ಬೆಂಗಳೂರು, (ಮಾರ್ಚ್ 07): ಸಚಿವ ಕೆಹೆಚ್ ಮುನಿಯಪ್ಪ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯರು ಉಚಿತ ಸೀರೆ ಪಡೆಯಲು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದು ನಾರಿ ಮಣಿಯರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಹುಟ್ಟು ಹಬಕ್ಕೆ ಬಂದಿದ್ದ ಮಹಿಳೆಯರಿಗಾಗಿ ಟೆಂಪೋದಲ್ಲಿ ಅಭಿಮಾನಿಗಳು ಸೀರೆಗಳನ್ನ ತಂದಿದ್ದರು. ಇದನ್ನು ನೋಡಿದ ಮಹಿಳೆಯರು ಸೀರೆಗಳನ್ನ ಪಡೆಯವುದಕ್ಕೆ ಕ್ಯೂ ನಲ್ಲು ಮುಗಿಬಿದ್ದಿದ್ದು, ನೂಕುನುಗ್ಗಲು ಮಾಡಿದ್ದಾರೆ. ಇದರಿಂದ ಪೊಲೀಸರು ಹೈರಾಣಾದರು.
2026 ರ ಟಿ20 ವಿಶ್ವಕಪ್‌ನ ಫೈನಲ್‌ಗೆ (2026 T20 World Cup Final) ಅರ್ಹತೆ ಪಡೆದಿರುವ ಟೀಂ ಇಂಡಿಯಾ ಇದೇ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ನ್ಯೂಜಿಲೆಂಡ್ (India vs New Zealand) ತಂಡವನ್ನು ಎದುರಿಸಲಿದೆ. ಈ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಲು ನೋಡುತ್ತಿದ್ದರೆ, ಇತ್ತ ನ್ಯೂಜಿಲೆಂಡ್ ಚೊಚ್ಚಲ ಟ್ರೋಫಿಗಾಗಿ ಎದುರು ನೋಡುತ್ತಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲವಾದ್ದರಿಂದ, ಈ ಪಂದ್ಯ ಟೀಂ ಇಂಡಿಯಾಕ್ಕೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಅಜೇಯವಾಗಿ ಉಳಿದಿರುವ ನ್ಯೂಜಿಲೆಂಡ್ ತಂಡವನ್ನು ಮಣಿಸಬೇಕೆಂದರೆ ಟೀಂ ಇಂಡಿಯಾ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಬೇಕಿದೆ. ಹಾಗಿದ್ದರೆ, ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದನ್ನು ನೋಡುವುದಾದರೆ..
ಬ್ಯಾಟಿಂಗ್ ವಿಭಾಗ ಹೇಗಿರಲಿದೆ?
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಭಾಗಶಃ ಎಲ್ಲರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆರಂಭಿಕನಾಗಿ ಸಂಜು ಸ್ಯಾಮ್ಸನ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬರುವ ಇಶಾನ್ ಕಿಶನ್ ಕೂಡ ಇಡೀ ಪಂದ್ಯಾವಳಿಯಲ್ಲಿ ತಂಡದ ಪರ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರನಾಗಿದ್ದಾರೆ. ಆ ನಂತರ ಬರುವ ನಾಯಕ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಆಲ್ರೌಂಡರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಅಭಿಷೇಕ್ ಶರ್ಮಾಗೆ ಗೇಟ್ಪಾಸ್?
ಆದರೆ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿರುವುದು ಆರಂಭಿಕ ಅಭಿಷೇಕ್ ಶರ್ಮಾ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರನ್‌ಗಳ ಮಳೆ ಹರಿಸಿದ್ದ ಅಭಿಷೇಕ್, ಟಿ20 ವಿಶ್ವಕಪ್ ಆರಂಭದ ಬಳಿಕ ಕಳಪೆ ಫಾರ್ಮ್ಗೆ ಸಿಲುಕಿ ನರಳುತ್ತಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಅಭಿಷೇಕ್ರಿಂದ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿದಿದೆ. ಉಳಿದಂತೆ ಮೂರು ಪಂದ್ಯಗಳಲ್ಲಿ ಅಭಿಷೇಕ್ಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇದೆಲ್ಲ ಸಾಲದೆಂಬಂತೆ ಸೆಮಿಫೈನಲ್ ಪಂದ್ಯದಲ್ಲೂ ಅಭಿಷೇಕ್ ತಮ್ಮ ಫಾರ್ಮ್ ಕಂಡುಕೊಳ್ಳಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಬೇಕೆಂಬ ಕೂಗು ಜೋರಾಗಿದೆ. ಆದಾಗ್ಯೂ ಫೈನಲ್ ದೃಷ್ಟಿಯಿಂದ ಅಭಿಷೇಕ್ರನ್ನು ಹೊರಗಿಡುವ ಸಾಹಸಕ್ಕೆ ಆಯ್ಕೆ ಮಂಡಳಿ ಕೈಹಾಕುವ ಸಾಧ್ಯತೆಗಳಿಲ್ಲ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ
ಇನ್ನು ಬೌಲಿಂಗ್ ವಿಭಾಗದಲ್ಲೂ ಬೌಲರ್ಗಳು ಕೊಂಚ ದುಬಾರಿಯಾದರೂ ಸಂದರ್ಭಕ್ಕೆ ಅನುಸಾರವಾಗಿ ತಂಡಕ್ಕೆ ನೆರವಾಗುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅಂದರೆ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ದುಬಾರಿಯಾಗುತ್ತಿರುವುದು ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಅಭಿಷೇಕ್ ಶರ್ಮಾ ಜೊತೆಗೆ ವರುಣ್ ಚಕ್ರವರ್ತಿಯನ್ನು ಹೊರಗಿಟ್ಟು, ಅವರ ಬದಲಿಗೆ ಕುಲ್ದೀಪ್ ಯಾದವ್ಗೆ ಅವಕಾಶ ನೀಡಬೇಕೆಂಬ ಕೂಗು ಜೋರಾಗಿದೆ. ಆದರೆ ಕೊನೆಯ ಪಂದ್ಯದಿಂದ ವರುಣ್ರನ್ನು ಹೊರಗಿಡುವ ಸಾಧ್ಯತೆಗಳಿಲ್ಲ. ಇದರರ್ಥ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ.
ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan), ಉಪ ಮುಖ್ಯಮಂತ್ರಿ ಆಗಿರುವ ಜೊತೆಗೆ ಹಲವು ಕೆಲವು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಮಂತ್ರಿ ಸಹ. ಪವನ್ ಕಲ್ಯಾಣ್ ಅವರು ರಾಜಕೀಯ ಮತ್ತು ಸಿನಿಮಾಗಳನ್ನು ಜೊತೆಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುನ್ನ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅವುಗಳಲ್ಲಿ ಎರಡರ ಚಿತ್ರೀಕರಣ ಮುಗಿಸಿ ಬಿಡುಗಡೆ ಆಗಿದ್ದವು. ಇದೀಗ ಮೂರನೇ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗಲಿದ್ದು, ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ.
ಇಂದು (ಮಾರ್ಚ್ 07) ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಸಣ್ಣ ಟೀಸರ್ ಅಷ್ಟೇ ಬಿಡುಗಡೆ ಆಗಿದೆ. ಕೇವಲ 43 ಸೆಕೆಂಡುಗಳ ಟೀಸರ್ ಇದಾಗಿದ್ದು, ಅಷ್ಟರಲ್ಲೇ ಸಿನಿಮಾನಲ್ಲಿ ಪವನ್ ಕಲ್ಯಾಣ್ ಎಷ್ಟು ಪವರ್ಫುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಸಿನಿಮಾನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ‘ಗಬ್ಬರ್ ಸಿಂಗ್’ ಮಾದರಿಯ ತಮಾಷೆ ಪ್ರವೃತ್ತಿಯ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಕೆಲವು ಪಂಚಿಂಗ್ ಡೈಲಾಗ್ಗಳು ಸಹ ಇವೆ. ಜೊತೆಗೆ ಸಣ್ಣ ಆಕ್ಷನ್ ತುಣುಕುಗಳು ಸಹ ಇವೆ.
ಹರೀಶ್ ಶಂಕರ್ ನಿರ್ದೇಶನ ಮಾಡಿರುವ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ, ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚೆ ಶುರು ಮಾಡಿದ್ದ ಸಿನಿಮಾ. ಈ ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ. ಮೈತ್ರಿ ಮೂವಿ ಮೇಕರ್ಸ್ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾದ ಟೀಸರ್ನಲ್ಲಿ ಒಂದು ಮಹತ್ವದ ಅಂಶವನ್ನು ಅಭಿಮಾನಿಗಳು ಗುರುತಿಸಿದ್ದಾರೆ. ಸಿನಿಮಾದ ಸಂಗೀತ ನಿರ್ದೇಶಕ ಎಂದು ಎಸ್ ತಮನ್ ಹೆಸರು ಬಳಸಲಾಗಿದೆ. ಅಸಲಿಗೆ ದೇವಿ ಶ್ರೀ ಪ್ರಸಾದ್ ಅವರು ಮೊದಲು ಈ ಸಿನಿಮಾದ ಸಂಗೀತ ನಿರ್ದೇಶಕನಾಗಿದ್ದರು. ದೇವಿಶ್ರೀ ಪ್ರಸಾದ್ ಅವರು ಹಾಡುಗಳನ್ನು ಮಾಡಿದ್ದರೆ, ಹಿನ್ನೆಲೆ ಸಂಗೀತವನ್ನು ಎಸ್ ತಮನ್ ನೀಡಿದ್ದಾರೆ.
ಇದನ್ನೂ ಓದಿ:
ಈ ಮೊದಲು ಮಾರ್ಚ್ 26 ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ, ಈಗ ಒಂದು ವಾರ ಮೊದಲೇ ಅಂದರೆ ಮಾರ್ಚ್ 19 ರಂದೇ ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕ ಬದಲಾವಣೆ ಆದ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಬಿಡುಗಡೆಯನ್ನು ಪ್ರೀಪಾನ್ ಮಾಡಿಕೊಳ್ಳಲಾಗಿದೆ. ಇದೀಗ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ರಣ್ವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾಕ್ಕೆ ಪೈಪೋಟಿ ನೀಡಲಿದೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದ್ದು, ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆದ ಬಳಿಕ ಬಿಡುಗಡೆ ಆಗುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.
ಇಡೀ ಯೋಜನೆಯನ್ನು ಪೂರೈಸಿದ ನಂತರವೂ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,300 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಲಿದೆ. ಫೆಬ್ರವರಿ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ನಿರ್ಮಿಸಲಾದ 2,722 ಫ್ಲ್ಯಾಟ್ಗಳನ್ನು ಉದ್ಘಾಟಿಸಿದ್ದು, ಹೆಚ್ಚುವರಿ 6,632 ಫ್ಲ್ಯಾಟ್ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಒಟ್ಟು ಯೋಜನಾ ಪ್ರದೇಶದ ಕೇವಲ ಶೇ. 12.9ರಷ್ಟು ಭಾಗವನ್ನು (ಅಂದರೆ ಸುಮಾರು 69.41 ಎಕರೆ) ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಅಥವಾ ಲೀಸ್ಗೆ ನೀಡಲು ಬಳಸಲಾಗುತ್ತದೆ.
ಹಳೆಯ ಸಣ್ಣ ಕಟ್ಟಡಗಳ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಎತ್ತರದ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಒಟ್ಟು 21,000ಕ್ಕೂ ಹೆಚ್ಚು ಹೊಸ ಫ್ಲ್ಯಾಟ್ಗಳು ಲಭ್ಯವಾಗಲಿವೆ.
ಈ ಪ್ರದೇಶಗಳಲ್ಲಿದ್ದ ಹಳೆಯ ಮನೆಗಳಲ್ಲಿ ಶೇ. 40ರಷ್ಟು ವಾಸಿಸಲು ಅಯೋಗ್ಯವಾಗಿದ್ದವು. ಅಲ್ಲದೆ ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 20,000ಕ್ಕೂ ಹೆಚ್ಚು ಮನೆಗಳ ಕೊರತೆಯಿತ್ತು.
ಸರೋಜಿನಿ ನಗರ, ನೇತಾಜಿ ನಗರ, ನೌರೋಜಿ ನಗರ, ಕಸ್ತೂರಿಬಾ ನಗರ, ತ್ಯಾಗರಾಜ್ ನಗರ, ಶ್ರೀನಿವಾಸಪುರಿ ಮತ್ತು ಮೊಹಮ್ಮದ್ಪುರ ಒಳಗೊಂಡಂತೆ ಸುಮಾರು 537 ಎಕರೆ ಪ್ರದೇಶದಲ್ಲಿ ಈ ಯೋಜನೆ ವ್ಯಾಪಿಸಿದೆ.
ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.
ದಾವಣಗೆರೆ, (ಮಾರ್ಚ್ 07): ಖಾಸಗಿ ಆಸ್ಪತ್ರೆ ನರ್ಸ್, ಕಷ್ಟ ಅಂತ ಹೇಳಿಕೊಂಡು ಉದ್ಯಮಿಯನ್ನು ಬುಟ್ಟಿಗೆ ಹಾಕೊಂಡಿದ್ದು, ಬಳಿಕ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು..ದಾವಣಗೆರೆಯ (Davanagere) ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣವನ್ನು (Honeytrap Case) ವಿದ್ಯಾನಗರ ಠಾಣೆ ಪೊಲೀಸರು ಭೇದಿಸಿದ್ದು, ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ್ದ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎನ್ನುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನಿಟ್ರ್ಯಾಪ್ ಸೂತ್ರದಾರಿ ನರ್ಸ್ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬುವರು ಬಂಧಿತ ಅರೋಪಿಗಳು.
ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಹೋಗಿ ಉದ್ಯಮಿ ಪ್ರಭು ಎನ್ನುವರನ್ನು ಬುಟ್ಟಿಗೆ ಹಾಕಿಕೊಂಡಿದ್ದ ನರ್ಸ್, ತನ್ನ ತಂಡದೊಂದಿಗೆ ಸೇರಿ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದಳು. ಇದೀಗ ನಾಲ್ವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಮೊದಲು ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಸುಷ್ಮಿಯಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.
ಆದ್ರೆ, ಕಳೆದ ಒಂದು ವಾರದ ಹಿಂದೆ ಸುಶ್ಮೀತಾ ಜೊತೆ ಆಕೆಯ ಸ್ನೇಹಿತೆ ಕೂಡ ಸರ್ವೀಸ್ ಅಪಾರ್ಟ್ಮೆಂಟ್ ಗೆ ಬಂದಿದ್ದಳು. ಸಂಜನಾಳನ್ನು ಪ್ರತ್ಯೇಕ ರೂಂ ನಲ್ಲಿ ಇರಿಸಿ ಸುಷ್ಮಿತಾ ಹಾಗೂ ಪ್ರಭು ಒಂದು ರೂಮ್ ನಲ್ಲಿ ಇದ್ದರು.ಈ ಸಂದರ್ಭದಲ್ಲಿ ಸಂಜನಾ, ರಾಹುಲ್, ಬೆಕ್ಕಿನಕಣ್ಣು ಕೃಷ್ಣ ಮೂರು ಜನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು ಪ್ರಭು ಸುಷ್ಮಿತಾ ಇದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ನಿಮ್ಮ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಅಲ್ಲದೇ ವಿಡಿಯೋ ಆಚೆ ಬರಬಾರದು ಅಂದ್ರೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಸಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಬಳಿಕ ಅರೋಪಿಗಳಾದ ಚನ್ನಬಸಪ್ಪ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಸೇರಿ ಪ್ರಭುಗೆ ಹಣಕ್ಕಾಗಿ ಬೆದರಿಕೆ ಹಾಕಲು ಶುರುಮಾಡಿದ್ದಾರೆ. ಇದರಿಂದ ಬೇಸತ್ತ ಪ್ರಭು, ಕೊನೆಗೆ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ಕೊಡುವದಾಗಿ ಪ್ರಭು ಅವರಿಂದ ಹೇಳಿಸಿ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಕರೆಯಿಸಿಕೊಂಡು ಲಾಕ್ ಮಾಡಿದ್ದಾರೆ.
ಕಿಯೊಂಜರ್, ಮಾ.7: ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ಒಡಿಶಾದ ಕಿಯೊಂಜರ್ ಜಿಲ್ಲೆಯ ಬನಾಜೋಡಿ ಗ್ರಾಮದ 30 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ತೋರಿದ ಜಾಣ್ಮೆ ಎಲ್ಲರ ಗಮನ ಸೆಳೆದಿದೆ. ಆನೆಯನ್ನು ಹಗ್ಗಗಳಿಂದ ಮೇಲೆತ್ತುವುದು ಅಪಾಯಕಾರಿ ಎಂದು ಮನಗಂಡ ಅಧಿಕಾರಿಗಳು, ಬಾವಿಗೆ ನೀರನ್ನು ಪಂಪ್ ಮಾಡುವ ಮೂಲಕ ಆನೆಯನ್ನು ಮೇಲೆಕ್ಕೆ ತೇಲುವಂತೆ ಮಾಡುವ ‘ಆರ್ಕಿಮಿಡೀಸ್ ತತ್ವವನ್ನು (Archimedes’ Principle) ಬಳಸಿದರು. ಬಾವಿಗೆ ನೀರು ತುಂಬುತ್ತಿದ್ದಂತೆ ಆನೆಯು ನೀರಿನ ಮಟ್ಟದೊಂದಿಗೆ ಮೇಲೆ ಬಂದಿತು. ಇದು ಆನೆಯ ಮೇಲೆ ಹೆಚ್ಚಿನ ಒತ್ತಡ ಅಥವಾ ಗಾಯಗಳಾಗದಂತೆ ತಡೆಯಲು ಸಹಕಾರಿಯಾಯಿತು. ಆನೆಯು ಅರ್ಧದಷ್ಟು ಮೇಲೆ ಬಂದ ನಂತರ, ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಪಕ್ಕದಲ್ಲಿ ದಾರಿ ನಿರ್ಮಿಸಿ ಆನೆಯನ್ನು ಸುರಕ್ಷಿತವಾಗಿ ಹೊರಬರುವಂತೆ ಮಾಡಲಾಯಿತು. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಆನೆಗೆ ಯಾವುದೇ ಪ್ರಾಣಾಪಾಯ ಸಂಭವಿಸದೆ ಅದು ಕಾಡಿನತ್ತ ತೆರಳಿದೆ.
2026 ರ ಟಿ20 ವಿಶ್ವಕಪ್‌ನ ಫೈನಲ್ (T20 World Cup Final 2026) ಕೊನೆಯ ಹಂತ ತಲುಪಿದೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಾಯುವಿಕೆಗೆ ಅಂತ್ಯ ಹಾಡಲು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು (Narendra Modi Stadium) ಸಜ್ಜಾಗಿದೆ. ಮಾರ್ಚ್ 8 ರ ಭಾನುವಾರದಂದು ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ಟ್ರೋಫಿ ಎತ್ತಿಹಿಡಿಯುವ ಸಲುವಾಗಿ ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಇಲ್ಲಿಯವರೆಗೆ, ಐಸಿಸಿ ಈವೆಂಟ್‌ಗಳ ಏಕದಿನ ಮತ್ತು ಟೆಸ್ಟ್ ಸ್ವರೂಪಗಳಲ್ಲಿ ಉಭಯ ತಂಡಗಳು ಮೂರು ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಕಿವೀಸ್ ಎರಡು ಬಾರಿ ಮತ್ತು ಭಾರತ ಒಮ್ಮೆ ಗೆಲುವು ಸಾಧಿಸಿದೆ. ಈಗ ಟಿ20 ಸ್ವರೂಪದ ಫೈನಲ್‌ನಲ್ಲಿ ಉಭಯ ತಂಡಗಳು ಎದುರುಬದುರಾಗುತ್ತಿವೆ. ಹೀಗಾಗಿ ಈ ಹೈ-ವೋಲ್ಟೇಜ್ ಪಂದ್ಯವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಉಚಿತವಾಗಿ ವೀಕ್ಷಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಅಂತಿಮ ಪಂದ್ಯವು ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗಂಟೆಗೆ ಪ್ರಾರಂಭವಾಗುತ್ತದೆ?
ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8 ರ ಭಾನುವಾರ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಿಸಬಹುದು?
ಈ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು OTT ಯಲ್ಲಿ ಎಲ್ಲಿ ವೀಕ್ಷಿಸಬಹುದು?
ಇಡೀ ಟಿ20 ವಿಶ್ವಕಪ್‌ನಂತೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಇರುತ್ತದೆ.
ದಳಪತಿ ವಿಜಯ್ (Thalapathy Vijay) ರಾಜಕೀಯ ಪಕ್ಷ ಸ್ಥಾಪಿಸಿದ್ದು, ತಮಿಳುನಾಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ, ತಮ್ಮ ಪಕ್ಷವನ್ನು ಸಜ್ಜು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ದಳಪತಿ ವಿಜಯ್ ಅವರ ಖಾಸಗಿ ಬದುಕಿನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಲು ಆರಂಭಿಸಿವೆ. ವಿಜಯ್ ಅವರ ಪತ್ನಿ ಹಠಾತ್ತನೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ, ವಿಜಯ್ಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದೆ ಎಂದು ವಿಜಯ್ ಪತ್ನಿ ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಬಹಿರಂಗ ಆಗುತ್ತಿದ್ದಂತೆ ವಿಜಯ್ ಮತ್ತು ತ್ರಿಷಾ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಅದೂ ಸಹ ಸಖತ್ ಸುದ್ದಿ ಆಗುತ್ತಿದೆ.
ತ್ರಿಷಾ ಜೊತೆಗಿನ ವಿಜಯ್ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಆಡಳಿತ ಪಕ್ಷದವರು ಇತರೆ ರಾಜಕೀಯ ಪಕ್ಷದ ಕಾರ್ಯಕರ್ತರು ಇದೇ ವಿಷಯ ಇರಿಸಿಕೊಂಡು ವಿಜಯ್ ಬಗ್ಗೆ ಟೀಕೆ ನಡೆಸುತ್ತಿದ್ದಾರೆ. ವಿಜಯ್ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅವರ ಪರವಹಿಸಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವಿಜಯ್ ವಿಚ್ಛೇದನ, ತ್ರಿಷಾ ಜೊತೆಗಿನ ಸಂಬಂಧ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇದೀಗ ಈ ಬಗ್ಗೆ ಮಾತನಾಡಿದ್ದಾರೆ.
ವಿಜಯ್, ಇಂದು (ಮಾರ್ಚ್ 07) ಪಕ್ಷದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಿದ್ದರು. ಚೆನ್ನೈನಲ್ಲಿ ನಡೆದ ಈ ಬೃಹತ್ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು, ಇತರೆ ಕಾರ್ಯಕರ್ತರು ಆಗಮಿಸಿದ್ದರು. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷದ ವತಿಯಿಂದ ಮಹಿಳೆಯರಿಗೆ ಘೋಷಿಸಲಾಗುವ ಆರು ಯೋಜನೆಗಳ ವಿವರವನ್ನು ವಿಜಯ್ ನೀಡಿದರು. ಇದೇ ಕಾರ್ಯಕ್ರಮದಲ್ಲಿ ವಿಜಯ್ ಅವರು, ಇತ್ತೀಚೆಗೆ ತಮ್ಮ ಖಾಸಗಿ ಬದುಕಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದರು.
ಯಾವುದನ್ನೂ ನೇರವಾಗಿ ಹೇಳದ ವಿಜಯ್, ‘ಇತ್ತೇಚೆಗೆ ಕೆಲವು ಸಮಸ್ಯೆಗಳ ಬಗ್ಗೆ ಎಲ್ಲ ಸಾಕಷ್ಟು ವಿಚಾರಗಳು, ಚರ್ಚೆಗಳು ನಡೆಯುತ್ತಿವೆ. ನೀವು (ಅಭಿಮಾನಿಗಳು) ಸಹ ಈ ಸಮಸ್ಯೆಗಳ ಬಗ್ಗೆ ನೀವು ಹೋರಾಡುತ್ತಿರುವುದು, ಅದರಿಂದ ನೋವುಣ್ಣುತ್ತಿರುವುದನ್ನು ಗಮನಿಸುತ್ತಿದ್ದೇನೆ. ಅದನ್ನು ನೋಡಿ ನನಗೆ ನೋವಾಗುತ್ತಿದೆ. ಆ ಸಮಸ್ಯೆಗಳನ್ನೆಲ್ಲ ನಾನು ನೋಡಿಕೊಳ್ಳುವೆ. ನಾವು ನೀವು ಎಲ್ಲ ಸೇರಿಕೊಂಡು ಪ್ರಜೆಗಳಿಗೆ ಇರುವ ಸಮಸ್ಯೆಗಳ ಬಗ್ಗೆ ಅಷ್ಟೇ ಗಮನಕೊಡೋಣ. ಅವುಗಳ ಬಗ್ಗೆ ಎಲ್ಲ ತಲೆಕೆಡಿಸಿಕೊಳ್ಳಬೇಡಿ, ಕಾನ್ಫಿಡೆಂಟ್ ಆಗಿರಿ, ಜಯ ನಿಶ್ಚಯ’ ಎಂದು ವಿಜಯ್ ಹೇಳಿದ್ದಾರೆ.
ಆ ಮೂಲಕ, ತಮ್ಮ ಖಾಸಗಿ ಜೀವನದ ಸಮಸ್ಯೆಗಳನ್ನು ತಾವು ಬಗೆಹರಿಸುವುದಾಗಿ ವಿಜಯ್ ಹೇಳಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳು ಸಹ ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುವುದು ಬೇಡ ಎಂದು ಸಹ ಪರೋಕ್ಷವಾಗಿ ಸಂದೇಶ ನೀಡಿದ್ದಾರೆ. ವಿಜಯ್ ಅವರ ಪತ್ನಿ ಸಂಗೀತ ಅವರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಜಯ್ ಹಾಗೂ ಸಂಗೀತ 1999 ರಲ್ಲಿ ಮದುವೆ ಆಗಿದ್ದರು. ಇದೀಗ ವಿಜಯ್, ತ್ರಿಷಾ ಜೊತೆಗೆ ಆಪ್ತವಾಗಿದ್ದಾರೆ.
2026 ರ ಟಿ20 ವಿಶ್ವಕಪ್‌ನ ಫೈನಲ್ (2026 T20 World Cup Final) ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ಸಜ್ಜಾಗಿದೆ. ಆತಿಥೇಯ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ನಡೆಯಲಿರುವ ಈ ಪಂದ್ಯವೂ ಕೂಡ ಹೈಸ್ಕೋರಿಂಗ್ ಪಂದ್ಯವಾಗಲಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಏಕಂದರೆ ಮೋದಿ ಕ್ರೀಡಾಂಗಣದ ಪಿಚ್ ಅನ್ನು ಫೈನಲ್ ಪಂದ್ಯಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಹೀಗಾಗಿ ಫೈನಲ್ ಪಂದ್ಯವೂ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಂತೆಯೇ ಅಭಿಮಾನಿಗಳನ್ನು ರಂಜಿಸಲಿದೆ ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಈ ಫೈನಲ್ ಪಂದ್ಯಕ್ಕೂ ಮುನ್ನ ಮೋದಿ ಮೈದಾನದ ಪಿಚ್ ಹೇಗಿರಲಿದೆ? ಯಾರಿಗೆ ಹೆಚ್ಚು ನೆರವು ಸಿಗಲಿದೆ ಎಂಬುದನ್ನು ವಿವರವಾಗಿ ಹೇಳಲಿದ್ದೇವೆ.
ಅಹಮದಾಬಾದ್ ಪಿಚ್ ಹೇಗಿರಲಿದೆ?
ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ ಪಿಚ್ ಬಗ್ಗೆ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಪಿಚ್ ಅನ್ನು ಕೆಂಪು ಮತ್ತು ಕಪ್ಪು ಜೇಡಿಮಣ್ಣಿನ ಮಿಶ್ರಣದಿಂದ ಸಿದ್ಧಪಡಿಸಲಾಗುತ್ತಿದೆ. ಅದರಲ್ಲೂ ಕೆಂಪು ಜೇಡಿಮಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಹೀಗಾಗಿ ಕ್ರಿಕೆಟ್ ತಜ್ಞರ ಪ್ರಕಾರ, ಅಂತಹ ಪಿಚ್‌ನಲ್ಲಿ ಚೆಂಡು ಉತ್ತಮ ಬೌನ್ಸ್ ಪಡೆಯುತ್ತದೆ. ಇದರಿಂದ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳನ್ನು ಆಡಲು ಸುಲಭವಾಗುತ್ತದೆ. ಬ್ಯಾಟ್ಸ್‌ಮನ್‌ಗಳು ಪಿಚ್ ಅನ್ನು ಅರ್ಥಮಾಡಿಕೊಂಡರೆ, ದೊಡ್ಡ ಸ್ಕೋರ್ ಗಳಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ, ಫೈನಲ್‌ನಲ್ಲಿಯೂ ರನ್‌ಗಳ ಸುರಿಮಳೆಯನ್ನು ಕಾಣಬಹುದು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಂತೆಯೇ ಈ ಪಿಚ್ ಕೂಡ ಇರಬಹುದು ಎಂದು ವರದಿಯಾಗಿದೆ. ಆ ಪಂದ್ಯದಲ್ಲಿ ಭಾರತ 253 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ 246 ರನ್ ಕಲೆಹಾಕಿತ್ತು. ವರದಿಗಳ ಪ್ರಕಾರ, ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೆ, ಫೈನಲ್‌ನಲ್ಲಿ 200+ ಸ್ಕೋರ್ ದಾಖಲಾಗುವುದು ಖಚಿತ. ಆದಾಗ್ಯೂ, ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಗಳನ್ನು ಹೊಂದಿರುವುದರಿಂದ, ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಆದರೆ ಕ್ರಿಕೆಟ್ ಅಭಿಮಾನಿಗಳು ರೋಮಾಂಚಕಾರಿ ಮತ್ತು ಹೆಚ್ಚಿನ ಸ್ಕೋರ್‌ಗಳ ಫೈನಲ್ ಅನ್ನು ನಿರೀಕ್ಷಿಸಬಹುದು ಎಂಬುದು ಖಚಿತ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಶ್ಚಿಮ ಬಂಗಾಳ, ಮಾ.7: ಸಿಲಿಗುರಿ ಸಮೀಪದ ಬಿಧಾನ್ನಗರದಲ್ಲಿ ಆಯೋಜಿಸಲಾಗಿದ್ದ 9ನೇ ಅಂತರಾಷ್ಟ್ರೀಯ ಸ್ಯಾಂತಾಲ್ (Santal) ಸಮ್ಮೇಳನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಉಂಟಾದ ಕಹಿ ಅನುಭವದ ಕುರಿತು ಪ್ರಧಾನಿ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮೇಳನದ ವೇದಿಕೆಯನ್ನು ಕೊನೆಯ ಕ್ಷಣದಲ್ಲಿ ಸಣ್ಣ ಜಾಗಕ್ಕೆ ಬದಲಾಯಿಸಿದ್ದಕ್ಕೆ ರಾಷ್ಟ್ರಪತಿಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. “ಸ್ಯಾಂತಾಲ್ ಸಮುದಾಯವು ಒಗ್ಗೂಡುವುದು ಯಾರಿಗೋ ಇಷ್ಟವಿಲ್ಲದಂತಿದೆ” ಎಂದು ಅವರು ಮಾರ್ಮಿಕವಾಗಿ ನುಡಿದರು.
ದೇಶದ ಪ್ರಥಮ ಪ್ರಜೆ ರಾಜ್ಯಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿಗಳು ಸ್ವಾಗತಿಸುವುದು ಸಂಪ್ರದಾಯ. ಆದರೆ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದನ್ನು ರಾಷ್ಟ್ರಪತಿಗಳು ಪ್ರಶ್ನಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, “ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ಎಲ್ಲಾ ಮಿತಿಗಳನ್ನು ಮೀರಿದೆ. ಆದಿವಾಸಿ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳಿಗೆ ಮಾಡಿರುವ ಈ ಅವಮಾನವು ಪ್ರತಿಯೊಬ್ಬ ಭಾರತೀಯನಿಗೂ ನೋವು ತಂದಿದೆ” ಎಂದು ಕಿಡಿಕಾರಿದ್ದಾರೆ.
ಬುಡಕಟ್ಟು ಸಂಸ್ಕೃತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ಅತ್ಯಂತ ನಿರ್ಲಕ್ಷ್ಯದಿಂದ ಕಾಣುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ಇನ್ನು 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ತಮಿಳುನಾಡು ರಾಜ್ಯಪಾಲರಾಗಿದ್ದ ಆರ್.ಎನ್. ರವಿ ಅವರನ್ನು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಿರುವುದು ಕೂಡ ಟಿಎಂಸಿ ಮತ್ತು ಕೇಂದ್ರದ ನಡುವಿನ ಸಂಘರ್ಷಕ್ಕೆ ತುಪ್ಪ ಸುರಿದಂತಿದೆ.
ಬಿಜೆಪಿ ರಾಷ್ಟ್ರಪತಿ ಭವನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದು, ಮಣಿಪುರದಂತಹ ಘಟನೆಗಳು ನಡೆದಾಗ ರಾಷ್ಟ್ರಪತಿಗಳು ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದ್ದಾರೆ.