‘ಕಲ್ಕಿ 2898 AD’ ಚಿತ್ರಕ್ಕೆ ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೆದ ಕಮಲ್ ಹಾಸನ್

‘ಕಲ್ಕಿ 2898 AD’ ಚಿತ್ರಕ್ಕೆ ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೆದ ಕಮಲ್ ಹಾಸನ್

2024ರ ಬ್ಲಾಕ್‌ ಬಸ್ಟರ್ ಸಿನಿಮಾ ‘ಕಲ್ಕಿ 2898 AD’ (Kalki 2898 AD) ಕೇವಲ ದೃಶ್ಯ ವೈಭವದಿಂದ ಮಾತ್ರವಲ್ಲದೇ, ಅದರಲ್ಲಿ ನಟಿಸಿದ ಕಲಾವಿದರ ಸಂಭಾವನೆಯ ವಿಚಾರವಾಗಿಯೂ ಈಗ ಸುದ್ದಿಯಲ್ಲಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅವರಂತಹ ದಿಗ್ಗಜರ ನಡುವೆ, ತಮಿಳಿನ ಸ್ಟಾರ್ ಹೀರೋ ಕಮಲ್ ಹಾಸನ್ (Kamal Haasan) ಅವರು ಪಡೆದ ಸಂಭಾವನೆ ಎಷ್ಟು ಎಂಬ ಕುತೂಹಲಕ್ಕೆ ಈಗ ಅವರ ಆಪ್ತ ಗೆಳೆಯ ಯುಗಿ ಸೇತು ತೆರೆ ಎಳೆದಿದ್ದಾರೆ. ಕಮಲ್ ಹಾಸನ್ ಅವರ ದಶಕಗಳ ಕಾಲದ ಗೆಳೆಯ ಮತ್ತು ನಟ ಯುಗಿ ಸೇತು (Yugi Sethu) ಇತ್ತೀಚಿನ ಸಂದರ್ಶನವೊಂದರಲ್ಲಿ ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಈ ಚಿತ್ರಕ್ಕಾಗಿ ಕಮಲ್ ಹಾಸನ್ ಸುಮಾರು 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಕಮಲ್ ಹಾಸನ್ ಅವರ ಸಂಭಾವನೆ ಕುರಿತು ಸ್ವಾರಸ್ಯಕರ ಘಟನೆಯನ್ನು ಯುಗಿ ಸೇತು ಹಂಚಿಕೊಂಡಿದ್ದಾರೆ. ‘ನಾನು ಚಿತ್ರದ ನಿರ್ಮಾಪಕ ಸಿ. ಅಶ್ವಿನಿ ದತ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, ನನ್ನ ಗೆಳೆಯನನ್ನು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿದ್ದೀರಿ ಎಂದು ಹೇಳಿದೆ. ಆಗ ದತ್ ಅವರು ನನ್ನನ್ನು ತಿದ್ದುತ್ತಾ, ಕಮಲ್ ಶೂಟಿಂಗ್ ಮಾಡಿದ್ದು 20 ದಿನಗಳಲ್ಲ, ಕೇವಲ 10 ದಿನಗಳು ಮಾತ್ರ ಎಂದರು. ಅಂದರೆ ಅವರ ಲೆಕ್ಕಾಚಾರದ ಪ್ರಕಾರ, ಕಮಲ್ ಹಾಸನ್ ದಿನಕ್ಕೆ ಸುಮಾರು 2 ಮಿಲಿಯನ್ ಡಾಲರ್ (ಅಂದಾಜು 18 ಕೋಟಿ ರೂಪಾಯಿಗೂ ಹೆಚ್ಚು) ಸಂಭಾವನೆ ಪಡೆದಂತಾಯಿತು’ ಎಂದು ಯುಗಿ ಸೇತು ಹೇಳಿದ್ದಾರೆ.

‘ಕಲ್ಕಿ 2898 AD’ ಚಿತ್ರದಲ್ಲಿ ಕಮಲ್ ಹಾಸನ್ ಅವರು ‘ಸುಪ್ರೀಂ ಯಾಸ್ಕಿನ್’ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಅವರ ಸ್ಕ್ರೀನ್ ಟೈಮ್ ಕಡಿಮೆ ಇದ್ದರೂ, ಅವರ ಪಾತ್ರ ಸೃಷ್ಟಿಸಿದ ಇಂಪ್ಯಾಕ್ಟ್ ಮಾತ್ರ ದೊಡ್ಡದಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಅವರ ಪಾತ್ರದ ಭೀಕರತೆಯು ಎರಡನೇ ಭಾಗದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ.

ಇದನ್ನು ಕಮಲ್ ಹಾಸನ್ ಅವರ ‘ಸೆಕೆಂಡ್ ಇನ್ನಿಂಗ್ಸ್’ ಎನ್ನಬಹುದು. 2022ರಲ್ಲಿ ತೆರೆಕಂಡ ‘ವಿಕ್ರಮ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಕಮಲ್ ಹಾಸನ್ ಅವರ ಬೇಡಿಕೆ ಗಗನಕ್ಕೇರಿದೆ. 150 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ‘ವಿಕ್ರಮ್’ ಚಿತ್ರ 400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ‘ಕಲ್ಕಿ’ ಸರಣಿಯ ಮೂಲಕ ಅವರು ಮತ್ತೆ ಭಾರತೀಯ ಚಿತ್ರರಂಗದ ದುಬಾರಿ ನಟನಾಗಿ ಹೊರಹೊಮ್ಮುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಬರಲಿದೆ ‘ಅಮರನ್’ ಕಾಂಬಿನೇಷನ್; ‘ಸಿಯೋನ್’ ಚಿತ್ರಕ್ಕೆ ಕಮಲ್ ಬಂಡವಾಳ

ಸದ್ಯಕ್ಕೆ ‘ಕಲ್ಕಿ’ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಹಬ್ಬದಂತಿದೆ. ಯುಗಿ ಸೇತು ಅವರು ಸಂಭಾವನೆ ಬಗ್ಗೆ ಮಾತನಾಡಿದ್ದಕ್ಕೆ ಮುಂದಿನ ದಿನಗಳಲ್ಲಿ ಕಮಲ್ ಹಾಸನ್ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರ್ಚಕ ಮಾಂಸ ತಿನ್ನುವ ಫೋಟೋ ವೈರಲ್​: ದೇವಾಲಯದಿಂದ ಹೊರ ಎಳೆದು ಥಳಿಸಿದ ಗುಂಪು

ಕಾನ್ಪುರ, ಮಾ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್‌ವೊಂದರಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ನಡೆದಿದೆ.

ಕಾನ್ಪುರದ ಭೂತೇಶ್ವರ ದೇವಾಲಯದ ಅರ್ಚಕ ಪ್ರಶಾಂತ್ ಗಿರಿ  ಮೇಲೆ ಸುಮಾರು 50 ರಿಂದ 60 ಜನರ ಗುಂಪೊಂದು ದಾಳಿ ನಡೆಸಿದೆ. ಅರ್ಚಕರನ್ನು ಅವರ ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ರಸ್ತೆಯಲ್ಲಿ ಧರಧರನೆ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ವೇಳೆ ದೇವಾಲಯದಲ್ಲಿದ್ದ ಕೆಲವು ಮಹಿಳೆಯರು ಅರ್ಚಕರನ್ನು ಕಾಪಾಡಲು ಮುಂದಾದರು. ಅರ್ಚಕರ ಸುತ್ತಲೂ ಕುಳಿತು ಗುರಾಣಿಯಂತೆ ರಕ್ಷಣೆ ನೀಡಲು ಪ್ರಯತ್ನಿಸಿದರು. ಆದರೆ, ಉದ್ರಿಕ್ತ ಗುಂಪು ಅರ್ಚಕರನ್ನು ಉಳಿಸಲು ಬಂದ ಮಹಿಳೆಯರ ಮೇಲೆ ಕೂಡ ಹಲ್ಲೆ ನಡೆಸಿ, ಅವರನ್ನು ದೂಡಿ ಹಾಕಿ ಅರ್ಚಕನಿಗೆ ಹೊಡೆದಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಪಿನಿಂದ ಅರ್ಚಕರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ಅಡುಗೆ ಮಾಡುವ ಮಹಿಳಾ ಕುಕ್​​ ಜತೆ ಹೆಡ್​​ ಮಾಸ್ಟರ್​ ಕುಚ್ ಕುಚ್: ಗ್ರಾಮಸ್ಥರಿಂದ ಬಿತ್ತು ಗೂಸ

ಗಾಯಗೊಂಡಿರುವ ಅರ್ಚಕರು ಈ ಬಗ್ಗೆ ದೂರು ನೀಡಿದ್ದು, “ತನ್ನನ್ನು ದೇವಾಲಯದಿಂದ ಹೊರಹಾಕಲು ನಡೆದ ಪಿತೂರಿ ಇದಾಗಿದೆ. ರೆಸ್ಟೋರೆಂಟ್‌ವೊಂದರಲ್ಲಿ ನಾನು ಕುಳಿತಿದ್ದ ಹಳೆಯ ಫೋಟೋವನ್ನು ಎಡಿಟ್ ಮಾಡಿ, ಅಲ್ಲಿ ಮಾಂಸಾಹಾರ ಇರುವಂತೆ ಬಿಂಬಿಸಲಾಗಿದೆ” ಎಂದು ಆರೋಪಿಸಿದ್ದಾರೆ. ಪೊಲೀಸರು ವೈರಲ್ ವಿಡಿಯೋ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ಕಳ್ಳತನ: ಅಂತಾರಾಜ್ಯ ಗ್ಯಾಂಗ್​ ಪೊಲೀಸ್​​ ಬಲೆಗೆ

ಬೆಳಗಾವಿ, ಮಾರ್ಚ್​​ 09: ಕದ್ದ ವಾಹನಗಳನ್ನೇ ಬಳಸಿ ಮತ್ತೊಂದು ವಾಹನ ಕಳವು ಮಾಡುತ್ತಿದ್ದ ಖತರ್ನಾಕ್​​ ಅಂತಾರಾಜ್ಯ ಕಳ್ಳರ ಗ್ಯಾಂಗ್​​ನ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ಸು ಕಂಡಿದ್ದಾರೆ. ವಾಹನವೊಂದರ ಕಳ್ಳತನ ಪ್ರಕರಣದ ಬೆನ್ನು ಬಿದ್ದ ಖಾಕಿ ಬರೋಬ್ಬರಿ 1 ಕೋಟಿ ಮೌಲ್ಯದ 21 ವಾಹನಗಳನ್ನ ಜಪ್ತಿ ಮಾಡಿದೆ. ಒಟ್ಟು 8 ಜನ ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಉಳಿದ ಮೂವರು ಆರೋಪಿಗಳಿಗಾಗಿಯೂ ಬಲೆ ಬೀಸಿದೆ.

ಯುಸೂಫ್ ಖಾನ್, ಜಾಕೀರ್ ಹುಸೇನ್, ಶಫೀಕ್ ಅಹಮ್ಮದ್, ಆಜಾದ್ ಹಾಗೂ ಬಶೀರ್ ಅಹಮ್ಮದ್ ಬಂಧಿತ ಆರೋಪಿಗಳು. ಇವರು ಕರ್ನಾಟಕ ಮತ್ತು ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ ಮೂಲದವರು ಎಂಬುದು ಗೊತ್ತಾಗಿದೆ. ಆರೋಪಿಗಳಿಂದ 8 ಮಿನಿ ಗೂಡ್ಸ್​​ ವಾಹನ, ರಾಯಲ್​​ ಎನ್​​ಫೀಲ್ಡ್ ಮತ್ತು ಹೋಂಡಾ ಸೇರಿ ಒಟ್ಟು 8​​ ಬೈಕ್​ಗಳು, 5 ಸ್ಕೂಟರ್​​ಗಳನ್ನು ಜಪ್ತಿ ಮಾಡಲಾಗಿದೆ. ಒಂದು ವಾಹನ ಕಳ್ಳತನವಾಗಿದೆ ಅಂತಾ ಹುಡುಕಾಟ ಶುರು ಮಾಡಿದ್ದ ಪೊಲೀಸರ ಬಲೆಗೆ ದೊಡ್ಡ ತಿಮಿಂಗಲವೇ ಬಿದ್ದಿದೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಮೂರು ತಿಂಗಳ ಹಿಂದೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಒಂದು ಮಿನಿ ಗೂಡ್ಸ್ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಬೈಕ್ ಮೇಲೆ ಬಂದಿದ್ದ ನಾಲ್ಕು ಜನ ಮಿನಿ ಗೂಡ್ಸ್ ವಾಹನ ಕದ್ದು ಪರಾರಿಯಾಗಿರೋದು ಗೊತ್ತಾಗಿತ್ತು. ಆರೋಪಿಗಳು ಬಂದಿದ್ದ ಬೈಕ್ ನಂಬರ್​​ನ ಮಾಹಿತಿಗಾಗಿ ಪೊಲೀಸರು ಬೆನ್ನುಬಿದ್ದಾಗ ಆ ಬೈಕ್ ಕೂಡ ಕಳ್ಳತನ ಆಗಿರೋದು ಎನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಗಳು ಕದ್ದ ವಾಹನಗಳನ್ನೇ ಬಳಸಿಕೊಂಡು ಮತ್ತೊಂದು ವಾಹನ ಕಳ್ಳತನ ಮಾಡುತ್ತಿರುವ ವಿಚಾರ ತಿಳಿದ ಪೊಲೀಸರು, ಸಿಸಿಟಿವಿ ಹಾಗೂ ಟೆಕ್ನಿಕಲ್ ಎವಿಡನ್ಸ್ ಆಧಾರದ ಮೇಲೆ ಕೊನೆಗೂ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾಗಿದ್ದ ತಮ್ಮ ವಾಹನಗಳು ಮರಳಿ ಸಿಕ್ಕ ಹಿನ್ನೆಲೆ ಅವುಗಳ ಮಾಲೀಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಸಾಧನೆ ಮಾಡಿದ ಮೊದಲ ಭಾರತೀಯ ಕೋಚ್; ಇತಿಹಾಸ ನಿರ್ಮಿಸಿದ ಗೌತಮ್ ಗಂಭೀರ್

Source link

Video: ಬಿಳಿ ಮಹಿಳೆಯನ್ನು ಕಂಡೊಡನೆ ಅಳುತ್ತಾ ಓಡಲು ಶುರು ಮಾಡಿದ ಆಫ್ರಿಕನ್ ಪುಟಾಣಿಗಳು

ಪುಟ್ಟ ಮಕ್ಕಳ (little kids) ತುಂಟಾಟಗಳು ಖುಷಿ ಕೊಡುವುದು ಸಹಜ. ಅದೇ ಮಕ್ಕಳು ಹಠ ಮಾಡಿದಾಗ, ಒಂದೇ ಸಮನೆ ಅಳುತ್ತಾ ನಿಂತರೆ ಕಿರಿಕಿರಿ ಆಗುತ್ತದೆ. ಇನ್ನು, ಈ  ಮಕ್ಕಳಂತೂ ಗುರುತು ಪರಿಚಯವಿಲ್ಲದ ಹೊಸ ಮುಖಗಳನ್ನು ಕಂಡಾಗ ಅವರತ್ತ ತಿರುಗಿಯೂ ನೋಡಲ್ಲ. ಕೆಲ ಮಕ್ಕಳು ಮುಖ ನೋಡಿಯೇ ಅಳಲು ಶುರು ಮಾಡ್ತಾರೆ. ಈ ಆಫ್ರಿಕನ್ ಮಕ್ಕಳದ್ದು (African kids) ಅದೇ ಕಥೆ. ಹೌದು, ಬಿಳಿ ಮಹಿಳೆಯನ್ನು ಕಂಡೊಡನೆ ಈ ಮಕ್ಕಳು ಭಯಗೊಂಡಿದ್ದು, ಹೆದರಿ ಓಡಲು ಶುರು ಮಾಡಿದ್ದಾರೆ. ನಗು ತರಿಸುವ ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Akoma 87.9 FM ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯನ್ನು ಕಂಡಾಗ ಆಫ್ರಿಕನ್ ಪುಟಾಣಿ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ಸೆರೆ ಹಿಡಿಯಲಾಗಿದೆ. ಬಿಳಿ ಮಹಿಳೆಯೊಬ್ಬಳು ಆಫ್ರಿಕನ್‌ ಮಕ್ಕಳ ಮುಂದೆ ಬಂತು ನಿಂತಿದ್ದಾಳೆ. ಮೊದಲ ಬಾರಿಗೆ ಬಿಳಿ ಮಹಿಳೆಯನ್ನು ಕಂಡೊಡನೆ ಈ ಪುಟಾಣಿಗಳಿಗೆ ಏನು ಅನಿಸಿತು ತಿಳಿದಿಲ್ಲ.. ಕೆಲ ಮಕ್ಕಳು ಅಳಲು ಶುರು ಮಾಡಿದರೆ, ಇನ್ನು ಕೆಲ ಪುಟಾಣಿಗಳು ಹೆದರಿ ಓಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ತಮಾಷೆಯಾಗಿದೆ ಎಂದಿದ್ದಾರೆ. ಮತ್ತೊಬ್ಬರು, ನನ್ನ ಅಜ್ಜ ಅಜ್ಜಿಯೂ ಹೀಗೆ ಓಡುತ್ತಿದ್ದರು. ಆದರೆ ಈಗ ಆಗಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪಾಪ ಆ ಮಕ್ಕಳು ಎಷ್ಟು ಹೆದರಿಕೊಂಡಿದ್ದಾರೇನೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

T20 World Cup Prize Money: ಚಾಂಪಿಯನ್ ಭಾರತಕ್ಕೆ ಸಿಕ್ಕಿದೆಷ್ಟು? ಉಳಿದ 19 ತಂಡಗಳಿಗೂ ಕೋಟಿ ಹಣ

Source link

ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಜನಪ್ರಿಯ ಯೂಟ್ಯೂಬರ್ ಅನುರಾಗ್ ದೊಭಾಲ್ (Anurag Dobhal) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಹಿಂದಿ ಬಿಗ್ ಬಾಸ್ ಸೀಸನ್ 17’ (Bigg Boss 17) ಶೋನಲ್ಲಿ ಸ್ಪರ್ಧಿಸಿದ್ದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಶನಿವಾರ (ಮಾರ್ಚ್ 7) ರಾತ್ರಿ 10 ಗಂಟೆ ಸುಮಾರಿಗೆ ಕಾರು ಓಡಿಸುತ್ತಾ ಲೈವ್ (UK07 Rider livestream) ಬಂದಿದ್ದ ಅನುರಾಗ್ ದೊಭಾಲ್ ಅವರು ‘ಇದು ಕೊನೆಯೇ ವಿದಾಯ’ ಎಂದು ಹೇಳಿ ಡಿವೈಡರ್​ಗೆ ಡಿಕ್ಕಿ ಹೊಡೆದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಾರು ಓಡಿಸುವಾಗ ಅನುರಾಗ್ ದೊಭಾಲ್ ಅವರು ಬಹಳ ಎಮೋಷನಲ್ ಆಗಿದ್ದರು. ತಂದೆ-ತಾಯಿ ಮತ್ತು ಪತ್ನಿಯಿಂದ ತಮಗೆ ಪ್ರೀತಿ ಸಿಕ್ಕಿಲ್ಲ ಎನ್ನುತ್ತಾ ಅವರು ಕಣ್ಣೀರು ಹಾಕಿದರು. ಇದು ಕೊನೆಯ ವ್ಲಾಗ್ ಎಂದು ಕೂಡ ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ದಯವಿಟ್ಟು ಕಾರು ನಿಲ್ಲಿಸಿ ಮಾತನಾಡಿ ಎಂದು ಅಭಿಮಾನಿಗಳು ಮನವಿ ಮಾಡಿದರೂ ಕೂಡ ಅನುರಾಗ್ ದೊಭಾಲ್ ನಿಲ್ಲಿಸಲೇ ಇಲ್ಲ.

ಬಹುಕಾಲದ ಗೆಳತಿ ರಿತಿಕಾ ಚೌಹಾಣ್ ಜೊತೆ ಅನುರಾಗ್ ದೊಭಾಲ್ ಮದುವೆ ಆಗಿದ್ದರು. ಆದರೆ ಜಾತಿಯ ಕಾರಣದಿಂದ ಅನುರಾಗ್ ಮನೆಯವರು ಈ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ಇದರಿಂದಾಗಿ ಅವರು ಬಹಳ ನೊಂದಿದ್ದರು. ಹಣ ಮತ್ತು ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಅನುರಾಗ್ ಅವರ ತಂದೆ-ತಾಯಿ ಮತ್ತು ಸಹೋದರ ಪಡೆದುಕೊಂಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರು ಖಿನ್ನತೆಗೆ ಜಾರಿದ್ದರು.

ಅನುರಾಗ್ ದೊಭಾಲ್ ಅವರು 150 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸುತ್ತಿದ್ದರು. ಸಾಯಲೇ ಬೇಕು ಎಂಬುದು ಅವರ ನಿರ್ಧಾರ ಆಗಿತ್ತು. ಕಣ್ಣೀರು ಹಾಕುತ್ತಲೇ ಅವರು ತಮ್ಮ ನೋವಿನ ಕಥೆಯನ್ನು ವಿವರಿಸಿದರು. ‘ಮುಂದಿನ ಜನ್ಮದಲ್ಲಿ ನಾನು ಮರಳಿ ಬಂದಾಗ ದಯವಿಟ್ಟು ನನಗೆ ಪ್ರೀತಿ ನೀಡಿ ಅಮ್ಮ.. ನನಗೆ ಪ್ರೀತಿಯ ಅವಶ್ಯಕತೆ ಇತ್ತು’ ಎಂದು ಲೈವ್​​ನಲ್ಲಿ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಬೇಕಂತಲೇ ಕಾರನ್ನು ಡಿವೈಡರ್​​ಗೆ ಡಿಕ್ಕಿ ಹೊಡೆಸಿದಾಗ 80 ಸಾವಿರ ಜನರು ಲೈವ್ ವಿಡಿಯೋ ವೀಕ್ಷಿಸುತ್ತಿದ್ದರು. ದೆಹಲಿ-ಮೀರತ್ ಹೈವೇನಲ್ಲಿ ಅಪಘಾತ ಸಂಭವಿಸಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅನುರಾಗ್ ಮ್ಯಾನೇಜರ್ ರೋಹಿತ್ ಪಾಂಡೆ ಅವರು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಲೆಯಲ್ಲಿ ಅಡುಗೆ ಮಾಡುವ ಮಹಿಳಾ ಕುಕ್​​ ಜತೆ ಹೆಡ್​​ ಮಾಸ್ಟರ್​ ಕುಚ್ ಕುಚ್: ಗ್ರಾಮಸ್ಥರಿಂದ ಬಿತ್ತು ಗೂಸ

ರೂರ್ಕೆಲಾ, ಮಾ.9: ಶಾಲೆ ಎಂದರೆ ದೇವಾಲಯ ಇದ್ದಂತೆ, ಇಲ್ಲಿ ಶಿಕ್ಷಕರು ಏನು ಕಲಿಸುತ್ತಾರೆ ಅದನ್ನೇ ಮಕ್ಕಳು ಕಲಿಯುತ್ತಾರೆ. ಮನೆಯವರು ಕೂಡ ಶಿಕ್ಷಕರ ಮೇಲಿ ನಂಬಿಕೆಯಿಂದ ಶಾಲೆಗೆ ಕಳುಹಿಸುತ್ತಾರೆ. ಆದರೆ ಶಿಕ್ಷಕರೇ ಕೆಟ್ಟಾಗಿ ನಡೆದುಕೊಂಡರೆ ಮಕ್ಕಳಿಗೆ ಏನು ಕಲಿಸುತ್ತಾರೆ. ಇದೀಗ ಒಡಿಶಾದ ರೂರ್ಕೆಲಾದಲ್ಲಿ ಹೆಡ್​​ ಮಾಸ್ಟರ್ ಶಾಲೆಯಲ್ಲಿ ಕೆಲಸ ಮಾಡುವ​​ ಮಹಿಳೆಯ ಜತೆಗೆ ಸಂಬಂಧ ಇಟ್ಟುಕೊಂಡಿರುವ ಘಟನೆಯೊಂದು ನಡೆದಿದೆ. ಅಡುಗೆ ಸಹಾಯಕಿ ಜೊತೆ ಅಕ್ರಮ ಸಂಬಂಧ ಬೆಳೆಸಿ ಸಿಕ್ಕಿಬಿದ್ದ ಘಟನೆ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ನಡೆದಿದೆ. ಆಕ್ರೋಶಗೊಂಡ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಮುಖ್ಯೋಪಾಧ್ಯಾಯನಿಗೆ ಚಪ್ಪಲಿ ಹಾರ ಹಾಕಿ ಊರ ತುಂಬಾ ಪರೇಡ್ ಮಾಡಿಸಿದ್ದಾರೆ.

ಈ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ ಅದೇ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷನ ಪತ್ನಿಯಾಗಿದ್ದಾರೆ. ಮುಖ್ಯೋಪಾಧ್ಯಾಯ ರೋಹಿತ್ ಕುಮಾರ್ ರೇ (45) ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ (ಅಧ್ಯಕ್ಷ) ಆರೋಪಿಸಿದ್ದಾರೆ. ಬಿಸಿಯೂಟದ ನಂತರ ಮುಖ್ಯೋಪಾಧ್ಯಾಯ ಮತ್ತು ಮಹಿಳಾ ಕುಕ್ ಒಂದೇ ಕೋಣೆಯಲ್ಲಿ ಇರುವುದನ್ನು ಗಮನಿಸಿದ ಅಧ್ಯಕ್ಷರು ಮತ್ತು ಗ್ರಾಮಸ್ಥರ ಗುಂಪು ಏಕಾಏಕಿ ದಾಳಿ ನಡೆಸಿದೆ. “ಮಕ್ಕಳಿಗೆ ಪಾಠ ಮಾಡುವ ಬದಲು ನನ್ನ ಪತ್ನಿಗೆ ಮಕ್ಕಳಾಟ ಕಲಿಸುತ್ತಿದ್ದಾನೆ” ಎಂದು ಅಧ್ಯಕ್ಷರು ಗರಂ ಆಗಿದ್ದಾರೆ.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಆಕ್ರೋಶಿತ ಗುಂಪು ಹೆಡ್‌ಮಾಸ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದೆ. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಮಕ್ಕಳು ಭಯಭೀತರಾಗಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ರೋಹಿತ್ ಕುಮಾರ್ ರೇ ಈ ಹಿಂದೆ ಕೂಡ ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು ಎಂಬ ವಿಷಯ ತಿಳಿದುಬಂದಿದೆ. ಈ ಹಿಂದೆ ಅಸಿಸ್ಟೆಂಟ್ ಟೀಚರ್ ಜೊತೆ ಸರಸವಾಡಿ ಅರೆಸ್ಟ್ ಆಗಿದ್ದ ಈತ, ಶಿಕ್ಷೆ ಅನುಭವಿಸಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದ. ಆದರೂ ಹಳೇ ಬುದ್ಧಿ ಬಿಡದೆ ಈಗ ಅಧ್ಯಕ್ಷನ ಪತ್ನಿಯ ಜೊತೆಗೇ ಸರಸಕ್ಕಿಳಿದು ಧರ್ಮದೇಟು ತಿಂದಿದ್ದಾನೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳು ಮುಖ್ಯೋಪಾಧ್ಯಾಯನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ನಡೆಸಿದ ಆರೋಪದ ಮೇಲೆ ಶಾಲಾ ಅಧ್ಯಕ್ಷ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೋಕ್ಸೋ ಪ್ರಕರಣ: ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಯಾದಗಿರಿ (ಮಾರ್ಚ್ 09): ಅಪ್ರಾಪ್ತ ಬಾಲಕಿಯೊಂದಿಗೆಅನುಚಿತ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ನಿರೀಕ್ಷಣಾ ಜಾಮೀನು ಅರ್ಜಿ (Bail Plea)  ವಜಾಗೊಂಡಿದೆ. ತಮ್ಮ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ನಡೆಸಿದ್ದ ಯಾದಗಿರಿ (Yadagir ) ಜಿಲ್ಲಾ ಪ್ರಧಾನ, ವಿಶೇಷ ಸತ್ರ ನ್ಯಾಯಾಲಯದ   ನ್ಯಾಯಾಧೀಶರಾದ ಮರಳುಸಿದ್ದರಾಧ್ಯ ಅವರು ಇಂದು (ಮಾರ್ಚ್ 09) ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

Source link

‘ಬಾಸ್’ ಸಿನಿಮಾದಲ್ಲಿ ರೇಣುಕಾಸ್ವಾಮಿ ಸಾವಿನ ಕಥೆ? ಸ್ಪಷ್ಟನೆ ನೀಡಿದ ನಿರ್ದೇಶಕ

ತನುಶ್ ಶಿವಣ್ಣ ನಟನೆಯ ‘ಬಾಸ್’ ಸಿನಿಮಾದ ಟೀಸರ್ (Boss Movie Teaser) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ವಿ. ಲವ ಅವರು ನಿರ್ದೇಶನ ಮಾಡಿದ್ದಾರೆ. ಟೀಸರ್ ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ಕಥೆಯ ಎಳೆ ನೋಡಿದರೆ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಆ ಬಗ್ಗೆ ನಿರ್ದೇಶಕ ಲವ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ದರ್ಶನ್ (Darshan) ಪ್ರಕರಣದ ಕುರಿತಾದ ಸಿನಿಮಾ ಅಲ್ಲ ಎಂದು ಅವರು ಹೇಳಿದ್ದಾರೆ. ‘ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಅದರ ಬಗ್ಗೆ ಸಿನಿಮಾ ಮಾಡಬಾರದು. ನಾನು ದರ್ಶನ್ ಅವರ ಕಥೆಯನ್ನು ಸಿನಿಮಾ ಮಾಡುತ್ತಿಲ್ಲ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳನ್ನು ಒಟ್ಟಿಗೆ ಸೇರಿಸಿ ಮಾಡಿದ ಸಿನಿಮಾ ಇದು. ನಾನು ಕೂಡ ದರ್ಶನ್ ಅವರ ಅಭಿಮಾನಿ. ಹಾಗಾಗಿ ಫ್ಯಾನ್ಸ್ ನಮಗೆ ತೊಂದ್ರೆ ಕೊಡುವ ಪ್ರಮೇಯವೇ ಬರಲ್ಲ’ ಎಂದು ಲವ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version