ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿರುವ ಗಂಭೀರ್, ಭಾರತ ತಂಡದಲ್ಲಿರುವ ಆಟಗಾರರು ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳ ಯುಗ ಮುಗಿದಿದೆ. ತಮ್ಮ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕು.
ಶತಕ ಅಥವಾ ಅರ್ಧಶತಕಕ್ಕಾಗಿ ಆಡಿ ಸಂಭ್ರಮಿಸುವುದನ್ನು ನಿಲ್ಲಿಸಿ, ಟ್ರೋಫಿಗಳನ್ನು ಗೆದ್ದು ಸಂಭ್ರಮಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.

ತಂಡದ  ಮುಖ್ಯ ಉದ್ದೇಶ ಟ್ರೋಫಿ ಗೆಲ್ಲುವುದೇ ಆಗಿರಬೇಕು. ಇದರ ಹೊರತಾಗಿ ವೈಯಕ್ತಿಕ ರನ್ ಗಳಿಸುವುದಲ್ಲ. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಂಡದ ಮೊತ್ತವನ್ನು ಹೆಚ್ಚಿಸಲು ಆಡಬೇಕು ಎಂಬುದನ್ನು ಗೌತಮ್ ಗಂಭೀರ್ ಒತ್ತಿ ಹೇಳಿದ್ದಾರೆ.

ಇದಕ್ಕೆ ಸಂಜು ಸ್ಯಾಮ್ಸನ್ ಅವರ ಉದಾಹರಣೆಯನ್ನು ಗಂಭೀರ್ ಮುಂದಿಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ್ದರು.

ಸಂಜು ತಮ್ಮ ಶತಕಕ್ಕಾಗಿ ನಿಧಾನವಾಗಿ ಆಡಿದ್ದರೆ ತಂಡದ ಮೊತ್ತ 250 ದಾಟುತ್ತಿರಲಿಲ್ಲ.  ವೈಯಕ್ತಿಕ ದಾಖಲೆಗಿಂತ ತಂಡದ ವೇಗಕ್ಕೆ ಆದ್ಯತೆ ನೀಡಿದ್ದರಿಂದಲೇ ಭಾರತ ಗೆಲ್ಲಲು ಸಾಧ್ಯವಾಯಿತು. ಎಲ್ಲರಲ್ಲೂ ಇಂತಹ ಮನಸ್ಥಿತಿ ಮೂಡಬೇಕು.

ಸ್ವಾರ್ಥಕ್ಕಾಗಿ ಆಡುವುದನ್ನು ನಿಲ್ಲಿಸಿ ತಂಡದ ಗೆಲುವಿಗಾಗಿ ಶ್ರಮಿಸಬೇಕು. ಅಲ್ಲದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಲೇಬೇಕು. ನನ್ನ ಕೆಲಸ ಬಲಿಷ್ಠ ತಂಡವನ್ನು ರೂಪಿಸುವುದಾಗಿದೆ. ಬದಲಾಗಿ ಸೂಪರ್ ಸ್ಟಾರ್​​ಗಳನ್ನು ಹುಟ್ಟು ಹಾಕುವುದಲ್ಲ ಎಂದು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.

ನನ್ನ ಉದ್ದೇಶ ಸೂಪರ್ ಟೀಮ್ ರೂಪಿಸುವುದು. ಬದಲಾಗಿ ಸೂಪರ್ ಸ್ಟಾರ್​ಗಳನ್ನು ಹುಟ್ಟುಹಾಕುವುದಲ್ಲ. ಹೀಗಾಗಿ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಹಿತಾಸಕ್ತಿಗಾಗಿ ಆಡಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಡಕ್ ಸೂಚನೆ ನೀಡಿದ್ದಾರೆ.

ಇಲ್ಲಿ ಗೌತಮ್ ಗಂಭೀರ್ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಒತ್ತಿ ಒತ್ತಿ ಹೇಳಿರುವ ಉದ್ದೇಶವೇನು? ಇದನ್ನು ಯಾರಿಗಾಗಿ ಹೇಳಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಮುಂಬರುವ ಏಕದಿನ ವಿಶ್ವಕಪ್​​ಗೂ ಮುನ್ನ ಗಂಭೀರ್ ಇಂತಹದೊಂದು ಖಡಕ್ ಸೂಚನೆಗಳನ್ನು ಯಾರಿಗೆ ನೀಡಿದ್ದಾರೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

ಒಟ್ಟಿನಲ್ಲಿ ಟಿ20 ವಿಶ್ವಕಪ್​ ಗೆದ್ದ ಬಳಿಕ ಗೌತಮ್ ಗಂಭೀರ್ ಹೊಸ ಉತ್ಸಾಹದಲ್ಲಿದ್ದು, ಈ ಉತ್ಸಾಹದೊಂದಿಗೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದ್ದಾರೆ.

 

Source link

Horoscope Today 12​​​​​​th​​ March​: ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 12​​​​​​​, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದಲ್ಲಿ, ಮೂಲಾ ನಕ್ಷತ್ರ, ಸಿದ್ಧಿ ಯೋಗ ಇರತಕ್ಕಂತಹ ಈ ದಿನದ ಗ್ರಹಗಳ ಸ್ಥಾನ ಮತ್ತು ಅವುಗಳ ಪ್ರಭಾವದ ಬಗ್ಗೆ ವಿವರಿಸಲಾಗಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನು ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ.

ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಕುಟುಂಬ, ಆರೋಗ್ಯ, ಪ್ರೇಮ ವ್ಯವಹಾರಗಳು, ವಿದ್ಯಾರ್ಥಿ ಜೀವನ, ಪ್ರಯಾಣ ಯೋಗ ಮತ್ತು ಶುಭ-ಅಶುಭ ಘಟನೆಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಪ್ರತಿ ರಾಶಿಯವರಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ವಿಶೇಷ ಮಂತ್ರಗಳನ್ನು ಸಹ ಸೂಚಿಸಲಾಗಿದೆ.

 

 

 

Source link

ಮದುವೆಯಾಗಿ 3 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ: ಪ್ರಿಯಕರನ ಜೊತೆ ಸೇರಿ ಕೊಲೆ

ತುಮಕೂರು, ಮಾರ್ಚ್​​ 12: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ಮದುವೆಯಾಗಿ ಮೂರು ತಿಂಗಳು ಕಳೆಯುವುದರ ಒಳಗೆ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಶಾಕಿಂಗ್​​ ವಿಚಾರ ತನಿಖೆ ವೇಳೆ ಬಯಲಾಗಿದೆ. ಪ್ರಕರಣ ಸಂಬಂಧ ಫರ್ಜಾನ (31), ಧನರಾಜ್ (24) ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಏನು?

ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷ ಕುಟುಂಬದವರ ನಿಶ್ಚಯದಂತೆ ಇದೇ ವರ್ಷ ಜನವರಿಯಲ್ಲಿ ಫರ್ಜಾನ ಎಂಬಾಕೆಯನ್ನ ವಿವಾಹವಾಗಿದ್ದ. ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ ಮನ್ಸೂರ್ ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲೆಂದು ಹೋದವ ನಾಪತ್ತೆಯಾಗಿದ್ದ. ಆ ಬಳಿಕ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದಾಗ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಚಿಕ್ಕಮಗಳೂರಿನ ಯುವಕರ ಗ್ಯಾಂಗ್ ಕೃತ್ಯ ಎಸಗಿರೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಟೆಕ್ನಿಕಲ್ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಆರಂಭದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ; ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಆರೋಪಿಗಳ ಪೈಕಿ ಧನರಾಜ್​​ ಎಂಬಾತನ ಜೊತೆ ಕೊಲೆಯಾದ ಮನ್ಸೂರ್​​ ಪತ್ನಿ ಫರ್ಜಾನ್ ಪ್ರೇಮ ಸಂಬಂಧ ಹೊಂದಿದ್ದಳು. ಕಳೆದ ಏಳು ತಿಂಗಳಿನಿಂದ ಇದು ನಡೆಯುತ್ತಿತ್ತು ಎನ್ನಲಾಗಿದೆ. ಅಸಲಿಗೆ ಈ ಮೊದಲು ಫರ್ಜಾನಗೆ ನಾಲ್ಕು ವರ್ಷದ ಹಿಂದೆ ಪೊಷಕರ ನಿಶ್ಚಿಯದಂತೆ ವಿವಾಹವಾಗಿತ್ತು.ಆದರೆ ಅನಾರೋಗ್ಯದಿಂದಾಗಿ ಈಕೆಯ ಗಂಡ ಮೃತಪಟ್ಟಿದ್ದ. ಆ ಬಳಿಕ ಒಂಟಿಯಾಗಿದ್ದ ಫರ್ಜಾನ ಅಕ್ಕನ ಭೇಟಿಗೆಂದು ಚಿಕ್ಕಮಗಳೂರಿಗೆ ತೆರಳುತ್ತಿದ್ದಳು. ಈಕೆಯ ಸಹೋದರಿ ವೆಂಕಟೇಶ್​​ ಜೊತೆ ಸಂಬಂಧ ಹೊಂದಿದ್ದು, ಆತನ ಮೂಲಕ ಕ್ಯಾಟರಿಂಗ್ ಕೆಲಸಗಾರನಾಗಿದ್ದ ಧನರಾಜ್ ಪರಿಚಯವಾಗಿತ್ತು. ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಲವ್​​ನಲ್ಲಿ ಬಿದ್ದಿದ್ದ ಜೋಡಿ ಚಿಕ್ಕಮಗಳೂರಿನ ತುಂಬ ಓಡಾಡಿದ್ದು, ಒಮ್ಮೆ ತಿಪಟೂರಿನ ರೈಲು ನಿಲ್ದಾಣದ ಬಳಿ ಸಿಕ್ಕಿಬಿದ್ದಿದ್ದರು. ಬಳಿಕ ತರಾತುರಿಯಲ್ಲಿ ಮನ್ಸೂರ್​​ ಜೊತೆ ಫರ್ಜಾನ ವಿವಾಹವನ್ನು ಕುಟುಂಬಸ್ಥರು ನೆರವೇರಿಸಿದ್ದರು ಎನ್ನಲಾಗಿದೆ.

ಇನ್ನು ವಿವಾಹದ ಬಳಿಕ ಧನರಾಜ್​​ ಜೊತೆ ಫರ್ಜಾನಗೆ ಇದ್ದ ಸಂಪರ್ಕ ಕಡಿತಗೊಂಡಿತ್ತು. ಆದರೆ ಆತನಿಗಾಗಿ ಹೊಸ ಸಿಮ್ ಖರೀದಿ ಮಾಡಿದ್ದ ಫರ್ಜಾನ ಮತ್ತೆ ಧನರಾಜ್​​ನನ್ನು ಫೋನ್​​ ಮೂಲಕ ಸಂಪರ್ಕಿಸಿದ್ದಳು. ಮತ್ತೆ ತಾವು ಒಂದಾಗಬೇಕೆಂದು ಬಯಸಿ ಮನ್ಸೂರ್​​ ಕೊಲೆಗೆ ಪ್ಲ್ಯಾನ್​​ ಮಾಡಿದ್ದರು. ಅದರಂತೆ ದರ್ಶನ್ ಮುಖಾಂತರ ಮಾರ್ಚ್ 4ರಂದು ಗುಜರಿ ವಸ್ತುಗಳು ಇರೋದಾಗಿ ಹೇಳಿ ಮನ್ಸೂರ್​​ಗೆ ಕರೆ ಮಾಡಿ ಆರೋಪಿಗಳು ಕರೆಸಿಕೊಂಡಿದ್ದರು. ಆತ ಬರುತಿದ್ದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದರೂ, ಮನ್ಸೂರ್​​ಗೆ ದರ್ಶನ್​​ ಮಾಡಿದ್ದ ಕರೆಯಿಂದ ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

Source link

ಬೆಂಗಳೂರಿಗರೇ ಗಮನಿಸಿ: ಫ್ರೀಡಂ ಪಾರ್ಕ್​​ ಸುತ್ತಮುತ್ತ ಇಂದು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು, ಮಾರ್ಚ್​​ 12: ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಫ್ರೀಡಂ ಪಾರ್ಕ್​​​ನಲ್ಲಿ ಪ್ರತಿಭಟನೆ ಹಿನ್ನೆಲೆ ಶೇಷಾದ್ರಿ ರಸ್ತೆಯ ಮೂಲಕ ಜನರು ಮತ್ತು ವಾಹನಗಳು ಹೆಚ್ಚಾಗಿ ಆಗಮಿಸುವ ಕಾರಣ ಫ್ರೀಡಂ ಪಾರ್ಕ್ ಸುತ್ತ ಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಫ್ರೀಡಂಪಾರ್ಕ್​ ಸುತ್ತಮುತ್ತ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಟ್ರಾಫಿಕ್​​ ಪೊಲೀಸರು ಮಾಹಿತಿ ನೀಡಿದ್ದು, ಶಾಂತಲಾ ಜಂಕ್ಷನ್, ಖೋಡ್ ಸರ್ಕಲ್​ನಿಂದ ಆನಂದ ರಾವ್ ಫ್ಲೈಓವರ್​, ಓಲ್ಡ್ JDS ಕಚೇರಿ ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂಪಾರ್ಕ್​​ವರೆಗೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆ ನೀಡಲಾಗಿದೆ.

ಪರ್ಯಾಯ ಮಾರ್ಗಗಳು

ಲುಲು ಮಾಲ್, ಕೆಎಫ್‌ ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಫೈ ಓವರ್, ರೇಸ್ ಕೋರ್ಸ್ ರಸ್ತೆ.

ಮೈಸೂರು ಬ್ಯಾಂಕ್‌ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ: ಕೆ.ಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ. ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆ.ಎಫ್.ಎಂ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್, ರೇಸ್ ಕೋರ್ಸ್ ಫೈ ಓವರ್ ರಸ್ತೆ ಮೂಲಕ ಸಂಚರಿಸುವುದು.

ಚಾಲುಕ್ಯ ಸರ್ಕಲ್​​ನಿಂದ ಮೈಸೂರು ಬ್ಯಾಂಕ್ ಕಡೆಗೆ: ಚಾಲುಕ್ಯ ಸರ್ಕಲ್, ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್ ಪೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ ನಿಂದ ತೆರಳುವುದು.

ಕಾಳಿದಾಸ ರಸ್ತೆ ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ: ಕನಕದಾಸ ಜಂಕ್ಷನ್ ಬಲ ತಿರುವು ಸಾಗರ ಜಂಕ್ಷನ್ ಕಡೆಗೆ.

ಮೌರ್ಯ ಸುಬ್ಬಣ್ಣ ಜಂಕ್ಷನ್​​ನಿಂದ ಫ್ರೀಡಂ ಪಾರ್ಕ್ ಕಡೆಗೆ: ಸುಬ್ಬಣ್ಣ ಜಂಕ್ಷನ್​​ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ ತೆರಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ವಾಹನ ಮಾಲೀಕರ ಗಮನಕ್ಕೆ; ಇನ್ಮುಂದೆ ಗಾಡಿ ಎಫ್ಸಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

ಟಿನ್ ಫ್ಯಾಕ್ಟರಿ ಕಡೆಗೆ ನಿಧಾನಗತಿಯ ಸಂಚಾರ

ದೇವಸಂದ್ರ ಮಾರುಕಟ್ಟೆ ಬಳಿ ವಾಹನವೊಂದು ರಸ್ತೆಯಲ್ಲಿಯೇ ಕೆಟ್ಟು ನಿಂತಿರುವ ಕಾರಣ ಟ್ರಾಫಿಕ್​​ ಸಮಸ್ಯೆ ಉಂಟಾಗಿದ್ದು, ಟಿನ್ ಫ್ಯಾಕ್ಟರಿ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದೂ ಬೆಂಗಳೂರು ಸಂಚಾರ ಪೊಲೀಸರು ಎಕ್ಸ್​​ ಪೋಸ್ಟ್​​ ಮೂಲಕ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ: ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಮಡಿಕೇರಿ/ ಚಿಕ್ಕಮಗಳೂರು, ಮಾರ್ಚ್​​ 12: ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಅಣ್ಣ, ತಂಗಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ನಡೆದಿದೆ. ಯಶೋಧಾ(45), ಕುಂಞರಾಮ(47) ಮೃತ ದುರ್ದೈವಿಗಳಾಗಿದ್ದು, ಆರೋಪಿ ಚಂದು(65) ಎಂಬಾತನನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ಒಡ ಹುಟ್ಟಿದವರನ್ನು ಆರೋಪಿ ಕೊಂದಿದ್ದು, ಸ್ಥಳಕ್ಕೆ ಕೊಡಗು ಎಸ್​​ಪಿ ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾಗಮಂಡಲ‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅವಳಿ ಕೊಲೆ ಆರೋಪಿಗೆ ಮರಣದಂಡನೆ

ಮಹಿಳೆಯೋರ್ವಳ ಜೊತೆಗಿನ ಅನೈತಿಕ ಸಂಬಂಧ ವಿಚಾರವಾಗಿ ಆಕೆ ಮತ್ತು ಅವಳ ಪತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕಮಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ. 2019ರ ಆಗಸ್ಟ್​​ 30ರಂದು ಮನೆಯಲ್ಲಿ ಮಲಗಿದ್ದ ಗಂಡ-ಹೆಂಡತಿಯನ್ನು ಆರೋಪಿ ಗೋವಿಂದಪ್ಪ ಎಂಬಾತ ಹತ್ಯೆ ಮಾಡಿದ್ದ. ಚಿಕ್ಕಮಗಳೂರು ಜಿಲ್ಲೆಯ NR ಪುರ ತಾಲೂಕಿನ ಸಾತ್ಕೋಳಿಯಲ್ಲಿ ನಡೆದಿದ್ದ ಘಟನೆ ಗ್ರಾಮಕ್ಕೆ ಗ್ರಾಮವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿ ಮಚ್ಚಿನಿಂದ ದಾಳಿ ನಡೆಸಿದ್ದ ಪರಿಣಾಮ ಧರ್ಮಯ್ಯ (53) ಮತ್ತು ಭಾರತಿ (33) ಮೃತಪಟ್ಟಿದ್ದರು.

ಇದನ್ನೂ ಓದಿ: 10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ; ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

ಭಾರತಿಯೊಂದಿಗೆ ಆರೋಪಿ ಗೋವಿಂದಪ್ಪನಿಗೆ ಅಕ್ರಮ ಸಂಬಂಧವಿತ್ತು. ಇದೇ ವಿಚಾರವಾಗಿ ಗೋವಿಂದಪ್ಪನ ಜೊತೆ ಭಾರತಿ ಪತಿ ಧರ್ಮಯ್ಯ ಜಗಳವಾಡಿದ್ದ. ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಗಲಾಟೆ ನಡೆದ ಎರಡು ತಿಂಗಳ ಬಳಿಕ ಭಾರತಿ ಮತ್ತು ಪತಿ ಧರ್ಮಯ್ಯನನ್ನು ಗೋವಿಂದಪ್ಪ ಹತ್ಯೆ ಮಾಡಿದ್ದು, ಈ ಬಗ್ಗೆ NR ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್​​ ಸಂಬಂಧ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯ ಆರೋಪಿಗೆ ಮರಣದಂಡನೆ ಶಿಕ್ಷೆಯ ಜೊತೆಗೆ 20 ಸಾವಿರ ರೂ. ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಸಹೋದರ ಆನಂದ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆನಂದ್ ಜೊತೆ ರಶ್ಮಿಕಾ ಅವರು ಆಗಾಗ ಪೋಸ್ ಕೊಡುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಇದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಆನಂದ್ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಅಮ್ಮಾ ನೀನು ಅಷ್ಟು ವರ್ಷ ನನ್ನ ಹೊತ್ತಿಲ್ವಾ, ಈಗ ನನ್ನ ಸರದಿ

ವಯಸ್ಸಾದ ಮೇಲೆ ದೊಡ್ಡವರು ಕೂಡ ಮಕ್ಕಳ ರೀತಿ ಎಂಬುದು ಸುಳ್ಳಲ್ಲ, ಹೇಗೆ ಚಿಕ್ಕವರಿದ್ದಾಗ ಸ್ವಲ್ಪ ದೂರ ನಡೆದಾಕ್ಷಣ ಅಮ್ಮಾ ಎತ್ಕೋ ನಡಿಯೋಕೆ ಆಗ್ತಿಲ್ಲ ಎಂದು ಮಕ್ಕಳು ಹೇಳ್ತಾರೋ ಹಾಗೆಯೇ ವೃದ್ಧಾಪ್ಯದಲ್ಲಿ ಕೂಡ ಪೋಷಕರಿಗೆ ಹಾಗೆಯೇ ಆಗುತ್ತೆ. ಆಗ ಮಕ್ಕಳು ಕೂಡ ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದಲ್ಲಿ ತಾಯಿಯನ್ನು ಬೆನ್ನ ಮೇಲೆ ಹೊತ್ತು ನಡೆಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅವರೇನಾ ಇವರು? ವಿಶ್ವಕಪ್ ಗೆದ್ದ ಬೆನ್ನಲ್ಲೇ ರೈಲು ಹತ್ತಿ ಬಂದ ಶಿವಂ ದುಬೆ!

ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್ ಇಂಡಿಯಾ ಆಟಗಾರರು ಅಹಮದಾಬಾದ್​ನ ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದರು. ಆದರೆ ಶಿವಂ ದುಬೆ ಮಾತ್ರ ರೈಲು ನಿಲ್ದಾಣದತ್ತ ತೆರಳಿದ್ದರು. ಅಷ್ಟೇ ಅಲ್ಲದೆ ಮುಂಜಾನೆ ಟ್ರೈನ್ ಹತ್ತುವ ಮೂಲಕ ಮುಂಬೈಗೆ ಬಂದಿಳಿದಿದ್ದರು. ಅಂದರೆ ವಿಶ್ವಕಪ್ ಗೆದ್ದ ಬಳಿಕ ದುಬೆ ಯಾರಿಗೂ ಗೊತ್ತಾಗದಂತೆ ರೈಲಿನಲ್ಲಿ ಪ್ರಯಾಣಿಸಿರುವುದು ಇದೀಗ ಬಹಿರಂಗವಾಗಿದೆ.

ನ್ಯೂಝಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 96 ರನ್​ಗಳ ಅಮೋಘ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಸಂಭ್ರಮದಲ್ಲಿದ್ದರು. ಅದರಲ್ಲೂ ಟ್ರೋಫಿಯೊಂದಿಗೆ ಹೋಟೆಲ್ ರೂಮ್​ಗೆ ತೆರಳಿದ್ದ ಭಾರತೀಯ ಆಟಗಾರರು ಸಖತ್ತಾಗೇ ಎಂಜಾಯ್ ಮಾಡಿದ್ದರು.

ಆದರೆ ಮಧ್ಯ ರಾತ್ರಿ ಕಳೆಯುತ್ತಿದ್ದಂತೆ ಶಿವಂ ದುಬೆ ಮಾತ್ರ ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದರು. ಅಲ್ಲದೆ ಮುಂಬೈಗೆ ತೆರಳಲು ವಿಮಾನವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎಲ್ಲಾ ವಿಮಾನಗಳು ಫುಲ್ ಬುಕ್ ಆಗಿದ್ದವು.

ಇತ್ತ ಹೇಗಾದರೂ ಮಾಡಿ ಬೇಗನೆ ಮನೆಗೆ ಹೋಗಿ ತಮ್ಮ ಮಕ್ಕಳೊಂದಿಗೆ ವಿಶ್ವಕಪ್ ಗೆಲುವನ್ನು ಸಂಭ್ರಮಿಸಬೇಕೆಂಬ ಆಸೆ ಶಿವಂ ದುಬೆಗಿತ್ತು. ಹೀಗಾಗಿ ವಿಮಾನಕ್ಕಾಗಿ ಕಾಯುವ ಬದಲು ಮುಂಜಾನೆಯ ರೈಲೇ ಉತ್ತಮ ಎಂದು ಅವರು ನಿರ್ಧರಿಸಿದರು.

ಅದರಂತೆ ಅಹಮದಾಬಾದ್​ನಿಂದ ಮುಂಬೈಗೆ ಮುಂಜಾನೆ 5.10 ಕ್ಕೆ ಟ್ರೈನ್ ಹತ್ತಿದ್ದಾರೆ. ಜನರಿಗೆ ಗುರುತು ಸಿಗದಂತೆ ದುಬೆ ಕ್ಯಾಪ್, ಮಾಸ್ಕ್ ಮತ್ತು ಫುಲ್ ಸ್ಲೀವ್ ಟೀ ಶರ್ಟ್ ಧರಿಸಿ ಪ್ಪರ್ ಬರ್ತ್ ಏರಿ ಕುಳಿತಿದ್ದಾರೆ.

ಇದರ ನಡುವೆ  ಟಿಕೆಟ್ ಪರೀಕ್ಷಕರು (TC) ಪ್ರಯಾಣಿಕರ ಪಟ್ಟಿಯಲ್ಲಿ ಶಿವಂ ದುಬೆ ಹೆಸರನ್ನು ನೋಡಿ, “ಇವರು ಕ್ರಿಕೆಟರ್ ಶಿವಂ ದುಬೆ ಅವರಾ?” ಎಂದು ಕೇಳಿದ್ದಾರೆ.

ತಕ್ಷಣವೇ ಕೆಳಗಿನ ಸೀಟ್​ನಲ್ಲಿ ಕೂತಿದ್ದ ಅವರ ಪತ್ನಿ ಅಂಜುಮ್ ಖಾನ್, “ಅಯ್ಯೋ ಇಲ್ಲ ಇಲ್ಲ, ಅವರು ಇಲ್ಲಿಗೆ ಯಾಕೆ ಬರುತ್ತಾರೆ? ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸುತ್ತಾರಾ? ಇವರು ಬೇರೆಯವರು ಎಂದಿದ್ದಾರೆ. ಇದನ್ನು ನಂಬಿ ಟಿಸಿ ಕೂಡ ಮುಂದೆ ಹೋಗಿದ್ದಾರೆ.

ಕೊನೆಗೆ ಮುಂಬೈನ ಬೋರಿವಲಿ ನಿಲ್ದಾಣದಲ್ಲಿ ಇಳಿದಾಗ, ಅಲ್ಲಿನ ಪೊಲೀಸರು ಶಿವಂ ದುಬೆ ಅವರನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ.

ಇದನ್ನೂ ಓದಿ: IPL 2026: ಡಬಲ್ ಧಮಾಕಾ… 4 ದಿನಗಳಲ್ಲಿ 8 ಪಂದ್ಯಗಳು

ಇದೀಗ ಟಿ20 ವಿಶ್ವಕಪ್ ಗೆದ್ದ ಬಳಿಕ ಕೂಡ ಸಿಂಪಲ್ ಆಗಿ ರೈಲಿನಲ್ಲಿ ಪ್ರಯಾಣಿಸಿರುವ ಶಿವಂ ದುಬೆಯ ಜರ್ನಿ ಸ್ಟೋರಿ ವೈರಲ್ ಆಗಿದ್ದು, ಅವರ ಸರಳತೆ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

 

Source link

ವಿಜಯಲಕ್ಷ್ಮೀಗೆ ಅವಾಚ್ಯವಾಗಿ ಬೈದವರಲ್ಲಿದ್ದಾರೆ ಸುದೀಪ್ ಫ್ಯಾನ್ಸ್; ಚಾರ್ಜ್​​ಶೀಟ್​​ನಲ್ಲಿ ಶಾಕಿಂಗ್ ವಿಷಯ

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು (Vijayalaxmi) ತಮಗೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಅಶ್ಲೀಲ ಕಾಮೆಂಟ್ ವಿರುದ್ಧ ಸಮರ ಸಾರಿದ್ದಾರೆ. ಈ ಸಂಬಂಧ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಅದಕ್ಕೆ ಬೇಕಾದ ಸಾಕ್ಷ್ಯ ಕೂಡ ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಪೊಲೀಸರು, ಹಲವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈಗ ಚಾರ್ಜ್​​ಶೀಟ್ ಸಲ್ಲಿಕೆ ಮಾಡಿದ್ದು, ಕೆಲವು ಶಾಕಿಂಗ್ ವಿಷಯಗಳು ಬೆಳಕಿಗೆ ಬಂದಿದೆ.

ಸಿಸಿಬಿ ಸೈಬರ್ ಕ್ರೈಂ ಪೊಲೀಸರು 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರು ಆರೋಪಿಗಳ ವಿರುದ್ಧ ಸುಮಾರು 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್​ನಲ್ಲಿ ಆರು ಆರೋಪಿಗಳ ಹೇಳಿಕೆ ದಾಖಲು ಮಾಡಲಾಗಿದೆ. ಆರೋಪಿಗಳಲ್ಲಿ ಕೆಲವರು ನಟ ಸುದೀಪ್ ಅಭಿಮಾನಿಗಳು ಎಂಬ ವಿಷಯ ಬಹಿರಂಗವಾಗಿದೆ.
ಎಲ್ಲರೂ ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡೋ ಉದ್ದೇಶಕ್ಕೆ ನಕಲಿ ಅಕೌಂಟ್ ಓಪನ್ ಮಾಡಿದ್ದರು ಎಂಬ ವಿಷಯ ಗೊತ್ತಾಗಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಬಂಧಿತರು ಕೆಟ್ಟ ರೀತಿಯಲ್ಲಿ ಫೋಟೋ ಹಾಕಿ ಕಾಮೆಂಟ್ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಪೋಸ್ಟ್ ಮಾಡುತ್ತಿರುವುದು ಅಶ್ಲೀಲ ಎಂಬುದು ಗೊತ್ತಿದ್ದೇ ಕಾಮೆಂಟ್ ಮಾಡಿರೋದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ಅನ್ನು ವಶಪಡಿಸಿಕೊಂಡು ಎಫ್​ಎಸ್​ಎಲ್​ಗೆ ರವಾನೆ ಮಾಡಲಾಗಿದ್ದು, ಡೇಟಾ ರಿಟ್ರೀವ್ ಮಾಡಿ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಕಾಮೆಂಟ್ ಮಾಡಿದ 12 ಐಡಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಸಂಬಂಧ ಕಂಪನಿಗಳಿಗೆ ಪತ್ರ ಬರೆಯಲಾಗಿದ್ದು, ಇನ್ನಷ್ಟೇ ಅವರಿಂದ ಉತ್ತರ ಬರಬೇಕಿದೆ. ಸದ್ಯ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸೋದಾಗಿ ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ: 25 ವರ್ಷಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ಎಂದಿಗೂ ಆ ಮಾತು ಹೇಳಿಲ್ಲ; ವಿಜಯಲಕ್ಷ್ಮೀ

ಇತ್ತ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್​ಗೆ ಜಾಮೀನು ಸಲ್ಲಿಕೆ ಮಾಡಿದ್ದಾರೆ. ಮಾರ್ಚ್ 24ಕ್ಕೆ ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಕಾಮೆಂಟ್ ಮಾಡಿದ ತಪ್ಪಿಗೆ 66 ದಿನಗಳಿಂದ ಆರು ಆರೋಪಿಗಳು ಜೈಲಿನಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Exit mobile version