ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ಉಚಿತ ವಸತಿ ಸೌಲಭ್ಯ – Kannada News | Sonu Sood offers free accommodation for stranded travellers in Dubai crisis

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಅಮೆರಿಕ-ಇರಾನ್ ಸಂಘರ್ಷದ ನಡುವೆ, ವಿಮಾನಯಾನ ರದ್ದತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ನೂರಾರು ಪ್ರವಾಸಿಗರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ (Sonu Sood) ಧಾವಿಸಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸುವ ಮೂಲಕ ಅವರು ಮತ್ತೊಮ್ಮೆ ತಮ್ಮ ದೊಡ್ಡ ಗುಣವನ್ನು ಪ್ರದರ್ಶಿಸಿದ್ದಾರೆ. ಈ ಹಿಂದೆ 2020-21ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸುವ ಮೂಲಕ ಸೋನು ಸೂದ್ ದೇಶಾದ್ಯಂತ ಅಪಾರ ಪ್ರೀತಿ ಗಳಿಸಿದ್ದರು. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಅವರು ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಜಾಗತಿಕ ಮಟ್ಟದ ರಾಜಕೀಯ ಉದ್ವಿಗ್ನತೆಯಿಂದಾಗಿ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟವನ್ನು ರದ್ದುಗೊಳಿಸಿವೆ. ಇದರಿಂದಾಗಿ ಪ್ರವಾಸಿಗರು ತಾಯ್ನಾಡಿಗೆ ಮರಳಲಾಗದೆ ದುಬೈನಲ್ಲಿ ಪರದಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿದ ಸೋನು ಸೂದ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

‘ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಯಾರೆಲ್ಲಾ ದುಬೈನಲ್ಲಿ ಸಿಲುಕಿಕೊಂಡಿದ್ದಾರೋ, ಅವರಿಗೆ ನಾವು ನೆರವಾಗಲು ಸಿದ್ಧರಿದ್ದೇವೆ. ನೀವು ಉಳಿದುಕೊಳ್ಳಲು ನಾವು ಉಚಿತ ವ್ಯವಸ್ಥೆ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದ್ದಾರೆ. ಕೇವಲ ಭಾರತೀಯರಿಗೆ ಮಾತ್ರವಲ್ಲದೆ, ಯಾವುದೇ ದೇಶದವರಾಗಿದ್ದರೂ ಅವರಿಗೆ ಆಶ್ರಯ ನೀಡುವುದಾಗಿ ಸೋನು ಸೂದ್ ತಿಳಿಸಿದ್ದಾರೆ.

‘ನಮ್ಮ ಭಾರತೀಯ ಸಹೋದರರು ಇರಲಿ ಅಥವಾ ಬೇರೆ ಯಾವುದೇ ರಾಷ್ಟ್ರದವರೇ ಇರಲಿ, ನೀವು ದುಬೈನಲ್ಲಿ ಸಂಕಷ್ಟದಲ್ಲಿದ್ದರೆ ದಯವಿಟ್ಟು ನಮಗೆ ಅಥವಾ ದುಗಾಸ್ತ ಪ್ರಾಪರ್ಟೀಸ್ ಸಂಸ್ಥೆಗೆ ನೇರವಾಗಿ ಸಂದೇಶ ಕಳುಹಿಸಿ. ನೀವು ಸುರಕ್ಷಿತವಾಗಿ ನಿಮ್ಮ ದೇಶಕ್ಕೆ ಮರಳುವವರೆಗೆ ನಿಮ್ಮ ವಾಸ್ತವ್ಯದ ಜವಾಬ್ದಾರಿ ನಮ್ಮದು’ ಎಂದು ಸೋನು ಸೂದ್ ಹೇಳಿದ್ದಾರೆ.

ಇದನ್ನೂ ಓದಿ: ಸೋನು ಸೂದ್ ಸಹಾಯದ ಬಗ್ಗೆ ಅನುಮಾನ ಹೊರಹಾಕಿದ ವ್ಯಕ್ತಿ.. ಆಮೇಲೆ ಏನಾಯ್ತು?

ಸೋನು ಸೂದ್ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಬಾಲಿವುಡ್‌ನ ಏಕೈಕ ರಿಯಲ್ ಹೀರೋ ಎಂದರೆ ನೀವೇ’, ‘ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಸೋನು ಸೂದ್ ಅವರನ್ನು ಹೊಗಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಮೊಗ್ಗದ ಹೊಸನಗರದಲ್ಲಿ ಸಮಂತಾ ಹೋಳಿ: ಗಂಡನ ಜೊತೆ ಸಂಭ್ರಮ – Kannada News | Samantha Ruth Prabhu celebrates Holi 2026 in Hosanagara Shivamogga

ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಮದುವೆ ಬಳಿಕ ಸಖತ್ ಜಾಲಿಯಾಗಿದ್ದಾರೆ. ‘ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾದ ಶೂಟಿಂಗ್​​ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದ ಚಿತ್ರೀಕರಣ ಕರ್ನಾಟಕದಲ್ಲಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಶೂಟಿಂಗ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಹೋಳಿ ಹಬ್ಬ ಆಚರಿಸಿದ್ದಾರೆ. ಗಂಡ ರಾಜ್ ನಿಡಿಮೋರು ಹಾಗೂ ಚಿತ್ರತಂಡದ ಜೊತೆ ಸಮಂತಾ ರುತ್ ಪ್ರಭು ಅವರು ಹೋಳಿ (Holi) ಆಡಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಬಹಳ ಆ್ಯಕ್ಟೀವ್ ಆಗಿರುವ ಸಮಂತಾ ರುತ್ ಪ್ರಭು ಅವರು ತಮ್ಮ ಹೋಳಿ ಆಚರಣೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹೊಸನಗರದ ಬಸ್ ನಿಲ್ದಾಣದಲ್ಲಿ ಸಮಂತಾ ಅವರು ಹೋಳಿ ಗನ್ ಹಿಡಿದು ಗಂಡನಿಗೆ ಬಣ್ಣ ಹಾಕಿದ್ದಾರೆ. ಚಿತ್ರತಂಡದ ಜೊತೆ ಬಣ್ಣದ ಆಟವಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸಮಂತಾ ಹೋಳಿ ಆಚರಣೆಯ ವಿಡಿಯೋ:

‘ಮಾ ಇಂಟಿ ಬಂಗಾರಂ’ ಸಿನಿಮಾಗೆ ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಿರುಸಿನಿಂದ ಶೂಟಿಂಗ್ ನಡೆಯುತ್ತಿದೆ. ಹೋಳಿ ಹಬ್ಬದ ಸಲುವಾಗಿ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ನೀಡಿದ ಚಿತ್ರತಂಡದವರು ಹೋಳಿ ಆಡಿ ಖುಷಿಪಟ್ಟಿದ್ದಾರೆ. ಮಲೆನಾಡಿನ ಪರಿಸರಕ್ಕೆ ಸಮಂತಾ ಅವರು ಮನಸೋತಿದ್ದಾರೆ. ಅವರು ಎಷ್ಟು ಖುಷಿಯಾಗಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾಗೆ ಕರ್ನಾಟಕದಲ್ಲಿ ಶೂಟಿಂಗ್ ಮಾಡುತ್ತಿರುವುದರಿಂದ ಕನ್ನಡದ ಪ್ರೇಕ್ಷಕರ ವಲಯದಲ್ಲಿ ಕೂಡ ನಿರೀಕ್ಷೆ ಹೆಚ್ಚಾಗಿದೆ. ಇದೇ ಸಿನಿಮಾದಲ್ಲಿ ಕನ್ನಡದ ನಟ ದಿಗಂತ್ ಮಂಚಾಲೆ ಅವರು ನಟಿಸುತ್ತಿದ್ದಾರೆ ಎಂಬುದು ವಿಶೇಷ. ಮೇ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸಮಂತಾ ಅವರ ಗೆಟಪ್ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು

ಈ ಮೊದಲು ನಾಗ ಚೈತನ್ಯ ಜೊತೆ ಸಮಂತಾ ಮದುವೆ ಆಗಿದ್ದರು. ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಅದೇ ಸಮಯಕ್ಕೆ ಅವರ ಆರೋಗ್ಯ ಕೂಡ ಕೈಕೊಟ್ಟಿತ್ತು. ಅಷ್ಟೆಲ್ಲ ತಾಪತ್ರಯಗಳಿಂದ ಸಮಂತಾ ಮುಖದಲ್ಲಿ ನಗು ಮಾಯವಾಗಿತ್ತು. ಬಳಿಕ ಅವರು ವಿಚ್ಛೇದನ ಪಡೆದರು. ಈಗ ರಾಜ್ ನಿಡಿಮೋರು ಜೊತೆ ದಾಂಪತ್ಯ ಜೀವನ ಮಾಡುತ್ತಿರುವ ಸಮಂತಾ ಹ್ಯಾಪಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನಾಂ ದತ್ತಾತ್ರೇಯ ದರ್ಗಾದಲ್ಲಿ ಉರುಸ್​​ ಆಚರಣೆಗೆ ತಾರತಮ್ಯ: ಕಾಂಗ್ರೆಸ್​​ ವಿರುದ್ಧ ತಿರುಗಿಬಿದ್ದ ಮುಸ್ಲಿಮರು – Kannada News | Chikkamagaluru Datta Peeta Urus Row: Muslim Community spark on congress government

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾImage Credit source: tv9 kannada

ಚಿಕ್ಕಮಗಳೂರು, ಮಾರ್ಚ್​ 05: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಉರುಸ್ ಆಚರಣೆ ವೇಳೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ (Muslims) ಸಮುದಾಯದವರು ರಾಜ್ಯ ಕಾಂಗ್ರೆಸ್ ಸರ್ಕಾರದ ತಿರುಗಿ ಬಿದ್ದಿದ್ದಾರೆ. ಗೋರಿಗಳ ಮೇಲೆ ಹಸಿರು ಬಟ್ಟೆ, ಗಂಧ ಲೇಪನ ಮಾಡದ ಹಿನ್ನಲೆ ಜನ ಶಕ್ತಿ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ವಿವಾದಿತ ಇನಾಂ‌ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಿನ್ನೆಯಿಂದ ಸೆಂದಿಲ್ ಉರುಸ್ ಆರಂಭವಾಗಿದೆ. ನಿನ್ನೆ ವಿವಾದಿತ ಗುಹೆ ಹಾಗೂ ದತ್ತ ಪೀಠದ ಆವರಣದಲ್ಲಿರುವ ಗೋರಿಗಳಿಗೆ ಗಂಧ‌ ಲೇಪನ ಹಾಗೂ ಸೇಂದಿಲ್​ಗೆ ಅವಕಾಶ ನೀಡಿಲ್ಲ. ಗೋರಿಗಳಿಗೆ ಹಸಿರಿ ಬಟ್ಟೆ ಹೊದಿಸಲು ಬಿಡಲಿಲ್ಲ ಅಂತಾ‌ ಮುಸ್ಲಿಂ ಸಂಘಟನೆಗಳು ಆರೋಪ ಮಾಡುತ್ತಿವೆ.

ಇದನ್ನೂ ಓದಿ: ದತ್ತಪೀಠದಲ್ಲಿ ಹೊಸ ವಿವಾದ: ‘ಕಲಮೆ ತಯ್ಯಬಾ’ ಆಚರಣೆಗೆ ಹಿಂದೂ ಸಂಘಟನೆಗಳ ಆಕ್ರೋಶ

ಹಿಂದೂಗಳಿಗೆ ಗುಹೆಯ ಒಳಗೆ ಪೂಜೆ ಮಾಡುವುದಕ್ಕೆ ಬಿಡುವ ಜಿಲ್ಲಾಡಳಿತ ನಮಗೆ ಮಾತ್ರ ಪೂಜೆಗೆ ಅವಕಾಶ ಕೊಟ್ಟಿಲ್ಲ‌ ಅಂತಾ ಆರೋಪಿಸಿವೆ. ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ‌ ಸರ್ಕಾರದಲ್ಲಿ ಮಾಡಿದ್ದ ಕೆಲವು ಆಚರಣೆಗಳನ್ನೇ ಮುಂದುವರಿಸಿಕೊಂಡು ಹೋಗ್ತಿದೆ. ಹಿಂದಿನ ವರ್ಷ ಯಾವ ರೀತಿ ನಡೆಸಲಾಗಿತ್ತೋ ಅದೇ ರೀತಿ ಕೂಡ ಈ ವರ್ಷವೂ ನಡೆಸೋದಕ್ಕೆ ಅವಕಾಶ ಕೊಡ್ತೀವಿ ಅಂತಾ ಹೇಳ್ತಿದ್ದಾರೆ. ಉರುಸ್ ನಡೆಸಲಾಗುತ್ತಿದೆ ಎಂದು ಕೇವಲ ದಾಖಲೆಗಳನ್ನ‌ ತೋರಿಸೋದಕ್ಕಾಗಿ ಮಾಡ್ತಿರುವ ಷಡ್ಯಂತ್ರ ಎಂದು ಆರೋಪಿಸಿದ್ದು, ರಾಜ್ಯ ಕಾಂಗ್ರೆಸ್ ವಿರುದ್ಧ ಮುಸ್ಲಿಂ‌ ಮುಖಂಡ ಗೌಸ್ ಮೊಹಿದ್ದೀನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆದ ಉರುಸ್ ವೇಳೆ ಜಿಲ್ಲಾಡಳಿತದ‌ ಕೆಲವು ನಿರ್ಧಾರಗಳನ್ನ‌ ಕಂಡು ಇಡೀ‌ ಮುಸ್ಲಿಂ ಸಮುದಾಯವೇ ಒಂದು ಕ್ಷಣ ಶಾಕ್ ಆಗಿದ್ದು, ಜಿಲ್ಲಾಡಳಿತದ ವಿರುದ್ಧ ತಿರುಗಿ ಬಿದ್ದಿದೆ. ಯಾವಾಗ ಮುಸ್ಲಿಂ ಸಮುದಾಯದ ಮುಖಂಡರು ಹಿಂದಿನಿಂದ ನಡೆದುಕೊಂಡು ಬರುತ್ತಿದ್ದಂತೆಯೇ ಈ ವರ್ಷವೂ ಅವಕಾಶ ಕೊಡಬೇಕು ಅಂತಾ ಪಟ್ಟು ಹಿಡಿದರೋ ಕೇವಲ 10 ಜನರನ್ನ‌ ಮಾತ್ರ ವಿವಾದಿತ ಗುಹೆಯ ಒಳಗೆ ಬಿಡಲಾಯ್ತು. ಅಲ್ಲಿ ಕೂಡ ಗೋರಿಗಳಿಗೆ ಗಂಧ‌ ಲೇಪನಕ್ಕೆ ಬಿಟ್ಟಿಲ್ಲ ಎಂದು ಆರೋಪಿಸಿದರು.

 ಕೆ.ಎಲ್ ಅಶೋಕ್ ಸೇರಿದಂತೆ ಪ್ರತಿಭಟನಾ‌ ನಿರತರು ವಶಕ್ಕೆ

ಇದೇ ವಿಚಾರವಾಗಿ ಇಂದು ಕೆ.ಎಲ್ ಅಶೋಕ್ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆಗೆ ಅವಕಾಶ ನೀಡಿರಲಿಲ್ಲ. ಆದರೂ ಪೊಲೀಸರ ಕಣ್ಣು ತಪ್ಪಿಸಿ ನಗರಸಭೆ ಆವರಣದೊಳಗಿಂದ ಜಿಲ್ಲಾಧಿಕಾರಿ ಕಚೇರಿಗೆ‌ ಮುತ್ತಿಗೆ ಹಾಕಲು ಹೊರಟಿದ್ದ ಕೆ.ಎಲ್ ಅಶೋಕ್ ಸೇರಿದಂತೆ ಪ್ರತಿಭಟನಾ‌ ನಿರತರನ್ನ ಪೊಲೀಸರು ನಗರಸಭೆಯ ಆವರಣದಲ್ಲಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಸಿಡಿದೆದ್ದ ಹಿಂದೂ ಸಂಘಟನೆಗಳು

ಒಟ್ಟಿನಲ್ಲಿ ಹಿಂದೂ- ಮುಸ್ಲಿಮರ ನಡುವೆ‌ ಆಚಾರ, ಪೂಜೆ, ಸಂಪ್ರದಾಯ, ಪದ್ದತಿ ವಿಷಯವಾಗಿಯೇ ಮುನ್ನೆಲೆಗೆ ಬರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಈಗ ಮತ್ತೆ ಉರುಸ್ ಆಚರಣೆಯಿಂದ ಸದ್ದು ಮಾಡುತ್ತಿದ್ದು, ಮುಸ್ಲಿಂ ಸಮುದಾಯ ಸರ್ಕಾರದ ವಿರುದ್ಧವೇ‌ ತಿರುಗಿ ಬೀಳುವಂತೆ ಮಾಡಿದ್ದು, ದರ್ಗಾ‌ ವಿವಾದ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಖಮೇನಿ ಸಾವಿಗೆ ಭಾರತ ಸಂತಾಪ; ಇರಾನ್ ರಾಯಭಾರಿಯನ್ನು ಭೇಟಿ ಮಾಡಿದ ವಿದೇಶಾಂಗ ಕಾರ್ಯದರ್ಶಿ ಮಿಶ್ರಿ – Kannada News | India Condoles Iran Supreme Leader Khamenei’s Death Foreign Secretary Meets Iran Ambassador

ನವದೆಹಲಿ, ಮಾರ್ಚ್ 5: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ. ಭಾರತದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ali Khamenei) ಅವರ ಸಂತಾಪ ಸೂಚಿಸುವ ಪುಸ್ತಕಕ್ಕೆ ಸಹಿ ಹಾಕಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ 86 ವರ್ಷದ ಮಾಜಿ ಸರ್ವೋಚ್ಚ ನಾಯಕ ಖಮೇನಿ 1989ರಿಂದ ಇರಾನ್ ದೇಶವನ್ನು ಆಳುತ್ತಿದ್ದರು. ಶನಿವಾರ ಮುಂಜಾನೆ ಅಮೆರಿಕ ಮತ್ತು ಇಸ್ರೇಲ್ ಪ್ರಾರಂಭಿಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಅವರನ್ನು ಕೊಲ್ಲಲಾಗಿತ್ತು. ಖಮೇನಿಯ ನಿಧನಕ್ಕೆ ಭಾರತದ ಮೊದಲ ಪ್ರತಿಕ್ರಿಯೆಯ ಭಾಗವಾಗಿ ಮಿಶ್ರಿ ಸಂತಾಪ ಸೂಚಿಸಿದ್ದಾರೆ.

ಖಮೇನಿ ಅವರ ಸಾವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ರಾತ್ರಿ ಟ್ರೂತ್ ಸೋಷಿಯಲ್‌ನಲ್ಲಿ ಮೊದಲು ಘೋಷಿಸಿದ್ದರು. ಇರಾನ್‌ನ ಜನರು ದೇಶದ ಮೇಲೆ ಹಿಡಿತ ಸಾಧಿಸಲು ಇದು ಅತ್ಯಂತ ದೊಡ್ಡ ಅವಕಾಶ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದರು. “ಇತಿಹಾಸದಲ್ಲಿ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ನಿಧನರಾಗಿದ್ದಾರೆ. ಇದು ಇರಾನ್‌ನ ಜನರಿಗೆ ಮಾತ್ರವಲ್ಲ, ಎಲ್ಲಾ ಮಹಾನ್ ಅಮೆರಿಕನ್ನರಿಗೆ ಮತ್ತು ಖಮೇನಿಯಿಂದ ಕೊಲ್ಲಲ್ಪಟ್ಟ ಅಥವಾ ಅಂಗವಿಕಲರಾದ ಪ್ರಪಂಚದಾದ್ಯಂತದ ಅನೇಕ ದೇಶಗಳ ಜನರಿಗೆ ಸಿಕ್ಕ ನ್ಯಾಯವಾಗಿದೆ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಎಲ್ಲೇ ಅಡಗಿದ್ದರೂ ಬಿಡೋದಿಲ್ಲ; ಖಮೇನಿಯ ಉತ್ತರಾಧಿಕಾರಿಯನ್ನು ಕೊಲ್ಲುತ್ತೇವೆಂದ ಇಸ್ರೇಲ್

ಖಮೇನಿ ಸಾವನ್ನಪ್ಪಿದ ವಾಯುದಾಳಿಯನ್ನು ಖಂಡಿಸದ ಮತ್ತು ಯಾವುದೇ ಹೇಳಿಕೆ ಬಿಡುಗಡೆ ಮಾಡದೆ ಮೌನವನ್ನು ಕಾಯ್ದುಕೊಂಡಿದ್ದ ಭಾರತ ಕೊನೆಗೂ ಖಮೇನಿ ಸಾವಿಗೆ ಸಂತಾಪ ಸೂಚಿಸಿದೆ. ಆದರೆ, ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಮೋದಿ ಕರೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು – Kannada News | Kalaburagi: Complaint Filed Over Alleged Burqa Insult During Holi

ಕಲಬುರಗಿ, ಮಾರ್ಚ್​ 05: ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಬುರ್ಖಾ ಹಾಕಿಕೊಂಡು ಬಣ್ಣ ಹಚ್ಚಿ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ. ಓರ್ವ ವ್ಯಕ್ತಿಗೆ ಬುರ್ಖಾ ಹಾಕಿಸಿ ಬಣ್ಣ ಹಚ್ಚಿದ್ದಾರೆ. ಆ ಮೂಲಕ ಹಿಂದೂ ಯುವಕರು ಬುರ್ಖಾಗೆ ಅವಮಾನಿಸಿದ್ದಾರೆಂದು ದಲಿತ ಸೇನೆ ಮುಖಂಡ ಸಮೀರ್ ಆವಂಟಿ ನಿಂಬರ್ಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಎನ್‌ಎಸ್ ಕಾಯ್ದೆ 2003ರ ಸೆಕ್ಷನ್ 196 ಹಾಗೂ 299ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಇನ್ನು ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು – Kannada News | Tumakuru Murder: Wife, Lover Arrested After Exhumed Body Reveals Heart Attack Was Murder

ಪರಮೇಶ್, ಆಶಾ, ಚಂದ್ರಪ್ಪImage Credit source: tv9 kannada

ತುಮಕೂರು, ಮಾರ್ಚ್​ 05: ಗಂಡನ (Husband) ಸಾವು ಹೃದಯಾಘಾತ ಎಂದು ಪತ್ನಿ ಕಣ್ಣೀರು ಹಾಕಿದ್ದಳು. ಗಂಡನ ಸಾವಿನ ಬಗ್ಗೆ ಕಿಂಚಿತ್ತು ಕೊರಗಿಲ್ಲದ ಪತ್ನಿ, ಪತಿ ಮೃತಪಟ್ಟ 20 ದಿನಕ್ಕೆ ಮತ್ತೊಬ್ಬನ ಮದುವೆಯಾಗಿದ್ದಳು. ಆಕೆಯ ನಡೆಯಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಂತ್ಯಕ್ರಿಯೆ ಮಾಡಿ ಹೂತಿಟ್ಟ ಶವ ಸಹ ಹೊರ ತೆಗೆದು ಪರಿಕ್ಷೆ ನಡೆಸಲಾಗಿತ್ತು. ಈ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಎಂಬಂತೆ ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಯಲಾಗಿದ್ದು, ಪತ್ನಿ ಹಾಗೂ ಆಕೆಯ ಹೊಸ ಗಂಡ ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಹೃದಯಾಘಾತದಿಂದ ಪತಿ ಸಾವು ಕೇಸ್​ಗೆ ಸ್ಫೋಟಕ ಟ್ವಿಸ್ಟ್

ಜನವರಿ 30ರಂದು ಹೃದಯಾಘಾತದಿಂದ ಸಾವನಪ್ಪಿದ್ದಾನೆ ಎನ್ನಲಾಗಿದ್ದ ತುಮಕೂರು ತಾಲ್ಲೂಕಿನ ಹೆಬ್ಬೂರು ಹೊಬಳಿಯ ದಾಸರಹಳ್ಳಿ ನಿವಾಸಿ ಪರಮೇಶ್ ಸಾವು ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಪರಮೇಶ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನಲೆ ಮೃತನ ಸಹೋದರಿ ಹೆಬ್ಬೂರು ಠಾಣೆಗೆ ದೂರು ನೀಡಿದ್ದರು. ಆ ಬಳಿಕ ಫೆಬ್ರವರಿ 26ರಂದು ದಾಸರಹಳ್ಳಿಯ ತೋಟದ ಮನೆ ಬಳಿ ಹೂತಿಟ್ಟಿದ್ದ ಪರಮೇಶ್ ಮೃತದೇಹ ಹೊರ ತೆಗೆದು ಪರೀಕ್ಷೆ ಸಹ ನಡೆಸಲಾಗಿತ್ತು. ಮತ್ತೊಂದೆಡೆ ಘಟನೆ ಬಗ್ಗೆ ಹೆಬ್ಬೂರು ಪೊಲೀಸರು ವಿಚಾರಣೆ ನಡೆಸುವಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತವಲ್ಲ ಇದು ವ್ಯವಸ್ಥಿತ ಕೊಲೆ? ಪತ್ನಿಯ 3ನೇ ಮದುವೆಯಿಂದ ಬಯಲಾಯ್ತು ಪರಮೇಶ್ ಸಾವಿನ ರಹಸ್ಯ!

ಪರಮೇಶ್ ಮೃತಪಟ್ಟು ಇನ್ನು ತಿಂಗಳ ಕಾರ್ಯವೂ ಸಹ ನಡೆದಿರಲಿಲ್ಲ. ಆತನ ಸಾವು ಸಂಭವಿಸಿದ 20 ದಿನಕ್ಕೆ ಪತ್ನಿ ಆಶಾ, ಚಂದ್ರಪ್ಪ ಎಂಬಾತನ ವಿವಾಹವಾಗಿದ್ದಳು. ಇದು ಪರಮೇಶ್ ಸಹೋದರಿಯರಿಗೆ ಅನುಮಾನ ಮೂಡಿಸಿತ್ತು. ಈ ಹಿನ್ನಲೆ ಕೊಟ್ಟ ದೂರಿನ ಅಡಿ ತನಿಖೆ ವೇಳೆ ಆಶಾ ಹಾಗೂ ಆಕೆಯನ್ನ ವಿವಾಹವಾಗಿದ್ದ ಚಂದ್ರಪ್ಪನ ಬಗ್ಗೆ ಅನುಮಾನ ಮೂಡಿತ್ತು. ಅದೇ ಆಯಾಮದಲ್ಲಿ ವಿಚಾರಣೆ ನಡೆಸಲಾಗಿ ತಾವೇ ಪರಮೇಶ್ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಇದು ಸಂಬಂಧಿಕರಲ್ಲಿ ಕಣ್ಣೀರು ತರಿಸಿದೆ.

ಚಂದ್ರಪ್ಪಗೆ ಆಶಾ ಪರಿಚಯವಾಗಿದ್ದೇಗೆ?

ಇನ್ನು ಆರೋಪಿಗಳನ್ನು ಬಂಧಿಸಿದ ಹೆಬ್ಬೂರು ಪೊಲೀಸರು ಘಟನೆಯ ಅಸಲಿ ಕಾರಣ ಹುಡುಕಲು‌ ಮುಂದಾಗಿದ್ದಾರೆ. ಕಳೆದ ಒಂದುವರೆ ವರ್ಷದ ಹಿಂದೆ ಕ್ಯಾಟರಿಂಗ್ ಕೆಲಸಕ್ಕೆ ಸೇರಿದ್ದ ಆಶಾಗೆ ಚಂದ್ರಪ್ಪನ ಪರಿಚಯವಾಗಿತ್ತು. ಆ ಬಳಿಕ ಇಬ್ಬರು ಆತ್ಮೀಯ ಗೆಳೆಯರಾಗಿದ್ದರು. ಇದರ ನಡುವೆ ಮನೆಯಲ್ಲಿ ಸಹ ಪರಮೇಶ್​ಗೆ ಆಶಾ ಕಿರುಕುಳ ಕೊಡುತಿದ್ದಳು ಎನ್ನಲಾಗಿತ್ತು. ಮೇಲಾಗಿ ಪರಮೇಶ್ ಸಹ ಆಶಾಗೆ ಎರಡನೇ ಗಂಡನಾಗಿದ್ದ. ಆದರೇ ಆತನ ಕೊಲೆ ಮಾಡಿ ಚಂದ್ರಪ್ಪನ ಮದುವೆಯಾದ ಆಶಾಳ ಉದ್ದೇಶ ಏನಾಗಿತ್ತು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರೆದಿದೆ. ಆದರೆ ಈ ಘಟನೆ ಇಡಿ ಊರಿನ ಜನರನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ತುಮಕೂರು: 2 ತಿಂಗಳು ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

ಸದ್ಯ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡ ಹೆಬ್ಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪತಿಯನ್ನೇ ಕೊಂದ ಪತ್ನಿಯ ನಾಟಕ ಪೊಲೀಸರ ತನಿಖೆ ವೇಳೆ ಬಯಲಾಗಿದ್ದು, ಕೊಲೆಯ ಹಿಂದಿನ ಅಸಲಿ ಕಾರಣ ಪೊಲೀಸರ ತನಿಖೆ ಹಿಂದಷ್ಟೇ ತಿಳಿದು ಬರಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ಬ್ರಾ ಧರಿಸಿ ಮಲಗಿದ್ರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ? ವೈದ್ಯರು ಏನ್ ಹೇಳ್ತಾರೆ? – Kannada News | Why Ditch the Bra at Night

ಮಹಿಳೆಯರ ದಿನನಿತ್ಯದ ಉಡುಪಿನಲ್ಲಿ ಬ್ರಾ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಗಾತ್ರದ ಬ್ರಾ ಧರಿಸುವುದು ದೇಹದ ಆಕಾರವನ್ನು ಕಾಪಾಡಲು ಹಾಗೂ ಆರಾಮ ನೀಡಲು ಸಹಾಯ ಮಾಡುತ್ತದೆ. ಆದರೆ ರಾತ್ರಿ ಮಲಗುವಾಗ ಬ್ರಾ (Bra) ಧರಿಸಬೇಕೇ ಅಥವಾ ಬೇಡವೇ ಎಂಬ ಅನುಮಾನ ಹಲವಾರು ಮಹಿಳೆಯರನ್ನು ಕಾಡುತ್ತದೆ. ತಜ್ಞರ ಪ್ರಕಾರ ರಾತ್ರಿ ವೇಳೆ ಬ್ರಾ ಧರಿಸಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಆಯ್ಕೆ ಅಲ್ಲ. ಬಿಗಿಯಾದ ಬ್ರಾ ಧರಿಸಿ ಮಲಗುವುದರಿಂದ ಬೆವರು ಬರುತ್ತದೆ ಇದು ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕಿನ ಅಪಾಯ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಚರ್ಮದಲ್ಲಿ ಉರಿ, ದದ್ದು, ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಈ ಭಾಗದ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚಿನ ಜಾಗ್ರತೆ ಅಗತ್ಯವೆಂದು ತಜ್ಞರು ಹೇಳುತ್ತಾರೆ. ಹಾಗಾದರೆ ಬ್ರಾ ತೆಗೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ತಿಳಿದುಕೊಳ್ಳಿ.

ದಿನಪೂರ್ತಿ ಬಿಗಿಯಾದ ಬ್ರಾ ಧರಿಸಿ ನಂತರ ರಾತ್ರಿ ಅದನ್ನು ತೆಗೆದು ಮಲಗುವುದು ಉತ್ತಮ. ಇಲ್ಲದಿದ್ದರೆ ಚರ್ಮಕ್ಕೆ ಗಾಳಿ ತಲುಪದೆ ತೇವಾಂಶ ಹೆಚ್ಚಾಗಿ ಚರ್ಮ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಅಧಿಕವಾಗುತ್ತದೆ. ಹೆಚ್ಚು ಸಮಯ ಬ್ರಾ ಧರಿಸುವುದರಿಂದ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕೂಡ ಕಾಣಿಸಿಕೊಳ್ಳಬಹುದು. ತಜ್ಞರ ಪ್ರಕಾರ ಬಿಗಿಯಾದ ಬ್ರಾ ಧರಿಸಿ ರಾತ್ರಿ ಮಲಗುವುದರಿಂದ ಆ ಜಾಗದಲ್ಲಿ ಸುತ್ತಲೂ ರಕ್ತಪ್ರಸರಣ ಸರಿಯಾಗಿ ನಡೆಯದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ನೋವು, ಉಬ್ಬರ ಉಂಟಾಗಬಹುದು. ಜೊತೆಗೆ ಇದು ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಬಿಗಿಯಾದ ಉಡುಪುಗಳಿಂದ ಉಷ್ಣತೆ ಮತ್ತು ಬೆವರು ಹೆಚ್ಚಾಗಿ ನಿದ್ರೆ ಸರಿಯಾಗಿ ಆಗದಿರಬಹುದು. ವೈದ್ಯಕೀಯವಾಗಿ ಹೇಳುವುದಾದರೆ, ಬಹುತೇಕ ಸಂದರ್ಭಗಳಲ್ಲಿ ರಾತ್ರಿ ಬ್ರಾ ತೆಗೆದು ಮಲಗುವುದು ದೇಹಕ್ಕೆ ಹೆಚ್ಚು ಆರಾಮಕರ ಎಂದು ತಜ್ಞರು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಸಡಿಲವಾದ ಬ್ರಾ ಬಳಸಬಹುದು.

ಇದನ್ನೂ ಓದಿ: BRA ಪದದ ಪೂರ್ಣ ರೂಪ ಏನು ಗೊತ್ತಾ? 99% ಜನರಿಗೆ ಇದು ಗೊತ್ತೇ ಇಲ್ಲ

ನಿದ್ರೆ ಮಾಡುವ ಸಮಯದಲ್ಲಿ ದೇಹ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕು. ಆದರೆ ಬಿಗಿಯಾದ ಬ್ರಾ ಹಾಕಿ ಮಲಗುವುದರಿಂದ ಉಷ್ಣತೆ, ಬೆವರು ಉಂಟಾಗಿ ನಿದ್ರೆ ಹಾಳಾಗುತ್ತದೆ. ಇದರ ಪರಿಣಾಮವಾಗಿ ಬೆಳಿಗ್ಗೆ ದಣಿವು, ಆಯಾಸ ಕಡುಬರುತ್ತದೆ. ಆದರೆ ಇದು ಎಲ್ಲಾ ಮಹಿಳೆಯರಿಗೂ ಅನ್ವಯವಾಗುವುದಿಲ್ಲ ಕೆಲ ಮಹಿಳೆಯರಿಗೆ ಬ್ರಾ ಧರಿಸಿ ಮಲಗಿದರೆ ಮಾತ್ರ ನಿದ್ರೆ ಬರುತ್ತದೆ, ಇನ್ನು ಗರ್ಭಾವಸ್ಥೆಯಲ್ಲಿರುವವರಿಗೂ ಬ್ರಾ ಧರಿಸಬೇಕು ಎನಿಸುತ್ತದೆ ಅಂತವರು ಸಡಿಲವಾದ ಸ್ಲೀಪ್ ಬ್ರಾ, ಕಾಟನ್ ಅಥವಾ ಸಾಫ್ಟ್ ಫ್ಯಾಬ್ರಿಕ್‌ನ ಧರಿಸಿ ಮಲಗಬಹುದು.

ಬ್ರಾ ಧರಿಸಿ ಮಲಗಿದರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ?

ಕೆಲವರು ಬ್ರಾ ಧರಿಸಿ ಮಲಗುವುದರಿಂದ ಬ್ರೆಸ್ಟ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಆದರೆ ಈ ಕುರಿತು ಸ್ಪಷ್ಟವಾದ ವೈಜ್ಞಾನಿಕ ಸಾಕ್ಷ್ಯ ಇನ್ನೂ ಲಭ್ಯವಿಲ್ಲ. ಆದರೂ ದೇಹದ ಆರಾಮಕ್ಕಾಗಿ ರಾತ್ರಿ ಬ್ರಾ ತೆಗೆದು ಮಲಗುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಈ ಸಲಹೆಗಳನ್ನು ತಪ್ಪದೆ ಪಾಲಿಸಿ

  • ಸರಿಯಾದ ಗಾತ್ರದ ಬ್ರಾ ಆಯ್ಕೆ ಮಾಡಿ
  • ತುಂಬಾ ಬಿಗಿಯಾದ ಬ್ರಾಗಳನ್ನು ದಿನಪೂರ್ತಿ ಧರಿಸಬೇಡಿ
  • ರಾತ್ರಿ ಸಡಿಲ ಉಡುಪು ಧರಿಸಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ
  • ಚರ್ಮ ಸ್ವಚ್ಛವಾಗಿ ಮತ್ತು ಒಣಗಿರಲಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡ್ರಗ್​​ ಸೇವನೆ ತಪಾಸಣೆ: ವಿವಿಧ ಶಿಕ್ಷಣ ಸಂಸ್ಥೆಗಳ 31 ವಿದ್ಯಾರ್ಥಿಗಳ ರಿಪೋರ್ಟ್​​ ಪಾಸಿಟಿವ್​ – Kannada News | Anti Drug Screening Drive in West Bengaluru: 31 Students Test Positive

ಆ್ಯಂಟಿ ಡ್ರಗ್​​ ಸ್ಕ್ರೀನಿಂಗ್​Image Credit source: Google

ಬೆಂಗಳೂರು, ಮಾರ್ಚ್​ 05: ಡ್ರಗ್‌ ರಹಿತ ಸಮಾಜ ನಿರ್ಮಾಣಕ್ಕಾಗಿ ಕರ್ನಾಟಕ ಪೊಲೀಸ್ ಆರಂಭಿಸಿರುವ ‘ಸನ್ಮಿತ್ರ’ ಉಪಕ್ರಮದ ಭಾಗವಾಗಿ ಪಶ್ಚಿಮ ಬೆಂಗಳೂರು ವಿಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ಡ್ರಗ್ ತಪಾಸಣೆಯಲ್ಲಿ 31 ವಿದ್ಯಾರ್ಥಿಗಳು ಡ್ರಗ್ ಸೇವನೆ ಮಾಡಿದಿರುವುದು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, 1,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂತ್ರದ ಸ್ಯಾಂಪಲ್​ ನೀಡಿದ್ದಾರೆ. ಅವುಗಳಲ್ಲಿ 585 ಸ್ಯಾಂಪಲ್​​ಗಳನ್ನು ರ‍್ಯಾಂಡಮ್ ಆಗಿ​ ಪರೀಕ್ಷಿಸಲಾಗಿದ್ದು, 31 ವಿದ್ಯಾರ್ಥಿಗಳ ವರದಿ ಪಾಸಿಟಿವ್ ಎಂದು ದೃಢಪಟ್ಟಿವೆ.

ಡ್ರಗ್ ಸೇವನೆ ಪತ್ತೆಯಾದ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಕೌನ್ಸೆಲಿಂಗ್ ಹಾಗೂ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಹೆಸರು ಮತ್ತು ಕುಟುಂಬದ ವಿವರಗಳನ್ನು ಸಂಪೂರ್ಣವಾಗಿ ಗೌಪ್ಯವಾಗಿರಿಸಲಾಗುತ್ತದೆ . ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಿಂದ ಬಂದಿರುವ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇತರ ಕಾಲೇಜುಗಳಲ್ಲೂ ಈ ಅಭಿಯಾನ ಮುಂದುವರಿಯಲಿದೆ. ಪೋಷಕರನ್ನೂ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಒಳಗೊಳ್ಳಿಸಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ತಿಳಿಸಿದ್ದಾರೆ.

ಇದನ್ನೂ ಓದಿ: ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ 

ವಿದ್ಯಾರ್ಥಿಗಳು ಡ್ರಗ್ಸ್​​ ದಾಸರಾಗದಂತೆ ತಡೆಯುವುದು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಾಚರಣೆಗಾಗಿ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್​​ಮೆಂಟ್​​ಗಳಿಂದ ಅನುಮತಿ ಮತ್ತು ‘ನೋ ಆಬ್ಜೆಕ್ಷನ್ ಸರ್ಟಿಫಿಕೇಟ್’ ಪಡೆದು ಆರು ಶಿಕ್ಷಣ ಸಂಸ್ಥೆಗಳು ಹಾಗೂ ಎರಡು ವಸತಿನಿಲಯಗಳಲ್ಲಿ N-MASS (Narcotics Monitoring, Assistance and Screening System) ತಪಾಸಣೆ ನಡೆಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಪುಣ್ಯ ಆಸ್ಪತ್ರೆ, ಪದ್ಮದೇವಯ್ಯ ಆಸ್ಪತ್ರೆ, KADE ಆಸ್ಪತ್ರೆ, ಶರಾವತಿ ಆಸ್ಪತ್ರೆ, ಶ್ರೀ ಲಕ್ಷ್ಮೀ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಾಂಗರೂ ಕೇರ್ ಆಸ್ಪತ್ರೆಗಳ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರರ ಸಹಾಯದಿಂದ ನಡೆಸಿರುವ ಬಗ್ಗೆ ಅಧಿಕಾರಿಗಳು ತಿಳಿಸಿರೋದಾಗಿ ದಿ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:50 pm, Thu, 5 March 26

Source link

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌; ಸೆಮೀಸ್ ಕಾಳಗಕ್ಕೆ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ ಭಾರತ – Kannada News | India vs England T20 World Cup 2026 Semi Final toss and playing 11 updates

2026 ರ ಐಸಿಸಿ ಟಿ20 ವಿಶ್ವಕಪ್‌ನ (T20 World Cup 2026 semi-final) ಎರಡನೇ ಸೆಮಿಫೈನಲ್‌ನಲ್ಲಿ ಆತಿಥೇಯ ಮತ್ತು ಹಾಲಿ ಚಾಂಪಿಯನ್ ಭಾರತ, ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ ಎದುರಾಳಿಯಾಗಲಿದೆ. ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು ನಡೆದಿದ್ದ ಎರಡು ಮುಖಾಮುಖಿಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದ ತಂಡ 2-1 ಅಂತರದ ಮುನ್ನಡೆ ಸಾಧಿಸಿ ಫೈನಲ್ ತಲುಪುತ್ತದೆ.

ಟಾಸ್ ಗೆದ್ದ ಇಂಗ್ಲೆಂಡ್

ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಈ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ತಂಡದಲ್ಲಿ ಒಂದು ಬದಲಾವಣೆಯನ್ನು ಸಹ ಮಾಡಿದ್ದಾರೆ. ಇತ್ತ ಟಾಸ್ ಸೋತು ಮಾತನಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಟಾಸ್ ಗೆದ್ದಿದ್ದರೆ, ನಾವು ಕೂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡುತ್ತಿದ್ದೇವು ಎಂದಿದ್ದಾರೆ. ಅಂದರೆ ಟಾಸ್ ಸೋತರೂ ಭಾರತ ತಂಡಕ್ಕೆ ಬೇಕಾಗಿದ್ದೆ ಸಿಕ್ಕಿದೆ. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾ ಎಷ್ಟು ರನ್ ಕಲೆಹಾಕುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಮುಖಾಮುಖಿ ದಾಖಲೆ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡುವುದಾದರೆ.. ಭಾರತ ಇಂಗ್ಲೆಂಡ್‌ ವಿರುದ್ಧ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ. ಇದುವರೆಗೆ ಎರಡು ತಂಡಗಳ ನಡುವೆ ನಡೆದಿರುವ 17 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, ಇಂಗ್ಲೆಂಡ್ 12 ಪಂದ್ಯಗಳಲ್ಲಿ ಗೆದ್ದಿದೆ. ಕಳೆದ ಏಳು ಮುಖಾಮುಖಿಯಲ್ಲಿ ಭಾರತ, ಇಂಗ್ಲೆಂಡ್‌ ತಂಡವನ್ನು ತವರಿನಲ್ಲಿ ಆರು ಬಾರಿ ಸೋಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.

IND vs ENG, T20 Semi Final Live Score: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಮೀ ಓವರ್ಟನ್, ಲಿಯಾಮ್ ಡಾಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:43 pm, Thu, 5 March 26

Source link

ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಖೋರ್ರಮ್‌ಶಹರ್-4 ಕ್ಷಿಪಣಿ ಉಡಾಯಿಸಿದ ಇರಾನ್ – Kannada News | Iran launches 2,000 kilometers range missile Khorramshahr 4 toward Israel

ಟೆಹ್ರಾನ್, ಮಾರ್ಚ್ 5: ಇರಾನ್ ಖೋರ್ರಾಮ್‌ಶಹರ್-4 ಎಂಬ ಭಾರೀ ಕ್ಷಿಪಣಿಯನ್ನು ಇಂದು ಮುಂಜಾನೆ ಇಸ್ರೇಲ್ ಪ್ರದೇಶದ ಕಡೆಗೆ ಉಡಾಯಿಸಿದೆ ಎಂದು ಇರಾನ್ (Iran)  ಮಾಧ್ಯಮ ವರದಿ ಮಾಡಿದೆ. ವರದಿಯ ಪ್ರಕಾರ, ಈ ಕ್ಷಿಪಣಿ ಒಂದು ಟನ್ ತೂಕದ ಸಿಡಿತಲೆಯನ್ನು ಹೊಂದಿದ್ದು, ಅಂದಾಜು 2,000 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.

ಇರಾನ್ ಮತ್ತು ಯುಎಸ್-ಇಸ್ರೇಲ್ ಮೈತ್ರಿಕೂಟದ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ. ಇದು ನೇರ ಮಿಲಿಟರಿ ಮುಖಾಮುಖಿಯ ಆರನೇ ದಿನವಾಗಿದ್ದು, ಇನ್ನೂ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ 5 ದಿನಗಳಲ್ಲಿ ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 1,000 ದಾಟಿದೆ. ಇದರ ಜೊತೆಗೆ ಲೆಬನಾನ್‌ನಲ್ಲಿ ಸುಮಾರು 60 ಜನರು, ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್ ಜನರು ಸಾವನ್ನಪ್ಪಿದ್ದಾರೆ ಮತ್ತು 6 ಯುಎಸ್ ಸೈನಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version