಾನೊಲಿಯ ಅವರು ಬಾರಿಸಿದ್ದ 103 ಮೀಟರ್ ಸಿಕ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಬ್ಯಾಟ್ಸ್‌ಮನ್ ಸ್ನೇಹಿ ಪಿಚ್‌ನಲ್ಲಿ ಇಂತಹ ದೀರ್ಘ ಸಿಕ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತವೆ.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳಪೆ ಆರಂಭ ಪಡೆಯಿತು. ಆದಾಗ್ಯೂ, ಮಿಚೆಲ್ ಮಾರ್ಷ್ 32 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ ನಿರ್ಣಾಯಕ 40 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ಕೃನಾಲ್ ಪಾಂಡ್ಯ ಅವರ ಅದ್ಭುತ ಎಸೆತವು ಅವರ ಅರ್ಧಶತಕವನ್ನು ತಲುಪುವುದನ್ನು ತಡೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ದುಲ್ ಜಬ್ಬಾರ್ ಬೆನ್ನಲ್ಲೇ ಜಮೀರ್ ಆಪ್ತೆಗೆ ಗೇಟ್‌ಪಾಸ್, ಉಪಾಧ್ಯಕ್ಷೆ ಸ್ಥಾನದಿಂದ ಉಚ್ಚಾಟನೆ! – Kannada News | Karnataka youth congress leader And Zameer Close Aide afreen khan expelled from Party

ಬೆಂಗಳೂರು, (ಏಪ್ರಿಲ್ 15): ದಾವಣಗೆರೆ (Davanagere) ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರಸ್​​ನಲ್ಲಿ  (Congress) ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಕೆಲವು ದಿನಗಳಿಂದ ಬಿಡುವಿಲ್ಲದ ರಾಜಕೀಯ ಚಟುವಟಿಕೆ ನಡೆಯುತ್ತಿವೆ. ಬೈ ಎಲೆಕ್ಷನ್​​ ವೇಳೆ ಪಕ್ಷ ವಿರೋಧ ಚಟುವಟಿಕೆ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೂ ಸಂಕಷ್ಟ ಎದುರಾಗಿದ್ದು, ಹೈಕಮಾಂಡ್ ಕ್ರಮದ ಬಗ್ಗೆ ಚಿಂತನೆ ನಡೆಸಿದೆ. ಇದರ ಮಧ್ಯೆ ಇದೀಗ ಜಮೀರ್ ಅಹ್ಮದ್ ಖಾನ್ ಆಪ್ತೆ, ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ಸಣ್ಣಪುಟ್ಟ ನಾಯಕರ ತಪ್ಪನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕೆಪಿಸಿಸಿ, ಪಕ್ಷ ವಿರೋಧಿ, ಅಶಿಸ್ತು ರೀತಿ ನಡೆದುಕೊಳ್ಳುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಅದರಂತೆ ತೆ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತೆ ಅಫ್ರಿನ್ ಖಾನ್ ಅವರನ್ನ ಸಹ ಕಾಂಗ್ರೆಸ್​​ನಿಂದ ಉಚ್ಛಾಟನೆ ಮಾಡಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಅಫ್ರಿನ್ ಖಾನ್ ಅವಹೇಳನಕಾರಿ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೆ ರಿಜ್ವಾನ್ ಅರ್ಷದ್ ಅವರನ್ನು ‘ಮೀರ್ ಸಾದಿಕ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಫ್ರಿನ್ ಖಾನ್ ತಲೆದಂಡವಾಗಿದೆ.

ಮೂರ್ಖತನದ ನಿರ್ಧಾರ ಎಂದ ಅಫ್ರಿನ್ ಖಾನ್

ಇನ್ನು ಪಕ್ಷದಿಂದ ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಅಫ್ರಿನ್ ಖಾನ್ ಪಕ್ಷದ ವಿರುದ್ಧ ಸಿಡಿದೆದ್ದಾರೆ. ʼʼನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ. ಇದು ಮೂರ್ಖತನದ ನಿರ್ಧಾರʼʼ ಎಂದು ಲೇವಡಿ ಮಾಡಿದ್ದಾರೆ.

ಜಮೀರ್ ವಿರುದ್ಧವೂ ಕ್ರಮಕ್ಕೆ ಚಿಂತನೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೆ, ಪಕ್ಷದ ಒಂದಿಷ್ಟು ಅಲ್ಪಸಂಖ್ಯಾತ ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ಹುನ್ನಾರ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವರಿಷ್ಠರು, ಮೇಲ್ಮನೆ ಸದಸ್ಯರಾದ ಅಬ್ದುಲ್‌ ಜಬ್ಬಾರ್‌ ಮತ್ತು ನಸೀರ್‌ ಅಹ್ಮದ್ ವಿರುದ್ಧ ಕ್ರಮಕೈಗೊಂಡಿದೆ. ಇದೀಗ ಹಿಟ್ ಲಿಸ್ಟ್​​ನಲ್ಲಿ ಜಮೀರ್ ಅಹ್ಮದ್ ಖಾನ್ ಸಹ ಇದ್ದು, ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ. ಆದ್ರೆ, ಮಂತ್ರಿಮಂಡಲದಿಂದ ವಜಾ ಮಾಡಿದರೆ ತಪ್ಪು ಸಂದೇಶ ಹೋಗುತ್ತೆ. ಇದರಿಂದ ಬೇರೆ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ. ಹೀಗಾಗಿ ಜಮೀರ್ ಅವರನ್ನ ಏಕಾಏಕಿ ಸಚಿವ ಸ್ಥಾನದಿಂದ ವಜಾ ಮಾಡುವುದು ಅಷ್ಟು ಸರಿಯಲ್ಲ ಎಂದು ಹೈಕಮಾಂಡ್​​ಗೆ ತಿಳಿಸಿಲಾಗಿದೆ. ಹೀಗಾಗಿ ಹೈಕಮಾಂಡ್ ಜಮೀರ್ ಅಹ್ಮದ್ ಖಾನ್ ವಿಷಯದಲ್ಲಿ ಕಾದು ನೋಡುವ ಮೊರೆ ಹೋಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:08 pm, Wed, 15 April 26

Source link

ಪ್ರೀತಿಯಲ್ಲಿ ನಂಬಿಕೆ ದ್ರೋಹದ ಕಥೆ? ‘ಲವ್ ಸೀಸನ್ಸ್’ ಕನ್ನಡ ಸಿನಿಮಾ ಟೀಸರ್ ನೋಡಿ – Kannada News | Love Seasons Kannada movie teaser released Ft Mukunda Ramaswami

ಶೀರ್ಷಿಕೆ ಮೂಲಕವೇ ‘ಲವ್ ಸೀಸನ್ಸ್’ (Love Seasons) ಸಿನಿಮಾ ಗಮನ ಸೆಳೆದಿದೆ. ಇದು ಹೊಸಬರ ತಂಡದ ಸಿನಿಮಾ. ತಿಂಗಳ ಹಿಂದಷ್ಟೇ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈಗ ಟೀಸರ್ (Love Seasons Teaser) ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ ಸುದ್ದಿಗೋಷ್ಠಿ ನಡೆಯಸಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ಅವರು ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.

ರಂಗಭೂಮಿ ಹಿನ್ನೆಲೆ ಹೊಂದಿರುವ ಕೃತ್ವಿಕ್ ಅವರು ‘ಲವ್ ಸೀಸನ್ಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕ್ಷತ್ರಿಯ’, ‘ಬುದ್ಧಿವಂತ 2’, ‘ಗುರುದೇವ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಎನ್.ಆರ್. ಮಂಜುನಾಥ (ನೀಲೇರಿ) ಅವರು ‘ಲವ್ ಸೀಸನ್ಸ್’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

‘ಲವ್ ಸೀಸನ್ಸ್’ ಸಿನಿಮಾದ ಟೀಸರ್:

ಹಿರಿಯ ಕಲಾವಿದ ರಾಜೇಶ್ ನಟರಂಗ ಅವರು ‘ಲವ್ ಸೀಸನ್ಸ್’ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶಕರ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಜವಾಬ್ದಾರಿಯುತ ತಂದೆಯ ಪಾತ್ರವನ್ನು ಅವರು ಈ ಚಿತ್ರದಲ್ಲಿ ನಿಭಾಯಿಸಿದ್ದಾರೆ. ಪ್ರೀತಿ ಯಾವ ಕಾಲಕ್ಕೂ ಹಳತಾಗದ ವಿಷಯ. ಆ ಕಾನ್ಸೆಪ್ಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ ಎಂಬ ಸುಳಿವನ್ನು ಅವರು ನೀಡಿದರು.

Love Seasons Movie Team

ಈ ಸಿನಿಮಾಗೆ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ, ಭಜರಂಗಿ ಮೋಹನ್‌ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ಕಾಮಿಡಿ ಕಿಲಾಡಿ ಸದಾನಂದ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಯಶಸ್ವಿಯಾಗಿ 25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಹ್ಯಾಟ್ರಿಕ್ ಗೆಲುವು

‘ಲವ್ ಸೀಸನ್ಸ್’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸದ್ಯದಲ್ಲೇ ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ಸಿನಿಮಾದ ಕಥೆ ಏನು ಎಂಬುದರ ಸುಳಿವು ಟೀಸರ್​ನಲ್ಲಿ ಸಿಕ್ಕಿದೆ. ‘ಹುಡುಗಿಯರನ್ನು ಅಷ್ಟು ಸುಲಭವಾಗಿ ನಂಬಬೇಡ’, ‘ನಮ್ ಹುಡುಗಿ ಸರಿಯಾಗಿದ್ದಾಳೆ ಎಂಬ ನಂಬಿಕೆ ನನಗೆ ಇದೆ’ ಎಂಬಿತ್ಯಾದಿ ಡೈಲಾಗ್​ಗಳು ಟೀಸರ್​ನಲ್ಲಿವೆ. ಆ ಮೂಲಕ ಇದು ಪ್ರೀತಿ, ನಂಬಿಕೆ ಮತ್ತು ದ್ರೋಹಕ್ಕೆ ಸಂಬಂಧಿಸಿದ ಕಥೆ ಇರುಬಹುದು ಎಂಬ ಸುಳಿವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs LSG: ರಿಷಭ್ ಪಂತ್ ಮೊಣಕೈಗೆ ಗಂಭೀರ ಗಾಯ ಮಾಡಿದ ಹೇಜಲ್‌ವುಡ್ ಬೆಂಕಿ ಚೆಂಡು – Kannada News | IPL 2026: Rishabh Pant Suffers Elbow Injury in LSG vs RCB Match, Retires Hurt

ಐಪಿಎಲ್ 2026 (IPL 2026) ರ 23ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ಜೈಂಟ್ಸ್ (RCB vs LSG) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಲಕ್ನೋ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ. ಇದರ ನಡುವೆ ಲಕ್ನೋ ತಂಡದ ನಾಯಕ ರಿಷಭ್ ಪಂತ್ (Rishabh Pant) ತಮ್ಮ ಮೊಣ ಕೈಗೆ ಗಂಭೀರವಾಗಿ ಗಾಯ ಮಾಡಿಕೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದಾರೆ. ಪ್ರಸ್ತುತ ಪಂತ್ ರಿಟೈರ್ಡ್​ ಹರ್ಟ್​ ಆಗಿದ್ದು, ಆ ನಂತರ ಬ್ಯಾಟಿಂಗ್​ಗೆ ಬರಬಹುದು. ಆದರೆ ಅವರು ನೋವಿನಿಂದ ನರಳುತ್ತಿದ್ದನ್ನು ನೋಡಿದರೆ, ಅವರು ಮತ್ತೆ ಬ್ಯಾಟಿಂಗ್‌ ಮಾಡುವುದು ಕಷ್ಟ ಸಾಧ್ಯ.

ಪಂತ್ ಬಲ ಮೊಣಕೈಗೆ ಗಾಯ

ಲಕ್ನೋ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ, ಜೋಶ್ ಹೇಲ್‌ವುಡ್ ಎಸೆದ ಚೆಂಡಿನ ಮೇಲೆ ರಿಷಭ್ ಪಂತ್ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದಾಗ್ಯೂ ವೇಗದಲ್ಲಿ ಬಂದ ಚೆಂಡು ಪಂತ್ ಅವರ ಎಡ ಮೊಣಕೈಗೆ ಬಲವಾಗಿ ಬಡಿಯಿತು. ಚೆಂಡು ಮೊಣಕೈಗೆ ಬಿದ್ದ ಕೂಡಲೇ ಪಂತ್ ತೀವ್ರ ನೋವಿನಿಂದ ನರಳಲಾರಂಭಿಸಿದರು. ಇದನ್ನು ಗಮನಿಸಿದ ಅಂಪೈರ್‌ಗಳು ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಿದರು.

ಲಕ್ನೋ ಫಿಸಿಯೋ ತಕ್ಷಣ ಮೈದಾನಕ್ಕೆ ಬಂದು ಪಂತ್ ಅವರ ಎಡಗೈಗೆ ಚಿಕಿತ್ಸೆ ನೀಡಿದರು. ನೋವು ನಿವಾರಿಸಲು ಮ್ಯಾಜಿಕ್ ಸ್ಪ್ರೇ ಬಳಸಿದರೂ, ಪಂತ್ ತಮ್ಮ ಎಡಗೈಯನ್ನು ಅಲುಗಾಡಿಸಲು ಸಹ ಸಾಧ್ಯವಾಗಲಿಲ್ಲ. ಫಿಸಿಯೋ ಜೊತೆ ದೀರ್ಘ ಚರ್ಚೆಯ ನಂತರ, ಪಂತ್ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಬಯಸದೆ ಗಾಯಗೊಂಡು ನಿವೃತ್ತಿ ಹೊಂದಲು ನಿರ್ಧರಿಸಿದರು. ಕೇವಲ 3 ಎಸೆತಗಳನ್ನು ಎದುರಿಸಿದ ಪಂತ್ ಯಾವುದೇ ರನ್ ಗಳಿಸದೆ ಮೈದಾನವನ್ನು ತೊರೆದರು.

RCB vs LSG IPL 2026 Live Score: ಲಕ್ನೋ 4ನೇ ವಿಕೆಟ್ ಪತನ

ರೋಹಿತ್- ಕೊಹ್ಲಿಗೂ ಇಂಜುರಿ

ಪ್ರತಿ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಆಟಗಾರರ ಇಂಜುರಿ ಸರಣಿ ಮುಂದುವರೆದಿದೆ. ಇತ್ತೀಚೆಗೆ, ಮುಂಬೈ ಇಂಡಿಯನ್ಸ್‌ನ ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ನಿವೃತ್ತಿ ಹೊಂದಬೇಕಾಯಿತು. ಅವರು ಕೂಡ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೇ ಗಾಯಗೊಂಡು ನಿವೃತ್ತರಾಗಿದ್ದರು. ಬ್ಯಾಟಿಂಗ್ ಮಾಡುವಾಗ ರೋಹಿತ್ ಅವರ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡಿತು. ಹೀಗಾಗಿ ಮೈದಾನದಲ್ಲಿ ಚಿಕಿತ್ಸೆ ಪಡೆದ ರೋಹಿತ್ ಅವರ ಮೊಣಕಾಲಿಗೆ ಬ್ಯಾಂಡೇಜ್ ಹಾಕಲಾಯಿತು, ಆದರೆ ನೋವು ಉಲ್ಬಣಗೊಂಡ ಕಾರಣ ರೋಹಿತ್​ಗೆ ಬ್ಯಾಟಿಂಗ್‌ ಮುಂದುವರೆಸಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇಂದಿನ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:34 pm, Wed, 15 April 26

Source link

ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ – Kannada News | WhatsApp Chats, Malaysia Linked Preacher; TCS Nashik conversion case widens

ನವದೆಹಲಿ, ಏಪ್ರಿಲ್ 15: ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬಿಪಿಒ ಕಚೇರಿಯಲ್ಲಿನ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ಕಾರ್ಪೋರೇಟ್ ಜಿಹಾದ್​ ಎಂದು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಈ ಪ್ರಕರಣದ ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಂಪರ್ಕವಿರುವ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲಿ ಗುಪ್ತ ಪೊಲೀಸ್ ಕಾರ್ಯಾಚರಣೆ ನಡೆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​​ನಲ್ಲಿ (TCS) ರಹಸ್ಯವಾಗಿ ಹೌಸ್ ಕೀಪಿಂಗ್ ಸಿಬ್ಬಂದಿಯಂತೆ ನಿಯೋಜಿಸಲಾಗಿತ್ತು. ವಾಟ್ಸಾಪ್ ಚಾಟ್‌ಗಳು, ಕಿರುಕುಳಕ್ಕೊಳಗಾದವರ ಹೇಳಿಕೆಗಳು ಮತ್ತು ಶಂಕಿತ ಮಲೇಷ್ಯಾ ಸಂಬಂಧಿ ಧರ್ಮಗುರುವಿನ ವಿರುದ್ಧದ ಸಾಕ್ಷಿಗಳು ಆ ಕಚೇರಿಯೊಳಗೆ ಮತಾಂತರ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಪುರಾವೆಗಳಾಗಿದ್ದವು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಎಸ್‌ಐಟಿ ಮೂಲಗಳ ಪ್ರಕಾರ, ಆರೋಪಿಗಳ ಹೊರತಾಗಿ ಇನ್ನೂ 12 ಉದ್ಯೋಗಿಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 8 ಮಹಿಳೆಯರು ಮತ್ತು ಒಬ್ಬ ಪುರುಷನ ದೂರುಗಳ ಆಧಾರದ ಮೇಲೆ 9 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಆರೋಪಗಳಲ್ಲಿ ಲೈಂಗಿಕ ಕಿರುಕುಳ, ಮದುವೆಯ ನೆಪದಲ್ಲಿ ಅತ್ಯಾಚಾರ, ಧಾರ್ಮಿಕ ಕುಶಲತೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದು ಸೇರಿವೆ.

ಇದನ್ನೂ ಓದಿ: ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಪೊಲೀಸರ ಅಂಡರ್​ಕವರ್ ಆಪರೇಷನ್; ಸಿಕ್ಕಿಬಿದ್ದ ಕಾಮಾಂಧರು

ಆರೋಪಿಗಳಾದ ಟಿಸಿಎಸ್ ಉದ್ಯೋಗಿಗಳು ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ್ದಾರೆ ಮತ್ತು ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ಗಳು ಹೇಳುತ್ತವೆ. ಈ ಘಟನೆಗಳ ಬಗ್ಗೆ 18ರಿಂದ 25 ವರ್ಷ ವಯಸ್ಸಿನ ಮಹಿಳೆಯರು ದೂರು ನೀಡಿದ್ದರು. 2022ರಿಂದ ಆರಂಭವಾಗಿ 3 ವರ್ಷಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಲ್ಲಿಯವರೆಗೆ, ಟಿಸಿಎಸ್​​ನ ಟೀಂ ಲೀಡರ್ ಮತ್ತು ಎಂಜಿನಿಯರ್‌ಗಳು ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇತರರ ವಿರುದ್ಧ ತನಿಖೆ ಮುಂದುವರೆದಿದೆ. ಹೆಚ್​ಆರ್​ ಮ್ಯಾನೇಜರ್ ನಿದಾ ಖಾನ್ ಅವರು ತಲೆಮರೆಸಿಕೊಂಡಿದ್ದು, ಅಧಿಕಾರಿಗಳು ಸಂಸ್ಥೆಯೊಳಗಿನ ಅವರ ಪಾತ್ರ ಮತ್ತು ನೇಮಕಾತಿ ಪದ್ಧತಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಜಾಲವನ್ನು ಪತ್ತೆಹಚ್ಚಲು ರಹಸ್ಯ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಟಿಸಿಎಸ್​ ಮತಾಂತರ, ಲೈಂಗಿಕ ಕಿರುಕುಳ ಪ್ರಕರಣ; ಕಠಿಣ ತನಿಖೆಗೆ ಟಾಟಾ ಕಂಪನಿ​ ಆದೇಶ

ಪೊಲೀಸರು 4 ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​ ಕ್ಯಾಂಪಸ್‌ನೊಳಗೆ ನಿಯೋಜಿಸಿದ್ದರು. ಅವರ ಸಂಶೋಧನೆಗಳು ಈ ಆರೋಪಗಳನ್ನು ಪರಿಶೀಲಿಸಲು ಸಹಾಯ ಮಾಡಿದೆ. ಮಲೇಷ್ಯಾದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾದ ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿ ವಾಟ್ಸಾಪ್ ಸಂಭಾಷಣೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ವೀಡಿಯೊ ಕರೆಗಳ ಮೂಲಕ ಪರಿಚಯಿಸಲ್ಪಟ್ಟ ಧರ್ಮಗುರು ಎಂದು ಶಂಕಿಸಲಾಗಿದೆ. ಅವರ ಗುರುತು ಮತ್ತು ಪಾತ್ರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ನೇಮಕಾತಿ ಪದ್ಧತಿಗಳು ಸೇರಿದಂತೆ ಟಿಸಿಎಸ್‌ನಲ್ಲಿ ಆಂತರಿಕ ಪ್ರಕ್ರಿಯೆಗಳನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಕೆಲವು ಉದ್ಯೋಗಿಗಳು ಮಹಿಳೆಯರಿಗೆ ಉದ್ಯೋಗ ಮತ್ತು ಸಂಬಳದ ಭರವಸೆ ನೀಡಿ ಆಮಿಷವೊಡ್ಡಿದ್ದಾರೆ ಮತ್ತು ಅವರ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಟಿಸಿಎಸ್ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದು, ಆರೋಪಿಗಳಾಗಿರುವ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಕೋರ್ಟ್ ತೀರ್ಪಿನ ಬಳಿಕ ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ – Kannada News | Dharwad Yogesh Gowda Murder Case: Main Accused Basavaraj muttagi talks after Court verdict

ಧಾರವಾಡ, (ಏಪ್ರಿಲ್ 15): ಯೋಗೇಶ್ ಗೌಡ ಹತ್ಯೆ ಪ್ರಕರಣದ (Yogesh Gowda Murder Case) ಸುದೀರ್ಘ 10 ವರ್ಷಗಳ ಕಾಲ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದ್ದು, ಒಟ್ಟು ಆರೋಪಿಗಳ ಪೈಕಿ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ ಆದೇಶ ಹೊರಡಿಸಿದೆ. ಉಳಿದ ಆರೋಪಿಗಳಲ್ಲಿ ಇಬ್ಬರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳೆಂದು ಪರಿಗಣಿಸಲಾಗಿದೆ. ಇನ್ನು ಕೋರ್ಟ್ ತೀರ್ಪಿನ ಬಳಿಕ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಪ್ರತಿಕ್ರಿಯಿಸಿದ್ದು, ಇದು ನ್ಯಾಯಕ್ಕೆ ಸಿಕ್ಕ ಜಯ. ನ್ಯಾಯಾಂಗ ಮೇಲೆ ವಿಶ್ವಾಸ ಹೆಚ್ಚಾಗಿದೆ. ಈ ತೀರ್ಪಿನಿಂದ ನ್ಯಾಯಾಂಗದ ಮೇಲೆ ವಿಶ್ವಾಸ ಬರುವಂತಾಗಿದೆ. ರಾಜಕಾರಣಿಗಳ ಮಾತು ಕೇಳದಂತೆ ಯುವಕರಿಗೆ ವಿನಂತಿಸಿಕೊಳ್ಳುವೆ. ನನಗೆ, ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ನನಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಅದಕ್ಕೆ ಬಂದು ಸಾಕ್ಷಿ ನುಡಿದಿದ್ದೇನೆ. ನಾವು ದಾರಿ ತಪ್ಪಿದಾಗ ಕುಟುಂಬವೂ ದೂರವಾಗುತ್ತದೆ. ನಾವು ಮಾದರಿಯಾಗಿ ಜೀವನ ಮಾಡಬೇಕಾಗಿದೆ. ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: ಕೈ ಶಾಸಕ ವಿನಯ್ ಕುಲಕರ್ಣಿ ಸೇರಿ 17 ಜನ ದೋಷಿ, ಕೋರ್ಟ್ ಮಹತ್ವದ ತೀರ್ಪು

Source link

42 ವರ್ಷ ವಯಸ್ಸಿನ ಧನುಷ್​ಗೆ 20ರ ಪ್ರಾಯದ ಸಾರಾ ಅರ್ಜುನ್ ಜೋಡಿ – Kannada News | Sara Arjun Dhanush D56 movie casting age gap controversy details

ಬಾಲನಟಿಯಾಗಿ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾಗಿ ಈಗ ನಾಯಕಿಯಾಗಿ ಯಶಸ್ಸು ಕಂಡಿರುವ ಸಾರಾ ಅರ್ಜುನ್ (Sara Arjun) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾದಲ್ಲಿ ಅವರ ನಟನೆ ಗಮನ ಸೆಳೆಯಿತು. ಈಗ ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ಮುಂದಿನ ಚಿತ್ರಕ್ಕೆ (D56) ನಾಯಕಿಯಾಗಿ ಸಾರಾ ಅರ್ಜುನ್ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಹರದಾಡುತ್ತಿದೆ. ಧನುಷ್ (Dhanush) ಮತ್ತು ಸಾರಾ ಅರ್ಜುನ್ ನಡುವೆ ಇರುವ ವಯಸ್ಸಿನ ಅಂತರದ ಕಾರಣದಿಂದ ಈ ವಿಷಯ ಚರ್ಚೆ ಆಗುತ್ತಿದೆ.

ಸಾರಾ ಅರ್ಜುನ್ ಅವರು ಧನುಷ್​ಗೆ ನಾಯಕಿ ಆಗುತ್ತಾರೆ ಎಂಬ ವಿಷಯ ಕೇಳಿಬರುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಇದಕ್ಕೆ ಮುಖ್ಯ ಕಾರಣ ಧನುಷ್ ಮತ್ತು ಸಾರಾ ನಡುವಿನ ವಯಸ್ಸಿನ ಅಂತರ. ಧನುಷ್ ಅವರಿಗೆ ಈಗ 42 ವರ್ಷ ವಯಸ್ಸು. ಆದರೆ ಸಾರಾ ಅರ್ಜುನ್ ಅವರಿಗೆ ಕೇವಲ 20 ವರ್ಷ ವಯಸ್ಸು!

ಇವರಿಬ್ಬರ ನಡುವೆ ಸುಮಾರು 22 ವರ್ಷಗಳಿಗೂ ಹೆಚ್ಚು ಅಂತರವಿದೆ. ಆದ್ದರಿಂದ ಚರ್ಚೆ ಜೋರಾಗಿದೆ. ಸಾರಾ ಅರ್ಜುನ್ ಅವರಿಗೆ ಇಂತಹ ಟೀಕೆಗಳು ಎದುರಾಗುತ್ತಿರುವುದು ಇದೇ ಮೊದಲಲ್ಲ. ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸುವಾಗಲೂ ಇದೇ ರೀತಿಯ ವಯಸ್ಸಿನ ಅಂತರದ ಚರ್ಚೆಗಳು ನಡೆದಿದ್ದವು. ಆದರೆ, ಚಿತ್ರ ತೆರೆಕಂಡ ಮೇಲೆ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಸಾರಾ ಅವರು ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದರು.

ಈಗ ಎಲ್ಲರ ಕಣ್ಣು ಧನುಷ್ ಅಭಿನಯದ 56ನೇ ಚಿತ್ರದ ಮೇಲಿದೆ. ಸಾರಾ ಅವರು ಧನುಷ್ ಜೊತೆಗೂ ‘ಧುರಂಧರ್’ ರೀತಿಯ ಮ್ಯಾಜಿಕ್ ಮಾಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಚಿತ್ರದ ಕಥೆ ಮತ್ತು ಪಾತ್ರಕ್ಕೆ ಈ ಜೋಡಿ ಪೂರಕವಾಗಿದ್ದರೆ, ವಯಸ್ಸಿನ ಅಂತರದ ಬಗ್ಗೆ ನಡೆಯುತ್ತಿರುವ ಈ ಟೀಕೆ ತಾನಾಗಿಯೇ ತಣ್ಣಗಾಗಬಹುದು ಎಂಬುದು ಫ್ಯಾನ್ಸ್ ಅಭಿಪ್ರಾಯ.

ಇದನ್ನೂ ಓದಿ: ಮಧುಬಾಲಾ ಪಾತ್ರ ಮಾಡಲಿರುವ ಧುರಂಧರ್ ನಟಿ ಸಾರಾ ಅರ್ಜುನ್? ಬನ್ಸಾಲಿ ನಿರ್ಮಾಣದ ಚಿತ್ರಕ್ಕೆ ಸಿದ್ಧತೆ

‘ಧುರಂಧರ್ 2’ ದೊಡ್ಡ ಸಕ್ಸಸ್ ಆಗಿರುವುದರಿಂದ ಸಾರಾ ಅರ್ಜುನ್ ಅವರಿಗೆ ಭರ್ಜರಿ ಆಫರ್​ಗಳು ಬರುತ್ತಿವೆ. ಅವರ ವೃತ್ತಿಜೀವನದಲ್ಲಿ ‘D56’ ಒಂದು ಪ್ರಮುಖ ಮೈಲಿಗಲ್ಲಾಗುವ ಸಾಧ್ಯತೆಯಿದೆ. ವಯಸ್ಸಿನ ಅಂತರದ ಬಗ್ಗೆ ಕೇಳಿಬರುತ್ತಿರುವ ಟೀಕೆಗೆ ಸಾರಾ ಅರ್ಜುನ್ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version