2026ರ ಟಿ20 ವಿಶ್ವಕಪ್ ಟೂರ್ನಿಗೆ ತೆರೆಬಿದ್ದಿದೆ. 20 ತಂಡಗಳೊಂದಿಗೆ ಶುರುವಾದ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಟೀಮ್ ಇಂಡಿಯಾ. ಇನ್ನು ರನ್ನರ್ ಅಪ್ ಸ್ಥಾನಕ್ಕೆ ನ್ಯೂಝಿಲೆಂಡ್ ತೃಪ್ತಿಪಟ್ಟುಕೊಂಡಿದೆ. ಇನ್ನು ಈ 20 ತಂಡಗಳಲ್ಲಿ 12 ಟೀಮ್ಗಳು ನೇರವಾಗಿ ಮುಂದಿನ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅಂದರೆ 2028 ರಲ್ಲಿ ಕಣಕ್ಕಿಳಿಯಲಿರುವ 12 ತಂಡಗಳು ಖಚಿತವಾಗಿದೆ. ಆ ತಂಡಗಳ ಪಟ್ಟಿ ತಂಡಗಳ ಪಟ್ಟಿ ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿರುವ ಆಸ್ಟ್ರೇಲಿಯಾ 2028ರ ಟಿ20 ವಿಶ್ವಕಪ್ಗೆ ಆತಿಥೇಯ ರಾಷ್ಟ್ರವಾಗಿ ನೇರವಾಗಿ ಆಯ್ಕೆಯಾಗಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಸೀಸ್ ಪಡೆ ಕಾಣಿಸಿಕೊಳ್ಳುವುದು ಖಚಿತ.
ನ್ಯೂಝಿಲೆಂಡ್: ಆಸ್ಟ್ರೇಲಿಯಾ ಜೊತೆ ನ್ಯೂಝಿಲೆಂಡ್ ಕೂಡ ಮುಂಬರುವ ಟಿ20 ವಿಶ್ವಕಪ್ನ ಆತಿಥ್ಯವಹಿಸಲಿದೆ. ಅದರಂತೆ ಕಿವೀಸ್ ಪಡೆ ಕೂಡ 2028ರ ಟಿ20 ವಿಶ್ವಕಪ್ಗೆ ಆತಿಥೇಯ ರಾಷ್ಟ್ರವಾಗಿ ಡೈರೆಕ್ಟ್ ಆಯ್ಕೆಯಾಗಿದೆ.
ವೆಸ್ಟ್ ಇಂಡೀಸ್: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೇರಿದ್ದ ವೆಸ್ಟ್ ಇಂಡೀಸ್ ತಂಡ ಕೂಡ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಆಯೋಜಿಸಲಿರುವ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.
ಝಿಂಬಾಬ್ವೆ: ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ಗೆದ್ದು ಟಿ20 ವಿಶ್ವಕಪ್ನ ಸೂಪರ್-8 ಸುತ್ತಿಗೆ ಪ್ರವೇಶಿಸಿದ್ದ ಝಿಂಬಾಬ್ವೆ ತಂಡ ಕೂಡ ಮುಂದಿನ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಝಿಂಬಾಬ್ವೆ ಕೂಡ ಕಾಣಿಸಿಕೊಳ್ಳಲಿದೆ.
ಸೌತ್ ಆಫ್ರಿಕಾ; ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಸೂಪರ್-8 ಹಂತಕ್ಕೇರಿರುವ ಸೌತ್ ಆಫ್ರಿಕಾ ತಂಡವು ಕೂಡ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ನೇರವಾಗಿ ಎಂಟ್ರಿ ಕೊಟ್ಟಿದೆ.
ಇಂಗ್ಲೆಂಡ್: ಈ ಬಾರಿಯ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡಿದ್ದ ಇಂಗ್ಲೆಂಡ್ ತಂಡ ಕೂಡ 2028 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಂಡಿದೆ.
ಶ್ರೀಲಂಕಾ: 10ನೇ ಟಿ20 ವಿಶ್ವಕಪ್ಗೆ ಜಂಟಿ ಆತಿಥ್ಯವಹಿಸಿದ್ದ ಶ್ರೀಲಂಕಾ ತಂಡ ಸೂಪರ್-8 ಸುತ್ತಿಗೆ ಪ್ರವೇಶಿಸಿರುವ ಆಧಾರದ ಮೇಲೆ 2028ರ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದೆ.
ಪಾಕಿಸ್ತಾನ್: ಟಿ20 ವಿಶ್ವಕಪ್ 2026 ರಲ್ಲಿ ಸೋಲು-ಗೆಲುವುಗಳೊಂದಿಗೆ ಕೊನೆಗೂ ಸೂಪರ್-8 ಹಂತಕ್ಕೇರಿದ್ದ ಪಾಕಿಸ್ತಾನ್ ತಂಡವು 2028ರ ಟಿ20 ವಿಶ್ವಕಪ್ ಎಂಟ್ರಿಯನ್ನು ಖಚಿತಪಡಿಸಿಕೊಂಡಿದೆ. ಅದರಂತೆ ಪಾಕ್ ಪಡೆ ಕೂಡ ಆಸ್ಟ್ರೇಲಿಯಾ-ನ್ಯೂಝಿಲೆಂಡ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ.
ಭಾರತ: ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ಕೂಡ ಆಸ್ಟ್ರೇಲಿಯಾ-ನ್ಯೂಝಿಲೆಂಡ್ ಆಯೋಜಿಸಲಿರುವ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ.
ಅಫ್ಘಾನಿಸ್ತಾನ್: 2026 ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಅಫ್ಘಾನಿಸ್ತಾನ್ ತಂಡವು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ 2028ರ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದೆ. ಹೀಗಾಗಿ 2028ರ ಟಿ20 ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
ಬಾಂಗ್ಲಾದೇಶ್: ಈ ಬಾರಿಯ ಟಿ20 ವಿಶ್ವಕಪ್ನಿಂದ ಹೊರಗುಳಿದಿರುವ ಬಾಂಗ್ಲಾದೇಶ್ ತಂಡ ಕೂಡ ಮುಂದಿನ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದೆ. ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಬಾಂಗ್ಲಾ ಪಡೆದ 2028ರ ಟಿ20 ವಿಶ್ವಕಪ್ಗೆ ಅರ್ಹತೆಗಿಟ್ಟಿಸಿಕೊಂಡಿದೆ.
ಐರ್ಲೆಂಡ್: ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಐರ್ಲೆಂಡ್ ತಂಡ ಕೂಡ ಮುಂದಿನ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದೆ. ಇದರೊಂದಿಗೆ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಕೂಡ ಕಣಕ್ಕಿಳಿಯುವುದು ಖಚಿತವಾಗಿದೆ.
