ಕೊಪ್ಪಳ, ಮಾರ್ಚ್ 11: ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಹಾಡಹಗಲೇ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಗ್ರಾಮದ ಹೊರವಲಯದ ಜಮೀನಿನಲ್ಲಿ ಕಾಣಿಸಿಕೊಂಡ ಚಿರತೆ ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಹಗಲು ಹೊತ್ತಿನಲ್ಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಮಲ್ಲಾಪುರ ಗ್ರಾಮವು ತುಂಗಭದ್ರಾ ನದಿಯ ಸಮೀಪದಲ್ಲಿರುವ ಕಾರಣ, ನದಿಯ ಆಸುಪಾಸಿನ ಪ್ರದೇಶಗಳಿಂದ ಚಿರತೆ ಬಂದಿರಬಹುದೆಂದು ಅಂದಾಜಿಸಲಾಗಿದೆ. ತಮ್ಮ ಗ್ರಾಮದಲ್ಲಿ ಚಿರತೆಯ ಸಂಚಾರ ಹೆಚ್ಚಾಗಿರುವುದರಿಂದ, ಜನ ಜಾನುವಾರುಗಳಿಗೆ ಅಪಾಯವಾಗಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದು, ಚಿರತೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬೋನ್ ಅಳವಡಿಸುವಂತೆ ಮನವಿ ಮಾಡಿದ್ದಾರೆ.
ನಾವು ಮಾನಸಿಕವಾಗಿ ಬಲಿಷ್ಠರಾದಾಗ (mentally strong) ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ, ಸಮಾಜದಲ್ಲಿ ಧೈರ್ಯವಾಗಿ ಬದುಕಲು ಸಾಧ್ಯ. ದೈಹಿಕವಾಗಿ ಬಲಶಾಲಿಯಾಗಿರಲು ವ್ಯಾಯಾಮ, ಯೋಗಾಭ್ಯಾಸವನ್ನು ಮಾಡುವಂತೆ, ಮಾನಸಿಕವಾಗಿ ಬಲಿಷ್ಠರಾಗಲು ಒಂದಷ್ಟು ತತ್ವಗಳನ್ನು ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವುಗಳನ್ನು ಅನುಸರಿಸುವ ನಮ್ಮ ಆಲೋಚನೆ, ನಂಬಿಕೆಗಳು ಮತ್ತು ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಅಷ್ಟೇ ಅಲ್ಲದೆ ಜೀವನದಲ್ಲಿ ನಾವು ಅಂದುಕೊಂಡ ಗುರಿಯನ್ನೂ ಸಾಧಿಸಬಹುದು. ಹಾಗಿದ್ರೆ ಮಾನಸಿಕವಾಗಿ ಬಲಿಷ್ಠರಾಗಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಮಾನಸಿಕವಾಗಿ ಸದೃಢರಾಗಲು ಏನು ಮಾಡಬೇಕು?
ಪ್ರತಿದಿನ ಯೋಚಿಸುವ ಅಭ್ಯಾಸ: ನಾವು ನಮ್ಮ ದೇಹವನ್ನು ಫಿಟ್ ಮತ್ತು ಸದೃಢವಾಗಿಡಲು ಪ್ರತಿದಿನ ವ್ಯಾಯಾಮ ಮಾಡುವಂತೆ ಮಾನಸಿಕವಾಗಿ ಸದೃಢರಾಗಲು ಪ್ರತಿದಿನ ಒಳ್ಳೆಯ ಆಲೋಚನೆಗಳನ್ನು ಯೋಚಿಸುವುದನ್ನು ಅಭ್ಯಾಸ ಮಾಡಬೇಕು. ಆಲೋಚನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ನಾವು ಯೋಚಿಸಬೇಕು. ಹೀಗೆ ಪ್ರತಿದಿನ ಈ ರೀತಿ ಯೋಚಿಸಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಈ ಸಣ್ಣ ಅಭ್ಯಾಸವು ನಿಮ್ಮನ್ನು ಹೆಚ್ಚು ತಾಳ್ಮೆಯ ಮತ್ತು ಬುದ್ಧಿವಂತ ವ್ಯಕ್ತಿಯನ್ನಾಗಿ ಮಾಡುತ್ತದೆ.
ಸ್ವಾವಲಂಬನೆ: ಆಚಾರ್ಯ ಚಾಣಕ್ಯರು ಹೇಳುವಂತೆ, ನಾವು ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಮೊದಲು ಸ್ವಾವಲಂಬಿಗಳಾಗಬೇಕು. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಲು ಪ್ರಯತ್ನಿಸಿದಾಗ, ನಮ್ಮ ಮನಸ್ಸು ಬಲಗೊಳ್ಳುತ್ತದೆ. ಮತ್ತೊಂದೆಡೆ, ನಾವು ಎಲ್ಲದಕ್ಕೂ ಇತರರನ್ನು ಅವಲಂಬಿಸಲು ಪ್ರಾರಂಭಿಸಿದರೆ, ಅದು ನಮ್ಮನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತದೆ. ಸಣ್ಣ ಜವಾಬ್ದಾರಿಗಳನ್ನು ಸಹ ನಾವೇ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದು ನಮ್ಮನ್ನು ಮಾನಸಿಕವಾಗಿಯೂ ಬಲಶಾಲಿಗಳನ್ನಾಗಿ ಮಾಡುತ್ತದೆ.
ಸಮಯದ ಸದುಪಯೋಗ: ಆಚಾರ್ಯ ಚಾಣಕ್ಯ ಹೇಳುವಂತೆ ಸಮಯವು ಅತ್ಯಂತ ಅಮೂಲ್ಯವಾದದ್ದು. ಮಾನಸಿಕವಾಗಿ ಬಲಿಷ್ಠರಾಗಿರುವವರು ಸಮಯವನ್ನು ಗೌರವಿಸುತ್ತಾರೆ. ಅವರು ಅದನ್ನು ನಿಷ್ಪ್ರಯೋಜಕ ವಿಷಯಗಳಿಗೆ ವ್ಯರ್ಥ ಮಾಡುವುದಿಲ್ಲ. ಚಾಣಕ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಎಚ್ಚರಗೊಳ್ಳುವ, ಕೆಲಸಗಳಿಗೆ ಆದ್ಯತೆ ನೀಡುವ ಮತ್ತು ಪ್ರತಿಯೊಂದು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಅಭ್ಯಾಸವು ವ್ಯಕ್ತಿಯನ್ನು ಮಾನಸಿಕವಾಗಿ ಬಲಿಷ್ಠಗೊಳಿಸುತ್ತದೆ.
ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ: ಚಾಣಕ್ಯನ ಪ್ರಕಾರ, ನಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಡಲು, ನಾವು ಮೊದಲು ನಮ್ಮ ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಹತಾಶೆ, ಭಯ ಮತ್ತು ಕೋಪದಂತಹ ಭಾವನೆಗಳು ನಮ್ಮ ಮನಸ್ಸನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತವೆ. ನಾವು ಸಕಾರಾತ್ಮಕವಾಗಿ ಯೋಚಿಸಿದರೆ, ನಮ್ಮ ದಾರಿಯಲ್ಲಿ ಬರುವ ಯಾವುದೇ ಸವಾಲನ್ನು ನಾವು ಧೈರ್ಯದಿಂದ ಎದುರಿಸಬಹುದು ಮತ್ತು ಜಯಿಸಬಹುದು ಅಲ್ಲದೆ ಈ ಸಕಾರಾತ್ಮಕ ಆಲೋಚನೆಗಳು ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಹೊಸ ವಿಷಯಗಳನ್ನು ಕಲಿಯುವುದು: ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು, ನಾವು ಜೀವನದ ಪ್ರತಿ ಹಂತದಲ್ಲೂ ಹೊಸ ವಿಷಯಗಳನ್ನು ಕಲಿಯುತ್ತಲೇ ಇರಬೇಕು ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುವ ಮತ್ತು ಹೊಸ ಜ್ಞಾನವನ್ನು ಹೇಗೆ ಪಡೆಯುವುದು ಎಂದು ತಿಳಿದಿರುವ ವ್ಯಕ್ತಿಯು ಕ್ರಮೇಣ ಮಾನಸಿಕವಾಗಿ ಬಲಶಾಲಿಯಾಗುತ್ತಾನೆ. ಆದ್ದರಿಂದ, ನಮ್ಮ ಜ್ಞಾನವನ್ನು ಹೆಚ್ಚಿಸಲು, ನಾವು ಹೊಸ ಪುಸ್ತಕಗಳನ್ನು ಓದಬೇಕು.. ಹಿಂದಿನ ಅನುಭವಗಳಿಂದ ಪಾಠಗಳನ್ನು ಕಲಿಯಬೇಕು.. ಇತರರಿಂದ ಒಳ್ಳೆಯದನ್ನು ಕಲಿಯಲು ಪ್ರಯತ್ನಿಸಬೇಕು.
ಬೆಂಗಳೂರು, ಮಾರ್ಚ್ 11: ಗುತ್ತಿಗೆದಾರನಿಂದ ಐದು ಲಕ್ಷ ರೂ ಲಂಚ ಸ್ವೀಕರಿಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ (MLA Chandru Lamani) ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಆ ಮೂಲಕ ಬಿಜೆಪಿ ಶಾಸಕನಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಲೋಕಾಯುಕ್ತ ಪೊಲೀಸರಿಂದ ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಐದು ಲಕ್ಷ ರೂ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆ ಬಂಧಿಸಲಾಗಿದ್ದು, ಕಳೆದ 15 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಈ ಮಧ್ಯೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಡಾ. ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಎರಡು ಲಕ್ಷ ರೂ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಒದಗಿಸುವ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದೆ.
ಫೆಬ್ರವರಿ 21ರಂದರು ಶಾಸಕ ಚಂದ್ರು ಲಮಾಣಿ ಲೋಕಾ ಬಲೆಗೆ ಬಿದ್ದಿದ್ದರು. ಗುತ್ತಿಗೆದಾರನಿಂದ 5 ಲಕ್ಷ ರೂ ಲಂಚ ಪಡೀತಿದ್ದಾಗ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದರು. ಈ ಪ್ರಕರಣದಲ್ಲಿ ಲಮಾಣಿ ಜೈಲು ಸೇರಿದ್ದರು. ಘಟನೆ ಬೆನ್ನಲ್ಲೇ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಚಂದ್ರು ಬೆಂಬಲಗರು ಹಾಗೂ ಬಂಜಾರದ ಸಮುದಾಯ ಸಿಡಿದೆದ್ದಿತ್ತು. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿರೋದಾಗಿ ಸಮುದಾಯ ಆರೋಪಿಸಿತ್ತು. ಸಾಲದ್ದಕ್ಕೆ ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪ ಮಾಡಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026ರ ಸೀಸನ್‌ನ ಮೊದಲ ಹಂತದ 20 ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಇದೇ ಮಾರ್ಚ್ 28ರಿಂದ ಐಪಿಎಲ್ ಹಬ್ಬ ಶುರುವಾಗಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಫುಕೆಟ್, ಮಾರ್ಚ್ 11: ಹೈದರಾಬಾದ್‌ನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನವು ಇಂದು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿತು. ಇದರ ಪರಿಣಾಮವಾಗಿ ಅದರ ನೋಸ್ ಗೇರ್‌ಗೆ ಭಾರೀ ಹಾನಿಯಾಗಿದೆ. ಈ ಘಟನೆಯ ನಂತರ, ವಿಮಾನ ನಿಲ್ದಾಣದ ಅಧಿಕಾರಿಗಳು ಹಲವು ಗಂಟೆಗಳ ಕಾಲ ರನ್‌ವೇಯನ್ನು ಮುಚ್ಚಲಾಯಿತು. ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಏರ್ ಇಂಡಿಯಾ ವಿಮಾನವು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಅನುಭವಿಸಿತು. ವಿಮಾನದ ಮುಂಭಾಗದ ಚಕ್ರ ಮುರಿದು ವಿಮಾನವು ರನ್‌ವೇ ಉದ್ದಕ್ಕೂ ಜಾರಿತು ಎಂದು ಮೂಲಗಳು ತಿಳಿಸಿವೆ. ಇದರ ಫೋಟೋಗಳು, ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ. ತುರ್ತು ಪ್ರತಿಕ್ರಿಯೆ ತಂಡಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಆ ಪ್ರದೇಶವನ್ನು ಸುರಕ್ಷಿತಗೊಳಿಸಲು ಮತ್ತು ವಿಮಾನದಲ್ಲಿದ್ದವರ ಸುರಕ್ಷತೆಗಾಗಿ ಕೂಡಲೆ ಸ್ಥಳಕ್ಕೆ ಧಾವಿಸಿದರು.
@airindia@AirIndiaX@ndtv@aajtak
I was filming our landing on Air India Express flight IX 938 from Hyderabad to Phuket when we hit the runway really hard. It was such a bad landing that you could actually smell something burning inside the plane. I think it’s with front wheel. pic.twitter.com/IaFgjqy3Na
“ಮಾರ್ಚ್ 11ರಂದು ಹೈದರಾಬಾದ್‌ನಿಂದ ಫುಕೆಟ್‌ಗೆ ಹೋಗುವ ವಿಮಾನವು ಸಮಸ್ಯೆಯನ್ನು ಅನುಭವಿಸಿತು. ಫುಕೆಟ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ನೋಸ್ ವೀಲ್ (ಮುಂಭಾಗದ ಚಕ್ರ) ಸಮಸ್ಯೆ ಅನುಭವಿಸಿತು” ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Phuket International Airport has been closed.
An Air India Express flight from Hyderabad made a hard landing damaging the aircraft’s nose landing gear.
The airport is now closed to traffic.
“We confirm that our Hyderabad-Phuket flight on 11 March experienced an issue with the… pic.twitter.com/GhoJ5zIWHJ
ಈ ವಿಮಾನದಲ್ಲಿ 131 ಪ್ರಯಾಣಿಕರು, ಇಬ್ಬರು ಮಕ್ಕಳು ಮತ್ತು 7 ಸಿಬ್ಬಂದಿ ಇದ್ದರು. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ವಿಮಾನವು ಹಾರ್ಡ್ ಲ್ಯಾಂಡಿಂಗ್ ಮಾಡಿರುವುದರಿಂದ ನೋಸ್ ವೀಲ್‌ಗೆ ಹಾನಿಯಾಗಿದೆ ಎಂದು ಕಂಡುಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು, (ಮಾರ್ಚ್ 11): ನಗರದ ಇಸ್ರಾ ಶಾದಿ ಮಹಲ್ ಬಳಿ ನಡೆದಿದ್ದ ನಜರಾಬಾದ್ ಮುಬಾರಕ್ ಕೊಲೆ ಇಡೀ ತುಮಕೂರನ್ನೇ (Tumakuru) ಬೆಚ್ಚಿ ಬೀಳಿಸಿದ್ದು, ಇದೀಗ ಈ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಮರಳೂರು ದಿಣ್ಣೆಯ ಮುಬಾರಕ್ ಎನ್ನುವಾತ ಮಾತನಾಡುವ ನೆಪದಲ್ಲಿ ನಜರಾಬಾದ್ ಮುಬಾರಕ್ ನನ್ನು ಕರೆದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇನ್ನು ಘಟನೆ ನಡೆದ 24 ಗಂಟೆಯೊಳಗೆ ಹಂತಕ ಮರಳೂರು ದಿಣ್ಣೆಯ ಮುಬಾರಕ್ ನನ್ನು ಬಂಧಿಸುವಲ್ಲಿ ಪೊಲೀಸರು ಸಹ ಯಶಸ್ವಿಯಾಗಿದ್ದು, ವಾಮಾಚಾರಕ್ಕೆ ಹೆದರಿ ಗೆಳೆಯನನ್ನೇ ಕೊಂದಿದ್ದಾನೆ ಎನ್ನುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆದ್ರೆ, ಮೃತನ ಕುಟುಂಬಸ್ಥರು , ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ಹೌದು.. ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು. ಕೊಲೆಯಾದ ನಜರಾಬಾದ್ ಮುಬಾರಕ್, ಮರಳೂರು ದಿಣ್ಣೆಯ ಮುಬಾರಕ್ ಬಳಿ ಹಣ ಪಡೆದಿದ್ದ. ವಾಪಾಸ್ ನೀಡದಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿತ್ತು. ಆದ್ರೆ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕ್ ಪಾರ್ಕ್ ಪೊಲೀಸರು, ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ವಾಮಾಚಾರದ ಕಥೆ ಬಿಚ್ಚಿಟ್ಟಿದ್ದಾನೆ.
ಮರಳೂರು ದಿಣ್ಣೆ ಮುಬಾರಕ್ ತಂದೆ ತಾಯಿ ನಡುವೆ ಕಳೆದ ಕೆಲ ವರ್ಷಗಳ ಹಿಂದೆ ಗಲಾಟೆಯಾಗಿತ್ತಂತೆ. ಈ ವೇಳೆ ತಂದೆ ತಾಯಿಯನ್ನು ಕೊಂದು ಜೈಲಿಗೆ ಹೋಗಿದ್ದ. ಇದರಿಂದ ಬೇಸರದಲ್ಲಿದ್ದ ಮರಳೂರು ದಿಣ್ಣೆ ಮುಬಾರಕ್ ನಿಗೆ ನಜರಾಬಾದ್ ನ ಮುಬಾರಕ್ ಸಾಂತ್ವಾನ ಹೇಳಿದ್ದ. ಆ ನಂತರ ಕಷ್ಟಗಳೆಲ್ಲ ದೂರವಾಗುತ್ತೆ ಎಂದು ಮರಳೂರು ದಿಣ್ಣೆ ಮುಬಾರಕ್ ನನ್ನು ದರ್ಗಾಗೆ ಕರೆದೊಯ್ದು ನಿಂಬೆಹಣ್ಣು ನೀಡಿ ಜ್ಯೂಸ್ ಮಾಡಿ ಕುಡಿಯುವಂತೆ ಹೇಳಿದ್ದನಂತೆ. ಅದಾದ ಬಳಿಕ ಒಂದೆರೆಡು ಬಾರಿ ಇದೇ ರೀತಿ ಕೆಲ ಪ್ರಕ್ರಿಯೆ ಮಾಡಿಸಿದ್ದ, ಇದರಿಂದ ಮರಳೂರು ದಿಣ್ಣೆ ಮಾನಸಿಕವಾಗಿದ್ದ. ಅಲ್ಲದೇ ಭೂತದ ಅನುಭವ ಆಗುತಿತ್ತಂತೆ. ರಾತ್ರಿ ನಿದ್ದೆ ಮಾಡುವಾಗ ದೆವ್ವ ಬಂದಂತಾಗುತಿತ್ತಂತೆ. ಇದರಿಂದ ಅನುಮಾನಗೊಂಡು ಮರಳೂರು ದಿಣ್ಣೆ ಮುಬಾರಕ್, ನನಗೆ ವಾಮಾಚಾರ ಮಾಡಿಸಿದ್ದಿಯಾ. ಸರಿ ಮಾಡು ಎಂದು ನಜರಾಬಾದ್ ಮುಬಾರಕ್ ಗೆ ಹೇಳಿದ್ದ.
ಆದ್ರೆ, ಇದಕ್ಕೆ ನಜರಾಬಾದ್ ಮುಬಾರಕ್ ಕ್ಯಾರೇ ಎಂದಿಲ್ಲ. ಇದರಿಂದ ಆಕ್ರೋಶಗೊಂಡ ಮರಳೂರು ದಿಣ್ಣೆ ಮುಬಾರಕ್, ನಜರಾಬಾದ್ ಮುಬಾರಕ್ ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಆದ್ರೆ, ಇದನ್ನು ಮೃತ ನಜರಾಬಾದ್ ನ ಮುಬಾರಕ್ ಕುಟುಂಬ ಅಲ್ಲಗೆಳೆದಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಆತ ಹೇಳುತ್ತಿರುವ ಸಂಗತಿ ನಿಜವೋ ಅಥವಾ ಮೃತನ ಕುಟುಂಬಸ್ಥರು ಹೇಳುವುದು ಸರಿಯೋ ಎನ್ನುವುದು ತನಿಖೆಯಲ್ಲ ಕೊಲೆಯ ಅಸಲಿ ಕಾರಣ ತಿಳಿದು ಬರಲಿದೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ (666 Operation Dream Theatre) ಸಿನಿಮಾದ ಪ್ರತಿ ಪಾತ್ರಗಳು ಕೂಡ ಕೌತುಕ ಮೂಡಿಸಿವೆ. ಶಿವರಾಜ್ಕುಮಾರ್, ಡಾಲಿ ಧನಂಜಯ, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಅದಿತಿ ಬಾಲನ್ (Aditi Balan) ಅವರು ಏಜೆಂಟ್ ಕಾವೇರಿ ಎಂಬ ಪಾತ್ರ ಮಾಡುತ್ತಿದ್ದಾರೆ ಎಂಬ ಚಿತ್ರತಂಡ ಮಾಹಿತಿ ನೀಡಿದೆ. ಈ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ಪಾತ್ರವನ್ನು ‘ಆಪರೇಷನ್ ಡೈಮಂಡ್ ರಾಕೆಟ್’ ಸಿನಿಮಾದ ಅಣ್ಣಾವ್ರ ಪಾತ್ರಕ್ಕೆ ಜನರು ಹೋಲಿಸುತ್ತಿದ್ದಾರೆ. ಡಾಲಿ ಧನಂಜಯ ಅವರು ಏಜೆಂಟ್ ಶಂಕರ್ ಆಗಿ ನಟಿಸುತ್ತಿದ್ದಾರೆ. ಈಗ ತಮಿಳಿನ ನಟಿ ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಚಿತ್ರತಂಡ ತಿಳಿಸಿದೆ.
ತಮಿಳುನಾಡಿನ ರಾಜ್ಯ ಪ್ರಶಸ್ತಿ ಪಡೆದಿರುವ ಅದಿತಿ ಬಾಲನ್ ಅವರು ಈ ಸಿನಿಮಾದಲ್ಲಿ ನಟಿಸಿರುವುದರಿಂದ ನಿರೀಕ್ಷೆ ಮೂಡಿದೆ. ‘ಅರುವಿ’ ಸಿನಿಮಾದ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ‘ಕ್ಯಾಪ್ಟನ್ ಮಿಲ್ಲರ್’, ‘ಪಡವೆಟ್ಟು’ ಮುಂತಾದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಈಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಗೆ ಐದನೇ ಹಂತದ ಚಿತ್ರೀಕರಣ ಮಗಿದಿದೆ. ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡುತ್ತಿದೆ. ಈ ಚಿತ್ರವನ್ನು ಡಾ. ವೈಶಾಖ್ ಜೆ. ಗೌಡ ಅವರು ‘ವೈಶಾಖ್ ಜೆ. ಫಿಲ್ಮ್ಸ್’ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ವಿಶ್ವಾಸ್ ಕಶ್ಯಪ್ ಅವರ ಪ್ರೊಡಕ್ಷನ್ ವಿನ್ಯಾಸ ಇರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾಗೆ ಇಂಚರಾ ಸುರೇಶ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಮತ್ತು ಥ್ರಿಲ್ಲರ್ ಕಹಾನಿ ಇರಲಿದ್ದು, ಪ್ರೇಕ್ಷಕರಿಗೆ ಭಿನ್ನವಾದ ಅನುಭವ ಸಿಗಲಿದೆ ಎಂದು ಚಿತ್ರತಂಡ ಹೇಳಿದೆ. ಇದೇ ವರ್ಷ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ತೆಲುಗಿನಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ.
ಕೊಲ್ಕತ್ತಾ, ಮಾರ್ಚ್ 11: ಪಶ್ಚಿಮ ಬಂಗಾಳದ ಪೂರ್ವ ಬರ್ದ್ವಾನ್‌ನ ಮೆಮರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 19ರ ಫ್ಲೈಓವರ್‌ನ ಗೋಡೆಯ ಕುಸಿತ ಸಂಭವಿಸಿದೆ. ಇದು ಉದ್ಘಾಟನೆಯಾಗಿ ಕೇವಲ 6 ತಿಂಗಳಾಗಿತ್ತು. ರಸ್ತೆಯ 50-60 ಅಡಿಗಳು ಕುಸಿದು, ಕೊಲ್ಕತ್ತಾಗೆ (Kolkata) ಹೋಗುವ ಲೇನ್ ಅನ್ನು ಮುಚ್ಚಲಾಯಿತು. ಈ ಜನನಿಬಿಡ ಎಕ್ಸ್‌ಪ್ರೆಸ್‌ವೇಯಲ್ಲಿ ಹಠಾತ್ ಕುಸಿತವು ಪಾದಚಾರಿಗಳನ್ನು ಭಯಭೀತಗೊಳಿಸಿತು. ಸುದ್ದಿ ತಿಳಿದ ನಂತರ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಾಮರಾಜನಗರ, ಮಾರ್ಚ್ 11: ಮಧ್ಯಪ್ರಾಚ್ಯದ ಕದನ (Middle East conflict) ಇಡೀ ವಿಶ್ವಕ್ಕೆ ತಲೆನೋವು ತಂದೊಡ್ಡಿದೆ. ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಇತ್ತ ಮಾದಪ್ಪನಿಗೂ (Male Mahadeshwara Hills) ಯುದ್ಧದ ಕಾರ್ಮೋಡ ಕವಿದಿದ್ದು, ಯುಗಾದಿ ಜಾತ್ರೆಗೆ ಅನ್ನದಾಸೋಹ ಮತ್ತು ಲಾಡು ಪ್ರಸಾದಕ್ಕೂ ಎಫೆಕ್ಟ್ ಆಗುವ ಸಾಧ್ಯತೆ ಇದೆ.
ದಾಸೋಹ, ಲಾಡು ತಯಾರಿಕೆ ಸ್ಥಗಿತ ಸಾಧ್ಯತೆ
ಏಳು ಮಲೆ ಎಪ್ಪತ್ತೇಳು ಮಲೆ ಒಡೆಯ. ಕಲಿಯುಗದ ಕಲ್ಪತರು ಬೇಡಿದನ್ನ ಕರುಣಿಸುವ ಮಾಯ್ಕಾರ ಈ ಮಾದಪ್ಪ. ಈ ಮಾದಪ್ಪನಿಗೆ ಇದೀಗ ಇರಾನ್-ಇಸ್ರೇಲ್ ಯುದ್ದದ ಬಿಸಿ ತಟ್ಟಿದೆ. ದಿನನಿತ್ಯ ಸಾವಿರಾರು ಭಕ್ತರು ಅನ್ನದಾಸೋಹದ ಮೂಲಕ ಪ್ರಸಾದವನ್ನ ಸ್ವಿಕರಿಸುತ್ತಾರೆ. ಅದೇ ರೀತಿ ಲಾಡು ಪ್ರಸಾದ ತಯಾರಿಕೆಗೆ ಒಂದು ದಿನಕ್ಕೆ ಬರೋಬ್ಬರಿ 12ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ಬಳಸಲಾಗುತ್ತಿದೆ. ಒಂದು ವಾರದವರೆಗೆ ದಾಸೋಹಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಇದು ಹೀಗೆ ಮುಂದುವರೆದರೆ ಮಾದಪ್ಪನ ಬೆಟ್ಟದಲ್ಲಿ ಅನ್ನದಾಸೋಹಕ್ಕೆ ಹಾಗೂ ಲಾಡು ಪ್ರಸಾದಕ್ಕೆ ಬ್ರೇಕ್ ಬೀಳಲಿದೆ.
ಪ್ರತಿ ವರ್ಷ 3 ಬಾರಿ ಮಾದಪ್ಪನ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರ್ತಾರೆ. ಲಕ್ಷಾಂತರ ಲಾಡು ಪ್ರಸಾದ ಮಾರಾಟವಾದರೆ, ಅನ್ನದಾಸೋಹಕ್ಕೆ ಆಗಮಿಸಿ ಪ್ರಸಾದ ಸೇವಿಸುತ್ತಾರೆ. ಜಾತ್ರೆಯ ವೇಳೆ ಕೇವಲ ದಾಸೋಹಕ್ಕೆ ಒಂದು ದಿನಕ್ಕೆ 12 ರಿಂದ 15 ಸಿಲಿಂಡರ್ ಬೇಕಾಗುತ್ತೆ. 2.50 ಲಕ್ಷ ಲಾಡು ತಯಾರಿ ಮಾಡಲು 20 ಕ್ಕೂ ಹೆಚ್ಚು ಸಿಲಿಂಡರ್ ಒಂದು ದಿನಕ್ಕೆ ಬಳಕ್ಕೆ ಮಾಡಲಾಗುತ್ತೆ. ಗ್ಯಾಸ್ ಸಿಲಿಂಡರ್ ಅಭಾವ ಹೀಗೆ ಮುಂದುವರೆದರೆ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿರುವುದಾಗಿ ಹೇಳಿದ್ದಾರೆ.
ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಯುವತಿ ಮೊನಲಿಸಾ ಭೊಸ್ಲೆಯ (Monalisa) ಒಂದೇ ಒಂದು ಚಿತ್ರ ವೈರಲ್ ಆಗಿ ಆಕೆಯ ಅದೃಷ್ಟವೇ ಬದಲಾಗಿ ಹೋಯ್ತು. ಯಾವ ಮಟ್ಟಿಗೆ ಚಿತ್ರ ವೈರಲ್ ಆಯ್ತೆಂದರೆ ಅದೊಂದು ಚಿತ್ರದಿಂದಾಗಿ ಮೊನಲಿಸಾ ಭೋಸ್ಲೆಗೆ ಮಾಡೆಲಿಂಗ್ ಮಾತ್ರವಲ್ಲದೆ ಸಿನಿಮಾ ಅವಕಾಶಗಳು ಸಹ ಅರಸಿ ಬಂದಿದ್ದು, ಇದೀಗ ಮೊನಲಿಸಾ ಬೋಸ್ಲೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ಮೊನಲಿಸಾ ಭೋಸ್ಲೆ, ಕೇರಳದಲ್ಲಿ ತಮ್ಮ ಬಾಯ್ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೊನಿಸಲಾ ಭೋಸ್ಲೆ ಪ್ರಸ್ತುತ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದರು. ಆದರೆ ಇದೀಗ ಅವರು ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ತಮ್ಮ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ. ತಮ್ಮ ಪೋಷಕರು ತಮಗೆ ಬಲವಂತದ ಮದುವೆ ಮಾಡಲು ಯತ್ನಿಸುತ್ತಿದ್ದು, ಈ ಬಲವಂತದ ಮದುವೆಯಿಂದ ತಮಗೆ ರಕ್ಷಣೆ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ ಭೋಂಸ್ಲೆ, ಫರ್ಮಾನ್ ಖಾನ್ ಎಂಬುವರನ್ನು ಪ್ರೀತಿಸಿದ್ದು, ಅವರೊಟ್ಟಿಗೆ ಮದುವೆ ಆಗುವುದಾಗಿ ಹೇಳಿದ್ದಾರೆ. ಆದರೆ ಅವರ ಪೋಷಕರು ಮೋನಸಿಲಾಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ್ದು, ತಾವು ನೋಡಿದ ವರನೊಡನೆ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾರಂತೆ. ಇದೇ ಕಾರಣಕ್ಕೆ ಅವರು ತಮ್ಮ ಬಾಯ್ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇವರ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಂಸ್ಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ . ಪೊಲೀಸರ ಮುಂದೆ ದೂರು ನೀಡಿರುವ ಮೊನಲಿಸಾ, ತಮಗೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ, ಮಾನಸಿಕವಾಗಿ ಒತ್ತಡ ಹೇರುತ್ತಿರುವುದರಿಂದ ತಮಗೆ ರಕ್ಷಣೆ ಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಮೊನಾಲಿಸಾ ಅವರ ದೂರನ್ನು ಸ್ವೀಕರಿಸಿರುವ ಪೊಲೀಸರು, ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವಳಿಗೆ ಇದೆ ಎಂದು ತಿಳಿಸಿದ್ದಾರೆ. ಪೊಲೀಸರು ಆಕೆಯ ತಂದೆಯನ್ನು ಕರೆಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಪ್ರೇಮಿಗಳಿಗೆ ಕೇರಳದ ಸ್ಥಳೀಯ ರಾಜಕೀಯ ನಾಯಕರು ಬೆಂಬಲ ನೀಡಿದ್ದಾರೆ. ಇಂದು ಸಂಜೆ ಕೇರಳದ ವಿಝಿಂಜಂನಲ್ಲಿರುವ ಒಂದು ದೇವಸ್ಥಾನದಲ್ಲಿ ಇವರು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಮಾರಂಭದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು ಕೂಡ ಭಾಗವಹಿಸುವ ಸಾಧ್ಯತೆ ಇದೆ.
ಕುಂಭಮೇಳದಲ್ಲಿ ವೈರಲ್ ಆದ ನಂತರ ಮೊನಾಲಿಸಾಗೆ ಹಲವು ಸಿನಿಮಾಗಳ ಅವಕಾಶ ಬಂದಿತ್ತು. ಸದ್ಯ ಅವರು ‘ನಾಗಮ್ಮ’ ಎಂಬ ಮಲಯಾಳಂ ಸಿನಿಮಾ ಹಾಗೂ ‘ಲೈಫ್’ ಎಂಬ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.