ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ? – Kannada News | India’s economy size lower than UK and Japan in 2025, as per IMF data, Know why India slipped on place

ನವದೆಹಲಿ, ಏಪ್ರಿಲ್ 15: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು (Indian economy) ಹೊಂದಿರುವ ದೇಶ. ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಮತ್ತು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದೌಡಾಯಿಸಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಪ್ರಕಾರ 2025ರಲ್ಲಿ ಭಾರತದ ಆರ್ಥಿಕತೆ 3.92 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರುತ್ತದೆ. ಆ ವರ್ಷ ಯುಕೆ ಅಥವಾ ಬ್ರಿಟನ್​ನದ್ದು 4 ಟ್ರಿಲಿಯನ್ ಡಾಲರ್ ಜಿಡಿಪಿ ಇದೆ. ಜಪಾನ್ 4.44 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ ಹೊಂದಿದೆ.

ಹಿಂದಿನ ವರ್ಷದಲ್ಲಿ (2024) ಭಾರತದ ಜಿಡಿಪಿಯು ಬ್ರಿಟನ್​ನದಕ್ಕಿಂತ ಹೆಚ್ಚಿತ್ತು. ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ, 2025ರಲ್ಲಿ ಭಾರತ ಒಂದು ಸ್ಥಾನ ಕುಸಿದಿದ್ದು ಹೇಗೆ? ಈ ಒಂದು ವರ್ಷದಲ್ಲಿ ಭಾರತದ ಬೆಳವಣಿಗೆ ವೇಗವೇನೂ ಕಡಿಮೆ ಆಗಲಿಲ್ಲ. ಬ್ರಿಟನ್​ನ ವೇಗವೇನೂ ಭಾರತದ ಸಮಕ್ಕೂ ಇರಲಿಲ್ಲ. ಆದರೂ ಕೂಡ ಭಾರತ ಒಂದು ಸ್ಥಾನ ಕಡಿಮೆಗೊಂಡಿದೆ. ಅದಕ್ಕೆ ಸಕಾರಣಗಳೂ ಇವೆ.

ಇದನ್ನೂ ಓದಿ: ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ

2025ರ ವರ್ಷದಲ್ಲಿ ಭಾರತ ರುಪಾಯಿ ಲೆಕ್ಕದಲ್ಲಿ ಶೇ. 9ರಷ್ಟು ನಾಮಿನಲ್ ಗ್ರೋತ್ ದಾಖಲಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರಕ್ಕೆ ಹೊಸ ಸರಣಿಯನ್ನು ಆಧಾರವಾಗಿರಿಸಲಾಗಿದೆ. ಇದರಿಂದ ಜಿಡಿಜಿ ಲೆಕ್ಕಾಚಾರದಲ್ಲಿ ಬದಲಾವಣೆಗಳಾಗಿ, ಜಿಡಿಪಿ ಕಡಿಮೆಗೊಂಡಿದೆ. ಇದು ಒಂದು ಕಾರಣ. ಹಾಗೆಯೇ, ಡಾಲರ್ ಎದುರು ರುಪಾಯಿ ಮೌಲ್ಯ ಬಹಳಷ್ಟು ಕಡಿಮೆಗೊಂಡಿದ್ದೂ ಜಿಡಿಪಿಗೆ ಹಿನ್ನಡೆ ತಂದಿದೆ. 2024ರಲ್ಲಿ ಒಂದು ಡಾಲರ್​ಗೆ 84.6 ರುಪಾಯಿ ಇತ್ತು. 2025ರಲ್ಲಿ ಅದು 88.5ಕ್ಕೆ ಇಳಿಯಿತು. ಜಿಡಿಪಿಯು ಡಾಲರ್ ಲೆಕ್ಕದಲ್ಲಿ ಇರುವುದರಿಂದ ಒಟ್ಟಾರೆ ಜಿಡಿಪಿ ಗಾತ್ರ ಕುಸಿದಿದೆ.

2026ರಲ್ಲಿ ಭಾರತದ ಸ್ಥಾನ ಏರುತ್ತಾ?

ಐಎಂಎಫ್ ಅಂದಾಜು ಪ್ರಕಾರ 2026ರಲ್ಲೂ ಭಾರತದ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅತಿದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ 2027ರಲ್ಲಿ ಭಾರತ ಐದನೇ ಸ್ಥಾಕ್ಕೆ ಏರಬಹುದು. 2028ಕ್ಕೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಬಹುದು.

ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು

2027ರಲ್ಲಿ ಬ್ರಿಟನ್​ನ ಜಿಡಿಪಿ 4.47 ಟ್ರಿಲಿಯನ್ ಡಾಲರ್ ಇರಲಿದ್ದು, ಭಾರತದ ಜಿಡಿಪಿ 4.58 ಟ್ರಿಲಿಯನ್ ಡಾಲರ್​ಗೆ ಏರಬಹುದು. 2028ರಲ್ಲಿ ಜಪಾನ್ ಜಿಡಿಪಿ 4.75 ಟ್ರಿಲಿಯನ್ ಡಾಲರ್ ಇದ್ದರೆ, ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು.

ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಟಾಪ್-3ಯಲ್ಲಿ ಮುಂದುವರಿಯಲಿವೆ. 2030ಕ್ಕೆ ಭಾರತದ ಜಿಡಿಪಿ 6 ಟ್ರಿಲಿಯನ್ ಡಾಲರ್ ಗಡಿದಾಟಲಿದ್ದು, ಜರ್ಮನಿಯ ಆರ್ಥಿಕತೆಯ ಗಾತ್ರಕ್ಕೆ ಸಮೀಪ ಹೋಗಬಹುದು. 2030ರ ನಂತರ ಭಾರತ ಜರ್ಮನಿಯನ್ನು ಮೀರಿಸಿ ಬೆಳೆಯುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

RCB vs LSG Playing XI: ಲಕ್ನೋ ಮೊದಲು ಬ್ಯಾಟಿಂಗ್‌; ಆರ್​ಸಿಬಿ ಪ್ಲೇಯಿಂಗ್ 11 ನಲ್ಲಿ ಕೊಹ್ಲಿ ಇಲ್ಲ..! – Kannada News | RCB vs LSG Playing XI Royal Challengers Bengaluru vs Lucknow Super Giants Today IPL 2026 match Confirmed playing 11 details with name in Kannada

ಐಪಿಎಲ್​ 2026 ರ (IPL 2026) 20ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಅವರ ನೆಲದಲ್ಲಿ 18 ರನ್​ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೆ ತನ್ನ ತವರು ನೆಲದಲ್ಲಿ ಕಣಕ್ಕಿಳಿದಿದೆ. ಮೊದಲ ಎರಡು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿದ್ದ ಆರ್​ಸಿಬಿ ಆ ಬಳಿಕ ಎದುರಾಳಿ ತಂಡಗಳ ತವರು ನೆಲದಲ್ಲಿ ಆಡಲು ಅಲ್ಲಿಗೆ ಪ್ರಯಾಣ ಬೆಳೆಸಿತ್ತು. ಇದೀಗ ಆರ್​ಸಿಬಿ (RCB) ತನ್ನ ಐದನೇ ಪಂದ್ಯವನ್ನು ತನ್ನ ತವರು ನೆಲದಲ್ಲಿ ಆಡುತ್ತಿದೆ. ಲೀಗ್​ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಆರ್​ಸಿಬಿ ಮೂರು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಈ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೇರುವ ಇರಾದೆಯಲ್ಲಿ ರಜತ್ ಪಡೆ ಇದೆ.

ಟಾಸ್ ಗೆದ್ದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಕಳೆದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ. ಅಂದರೆ ಕೊಹ್ಲಿ ಬ್ಯಾಟಿಂಗ್‌ ಮಾತ್ರ ಮಾಡಲಿದ್ದಾರೆ. ಉಳಿದಂತೆ ಆರ್​ಸಿಬಿ ತಂಡದಲ್ಲಿ 1 ಬದಲಾವಣೆಯಾಗಿದ್ದು, ಜೆಕೋಬ್ ಡಫ್ಫಿ ಬದಲಿಗೆ ಜೋಸ್ ಹೇಜಲ್‌ವುಡ್ ತಂಡದಲ್ಲಿ ಆಡಲಿದ್ದಾರೆ. ಇತ್ತ ಲಕ್ನೋ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮುಖಾಮುಖಿ ದಾಖಲೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇದುವರೆಗೆ ಆರು ಪಂದ್ಯಗಳನ್ನು ಆಡಿವೆ. ಆರ್‌ಸಿಬಿ ಈ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಎರಡರಲ್ಲಿ ಗೆದ್ದಿದೆ. ಆದಾಗ್ಯೂ, ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಎರಡೂ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿದೆ. ಹೀಗಾಗಿ ಈ ಪಂದ್ಯ ಆರ್‌ಸಿಬಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

RCB vs LSG IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

ಆಡುವ ಹನ್ನೊಂದರ ಬಳಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್​​ವುಡ್, ಮತ್ತು ಸುಯಾಶ್ ಶರ್ಮಾ.

ಲಕ್ನೋ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:09 pm, Wed, 15 April 26

Source link

ರಾತ್ರಿ ಸಮಯದಲ್ಲಿ ಪದೇಪದೇ ಹಸಿವಾಗುವುದಕ್ಕೆ ಕಾರಣವೇನು? ಇದು ಕಾಯಿಲೆಯ ಲಕ್ಷಣವೇ? – Kannada News | Late Night Cravings? Causes and Healthy Ways to Manage

Late Night Cravings? Causes and Healthy Ways to ManageImage Credit source: Getty Images

ಕೆಲವರಿಗೆ ದಿನಪೂರ್ತಿ ಸರಿಯಾಗಿ ಆಹಾರ ಸೇವನೆ ಮಾಡಿದರೂ ಕೂಡ, ರಾತ್ರಿ ಸಮಯದಲ್ಲಿ ಪದೇಪದೇ ಹಸಿವಾಗುತ್ತದೆ. ಮಧ್ಯರಾತ್ರಿ ಎದ್ದಾಗ ಏನಾದರೂ ತಿನ್ನಬೇಕೆನ್ನಿಸುವುದು ಸಾಮಾನ್ಯವೆನಿಸಬಹುದು. ಆದರೆ ಇದು ಪ್ರತಿದಿನ ನಡೆಯುತ್ತಿದ್ದರೆ, ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಇದು ಕಾಯಿಲೆ ಬರುವ ಮುನ್ಸೂಚನೆಯೇ, ನಿದ್ರೆಗೂ ಮತ್ತು ಹಸಿವಿಗೂ (Hungry) ಇರುವ ಸಂಬಂಧವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಸಿವಿನ ಹಿಂದಿರುವ ಕಾರಣವೇನು?

ಡಾ. ದೀಪಕ್ ಕುಮಾರ್ ಹೇಳುವ ಪ್ರಕಾರ, ರಾತ್ರಿ ಸಮಯದಲ್ಲಿ ಹಸಿವು ಕಾಣಿಸಿಕೊಳ್ಳುವುದು ದೇಹಕ್ಕೆ ಇನ್ನೂ ಎನರ್ಜಿ ಬೇಕೆಂಬ ಸೂಚನೆಯಾಗಿದೆ. ಇದು ಸಾಮಾನ್ಯವಾಗಿ ಕಂಡುಬಂದರೂ ಕೂಡ ಈ ರೀತಿಯಾಗುವುದಕ್ಕೆ ಕಾರಣವಿದೆ. ಮೆದುಳು ದೇಹಕ್ಕೆ ಹಸಿವಿನ ಸಂದೇಶ ಕಳುಹಿಸುವುದರಿಂದ ರಾತ್ರಿ ಕೂಡ ಆಹಾರ ಸೇವಿಸಬೇಕು ಎಂದು ಅನಿಸುತ್ತದೆ.

ಇದು ಕಾಯಿಲೆಯ ಲಕ್ಷಣವೇ?

ಕೆಲವು ಸಂದರ್ಭಗಳಲ್ಲಿ ಇದು ‘ನೈಟ್ ಈಟಿಂಗ್ ಸಿಂಡ್ರೋಮ್’ (Night Eating Syndrome) ಎಂಬ ಸಮಸ್ಯೆಯಾಗಿರಬಹುದು. ಈ ಸ್ಥಿತಿಯಲ್ಲಿ ವ್ಯಕ್ತಿಗೆ ರಾತ್ರಿ ಸಮಯದಲ್ಲಿ ಹೆಚ್ಚು ಹಸಿವು ಕಾಣಿಸಿಕೊಳ್ಳುತ್ತದೆ ಮತ್ತು ಅವರು ಪದೇ ಪದೇ ಎದ್ದು ಏನಾದರೂ ತಿಂಡಿ ತಿನ್ನುತ್ತಾರೆ. ಆದರೆ ಪ್ರತಿದಿನವೂ ಇದೆ ರೀತಿಯಾಗುತ್ತಿದ್ದರೆ ಮಾತ್ರ ಸಮಸ್ಯೆಯಾಗಿ ಪರಿಗಣಿಸಬೇಕಾಗುತ್ತದೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಆಗುವುದು ಸಾಮಾನ್ಯ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪ್ರತಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬರಿಗೆ ಮಧುಮೇಹದ ಅಪಾಯ! ಸಮೀಕ್ಷೆಯಲ್ಲಿ ಆತಂಕಕಾರಿ ಅಂಶ ಬಹಿರಂ

ನಿದ್ರೆ ಮತ್ತು ಹಸಿವಿಗಿರುವ ಸಂಬಂಧ

ರಾತ್ರಿ ತಡವಾಗಿ ಮಲಗುವವರಿಗೆ ನಿದ್ರೆಯ ಕೊರತೆ ಉಂಟಾಗುತ್ತದೆ. ಇದರಿಂದ ‘ಘ್ರೆಲಿನ್’ ಎಂಬ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ, ಇದು ಹಸಿವು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ರಾತ್ರಿ ಸಮಯದಲ್ಲಿ ಪದೇಪದೇ ಹಸಿವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅತಿಯಾದ ತೂಕ, ಮೆಟಾಬಾಲಿಕ್ ಸಮಸ್ಯೆಗಳು ಮತ್ತು ಯಕೃತ್ತಿನ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಬಹಳ ಮುಖ್ಯ.

ಹೇಗೆ ನಿಯಂತ್ರಿಸಬೇಕು?

  • ದಿನಕ್ಕೆ 3 ರಿಂದ 4 ಬಾರಿ ಸಮತೋಲನ ಆಹಾರ ಸೇವಿಸಿ
  • ರಾತ್ರಿ ಹಗುರವಾದ ಆಹಾರ ತೆಗೆದುಕೊಳ್ಳಿ
  • ತಡವಾಗಿ ಮಲಗುವ ಅಭ್ಯಾಸ ಬಿಡಿ
  • ಒತ್ತಡವನ್ನು ನಿಯಂತ್ರಿಸಿ
  • ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ ತಿಂಗಳಿಗೆ ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ‘ಟಾಕ್ಸಿಕ್’ ಎದುರು ಪೈಪೋಟಿ? – Kannada News | Ram Charan starrer Peddi movie release date again pushed to June

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ‘ಪೆದ್ದಿ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಯಾವುದೇ ಪ್ರಚಾರ ಕಾರ್ಯಗಳು ನಡೆಯದ ಕಾರಣ ಸಿನಿಮಾ ಮುಂದೂಡಿಕೆ ಆಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಈಗ ಆ ಊಹೆ ನಿಜವಾಗಿದೆ. ಚಿತ್ರತಂಡ ಅಧಿಕೃತವಾಗಿ ಇದನ್ನು ಘೋಷಿಸಿದೆ. ‘ಪೆದ್ದಿ’ (Peddi) ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ನಿಖರವಾಗಿ ಹೊಸ ಬಿಡುಗಡೆ ದಿನಾಂಕವನ್ನು (Peddi Release Date) ತಿಳಿಸಿಲ್ಲ. ಹಾಗಾಗಿ ಈ ಸಿನಿಮಾದ ಬಿಡುಗಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹಾಗೆಯೇ ಮುಂದುವರಿದಿದೆ.

ಸೋಶಿಯಲ್ ಮೀಡಿಯಾದಲ್ಲಿ ‘ಪೆದ್ದಿ’ ಚಿತ್ರತಂಡದವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ನಮ್ಮ ಹಾಡುಗಳು ಮತ್ತು ಗ್ಲಿಂಪ್ಸ್‌ಗಳಿಗೆ ನೀವು ನೀಡಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ‘ಪೆದ್ದಿ’ ಚಿತ್ರದ ಮೇಲೆ ನೀವು ತೋರುತ್ತಿರುವ ಪ್ರೀತಿ ಮತ್ತು ಉತ್ಸಾಹವನ್ನು ಕಂಡು ನಮಗೆ ನಿಜಕ್ಕೂ ಸಂತೋಷವಾಗಿದೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕೇವಲ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ನಾವು ಚಿತ್ರದ ಎಡಿಟಿಂಗ್ ನೋಡಿದ್ದು, ಬಂದಿರುವ ಔಟ್‌ಪುಟ್ ಬಗ್ಗೆ ನಮಗೆ ಅತ್ಯಂತ ತೃಪ್ತಿಯಿದೆ’ ಎಂದು ಚಿತ್ರತಂಡ ಹೇಳಿದೆ.

‘ನಮ್ಮ ಕೈಯಲ್ಲಿ ಇಂತಹ ಉತ್ತಮ ಕಂಟೆಂಟ್ ಇರುವುದರಿಂದ, ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಾವು ಬಯಸುತ್ತೇವೆ. ಅದಕ್ಕಾಗಿ, ನಮ್ಮ ತಾಂತ್ರಿಕ ವರ್ಗ ಮತ್ತು ಪೋಸ್ಟ್-ಪ್ರೊಡಕ್ಷನ್ ತಂಡಕ್ಕೆ ಇನ್ನಷ್ಟು ಸಮಯ ನೀಡುವುದು ಅಗತ್ಯ ಎಂದು ನಮಗೆ ಅನಿಸಿದೆ. ಇದರಿಂದ ಅವರು ಚಿತ್ರವನ್ನು ಪರಿಪೂರ್ಣತೆಯೊಂದಿಗೆ ಹೊರತರಲು ಸಾಧ್ಯವಾಗುತ್ತದೆ. ನಿಮಗೆ ಅತ್ಯುತ್ತಮವಾದ ಥಿಯೇಟರ್ ಅನುಭವವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ’ ಎಂದಿದೆ ‘ಪೆದ್ದಿ’ ತಂಡ.

‘ಚಿತ್ರದ ಬಿಡುಗಡೆಯನ್ನು ನಾವು ಜೂನ್ ತಿಂಗಳಿಗೆ ಮುಂದೂಡಲು ನಿರ್ಧರಿಸಿದ್ದೇವೆ. ನಿಖರವಾದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರಂತರ ಬೆಂಬಲ ಮತ್ತು ತಾಳ್ಮೆಗೆ ಧನ್ಯವಾದಗಳು. ಇದು ನಮಗೆ ಬಹಳ ಮುಖ್ಯವಾದುದು’ ಎಂದು ಪೆದ್ದಿ ಚಿತ್ರತಂಡದವರು ಮಾಹಿತಿ ನೀಡಿದ್ದಾರೆ. ಹೊಸ ಬಿಡುಗಡೆ ದಿನಾಂಕವನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಕ್ಕೆ ಜಾನ್ವಿ, ಮೃಣಾಲ್ ಮೆರುಗು: ಶೀಘ್ರವೇ ಸಾಂಗ್ ಶೂಟಿಂಗ್ ಶುರು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಆ ಸಿನಿಮಾ ತೆರೆಕಾಣಲಿದೆ. ಭಾರಿ ನಿರೀಕ್ಷೆ ಇರುವುದರಿಂದ ಜೂನ್ ತಿಂಗಳು ಪೂರ್ತಿ ‘ಟಾಕ್ಸಿಕ್’ ಅಬ್ಬರ ಇರಲಿದೆ. ಅದೇ ತಿಂಗಳಲ್ಲಿ ‘ಪೆದ್ದಿ’ ಬಿಡುಗಡೆ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB vs LSG IPL 2026 Live Score: ಆರ್​ಸಿಬಿ- ಲಕ್ನೋ ಮುಖಾಮುಖಿ – Kannada News | Royal Challengers Bengaluru vs Lucknow Super Giants IPL 2026 Live Cricket Score RCB vs LSG Match on 15th April latest news in Kannada

ಐಪಿಎಲ್ 2026 ರ 23 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಂದ್ಯವನ್ನು ತಮ್ಮ ತವರು ಮೈದಾನವಾದ ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಂದ್ಯದಲ್ಲಿ, ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಮೊದಲ ತವರು ಗೆಲುವನ್ನು ಎದುರು ನೋಡುತ್ತಿದೆ, ಏಕೆಂದರೆ ಆರ್​ಸಿಬಿ ತಮ್ಮ ತವರು ನೆಲದಲ್ಲಿ ಲಕ್ನೋ ತಂಡವನ್ನು ಎಂದಿಗೂ ಸೋಲಿಸಿಲ್ಲ.

Source link

IPL 2026: ಐದು ತಂಡಗಳ ನಾಯಕರಿಂದ 84 ಲಕ್ಷ ರೂ. ದಂಡ ವಸೂಲಿ – Kannada News | IPL 2026 Slow Over Rate Fines: Rs 84 Lakh Collected from Captains So Far

ಈ ಐದು ತಂಡಗಳ ನಾಯಕರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಅಗ್ರಸ್ಥಾನದಲ್ಲಿದ್ದು, ಎರಡು ಬಾರಿ ಈ ನಿಯಮ ಮುರಿದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಇದುವರೆಗೆ 36 ಲಕ್ಷ ರೂ. ದಂಡ ವಿಧಿಸಲಾಗಿದೆ. ಅವರ ನಾಯಕತ್ವದಲ್ಲಿ, ಪಂಜಾಬ್ ತಂಡ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಓವರ್ ಬೌಲಿಂಗ್ ಮಾಡಿದೆ. ಅಯ್ಯರ್ ಅವರಿಗೆ ಮೊದಲ ಬಾರಿಗೆ 12 ಲಕ್ಷ ಮತ್ತು ಎರಡನೇ ಬಾರಿಗೆ 24 ಲಕ್ಷ ರೂಗಳನ್ನು ದಂಡ ವಿಧಿಸಲಾಗಿದೆ.

Source link

ಕ್ಷೇತ್ರ ಪುನರ್ ವಿಂಗಡಣೆ ವಿರೋಧಿಸಿ ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ – Kannada News | Tamil Nadu to hoist black flags tomorrow CM MK Stalin announces protests against delimitation

ಚೆನ್ನೈ, ಏಪ್ರಿಲ್ 15: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ (MK Stalin) ಕ್ಷೇತ್ರಗಳ ಪುನರ್ವಿಂಗಡಣೆಯನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ಟೀಕಿಸಿದ ಸಿಎಂ ಸ್ಟಾಲಿನ್, “ಒಂದು ಕಾಲದಲ್ಲಿ ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಗಂಟಲಿಗೆ ಇಳಿದಿದೆ” ಎಂದು ಹೇಳಿದ್ದಾರೆ.

ಸಂವಿಧಾನಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೂರು ಮಸೂದೆಗಳನ್ನು ಪ್ರಸ್ತಾಪಿಸಿದೆ. ಅವುಗಳೆಂದರೆ, ಸಂವಿಧಾನದ 131ನೇ ತಿದ್ದುಪಡಿ ಮಸೂದೆ 2026, ಕ್ಷೇತ್ರಗಳ ಪುನರ್ ವ್ಯಾಖ್ಯಾನ ಮಸೂದೆ 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2026. ಈ ಮಸೂದೆಗಳನ್ನು ನಾಳೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುವುದು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಇತರ ಪಕ್ಷದ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ; ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್ – Kannada News | Beat the Bengaluru Heat: Health Tips for Residents

ಬೆಂಗಳೂರಲ್ಲಿ ಗ್ರೀಷ್ಮ ಋತುವಿನ (ಬೇಸಿಗೆ ಕಾಲದ) ಪ್ರಭಾವ ಸ್ವಲ್ಪ ಮೃದುವಾಗಿದ್ದರೂ ಮಧ್ಯಾಹ್ನದ ಪ್ರಖರ ಸೂರ್ಯರಶ್ಮಿ ಮತ್ತು ಒಣ ಉಷ್ಣ ಗಾಳಿ ಆರೋಗ್ಯದ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತವೆ. ಈ ಕಾಲದಲ್ಲಿ ವಾತ ಮತ್ತು ಪಿತ್ತ ದೊಷ ಸಂಬಂಧಿ ರೋಗಗಳ ಸಂಭವ ಹೆಚ್ಚು. ಬಿಸಿಲಿನ ತೀವ್ರ ತಾಪವು ಬಲವನ್ನು ಕಡಿಮೆ ಮಾಡುತ್ತದೆ ಮತ್ತು ಕಾರಣವಿಲ್ಲದೆ ಜನ ಆಯಾಸದಿಂದ ಬಳಲುತ್ತಾರೆ. ಇದೆಲ್ಲದರಿಂದ ಕಾಪಾಡಿಕೊಳ್ಳಲು ಕೆಲವು ಸರಳ ಉಪಾಯಗಳನ್ನು ಅನುಸರಿಸುವುದು ಬಹಳ ಉತ್ತಮ. ಈ ಕುರಿತು, ಬೆಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಂಹಿತಾ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಂಹಿತಾ ಉಲ್ಲೋಡು (Dr. Samhita) ಅವರು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಡಾ. ಸಂಹಿತಾ ಹೇಳಿರುವ ಸಿಂಪಲ್ ಟಿಪ್ಸ್:

  • ಬೇಸಿಗೆ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇದು ನಿರ್ಜಲೀಕರಣ ಸಮಸ್ಯೆಯನ್ನು ತಡೆಗಟ್ಟುತ್ತದೆ. ದಿನಕ್ಕೆ ಕನಿಷ್ಠ 2.5 –3 ಲೀಟರ್ ನೀರು ಕುಡಿಯಬೇಕು. ಹಾಗೆಯೇ, ಎಳನೀರು, ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ ಮತ್ತು ಋತು ಅನುಸಾರ ಹಣ್ಣಿನ ರಸ, ಜ್ಯೂಸ್ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
  • ಮಧ್ಯಾಹ್ನ 11ರಿಂದ 3 ಗಂಟೆಯ ವರೆಗೆ, ಎಲ್ಲಿಯವರೆಗೂ ತೀಕ್ಷ್ಣ ಸೂರ್ಯಕಿರಣಗಳು ಇರುತ್ತವೆಯೊ ಅಲ್ಲಿಯವರೆಗು ಆದಷ್ಟು ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಹೊರಗೆ ಹೋಗಬೇಕಾದರೆ ಹಗುರವಾದ ಹತ್ತಿ ಬಟ್ಟೆ ಧರಿಸಿ, ಕ್ಯಾಪ್ ಅಥವಾ ಛತ್ರಿ ಬಳಸಬೇಕು. ಇದು ಹೀಟ್ ಸ್ಟ್ರೋಕ್ ಅನ್ನು ತಪ್ಪಿಸಲು ಸಹಕಾರಿ.
  • ಬೇಸಿಗೆ ಕಾಲದಲ್ಲಿ ಜಠರಾಗ್ನಿಯು ಬಹಳ ಮಂದವಾಗಿರುತ್ತದೆ. ಹಾಗಾಗಿ ಹಸಿವಾದಲ್ಲಿ ಸುಲಭವಾಗಿ ಜೀರ್ಣವಾಗುವ ಲಘು ಆಹಾರ ಸೇವನೆ ಉತ್ತಮ. ಆದಷ್ಟು ಮನೆಯಲ್ಲಿ ತಯಾರಿಸಿದ ಬಿಸಿಯಾಗಿರುವ ತಾಜಾ ಅಡುಗೆ ಸೇವಿಸಬೇಕು. ಆಹಾರದಲ್ಲಿನ ಸಣ್ಣ ಪುಟ್ಟ ವ್ಯತ್ಯಾಸಗಳು ಅಜೀರ್ಣ, ಬೇಧಿ ವಾಂತಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
  • ಇನ್ನು ಬೇಸಿಗೆಯಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಚರ್ಮದ ಸಮಸ್ಯೆ. ವಾತಾವರಣದ ಉಷ್ಣತೆ ಹೆಚ್ಚಿರುವುದರಿಂದ ಚರ್ಮವು ಬೇಗ ಒಣಗಿ ಕಾಂತಿಹೀನವಾಗುತ್ತದೆ. ಹಾಗಾಗಿ ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಬೇಸಿಗೆಯ ಬಿಸಿಲಿನಿಂದ ಶರೀರದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಹಾಗಾಗಿ ಮಾಯಿಶ್ಚರೈಸರ್ ಬಳಕೆ ಚರ್ಮ ಒಣಗದಂತೆ ಕಾಪಾಡುತ್ತದೆ. ಪ್ರತಿದಿನ ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಲಘುವಾಗಿ ಅಭ್ಯಂಗಮಾಡಿ ನಂತರ ಸ್ನಾನ ಮಾಡಿದರೆ ಚರ್ಮದ ತೇವಾಂಶ ಕಾಯ್ದಿಟ್ಟುಕೊಳ್ಳಬಹುದು.
  • ಪ್ರತೀದಿನ ಎರಡು ಬಾರಿ ಮುಖ ತೊಳೆಯುವುದು ಅಗತ್ಯ. ಇದು ಬೇಸಿಗೆಯ ಬೆವರನ್ನು, ಬೆವರಿನ ವಾಸನೆಯನ್ನು ತಗ್ಗಿಸುತ್ತದೆ.
  • ಸನ್‌ಸ್ಕ್ರೀನ್ (SPF 30 ಅಥವಾ ಹೆಚ್ಚು) ಬಳಸುವುದು ಬಹಳ ಮುಖ್ಯ, ಏಕೆಂದರೆ ಇದು ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.
  • ಅಲೋವೆರಾ ಅಥವಾ ಹಾಲಿನ ಕೆನೆಯನ್ನು ಮುಖಕ್ಕೆ ಹೆಚ್ಚಿಕೊಳ್ಳುವುದರಿಂದ ಮುಖದ ತೇವಾಂಶವನ್ನು ಕಾಪಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಬಿಸಿಲಿನಿಂದ ಆಗುವ ಕಪ್ಪು ಕಲೆಗಳನ್ನು ನಿವಾರಿಸಲು ಶ್ರೀಗಂಧದ ಪುಡಿ ಹಾಲಿನ ಕೆನೆಯೊಂದಗೆ ಅಥವಾ ಅರಿಶಿನ ಪುಡಿ ಹಾಲಿನ ಕೆನೆ, ಜೇನುತುಪ್ಪದ ಮಿಶ್ರಣ, ಅಥವಾ ಕಡಲೆ ಹಿಟ್ಟು ಜೇನುತುಪ್ಪದ ಮಿಶ್ರಣ ನಿಯಮಿತವಾಗಿ ಮುಖ ಕೈ-ಕಾಲುಗಳಿಗೆ ಹಚ್ಚಬಹುದು.
  • ಮನೆಯಿಂದ ಆಚೆ ಹೋಗುವ ಮೊದಲು ಆದಷ್ಟು ಕೈ- ಕಾಲು ಮುಖ ಬಿಸಿಲಿಗೆ ತೋರದಂತೆ ರಕ್ಷಿಸಿಕೊಳ್ಳುವುದು ಉತ್ತಮ.
  • ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಹೆಚ್ಚು ಇರಲಿ. ವಿಶೇಷವಾಗಿ ಕಲ್ಲಂಗಡಿ, ಸೌತೆಕಾಯಿ, ಮತ್ತು ಮೊಸರು ದೇಹಕ್ಕೆ ತಂಪು ನೀಡುತ್ತವೆ. ಮಸಾಲೆಯುಕ್ತ ಮತ್ತು ಹೆಚ್ಚು ಎಣ್ಣೆಯ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.

ಈ ಸರಳ ಸಲಹೆಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ

Source link

Health Tips: ಅಡುಗೆಗೆ ಎಣ್ಣೆ ಉತ್ತಮವೋ ಅಥವಾ ಬೆಣ್ಣೆಯೋ? ತಜ್ಞರ ಉತ್ತರ ಇಲ್ಲಿದೆ – Kannada News | Oil vs. Butter: Choosing the Best for Cooking, Health and Flavor – A Complete Guide

Oil Vs. Butter

ಅಡುಗೆಯಲ್ಲಿ ಎಣ್ಣೆ ಮತ್ತು ಬೆಣ್ಣೆಯ ನಡುವಿನ ಸ್ಪರ್ಧೆ ಇಂದು ನಿನ್ನೆಯದಲ್ಲ. ಬೆಣ್ಣೆಯು ತನ್ನ ಕೆನೆಯಂತಹ ಸ್ವರೂಪ ಮತ್ತು ಅದ್ಭುತ ರುಚಿಯಿಂದ ಅಡುಗೆಮನೆಯ ಆಕರ್ಷಣೆಯಾಗಿದ್ದರೆ, ಸಸ್ಯ ಆಧಾರಿತ ಎಣ್ಣೆಗಳು (ಉದಾಹರಣೆಗೆ ಆಲಿವ್ ಎಣ್ಣೆ) ಹೃದಯದ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಪೂರಕವಾಗಿವೆ. ರುಚಿಗಾಗಿ ಬೆಣ್ಣೆಯೋ ಅಥವಾ ಆರೋಗ್ಯಕ್ಕಾಗಿ ಎಣ್ಣೆಯೋ ಎನ್ನುವ ಆಯ್ಕೆ ನಮ್ಮ ಅಡುಗೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ.

ಎಣ್ಣೆಯ ಮಹತ್ವ ಮತ್ತು ವಿಧಗಳು:

ಎಣ್ಣೆಯು ಆಹಾರಕ್ಕೆ ಪೌಷ್ಟಿಕಾಂಶ ಮತ್ತು ಆಕೃತಿಯನ್ನು ನೀಡುತ್ತದೆ. ಭಾರತೀಯ ಅಡುಗೆಯಲ್ಲಿ ಮುಖ್ಯವಾಗಿ ಐದು ವಿಧದ ಎಣ್ಣೆಗಳನ್ನು ಬಳಸಲಾಗುತ್ತದೆ:

  • ಸಾಸಿವೆ ಎಣ್ಣೆ: ಒಮೆಗಾ-3 ಸಮೃದ್ಧವಾಗಿದ್ದು, ಹೆಚ್ಚಿನ ಉಷ್ಣತೆಯ ಅಡುಗೆಗೆ ಸೂಕ್ತ.
  • ದೇಸಿ ತುಪ್ಪ: ಅಡುಗೆಯ ರುಚಿ ಹೆಚ್ಚಿಸಲು ಮತ್ತು ಪೋಷಕಾಂಶಗಳಿಗಾಗಿ ಅತ್ಯುತ್ತಮ.
  • ತೆಂಗಿನ ಎಣ್ಣೆ: ಕರಾವಳಿ ಭಾಗದ ಅಡುಗೆಗಳಿಗೆ ಮತ್ತು ಮಧ್ಯಮ ಉಷ್ಣತೆಯ ಅಡುಗೆಗೆ ಪ್ರಶಸ್ತ.
  • ಶೇಂಗಾ ಎಣ್ಣೆ: ಇದು ಸೌಮ್ಯ ರುಚಿ ಹೊಂದಿದ್ದು, ಹುರಿಯಲು ವ್ಯಾಪಕವಾಗಿ ಬಳಕೆಯಾಗುತ್ತದೆ.
  • ಎಳ್ಳೆಣ್ಣೆ: ಉಪ್ಪಿನಕಾಯಿ ಮತ್ತು ಒಗ್ಗರಣೆಗಳಿಗೆ ಇದು ವಿಶೇಷ ರುಚಿ ನೀಡುತ್ತದೆ.

ಬೆಣ್ಣೆಯ ಬಹುಮುಖಿ ಬಳಕೆಬೆಣ್ಣೆಯು ಕೇವಲ ಬ್ರೆಡ್ ಮೇಲೆ ಹಚ್ಚಲು ಮಾತ್ರವಲ್ಲದೆ, ಸಾಸ್ ತಯಾರಿಕೆಯಲ್ಲಿ ಮತ್ತು ತರಕಾರಿಗಳನ್ನು ಹುರಿಯಲು ಬಹುಪಯೋಗಿಯಾಗಿದೆ. ಇದರಲ್ಲಿ ಉಪ್ಪು ರಹಿತ ಬೆಣ್ಣೆ (ಬೇಕಿಂಗ್‌ಗೆ ಸೂಕ್ತ), ಉಪ್ಪು ಸೇರಿಸಿದ ಬೆಣ್ಣೆ (ತಕ್ಷಣದ ರುಚಿಗೆ), ಕಲ್ಚರ್ಡ್ ಬೆಣ್ಣೆ (ಹುದುಗಿಸಿದ ಕ್ರೀಮ್‌ನಿಂದ ತಯಾರಿಸಿದ್ದು), ಮತ್ತು ಗಿಡಮೂಲಿಕೆ ಮಿಶ್ರಿತ ಕಾಂಪೌಂಡ್ ಬೆಣ್ಣೆ ಎಂಬ ವಿವಿಧ ಪ್ರಕಾರಗಳಿವೆ. ಬೆಣ್ಣೆಯು ಆಹಾರಕ್ಕೆ ಒಂದು ರೀತಿಯ ಮೃದುತ್ವ ಮತ್ತು ಸುಗಂಧವನ್ನು ನೀಡುತ್ತದೆ.

ಇದನ್ನೂ ಓದಿ: ಒಬ್ಬ ವ್ಯಕ್ತಿ ನಿದ್ರೆ ಇಲ್ಲದೆ ಎಷ್ಟು ದಿನ ಬದುಕಬಹುದು? ಒಂದು ದಿನ ನಿದ್ರೆ ಬಿಟ್ಟರೆ ಏನೆಲ್ಲಾ ಆಗುತ್ತೆ ನೋಡಿ

ಅಡುಗೆಯಲ್ಲಿ ‘ಹೊಗೆ ಬಿಂದು’ವಿನ ಪ್ರಾಮುಖ್ಯತೆ (Smoke Point)ಎಣ್ಣೆ ಅಥವಾ ಬೆಣ್ಣೆಯನ್ನು ಆರಿಸುವಾಗ ಅವುಗಳ ‘ಹೊಗೆ ಬಿಂದು’ (Smoke Point) ಅರಿಯುವುದು ಬಹಳ ಮುಖ್ಯ. ಬೆಣ್ಣೆಯು ಸುಮಾರು 160°C (320°F) ಉಷ್ಣತೆಯಲ್ಲಿ ಸುಡಲಾರಂಭಿಸುತ್ತದೆ, ಆದ್ದರಿಂದ ಇದನ್ನು ಕಡಿಮೆ ಉಷ್ಣತೆಯ ಅಡುಗೆಗೆ ಮಾತ್ರ ಬಳಸಬೇಕು. ಆದರೆ ಹೆಚ್ಚಿನ ಎಣ್ಣೆಗಳು 260°C/500°Fಗಿಂತ ಹೆಚ್ಚುಗಿಂತಲೂ ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳಬಲ್ಲವು. ಹೀಗಾಗಿ, ಕರಿಯಲು ಅಥವಾ ಅತಿ ಉಷ್ಣತೆಯ ಅಡುಗೆಗೆ ಎಣ್ಣೆಯನ್ನು ಬಳಸಿ, ಕೊನೆಯಲ್ಲಿ ರುಚಿಗಾಗಿ ಬೆಣ್ಣೆಯನ್ನು ಸೇರಿಸುವುದು ಜಾಣತನ.

ಬೇಕಿಂಗ್‌ನಲ್ಲಿ ಎಣ್ಣೆ vs ಬೆಣ್ಣೆಬೇಕಿಂಗ್ ವಿಷಯಕ್ಕೆ ಬಂದರೆ ಇವೆರಡೂ ಭಿನ್ನವಾಗಿ ಕೆಲಸ ಮಾಡುತ್ತವೆ. ಬೆಣ್ಣೆಯಲ್ಲಿ ಶೇ.80 ಕೊಬ್ಬು ಮತ್ತು ಶೇ. 20 ನೀರಿನಾಂಶ ಇರುವುದರಿಂದ, ಇದು ಬಿಸ್ಕತ್ತು ಅಥವಾ ಕೇಕ್‌ಗಳಿಗೆ ಪದರದಂತಹ ರಚನೆ ಮತ್ತು ಗಾಳಿಯನ್ನು ನೀಡುತ್ತದೆ. ಎಣ್ಣೆಯು ಶೇ. 100 ಕೊಬ್ಬಾಗಿದ್ದು, ಕೇಕ್ ಅಥವಾ ಬ್ರೆಡ್‌ಗಳನ್ನು ಹೆಚ್ಚು ಕಾಲ ಮೃದುವಾಗಿ ಮತ್ತು ತೇವಭರಿತವಾಗಿ ಇಡುತ್ತದೆ.

ಲೇಖನ: ಡಾ ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version