ಮಲೈಕಾ ಅರೋರಾ ಜೊತೆ ಇರೋ ಈ ಹೊಸ ಹುಡುಗ ಯಾರು?

ಮಲೈಕಾ ಅರೋರಾ ಜೊತೆ ಇರೋ ಈ ಹೊಸ ಹುಡುಗ ಯಾರು?

ನಟಿ ಮಲೈಕಾ ಅರೋರಾ ತಮ್ಮ ಖಾಸಗಿ ಜೀವನಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ . ಕಳೆದ ಕೆಲವು ದಿನಗಳಿಂದ, ಮಲೈಕಾ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ರೋಮ್‌ನಲ್ಲಿರುವ ಅವರಿಬ್ಬರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈಗ ಮಲೈಕಾ ತಮ್ಮ ಖಾಸಗಿ ಜೀವನಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ನಿಗೂಢ ವ್ಯಕ್ತಿಯೊಂದಿಗೆ ಮಲೈಕಾ ಇರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಇಬ್ಬರೂ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರು ಒಟ್ಟಿಗೆ ನೃತ್ಯ ಮಾಡುವುದನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳು ಶುರುವಾಗಿವೆ.

ಮಲೈಕಾ ಅರೋರಾ ಭಾನುವಾರ ಸಂಜೆ ತಮ್ಮ ಹೊಸ ರೆಸ್ಟೋರೆಂಟ್‌ನ ಲಾಂಚ್ ಪಾರ್ಟಿಯನ್ನು ಆಯೋಜಿಸಿದ್ದರು , ಇದರಲ್ಲಿ ಅನೇಕ ಜನರು ಭಾಗವಹಿಸಿದ್ದರು. ಪಾರ್ಟಿಯಿಂದ ಮಲೈಕಾ ಅವರ ಹಲವಾರು ವೀಡಿಯೊಗಳು ಸಹ ಹೊರಬಂದಿವೆ. ಅದರಲ್ಲಿ ಅವರು ಒಬ್ಬ ಪುರುಷನೊಂದಿಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಆ ವ್ಯಕ್ತಿ ಹರ್ಷ್ ಅಲ್ಲ. ಇದು ಚರ್ಚೆಗಳನ್ನು ಹುಟ್ಟುಹಾಕಿದೆ.

ವಿಡಿಯೋದಲ್ಲಿ ಮಲೈಕಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ, ಸ್ಪ್ಲಿಟ್ಸ್‌ವಿಲ್ಲಾ ಸ್ಪರ್ಧಿ ಸೊರಾಬ್ ಬೇಡಿ… ಅವರ ಕೆಮಿಸ್ಟ್ರಿ ನೋಡಿ, ಜನರು ಸೊರಾಬ್ ಮಲೈಕಾಳ ಗೆಳೆಯನೇ ಎಂದು ಊಹಿಸಲು ಪ್ರಾರಂಭಿಸಿದರು. ಆದರೆ ಸತ್ಯ ಬೇರೆಯೇ ಇದೆ. ವಾಸ್ತವವಾಗಿ, ಸೊರಾಬ್ ಮತ್ತು ಮಲೈಕಾ ಪ್ರೀತಿ ಮಾಡುತ್ತಿಲ್ಲ.

ಮಲೈಕಾ ಅವರ ಹೊಸ ರೆಸ್ಟೋರೆಂಟ್ “ಸ್ವೀನಿ ಬಾಂಬೆ” ಯ ಲಾಂಚ್ ಪಾರ್ಟಿಯಲ್ಲಿ ಸೊರಾಬ್ ಭಾಗವಹಿಸಿದ್ದರು. ಸೊರಾಬ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮಲೈಕಾ ಅವರನ್ನು ಅಭಿನಂದಿಸಿದರು. ಇದರಿಂದ, ಇಬ್ಬರೂ ಕೇವಲ ಸ್ನೇಹಿತರು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಯುವ ಉದ್ಯಮಿ ಜೊತೆ ಮಲೈಕಾ ಡೇಟಿಂಗ್; ಇಬ್ಬರ ಮಧ್ಯೆ ಇದೆ 19 ವರ್ಷಗಳ ಅಂತರ 

ಮಲೈಕಾ ಗೆಳೆಯ ಹರ್ಷ್ ಮೆಹ್ತಾ ಕೂಡ ಪಾರ್ಟಿಯಲ್ಲಿದ್ದರು.. ಮಲೈಕಾ ಮತ್ತು ಹರ್ಷ್ ಒಟ್ಟಿಗೆ ಮನೆಯಿಂದ ಹೊರಟರು ಮತ್ತು ಒಂದೇ ಕಾರಿನಲ್ಲಿ ಕುಳಿತಿರುವುದು ಕಂಡುಬಂದಿದೆ. ಮಲೈಕಾ ಮತ್ತು ಹರ್ಷ್ ನಡುವೆ 19 ವರ್ಷಗಳ ವಯಸ್ಸಿನ ಅಂತರವಿದೆ. ಮಲೈಕಾಗೆ 52 ವರ್ಷ, ಹರ್ಷ್‌ಗೆ 33 ವರ್ಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಹೆಲ್ತ್ ಎಮರ್ಜೆನ್ಸಿ? ಮಾರ್ಚ್ 11 ರಿಂದ ಸರ್ಕಾರಿ ಆಸ್ಪತ್ರೆಗಳ ಓಪಿಡಿ ಬಂದ್

ಬೆಂಗಳೂರು, ಮಾರ್ಚ್ 10: ಕರ್ನಾಟಕದ (Karnataka) ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospitals) ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮಾರ್ಚ್ 11 ರಿಂದ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಇದರಿಂದಾಗಿ ರಾಜ್ಯದ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ (OPD) ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜ್ವರ, ಕೆಮ್ಮು, ಚರ್ಮ ಸಂಬಂಧಿತ ಸಮಸ್ಯೆಗಳು, ಸ್ಕ್ಯಾನಿಂಗ್ ಅಥವಾ ರಕ್ತ ಪರೀಕ್ಷೆ ಸೇರಿದಂತೆ ಸಾಮಾನ್ಯ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಿರುವ ರೋಗಿಗಳಿಗೆ ಇದು ದೊಡ್ಡ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ.

ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರಕ್ಕೆ ಕಾರಣವೇನು?

ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಹಲವು ವರ್ಷಗಳಿಂದ ಬಾಕಿಯಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, 13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜೇಷ್ಠಾತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘವು ಹೋರಾಟಕ್ಕೆ ಮುಂದಾಗಿದೆ.

ವೈದ್ಯರ ಬೇಡಿಕೆಗಳ ಈಡೇರಿಕೆಗೆ ನಡೆದ 7 ಸಭೆ ವಿಫಲ

ವೈದ್ಯರ ಬೇಡಿಕೆಗಳನ್ನು ಚರ್ಚಿಸಲು ಆರೋಗ್ಯ ಇಲಾಖೆ ಇದುವರೆಗೆ ಏಳು ಸಭೆಗಳನ್ನು ನಡೆಸಿದೆ. ಮಾರ್ಚ್ 2ರಂದು ಆರೋಗ್ಯ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯೂ ಫಲಪ್ರದವಾಗಲಿಲ್ಲ. ಸರ್ಕಾರದಿಂದ ಯಾವುದೇ ಲಿಖಿತ ಭರವಸೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘದ ನಾಯಕರು ತಿಳಿಸಿದ್ದಾರೆ.

ಮಾರ್ಚ್ 16 ರಿಂದ ತೀವ್ರ ಸ್ವರೂಪದ ಹೋರಾಟ

ಮುಷ್ಕರದ ಭಾಗವಾಗಿ ಮಾರ್ಚ್ 11ರಿಂದ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿಯನ್ನು ಧರಿಸಿ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ ಮಾರ್ಚ್ 16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ: ಮುಷ್ಕರಕ್ಕೆ ಸಜ್ಜಾಗಿರುವ ಸರ್ಕಾರಿ ವೈದ್ಯರಿಗೆ ಖಡಕ್​​ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ

ಈ ಸಂಬಂಧವಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಅವರ ನೇತೃತ್ವದಲ್ಲಿ ವೈದ್ಯರು ಈಗಾಗಲೇ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ವೈದ್ಯರ ಮುಷ್ಕರದಿಂದ ರಾಜ್ಯದ ಆರೋಗ್ಯ ಸೇವೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದ್ದು, ವಿಶೇಷವಾಗಿ ಬಡ ರೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂರು ನಟಿಯರ ಗುಣ ಸಾಯಿ ಪಲ್ಲವಿಯಲ್ಲಿದೆ ಎಂದು ಮೊದಲೇ ಊಹಿಸಿದ್ದ ರಂಭಾ

ಸಾಯಿ ಪಲ್ಲವಿಯವರು (Sai Pallavi)  ಇಂದು ಬೇಡಿಕೆಯ ನಟಿ ಎನಿಸಿಕೊಂರುವುದ ಗೊತ್ತೇ ಇದೆ. ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಹಾಕಿ ಮಾಡುತ್ತಿರುವ ಸಿನಿಮಾ ಇದು ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿರುತ್ತದೆ. ಅಂತಹ ಸಿನಿಮಾದಲ್ಲಿ ಇವರಿಗೆ ಅವಕಾಶ ಸಿಕ್ಕಿದೆ ಎಂದರೆ ಇವರ ಟ್ಯಾಲೆಂಟ್ ಏನು ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ ಮತ್ತು ರಂಭಾ ಅವರು ಸಾಯಿ ಪಲ್ಲವಿ ಬಗ್ಗೆ ಅವರು ಅಂದೇ ಹೊಗಳಿದ್ದರು. ಅದು ಈಗ ನಿಜವಾಗಿದೆ.

ಸಾಯಿ ಪಲ್ಲವಿ ಅವರು ಎಲ್ಲಾ ಹೀರೋಯಿನ್ಗಳಂತೆ ಅಂತೆ ಅಲ್ಲ. ಅವರು ಎಲ್ಲರಿಗಿಂತ ಭಿನ್ನ ಎಂದೇ ಹೇಳಬಹುದು. ಏಕೆಂದರೆ ಅವರು ಎಂದಿಗೂ ಮೇಕಪ್ ಹಾಕಲ್ಲ. ಬಿಕಿನಿ ಅಥವಾ ಹಾಟ್ ಡ್ರೆಸ್ ಹಾಕಲ್ಲ. ಈ ಕಾರಣಕ್ಕೆ ಇರಬಹುದು ಅವರಿಗೆ ಸೀತೆಯ ಪಾತ್ರ ಸಿಕ್ಕಿದೆ. ಈ ಮೊದಲು ಅವರು ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗಿ ಆಗಿದ್ದರು. ಆ ಸಂದರ್ಭದ ವಿಡಿಯೋ ಇದಾಗಿದೆ.

ಸಾಯಿ ಪಲ್ಲವಿ ಅವರು ನಟಿ ಮಾತ್ರ ಅಲ್ಲ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಅವರು ಈ ಮೊದಲು ಇಟಿವಿಯ ರಿಯಾಲಿಟಿ ಶೋಗೆ ಬಂದಿದ್ದರು. ಆ ಶೋನಲ್ಲಿ ರಂಭಾ ಅವರು ಜಡ್ಜ್ ಆಗಿದ್ದರು. ಅವರು ಸಾಯಿ ಪಲ್ಲವಿ ಅವರ ಕಲೆಯನ್ನು ಆಗಲೇ ಗುರುತಿಸಿದ್ದರು ಮತ್ತು ಅವರು ಅಂದು ಸಾಯಿ ಪಲ್ಲವಿ ಅವರ ಬಗ್ಗೆ ಮೆಚ್ಚುಗೆ ಹೊರಹಾಕಿದ್ದರು. ಅವರ ಕಲೆಯನ್ನು ಅಂದೇ ಗುರುತಿಸಿದ್ದರು ಎಂದೇ ಹೇಳಬಹುದು. ಆ ಸಂದರ್ಭದ ವಿಡಿಯೋ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

‘ಸಾಯಿ ಪಲ್ಲವಿ, ಕೊಂಚ ತಿರುಗಿ, ಐಶ್ವರ್ಯಾ ರೈ ರೀತಿ ಇದೀರಾ. ಎರಡಕ್ಕೆ ತಿರುಗಿ, ಮಾಧುರಿ ರೀತಿ ಇದೀರಾ. ಡ್ಯಾನ್ಸ್ ಸರೋಜ್ ಖಾನ್ ರೀತಿ ಇದೀರಾ. ಸೂಪರ್ ಆಗಿದೀರಾ’ ಎಂದು ರಂಭಾ ಅವರು ಹೇಳಿದ್ದರು. ಅದು ನಿಜವಾಗಿದೆ ಎಂದು ಅನೇಕರು ಹೇಳಿದ್ದರು. ಸಾಯಿ ಪಲ್ಲವಿ ಅವರು ವಿವಿಧ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಅವರ ಪಾತ್ರವು ನೈಸರ್ಗಿಕವಾಗಿ ಇರುತ್ತದೆ. ಈ ಕಾರಣದಿಂದಲೇ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಇಂದು ಒಣ ಹವೆ, ಹೆಚ್ಚಿನ ತಾಪಮಾನ!

ಬೆಂಗಳೂರು, ಮಾರ್ಚ್​ 10: ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ (Weather Forecast) ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Horoscope Today 10​​​​​​th​​ March​: ಇಂದು ಈ ರಾಶಿಯವರಿಗೆ ಹಿತಶತ್ರುಗಳ ಕಾಟ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 10​​​​​​, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಸಪ್ತಮಿ, ಅನುರಾಧ ನಕ್ಷತ್ರ, ವೃಷಿಣ ಯೋಗ ಮತ್ತು ಭದ್ರಕರಣವನ್ನು ಹೊಂದಿದೆ.

ಮಾರ್ಚ್ 10, 2026 ರಂದು ರಾಹುಕಾಲವು ಮಧ್ಯಾಹ್ನ 3:29 ರಿಂದ ಸಂಜೆ 4:51 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30 ರವರೆಗೆ ಇರುತ್ತದೆ. ಈ ಮಂಗಳವಾರ ಸುಬ್ರಹ್ಮಣ್ಯ, ಕುಜ ಮತ್ತು ಹನುಮಂತನ ಲಹರಿಗಳು ಇವೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುತ್ತಾನೆ. ಈ ದಿನ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಗುರೂಜಿಯವರು ಶುಭ ಹಾರೈಸಿದ್ದಾರೆ.

 

 

Source link

‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ವಿವಾಹ ಆಗುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಈಗ ರಶ್ಮಿಕಾ-ವಿಜಯ್ ನಟನೆಯಿಂದ ಒಂದು ಬ್ರೇಕ್ ಪಡೆದುಕೊಂಡಿದ್ದು, ಹಾಯಾಗಿ ಸುತ್ತಾಡುತ್ತಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂದೇಶ ನೀಡಿದ್ದಾರೆ. ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿ ಹುಡುಕಿಕೊಳ್ಳಿ’ ಎಂದು ಅವರು ಹೇಳಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಹೈದರಾಬಾದ್​​ನಲ್ಲಿಯೂ ಆರತಕ್ಷತೆ ಮಾಡಲಾಯಿತು. ಈಗ ರಶ್ಮಿಕಾಗೋಸ್ಕರ ಪ್ರೀತಿಯ ಸಂದೇಶವನ್ನು ಒಬ್ಬರು ಬರೆದುಕೊಂಡಿದ್ದರು. ಇದು ರಶ್ಮಿಕಾ ಅವರನ್ನು ಭಾವನಾತ್ಮಕವಾಗಿಸಿತು.

ಇದನ್ನೂ ಓದಿ: ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ಧಾಮಿನಿ ಎಂಬುವವರು ರಶ್ಮಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈ ಟ್ವೀಟ್​​ನ ರಶ್ಮಿಕಾ ರೀಟ್​ವೀಟ್ ಮಾಡಿದ್ದಾರೆ. ‘ಇಷ್ಟು ದಿನ ನನ್ನ ಬಗ್ಗೆ ಬರೆದದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ. ನಾನು ಹೇಳಲು ಬಯಸುವುದು ಬಹಳಷ್ಟಿದೆ. ಆದರೆ ನಾನು ಹೇಳೋದು ತುಂಬಾ ಕಡಿಮೆ. ನಾನು ನನ್ನದೇ ಆದ ಜಾಗವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ‘ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’ ಎಂದು ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳು ಬರೆಯುವ ಕಮೆಂಟ್ ಹಾಗೂ ಪೋಸ್ಟ್​​ಗಳನ್ನು ಓದುತ್ತಾರಂತೆ. ಈ ಕಾರಣದಿಂದಲೇ ಧಾಮಿನಿ ಅವರು ಬರೆದ ಪೋಸ್ಟ್​​ನ ರಶ್ಮಿಕಾ ಓದಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

T20 World Cup 2028: ಟಿ20 ವಿಶ್ವಕಪ್​ಗೆ 12 ತಂಡಗಳು ನೇರ ಆಯ್ಕೆ

Source link

ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್​ಗಳು​​ ಬಂದ್​​​ ಸಾಧ್ಯತೆ: ಮಾಲೀಕರ ಸಂಘ ಹೇಳಿದ್ದೇನು ನೋಡಿ

ಬೆಂಗಳೂರು, ಮಾರ್ಚ್ 10: ಅಮೆರಿಕ, ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್‌ಗಳ ಕೊರತೆ ಬೆಂಗಳೂರಿನ ಹೋಟೆಲ್‌ಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಏಕಾಏಕಿ ಸ್ಥಗಿತಗೊಂಡಿದ್ದು, ಮಾರ್ಚ್ 10 ರಂದು ನಗರದ ಹಲವು ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ದಟ್ಟವಾಗಿದೆ. ಎಲ್ಪಿಜಿ ಕೊರತೆಯಿಂದಾಗಿ ಹೋಟೆಲ್‌ಗಳಲ್ಲಿ ಕಾಫಿ, ಟೀ, ಉಪಹಾರ ಮತ್ತು ಊಟ ಲಭ್ಯವಾಗುವುದು ಅನುಮಾನ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಗ್ಯಾಸ್ ಸಿಲಿಂಡರ್ ಇಲ್ಲದೆ ಹೋಟೆಲ್ ನಡೆಸಲು ಅಸಾಧ್ಯ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ. ಕೇಂದ್ರ ಸರ್ಕಾರವು 60-70 ದಿನಗಳ ಸ್ಟಾಕ್ ಇದೆ ಎಂದು ಈ ಹಿಂದೆ ಹೇಳಿದ್ದರೂ, ವಾಣಿಜ್ಯ ಗ್ಯಾಸ್ ಪೂರೈಕೆ ನಿಲ್ಲಿಸಿರುವುದು ಆತಂಕ ಮೂಡಿಸಿದೆ. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾವ್ ಆಗ್ರಹಿಸಿದ್ದಾರೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಿಮ್ಮ ಮನೆಯ ಗೇಟ್ ತೆಗೆಯಲು ಬಾರದಂತೆ ಯಾರಾದ್ರೂ ವಾಹನ ಪಾರ್ಕ್​ ಮಾಡ್ತಿದ್ದಾರಾ ಈ ಟ್ರಿಕ್ ಚೆನ್ನಾಗಿದೆ ನೋಡಿ

ನಮ್ಮ ಭಾರತ ಮಾತ್ರವಲ್ಲ ಎಲ್ಲಾ ದೇಶಗಳಲ್ಲೂ ಇದೊಂದು ಸಮಸ್ಯೆ ಇದೆ. ಬೇರೆಯವರ ಮನೆ ಮುಂದೆ ಕಾರು ನಿಲ್ಲಿಸುವುದು, ಬೇರೆಯವರು ಮನೆಗೆ ಹೋಗುವ ದಾರಿಗೆ ಅಡ್ಡವಾಗಿ ವಾಹನ ಪಾರ್ಕ್​ ಮಾಡುವುದು, ಪಾರ್ಕಿಂಗ್​ಗೆ ಜಾಗವಿದ್ದರೂ ಯದ್ವಾತದ್ವಾ ಗಾಡಿ ನಿಲ್ಲಿಸುವುದು ಹೀಗೆ.ಆದರೆ ಆ ರೀತಿ ವಾಹನ ನಿಲ್ಲಿಸಬಾರದು ಅಂದ್ರೆ ಒಂದೋ ಅಲ್ಲೇ ನೀವು ನಿಂತು ಯಾವುದಾದರೂ ವಾಹನ ಬರುತ್ತಾ ಎಂದು ಕಾದು ನಿಲ್ಲಿಸುವ ಸಮಯದಲ್ಲಿ ಹೇಳಬೇಕು, ಅದಂತೂ ಆಗದ ಕೆಲಸ ಇನ್ನು, ಈ ವ್ಯಕ್ತಿ ಮಾಡಿರುವ ಟ್ರಿಕ್ ತುಂಬಾ ಚೆನ್ನಾಗಿ ವರ್ಕ್​ ಆಗಬಹುದು. ಆಸ್​ಟ್ರೇಲಿಯಾದ ವ್ಯಕ್ತಿಯೊಬ್ಬರು ತಾವು ಮನೆಗೆ ಹೋಗುವ ಆ ಮಾರ್ಗದಲ್ಲಿ ಯಾರಾದರೂ ಗಾಡಿ ನಿಲ್ಲಿಸಿದರೆ ಆಟೋಮೆಟಿಕ್ ಆಗಿ ನೀರು ಕಾಡಿಯ ಮೇಲೆ ಹಾರುವಂತೆ ಮಾಡಿದ್ದಾರೆ. ಆಗ ಅವರಿಗೆ ಅಲ್ಲಿ ಗಾಡಿ ನಿಲ್ಲಿಸಬಾರದೆಂದು ಅರ್ಥವಾಗುವುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಷ್ಟಿದ್ರೆ ಆ ರೀತಿಯ ಪಾತ್ರವನ್ನೇ ಮಾಡಬಾರದು’; ಗೀತಾ ಬಾಡಿ ಶೇಮಿಂಗ್ ಆರೋಪಕ್ಕೆ ಮಿಲನಾ ಖಡಕ್ ಉತ್ತರ

ಗೀತಾ ಭಾರತಿ ಭಟ್ ಅವರು ಸಿನಿಮಾದಲ್ಲಿ ತಮಗಾದ ಬಾಡಿಶೇಮಿಂಗ್ ಬಗ್ಗೆ ಮಾತನಾಡಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ’ ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಗೀತಾ ಮಾಡಿದರು. ಥಿಯೇಟರ್​​​ನಲ್ಲಿ ನೋಡಿದಾಗ ಅವರಿಗೆ ಶಾಕ್ ಆಗಿತ್ತಂತೆ. ಅದಕ್ಕೆ ಅವರು ತಕರಾರು ತೆಗೆದಿದ್ದರು. ಈ ವಿಷಯಕ್ಕೆ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಅವರು ಪ್ರತಿಕ್ರಿಯಿಸಿದ್ದಾರೆ. ‘ಅಷ್ಟಿದ್ರೆ ಸಿನಿಮಾನೇ ಒಪ್ಪಿಕೊಳ್ಳಬಾರದಿತ್ತು’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಈ ಮೊದಲು ಮಾತನಾಡಿದ್ದ ಗೀತಾ ಅವರು, ನಿರ್ದೇಶಕ ಕೃಷ್ಣ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಿನಿಮಾದಲ್ಲಿ ಈ ರೀತಿಯ ಡೈಲಾಗ್ ಇದೆ ಎಂಬುದೇ ಗೊತ್ತಿರಲಿಲ್ಲ ಎಂದು ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ‘ಫಸ್ಟ್ ಡೇ ಫಸ್ಟ್ ಶೋ ಕನ್ನಡ’ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಿಲನಾ ಹಾಗೂ ಕೃಷ್ಣ ಮಾತನಾಡಿದ್ದಾರೆ.

‘ಅದು ಬಾಡಿ ಶೇಮಿಂಗ್ ಮಾಡಿದ್ದಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ’ ಎಂದು ಕೃಷ್ಣ ಅವರು ಹೇಳಿದ್ದಾರೆ. ‘ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಅವರಿಗೆ ಆ ಬಳಿಕ ಹಾಗೆ ಅನಿಸಿರಬಹುದು. ಅಷ್ಟಿದ್ರೆ ಅವರು ಆ ರೀತಿಯ ಪಾತ್ರಗಳನ್ನು ಮಾಡಬಾರದು. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಿರೋದು. ನಿಮಗೆ ಆಗಲ್ಲ ಅಂದ್ರೆ ಬಿಡಿ’ ಎಂದು ಮಿಲನ ಖಡಕ್ ಆಗಿ ಹೇಳಿದ್ದಾರೆ.

‘ಗೀತಾ ಅವರು ಧಾರಾವಾಹಿ ಮಾಡುತ್ತಾ ಇದ್ದರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ನಮ್ಮ ಒಂದು ದೃಶ್ಯಕ್ಕೆ ತಕರಾರು ತೆಗೆದರೆ ಹೇಗೆ? ಮೇಕಿಂಗ್ ವಿಡಿಯೋ ಯೂಟ್ಯೂಬ್​​ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಬೇಕು ಎಂದು ಮಾಡಿದ್ದಲ್ಲ. ಅನೇಕರಿಗೆ ಕನೆಕ್ಟ್ ಆಗಿರೋ ವಿಷಯ ಅದು’ ಎಂದು ಕೃಷ್ಣ ಅವರು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ‘ಲವ್ ಮಾಕ್ಟೇಲ್​ನಲ್ಲಿ ನನಗೆ ಬಾಡಿ ಶೇಮಿಂಗ್ ಆಗಿದೆ, ಆ ಪಾತ್ರ ಮಾಡಿ ತಪ್ಪು ಮಾಡಿದೆ’; ಗೀತಾ ಭಾರತಿ ಭಟ್

‘ಕಥಾ ನಾಯಕ ಆದಿ ಏನು ಫೀಲ್ ಮಾಡ್ತಾನೆ ಎಂದು ಬರೆದಿದ್ದು. ಕೆಲವರಿಗೆ ಬೇಸರ ಆಗಬಹುದು, ಕೆಲವರಿಗೆ ಖುಷಿ ಆಗಿರಬಹುದು. ಏನು ಮಾಡೋಕೂ ಆಗಲ್ಲ’ ಎಂದರು ಕೃಷ್ಣ. ‘ಕಾಮಿಡಿಯನ್ನು ಕಾಮಿಡಿತರ ತಗೋಬೇಕು’ ಎಂಬುದು ಮಿಲನಾ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version