ಕೋಚ್ ಸಾಬ್, ಕಿಲ್ಲರ್ ಕಾಂಬಿನೇಶನ್​… ಗಂಭೀರ್​ನ ಪ್ರಶಂಸಿಸಿದ ಧೋನಿ

ಕೋಚ್ ಸಾಬ್, ಕಿಲ್ಲರ್ ಕಾಂಬಿನೇಶನ್​… ಗಂಭೀರ್​ನ ಪ್ರಶಂಸಿಸಿದ ಧೋನಿ

T20 World Cup 2026: 2026ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. ಇದಕ್ಕೂ ಮುನ್ನ ಭಾರತ ತಂಡವು 2007  ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಮತ್ತೊಮ್ಮೆ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಐತಿಹಾಸಿಕ ಕ್ಷಣಗಳಿಗೆ ಈ ಹಿಂದಿನ ವಿಶ್ವಕಪ್ ವಿಜೇತ ನಾಯಕರುಗಳು ಸಾಕ್ಷಿಯಾಗಿದ್ದರು. ಅಂದರೆ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಈ ಪಂದ್ಯದ ವೇಳೆ ಹಾಜರಿದ್ದರು. ಇತ್ತ ಟೀಮ್ ಇಂಡಿಯಾ ಮೂರನೇ ಬಾರಿ ವಿಶ್ವಕಪ್ ಗೆದ್ದ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಹಾಡಿ ಹೊಗಳಿದ್ದು ವಿಶೇಷ.

ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಐತಿಹಾಸಿಕ ಜಯ ಸಾಧಿಸಿದ ನಂತರ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪ್ರಶಂಸೆಯ ಸಾರಾಂಶ ಈ ಕೆಳಗಿನಂತಿದೆ…

“ಕೋಚ್ ಸಾಬ್, ನಿಮ್ಮ ನಗು ಅದ್ಭುತವಾಗಿ ಕಾಣುತ್ತಿದೆ. ಗಂಭೀರತೆಯೊಂದಿಗೆ ನಗು ಇರುವುದು ಒಂದು ‘ಕಿಲ್ಲರ್ ಕಾಂಬಿನೇಶನ್’. ತುಂಬಾ ಚೆನ್ನಾಗಿ ಆಡಿದ್ದೀರಿ, ಆನಂದಿಸಿ ಗೆಳೆಯರೇ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುವ ಗೌತಮ್ ಗಂಭೀರ್, ಭಾರತದ ಗೆಲುವಿನ ಸಂಭ್ರಮದಲ್ಲಿ ನಗುತ್ತಿರುವುದನ್ನು ಕಂಡು ಧೋನಿ ಈ ರೀತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ಪೋಸ್ಟ್‌ನಲ್ಲಿ ಜಸ್​ಪ್ರೀತ್ ಬುಮ್ರಾ ಅವರ ಅದ್ಭುತ ಬೌಲಿಂಗ್ ಅನ್ನು ಕೊಂಡಾಡಿದ ಧೋನಿ, ಅವರನ್ನು “ಚಾಂಪಿಯನ್ ಬೌಲರ್” ಎಂದು ಕರೆದಿದ್ದಾರೆ. ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!

ಇನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 96 ರನ್​ಗಳ ಪ್ರಚಂಡ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

 

Source link

‘ತ್ರಿಷಾ ಮನೆಯಲ್ಲೇ ಇರಬೇಕು’; ಪಾರ್ಥಿಬನ್ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ

ಕಳೆದ ಕೆಲವು ವಾರಗಳಿಂದ ನಟ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ (Trisha) ಅವರ ಹೆಸರು ಚರ್ಚೆಯಲ್ಲಿದೆ. ಅವರಿಬ್ಬರ ಸಂಬಂಧದ ಕಾರಣದಿಂದ ಸಂಗೀತಾ ಅವರು ವಿಜಯ್​​ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ವಿವಾಹ ಆರತಕ್ಷತೆಯೊಂದಕ್ಕೆ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ತೆರಳಿದ್ದರು. ಇದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಚರ್ಚೆ ಶುರುವಾಗಿದೆ. ಈಗ ಈ ಬಗ್ಗೆ ನಟ ಹಾಗೂ ನಿರ್ದೇಶಕ ಪಾರ್ಥಿಬನ್ ಅವರು ಕುಹಕವಾಡಿದ್ದಾರೆ.

ದಳಪತಿ ವಿಜಯ್ ಹಾಗೂ ತ್ರಿಷಾ ಒಟ್ಟಾಗಿ ಸುತ್ತಾಟ ಮಾಡುತ್ತಿರುವ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ನಟಿಯ ಜೊತೆಗಿನ ಅಕ್ರಮ ಸಂಬಂಧದ ಕಾರಣಕ್ಕೆ ವಿಜಯ್ ಅವರಿಗೆ ವಿಚ್ಛೇದನ ನೀಡುತ್ತಿರುವುದಾಗಿ ಪತ್ನಿ ಸಂಗೀತಾ ಹೇಳಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಈಗ ತ್ರಿಷಾ ಬಗ್ಗೆ ತಮಿಳು ನಟ ಪಾರ್ಥಿಬನ್ ಮಾಡಿದ ಕಾಮೆಂಟ್ ವೈರಲ್ ಆಗಿದೆ. ಅವರು ನಟಿಯನ್ನು ಟೀಕೆ ಮಾಡಿದ್ದಾರೆ. ಪಾರ್ಥಿಬನ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ತೆರೆ ಹಂಚಿಕೊಂಡ ನಟಿಯರ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲಿನ ಪಾತ್ರಗಳ ಬಗ್ಗೆ ತೋರಿಸಲಾಯಿತು. ಈ ವೇಳೆ ತ್ರಿಷಾ ಫೋಟೋ ಬಂತು.

‘ಕುಂದವೈ (ತ್ರಿಷಾ) ಕೆಲ ದಿನ ಮನೆ ಒಳಗೆ ಇರೋದು ಉತ್ತಮ. ಎಲ್ಲವನ್ನೂ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ. ಎಲ್ಲಾ ಕವಿತೆಗಳನ್ನು ಆನಂದಿಸಲು ಸಾಧ್ಯವಿಲ್ಲ. ಕೆಲವು ಕವಿತೆಗಳನ್ನು ಮುಕ್ತವಾಗಿ ಓದಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ‘ಕುಂದವೈ ಹೊರಗೆ ಬಂದರೆ ಸಮಸ್ಯೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನ, ತ್ರಿಷಾ ಬಗ್ಗೆ ಮೊದಲ ಬಾರಿ ಮಾತನಾಡಿದ ವಿಜಯ್

ಪಾರ್ಥಿಬನ್ ಅವರ ಭಾಷಣವನ್ನು ಕೆಲವರು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಪಾರ್ಥಿಬನ್ ಅವರು ಆಡಿದ ಮಾತುಗಳು ಸರಿ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ‘ಪಾರ್ಥಿಬನ್ ಅವರು ಈಗಾಗಲೇ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ ಅವರು ತಮ್ಮ ಮಾಜಿ ಪತ್ನಿಯ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಅವಹೇಳನಕಾರಿಯಾಗಿ ಮಾತನಾಡಿಲ್ಲ’ ಎಂದು ಕೆಲವರು ಪಾರ್ಥಿಬನ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ವಿಜಯ್ ಅವರನ್ನು ಟೀಕಿಸಿದ್ದಾರೆ. ‘ಹೆಂಡತಿಯ ಕಣ್ಣೀರು ಕೂಡ ವಿಜಯ್‌ಗೆ ಅಷ್ಟು ಮುಖ್ಯವಲ್ಲ ಎಂದು ಅವರು ವೇದಿಕೆಯ ಮೇಲೆ ಮಾತನಾಡುತ್ತಾರೆ. ಇದು ಸ್ವೀಕಾರಾರ್ಹವಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ವಂದೇ ಭಾರತ್ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರ್ಲಿಲ್ಲ, ಎಲ್ಲರೂ ಮಹಿಳೆಯರೇ!

ಬೆಂಗಳೂರು, ಮಾರ್ಚ್ 9: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಮಾರ್ಚ್ 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಗಮನ ಸೆಳೆಯಿತು. ಇದರ ಭಾಗವಾಗಿ ಬೆಂಗಳೂರು ಮತ್ತು ಮೈಸೂರು ಮಾರ್ಗದಲ್ಲಿ ಭಾನುವಾರ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೊ ಪೈಲಟ್, ಟಿಟಿ (ಟಿಕೆಟ್ ಪರಿಶೀಲಕರು) ಸೇರಿದಂತೆ ರೈಲಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಮಹಿಳೆಯರ ಸಾಧನೆ ಮತ್ತು ಅವರ ಪಾತ್ರವನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದ ಸಂಭ್ರಮದ ಕ್ಷಣಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ನೈಋತ್ಯ ರೈಲ್ವೆ ಹಂಚಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಒತ್ತಡದಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡ ಯುವತಿ

ತಂದೆ-ತಾಯಿಗೂ ಮಕ್ಕಳು ಮದುವೆಯಾಗಬೇಕು, ಅವರ ಜೀವನವನ್ನು ಅವರು ಕಟ್ಟಿಕೊಳ್ಳಬೇಕೆಂಬ ಕನಸಿರುತ್ತದೆ. ಹಾಗೆಯೇ ಮಕ್ಕಳಿಗೂ ತಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಚೆನ್ನಾಗಿ ಸಂಪಾದನೆ ಮಾಡಬೇಕು ಮದುವೆ ಏನಿದ್ದರೂ ಆಮೇಲೆ ಎನ್ನುವ ಮನಸ್ಥಿತಿ ಇರುತ್ತದೆ. ಆದರೆ ಮಕ್ಕಳಿಗೆ ಅಪ್ಪ-ಅಮ್ಮನ ನೋಯಿಸಲೂ ಇಷ್ಟ ಇರುವುದಿಲ್ಲ. ಅಂಥಾ ಸಮಯದಲ್ಲಿ ಎಂಥಾ ಆಲೋಚನೆಗಳು ಬರುತ್ತವೆ ನೋಡಿ.

ಯುವತಿಯೊಬ್ಬಳು ಮದುವೆ ಒತ್ತಡದಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೆಣ್ಣುಮಕ್ಕಳ ಮೇಲೆ ಇರಿಸಲಾಗಿರುವ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

@kajals_move_ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ಅನ್ನು ಈಗಾಗಲೇ ಸುಮಾರು 3.7 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ಅವರ ಜೀವನದ ಮೇಲೆ ಹಿಡಿತ ಸಾಧಿಸುವ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ತನಗೆ ಕೂದಲೆಂದರೆ ತುಂಬಾ ಇಷ್ಟ ನನಗೆ ಕೂದಲು ಕತ್ತರಿಸಿಕೊಳ್ಳಲು ಇಷ್ಟವಿರಲಿಲ್ಲ, ಆದರೆ ಮನೆಯಲ್ಲಿ ಮದುವೆಯಾಗು ಎಂದು ಒತ್ತಡ ಹೇರುತ್ತಿದ್ದರು ಹೀಗಾಗಿ ಕೂದಲು ಕತ್ತರಿಸಿಕೊಂಡಿದ್ದೇನೆ ಎಂದು ಯುವತಿ ಹೇಳಿದ್ದಾಳೆ. ಹಲವಾರು ಕಾಮೆಂಟ್‌ಗಳು ತನ್ನ ಭವಿಷ್ಯಕ್ಕೆ ಆದ್ಯತೆ ನೀಡುವ ಅವಳ ದೃಢಸಂಕಲ್ಪವನ್ನು ಶ್ಲಾಘಿಸಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!

T20 World Cup 2026: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಸಂಜು ಸ್ಯಾಮ್ಸನ್. ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಸ್ಯಾಮ್ಸನ್ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್​ನಲ್ಲಿ 89 ರನ್ ಬಾರಿಸಿದ ಸ್ಯಾಮ್ಸನ್, ಫೈನಲ್​​ನಲ್ಲೂ ನ್ಯೂಝಿಲೆಂಡ್ ವಿರುದ್ಧ ಅಬ್ಬರಿಸಿದರು.

ಅಹಮದಾಬಾದ್​ನಲ್ಲಿ ನಡೆದ ಈ ಫೈನಲ್ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 89 ರನ್ ಸಿಡಿಸಿದರು. ಈ ಸ್ಫೋಟಕ ಇನಿಂಗ್ಸ್ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಪೇರಿಸಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 159 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇತ್ತ ಚಾಂಪಿಯನ್ ಪಟ್ಟದೊಂದಿಗೆ ಸಂಜು ಸ್ಯಾಮ್ಸನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಈ ಪ್ರಶಸ್ತಿ ಪಡೆದು ಮಾತನಾಡಿದ ಸಂಜು, ನನ್ನ ಈ ಪ್ರದರ್ಶನಕ್ಕೆ ಸಚಿನ್ ತೆಂಡೂಲ್ಕರ್ ಅವರೇ ಕಾರಣ ಎಂದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ನಂತರ ಆತ್ಮವಿಶ್ವಾಸ ಕಳೆದುಕೊಂಡಿದ್ದ ನಾನು ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆ ಅವರು  ನನಗೆ ಮಾನಸಿಕ ಸ್ಥೈರ್ಯ ತುಂಬಿದ್ದರು.

ಸಚಿನ್ ಅವರು ಪಂದ್ಯದ ಮೇಲಿನ ಹಿಡಿತ ಮತ್ತು ಮಾನಸಿಕ ಸ್ಪಷ್ಟತೆಯ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು. ಅಷ್ಟೇ ಅಲ್ಲದೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ಕೂಡ ಸಚಿನ್ ಅವರಿಗೆ ಕರೆ ಮಾಡಿದ್ದೆ. ಈ ವೇಳೆಯೂ ಅವರು ನನಗೆ ಆತ್ಮವಿಶ್ವಾಸ ತುಂಬಿದ್ದರು.

ಕಳೆದ ಎರಡು ತಿಂಗಳುಗಳಿಂದ ನಾನು ಸಚಿನ್ ಸರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಅದರಲ್ಲೂಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡದಿಂದ ಹೊರಗಿಟ್ಟಾಗ ಅವರು ನನಗೆ ಮಾನಸಿಕವಾಗಿ ದೃಢವಾಗಿರಲು ಮತ್ತು ಸರಿಯಾದ ಮನಸ್ಥಿತಿ  ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಿದರು.

ಅವರಂತಹ ದಂತಕಥೆಯಿಂದ ಮಾರ್ಗದರ್ಶನ ಪಡೆಯುವುದು ನನಗೆ ಸಿಕ್ಕ ದೊಡ್ಡ ವರ. ಅವರು ನನಗೆ ಪಂದ್ಯದ ಮೇಲಿನ ಹಿಡಿತ ಮತ್ತು ತಯಾರಿಯ ಬಗ್ಗೆ ಸ್ಪಷ್ಟತೆ ನೀಡಿದರು. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೈಫಲ್ಯದ ಬಳಿಕ ನಾನು ಮಾನಸಿಕವಾಗಿ ಕುಗ್ಗಿದ್ದಾಗ ಸಚಿನ್ ಅವರ ಮಾತುಗಳು ನನ್ನಲ್ಲಿ ಮತ್ತೆ ನಂಬಿಕೆ ಮೂಡಿಸಿದವು.

ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

ನನ್ನಂತಹ ಆಟಗಾರನಿಗೆ ಕ್ರಿಕೆಟ್ ದಂತಕಥೆಯಿಂದ ಸಿಕ್ಕಂತಹ ಮಾರ್ಗದರ್ಶನದಿಂದಾಗಿ ನಾನು ಇಂದು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

 

Source link

Bengaluru Air Quality: ಇನ್ನೂ ಕಳಪೆ ಮಟ್ಟಕ್ಕಿಳಿದ ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮಾರ್ಚ್​ 09: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 174ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಅದೇ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆಯ ವಾಯು ಗುಣಮಟ್ಟ 150ಕ್ಕಿಂತ ಹೆಚ್ಚಾಗಿದೆ. ಕಲಬುರ್ಗಿಯ AQI 151 ಇದ್ದು, 200ರ ಗಡಿ ತಲುಪುವ ಆತಂಕ ಎದುರಾಗಿದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –174
  • ಮಂಗಳೂರು-171
  • ಮೈಸೂರು –162
  • ಬೆಳಗಾವಿ – 156
  • ಕಲಬುರ್ಗಿ-151
  • ಶಿವಮೊಗ್ಗ – 176
  • ಬಳ್ಳಾರಿ – 156
  • ಹುಬ್ಬಳ್ಳಿ- 161
  • ಉಡುಪಿ –164
  • ವಿಜಯಪುರ –164

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ ಮಾತನಾಡಲು ಬಿಡದ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಜೂ.ಎನ್​ಟಿಆರ್

ಟಾಲಿವುಡ್ ನಟ ಜೂನಿಯರ್ ಎನ್​​ಟಿಆರ್ (JR NTR) ಅವರು ಭಾನುವಾರ (ಮಾರ್ಚ್ 8) ಬೆಂಗಳೂರಿಗೆ ಆಗಮಿಸಿದ್ದರು. ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಅವರು ಇಲ್ಲಿಗೆ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಅಭಿಮಾನಿಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಒಂದೇ ಸಮನೆ ಕೂಗುತ್ತಿದ್ದರು. ಆಗ ಜೂನಿಯರ್ ಎನ್​​ಟಿಆರ್ ಅವರು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಜೂನಿಯರ್​ ಎನ್​​ಟಿಆರ್ ಕಿಮ್ಸ್ ಘಟಕ ಉದ್ಘಾಟನೆಗೆ ಬರಲು ಒಂದು ಕಾರಣವೂ ಇತ್ತು. 1983ರಲ್ಲಿ ಜೂ ಎನ್​​​ಟಿಆರ್ ಅವರ ತಾತ ಎನ್​​ಟಿಆರ್ ಅವರೇ ಕಿಮ್ಸ್​​ಗೆ ಅಡಿಗಲ್ಲು ಹಾಕಿದ್ದರು. 2009ರಲ್ಲಿ ಜೂ ಎನ್​​ಟಿಆರ್ ಭಾರಿ ರಸ್ತೆ ಅಪಘಾತಕ್ಕೆ ಒಳಾಗಾದಾಗ ಅವರು ಕಿಮ್ಸ್​​ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್​​ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು. ಅವರನ್ನು ಅಭಿಮಾನಿಗಳು ಖುಷಿಯಿಂದ ಸ್ವಾಗತಿಸಿದರು. ಅವರನ್ನು ನೋಡಲು ಜನ ಸಾಗರವೇ ನೆರೆದಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಮಾರ್ಚ್ 8 ಮಹಿಳಾ ದಿನಾಚರಣೆ ಆಗಿತ್ತು. ಹೀಗಾಗಿ ಆ ಬಗ್ಗೆ ಅವರು ಮಾತನಾಡಿದರು. ‘ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಪದೇ ಪದೇ ಹೇಳುವುದು ತನಗೆ ಇಷ್ಟವಿಲ್ಲ. ಪ್ರತಿಯೊಬ್ಬ ಪುರುಷನೂ ಆ ಸಂಸ್ಕೃತಿಯೊಂದಿಗೆ ಹುಟ್ಟಬೇಕು’ ಎಂದರು. ಅಲ್ಲದೆ, ತಮ್ಮ ಮಕ್ಕಳಿಗೂ ಮಹಿಳೆಯರನ್ನು ಗೌರವಿಸುವುದನ್ನು ಹೇಳಿಕೊಡೋದಾಗಿ ಹೇಳಿದರು. ಸಿನಿಮಾ ಮಾತ್ರವಲ್ಲದೆ ಹೊರಗೆಯೂ ತುಂಬಾ ಸಾಧಾರಣವಾಗಿ ವರ್ತಿಸುವ ಎನ್​​​​ಟಿಆರ್, ಮಹಿಳೆಯರ ಸುರಕ್ಷತೆ ಮತ್ತು ಗೌರವದ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳ ಬಗ್ಗೆಯೂ ಮಾತನಾಡಿದರು ಮತ್ತು ಮನೆಗೆ ಎಚ್ಚರಿಕೆಯಿಂದ ಹೋಗುವಂತೆ ಸಲಹೆ ನೀಡಿದರು.

ಜೂನಿಯರ್ ಎನ್​​ಟಿಆರ್ ಅವರು ಮಾತು ಆರಂಭಿಸುವಾಗ ಫ್ಯಾನ್ಸ್ ಅವರ ಹೆಸರನ್ನು ಕೂಗಿದರು.. ಆಗ ಫ್ಯಾನ್ಸ್ ಜೂನಿಯರ್ ಎನ್​​ಟಿಆರ್ ಅವರಿಗೆ ಮಾತನಾಡಲು ಅವಕಾಶ ನೀಡಿಲ್ಲ. ಸುಮ್ಮನಿರಿ, ಸುಮ್ಮನಿರಿ ಎಂದು ಖಡಕ್ ಎಚ್ಚರಿಕೆ ನೀಡಿದ ಬಳಿಕ ಫ್ಯಾನ್ಸ್ ಸುಮ್ಮನಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದೂ ಒಣ ಹವೆ, ತಾಪಮಾನದಲ್ಲಿ ಏರಿಕೆ

ಬೆಂಗಳೂರು, ಮಾರ್ಚ್​ 09: ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ (Weather Forecast) ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ ವಾತಾವರಣವೇ ಕಂಡುಬಂದಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಮಾರ್ಚ್​ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ

ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.

ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

Source link

Daily Devotional: ಶುಭಕಾರ್ಯಗಳಲ್ಲಿ ಗಂಡಸರು ಅಂಗವಸ್ತ್ರ ಯಾಕೆ ಧರಿಸಬೇಕು?

ಬೆಂಗಳೂರು, ಮಾರ್ಚ್​​ 09​​​​​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಶುಭಕಾರ್ಯಗಳಲ್ಲಿ ಗಂಡಸರು ಅಂಗವಸ್ತ್ರ ಯಾಕೆ ಧರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಶುಭಕಾರ್ಯಗಳಲ್ಲಿ ಪುರುಷರು ಅಂಗವಸ್ತ್ರ ಧರಿಸುವುದರ ಮಹತ್ವವು ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ. ಪೂಜೆ, ಹೋಮ, ಹವನ, ವಿವಾಹ ಹಾಗೂ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಪುರುಷರು ಭುಜದ ಮೇಲೆ ಅಂಗವಸ್ತ್ರವನ್ನು ಧರಿಸುತ್ತಾರೆ. ಈ ವಸ್ತ್ರವು ಕೇಸರಿ ಅಥವಾ ಬಿಳಿ ಬಣ್ಣದ್ದಾಗಿರಬಹುದು. ಅಂಗವಸ್ತ್ರ ಧರಿಸುವುದು ಕೇವಲ ಸಂಪ್ರದಾಯವಲ್ಲ, ಬದಲಿಗೆ ಸಂಕಲ್ಪ, ವ್ರತ ಹಾಗೂ ಗುರಿಯ ಸಂಕೇತವಾಗಿದೆ.

ಇದು ಸೂರ್ಯ ಮತ್ತು ಚಂದ್ರರ ಶಕ್ತಿಯನ್ನು ಜಾಗೃತಗೊಳಿಸಲು ಸಹಾಯ ಮಾಡುತ್ತದೆ. ಕಾರ್ಯಕ್ರಮಗಳಲ್ಲಿ ಅಂಗವಸ್ತ್ರ ಧರಿಸಿ ಕುಳಿತಾಗ ಏಕಾಗ್ರತೆ ಹೆಚ್ಚುತ್ತದೆ, ಶಿಸ್ತು ಮೂಡುತ್ತದೆ, ಮನಸ್ಸು ನಿರ್ಮಲವಾಗಿ ಚಂಚಲತೆ ಕಡಿಮೆಯಾಗುತ್ತದೆ. ದೇವಸ್ಥಾನಗಳಲ್ಲಿ ಅಥವಾ ಮನೆಯಲ್ಲಿ ದೇವರ ಮುಂದೆ ಕುಳಿತಾಗ ಸಾತ್ವಿಕ ಗುಣಗಳು ವೃದ್ಧಿಯಾಗುತ್ತವೆ. ಪೂಜಾ ಸಮಯದಲ್ಲಿ ಸಕಾರಾತ್ಮಕ ಶಕ್ತಿಗಳು ಶರೀರದಲ್ಲಿ ಸೇರಿ ಪೂಜೆಯ ಫಲವನ್ನು ಉತ್ತಮಗೊಳಿಸುತ್ತವೆ. ಬಿಳಿಯ ವಸ್ತ್ರ ಚಂದ್ರನ ಸಂಕೇತವಾದರೆ, ಕೇಸರಿ ವಸ್ತ್ರ ಕುಜನ ಸಂಕೇತವಾಗಿದೆ. ಸಾಮಾನ್ಯವಾಗಿ ಬಿಳಿಯ ವಸ್ತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅಂಗವಸ್ತ್ರವು ಏಕಾಗ್ರತೆ, ಶಕ್ತಿ ಹಾಗೂ ಭಕ್ತಿಯನ್ನು ತರುತ್ತದೆ ಎಂದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

Exit mobile version