ರಾಣಿ ಸೀರಿಯಲ್ ಮಾರ್ಚ್ 9ರಿಂದ ಪ್ರಸಾರ ಆರಂಭಿಸಿದೆ. ಈ ಧಾರಾವಾಹಿಯ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಹಾಡನ್ನು ಗಿಲ್ಲಿ ನಟ ಅವರು ಇಷ್ಟಪಟ್ಟಿದ್ದಾರೆ. ಅವರ ಹೊಸ ವಿಡಿಯೋ ವೈರಲ್ ಆಗಿದೆ. ಅವರು ಹಾಡನ್ನು ಯಾಕೆ ಇಷ್ಟಪಟ್ಟಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಗಿಲ್ಲಿ ಮಾತಿನಿಂದ ಧಾರಾವಾಹಿಗೆ ಒಂದಷ್ಟು ಹೈಪ್ ಸಿಕ್ಕಿದೆ. ಅವರು ಹೇಳಿದ ಹಾಡಿನ ವಿಡಿಯೋ ಇಲ್ಲಿದೆ ನೋಡಿ.
ಅಹ್ರೌಲಾ, ಮಾರ್ಚ್ 10: ಅಪ್ಪ ಏಳನೇ ಮದುವೆ(Marriage)ಯಾಗುತ್ತಿರುವುದನ್ನು ತಡೆಯುವಂತೆ ಮಗ ಪೊಲೀಸರ ಬಳಿ ದೂರು ನೀಡಿರುವ ಘಟನೆ ಅಜಂಗಢದ ಅಹ್ರೌಲಾದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿವಾಹ ಸಿದ್ಧತೆಗಳನ್ನು ತಡೆಯಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಪ್ಪನಿಗೆ ಎಷ್ಟೇ ಮನವಿ ಮಾಡಿದರೂ ಮತ್ತೊಂದು ಮದುವೆ ಆಗೇ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ, ನೀವಾದ್ರೂ ನಿಲ್ಲಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾನೆ.
55 ವರ್ಷದ ವ್ಯಕ್ತಿಯೊಬ್ಬನ ಮೇಲೆ ಅವನ ಸ್ವಂತ ಮಗನೇ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾನೆ. ಮಗನ ಪ್ರಕಾರ, ಅವನ ತಂದೆ ಆರು ಬಾರಿ ಮದುವೆಯಾಗಿದ್ದಾರೆ. ದೂರು ಕೊಟ್ಟವನು ವ್ಯಕ್ತಿಯ ಮೂರನೇ ಹೆಂಡತಿಯ ಮಗ.
2024 ರಲ್ಲಿ ತನ್ನ ತಂದೆ ಆರನೇ ಬಾರಿಗೆ ವಿವಾಹವಾದರು, ಆದರೆ ಅವರ ಪತ್ನಿ ಕೆಲವೇ ದಿನಗಳಲ್ಲಿ ಕುಟುಂಬವನ್ನು ತೊರೆದು ಭೂಮಿ ಮತ್ತು ಆಭರಣಗಳಿಗೆ ಬೇಡಿಕೆ ಇಟ್ಟಿದ್ದರು. ತನ್ನ ಏಳನೇ ಮದುವೆಗೆ ಹಣ ಹೂಡಲು ಪೂರ್ವಜರ ಭೂಮಿಯನ್ನು ಮಾರಾಟ ಮಾಡಲು ಅವನು ದೃಢನಿಶ್ಚಯ ಮಾಡಿದ್ದಾರೆ. ಭೂಮಿಯನ್ನು ಮಾರಾಟ ಮಾಡಲು 50,000 ರೂಪಾಯಿಗಳ ಮುಂಗಡ ಹಣವನ್ನು ಸಹ ಪಡೆದಿದ್ದಾನೆ ಎಂದು ಮಗ ಹೇಳಿದ್ದಾರೆ. ತಂದೆ ಈಗಾಗಲೇ ಅರ್ಧದಷ್ಟು ಭೂಮಿಯನ್ನು ಅಡಮಾನ ಇಟ್ಟಿದ್ದಾರೆ.
ಈ ವಿಷಯ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ಜೈನ್ ಅಲ್ಲಿಗೆ ತಲುಪಿದಾಗ, ಕಥೆ ಮತ್ತೊಂದು ತಿರುವು ಪಡೆದುಕೊಂಡಿತು. ಈ ಪ್ರಕರಣವು ಬಹು ವಿವಾಹಗಳನ್ನು ಮಾತ್ರವಲ್ಲದೆ, ಭೂಮಿ ಮತ್ತು ಆಸ್ತಿ ಪಾಲನ್ನೂ ಒಳಗೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ, ಪೊಲೀಸರು ವಿವಾಹ ದಾಖಲೆಗಳು ಮತ್ತು ಭೂ ವ್ಯವಹಾರವನ್ನು ಆಳವಾಗಿ ತನಿಖೆ ಮಾಡುತ್ತಿದ್ದಾರೆ.
ಉಡುಪಿ, ಮಾರ್ಚ್ 10: ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಡಿ ಟಿ20 ವಿಶ್ವಕಪ್ನ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಭಕ್ತಿಭಾವದ ನಂಟಿದ್ದು, ಉಡುಪಿಯ ಅಳಿಯನ ಹೆಸರಲ್ಲಿ ವಿಶೇಷ ಪೂಜೆಗೆ ಕಾಪು ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಇವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸವಾಗಿದೆ. ಆದರೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನವು ಸೂರ್ಯಕುಮಾರ್ ಯಾದವ್ ಪತ್ನಿಯ ಕುಟುಂಬದ ಆರಾಧ್ಯ ಕ್ಷೇತ್ರವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿ ಈಗಾಗಲೇ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. 2024ರ ಜುಲೈ 9ರಂದು ಅವರು ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯಕ್ಕೆ ಕಂಬವನ್ನು ದಾನವಾಗಿ ನೀಡಿದ್ದರು. ಅದಾದ ನಂತರ ಕೇವಲ 9 ದಿನಗಳಲ್ಲಿ, ಜುಲೈ 18ರಂದು ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಗಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಚಕರು, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಭಾರತೀಯ ತಂಡದ ನಾಯಕನಾಗಲೆಂದು ಆಶೀರ್ವಾದ ಮಾಡಿದ್ದರು. ದೇವಿಯ ಸನ್ನಿಧಿಯಲ್ಲಿ ಅವರಾಡಿದ್ದ ಮಾತು ಸತ್ಯವಾಗಿತ್ತು. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಇದೀಗ ಸೂರ್ಯಕುಮಾರ್ ಯಾದವ್ ದಂಪತಿ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ದೇವಸ್ಥಾನದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದಾರೆ. ಇದೇ ವೇಳೆ ದೇವಿಗೆ ಬೆಲ್ಲ ಮತ್ತು ಸಕ್ಕರೆಯ ತುಲಾಭಾರ ನಡೆಸುವ ಸಂಕಲ್ಪವನ್ನೂ ಭಕ್ತರು ಮಾಡಿದ್ದಾರೆ.
ಬೆಳಗಾವಿ, ಮಾರ್ಚ್ 10: ಶ್ರೀಮಂತ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಲೆಗೆ ಬೀಳಿಸಿ ಮೋಸ ಮಾಡುತ್ತಿದ್ದ (Honey Trap) ಮಹಿಳೆಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡಿ ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ ಆಕೆ, ಲಾಡ್ಜ್‌ಗೆ ಕರೆಸಿ ಅವರ ಹಣ, ಚಿನ್ನ ಸೇರಿ ಅಮೂಲ್ಯ ವಸ್ತುಗಳನ್ನೆಲ್ಲಾ ದೋಚುತ್ತಿದ್ದಳು ಎಂದು ತಿಳಿದುಬಂದಿದೆ. ಮೋಸ ಹೋಗಿದ್ದ ವ್ಯಕ್ತಿಯೊಬ್ಬರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಫೇಸ್‌ಬುಕ್, ಇನ್ಸ್ಟಾಗ್ರಾಂ ಮೂಲಕ ಶ್ರೀಮಂತರಿಗೆ ಬಲೆ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವಳಾದ ದೀಪಾ ದೀಪಾ ಅವಟಗಿ (33) ಫ್ಯಾಶನ್ ಡಿಸೈನರ್ ಆಗಿದ್ದು, ಹನಿಟ್ರ್ಯಾಪ್ ಪ್ರಕರಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹಣದಾಸೆಗೆ ಬಿದ್ದಿದ್ದ ದೀಪಾ, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಿದ್ದಳು. ನಂತರ ಅವರ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು. ಈಕೆಯನ್ನು ನಂಬಿ ಅಲ್ಲಿಗೆ ಬಂದ ಗಂಡಸರ ಬಳಿ ಸಲುಗೆಯಿಂದ ವರ್ತಿಸಿ, ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸುತ್ತಿದ್ದಳು. ಇದೇ ಸಮಯ ಸಾಧಿಸಿ ವ್ಯಕ್ತಿಗಳ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕಾರುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಗೆ ಸಹಾಯ ಮಾಡಿದಾತ ಪರಾರಿ
ಈ ಎಲ್ಲಾ ದುಷ್ಕೃತ್ಯಗಳನ್ನೆಸಗಲು ದೀಪಾಗೆ ಸಹಾಯ ಮಾಡುತ್ತಿದ್ದುದು ಆಕೆಯ ಆಪ್ತ ಸ್ನೇಹಿತ ಶಿವಾನಂದ ಮಠಪತಿ. ಶ್ರೀಮಂತ ವ್ಯಕ್ತಿಗಳ ಮಾಹಿತಿಯನ್ನು ಆಕೆಗೆ ನೀಡುತ್ತಿದ್ದವನೇ ಇವನು. ಸಧ್ಯಕ್ಕೆ ಆತನೂ ಪರಾರಿಯಾಗಿದ್ದು, ಅವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ.
ಬಂಧನದ ನಂತರ ಆರೋಪಿಯಿಂದ ಸುಮಾರು 32 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಮೆಗಾಸ್ಟಾರ್ (Megastar) ಕುಟುಂಬದ ಸೊಸೆ, ಸ್ವತಃ ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು ಇತ್ತೀಚೆಗಷ್ಟೆ ಗಂಡು ಮಗುವಿಗೆ ಜನ್ಮ ಸಹ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ದೂರು ನೀಡಿರುವುದು ಕುಟುಂಬದವರ ವಿರುದ್ಧ ಅಲ್ಲ ಬದಲಿಗೆ ಆನ್ಲೈನ್ನಲ್ಲಿ ತಮಗೆ ಕಿರುಕುಳ ನೀಡುತ್ತಿರು ವ್ಯಕ್ತಿಗಳ ಬಗ್ಗೆ.
ಲಾವಣ್ಯಾ ತ್ರಿಪಾಠಿ ಅವರನ್ನು ಹಾಗೂ ಅವರ ಕುಟುಂಬದವರನ್ನು ಗುರಿ ಮಾಡಿಕೊಂಡು ಆನ್ಲೈನ್ನಲ್ಲಿ ಕೆಲ ವ್ಯಕ್ತಿಗಳು ತೀವ್ರ ನಿಂದನೆ, ಅಶ್ಲೀಲ ಕಮೆಂಟ್ಗಳು, ಫೋಟೊ ತಿದ್ದಿ ಹಂಚಿಕೊಳ್ಳುವ ಕಾರ್ಯಗಳನ್ನು ಮಾಡುತ್ತಿದ್ದಾರಂತೆ. ಈ ಆನ್ಲೈನ್ ದೌರ್ಜನ್ಯ, ಹಿಂಸೆಯ ವಿರುದ್ಧ ದನಿ ಎತ್ತಿರುವ ನಟಿ ಲಾವಣ್ಯಾ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್ನ ಸೈಬರ್ ಪೊಲೀಸರಿಗೆ ನಟಿ ಲಾವಣ್ಯಾ ತ್ರಿಪಾಠಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವವರ ಖಾತೆಯ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.
ಪರ್ಪಲ್ ಕ್ರೆಯಾನ್ (purple crayon00) ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ತಮಗೆ ಸತತ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ಲಾವಣ್ಯಾ ತ್ರಿಪಾಠಿ ಹೇಳಿದ್ದಾರೆ. ಈ ಖಾತೆಯು ತಮ್ಮ ವಿರುದ್ಧ ಕೀಳು ಮಟ್ಟದ ಹೇಳಿಕೆಗಳು, ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ಜೊತೆಗೆ ತಮ್ಮ ಕುಟುಂಬದವರ ಜೊತೆಗೆ ಸಹ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ನಟಿ. ಕಳೆದ ಕೆಲ ತಿಂಗಳುಗಳಿಂದಲೂ ಪರ್ಪಲ್ ಕ್ರೆಯಾನ್ ಖಾತೆಯಿಂದ ನಟಿಗೆ ಸಂದೇಶಗಳು, ನಟಿಯ ಪೋಸ್ಟ್ಗಳಿಗೆ ಕಮೆಂಟ್ಗಳನ್ನು ಮಾಡಲಾಗುತ್ತಿದೆಯಂತೆ.
ಲಾವಣ್ಯಾ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದವರಾಗಿದ್ದು ನಟನೆ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ. ಉತ್ತರ ಭಾರತ ಮೂಲದ ನಟಿ ಆಗಿದ್ದರೂ ಸಹ ಲಾವಣ್ಯಾ ನಟಿಸಿರುವುದು ಕೇವಲ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಮಾತ್ರ. ಲಾವಣ್ಯಾ ತ್ರಿಪಾಠಿ ಮತ್ತು ವರುಣ್ ತೇಜ್ ಅವರು 2017 ರಲ್ಲಿ ‘ಮಿಸ್ಟರ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ 2018 ರಲ್ಲಿ ‘ಅಂತರಿಕ್ಷಂ 9000 ಕೆಎಂಪಿಎಚ್’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದ್ದು 2023 ರಲ್ಲಿ ಈ ಜೋಡಿ ಮದುವೆ ಆದರು. ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ.
ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅವರ ನಟನೆಯ ‘ಪುಷ್ಪ 2’ ಸಿನಿಮಾ ಹಲವು ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ಬರೆದಿವೆ. ‘ಪುಷ್ಪ 2’ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರು ಸುಮಾರು 300 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಅಲ್ಲು ಅರ್ಜುನ್, ಭಾರತದ ಅತ್ಯಂತ ದುಬಾರಿ ಪ್ಯಾನ್ ಇಂಡಿಯಾ ನಟರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ದುಬಾರಿಯಾದ ಮರ್ಸಿಡೀಸ್ ಬೆಂಜ್ ಕಾರೊಂದನ್ನು ಉಡುಗೊರೆಯಾಗಿ ನೀಡಿದರು. ಇದೀಗ ತಮ್ಮ ತಾಯಿಗೆ ಅಷ್ಟೇ ದುಬಾರಿಯಾದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಮ್ಮ ತಾಯಿ ನಿರ್ಮಲಾ ಅಲ್ಲು ಅವರಿಗೆ ಬಲು ದುಬಾರಿಯಾದ ಲೆಕ್ಸಸ್ ಎನ್ಎಕ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ದುಬಾರಿ ಐಶಾರಾಮಿ ಕಾರಾಗಿದ್ದು, ಕಾರಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 75 ರಿಂದ 80 ಲಕ್ಷ ರೂಪಾಯಿಗಳಿವೆ. ಐಶಾರಾಮಿ ಆಗಿರುವ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಇದೊಂದು ಒಳ್ಳೆಯ ಕಾರಾಗಿದೆ. ತಾಯಿಯವರಿಗೆ ಅವರ ವಯಸ್ಸಿನ ಅನುಗುಣವಾಗಿ ಹತ್ತಿ ಇಳಿಯಲು ಇನ್ನಿತರೆ ಮಾಡಿಫಿಕೇಷನ್ಗಳನ್ನು ಸಹ ಅಲ್ಲು ಅರ್ಜುನ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿಗೆ 1.81 ಕೋಟಿ ರೂಪಾಯಿ ಬೆಲೆಯ ಮರ್ಸಿಡೀಜ್ ಬೆಂಜ್ ಎಎಂಜಿ ಸಿಎಲ್ಇ 53 ಕಾರನ್ನು ಉಡುಗೊರೆಯಾಗಿ ನೀಡಿದರು. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರ ವಿವಾಹ ವಾರ್ಷಿಕೋತ್ಸವ ಇತ್ತೀಚೆಗಷ್ಟೆ ಇತ್ತು. ಇದೇ ಕಾರಣಕ್ಕೆ ಪತ್ನಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ಅಲ್ಲು ಅರ್ಜುನ್ ನೀಡಿದರು.
ಅಲ್ಲು ಅರ್ಜುನ್ ಸ್ವತಃ ಕಾರು ಪ್ರೇಮಿ. ವಿದೇಶದ, ಭಾರತದ ಹಲವು ಅತ್ಯುತ್ತಮ ಗುಣಮಟ್ಟದ ಮತ್ತು ಬಲು ದಾಬಾರಿ ಕಾರುಗಳನ್ನು ಅಲ್ಲು ಅರ್ಜುನ್ ಹೊಂದಿದ್ದಾರೆ. ಅಲ್ಲದೆ ಪದೇ ಪದೇ ಅಲ್ಲು ಅರ್ಜುನ್ ತಮ್ಮ ಕಾರುಗಳನ್ನು ಬದಲಾವಣೆ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಅವರೇ ಕೆಲವು ಸಂದರ್ಶನಗಳಲ್ಲಿ ಸಹ ಹೇಳಿಕೊಂಡಿದ್ದಾರೆ. ಅಲ್ಲು ಅರ್ಜುನ್ ಬಳಿ ರೇಂಜ್ ರೋವರ್ ವೋಗ್, ಲೆಕ್ಸಸ್, ರೋಲ್ಸ್ ರಾಯ್ಸ್ ಕುಲಿಯನ್, ಮರ್ಸಿಡೀಸ್ ಎಎಂಜಿ, ಹಮ್ಮರ್ ಎಚ್2, ವೋಲ್ವೋ ಎಕ್ಸ್ಸಿ 90 ಟಿ8, ಜಾಗ್ವಾರ್ ಕೆಜೆಡ್ ಎಲ್, ಫ್ಯಾಲ್ಕನ್ ವ್ಯಾನಿಟಿ ವ್ಯಾನು ಸೇರಿದಂತೆ ಇನ್ನೂ ಹಲವು ಐಶಾರಾಮಿ ಕಾರುಗಳಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL) ಟಕ್ಕರ್ ಕೊಡಲು ಮುಂದಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್ಗೆ (PSL) ಇದೀಗ ‘ಇಂಧನದ ಕೊರತೆ’ ಎದುರಾಗಿದೆ. ಅಂದರೆ ಪಾಕ್ನಲ್ಲಿ ತೈಲ ಬಿಕ್ಕಟ್ಟು ಎದುರಾಗಿದ್ದು, ಹೀಗಾಗಿ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಐಪಿಎಲ್ ಆರಂಭದ ಸಂದರ್ಭದಲ್ಲೇ ಟೂರ್ನಿ ಶುರು ಮಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದ್ದರು. ಅದರಂತೆ ಮಾರ್ಚ್ 26 ರಿಂದ ಪಿಎಸ್ಎಲ್ ಆರಂಭಿಸಲು ನಿರ್ಧರಿಸಲಾಗಿತ್ತು.
ಆದರೀಗ ಪಾಕಿಸ್ತಾನದಲ್ಲಿ ಇಂಧನದ ಕೊರತೆ ಎದುರಾಗಿರುವ ಕಾರಣ ಟೂರ್ನಿಯ ವೇಳಾಪಟ್ಟಿಯನ್ನು ಬದಲಿಸಲು ಚಿಂತಿಸಲಾಗಿದೆ.
ಪಾಕಿಸ್ತಾನದಲ್ಲಿ ತೀವ್ರ ಇಂಧನ ಕೊರತೆಯಿದ್ದು, ಸರ್ಕಾರವು ಸಾರಿಗೆಯ ಮೇಲೆ ನಿರ್ಬಂಧ ಹೇರಿದೆ. ಇದರಿಂದ ತಂಡಗಳ ಪ್ರಯಾಣ ಮತ್ತು ಪಂದ್ಯದ ಪ್ರಸಾರಕ್ಕೆ ಅಡ್ಡಿಯಾಗುವ ಭೀತಿ ಎದುರಾಗಿದೆ.
ಅಷ್ಟೇ ಅಲ್ಲದೆ ಪಂಜಾಬ್ ಪ್ರಾಂತ್ಯದಲ್ಲಿ ಇಂಧನ ಉಳಿಸಲು ಶಾಲೆ-ಕಾಲೇಜುಗಳನ್ನು ಮಾರ್ಚ್ 31 ರವರೆಗೆ ಮುಚ್ಚಲು ಆದೇಶಿಸಲಾಗಿದೆ.
ಅಂದರೆ ಈಗಾಗಲೇ ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್, ಡಿಸೇಲ್ ಅಭಾವವಿದ್ದು, ಈ ಅಭಾವವು ಪಾಕಿಸ್ತಾನ್ ಸೂಪರ್ ಲೀಗ್ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದೇ ಕಾರಣದಿಂದಾಗಿ ಪಾಕಿಸ್ತಾನ್ ಸೂಪರ್ ಲೀಗ್ ಅನ್ನು ಮುಂದೂಡುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಹೀಗಾಗಿ ಮಾರ್ಚ್ 26 ರಿಂದ ಪಿಎಸ್ಎಲ್ ಟೂರ್ನಿ ಆರಂಭವಾಗುವ ಸಾಧ್ಯತೆಯಿಲ್ಲ.
ಇಂಧನ ಕೊರತೆ ಏಕೆ?
ಪಾಕಿಸ್ತಾನದಲ್ಲಿ ಪ್ರಸ್ತುತ ಉಂಟಾಗಿರುವ ಇಂಧನ ಬಿಕ್ಕಟ್ಟಿಗೆ ಮುಖ್ಯ ಕಾರಣ ಮಧ್ಯಪ್ರಾಚ್ಯದ ರಾಜಕೀಯ ಉದ್ವಿಗ್ನತೆ. ಅಂದರೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರುಪೇರಾಗಿದೆ.
ಅಲ್ಲದೆ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಪಾಕಿಸ್ತಾನದ ಶೇ. 98 ರಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದು ಇದೇ ಮಾರ್ಗವಾಗಿ ನಡೆಯುವುದರಿಂದ ಪೂರೈಕೆಯಲ್ಲಿ ತೀವ್ರ ಅಡಚಣೆಯಾಗಿದೆ.
ಇನ್ನು ಯುದ್ಧದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $100 ದಾಟಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ ದಾಖಲೆಯ 55 ರೂಪಾಯಿಗಳಷ್ಟು (PKR) ಹೆಚ್ಚಳವಾಗಿದೆ.
ಪಾಕಿಸ್ತಾನವು ಇಂಧನಕ್ಕಾಗಿ ಸೌದಿ ಅರೇಬಿಯಾ ಮತ್ತು ಯುಎಇ (UAE) ರಾಷ್ಟ್ರಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಯುದ್ಧದಿಂದಾಗಿ ಈ ರಾಷ್ಟ್ರಗಳಿಂದ ತೈಲ ತರುವುದು ಕಷ್ಟಕರವಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ.
ಅನಾದಿಕಾಲದಿಂದಲೂ ಪೂಜಾ ಸಮಯ, ಹೋಮ, ಹವನ, ವಿವಾಹ ಹಾಗೂ ಇತರ ಶುಭಕಾರ್ಯಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರ(ಶಾಲು) ವನ್ನು ಧರಿಸುತ್ತಾ ಬಂದಿದ್ದಾರೆ. ಇದು ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಒಂದು ಸಾಂಸ್ಕೃತಿಕ ಸಂಪ್ರದಾಯವಾಗಿದೆ. ಶುಭಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂಬುದರ ಸಂಕೇತವಾಗಿ ಈ ವಸ್ತ್ರವನ್ನು ಧರಿಸಲಾಗುತ್ತದೆ. ಇದು ನಾವು ಒಂದು ಸಂಕಲ್ಪವನ್ನು ತೊಟ್ಟಿದ್ದೇವೆ, ವ್ರತಧಾರಿಗಳಾಗಿದ್ದೇವೆ ಮತ್ತು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದೇವೆ ಎಂಬುದರ ಸೂಚಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ
ಗುರೂಜಿಯವರು ಹೇಳುವಂತೆ, ಅಂಗವಸ್ತ್ರವು ಕೇವಲ ಸಾಂಪ್ರದಾಯಿಕ ಸಂಕೇತವಲ್ಲ. ಭುಜದ ಮೇಲೆ ಧರಿಸುವ ಈ ವಸ್ತ್ರವು ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದು ನಂಬಲಾಗಿದೆ. ಕಾರ್ಯಕ್ರಮಗಳಲ್ಲಿ ಅಂಗವಸ್ತ್ರವನ್ನು ಧರಿಸಿ ಕುಳಿತಾಗ, ಅದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಶಿಸ್ತನ್ನು ವೃದ್ಧಿಸುತ್ತದೆ. ಇದರಿಂದ ಮನಸ್ಸು ನಿರ್ಮಲವಾಗಿ ಉಳಿಯುತ್ತದೆ ಮತ್ತು ಚಂಚಲತೆ ಕಡಿಮೆಯಾಗುತ್ತದೆ. ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದೇವರ ಗುಡಿಯ ಮುಂದೆ ಅಂಗವಸ್ತ್ರ ಧರಿಸಿ ಕುಳಿತಾಗ, ನಮಗರಿವಿಲ್ಲದಂತೆಯೇ ಸಾತ್ವಿಕ ಗುಣಗಳು ನಮ್ಮಲ್ಲಿ ಹೆಚ್ಚು ಪ್ರಕಟವಾಗುತ್ತವೆ.
ಅಂಗವಸ್ತ್ರದ ಬಣ್ಣಗಳಿಗೂ ವಿಶೇಷ ಮಹತ್ವವಿದೆ. ಬಿಳಿಯ ವಸ್ತ್ರವು ಚಂದ್ರನ ಸಂಕೇತವಾಗಿದೆ, ಇದು ಶುಭ್ರತೆ ಮತ್ತು ಶಾಂತಿಯನ್ನು ಸೂಚಿಸುತ್ತದೆ. ಕೇಸರಿ ವಸ್ತ್ರವು ಕುಜನ ಸಂಕೇತವಾಗಿದೆ. ಕೆಲವು ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಕೆಂಪು ಅಥವಾ ಕೇಸರಿ ವಸ್ತ್ರವನ್ನು ಧರಿಸುವ ಪದ್ಧತಿ ಇದೆ. ಆದರೆ ಸಾಮಾನ್ಯವಾಗಿ, ಎಲ್ಲಾ ಶುಭಕಾರ್ಯಗಳಲ್ಲೂ ಬಿಳಿಯ ವಸ್ತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ, ಏಕೆಂದರೆ ಬಿಳಿ ಬಣ್ಣವನ್ನು ಶುಭ್ರ ಮತ್ತು ಪವಿತ್ರ ಬಣ್ಣವೆಂದು ಪರಿಗಣಿಸಲಾಗುತ್ತದೆ.
ಹೋಮ, ಹವನ, ಪೂಜೆ ಮತ್ತು ಇತರ ಶುಭಕಾರ್ಯಗಳಲ್ಲಿ ಅಂಗವಸ್ತ್ರವನ್ನು ಧರಿಸಿದಾಗ, ಅದು ಕೇವಲ ಪೂಜೆಗೆ ಕುಳಿತುಕೊಳ್ಳುವವರಿಗೆ ಮಾತ್ರವಲ್ಲದೆ, ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವವರಿಗೂ ಅನುಕೂಲಕರವಾಗಿರುತ್ತದೆ. ಇದು ಏಕಾಗ್ರತೆ, ಶಕ್ತಿ ಮತ್ತು ಭಕ್ತಿಯನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ (SPB) ಅವರ ಹಾಡುಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಹಲವು ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಹಿಂದಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಗಂಭೀರ ಗಾಯನ ಸಮಸ್ಯೆಗಳು, ಅವುಗಳಿಂದ ಉಂಟಾದ ಮಾನಸಿಕ ಯಾತನೆ, ಅವರ ಕುಟುಂಬ ಸದಸ್ಯರ ಆತಂಕ ಮತ್ತು ಅಂತಿಮವಾಗಿ ಶಸ್ತ್ರಚಿಕಿತ್ಸೆಯ ಮೂಲಕ ಚೇತರಿಸಿಕೊಂಡದ್ದನ್ನು ಹಂಚಿಕೊಂಡರು. ಗಂಟಲು ಸಮಸ್ಯೆ ಆದಾಗ ಅವರು ನರಕ ನೋಡಿದರು.
‘ಗೀತಾಂಜಲಿ’ ಚಿತ್ರಗಳಲ್ಲಿ ಲಾಲಾಲಿ ಹಾಡನ್ನು ರೆಕಾರ್ಡ್ ಮಾಡಬೇಕಾಯಿತು. ಆ ಸಮಯದಲ್ಲಿ, ಅವರ ಧ್ವನಿ ಸಹಕರಿಸಲಿಲ್ಲ. ಅವರು ಹಾಡನ್ನು ಮಧ್ಯದಲ್ಲಿ ಹಾಡುವುದನ್ನು ನಿಲ್ಲಿಸಿದರು. ನೀರು ಕುಡಿದು ಮತ್ತೆ ಪ್ರಯತ್ನಿಸಿದರು. ಮತ್ತು ಪದೇ ಪದೇ ಟೇಕ್‌ಗಳನ್ನು ತೆಗೆದುಕೊಂಡರು. ನಾಲ್ಕು ದಿನಗಳು ಹೀಗೆ ಕಳೆದವು. ನಂತರ ಅವರು ವೈದ್ಯರನ್ನು ಸಂಪರ್ಕಿಸಿದರು, ಔಷಧಿ ತೆಗೆದುಕೊಂಡು, ವಿಶ್ರಾಂತಿ ಪಡೆದರು. ಅವರು ನಾಲ್ಕು ದಿನಗಳವರೆಗೆ ಚೆನ್ನಾಗಿದ್ದರು. ಆದರೆ ಐದನೇ ದಿನ, ಮತ್ತೆ ಅದೇ ಸಮಸ್ಯೆ ಉದ್ಭವಿಸಿತು.
‘ಯಾರೋ ಏನೋ ಮಾಡಿದ್ದಾರೆ. ಯಾವುದೋ ಔಷಧಿ ಬಳಸಲಾಗಿದೆ. ಯಾವುದೋ ಮಾಟಮಂತ್ರ ಮಾಡಲಾಗಿದೆ. ಇಲ್ಲದಿದ್ದರೆ, ನಮ್ಮ ಮಗ/ಹುಡುಗನಿಗೆ ಹೀಗೆಕೆ ಆಗುತ್ತದೆ’ ಎಂದು ಕುಟುಂಬ ಸದಸ್ಯರು ನಂಬಿದ್ದರು. ಪೂಜೆ ಮತ್ತು ಪುನಸ್ಕಾರಗಳನ್ನು ಮಾಡಿದರು.
‘ನನ್ನ ಧ್ವನಿಯಲ್ಲಿ ಸಮಸ್ಯೆ ಇದೆ. ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಲು ನರ್ಧರಿಸಿದ್ದರು. ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಧ್ವನಿ ಹೋಗಬಹುದು ಎಂದು ಕೆಲವರು ಹೇಳಿದ್ದರು. ದಯವಿಟ್ಟು ನನಗಾಗಿ ಕಾಯಬೇಡಿ. ನಿಮಗಾಗಿ ಹಾಡಲು ಯಾರನ್ನಾದರೂ ಆರಿಸಿಕೊಳ್ಳಿ’ ಎಂದು ನಾನು ಹೇಳಿದ್ದೆ ಎಂದು ಅವರು ಹೇಳಿದ್ದರು.
ಬಾಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದರು. ಶಸ್ತ್ರಚಿಕಿತ್ಸೆಯ ನಂತರ, ತಲೆತಿರುಗುವಿಕೆಯಿಂದ ಚೇತರಿಸಿಕೊಂಡ ತಕ್ಷಣ, ವೈದ್ಯರು, ‘ಆತುರಪಡಬೇಡಿ, ನೀವು ಎರಡು ಅಥವಾ ಮೂರು ದಿನಗಳವರೆಗೆ ವಿಶ್ರಾಂತಿ ತೆಗೆದುಕೊಳ್ಳಬೇಕು’ ಎಂದು ಹೇಳಿದರು. ಆದರೆ ಅವರು ತಕ್ಷಣ ಹಾಡಲು ಪ್ರಾರಂಭಿಸಿದರು, ಅದು ಅವರಿಗೆ ತುಂಬಾ ಆರಾಮದಾಯಕವೆನಿಸಿತು.
ಬೆಂಗಳೂರು, ಮಾರ್ಚ್ 10: ನಿನ್ನೆ ಕಡಿಮೆಗೊಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಮಂಗಳವಾರ ಏರಿಕೆಯಾಗಿದೆ. 180 ರೂನಷ್ಟು ಇಳಿದಿದ್ದ ಬಂಗಾರದ ಬೆಲೆ (Gold Rates) ಈಗ 65 ರೂ ಹೆಚ್ಚಿದೆ. ವಿದೇಶಗಳಲ್ಲಿ ಮಿಶ್ರ ಫಲ ಇದೆ. ಕೆಲವೆಡೆ ಬೆಲೆ ಏರಿದರೆ, ಕೆಲವೆಡೆ ಇಳಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆ 10 ರೂಗಳಷ್ಟು ಭರ್ಜರಿ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,48,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,62,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,48,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 10ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,238 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,885 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,179 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,238 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,885 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)