ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು! – Kannada News | Girl Met Her Groom At Amazon Gets Company Logo On Mehendi At Her Wedding Watch Video
ನವದೆಹಲಿ, ಫೆಬ್ರವರಿ 16: ಕಂಪನಿಗಳಲ್ಲಿ ಅನೇಕ ಲವ್ ಸ್ಟೋರಿಗಳು ನಡೆಯುತ್ತಿರುತ್ತವೆ, ಕೆಲವೊಮ್ಮೆ ಅಲ್ಲೇ ಇರುವ ಸಹೋದ್ಯೋಗಿಗಳಿಗೂ ಈ ವಿಷಯ ಗೊತ್ತಾಗುವುದಿಲ್ಲ. ಅಮೆಜಾನ್ (Amazon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದಳು. ಆತನ ಜೊತೆ ಮದುವೆಯೂ ನಿಶ್ಚಯವಾಯಿತು. ಆಕೆ ತನಗೆ ಬಾಳ ಸಂಗಾತಿಯನ್ನು ಕೊಟ್ಟ ಕಂಪನಿಯಾದ ಅಮೆಜಾನ್ನ ಲೋಗೋವನ್ನು ತನ್ನ ಮೆಹಂದಿ ಶಾಸ್ತ್ರದಲ್ಲಿ ಕೈಯಲ್ಲಿ ಚಿತ್ರಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಪರಿಚಯಕ್ಕೆ ಕೊಂಡಿಯಾದ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾಳೆ. ವಧು ಪ್ರಿಯಾಂಶಿ ಶ್ರೀಮಲ್ ತನ್ನ ಪ್ರಿಯಕರನ…