ಗುರುಗ್ರಾಮ: ನಿರ್ಮಾಣ ಹಂತದ ಗೋಡೆ ಕುಸಿದು 7 ಕಾರ್ಮಿಕರು ಸಾವು

ಗುರುಗ್ರಾಮ: ನಿರ್ಮಾಣ ಹಂತದ  ಗೋಡೆ ಕುಸಿದು 7 ಕಾರ್ಮಿಕರು ಸಾವು

ಗುರುಗ್ರಾಮ, ಮಾರ್ಚ್​ 10: ನಿರ್ಮಾಣ ಹಂತದ ಗೋಡೆ(Wall) ಕುಸಿದು 7 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸೋಮವಾರ ಸಂಜೆ ಸಿಧ್ರಾವಲಿ ಪ್ರದೇಶದ ಸಿಗ್ನೇಚರ್ ಗ್ಲೋಬಲ್ ಸೊಸೈಟಿಯಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಲವಾರು ಕಾರ್ಮಿಕರು ಟನ್‌ಗಳಷ್ಟು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಡೆ ಇದ್ದಕ್ಕಿದ್ದಂತೆ ಕುಸಿದಾಗ ಸುಮಾರು 12 ರಿಂದ 15 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಹೂತುಹೋದರು, ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಭಿವಾಡಿಯ ಆಸ್ಪತ್ರೆಗೆ ಕಳುಹಿಸಲಾಯಿತು. ಅದರಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಮೃತರನ್ನು ಸತೀಶ್, ಭಾಗೀರಥ, ಮಿಲನ್, ಶಿವಶಂಕರ್, ಮಂಗಲ್ ಮತ್ತು ಪರಮೇಶ್ವರ್ ಎಂದು ಗುರುತಿಸಲಾಗಿದೆ. ಎಲ್ಲಾ ಮೃತರ ಕುಟುಂಬಗಳನ್ನು ಸಂಪರ್ಕಿಸಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ.

ಚೋಟೆಲಾಲ್, ದೀನದಯಾಳ್, ಶಿವಕಾಂತ್ ಮತ್ತು ಇಂದ್ರಜೀತ್ ಎಂದು ಗುರುತಿಸಲಾದ ನಾಲ್ವರು ಕಾರ್ಮಿಕರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡ ಕುಸಿತದ ಕಾರಣವನ್ನು ಅಧಿಕಾರಿಗಳು ತನಿಖೆ ಮುಂದುವರಿಸಿರುವುದರಿಂದ ವೈದ್ಯಕೀಯ ತಂಡಗಳು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮತ್ತಷ್ಟು ಓದಿ: ಸಿಮೆಂಟ್ ಮಿಕ್ಸರ್ ಲಾರಿ ಅವಾಂತರ, ಕುಸಿದ ಗೋಡೆ, ತಾಯಿಯ ಎದುರೇ ಉಸಿರು ಚೆಲ್ಲಿದ ಮಗು

ಮತ್ತೊಂದು ಘಟನೆ
ಮಾರ್ಚ್ 7 ರಂದು, ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ಹೋಳಿ ಬಣ್ಣ ತಯಾರಿಸುವ ಕಾರ್ಖಾನೆಯಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅವಘಡದಲ್ಲಿ ನಾಲ್ವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದರು ಮತ್ತು 20 ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದರು. ಸಫಿಡಾನ್‌ನ ಭಟ್ ಕಾಲೋನಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಕಾರ್ಖಾನೆಯೊಳಗೆ ಸುಮಾರು 30 ಕಾರ್ಮಿಕರು ಇದ್ದರು ಎಂದು ವರದಿಯಾಗಿದೆ. ಆರಂಭಿಕ ಮಾಹಿತಿಯ ಪ್ರಕಾರ, ಎಂದಿನಂತೆ ಕೆಲಸ ನಡೆಯುತ್ತಿರುವಾಗ ಸೌಲಭ್ಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತು.

ಕೆಲವೇ ನಿಮಿಷಗಳಲ್ಲಿ, ಜ್ವಾಲೆ ಆವರಣದಾದ್ಯಂತ ಹರಡಿ, ಕಟ್ಟಡವನ್ನು ದಟ್ಟ ಹೊಗೆಯಿಂದ ತುಂಬಿಸಿ ಕಾರ್ಮಿಕರಲ್ಲಿ ಭೀತಿಯನ್ನು ಉಂಟುಮಾಡಿತ್ತು. ಬೆಂಕಿ ಅವಘಡ ಸಂಭವಿಸಿದಾಗ ಕಾರ್ಖಾನೆಯ ಮುಖ್ಯ ದ್ವಾರವನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು, ಇದರಿಂದಾಗಿ ಕಾರ್ಮಿಕರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು ಎಂಬ ಆರೋಪಗಳು ಕೇಳಿಬಂದಿವೆ. ಪರಿಣಾಮವಾಗಿ, ಹಲವಾರು ಕಾರ್ಮಿಕರು ಕಟ್ಟಡದೊಳಗೆ ಸಿಲುಕಿಕೊಂಡರು. ಮಾಹಿತಿ ಪಡೆದ ನಂತರ, ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Sanju Samson: ಇಡೀ ಚಿತ್ರಣ ಬದಲಿಸಿದ 25 ನಿಮಿಷಗಳ ಕರೆ..!

10, 6, 0, 24, ಮತ್ತು 6 ರನ್… ಇದು ಟಿ20 ವಿಶ್ವಕಪ್​ಗೂ ಮುನ್ನ ಸಂಜು ಸ್ಯಾಮ್ಸನ್ ಕಲೆಹಾಕಿದ ಸ್ಕೋರ್. ಅಂದರೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಯಾಮ್ಸನ್ 5 ಇನಿಂಗ್ಸ್​ಗಳ ಮೂಲಕ ಗಳಿಸಿದ್ದು ಕೇವಲ 46 ರನ್​ಗಳು ಮಾತ್ರ. ಈ ಹೀನಾಯ ಪ್ರದರ್ಶನದಿಂದ ಕುಗ್ಗಿದ್ದ ಸಂಜು ಸ್ಯಾಮ್ಸನ್​ ಅವರ ಫಾರ್ಮ್​ ಚಿತ್ರಣವನ್ನೇ ಬದಲಿಸಿದ್ದು ಆ ಒಂದು ಕರೆ.

ಹೌದು, ಟಿ20 ವಿಶ್ವಕಪ್​ನಲ್ಲಿನ ಅಮೋಘ ಪ್ರದರ್ಶನದ ಬಳಿಕ ಸಂಜು ಸ್ಯಾಮ್ಸನ್ ಇದರ ಶ್ರೇಯಸ್ಸು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಅವರಿಗೆ ಸಲ್ಲಬೇಕು ಎಂದಿದ್ದರು. ಏಕೆಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮಾನಸಿಕವಾಗಿ ಕುಗ್ಗಿದ್ದಾಗ ನಾನು ಸಚಿನ್ ಸರ್​ಗೆ ಕರೆ ಮಾಡಿದ್ದೆ. ಈ ವೇಳೆ ಅವರು ನೀಡಿದ ಸಲಹೆ ಹಾಗೂ ಆತ್ಮ ವಿಶ್ವಾಸವೇ ನನ್ನ ಪ್ರದರ್ಶನಕ್ಕೆ ಮುಖ್ಯ ಕಾರಣ ಎಂದಿದ್ದರು.

25 ನಿಮಿಷಗಳ ಕರೆ:

ಟಿ20 ವಿಶ್ವಕಪ್​ಗೂ ಮುನ್ನ ನಾನು ವಿಭಿನ್ನ ಯೋಜನೆಯನ್ನು ಅಳವಡಿಸಿಕೊಂಡಿದ್ದೆ. ಹೀಗಾಗಿ ಪ್ರತಿ ಚೆಂಡಿನಲ್ಲೂ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದೆ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ನಾನು ನನ್ನ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಆದರೆ ಇದಾಗ್ಯವುದೂ ಸಹ ಫಲ ನೀಡಲಿಲ್ಲ. ಅಂತಿಮವಾಗಿ, ವಿಶ್ವಕಪ್‌ಗೆ ಮೊದಲು ನಾನು ಹೊಸ ಆಟದ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಅದಕ್ಕೂ ಮುನ್ನ ನಾನು ಸಚಿನ್ ತೆಂಡೂಲ್ಕರ್ ಸರ್​ಗೆ ಕರೆ ಮಾಡಿದ್ದೆ.

ನನ್ನ ವೈಫಲ್ಯದ ಸಮದಯದಲ್ಲಿ ಸಚಿನ್ ಸರ್ ನೀಡಿದ ಬೆಂಬಲವು ತನ್ನ ಅತಿ ದೊಡ್ಡ ಬಲ. ನಾನು ಅವರೊಂದಿಗೆ ಕೆಲ ಸಮಯದಿಂದ ನಿರಂತರ ಸಂಪರ್ಕದಲ್ಲಿದ್ದೆ. ಐಪಿಎಲ್ ಸಂದರ್ಭಗಳ ಹೊರತಾಗಿ, ಅವರು ಸಂದೇಶಗಳ ಮೂಲಕವೂ ಸಂವಹನ ನಡೆಸಿದ್ದರು.

ನಾನು ಫಾರ್ಮ್ ಕಳೆದುಕೊಂಡು ಕುಗ್ಗಿದ್ದಾಗ, ನನ್ನ ಮನಸ್ಸಿಗೆ ಬಂದ ಮೊದಲ ಹೆಸರು ಸಚಿನ್ ಸರ್. ಹೀಗಾಗಿ ನಾನು ಅವರನ್ನು ಸಂಪರ್ಕಿಸಿದೆ. ಅವರು ಸುಮಾರು 25 ನಿಮಿಷಗಳ ಕಾಲ ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅವರು ತಮ್ಮ ವೃತ್ತಿಜೀವನದ ಕಷ್ಟದ ಸಮಯಗಳ ಅನುಭವಗಳನ್ನು, ಅವರ ಆಲೋಚನಾ ವಿಧಾನ, ಅಭ್ಯಾಸ ಮತ್ತು ಸಂದರ್ಭಗಳನ್ನು ನಿಭಾಯಿಸುವ ರೀತಿಯನ್ನು ಹಂಚಿಕೊಂಡರು.

ಇದನ್ನೂ ಓದಿ: T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

ಸಚಿನ್ ಸರ್ ನೀಡಿದ ಸಲಹೆ ನನಗೆ ಹೊಸ ಶಕ್ತಿ ಮತ್ತು ಸ್ಪಷ್ಟತೆಯನ್ನು ನೀಡಿತು. ಈ ಒಂದು ಕರೆ ಫಾರ್ಮ್​ಗೆ ಮರಳುವಂತೆ ಮಾಡಿತು. ಅಷ್ಟೇ ಅಲ್ಲದೆ ಫೈನಲ್ ಪಂದ್ಯಕ್ಕೂ ಮೊದಲು ನಾನು ಮತ್ತೆ ಸಚಿನ್ ಸರ್​ಗೆ ಕರೆ ಮಾಡಿ ಮಾತನಾಡಿದೆ. ಈ ವೇಳೆಯೂ ಅವರು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಅವರ ಸಲಹೆಯಿಂದಾಗಿ ನನಗೆ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಿದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

 

Source link

ಬೆಂಗಳೂರಿನಲ್ಲಿ ಎಲ್​ಪಿಜಿ ಸಿಲಿಂಡರ್ ಕೊರತೆ: ತೇಜಸ್ವಿ ಸೂರ್ಯ ಮಧ್ಯ ಪ್ರವೇಶ!

ಬೆಂಗಳೂರು, ಮಾರ್ಚ್​ 10: ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್  (LPG Cylinder Shortage) ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಆಹಾರ ಸೇವಾ ಕ್ಷೇತ್ರದಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆ ನಗರದ ಹಲವು ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಹೆಚ್ಚಿದ್ದು, ಈ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪೂರಿಗೆ ಪತ್ರ ಬರೆದಿದ್ದಾರೆ.

ಹೋಟೆಲ್ ಉದ್ಯಮದ ಗೋಳು ಬಿಚ್ಚಿಟ್ಟ ಸೂರ್ಯ

ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿರುವ ಸಂಸದ ಸೂರ್ಯ, ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುಪಾಲು ವಾಣಿಜ್ಯ ಎಲ್‌ಪಿಜಿ ಮೇಲೆಯೇ ಅವಲಂಬಿತವಾಗಿದೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹರಿದೀಪ್ ಸಿಂಗ್​ರನ್ನು ಭೇಟಿ ಮಾಡಲಿರುವ ಸಚಿವೆ

ಇದೇ ವೇಳೆ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ವಿಷಯವನ್ನು ಸಚಿವ ಹರಿದೀಪ್ ಸಿಂಗ್ ಪುರಿ ಅವರ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಹೋಟೆಲ್ ಅಸೋಸಿಯೇಷನ್ ಎದುರಿಸುತ್ತಿರುವ ಸಮಸ್ಯೆಯ ಕುರಿತು ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ಅಸೋಸಿಯೇಷನ್ ನೀಡಿದ ಮನವಿ ಪತ್ರವನ್ನೂ ಸಚಿವರಿಗೆ ರವಾನಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್​ಗಳು​​ ಬಂದ್​​​ ಸಾಧ್ಯತೆ: ಮಾಲೀಕರ ಸಂಘ ಹೇಳಿದ್ದೇನು ನೋಡಿ

ಅಲ್ಲದೆ ಇಂದು (ಮಾರ್ಚ್​ 10) ಸಚಿವ ಹರಿದೀಪ್ ಸಿಂಗ್ ಪುರಿ ಅವರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕುರಿತು ಚರ್ಚೆ ನಡೆಸುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹೋಟೆಲ್ ಉದ್ಯಮಕ್ಕೆ ಯಾವುದೇ ವ್ಯತ್ಯಯವಾಗದಂತೆ ಎಲ್‌ಪಿಜಿ ಪೂರೈಕೆ ಮುಂದುವರಿಯಬೇಕು ಎಂಬುದು ಉದ್ಯಮಿಗಳ ಒತ್ತಾಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಾಯ ವಿವಾದ, ಕ್ಷಮೆ ಕೇಳಿ ಇಡೀ ಪುಸ್ತಕವನ್ನೇ ಹಿಂಪಡೆದ ಎನ್​ಸಿಇಆರ್​ಟಿ

ನವದೆಹಲಿ, ಮಾರ್ಚ್​ 10: ದೇಶದ ಪಠ್ಯಪುಸ್ತಕಗಳನ್ನು ಪ್ರಕಟಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ( ಎನ್​ಸಿಆರ್​ಟಿ) ವಿವಾದಿತ ಅಧ್ಯಾಯದ ಬದಲಾಗಿ ಇಡೀ ಪುಸ್ತಕವನ್ನೇ ಹಿಂಪಡೆದಿದೆ. ಈ ಬಾರಿ 8ನೇ ತರಗತಿಯ ಹೊಸ ಸಮಾಜ ವಿಜ್ಞಾನ(Social Science) ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸವಾಲುಗಳ ಬಗ್ಗೆ ಬರೆಯಲಾಗಿದೆ. ಅಲ್ಲದೇ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗುವಂತಹ ವಿಷಯವನ್ನು ಮಕ್ಕಳಿಗೆ ಈ ರೀತಿಯಲ್ಲಿ ಕಲಿಸುವುದು ಸರಿಯೇ ಎಂಬ ಪ್ರಶ್ನೆಯೂ ಮೂಡಿತ್ತು. ಇದೀಗ ಎನ್​ಸಿಆರ್​ಟಿ ಕ್ಷಮೆಯಾಚಿಸುವುದರ ಜತೆ ಅಧ್ಯಾಯವಲ್ಲ ಇಡೀ ಪುಸ್ತಕವನ್ನೇ ಹಿಂಪಡೆದಿದೆ. ಪುಸ್ತಕದಲ್ಲಿರುವ ಕೆಲವು ಮಾಹಿತಿಗಳು ದಾರಿತಪ್ಪಿಸುವಂತಿವೆ ಮತ್ತು ನ್ಯಾಯಾಂಗದ ಹೆಸರು ಕೆಡಿಸುವಂತಿವೆ.

ಈ ಹಿನ್ನೆಲೆಯಲ್ಲಿ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಫೆಬ್ರವರಿ 26ರಂದು 8ನೇ ತರಗತಿಯ ಪಠ್ಯಪುಸ್ತಕವನ್ನು ಸುಪ್ರೀಂಕೋರ್ಟ್​ರ ಸಂಪೂರ್ಣ ಬ್ಯಾನ್ ಮಾಡಿತ್ತು. ಅದರ ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅದರ ಡಿಜಿಟಲ್ ಆವೃತ್ತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಿತ್ತು.ಆದೇಶವನ್ನು ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದ ನ್ಯಾಯಾಲಯ, ಯಾವುದೇ ರೂಪದಲ್ಲಿ ತನ್ನ ನಿರ್ದೇಶನಗಳನ್ನು ಧಿಕ್ಕರಿಸಿದರೆ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು.

ಮತ್ತಷ್ಟು ಓದಿ: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದನ್ನು ಇಲ್ಲಿಗೆ ಬಿಡುವುದಿಲ್ಲ, ಎನ್​ಸಿಇಆರ್​ಟಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಎನ್‌ಸಿಇಆರ್‌ಟಿ ನಿರ್ದೇಶಕರು ಮತ್ತು ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಅಧ್ಯಾಯ ಸೇರ್ಪಡೆಗೆ ಕಾರಣರಾದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದರ ಬಗ್ಗೆ ವಿವರಿಸುವಂತೆ ಕೇಳಿತ್ತು.

ಸಾಂಸ್ಥಿಕ ಅಧಿಕಾರವನ್ನು ಹಾಳುಮಾಡಲು ಮತ್ತು ನ್ಯಾಯಾಂಗದ ಘನತೆಗೆ ಚ್ಯುತಿ ತರಲು ಮಾಡಿದ ಪ್ರಯತ್ನದಂತೆ ತೋರುತ್ತಿದೆ. ಇದನ್ನು ತಡೆಯದೆ ಹೋದರೆ, ಸಾರ್ವಜನಿಕರು ಹಾಗೂ ಯುವ ಜನತೆಯ ಮನಸ್ಸಿನಲ್ಲಿ ನ್ಯಾಯಾಂಗ ಕಚೇರಿಯ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮರ್ತಿಗಳು ಅಭಿಪ್ರಾಯಪಟ್ಟಿದ್ದರು. ಮುಂಬರುವ ಶೈಕ್ಷಣಿಕ ಅವಧಿಗೆ ನವೀಕರಿಸಿದ ಪಠ್ಯಕ್ರಮ ಯೋಜನೆಗಳ ಕುರಿತು ಮಂಡಳಿಯಿಂದ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bedroom Vastu: ಮಲಗುವ ಕೋಣೆಯಲ್ಲಿ ಈ ವಸ್ತು ಇಡಲೇಬೇಡಿ; ದಾಂಪತ್ಯದಲ್ಲಿ ಬಿರುಕಿಗೆ ಇದೇ ಮುಖ್ಯ ಕಾರಣ!

ಬದಲಾದ ಜೀವನಶೈಲಿಯಲ್ಲಿ ಮಲಗುವ ಕೋಣೆ (Bedroom) ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂದು ಪ್ರತಿಯೊಬ್ಬರಿಗೂ ವೈಯಕ್ತಿಕ ಸ್ಥಳದ (Privacy) ಅಗತ್ಯವಿರುವುದರಿಂದ, ಬೆಡ್‌ರೂಂ ವಿನ್ಯಾಸ ಮತ್ತು ಅಲ್ಲಿನ ಅಲಂಕಾರಿಕ, ಇತರ ವಸ್ತುಗಳ ಜೋಡಣೆಯನ್ನು ತಮ್ಮ ಇಷ್ಟದಂತೆ ಮಾಡಿಬಿಡುತ್ತಾರೆ. ಆದರೆ ವಾಸ್ತು ತಜ್ಞರ ಪ್ರಕಾರ, ಮಲಗುವ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ದಾಂಪತ್ಯದಲ್ಲಿ ಬಿರುಕು ಅಥವಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಬೆಡ್‌ರೂಂನಲ್ಲಿ ಈ 4 ವಸ್ತುಗಳಿದ್ದರೆ ಇಂದೇ ತೆಗೆಯಿರಿ:

ಕನ್ನಡಿ ಮತ್ತು ಪ್ರತಿಬಿಂಬದ ಎಚ್ಚರ:

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಸಾಮಾನ್ಯ. ಆದರೆ, ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಂಡರೆ ಅದು ಅಶುಭ. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಕನ್ನಡಿ ಇಡಲೇಬೇಕೆಂದರೆ ಅದು ಹಾಸಿಗೆಗೆ ಎದುರಾಗಿಲ್ಲದಂತೆ ನೋಡಿಕೊಳ್ಳಿ.

ಎದ್ದ ತಕ್ಷಣ ಗಡಿಯಾರ ನೋಡಬೇಡಿ:

ಹಾಸಿಗೆಯ ಎದುರಿಗಿನ ಗೋಡೆಗೆ ಗಡಿಯಾರ ನೇತುಹಾಕಬೇಡಿ. ನಿದ್ರೆಯಿಂದ ಎದ್ದ ಕೂಡಲೇ ಸಮಯವನ್ನು ನೋಡುವುದರಿಂದ ಮನಸ್ಸಿನಲ್ಲಿ ಅವಸರ ಮತ್ತು ಆತಂಕ ಮೂಡುತ್ತದೆ. ಗಡಿಯಾರವನ್ನು ಕಣ್ಣಿಗೆ ನೇರವಾಗಿ ಕಾಣಿಸದ ಜಾಗದಲ್ಲಿ ಇಡುವುದು ಸೂಕ್ತ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ದಂಪತಿಗಳ ಕೋಣೆಯಲ್ಲಿ ದೇವರ ಫೋಟೋ ಬೇಡ:

ಧಾರ್ಮಿಕ ನಂಬಿಕೆಯ ಪ್ರಕಾರ, ಮಕ್ಕಳ ಕೋಣೆಯನ್ನು ಹೊರತುಪಡಿಸಿ ದಂಪತಿಗಳ ಮಲಗುವ ಕೋಣೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಗಳನ್ನು ಇಡುವುದು ನಿಷೇಧ. ಬೆಳಿಗ್ಗೆ ಎದ್ದ ತಕ್ಷಣ ಹಸ್ತಗಳನ್ನು ನೋಡಿ ‘ಕರಾಗ್ರೇ ವಸತೇ ಲಕ್ಷ್ಮೀ…’ ಶ್ಲೋಕ ಪಠಿಸುವ ಸಂಪ್ರದಾಯ ಇರುವುದೇ ಇದಕ್ಕಾಗಿ.

ಪ್ರಾಣಿಗಳ ಚಿತ್ರಗಳು ಬಾಂಧವ್ಯಕ್ಕೆ ಅಡ್ಡಿ:

ನಾಯಿ, ಹುಲಿ, ಸಿಂಹ ಅಥವಾ ನವಿಲುಗಳಂತಹ ಪ್ರಾಣಿಗಳ ಪ್ರತಿಮೆಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇವುಗಳ ಬದಲಿಗೆ ನವಿಲು ಗರಿಗಳನ್ನು ಇಡಬಹುದು. ಇದು ಗ್ರಹದೋಷಗಳನ್ನು ನಿವಾರಿಸಿ ಗಂಡ-ಹೆಂಡತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೇಕಬ್ ಬೆಥೆಲ್​ಗೆ ಒಲಿದ​ ನಾಯಕತ್ವ..!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್​ನ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡದ ನಾಯಕನಾಗಿ ಜೇಕಬ್ ಬೆಥೆಲ್ (Jacob Bethell) ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಂಡದ ನಾಯಕನಾಗಿ ಲಿಯಮ್​ ಲಿವಿಂಗ್​ಸ್ಟೋನ್ ಈ ಬಾರಿ ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯಲಿದ್ದು, ಹೀಗಾಗಿ ಹೊಸ ನಾಯಕನಾಗಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಬಾರಿ ಕೂಡ ಜೇಕಬ್ ಬೆಥೆಲ್ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ಫೀನಿಕ್ಸ್ ಫ್ರಾಂಚೈಸಿ ಸುಮಾರು ₹11 ಕೋಟಿಗೂ ಅಧಿಕ (3 ವರ್ಷಕ್ಕೆ £1.02m) ಮೊತ್ತಕ್ಕೆ ರಿಟೈನ್ ಮಾಡಿಕೊಂಡಿದೆ.

ಇದೀಗ ರಿಟೈನ್ ಆಗಿರುವ 22 ವರ್ಷದ ಜೇಕಬ್ ಬೆಥೆಲ್​ಗೆ ಕ್ಯಾಪ್ಟನ್ ಪಟ್ಟ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿ ಮುಂದಾಗಿದೆ. ಇನ್ನು ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ಮಹಿಳಾ ತಂಡದ ನಾಯಕಿಯಾಗಿ ಆಸ್ಟ್ರೇಲಿಯನ್ ಆಟಗಾರ್ತಿ ಎಲಿಸ್ ಪೆರ್ರಿ  ಮುಂದುವರಿಯಲಿದ್ದಾರೆ.

ಏನಿದು ಹಂಡ್ರೆಡ್ ಲೀಗ್?

ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್​ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.

ದಿ ಹಂಡ್ರೆಡ್ ಲೀಗ್​ನ ನಿಯಮಗಳು:

  • – ದಿ ಹಂಡ್ರೆಡ್ ಲೀಗ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ 20 ಓವರ್​ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.
  • – ಈ ಲೀಗ್​ನಲ್ಲಿ ಬೌಲರ್​ ಸತತ 5 ಅಥವಾ 10 ಬೌಲ್​ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್​ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.
  • – ಒಂದು ಇನಿಂಗ್ಸ್​ನಲ್ಲಿ ಒಬ್ಬ ಬೌಲರ್​ಗೆ 20 ಎಸೆತಗಳು ಮಾತ್ರ ಇರಲಿದೆ.
  • – ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್​ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್​ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್​ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬಹುದು.
  • – ಸಾಮಾನ್ಯವಾಗಿ ಕ್ರಿಕೆಟ್​ನಲ್ಲಿ ಒಂದು ಓವರ್​ ಬಳಿಕ ಬ್ಯಾಟ್ಸ್​ಮನ್​ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್​ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.
  • – ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್‌ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್​ಗಳಿಗೆ ಮಾತ್ರ ಅವಕಾಶ ಇರಲಿದೆ.
  • – ದಿ ಹಂಡ್ರೆಡ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.
  • – 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.

ಇದನ್ನೂ ಓದಿ: T20 World Cup 2026: ಕಾರ್ ಸಿಕ್ಕಿದ್ದು ಯಾರಿಗೆ?

ದಿ ಹಂಡ್ರೆಡ್ ಲೀಗ್​ನಲ್ಲಿರುವ ಐಪಿಎಲ್ ಫ್ರಾಂಚೈಸಿಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
  • ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​)
  • ಬರ್ಮಿಂಗ್​ಹ್ಯಾಮ್ ಫೀನಿಕ್ಸ್
  • ಲಂಡನ್ ಸ್ಪಿರಿಟ್
  • ಟ್ರೆಂಟ್ ರಾಕೆಟ್ಸ್
  • ವೆಲ್ಷ್ ಫೈರ್

 

Source link

ಎಲ್​ಪಿಜಿ ಪೂರೈಕೆ ವ್ಯತ್ಯಯ: ಬೆಂಗಳೂರು ಆಯ್ತು ಈಗ ಮೈಸೂರಲ್ಲೂ ಹೋಟೆಲ್ ಬಂದ್ ಆತಂಕ

ಮೈಸೂರು, ಮಾರ್ಚ್ 10: ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಸಮಸ್ಯೆಯನ್ನು ತಂದೊಡ್ಡಿದ್ದು, ಅದರ ಬಿಸಿ ಕರ್ನಾಟಕದ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ಮಾಲೀಕರು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಿಂದೆ ಸುಲಭವಾಗಿ ಸಿಗುತ್ತಿದ್ದ ಸಿಲಿಂಡರ್‌ಗಳು ಈಗ ಆರ್ಡರ್ ಮಾಡಿ ಮೂರು ದಿನಗಳ ನಂತರವೂ ಸಿಗುತ್ತಿಲ್ಲ. ಇದರ ಜೊತೆಗೆ, ಮೂರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇದು ಹೋಟೆಲ್ ಮಾಲೀಕರಿಗೆ ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ. ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಅವರು ಹೋಟೆಲ್‌ಗಳಿಂದ ವಿಮುಖರಾಗಬಹುದು ಎಂಬ ಆತಂಕ ಎದುರಾಗಿದೆ.

ಪೂರೈಕೆಯಲ್ಲಿ ಶೇಕಡಾ 50ರಷ್ಟು ಕಡಿತವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೆರಡು ಮೂರು ದಿನಗಳಲ್ಲಿ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೋಟೆಲ್ ಉದ್ಯಮವು ಸೇವಾ ವಲಯವಾಗಿದ್ದು, ಲಕ್ಷಾಂತರ ಗ್ರಾಹಕರು ಇದನ್ನು ಅವಲಂಬಿಸಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ, ಉದ್ಯಮವನ್ನು ಬಂದ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಕರೆಗಟ್ಟಲೆ ಜಾಗದಲ್ಲಿ ಕನ್ವೆನ್ಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ; ಪರಿಸರವಾದಿರಳು ಗರಂ!

ಬೆಂಗಳೂರು, ಮಾರ್ಚ್​ 10: ಮಲ್ಲೇಶ್ವರದಲ್ಲಿರುವ (Malleshwaram) ಮೈಸೂರು ಲ್ಯಾಂಪ್ ವರ್ಕರ್ಸ್ ಲಿಮಿಟೆಡ್ ಪ್ರದೇಶದಲ್ಲಿ ಸಾವಿರಾರು ಮರಗಳಿರುವ ಹಚ್ಚಹಸಿರು ವಾತಾವರಣದ ನಡುವೆ ದೊಡ್ಡ ಮಟ್ಟದ ಕಟ್ಟಡ ನಿರ್ಮಾಣದ ಯೋಜನೆ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ನಗರದ ಅಭಿವೃದ್ಧಿಗೆ ಈ ಯೋಜನೆ ಅಗತ್ಯವಾಗಿದ್ದು, ಎಲ್ಲಾ ಅಂಶಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಬಲಿಯಾಗುತ್ತವೆ ಸಾವಿರಾರು ಮರಗಳು

ಹಲವು ವರ್ಷಗಳಿಂದ ಬಳಕೆಯಾಗದೆ ಇರುವ ಈ ಸುಮಾರು 22 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕನ್ವೆನ್ಷನ್ ಸೆಂಟರ್, ಎಕ್ಸಿಬಿಷನ್ ಸೆಂಟರ್, ಫೈವ್ ಸ್ಟಾರ್ ಹೋಟೆಲ್ ಹಾಗೂ ಅಂಡರ್‌ಗ್ರೌಂಡ್ ಪಾರ್ಕಿಂಗ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಇತ್ತೀಚಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕೂಡ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

ಸುಮಾರು 10 ಸಾವಿರ ಮಂದಿ ಒಂದೇ ಸಮಯದಲ್ಲಿ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿರುವ ಸುಸಜ್ಜಿತ ಕನ್ವೆನ್ಷನ್ ಸೆಂಟರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳು ನಡೆಯಲು ಬೆಂಗಳೂರಿನಲ್ಲಿ ಸೂಕ್ತ ಸೌಲಭ್ಯಗಳ ಕೊರತೆ ಇದೆ ಎಂಬ ಕಾರಣವನ್ನು ಸರ್ಕಾರ ಮುಂದಿಟ್ಟಿದೆ. ಆದರೆ ಈ ಯೋಜನೆ ಜಾರಿಯಾಗಬೇಕಾದರೆ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿ ಜೋಸೆಫ್, ಈಗಾಗಲೇ ಬೆಂಗಳೂರಿನಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹಸಿರು ಪ್ರದೇಶವನ್ನು ಕಟ್ಟಡಗಳಿಗಾಗಿ ಬಳಸುವುದು ಸರಿಯಲ್ಲ ಎಂದಿದ್ದಾರೆ. ಈ ಜಾಗವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸಿದರೆ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋಶಿಯಲ್ ಮೀಡಿಯಾದಲ್ಲಿ ಟೀಕೆ; ಮಮ್ಮುಟ್ಟಿ ಬಳಿ ಕ್ಷಮೆ ಕೇಳಿದ ಸಿಎಂ

ಕೇರಳ ರಾಜಕೀಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲಯಾಳಂ ನಟ ಮಮ್ಮುಟ್ಟಿ (Mummootty)  ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 2024ರಲ್ಲಿ ಸಂಭವಿಸಿದ ಭೂಕುಸಿತದ ನಿರಾಶ್ರಿತರಿಗಾಗಿ ಕಟ್ಟಿದ ಪುರ್ವಸತಿ ಪಟ್ಟಣಕ್ಕೆ ಮಮ್ಮುಟ್ಟಿ ಭೇಟಿ ನೀಡಿದರು. ಈ ವೇಳೆ ಅವರು ಆಡಿದ ಒಂದು ಮಾತಿನಿಂದ ಸಾಕಷ್ಟು ಟೀಕೆ ಅನುಭವಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಪಿಣರಾಯಿ ವಿಜಯನ್ ಕ್ಷಮೆ ಕೇಳಿದ್ದಾರೆ.

ಚೆನ್ನೈನಲ್ಲಿ ಶೂಟ್ ಮುಗಿಸಿದ ಮಮ್ಮುಟ್ಟಿ ವಯನಾಡಿನ ಪುನರ್ವಸತಿ ಭಾಗಕ್ಕೆ ಭೇಟಿ ಕೊಟ್ಟರು. ಅವರು ಈ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ. ಈ ಮೂಲಕ ಭೇಟಿಯನ್ನು ಅತ್ಯಂತ ಸರಳ ರೀತಿಯಲ್ಲಿ ಮುಗಿಸಲು ಬಯಸಿದ್ದರು. ಆದಾಗ್ಯೂ, ಈ ಭೇಟಿಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರು ಮಮ್ಮುಟ್ಟಿ ಜೊತೆ ಇದ್ದರು. ಮಮ್ಮುಟ್ಟಿ ಅವರ ಭೇಟಿ ರಾಜಕೀಯದಿಂದ ಮುಕ್ತವಾಗಿರಬೇಕೆಂದು ಬಯಸಿದ್ದರೂ, ಕೆಲವರು ಅದನ್ನು ವಿವಾದವನ್ನಾಗಿ ಪರಿವರ್ತಿಸಿದರು.

ಭೇಟಿಯ ಸಮಯದಲ್ಲಿ ಮಮ್ಮುಟ್ಟಿ ಅವರು ರಫೀಕ್ ಜೊತೆ ಖಾಸಗಿಯಾಗಿ ಮಾತನಾಡಿದರು. ‘ನೀವು ನನ್ನ ಪಕ್ಕದಲ್ಲಿದ್ದರೆ, ನಾನು ನಿಮಗಾಗಿಯೇ ಇಲ್ಲಿಗೆ ಬಂದಿದ್ದೇನೆ ಎಂದು ಜನರು ಭಾವಿಸುತ್ತಾರೆ. ದಯವಿಟ್ಟು ದೂರವಿರಿ’ ಎಂದು ಮಮ್ಮುಟ್ಟಿ ತುಂಬಾ ಮೃದುವಾಗಿ ಕೇಳಿದರು. ಇದನ್ನು ಕೆಲವರು ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಪಿಎಂ ಪರ ಕಾರ್ಯಕರ್ತರು ಮಮ್ಮುಟ್ಟಿ ಅವರನ್ನು ತೀವ್ರ ಟೀಕೆ ಮತ್ತು ನಿಂದನೆ ಮಾಡಿದ್ದಾರೆ. ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಮಮ್ಮುಟ್ಟಿ ನೇರವಾಗಿ ಕೆ.ರಫೀಕ್ ಅವರಿಗೆ ಕರೆ ಮಾಡಿ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು. ನಂತರ, ರಫೀಕ್ ಫೇಸ್‌ಬುಕ್ ಮೂಲಕ ಈ ವಿವಾದವನ್ನು ಕೊನೆಗೊಳಿಸುವಂತೆ ವಿನಂತಿಸಿದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಪಿಣರಾಯಿ ಅವರು, ‘ಮಮ್ಮುಟ್ಟಿ ಅವರ ಭೇಟಿ ವಯನಾಡಿನ ಒಳಿತಿಗಾಗಿ ಮಾತ್ರ. ಅವರು ಅನುಭವಿಸಿದ ನೋವಿಗೆ ನಾನು ವಿಷಾದಿಸುತ್ತೇನೆ. ಕೇರಳಕ್ಕೆ ಗೌರವ ತರುವ ಮಮ್ಮುಟ್ಟಿಯಂತಹ ಮಹಾನ್ ನಟನ ಮೇಲೆ ಸಾಮಾಜಿಕ ಜಾಲತಾಣದಲ್ಲಿ ದಾಳಿ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ. ಯಾರಾದರೂ ಉದ್ದೇಶಪೂರ್ವಕವಾಗಿ ಅವರಿಗೆ ನೋವುಂಟು ಮಾಡಿದ್ದರೆ, ಮುಖ್ಯಮಂತ್ರಿಯಾಗಿ ನಾನು ಅದಕ್ಕಾಗಿ ಸಾರ್ವಜನಿಕವಾಗಿ ಮಮ್ಮುಟ್ಟಿ ಬಳಿ ಕ್ಷಮೆಯಾಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಎಂಟು ತಿಂಗಳ ಬಳಿಕ ನಟನೆಗೆ ಮರಳಲು ರೆಡಿ ಆದ ಮಲಯಾಳಂ ನಟ ಮಮ್ಮುಟ್ಟಿ

ಮಮ್ಮುಟ್ಟಿ ಕೇರಳದ ಹಿತವನ್ನು ಬಯಸುವ ವ್ಯಕ್ತಿಯಾಗಿರುವುದರಿಂದ ಅವರನ್ನು ಅವಮಾನಿಸುವುದು ಸೂಕ್ತವಲ್ಲ ಎಂದು ಸಿಎಂ ಸ್ಪಷ್ಟಪಡಿಸಿರುವುದರಿಂದ ವಿವಾದ ಸದ್ಯಕ್ಕೆ ಕಡಿಮೆಯಾದಂತೆ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ನಮ್ಮ ನೆರಳನ್ನು ನಾವೇ ತುಳಿಯಬಾರದು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ನಮ್ಮ ಜೀವನದುದ್ದಕ್ಕೂ, ಹುಟ್ಟಿನಿಂದ ಮರಣದ ತನಕ ನಮ್ಮೊಂದಿಗೆ ಸದಾ ಇರುವ ಏಕೈಕ ಸಂಗಾತಿ ನಮ್ಮ ನೆರಳು. ಅಪ್ಪ-ಅಮ್ಮ, ಕುಟುಂಬದವರು ಸಹ ಒಂದು ಹಂತದ ನಂತರ ನಮ್ಮಿಂದ ದೂರವಾಗಬಹುದು, ಆದರೆ ನೆರಳು ಸದಾ ನಮ್ಮ ಜೊತೆಗೇ ಇರುತ್ತದೆ. ನಾವು ಇದನ್ನು ಕಡೆಗಣಿಸಿದ್ದರೂ, ಇದರ ಆಧ್ಯಾತ್ಮಿಕ ಮಹತ್ವ ಅಪಾರ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ನೆರಳು ಕೇವಲ ಭೌತಿಕ ಪ್ರತಿಬಿಂಬವಲ್ಲ. ಇದು ಯುಗ ಯುಗಗಳಿಂದಲೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ನೆರಳು ನಮ್ಮ ದೇಹದಲ್ಲಿ ಪಾಪ-ಪುಣ್ಯಗಳು ಹೆಚ್ಚಾದಾಗ ಎಚ್ಚರಿಸುತ್ತದೆ. ಅಕಸ್ಮಿಕ ಕಂಟಕಗಳು, ಸೆರೆವಾಸ, ಅಪವಾದ, ಅಥವಾ ಮರಣದಂಡನೆಯಂತಹ ಘಟನೆಗಳು ಸಂಭವಿಸುವ ಮೊದಲು, ನೆರಳು ಪರೋಕ್ಷವಾಗಿ ಸೂಚನೆಗಳನ್ನು ನೀಡುತ್ತದೆ. ಆದರೂ ನಾವು ಅದನ್ನು ಸಾಮಾನ್ಯವಾಗಿ ಗಮನಿಸುವುದಿಲ್ಲ. ನಮ್ಮ ನೆರಳು ಮೃತ್ಯುವಿನ ತನಕ ನಮ್ಮೊಂದಿಗಿದ್ದು, ಮರಣ ಸಮೀಪಿಸಿದಾಗ ಅದು ಪಂಚಭೂತಗಳಲ್ಲಿ ಸೇರಿ ಕಣ್ಮರೆಯಾಗುತ್ತದೆ. ನೆರಳು ಕಣ್ಮರೆಯಾಗುವುದು ಅಥವಾ ಅದನ್ನು ನೋಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಮೃತ್ಯು ಆವರಿಸಿದಾಗ ದೇಹವು ನಿಶಕ್ತಿಗೊಂಡು, ನೆರಳು ಸಹ ಅಲ್ಲಿಂದ ಹೊರಟುಹೋಗುತ್ತದೆ. ಯಮನ ಪ್ರತೀಕದಂತೆ ಕಾಣುವ ಈ ಕಪ್ಪು ಆಕೃತಿಯು ಶನಿಯ ಪ್ರತೀಕವೂ ಆಗಿರಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ನೆರಳು ನಮ್ಮ ಎಲ್ಲಾ ಲೆಕ್ಕಾಚಾರಗಳನ್ನು ಯಮನಿಗೆ ತಲುಪಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ನಾವು ಧನಾತ್ಮಕವಾಗಿ ವರ್ತಿಸುವುದು ಅತ್ಯಗತ್ಯ. ದೈವಭೀತಿ, ಪಾಪಭೀತಿ ಮತ್ತು ಧರ್ಮಭೀತಿಯನ್ನು ಇಟ್ಟುಕೊಂಡಾಗ ನಮ್ಮ ಜೀವನ ಸುಂದರವಾಗಿರುತ್ತದೆ. ನಮ್ಮ ನೆರಳನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಪ್ರಯತ್ನಿಸೋಣ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version