ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ

ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ

ಚಾಮರಾಜನಗರ, ಮಾರ್ಚ್​​ 11: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಬೆಟ್ಟದ ಆನೆ ತಲೆದಿಂಬದ ಬಳಿ ಚಿರತೆ ಓಡಾಟ ಕಂಡುಬಂದಿದ್ದು, ರಸ್ತೆಯ ಇಳಿಜಾರಿನ ತಿರುವಿನಲ್ಲಿ ತಡೆಗೋಡೆ ಪಕ್ಕದಲ್ಲಿ ಚಿರತೆ ಕುಳಿತಿರುವ ದೃಶ್ಯ ವಾಹನದಲ್ಲಿ ತೆರಳುತ್ತಿದ್ದವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಿವರಾತ್ರಿ ಜಾತ್ರೆ ವೇಳೆ ಪಾದಯಾತ್ರಿಕನನ್ನು ಚಿರತೆ ಕೊಂದು ತಿಂದಿತ್ತು. ಈಗ ಮತ್ತೆ ಅದೇ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈಲ್ವೆ ನಿಲ್ದಾಣದಲ್ಲಿ ದಿಕ್ಕೇ ತೋಚದೆ ನಿಂತ ಯುವತಿ, ಸಹಾಯಕ್ಕೆ ಬಂದ ಯೋಧ

ಅಪಾಯಕಾರಿ ಗಡಿಯಲ್ಲಿ ನಿಂತು ಶತ್ರುಗಳ ಹುಟ್ಟಡಗಿಸಿ, ನಮ್ಮನ್ನು ರಕ್ಷಣೆ ಮಾಡುವುದರಿಂದ ಹಿಡಿದು, ಯಾರು ಏನೇ ಅಪಾಯದಲ್ಲಿದ್ದರೂ ಅವರನ್ನು ಕಾಪಾಡಲು ಕೂಡ ಸೈನಿಕ(Soldier)ರು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ಮಥುರಾದಿಂದ ದೆಹಲಿಗೆ ಪ್ರಯಾಣಿಸುವಾಗ ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿದ ರೂಪ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಮಾಡಿದ ವೀಡಿಯೊ ಮತ್ತೊಂದು ಉದಾಹರಣೆಯಾಗಿದೆ.

ಆಕೆಯ ಫೋನ್ ಬ್ಯಾಟರಿ ಡೆಡ್ ಆಗಿತ್ತು. ಪೋಷಕರು ಕಾಯುತ್ತಿದ್ದರು ಆದರೆ ಅವರೆಲ್ಲಿದ್ದಾರೆ ಎಂದು ಹುಡುಕಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ, ಆಗ ಸೈನಿಕರೊಬ್ಬರು ತಮ್ಮಲ್ಲಿರುವ ಪವರ್ ಬ್ಯಾಂಕ್ ಕೊಟ್ಟು ಮೊಬೈಲ್ ಚಾರ್ಜ್​ ಮಾಡಲು ಸಹಾಯ ಮಾಡಿದರಲ್ಲದೆ, ಅವರು ಪೋಷಕರ ಬಳಿ ಸೇರುವಂತೆ ಮಾಡಿದ್ದಾರೆ ಎಂದು ಆಕೆ ಬರೆದುಕೊಂಡಿದ್ದಾರೆ.

ಮಥುರಾ ಜಂಕ್ಷನ್‌ನಲ್ಲಿ, ಹೋಳಿ ಮುಗಿದ ನಂತರ ಬ್ರಜ್‌ನಿಂದ ಹಿಂತಿರುಗುವಾಗ, ದೆಹಲಿಗೆ ಹೋಗುವ ತಮ್ಮ ರೈಲು ರಾತ್ರಿ 8.45 ಕ್ಕೆ ಇತ್ತು.ನನ್ನ ಫೋನ್‌ನಲ್ಲಿ ಶೇಕಡಾ ಎರಡರಷ್ಟು ಚಾರ್ಜ್ ಇತ್ತು, ನನ್ನ ಪವರ್ ಬ್ಯಾಂಕ್ ನೀರಿನಲ್ಲಿ ಬಿದ್ದಿತ್ತು. ತನ್ನ ಲೈವ್ ಲೊಕೇಷನ್ ಪೋಷಕರಿಗೆ ಕಳುಹಿಸಲು ನನಗೆ ಕೇವಲ 5 ನಿಮಿಷಗಳ ಚಾರ್ಜಿಂಗ್ ಬೇಕಾಯಿತು ಎಂದು ರೂಪ್ ಹೇಳಿದ್ದಾರೆ.

ಅಲ್ಲಿರುವ ಅಂಗಡಿ ಮುಂಗಟ್ಟುಗಳ ಬಳಿ ಹೋಗಿ ಚಾರ್ಜ್​ ಮಾಡಿಕೊಡಿ ಎಂದು ಕೇಳಿದ್ದರೂ ಯಾರೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಪ್ಲಾಟ್‌ಫಾರ್ಮ್ 6 ರ ಪಕ್ಕದಲ್ಲಿ ಮಿಲಿಟರಿ ರೈಲು ನಿಂತಿರುವುದನ್ನು ನೋಡಿ ಏನೋ ನೆಮ್ಮದಿ ಸಿಕ್ಕಂತಾಯಿತು. ಅಲ್ಲಿ ಯೋಧರೊಬ್ಬರ ಬಳಿ ತನ್ನ ಕಷ್ಟ ಹೇಳಿಕೊಂಡಾಗ ಅವರು ಕೂಡಲೇ ಪವರ್ ಬ್ಯಾಂಕ್ ತಂದುಕೊಟ್ಟರು, ಯಾರೂ ಸಹಾಯಕ್ಕೆ ಬಾರದಿದ್ದಾಗ ಅವರು ಬಂದರು ಎಂದು ಹೇಳಿಕೊಂಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ಬಳಿಕ ಈ ರಾಶಿಗೆ ಕೀರ್ತಿ, ಪ್ರತಿಷ್ಠೆ ಮತ್ತು ಅನಿರೀಕ್ಷಿತ ಧನಲಾಭ ಪ್ರಾಪ್ತಿ

ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19, 2026, ಗುರುವಾರದಂದು ಆಚರಿಸಲಾಗುತ್ತದೆ. ಇದನ್ನು ಹಿಂದೂಗಳ ಪಾಲಿನ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಧನುಸ್ಸು ರಾಶಿಯವರಿಗೆ ಸಾಕಷ್ಟು ಶುಭ ಫಲಗಳು ದೊರೆಯಲಿವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.

2026ರ ಪರಾಭವನಾಮ ಸಂವತ್ಸರದ ಯುಗಾದಿ ವರ್ಷದ ಧನುಸ್ಸು ರಾಶಿಯ ಸಮಗ್ರ ಫಲಾಫಲಗಳನ್ನು ವಿವರಿಸಿದ್ದಾರೆ. ಮೂಲಾ, ಪೂರ್ವಾಷಾಢ, ಮತ್ತು ಉತ್ತರಾಷಾಢ ನಕ್ಷತ್ರದವರು ಈ ರಾಶಿಗೆ ಸೇರುತ್ತಾರೆ.ಗ್ರಹಗಳ ಸಂಚಾರವನ್ನು ಗಮನಿಸಿದಾಗ, ರಾಶ್ಯಾಧಿಪತಿಯಾದ ಗುರು ಏಳನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ (ದುಸ್ಥಾನ/ಅಷ್ಟಮ ಸ್ಥಾನ) ಸಂಚಾರ ಮಾಡಲಿದೆ. ಶನಿ ಗ್ರಹವು ನಾಲ್ಕನೇ ಮನೆಯಲ್ಲಿಯೇ ಸಂಚಾರ ಮಾಡಲಿದ್ದು, ಇದನ್ನು ಅರ್ಧಾಷ್ಟಮ ಎಂದು ಪರಿಗಣಿಸಲಾಗುತ್ತದೆ. ರಾಹು ಗ್ರಹ ಮೂರನೇ ಮನೆಯಿಂದ ಎರಡನೇ ಮನೆಗೆ ಸಾಗಲಿದ್ದು, ಕೇತು ಒಂಬತ್ತನೇ ಮನೆಯಿಂದ ಎಂಟನೇ ಮನೆಗೆ ಚಲಿಸಲಿದೆ. ಈ ಗ್ರಹಗಳ ಸ್ಥಾನಪಲ್ಲಟದ ಹೊರತಾಗಿಯೂ ಧನುಸ್ಸು ರಾಶಿಯವರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ.

2026ರಲ್ಲಿ ಧನುಸ್ಸು ರಾಶಿಯವರಿಗೆ ಆದಾಯ 14 ಪಟ್ಟು ಹೆಚ್ಚಿದ್ದು, ಖರ್ಚು ಕಡಿಮೆಯಿರಲಿದೆ. ಒಟ್ಟಾರೆ ಆರ್ಥಿಕ ಪ್ರಗತಿಯು ಉತ್ತಮವಾಗಿರಲಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿಲ್ಲದಿದ್ದರೂ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವುದಕ್ಕಿಂತ ವ್ಯಾಯಾಮ ಮತ್ತು ಆಯುರ್ವೇದವನ್ನು ಅವಲಂಬಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಸುಖ-ದುಃಖಗಳ ಅನುಪಾತವು ಎಂಟು ಸುಖಗಳು ಮತ್ತು ಮೂರು ದುಃಖಗಳನ್ನು ಸೂಚಿಸುತ್ತದೆ.

ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಗಂಡ-ಹೆಂಡತಿ, ತಂದೆ-ಮಕ್ಕಳು, ಸ್ನೇಹಿತರು ಮತ್ತು ಪಾಲುದಾರಿಕೆ ಸಂಬಂಧಗಳಲ್ಲಿ ಸಡಿಲಿಕೆ ಕಂಡುಬರುವ ಸಾಧ್ಯತೆ ಇದೆ. ಆದಾಗ್ಯೂ, ಈ ವರ್ಷ ಕೀರ್ತಿ ಮತ್ತು ಪ್ರತಿಷ್ಠೆಗಳಿಗೆ ಭಾಜನರಾಗಲಿದ್ದು, ಆಕಸ್ಮಿಕ ಧನಯೋಗ ಪ್ರಾಪ್ತಿಯಾಗಲಿದೆ. ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯಲಿವೆ. ಪ್ರಯಾಣಗಳು ಲಾಭದಾಯಕವಾಗಿದ್ದು, ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಹಳೆಯ ಬಾಕಿಗಳು ವಸೂಲಿಯಾಗಲಿದ್ದು, ಅಧಿಕಾರಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.

ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವುದು ಉತ್ತಮ. ಭೂ ವಿಚಾರಗಳಲ್ಲಿ ಲಾಭ-ನಷ್ಟಗಳು ಸಂಭವಿಸಬಹುದು. ಅತಿಯಾದ ಹಣ ಹರಿದು ಬಂದಾಗ, ಯೋಚಿಸದೆ ಹೂಡಿಕೆ ಮಾಡುವುದು ನಷ್ಟಕ್ಕೆ ಕಾರಣವಾಗಬಹುದು. ಸರ್ಕಾರಿ ನೌಕರರು, ರೈತರು, ವಿದ್ಯಾರ್ಥಿಗಳು (ವಿಶೇಷವಾಗಿ ಮಹಿಳಾ ವಿದ್ಯಾರ್ಥಿನಿಯರು) ಮತ್ತು ಗುತ್ತಿಗೆದಾರರಿಗೆ ಈ ವರ್ಷ ಶುಭಕರವಾಗಿದೆ. ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಹೊಸ ವ್ಯಾಪಾರ ಅಥವಾ ಸಂಸ್ಥೆಗಳನ್ನು ಸ್ಥಾಪಿಸಲು ಪ್ರಯತ್ನಿಸಬಹುದು. ವಿದೇಶ ಯೋಗವೂ ಕೂಡಿಬಂದಿದೆ. ಆದಾಗ್ಯೂ, ಮಕ್ಕಳ ಆರೋಗ್ಯ ಮತ್ತು ವಾಹನಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಕಂಟಕಗಳು ಸ್ವಲ್ಪ ನೋವನ್ನುಂಟು ಮಾಡಬಹುದು.

ಕಾನೂನು ವಿಚಾರಗಳಲ್ಲಿ ಶುಭ ಯೋಗವಿದ್ದು, ವರ್ಷದ ಕಡೆಯ ಭಾಗದಲ್ಲಿ ಕೆಲವರಿಗೆ ಸ್ಥಾನಪಲ್ಲಟ ಅಥವಾ ಮನೆ ಕಟ್ಟುವ ಯೋಗವಿದೆ. ಆದಷ್ಟು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ರಾಜಕೀಯ ವ್ಯಕ್ತಿಗಳಿಗೆ ಈ ವರ್ಷ ಅಷ್ಟು ಶುಭಕರವಾಗಿಲ್ಲ. ಹಣ ವ್ಯಯವಾಗುವ ಸಾಧ್ಯತೆ ಇದೆ. ಪಶ್ಚಾತ್ತಾಪ ಮತ್ತು ನೀರಸ ಮನಃಸ್ಥಿತಿ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಸಂಬಂಧಗಳಲ್ಲೇ ವಿವಾಹ ಯೋಗ ಕೂಡಿಬರುವ ಸಾಧ್ಯತೆ 2026ರ ಪರಾಭವನಾಮ ಸಂವತ್ಸರದಲ್ಲಿ ಇರಬಹುದು. ಅನುಮಾನಗಳಿಗೆ ಆಸ್ಪದ ನೀಡದೆ, ಬೇರೆಯವರ ಬಗ್ಗೆ ಅತಿಯಾದ ಚರ್ಚೆಗಳಿಂದ ದೂರವಿರಿ. ವರ್ಷದ ಕೊನೆಯ ಭಾಗದಲ್ಲಿ ಬೇಕಾದವರ ಅಗಲಿಕೆ ನೋವನ್ನುಂಟು ಮಾಡಬಹುದು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಒಟ್ಟಾರೆಯಾಗಿ ಧನುಸ್ಸು ರಾಶಿಯವರಿಗೆ ಶೇ.65ರಷ್ಟು ಶುಭ ಫಲಗಳು ದೊರೆಯಲಿವೆ. ಗುರುವಾರ ಮತ್ತು ಭಾನುವಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ದಿನಗಳಾಗಿವೆ. ಗುಲಾಬಿ ಮತ್ತು ಗೋಧಿ ಬಣ್ಣಗಳನ್ನು ಹೆಚ್ಚಾಗಿ ಬಳಸುವುದು ಉತ್ತಮ. ಅದೃಷ್ಟ ಸಂಖ್ಯೆಗಳು 5 ಮತ್ತು 4 ಆಗಿವೆ. ಪರಿಹಾರಗಳಿಗಾಗಿ, ಗಣೇಶನ ಆರಾಧನೆ, ಸಂಕಷ್ಟ ಚತುರ್ಥಿಯಂದು ಪ್ರಸಾದ ಅರ್ಪಣೆ, ಪ್ರತಿದಿನ “ಓಂ ಗಂ ಗಣಪತಯೇ ನಮಃ” ಮಂತ್ರ ಜಪಿಸುವುದು ಉತ್ತಮ. ದೇವಸ್ಥಾನಗಳಲ್ಲಿ ಅಥವಾ ಭಿಕ್ಷುಕರಿಗೆ ದಾನ ಮಾಡುವುದು ಸಹ ಶುಭಕರ. ಸಂಧ್ಯಾ ಕಾಲದಲ್ಲಿ ಅಥವಾ ಗುರುವಾರದ ಸಂಧ್ಯಾ ಕಾಲದಲ್ಲಿ ವಿಷ್ಣು ಸಹಸ್ರನಾಮ ಜಪಿಸುವುದರಿಂದ ಹೆಚ್ಚಿನ ಶುಭ ಫಲಗಳು ದೊರೆಯಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಜನೀಕಾಂತ್ ಸಿನಿಮಾನಲ್ಲಿ ಶಾರುಖ್ ಖಾನ್ ಪಾತ್ರ ಏನು?

ರಜನೀಕಾಂತ್ (Rajinikanth) ನಟನೆಯ ‘ಜೈಲರ್ 2’ ಚಿತ್ರೀಕರಣ ಚಾಲ್ತಿಯಲ್ಲಿದೆ. 2023 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಅದೇ ಸಿನಿಮಾದ ಮುಂದಿನ ಭಾಗ ಚಿತ್ರೀಕರಣ ಚಾಲ್ತಿಯಲ್ಲಿದ್ದು, ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ನಟಿಸಿದ್ದ ಕೆಲ ಅತಿಥಿ ನಟರುಗಳು ಈ ಸಿನಿಮಾನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಹೆಚ್ಚುವರಿ ಸೇರ್ಪಡೆಯೆಂದರೆ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರು ಸಹ ‘ಜೈಲರ್ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಶಾರುಖ್ ಖಾನ್, ರಜನೀಕಾಂತ್ ಜೊತೆ ನಟಿಸುವ ಸುದ್ದಿ ಈ ಹಿಂದೆಯೇ ಖಾತ್ರಿ ಆಗಿತ್ತು. ಇದೀಗ ಶಾರುಖ್ ಪಾತ್ರ ಎಂಥಹದ್ದು ಎಂಬ ಮಾಹಿತಿ ಲೀಕ್ ಆಗಿದೆ.

‘ಜೈಲರ್ 2’ ಸಿನಿಮಾನಲ್ಲಿ ಶಾರುಖ್ ಖಾನ್ ತುಸು ಅಪರೂಪವಾದ ಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಅಸಲಿಗೆ ಶಾರುಖ್ ಖಾನ್ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಅಪರೂಪ. ಶಾರುಖ್ ಖಾನ್ ಅವರು ಮಿಲಿಟರಿ ಅಧಿಕಾರಿ, ರಾ ಏಜೆಂಟ್ ಪಾತ್ರಗಳಲ್ಲಿ ಸಾಕಷ್ಟು ನಟಿಸಿದ್ದಾರೆ ಆದರೆ ಪೊಲೀಸ್ ಪಾತ್ರದಲ್ಲಿ ನಟಿಸಿರುವುದು ಬಹಳ ಕಡಿಮೆ. ಇತ್ತೀಚೆಗೆ ಸೂಪರ್ ಹಿಟ್ ಆದ ‘ಜವಾನ್’ ಸಿನಿಮಾನಲ್ಲಿ ಜೈಲರ್ ಪಾತ್ರದಲ್ಲಿ ನಟಿಸಿದ್ದರು ಶಾರುಖ್, ಅದಕ್ಕೆ ಮುಂಚೆ ‘ಒನ್ ಟು ಕ ಫೋರ್’ ಸಿನಿಮಾನಲ್ಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಫೋರ್ಸ್ ಸದಸ್ಯನ ಪಾತ್ರದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳ ಹೊರತಾಗಿ ಪೊಲೀಸ್ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಿಲ್ಲ.

ಆದರೆ ಇದೀಗ ಶಾರುಖ್ ಖಾನ್, ‘ಜೈಲರ್ 2’ ಸಿನಿಮಾನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಜೈಲರ್’ ಸಿನಿಮಾನಲ್ಲಿ ರಜನೀಕಾಂತ್ ಸಹ ಜೈಲಿನ ನಿವೃತ್ತ ನಿರೀಕ್ಷಣಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಬಹುಷಃ ಶಾರುಖ್ ಖಾನ್ ಅವರ ಪಾತ್ರ, ರಜನೀಕಾಂತ್ ಅವರ ಹಳೆಯ ಗೆಳೆಯನ ಪಾತ್ರದಲ್ಲಿ ನಟಿಸಲಿರುವ ಸಾಧ್ಯತೆ ಇದೆ. ಶಾರುಖ್ ಖಾನ್ ಅವರಿಗೆ ಸಖತ್ ಮಾಸ್ ಆದ ಪಾತ್ರವನ್ನೇ ನಿರ್ದೇಶಕ ನೆಲ್ಸನ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:47 ವರ್ಷಗಳ ಬಳಿಕ ಒಂದಾದ ಕಮಲ್-ರಜನೀಕಾಂತ್: ಆದರೆ ನಾಯಕ ಯಾರು?

ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಕಡಿಮೆ. ಅದರಲ್ಲೂ ದಕ್ಷಿಣದ ಸಿನಿಮಾಗಳಲ್ಲಿ ಬಹಳ ಅಪರೂಪಕ್ಕೆ ಅವರು ಅತಿಥಿ ಪಾತ್ರಗಳಲ್ಲಿ ನಟಿಸುತ್ತಾರೆ. ದಶಕಗಳ ಹಿಂದೆ ಕಮಲ್ ಹಾಸನ್ ನಿರ್ದೇಶನದ ‘ಹೇ ರಾಮ್’ ಸಿನಿಮಾದ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದರು. ಅದಾದ ಬಳಿಕ ಈಗ ರಜನೀಕಾಂತ್ ಅವರ ಜೊತೆಗೆ ನಟಿಸುತ್ತಿದ್ದಾರೆ. ಅಂದಹಾಗೆ ರಜನೀಕಾಂತ್ ಅವರು ಶಾರುಖ್ ಖಾನ್ ನಟನೆಯ ‘ರಾ ಒನ್’ ಸಿನಿಮಾನಲ್ಲಿ ರೋಬೊ ಪಾತ್ರದಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ರಜನೀಕಾಂತ್ ಋಣ ತೀರಿಸಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

No Smoking Day 2026: ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನವನ್ನು ನಡೆಸಿ

ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ, ಲಕ್ಷಾಂತರ ಮಂದಿ ಈ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅದೆಷ್ಟೋ ಮಂದಿ ನಿರಂತರ ಸ್ಮೋಕಿಂಗ್‌ ಮಾಡಿ ಶ್ವಾಸಕೋಶದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಸುಂದರ ಜೀವನವನ್ನೇ ಹಾಳುಮಾಡಿಕೊಂಡಿದ್ದಾರೆ. ಧೂಮಪಾನದ ಈ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು, ಧೂಮಪಾನವನ್ನು ತ್ಯಜಿಸಲು ಜನರನ್ನು ಪ್ರೇರೇಪಿಸಲು ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ಬುಧವಾರದಂದು ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ಧೂಮಪಾನ ನಿಷೇಧ ದಿನದ ಇತಿಹಾಸವೇನು?

ಧೂಮಪಾನದಿಂದ ಉಂಟಾಗುವ ಆರೋಗ್ಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಧೂಮಪಾನ ತ್ಯಜಿಸುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅಭಿಯಾನವಾಗಿ 1984 ರಲ್ಲಿ ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ ನೋ ಸ್ಮೋಕಿಂಗ್ ದಿನವನ್ನು ಆಚರಿಸಲಾಯಿತು. ಮೂಲತಃ ಮಾರ್ಚ್‌ನಲ್ಲಿ ಮೊದಲ ಬುಧವಾರದಂದು ಅಂದರೆ ಆಶ್‌ ವೆಡ್‌ನೆಸ್‌ ಡೇ ಯಂದು ಆಚರಿಸಲಾಗುತ್ತಿತ್ತು, ನಂತರ ಈ ದಿನವನ್ನು ಮಾರ್ಚ್‌  ಎರಡನೇ ಬುಧವಾರದಂದು ಆಚರಿಸಲಾಯಿತು. ನಂತರ ಈ ಜಾಗೃತಿ ದಿನ ವಿಶ್ವಾದ್ಯಂತ ಮನ್ನಣೆ ಗಳಿಸಿತು.  ಇಂದು ಈ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಹಿಳಾ ದಿನದ ಆಚರಣೆ ಆರಂಭವಾದದ್ದು ಹೇಗೆ ಗೊತ್ತಾ?

ಧೂಮಪಾನ ನಿಷೇಧ ದಿನದ ಮಹತ್ವವೇನು?

  • ಧೂಮಪಾನದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಸಮಯಕ್ಕೆ ಸರಿಯಾಗಿ ಧೂಮಪಾನವನ್ನು ತ್ಯಜಿಸಲು ಪ್ರೋತ್ಸಾಹಿಸಲು ಈ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಜಗತ್ತನ್ನು ಧೂಮಪಾನ ಮುಕ್ತಗೊಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅನೇಕ ಕಡೆ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ನಟಿ ತ್ರಿಷಾ ಕೃಷ್ಣನ್ (Trisha) ಅವರು ಇನ್ನೂ ಅವಿವಾಹಿತೆ. ದಳಪತಿ ವಿಜಯ್ ಜೊತೆ ಅವರು ಕಾಣಿಸಿಕೊಳ್ಳುತ್ತಿರುವುದರಿಂದ ಇಬ್ಬರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬ ಪ್ರಶ್ನೆಗೆ ವಿಜಯ್ ಅಥವಾ ತ್ರಿಷಾ ಅವರೇ ಸ್ಪಷ್ಟನೆ ಕೊಡಬೇಕಿದೆ. ಈ ಮಧ್ಯೆ ವಿಜಯ್ ಅವರಿಗೆ ವಿಚ್ಛೇದನ ಕೊಡಲು ಪತ್ನಿ ಸಂಗೀತಾ ರೆಡಿ ಆಗಿದ್ದಾರೆ. ಹೀಗಿರುವಾಗ, ತ್ರಿಷಾ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ.

ವಿಜಯ್ ವಿರುದ್ಧ ಸಂಗೀತ ಗಂಭೀರ ಆರೋಪ ಮಾಡಿದ್ದಾರೆ. ಪತಿ ವಿಜಯ್​​ಗೆ ಅಕ್ರಮ ಸಂಬಂಧ ಇದೆ ಎಂದು ಅವರು ಆರೋಪಿಸಿದ್ದಾರೆ. ವಿಜಯ್ ಅಕ್ರಮ ಸಂಬಂಧ ಹೊಂದಿರೋದು ತ್ರಿಷಾ ಜೊತೆ ಎಂದು ಎಲ್ಲರೂ ಕಲ್ಪಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ತ್ರಿಷಾ ಅವರು ಈ ಮೊದಲು ವಿವಾಹದ ಬಗ್ಗೆ ಮಾತನಾಡಿದ್ದರು.
ತ್ರಿಷಾಗೆ ಈ ಮೊದಲು ನಿಶ್ಚಿತಾರ್ಥ ಆಗಿತ್ತು. ಅದನ್ನು ಅವರು ಮುರಿದುಕೊಂಡರು. ಇದಕ್ಕೆ ಕಾರಣವನ್ನೂ ಅವರು ನೀಡಿದ್ದರು. ತ್ರಿಷಾಗೆ ಆ ವ್ಯಕ್ತಿ ಸಾಕಷ್ಟು ಷರತ್ತುಗಳನ್ನು ಹಾಕುತ್ತಿದ್ದರಂತೆ. ಈ ಕಾರಣದಿಂದ ಅವರು ಸಂಬಂಧ ಮುಂದುವರಿಸಲೇ ಇಲ್ಲ.

‘ನಾನು ವಿಚ್ಛೇದನದಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ, ನಾನು ಜೀವನ ಮಾಡಬೇಕಾದ ವ್ಯಕ್ತಿ ಇವರೇ ಎಂದು ಫೀಲ್ ಆಗಬೇಕು. ನಾನು ಮದುವೆಯಾದ ಬಳಿಕ ವಿಚ್ಛೇದನ ಪಡೆಯಲು ಬಯಸುವುದಿಲ್ಲ. ಅದೂ ನಾನಿಷ್ಟ ಪಟ್ಟ ವ್ಯಕ್ತಿಯಿಂದ ದೂರ ಆಗಲ್ಲ’ ಎಂದು ಅವರು ಹೇಳಿದರು.

‘ನನಗೆ ವಿಚ್ಛೇದನದಲ್ಲಿ ನಂಬಿಕೆ ಇಲ್ಲ. ಮದುವೆಗೂ ಮುನ್ನ 100 ಬಾರಿ ಯೋಚಿಸುತ್ತೇನೆ. ಬೇರೆಯವರಿಗೆ ನೋವುಂಟು ಮಾಡಲು ಅಥವಾ ಅತೃಪ್ತ ಜೀವನ ನಡೆಸಲು ನಾನು ಬಯಸುವುದಿಲ್ಲ’ ತ್ರಿಷಾ ಈ ಮೊದಲು ಹೇಳಿದ್ದರು.

‘ನನ್ನ ಸುತ್ತಲಿರೋ ಅನೇಕರು ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ತುಂಬಾ ಅತೃಪ್ತರು. ನಾನು ಅಂತಹ ದಾಂಪತ್ಯದಲ್ಲಿರಲು ಬಯಸುವುದಿಲ್ಲ. ನಾನು ಪ್ರೀತಿಯಲ್ಲಿ ಬೀಳಲು ಬಯಸುತ್ತೇನೆ. ನಾನು ಅದರ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದೇನೆ. ಹೀಗಾಗಿ, ಮದುವೆಗೂ ಮೊದಲು ನಾನು ಯೋಚಿಸುತ್ತೇನೆ’ ಎನ್ನುತ್ತಾರೆ ತ್ರಿಷಾ.

ಇದನ್ನೂ ಓದಿ: ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?

‘ಈ ಕಾರಣದಿಂದ ನನ್ನ ಮದುವೆ ರದ್ದಾಯಿತು. ನಟನೆ ತೊರೆಯುವಂತೆ ಆತ ಹೇಳಿದೆ. ಹೀಗಾಗಿ, ನಾನು ಆತನನ್ನೇ ಬಿಟ್ಟೆ. ನಾನು ಪ್ರೆಗ್ನೆಂಟ್ ಆಗಿದ್ದಾಗ ಮಾತ್ರ ನಟನೆಯಿಂದ ಬ್ರೇಕ್ ಪಡೆಯಬೇಕು ಎಂದುಕೊಂಡಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರ್ಚಕನ ಸಾವು ಕೇಸ್‌ಗೆ ಬಿಗ್ ಟ್ವಿಸ್ಟ್; ತನ್ನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆಗೂಡಿ ಮುಗಿಸಿದ ಪತ್ನಿ!

ಮಂಡ್ಯ, ಮಾ.11: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರ ಮತ್ತು ಆತನ ಸ್ನೇಹಿತರ ಮೂಲಕ ಕೊಲೆ ಮಾಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲದಲ್ಲಿ ಬೆಳಕಿಗೆ ಬಂದಿದೆ. ಅರ್ಚಕ ಸಿದ್ದಲಿಂಗಪ್ಪ (46) ಹತ್ಯೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶಾಲಿನಿ, ಪ್ರಿಯಕರ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಮಾ.6ರಂದು ಸಿಡಿಎಸ್ ನಾಲೆಯಲ್ಲಿ ಸಿದ್ದಲಿಂಗಪ್ಪ ಶವವಾಗಿ ಪತ್ತೆಯಾಗಿದ್ದರು. ಚಪ್ಪಲಿ ಸಿಕ್ಕ ಸ್ಥಳದಲ್ಲಿ ರಕ್ತದ ಕಲೆ ಇದ್ದ ಹಿನ್ನೆಲೆ ಪೊಲೀಸರಿಗೆ ಅನುಮಾನ ಮೂಡಿ ತನಿಖೆಯನ್ನು ಚುರುಕುಗೊಳಿಸಿದಾಗ ಪೊಲೀಸರಿಗೆ ಈ ಸತ್ಯ ಗೊತ್ತಾಗಿದೆ.

ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ, ಇಬ್ಬರು ಮಕ್ಕಳಿದ್ದರು, ಸುಖದ ಜೀವನ ನಡೆಸುತ್ತಿರುವಾಗ, ಅದೇ ಗ್ರಾಮದ ಹರೀಶ್ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪನಿಗೆ ಈ ವಿಷಯ ತಿಳಿದು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಆಗ ಪತ್ನಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿದ್ದರು. ಆದರೆ ಪತ್ನಿ ಶಾಲಿನಿ ಮಾತ್ರ ತನ್ನ ಕಾಮದಾಟಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.

ಮಾರ್ಚ್ 6ರಂದು ಸಿದ್ದಲಿಂಗಪ್ಪ ಪೂಜೆಗಾಗಿ ಪಕ್ಕದ ಊರಿಗೆ ತೆರಳಿದ್ದಾಗ, ಶಾಲಿನಿ ತನ್ನ ಪ್ರಿಯಕರ ಹರೀಶ್‌ಗೆ ಮೆಸೇಜ್ ಮಾಡಿ ಪತಿಯ ಹೊರಗಡೆ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಳು.ಸಿದ್ದಲಿಂಗಪ್ಪ ಪೂಜೆ ಮುಗಿಸಿ ಬೈಕ್‌ನಲ್ಲಿ ಮರಳಗಾಲದ ನಾಲೆ ಏರಿ ಮೇಲೆ ಬರುತ್ತಿದ್ದಾಗ, ಹರೀಶ್ ಮತ್ತು ಆತನ ಸ್ನೇಹಿತರಾದ ಸಂತೋಷ್ ಹಾಗೂ ಗಣೇಶ್ ಅಡ್ಡಗಟ್ಟಿದ್ದಾರೆ. ಸಿದ್ದಲಿಂಗಪ್ಪ ಅವರ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ ಆರೋಪಿಗಳು, ಸಾಕ್ಷ್ಯ ನಾಶಪಡಿಸಲು ಮೃತದೇಹ ಮತ್ತು ಬೈಕ್ ಅನ್ನು ಸಿಡಿಎಸ್ (CDS) ನಾಲೆಗೆ ಬಿಸಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಗ್ರಾಹಕರ ಗಮನಕ್ಕೆ… ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲ್ಲ ವಡೆ, ಬಜ್ಜಿ, ಪಕೋಡ: ಸ್ನ್ಯಾಕ್ಸ್ ತಿಂಡಿಗೂ ಕೋಕ್

ನಾಲೆ ದಡದಲ್ಲಿ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾದಾಗ ರಕ್ತದ ಕಲೆಗಳು ಕಂಡುಬಂದಿದ್ದವು. ಇದು ಕೇವಲ ಅಪಘಾತವಲ್ಲ, ಹತ್ಯೆ ಎಂಬ ಸಂಶಯಗೊಂಡ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶಾಲಿನಿಯ ಅಕ್ರಮ ಸಂಬಂಧದ ವಿಷಯ ಬಯಲಾಗಿದೆ. ಈ ಬಗ್ಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ತಂಡದೊಂದಿಗಿನ ‘ಅಂತರ’ ಬೆಳೀತಾ ಹೋಗ್ತಿದೆ!

ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2024 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ ತಂಡವು ಇದೀಗ 2026 ರಲ್ಲೂ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತವಾಗಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಈ ಅಮೋಘ ಸಾಧನೆಯನ್ನು ಇಂಗ್ಲೆಂಡ್​ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ವಿಶ್ಲೇಷಿಸಿದ್ದು, ಈ ವೇಳೆ ನೀಡಿದ ಹೇಳಿಕೆಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಭಾರತ ತಂಡ ಮತ್ತು ಪ್ರಪಂಚದ ಉಳಿದ ಭಾಗಗಳ ತಂಡಗಳ ನಡುವಿನ ಅಂತರವು ದೊಡ್ಡದಾಗುತ್ತಲೇ ಇದೆ. ಈ ಮೂಲಕ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಹೊತ್ತಿದ್ದಾರೆ. ಈ ಅಂತರ ಬೆಳೆಯುತ್ತಾ ಹೋಗುತ್ತಿರಲು ಸ್ಟುವರ್ಟ್ ಬ್ರಾಡ್ ಕೆಲ ಕಾರಣಗಳನ್ನು ಮುಂದಿಟ್ಟಿದ್ದಾರೆ.

  • ತಂಡದ ಆಳ: ಭಾರತದ ಬೆಂಚ್ ಸ್ಟ್ರೆಂತ್ ಎಷ್ಟು ಪ್ರಬಲವಾಗಿದೆಯೆಂದರೆ, ಭಾರತದ ಯಾವುದೇ ಆಟಗಾರ ವಿಶ್ವದ ಇತರ ಯಾವುದೇ ತಂಡದಲ್ಲಿ ನೇರವಾಗಿ ಸ್ಥಾನ ಪಡೆಯಬಲ್ಲರು ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.
  • ಐಪಿಎಲ್ ಪ್ರಭಾವ: ಯುವ ಆಟಗಾರರು ಪದಾರ್ಪಣೆ ಮಾಡುವ ಮೊದಲೇ ವಿಶ್ವದ ಶ್ರೇಷ್ಠ ಆಟಗಾರರ ವಿರುದ್ಧ ಆಡಿ ಒತ್ತಡವನ್ನು ನಿಭಾಯಿಸುವುದನ್ನು ಕಲಿಯುತ್ತಿದ್ದಾರೆ. ಇದು ಭಾರತ ಮತ್ತು ಉಳಿದ ದೇಶಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಿಸುತ್ತಿದೆ.
  • ಜಸ್​ಪ್ರೀತ್ ಬುಮ್ರಾ: ಜಸ್​ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳು ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠರು ಎಂದು ಬಣ್ಣಿಸಿದ ಬ್ರಾಡ್, ಭಾರತದ ಬೌಲಿಂಗ್ ವಿಭಾಗವು ಈಗ ಅಭೇದ್ಯವಾಗಿದೆ ಎಂದಿದ್ದಾರೆ.

ಇನ್ನು ಟೀಮ್ ಇಂಡಿಯಾ ಬಲಿಷ್ಠವಾಗಲು ಐಪಿಎಲ್ ಪ್ರಮುಖ ಕಾರಣ ಎಂದಿರುವ ಸ್ಟುವರ್ಟ್ ಬ್ರಾಡ್, ಒಂದೆರಡು ಪಂದ್ಯಗಳಲ್ಲಿ ಸರಿಯಾಗಿ ಆಡದಿದ್ದರೆ ನಿಮ್ಮ ಮೇಲೆ ಪ್ರಶ್ನೆಗಳು ಏಳುತ್ತವೆ. ಹೀಗಾಗಿ ನೀವು ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಮೊದಲೇ ಅಂತರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಒಗ್ಗಿಕೊಂಡಿರುತ್ತೀರಿ. ಇದಕ್ಕೆಲ್ಲಾ ಮುಖ್ಯ ಕಾರಣ ಐಪಿಎಲ್ ಎಂದು ಭಾವಿಸುತ್ತೇನೆ.

ಬೃಹತ್ ಪ್ರೇಕ್ಷಕರ ಮುಂದೆ ಮತ್ತು ಹೆಚ್ಚಿನ ನಿರೀಕ್ಷೆಗಳ ನಡುವೆ ಆಡುವ ಈ ಅನುಭವವು ಭಾರತೀಯ ಆಟಗಾರರಿಗೆ ದೊಡ್ಡ ಬಲವಾಗಿದೆ. ಈ ಎಲ್ಲಾ ಅನುಭವಗಳೊಂದಿಗೆ ಯುವ ಆಟಗಾರರು ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡುತ್ತಿದ್ದಾರೆ. ಇದುವೇ ಇತರೆ ತಂಡಗಳಿಂದ ಟೀಮ್ ಇಂಡಿಯಾವನ್ನು ಭಿನ್ನವಾಗಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನೇ ನೋಡಿ, ಆ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಮತ್ತು ರಿಷಭ್ ಪಂತ್ ಅವರಂತಹ ಶ್ರೇಷ್ಠ ಆಟಗಾರರು ಇಲ್ಲ. ಇದು ಟೀಮ್ ಇಂಡಿಯಾದ ಸ್ಟ್ರೆಂತ್ ಅನ್ನು ಎತ್ತಿ ತೋರಿಸುತ್ತದೆ.

ಯಶಸ್ವಿ ಜೈಸ್ವಾಲ್ ಟೆಸ್ಟ್ ಮತ್ತು ಟಿ20 ಎರಡರಲ್ಲೂ ಅದ್ಭುತ ದಾಖಲೆ ಹೊಂದಿದ್ದರೂ ಸಹ ಅವರಿಗೆ ಭಾರತದ ಈ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಎನ್ನುವುದು ಭಾರತದ ಪ್ರತಿಭೆಯ ಅಗಾಧತೆಗೆ ಸಾಕ್ಷಿ ಎಂದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಅನುಭವಿ ಆಟಗಾರನಾಗಿ ಭಾರತ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ “ಅತ್ಯಂತ ಅಪಾಯಕಾರಿ ಆಟಗಾರ” ಎಂದು ಬಣ್ಣಿಸಿದ್ದಾರೆ. ಪಾಂಡ್ಯ ಅವರಲ್ಲಿರುವ  ಆತ್ಮವಿಶ್ವಾಸ ಮತ್ತು ಅತಿ ಸುಲಭವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯವು ಯಾವುದೇ ತಂಡಕ್ಕೆ ಕಂಟಕವಾಗಬಲ್ಲದು ಎಂದು ಹೇಳಿದ್ದಾರೆ.

ಹಾಗೆಯೇ ಮೊದಲೇ ಹೇಳಿದಂತೆ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪಾಲಿನ ಗೇಮ್ ಚೇಂಜರ್. ಅವರಂತಹ ಬೌಲರ್‌ ತಂಡದಲ್ಲಿರುವುದು ಟೀಮ್ ಇಂಡಿಯಾದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಹೊಸ ಗರ್ಲ್​​ ಫ್ರೆಂಡ್ ಎಂಟ್ರಿ… ಜೀವಕ್ಕೆ ಜೀವದಂತಿದ್ದ ಅಣ್ಣನೇ ದೂರ..!

ಈ ಕಾರಣಗಳಿಂದಾಗಿ ಭಾರತ ಮತ್ತು ಪ್ರಪಂಚದ ಇತರ ದೇಶಗಳ ನಡುವಿನ ಅಂತರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದನ್ನು ತಡೆಯುವುದು ಇತರ ತಂಡಗಳಿಗೆ ಕಷ್ಟವಾಗಬಹುದು ಎಂಬುದು ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

 

Source link

ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್​ಡೇಗೆ ಸಿಗಲಿದೆ ದೊಡ್ಡ ಗಿಫ್ಟ್

ಅಲ್ಲು ಅರ್ಜುನ್ (Allu Arjun ) ಅವರ ಜನ್ಮದಿನಕ್ಕೆ ಕೌಂಟ್​​ಡೌನ್ ಶುರುವಾಗಿದೆ. ಏಪ್ರಿಲ್ 8ರಂದು ಅವರು 43ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಸೆಲೆಬ್ರಿಟಿಗಳ ಬರ್ತ್​​ಡೇ ಎಂದರೆ ಅಭಿಮಾನಿಗಳಿಗೆ ಸಾಮಾನ್ಯವಾಗಿ ವಿಶೇಷ ಗಿಫ್ಟ್ ಸಿಗುತ್ತದೆ. ಅದೇ ರೀತಿ, ಈ ವರ್ಷ ಅಲ್ಲು ಬರ್ತ್​​ಡೇ ದಿನ ಹೊಸ ಅನೌನ್ಸ್​​ಮೆಂಟ್ ಮಾಡಲು ತಂಡ ರೆಡಿ ಆಗಿದೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ.

ಅಲ್ಲು ಅರ್ಜುನ್ ಅವರು ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ AA22XA6 ಎಂದು ಟೈಟಲ್ ಕೊಡಲಾಗಿದೆ. ಈ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ. ಈ ಸಿನಿಮಾದ ಶೂಟ್ ಭರದಿ ಸಾಗುತ್ತಿದ್ದು, 2027ರಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ. ಈ ಸಿನಿಮಾಗೆ ಯಾವ ಟೈಟಲ್ ಇಡಲಾಗುತ್ತದೆ ಎಂಬ ಕುತೂಹಲ ಇದೆ. ಅದರ ಅನಾವರಣಕ್ಕೆ ದಿನಾಂಕ ನಿಗದಿ ಆಗಿದೆ.

ಕೆಲವು ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಬರ್ತ್​​ಡೇ ಪ್ರಯುಕ್ತ ಅಂದರೆ, ಏಪ್ರಿಲ್ 8ರಂದು ಟೈಟಲ್ ಅನಾವರಣಗೊಳ್ಳಲಿದೆ. ಒಂದು ಸಣ್ಣ ಟೀಸರ್ ಅಥವಾ ಗ್ಲಿಂಪ್ಸ್ ಮೂಲಕ ಟೈಟಲ್ ಅನಾವರಣ ಮಾಡುವ ಪ್ಲ್ಯಾನ್ ಅಲ್ಲಿ ತಂಡ ಇದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

AA22XA6 ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ವಿಎಫ್​​ಎಕ್ಸ್ ಬಳಸಲು ತಂಡ ಪ್ಲ್ಯಾನ್ ರೂಪಿಸಿದೆ. ಈ ಚಿತ್ರ ಸಿನಿಮ್ಯಾಟಿಕ್ ವರ್ಲ್ಡ್​​ನ ಪ್ರೇಕ್ಷಕರ ಎದುರು ತೆರೆದಿಡಲಿದೆ ಎಂದು ತಂಡ ಹೇಳಿದೆ. ಇನ್ನು, ಟೈಟಲ್ ಟೀಸರ್ ಪ್ರೇಕ್ಷಕರನ್ನು ಹಾಗೂ ಸಿನಿಮಾ ಪ್ರಿಯರನ್ನು ಅಚ್ಚರಿ ಪಡುವ ರೀತಿಯಲ್ಲಿ ಇರಲಿದೆ ಎಂದು ತಂಡ ಹೇಳಿರೋದಾಗಿ ವರದಿ ಆಗಿದೆ.

ಇದನ್ನೂ ಓದಿ: ಪಟಾಕಿ ಸ್ಫೋಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಯುವತಿ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್  

ಅಲ್ಲು ಅರ್ಜುನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು, ‘ಪುಷ್ಪ 2’ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ದೊಡ್ಡ ಪ್ರಾಜೆಕ್ಟ್​​ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್-ದೀಪಿಕಾ ಪಡುಕೋಣೆ ಜೊತೆ ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ, ಜಾನ್ವಿ ಕಪೂರ್ ಮೊದಲಾದವರು ನಟಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರಾಹಕರ ಗಮನಕ್ಕೆ… ಬೆಂಗಳೂರಿನಲ್ಲಿ ಇನ್ಮುಂದೆ ಸಿಗಲ್ಲ ವಡೆ, ಬಜ್ಜಿ, ಪಕೋಡ: ಸ್ನ್ಯಾಕ್ಸ್ ತಿಂಡಿಗೂ ಕೋಕ್

ಬೆಂಗಳೂರು, ಮಾ.11: ರಾಜಧಾನಿಯಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಹಾಹಾಕಾರ ಮಿತಿಮೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ಗ್ಯಾಸ್ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಅತಿ ಹೆಚ್ಚು ಗ್ಯಾಸ್ ವ್ಯಯವಾಗುವ ಉದ್ದಿನ ವಡೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿಯನ್ ನಂತಹ ಸ್ನ್ಯಾಕ್ಸ್ ತಿಂಡಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಕಡಿಮೆ ಗ್ಯಾಸ್ ಬಳಸಿ ಹೆಚ್ಚು ಜನರಿಗೆ ಉಣಬಡಿಸಬಹುದಾದ ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್ ನಂತಹ ರೈಸ್ ಐಟಂಗಳ ತಯಾರಿಕೆಗೆ ಹೋಟೆಲ್‌ಗಳು ಹೆಚ್ಚಿನ ಒಲವು ತೋರುತ್ತಿವೆ. “ದಯವಿಟ್ಟು ಹೆಚ್ಚು ಆಯಿಲ್ ಬಳಕೆಯಾಗುವ ತಿಂಡಿಗಳನ್ನು ಕೇಳಬೇಡಿ, ರೈಸ್ ಐಟಂಗಳನ್ನು ಆರ್ಡರ್ ಮಾಡಿ ಸಹಕರಿಸಿ” ಎಂದು ಹೋಟೆಲ್ ಮಾಲೀಕರು ಭಕ್ಷಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸಿಲಿಂಡರ್‌ಗಳ ದಾಸ್ತಾನು ಕುಸಿದಿರುವುದರಿಂದ, ಇರುವ ಅಲ್ಪ ಪ್ರಮಾಣದ ಗ್ಯಾಸ್ ಬಳಸಿ ದಿನದ ವ್ಯಾಪಾರ ಮುಗಿಸುವುದು ಹೋಟೆಲ್ ಮಾಲೀಕರಿಗೆ ಸವಾಲಾಗಿದೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಉರಿ ಬೇಕಾಗುತ್ತದೆ, ಇದು ಸಿಲಿಂಡರ್ ಶೀಘ್ರವಾಗಿ ಖಾಲಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಸ್ನ್ಯಾಕ್ಸ್ ವಿಭಾಗಕ್ಕೆ ಹೋಟೆಲ್‌ಗಳು ‘ಕೋಕ್’ ನೀಡಿವೆ. ಇದರಿಂದ ಹೋಟೆಲ್‌ಗಳ ಒಟ್ಟಾರೆ ಆದಾಯದಲ್ಲಿ ಶೇ. 30 ರಿಂದ 40 ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: “ಹೋಟೆಲ್ ಬಂದ್ ಮಾಡಿದ್ರೆ ನಮ್ಮ ಕುಟುಂಬದ ಗತಿ ಏನು?”: ರಾಜ್ಯದ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆ

ವಡೆ, ಬಜ್ಜಿ, ಪಕೋಡ ಮತ್ತು ಗೋಬಿಯಂತಹ ಸ್ನ್ಯಾಕ್ಸ್ ಐಟಂಗಳು ಹೋಟೆಲ್‌ಗಳಿಗೆ ಹೆಚ್ಚು ಲಾಭ ತಂದುಕೊಡುವ ಪದಾರ್ಥಗಳು. ಇವುಗಳ ಮಾರಾಟ ನಿಂತರೆ ಲಾಭದ ಪ್ರಮಾಣ ಗಣನೀಯವಾಗಿ ಇಳಿಯುತ್ತದೆ.ಬೆಳಗ್ಗಿನ ಉಪಹಾರಕ್ಕೆ ವಡೆ-ಪೂರಿ ಇಲ್ಲದಿದ್ದರೆ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಬಜ್ಜಿ-ಬೋಂಡಾ ಸಿಗದಿದ್ದರೆ ಗ್ರಾಹಕರು ಹೋಟೆಲ್‌ಗೆ ಬರುವುದು ಕಡಿಮೆಯಾಗುತ್ತದೆ. ಬರಿ ರೈಸ್ ಐಟಂ ತಿನ್ನಲು ಎಲ್ಲರೂ ಇಷ್ಟಪಡುವುದಿಲ್ಲ.ಸಂಜೆ ವೇಳೆ ಪಾರ್ಸೆಲ್ ಕೊಂಡೊಯ್ಯುವವರಲ್ಲಿ ಹೆಚ್ಚಿನವರು ಸ್ನ್ಯಾಕ್ಸ್ ಮತ್ತು ಎಣ್ಣೆ ತಿಂಡಿಗಳನ್ನೇ ಬಯಸುತ್ತಾರೆ. ಇದು ಸ್ಥಗಿತಗೊಂಡರೆ ಸಂಜೆಯ ವ್ಯಾಪಾರ ಶೇ. 50 ರಷ್ಟು ಕುಸಿಯಬಹುದು ಎಂದು ಹೇಳಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version