Video: ತನ್ನ ಮುಂದೆ ಡ್ಯಾನ್ಸ್ ಮಾಡ್ತಿದ್ದ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋದ ಹುಂಜ – Kannada News | A rooster chased away a little girl, video goes viral

ಪುಟ್ಟ ಮಕ್ಕಳೇ (little kids) ಹಾಗೆ, ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಈ ಪುಟ್ಟ ಹುಡುಗಿಯದ್ದು (little girl) ಅದೇ ಕಥೆ. ಹುಂಜದ ಮುಂದೆ ಕುಣಿದಾಡುತ್ತಿದ್ದಂತೆ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.

trollhaiklu_.ka10 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಪುಟ್ಟ ಹುಡುಗಿಯೊಬ್ಬಳು ಹುಂಜ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಆಕೆ ಒಂದೇ ಸಮನೆ ಓಡುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೋಗಿ ಹೋಗಿ ಗಂಡು ಕೋಳಿನಾ ಕೆಣಕಿದ್ದೀಯಾ ಎಂದು ಹೇಳಿದರೆ, ಮತ್ತೊಬ್ಬರು, ಸ್ಕೂಲ್ ಗೆ ಹೋಗೋದು ಬಿಟ್ಟು ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ. ಇನ್ನೊಬ್ಬರು, ಸುಮ್ನೆ ಇರಲಾರದೇ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೇ ನೋಡಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *