Headlines

Asia Cup 2026: ಏಷ್ಯಾಕಪ್​ಗೆ ಭಾರತ ಮಹಿಳಾ ತಂಡ ಪ್ರಕಟ; ಚೇತರಿಸಿಕೊಳ್ಳದ ಶ್ರೇಯಾಂಕ ಪಾಟೀಲ್ – Kannada News | India Women’s Asia Cup 2026 Squad: Prema Rawat Replaces Injured Shreyanka Patil

2026 ರ ಮಹಿಳಾ ಏಷ್ಯಾಕಪ್‌ (Women’s Asia Cup 2026 ) ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿದ್ದು, ಈ ಪಂದ್ಯಾವಳಿಗಾಗಿ ಬಿಸಿಸಿಐ(BCCI), ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಿದೆ. ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿರುವ ತಂಡವನ್ನೇ ಆಯ್ಕೆದಾರರು ಈ ಪಂದ್ಯಾವಳಿಗೂ ಆಯ್ಕೆ ಮಾಡಿದ್ದಾರೆ. ಆದರೆ ಟಿ20 ವಿಶ್ವಕಪ್ ಸಮಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್ ಇನ್ನು ಚೇತರಿಸಿಕೊಳ್ಳದ ಕಾರಣ ಅವರನ್ನು ಏಷ್ಯಾಕಪ್​ನಿಂದಲೂ ಹೊರಗಿಡಲಾಗಿದೆ. ಹೀಗಾಗಿ ಅವರ ಬದಲಿಗೆ ಲೆಗ್-ಸ್ಪಿನ್ ಆಲ್‌ರೌಂಡರ್…

Read More

‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ – Kannada News | JM Prahlad talks about Yash look in Ramayana movie

‘ರಾಮಾಯಣ’ (Ramayana) ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಪೌರಾಣಿಕ ಕತೆ ಆಧರಿಸಿದ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಸಿನಿಮಾ ವಿಮರ್ಶಕರು ಎಲ್ಲರೂ ಕುತೂಹಲ, ವಿಮರ್ಶೆಯ ಕಣ್ಣುಗಳಿಂದ ಟ್ರೈಲರ್ ಅನ್ನು ನೋಡುತ್ತಿದ್ದಾರೆ. ಕನ್ನಡದ ಜನಪ್ರಿಯ ಚಿತ್ರಸಾಹಿತಿ ಜೆಎಂ ಪ್ರಹ್ಲಾದ್ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ಕನ್ನಡದ ಹಳೆಯ ಸಿನಿಮಾಗಳು, ಅವುಗಳ ಸೆಟ್, ಪ್ರಸಾಧನ ಇನ್ನಿತರೆಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಇತ್ತೀಚೆಗೆ ಬಿಡುಗಡೆ ಆದ ‘ರಾಮಾಯಣ’ ಸಿನಿಮಾದ ಟ್ರೈಲರ್ ಮತ್ತು ಅದರಲ್ಲಿ ಯಶ್ ಅವರ ಲುಕ್ ಬಗ್ಗೆಯೂ ಮಾತನಾಡಿದ್ದಾರೆ….

Read More

ಮುಂದುವರಿದ ವರುಣನ ಅಬ್ಬರ, ಈ ಜಿಲ್ಲೆಗಳತಾಲೂಕುಗಳಲ್ಲಿ ಆ.3ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – Kannada News | Holiday declared for schools and colleges In Shivamogga And Uttara Kannada Some Taluk On August 3rd For Heavy Rain

ಶಿವಮೊಗ್ಗ, (ಆಗಸ್ಟ್ 02): ಕರ್ನಾಟಕದಲ್ಲಿ ಮುಂಗಾರು ಮಳೆ (monsson Rain) ಆರಂಭದಲ್ಲಿ ಕೈಕೊಟ್ಟಿದ್ದರೂ ಸಹ ಜುಲೈ ಅಂತ್ಯದಿಂದ ಚುರುಕುಗೊಂಡಿದೆ. ಅದರಲ್ಲೂ ಕರಾವಳಿ (Karavali) ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವರುಣ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಆದರೂ ಮಳೆ ಅಬ್ಬರ ಇಲ್ಲಿ ನಿಂತಿಲ್ಲ. ಮುಂದಿನ ದಿನಗಳಲ್ಲೂ ಸಹ ಮುಂದುವರಿಯಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ (Shivamogga) ಹಾಗೂ ಉತ್ತರ ಕನ್ನಡ  (Uttara Kannada) ಜಿಲ್ಲೆಯ ಕೆಲ ತಾಲೂಕುಗಳಲ್ಲಿ ನಾಳೆ (ಆಗಸ್ಟ್ 03)…

Read More

ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು? – Kannada News | Priyanka Upendra talks about her 50th movie Detective Theekshna

ಪ್ರಿಯಾಂಕಾ ಉಪೇಂದ್ರ (Priyanka Upendra) ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿ 25 ವರ್ಷಗಳಾಗಿವೆ. ನಟ ಉಪೇಂದ್ರ ಅವರನ್ನು ವಿವಾಹವಾಗಿ ಇಲ್ಲೇ ಸೆಟಲ್ ಆಗಿದ್ದಾರೆ. ನಟನೆಗಾಗಿ ಬಂದ ಪ್ರಿಯಾಂಕಾ ಉಪೇಂದ್ರ 25 ವರ್ಷಗಳ ಬಳಿಕವೂ ಕನ್ನಡ ಸಿನಿಮಾಗಳಲ್ಲಿ ನಟನೆಯನ್ನು ಮುಂದುವರೆಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳು, ಮಹಿಳಾ ಆಕ್ಷನ್, ಹಾರರ್ ಸಿನಿಮಾಗಳಲ್ಲಿ ಇತ್ತೀಚೆಗೆ ಪ್ರಿಯಾಂಕಾ ಉಪೇಂದ್ರ ಹೆಚ್ಚಾಗಿ ನಟಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಉಪೇಂದ್ರ ತಮ್ಮ 50ನೇ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ಡಿಡೆಕ್ಟಿವ್ ತೀಕ್ಷ್ಣ’. ಸಿನಿಮಾದ ಬಗ್ಗೆ ಟಿವಿ9 ಕನ್ನಡದ ಜೊತೆಗೆ…

Read More

ಪೊಲೀಸ್ ನೇಮಕಾತಿ ಪರೀಕ್ಷೆ ಯಶಸ್ವಿ: OMR, ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದ ಕೆಇಎ – Kannada News | Karnataka Police Recruitment Exam Successful: KEA Clarifies OMR Sheet and Question Paper Numbers Need Not Match

ಕರ್ನಾಟಕ ಪರೀಕ್ಷಾ ಪ್ರಾಧಿಕಾರImage Credit source: google ಬೆಂಗಳೂರು, ಆಗಸ್ಟ್​​ 02: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3991 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ (Police Constable Exam) ಇಂದು ನಡೆದ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ. ಜೊತೆಗೆ OMR ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಕ್ರಮಸಂಖ್ಯೆ ಒಂದೇ ಆಗಿರಬೇಕಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ. ಗೊಂದಲಗಳಿಗೆ ಕೆಇಎ ಸ್ಪಷ್ಟನೆ ಪೊಲೀಸ್​ ಕಾನ್ಸ್​ಟೇಬಲ್ ಪರೀಕ್ಷೆ ವೇಳೆ…

Read More

ಭಾರತದಲ್ಲೇ ‘ಧುರಂಧರ್’, ‘ಪಠಾಣ್’ ಸಿನಿಮಾವನ್ನು ಹಿಂದಿಕ್ಕಿದ ಸ್ಪೈಡರ್ ಮ್ಯಾನ್ – Kannada News | Spider Man Brand New Day movie breaks Dhurandhar, Pathaan movie records

‘ಸ್ಪೈಡರ್‌ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider Man) ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಭಾರತದಲ್ಲಿ ಈ ಸಿನಿಮಾ ಜುಲೈ 30ಕ್ಕೆ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಗೆ ಮುಂಚೆಯೇ ಭಾರಿ ಸಂಖ್ಯೆಯ ಟಿಕೆಟ್​​ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿತ್ತು. ಅದೂ ದುಬಾರಿ ಮೊತ್ತಕ್ಕೆ. ಇದೀಗ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿಯೇ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಲೆಕ್ಷನ್ ಅಲ್ಲಿ ಹಿಂದಿಕ್ಕಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತದ ಸೂಪರ್ ಹಿಟ್ ಸಿನಿಮಾಗಳಾದ ‘ಧುರಂಧರ್’…

Read More

ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿದ ಇಂಡಿಯಾ ರಾಯಲ್ಸ್ – Kannada News | Indian Royals Edge Pakistan Panthers by 2 Wickets in Thrilling Asian Legends League Win

ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ( Asian Legends League) ಇಂದು ಇಂಡಿಯನ್ ರಾಯಲ್ಸ್ ತಂಡ ಪಾಕಿಸ್ತಾನ್ ಪ್ಯಾಂಥರ್ಸ್ (Indian Royals vs  Pakistan Panthers) ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ್ ಪ್ಯಾಂಥರ್ಸ್ ತಂಡವನ್ನು 2 ವಿಕೆಟ್​ಗಳಿಂದ ಮಣಿಸಿದ ಇಂಡಿಯನ್ ರಾಯಲ್ಸ್ ತಂಡ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 168 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಡಿಯನ್ ರಾಯಲ್ಸ್ 17.4 ಓವರ್​ಗಳಲ್ಲಿ…

Read More

‘ಮೋದಿ ವಿಫಲರಾಗಿದ್ದಾರೆ…’ – ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಮುಸ್ಲಿಂ ನಾಯಕ ಶೆಹಜಾದ್ ಪೂನಾವಾಲಾ – Kannada News | Shehzad Poonawalla shares video message, gives sarcastic reason why Modi has failed

ನವದೆಹಲಿ, ಆಗಸ್ಟ್ 2: ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ (Shehzad Poonawalla) ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯಾತ್ಮಕ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರತಿಪಕ್ಷಗಳು ಮತ್ತು ಮೋದಿಯವರ ಟೀಕಾಕಾರರನ್ನು ಲೇವಡಿ ಮಾಡಿದ್ದಾರೆ. ಮೊನ್ನೆಯಷ್ಟೇ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ತಮ್ಮ ಟ್ವಿಟ್ಟರ್ ಬಯೋದಲ್ಲಿ ಬಿಜೆಪಿ ಪದದ ಉಲ್ಲೇಖವನ್ನು ತೆಗೆದುಹಾಕಿ, ಅವರು ಪಕ್ಷದಿಂದಲೇ ನಿರ್ಗಮಿಸುತ್ತಿರಬಹುದು ಎನ್ನುವ ಶಂಕೆಗೆ ಎಡೆ ಮಾಡಿಕೊಟ್ಟಿದ್ದರು. ಅದರ ಬೆನ್ನಲ್ಲೇ ಅವರು ಮೋದಿ ವಿಫಲರಾಗಿದ್ದಾರೆ ಎಂದು ಹೇಳಿ…

Read More

ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ಗೊಂದಲ: ಪ್ರಿಯಾಂಕ್​​ ಖರ್ಗೆ ರಾಜೀನಾಮೆಗೆ ಆಗ್ರಹ – Kannada News | Karnataka Police Constable Exam Chaos: R Ashoka spark Government, Demands Priyank Kharge’s Resignation

ಆರ್. ಅಶೋಕ್​​, ಪ್ರಿಯಾಂಕ್​ ಖರ್ಗೆImage Credit source: tv9 kannada ಬೆಂಗಳೂರು, ಆಗಸ್ಟ್​​ 02: ರಾಜ್ಯಾದ್ಯಂತ ಇಂದು ಬಹುನಿರೀಕ್ಷಿತ 3 ಸಾವಿರದ 991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ (Police Constable Exam) ಅಂತ್ಯವಾಗಿದೆ. ಆದರೆ ಒಂದೆಡೆ OMR ಶೀಟ್ ಅದಲು ಬದಲು, ಮತ್ತೊಂದೆಡೆ ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಭ್ಯರ್ಥಿಗಳು ರೊಚ್ಚಿಗೆದ್ದಿದ್ದರು. ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R…

Read More

ಮಗುವನ್ನು ಬಲಿಪಡೆದ ಕುರ್​​​​​​​​​​ಕುರೆ, ಇದ್ದ ಏಕೈಕ ಪುತ್ರನನ್ನ ಕಳೆದುಕೊಂಡ ಪೋಷಕರು – Kannada News | 3 year old Boy Dies After Swallowing Toy Ball Found Inside Chips Packet at Mysuru

ಮೈಸೂರು, (ಆಗಸ್ಟ್ 02): ಕುರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್​ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ಮೈಸೂರು (mysuru) ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಘಟನೆ ಶನಿವಾರ ನಡೆದಿದೆ. ಗೌರಿಪುರ ಗ್ರಾಮದ ಸಂತೋಷ್-ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದ್ದಾನೆ. ಕುರುಕುರೆಯೊಂದಿಗೆ ಆ ಪ್ಲಾಸ್ಟಿಕ್ ಬಾಲ್ ಅನ್ನು ಬಾಯಿಗೆ ಹಾಕಿ ನುಂಗಿದ್ದಾನೆ. ತಕ್ಷಣವೇ ಆ ಬಾಲ್ ಗಂಟಲಿಗೆ ಅಡ್ಡವಾಗಿ ಸಿಕ್ಕಿಕೊಂಡು ಮಗು ಉಸಿರಾಡಲು ಪರದಾಡಿ ಒದ್ದಾಡತೊಡಗಿದೆ. ​ಪರಿಸ್ಥಿತಿಯ ಗಂಭೀರತೆ ಅರಿತ ಮನೆಯವರು…

Read More