ಶ್ರೀಲಂಕಾ ಕಡೆ ಹೊರಟ ಇರಾನಿನ 2ನೇ ಹಡಗು; ಮತ್ತೆ ದಾಳಿಯ ಭೀತಿಯಲ್ಲಿ ಅಧಿಕಾರಿಗಳು – Kannada News | 2nd Iranian Ship Heads To Sri Lanka Officials Say It Could Be Targeted

ನವದೆಹಲಿ, ಮಾರ್ಚ್ 5: ಯುನೈಟೆಡ್ ಸ್ಟೇಟ್ಸ್ ಜಲಾಂತರ್ಗಾಮಿ ನೌಕೆ ಬುಧವಾರ ಇರಾನಿನ ಯುದ್ಧನೌಕೆಯನ್ನು ಧ್ವಂಸಗೊಳಿಸಿ, 87 ನಾವಿಕರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಇಂದು ಎರಡನೇ ಇರಾನಿನ (Iran) ಯುದ್ಧನೌಕೆ ತಮ್ಮ ದೇಶದ ಪ್ರಾದೇಶಿಕ ನೀರಿನ ಕಡೆಗೆ ಚಲಿಸಿದಂತೆ ಶ್ರೀಲಂಕಾದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದಿನ ದಾಳಿಯ ನಂತರ ಹೊಸ ಹಡಗಿನ ಮೇಲೂ ದಾಳಿಯಾಗಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಇರಾನ್ ಶ್ರೀಲಂಕಾದ ಜಲಪ್ರದೇಶಕ್ಕೆ ಪ್ರವೇಶವನ್ನು ಬಯಸಿದೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು, ಯುದ್ಧನೌಕೆಯನ್ನು ಸುರಕ್ಷತೆಗಾಗಿ ಶ್ರೀಲಂಕಾದ ಜಲಪ್ರದೇಶಕ್ಕೆ ಪ್ರವೇಶಿಸುವಂತೆ ಇರಾನ್ ಮಾಡಿದ ಮನವಿಯ ಕುರಿತು ಚರ್ಚಿಸಲು ಹಿರಿಯ ಸರ್ಕಾರ ಮತ್ತು ಭದ್ರತಾ ನಾಯಕರನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಹೊಡೆದುರುಳಿಸಿದ್ದು ನಾವೇ: ಅಮೆರಿಕ ಅಧಿಕೃತ ಹೇಳಿಕೆ

ಇರಾನಿನ 2ನೇ ಹಡಗು ಶ್ರೀಲಂಕಾದ ಪ್ರಾದೇಶಿಕ ಜಲಪ್ರದೇಶದ ಹೊರಗೆ ಇದೆ. ಈ ಹಡಗು 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದು, ಅವರ ಸುರಕ್ಷತೆಯ ಬಗ್ಗೆ ಭಯ ಹುಟ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಸೇನೆಯು ಹೇಳಿಕೊಂಡ ಟಾರ್ಪಿಡೊ ದಾಳಿಯಲ್ಲಿ ಸಾವನ್ನಪ್ಪಿದ 87 ಇರಾನಿನ ನಾವಿಕರ ಅವಶೇಷಗಳನ್ನು ಹಸ್ತಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ. ರಕ್ಷಿಸಲ್ಪಟ್ಟ 32 ಇರಾನಿಯನ್ನರಿಗೆ ಪೊಲೀಸರು ಮತ್ತು ಗಣ್ಯ ಕಮಾಂಡೋಗಳು ಒದಗಿಸಿದ ಬಿಗಿ ಭದ್ರತೆಯಲ್ಲಿ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಲಂಕಾ ನೌಕಾಪಡೆಯ ವಕ್ತಾರ ಬುದ್ಧಿಕ ಸಂಪತ್ ಅವರು ನೌಕಾಪಡೆಯ ಹಡಗುಗಳು ಕಾಣೆಯಾದ ನಾವಿಕರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿವೆ ಎಂದು ಹೇಳಿದ್ದಾರೆ. ರಕ್ಷಕರು ಸ್ಥಳವನ್ನು ತಲುಪುವ ಹೊತ್ತಿಗೆ ಹಡಗು ಮುಳುಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ: ಬೆಂಗಳೂರಿನಲ್ಲಿ ಗಗನಕ್ಕೇರಲಿದೆ ಅಡುಗೆ ಎಣ್ಣೆ ದರ, ಮೊಟ್ಟೆ ಉದ್ಯಕ್ಕೆ ಭಾರೀ ನಷ್ಟ

ಶ್ರೀಲಂಕಾ ಇರಾನ್ -ಅಮೆರಿಕ-ಇಸ್ರೇಲ್ ಸಂಘರ್ಷದ ಉದ್ದಕ್ಕೂ ತಟಸ್ಥತೆಯನ್ನು ಕಾಯ್ದುಕೊಂಡಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಪರಿಹರಿಸಲು ಮಾತುಕತೆಗೆ ಪದೇ ಪದೇ ಕರೆ ನೀಡಿದೆ. ಇರಾನ್ ಶ್ರೀಲಂಕಾದ ಚಹಾದ ಪ್ರಮುಖ ಖರೀದಿದಾರನಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆ: ಜನರ ಕೈ ಸೇರಬೇಕಿದ್ದ ಇವು ನೀರು ಪಾಲಾಗಿದ್ದೇಗೆ? – Kannada News | Bundle of Aadhaar Cards Found on Netravati River Bank in Farangipete, Mangaluru

ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆImage Credit source: Tv9 Kannada

ಮಂಗಳೂರು, ಮಾರ್ಚ್​​ 05:  ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್​​ಗಳು ಪತ್ತೆಯಾಗಿವೆ. ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್​​ ಕಾರ್ಡ್​ಗಳನ್ನು ಕಂಡು ಸಾರ್ವಜನಿಕರು ಶಾಕ್​​ ಆಗಿದ್ದು, ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಜೊತೆಗೂಡಿ ನೂರಾರು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಅಂಚೆ ಇಲಾಖೆಯಿಂದ ಸರಿಯಾದ ವಿಳಾಸಕ್ಕೆ ಆಧಾರ್ ಕಾರ್ಡ್ ತಲುಪುತ್ತಿಲ್ಲವೆಂದು ಆರೋಪಿಸಿದ್ದಾರೆ.

ತಮ್ಮ ಕುಟುಂಬದವರ ಎಲ್ಲರ ಅಧಾರ್​​ ಕಾರ್ಡ್​​ ನದಿಯಲ್ಲಿ ಸಿಕ್ಕಿದೆ. ಗ್ರಾಮದ ನೂರಾರು ಜನರ ಕಾರ್ಡ್​ಗಳು ಸಹ ಇದರಲ್ಲಿವೆ. ಹಣ ಪಾವತಿಸಿ ವಿಳಾಸ, ಹೆಸರು ಬದಲಾವಣೆ ಮಾಡಿಸಿದವರು ಪರಿಷ್ಕೃತ ಕಾರ್ಡ್​​ ಈಗ ಬರಬಹುದು, ಆಗ ಬರಬಹುದು ಎಂದು ಕಾಯುತ್ತಿದ್ದರೆ ಅವೆಲ್ಲವೂ ಈಗ ನದಿ ನೀರಲ್ಲಿ ತೇಲಿಬರುತ್ತಿರೋದು ಕಂಡುಬಂದಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೆಕು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಆಧಾರ್ ಕಾರ್ಡ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಿಸುವುದು ಹೇಗೆ?

ತನಿಖೆಗೆ ಸೂಚಿಸಿದ ಸ್ಪೀಕರ್‌ ಯು.ಟಿ. ಖಾದರ್​​

ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಮಾರ್ಚ್​​ 03, 2026ರಂದು ಅಪಾರ ಪ್ರಮಾಣದ ಆಧಾರ್ ಕಾರ್ಡ್‌ಗಳು ನದಿ ತಟದಲ್ಲಿರುವುದನ್ನು ಕಂಡು ಸಾರ್ವಜನಿಕರು ಸ್ಥಳೀಯ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕನಾದ ನನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಆಧಾರ್ ಕಾರ್ಡ್‌ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು? ಮತ್ತು ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಯು.ಐ.ಡಿ.ಎ.ಐ ಯೋಜನಾ ವ್ಯವಸ್ಥಾಪಕರಿಗೆ ವಿಧಾನ ಸಭೆ ಸ್ಪೀಕರ್​​ ಮತ್ತು ಸ್ಥಳೀಯ ಶಾಸಕ ಯು.ಟಿ. ಖಾದರ್​​ ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:56 pm, Thu, 5 March 26

Source link

Vasthu Tips: ಈ ದಿನಗಳಲ್ಲಿ ತಪ್ಪಿಯೂ ಪಾದರಕ್ಷೆ ಖರೀದಿಸಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Vastu Shastra for Footwear: Attract Wealth and Positivity, Avoid Negative Energy at Home

ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ, ಪಾದರಕ್ಷೆಗಳನ್ನು ಪಾದಗಳನ್ನು ರಕ್ಷಿಸುವ ಸಾಧನವೆಂದು ಪರಿಗಣಿಸುವುದಲ್ಲದೆ, ಅವು ಮನೆಯ ಶಕ್ತಿ, ಸಂಪತ್ತು, ಸಮೃದ್ಧಿ ಮತ್ತು ಕುಟುಂಬದ ಸಂತೋಷಕ್ಕೂ ಸಂಬಂಧಿಸಿವೆ. ಆದ್ದರಿಂದ ಪಾದರಕ್ಷೆಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸದಿರುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ನಂಬಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಈ ದಿನಗಳಲ್ಲಿ ಪಾದರಕ್ಷೆ ಖರೀದಿಸಲೇಬೇಡಿ:

ಅಮವಾಸ್ಯ, ಮಂಗಳವಾರ, ಶನಿವಾರ ಮತ್ತು ಗ್ರಹಣ ದಿನಗಳಲ್ಲಿ ಪಾದರಕ್ಷೆಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಈ ದಿನಗಳಲ್ಲಿ, ನಕಾರಾತ್ಮಕ ಗ್ರಹಗಳ ಶಕ್ತಿಯು ಹೆಚ್ಚು ಸಕ್ರಿಯವಾಗಿರುತ್ತದೆ, ಇದು ಮನೆಯಲ್ಲಿ ಆರ್ಥಿಕ ತೊಂದರೆಗಳು, ಜಗಳಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತರಬಹುದು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಪಾದರಕ್ಷೆಗಳನ್ನು ಸಂಗ್ರಹಿಸಲು ಮತ್ತು ಬಳಸಲು ವಾಸ್ತು ನಿಯಮಗಳು:

ಯಾವಾಗಲೂ ಮನೆಯ ಹೊರಗೆ ಅಥವಾ ಶೂ ರ್ಯಾಕ್‌ನಲ್ಲಿ ಶೂಗಳನ್ನು ಇರಿಸಿ. ಮುಖ್ಯ ದ್ವಾರದ ಒಳಗೆ ಅಥವಾ ಪೂಜಾ ಸ್ಥಳದ ಬಳಿ ಅವುಗಳನ್ನು ಇಡಬೇಡಿ. ಶೂಗಳನ್ನು ತಲೆಕೆಳಗಾಗಿ ಇಡಬೇಡಿ. ರಾತ್ರಿಯಲ್ಲಿ ಶೂಗಳನ್ನು ಹೊರಗೆ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.ಈ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಉಪಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತದೆ. ಶೂಗಳಿಗೆ ಸಂಬಂಧಿಸಿದ ವಾಸ್ತು ನಿಯಮಗಳು ಚಿಕ್ಕದಾಗಿ ಕಾಣಿಸಬಹುದು, ಆದರೆ ಅವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಳಿಯುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಹಾಸನ ಮಹಾನಗರಪಾಲಿಕೆ ಇಂಜಿನಿಯರ್! – Kannada News | Hassan City Corporation Engineer Keeps Lokayukta Officials Waiting 4 Hours During Raid

ಹಾಸನ, ಮಾರ್ಚ್​​ 05: ಮನೆ ಮೇಲೆ ದಾಳಿ ನಡೆಸಲು ಬಂದಿದ್ದ ಲೋಕಾಯುಕ್ತ ಸಿಬ್ಬಂದಿಯನ್ನೇ ಅಧಿಕಾರಿಯೋರ್ವ ನಾಲ್ಕು ಗಂಟೆ ಕಾಯಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಮಹಾನಗರಪಾಲಿಕೆ ಇಂಜಿನಿಯರ್ ಸತ್ಯನಾರಾಯಣ ಅವರ ರಕ್ಷಣಾಪುರಂ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಬೆಳಗ್ಗೆ 5:30ಕ್ಕೆ ಲೋಕಾಯುಕ್ತ ತಂಡ ಆಗಮಿಸಿತ್ತು. ಆದರೆ ಸತ್ಯನಾರಾಯಣ್ ಅವರು ಬಾಗಿಲು ತೆರೆಯಲು ನಿರಾಕರಿಸಿದ್ದರಿಂದ ಸುಮಾರು ಗಂಟೆಗಳ ಕಾಲ ಹೈಡ್ರಾಮಾ ನಡೆದಿದೆ.  ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ತಂಡ ಮನೆ ಮುಂದೆ ಕಾದು ಕುಳಿತಿದ್ದು, ಅಧಿಕಾರಿಗಳು ನಿರಂತರವಾಗಿ ಮನವಿ ಮಾಡಿದರೂ ಸತ್ಯನಾರಾಯಣ ಮನೆ ಬಾಗಿಲು ತೆರೆಯಲಿಲ್ಲ. ಅಧಿಕಾರಿಗಳನ್ನು ದೀರ್ಘ ಕಾಲ ಕಾಯಿಸಿದ ಬಳಿಕ ಅಂತಿಮವಾಗಿ ಮನೆಯ ಡೋರ್​​ ಓಪನ್​​ ಮಾಡಲಾಗಿದ್ದು, ಮನೆಯೊಳಗೆ ಎಂಟ್ರೀ ಕೊಟ್ಟಿರುವ ಲೋಕಾಯುಕ್ತ ಟೀಂ ಆಸ್ತಿ ದಾಖಲೆಗಳು, ಆದಾಯ ಮತ್ತು ಸಂಪಾದಿಸಿದ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಇಸ್ರೇಲ್-ಇರಾನ್ ಸಂಘರ್ಷ: ಬೆಂಗಳೂರಿನಲ್ಲಿ ಗಗನಕ್ಕೇರಲಿದೆ ಅಡುಗೆ ಎಣ್ಣೆ ದರ, ಮೊಟ್ಟೆ ಉದ್ಯಕ್ಕೆ ಭಾರೀ ನಷ್ಟ – Kannada News | Israel Iran Conflict Impact: Cooking Oil Prices Rise in Bengaluru, Karnataka Egg Exporters Face Heavy Loss

ಮೊಟ್ಟೆ ಉದ್ಯಕ್ಕೆ ಭಾರೀ ನಷ್ಟImage Credit source: tv9

ಬೆಂಗಳೂರು, ಮಾರ್ಚ್ 5: ಇಸ್ರೇಲ್-ಇರಾನ್ ಸಂಘರ್ಷದಿಂದ (Israel-Iran Conflict) ಉಂಟಾಗಿರುವ ಗಲ್ಫ್ ಯುದ್ಧದ ಭೀತಿಯು ಜಾಗತಿಕವಾಗಿ ತಲ್ಲಣ ಸೃಷ್ಟಿಸಿದೆ. ಇದರ ಪರಿಣಾಮ ಭಾರತದ, ಅದರಲ್ಲೂ ಕರ್ನಾಟಕದ ಜನಸಾಮಾನ್ಯರ ಮೇಲೆ ನೇರವಾಗಿ ಬೀರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ವಿಶೇಷವಾಗಿ ಅಡುಗೆ ಎಣ್ಣೆ ಮತ್ತು ಮೊಟ್ಟೆ ಉದ್ಯಮಕ್ಕೆ ಭಾರಿ ನಷ್ಟ ಉಂಟಾಗಿದೆ. ಬೆಂಗಳೂರಿನಲ್ಲಿ (Bangalore) ಅಡುಗೆ ಎಣ್ಣೆಯ ದರ (Cooking Oil Prices) ಲೀಟರ್‌ಗೆ 5 ರೂಪಾಯಿ ಏರಿಕೆಯಾಗಿದೆ. ತರಗುಪೇಟೆಯ ಅಡುಗೆ ಎಣ್ಣೆ ವರ್ತಕ ಸತೀಶ್ ಪ್ರಕಾರ, ಕಳೆದ ಮೂರ್ನಾಲ್ಕು ದಿನಗಳಿಂದ ಬೇಡಿಕೆಗೆ ತಕ್ಕಂತೆ ಎಣ್ಣೆ ಸರಬರಾಜು ಆಗುತ್ತಿಲ್ಲ.

ಮುಂದಿನ 10 ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಎಣ್ಣೆ ಲಭ್ಯವಾಗುವುದು ಕಷ್ಟ ಎಂದು ಕಂಪನಿಗಳು ಕೂಡ ಹೇಳಿವೆ. ಜಾಗತಿಕ ಯುದ್ಧಗಳಿಂದಾಗಿ ಪೂರೈಕೆ ಸರಪಳಿಗೆ ಅಡ್ಡಿಯಾಗಿದ್ದು, ಹಡಗುಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಕೆಂಪು ಸಮುದ್ರದಲ್ಲಿನ ದಾಳಿಗಳಿಂದಾಗಿ, ಹಡಗುಗಳು ಆಫ್ರಿಕಾ ಮೂಲಕ 45 ದಿನಗಳ ಹೆಚ್ಚುವರಿ ಪ್ರಯಾಣವನ್ನು ಕೈಗೊಳ್ಳಬೇಕಾಗಿದೆ. ಈ ವಿಳಂಬದಿಂದಾಗಿ ದೇಶದಲ್ಲಿ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ 200 ರಿಂದ 250 ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಿನ ಪರಿಸ್ಥಿತಿ ಮುಂದುವರೆದರೆ, ದಾಸ್ತಾನು ಕೊರತೆಯಿಂದ ಜನಸಾಮಾನ್ಯರು ಹೆಚ್ಚಿನ ಬೆಲೆ ತೆರಬೇಕಾಗಲಿದೆ.

ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್‌ಗೆ ಮೊಟ್ಟೆ ರಫ್ತು ಸ್ಥಗಿತ

ಯುದ್ಧದ ಪರಿಣಾಮ ಮೊಟ್ಟೆ ಉದ್ಯಮದ ಮೇಲೂ ಬೀರಿದೆ. ಭಾರತದಿಂದ ಮಧ್ಯಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್‌ಗೆ ಪ್ರತಿತಿಂಗಳು ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಯುದ್ಧದ ಭೀತಿಯಿಂದ ಈ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ. ಇರಾನ್‌ನಿಂದ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಸಂಘರ್ಷಗಳಿಂದಾಗಿ ಸಾಗಣೆ ದೊಡ್ಡ ಸವಾಲಾಗಿದೆ.

ರಫ್ತು ನಿಲುಗಡೆಯಿಂದಾಗಿ ಉತ್ಪಾದನೆಯಾದ ಮೊಟ್ಟೆ ಇಲ್ಲೇ ಉಳಿದುಕೊಂಡಿದೆ. ಇದು ಉತ್ಪಾದಕರಿಗೆ ಭಾರಿ ನಷ್ಟವನ್ನುಂಟು ಮಾಡಿದೆ. ಬೇಸಿಗೆಯಲ್ಲಿ ಮೊಟ್ಟೆಗಳ ಬಳಕೆ ಕಡಿಮೆಯಾಗುವುದರಿಂದ ಈಗಾಗಲೇ ದಾಸ್ತಾನು ಹೆಚ್ಚಾಗಿರುತ್ತದೆ. ಯುದ್ಧದ ಪರಿಣಾಮದಿಂದ ರಫ್ತು ಕೂಡ ನಿಂತುಹೋಗಿರುವುದು ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಮೊಟ್ಟೆ ಬೆಲೆ ಕುಸಿತ ಸಾಧ್ಯತೆ

ಮುಂದಿನ ದಿನಗಳಲ್ಲಿ ಮೊಟ್ಟೆಯ ಬೆಲೆ ಕುಸಿಯುವ ಸಾಧ್ಯತೆಯಿದೆ. ಯುದ್ಧ ಮುಂದುವರೆದರೆ, ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಇನ್ನಷ್ಟು ನಷ್ಟ ಉಂಟಾಗುವ ಭೀತಿಯಿದೆ.

ಇದನ್ನೂ ಓದಿ: ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ: ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್​ಗೆ ಎದುರಾಯ್ತು ಸಂಕಷ್ಟ

ಒಟ್ಟಾರೆ, ಜಾಗತಿಕ ಸಂಘರ್ಷಗಳು ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಆರ್ಥಿಕತೆ ಮತ್ತು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು! – Kannada News | Lokayukta Raids PWD AEE Satishs Residence in Mandya Over Illegal Assets

ಮಂಡ್ಯ, ಮಾರ್ಚ್​ 05: ಮಂಡ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕೆಲಸಗಳ ಇಲಾಖೆ (PWD) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಸತೀಶ್ ಅವರ ನಿವಾಸ ಮತ್ತು ಕಚೇರಿ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಮಂಡ್ಯದ ಬಂಡಿಗೌಡ ಬಡಾವಣೆಯಲ್ಲಿರುವ ಎಇಇ ಸತೀಶ್ ಅವರ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಳಿ ವೇಳೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾಗ, ಎಇಇ ಸತೀಶ್ ಮತ್ತು ಅವರ ಪತ್ನಿ ಮೌನವಾಗಿದ್ದರು ಎಂದು ವರದಿಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ ಪ್ರತ್ಯಕ್ಷ – Kannada News | Pocso Case: Yadagir Self styled godman mallikarjun mutya found In Police Station for interrogation

ಯಾದಗಿರಿ, (ಮಾರ್ಚ್ 05): ಬಾಲಕಿಯ ಜೊತೆ ಅನುಚಿತ ವರ್ತನೆ ಸಂಬಂಧ ಫೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಯಾದಗಿರಿಯ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ಪ್ರತ್ಯಕ್ಷರಾಗಿದ್ದಾರೆ. ಫೆಬ್ರವರಿ 25ರಿಂದ ಕಾಣೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ ನಿನ್ನೆ (ಮಾರ್ಚ್ 04) ರಾತ್ರಿ ಶಹಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಈ ವೇಳೆ ಪೊಲೀಸರು ವಿಚಾರಣೆ ನಡಸಿ ಇಂದು(ಮಾರ್ಚ್ 05) ಮಧ್ಯಾಹ್ನ 3 ಗಂಟೆಗೆ ಬರುವಂತೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಮುತ್ಯಾ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.

Source link

ನಮ್ಮನ್ನು ಒದ್ದು ಹೊರಗೆ ಹಾಕಿದ್ದಾರೆ ಅಷ್ಟೇ..! – Kannada News | South Africa’s Coah Shukri Conrad After Semi FInal Loss vs New Zealand

T20 World Cup 2026: ಟಿ20 ವಿಶ್ವಕಪ್​ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ಗೇರಿದ್ದ ಸೌತ್ ಆಫ್ರಿಕಾ ತಂಡವು ನಿರ್ಣಾಯಕ ಪಂದ್ಯದಲ್ಲಿ ಸೋತಿದೆ. ಅದು ಕೂಡ ಹೀನಾಯವಾಗಿ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 169 ರನ್​ಗಳು ಮಾತ್ರ.

ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಫಿನ್ ಅಲೆನ್ ಹಾಗೂ ಟಿಮ್ ಸೈಫರ್ಟ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಮೂಲಕ ಮೊದಲ ವಿಕೆಟ್​ಗೆ 117 ರನ್​ ಪೇರಿಸಿದ್ದರು. ಅಷ್ಟೇ ಅಲ್ಲದೆ 12.5 ಓವರ್​ಗಳಲ್ಲಿ 173 ರನ್​ ಸಿಡಿಸಿ 9 ವಿಕೆಟ್​ಗಳ ಜಯ ಸಾಧಿಸಿದ್ದರು. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ಫೈನಲ್​ಗೆ ಪ್ರವೇಶಿಸಿದರೆ, ಸೌತ್ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಇತ್ತ ಟೂರ್ನಿಯಿಂದ ಹೊರಬಿದ್ದ ಬಳಿಕ ನಡೆದ  ಸುದ್ಧಿಗೋಷ್ಠಿಯಲ್ಲಿ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಕಾಣಿಸಿಕೊಂಡಿದ್ದರು. ಎಂದಿನಂತೆ ಈ ಬಾರಿ ಕೂಡ ‘ಚೋಕರ್ಸ್’ ಹಣೆಪಟ್ಟಿಯ ಪ್ರಶ್ನೆಯನ್ನು ಅವರ ಮುಂದಿಡಲಾಗಿತ್ತು.

ಐಸಿಸಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಸೌತ್ ಆಫ್ರಿಕಾ ತಂಡವು ನಿರ್ಣಾಯಕ ಪಂದ್ಯಗಳಲ್ಲಿ ಸೋತು ಹೊರಬೀಳುವುದು ಸಾಮಾನ್ಯ. ಹೀಗಾಗಿಯೇ ಆಫ್ರಿಕಾ ಪಡೆಯನ್ನು ಚೋಕರ್ಸ್ ಎಂದು ಕರೆಯಲಾಗುತ್ತದೆ. ಇದೀಗ ಮತ್ತೊಮ್ಮೆ ಸೆಮಿಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ಸೌತ್ ಆಫ್ರಿಕಾ ತಂಡ ಹೊರಬಿದ್ದಿದೆ.

ಇದರೊಂದಿಗೆ ಸೌತ್ ಆಫ್ರಿಕಾ ತಂಡದ ಚೋಕರ್ಸ್ ಹಣೆಪಟ್ಟಿ ಮುಂದುವರೆದಿದೆ. ಆದರೆ ಈ ಬಾರಿಯ ಸೋಲನ್ನು ಚೋಕ್ ಎಂದು ಕರೆಯಲಾಗುವುದಿಲ್ಲ ಎಂದಿದ್ದಾರೆ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್.

ನ್ಯೂಝಿಲೆಂಡ್ ವಿರುದ್ಧದ ಸೋಲನ್ನು ಚೋಕ್ ಎಂದು ಒಪ್ಪಿಕೊಳ್ಳಲಾಗುವುದಿಲ್ಲ. ಏಕೆಂದರೆ ಇದು ನಮಗೆ ಬಿದ್ದಂತಹ ಏಟು. ನಾವು ಅಷ್ಟೊಂದು ಹೀನಾಯವಾಗಿ ಸೋತಿದ್ದೇವೆ. ನಾವು ಪಂದ್ಯದಲ್ಲಿ ಗೆಲ್ಲುವ ಸಣ್ಣ ಲಕ್ಷಣ ತೋರಿದ್ದರೆ ಮಾತ್ರ ಅದನ್ನು ‘ಚೋಕ್’ ಎನ್ನಬಹುದಿತ್ತು.

ನಮಗೆ ಅಂತಹ ಯಾವುದೇ ಅವಕಾಶ ಇರಲಿಲ್ಲ. ಸೌತ್ ಆಫ್ರಿಕಾದಲ್ಲಿ ನಾವು ಇದಕ್ಕೆ ‘ಮೋರ್ಡ್’ (moered) ಎನ್ನುತ್ತೇವೆ. ಇಂದು ನಮಗೆ ಸರಿಯಾದ ‘ಸ್ನಾಟ್‌ಕ್ಲಾಪ್ಡ್’ (snotklapped) ಆಗಿದೆ. ಅಂದರೆ ಸೌತ್ ಆಫ್ರಿಕಾ ಭಾಷೆಯಲ್ಲಿ ಸರಿಯಾಗಿ ಒದೆ ತಿಂದಿದ್ದೇವೆ, ಒದ್ದು ಹೊರಹಾಕಿದ್ದಾರೆ ಎನ್ನುತ್ತೇವೆ. ಅಂತಹದೊಂದು ಹೀನಾಯ ಸೋಲು ಇದಾಗಿದೆ ಶುಕ್ರಿ ಕಾನ್ರಾಡ್ ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರಿ ಕಾನ್ರಾಡ್, ಈ ಬಾರಿ ಸೌತ್ ಆಫ್ರಿಕಾ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂದಿದ್ದರು. ಅಲ್ಲದೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ನಮ್ಮ ತವರು ಮೈದಾನವಾಗಿದೆ.

ಇದನ್ನೂ ಓದಿ: RCB ಪರ 3 ವರ್ಷ ಬೆಂಚ್ ಕಾದಿದ್ದ ಫಿನ್ ಅಲೆನ್

ಹೀಗಾಗಿ ಇಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೀಗ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತು ಹೊರಬಿದ್ದಿದ್ದಾರೆ. ಈ ಸೋಲನ್ನು ಶುಕ್ರಿ ಕಾನ್ರಾಡ್ ಸೌತ್ ಆಫ್ರಿಕಾ ತಂಡಕ್ಕೆ ಬಿದ್ದಂತಹ ಪೆಟ್ಟು ಎಂದು ಬಣ್ಣಿಸಿದ್ದಾರೆ.

Source link

Video: ರಾಜ್ಯಸಭಾ ಚುನಾವಣೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ – Kannada News | Bihar CM Nitish Kumar Enters Rajya Sabha Race With Fresh Nomination

ಪಾಟ್ನಾ, ಮಾರ್ಚ್​ 05: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. 2005ರಿಂದ ಮುಖ್ಯಮಂತ್ರಿಯಾಗಿರುವ ಅವರು, ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ ಎಂದು ಹೇಳಿದ್ದಾರೆ. ನವೆಂಬರ್ 20 ರಂದು ಪಾಟ್ನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕುಮಾರ್ ಪ್ರಮಾಣವಚನ ಸ್ವೀಕರಿಸಿದ ಕೇವಲ ನಾಲ್ಕು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ತಮ್ಮ ಸಂಸದೀಯ ಪ್ರಯಾಣದ ಆರಂಭದಿಂದಲೂ ಬಿಹಾರ ವಿಧಾನಸಭೆಯ ಎರಡೂ ಸದನಗಳ ಹಾಗೂ ಸಂಸತ್ತಿನ ಎರಡೂ ಸದನಗಳ ಸದಸ್ಯರಾಗಲು ಬಯಸಿದ್ದೆ ಎಂದು ಕುಮಾರ್ ಹೇಳಿದ್ದಾರೆ.

ಬಿಹಾರ ಸೇರಿದಂತೆ 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಇಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.ಅವರು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ  ಜತೆಗಿದ್ದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Thursday’s Power: ಗುರುವಾರ ವಿಷ್ಣು ಪೂಜೆ; ಗುರು ಗ್ರಹ, ಮಹಾದಶೆ ಮತ್ತು ಸಮೃದ್ಧಿಯ ರಹಸ್ಯಗಳು – Kannada News | Thursday’s Power: Vishnu Puja, Guru Mahadasha and Prosperity Secrets

ಸನಾತನ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವೂ ಒಂದು ನಿರ್ದಿಷ್ಟ ದೇವತೆ ಹಾಗೂ ಒಂದು ಗ್ರಹಕ್ಕೆ ಸಂಬಂಧಿಸಿದೆ. ಆ ರೀತಿಯಲ್ಲಿ ಗುರುವಾರವು ಬ್ರಹ್ಮಾಂಡದ ರಕ್ಷಕನಾದ ಭಗವಾನ್ ವಿಷ್ಣು ಹಾಗೂ ದೇವತೆಗಳ ಗುರುವಾಗಿರುವ ಬೃಹಸ್ಪತಿ (ಗುರು) ಗ್ರಹಕ್ಕೆ ಸಮರ್ಪಿತವಾಗಿದೆ. ಈ ದಿನ ವಿಷ್ಣುವಿನ ಪೂಜೆ ಮತ್ತು ಉಪವಾಸವನ್ನು ಆಚರಿಸುವುದರಿಂದ ಜೀವನದಲ್ಲಿ ಸಮೃದ್ಧಿ, ಶಾಂತಿ ಮತ್ತು ಸೌಭಾಗ್ಯ ಹೆಚ್ಚುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಗುರುವಾರದಂದು ಗುರು ಗ್ರಹದ ಪೂಜೆ ಮಾಡುವುದರಿಂದ ಜೀವನದಲ್ಲಿರುವ ಅನೇಕ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ವ್ಯಕ್ತಿಯ ಸ್ಥಾನಮಾನ, ಪ್ರತಿಷ್ಠೆ ಹಾಗೂ ಜ್ಞಾನ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆದ್ದರಿಂದ ಈ ದಿನದ ಮಹತ್ವವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ.

ಗುರುವಿನ ಮಹಾದಶೆ ಎಷ್ಟು ವರ್ಷ?

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವಿನ ಮಹಾದಶೆ ಒಟ್ಟು 16 ವರ್ಷಗಳ ಕಾಲ ಇರುತ್ತದೆ. ಈ ಅವಧಿಯಲ್ಲಿ ವಿವಿಧ ಗ್ರಹಗಳ ಅಂತರದಶೆಗಳು ನಡೆಯುತ್ತವೆ. ಮೊದಲಿಗೆ ಗುರುವಿನ ಅಂತರದಶೆ ಆರಂಭವಾಗುತ್ತದೆ ಮತ್ತು ಅದು ಸುಮಾರು ಎರಡು ವರ್ಷಗಳ ಕಾಲ ಇರುತ್ತದೆ. ನಂತರ ಕ್ರಮವಾಗಿ ಇತರ ಗ್ರಹಗಳ ಅಂತರದಶೆಗಳು ಬರುತ್ತವೆ.

ಗುರುವಿನ ಮಹಾದಶೆಯ ಸಮಯದಲ್ಲಿ ಶುಭ ಗ್ರಹಗಳ ಅಂತರದಶೆ ಬಂದರೆ ಉತ್ತಮ ಫಲಗಳು ದೊರೆಯುತ್ತವೆ. ಆದರೆ ರಾಹು ಅಥವಾ ಕೇತುಗಳ ಅಂತರದಶೆ ಬಂದರೆ ಕೆಲವು ಅಡಚಣೆಗಳು ಮತ್ತು ವಿಫಲತೆಗಳು ಎದುರಾಗಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಗುರು ರಾಹು ಅಥವಾ ಕೇತುಗಳೊಂದಿಗೆ ಸಂಯೋಗಗೊಂಡಿದ್ದರೆ ಅದನ್ನು ಚಾಂಡಾಲ ದೋಷ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಗುರು ದೇವರನ್ನು ಮೆಚ್ಚಿಸಲು ಏನು ಮಾಡಬೇಕು?

ಗುರುವಾರದಂದು ಗುರು ದೇವರ ಕೃಪೆ ಪಡೆಯಲು ಕೆಲವು ವಿಶೇಷ ಆಚರಣೆಗಳನ್ನು ಪಾಲಿಸುವುದು ಶುಭಕರವೆಂದು ಹೇಳಲಾಗುತ್ತದೆ. ಗುರುವಾರದಂದು ವಿಷ್ಣು ಮತ್ತು ಗುರು ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಸಾಧ್ಯವಾದರೆ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಹಳದಿ ಬಟ್ಟೆ, ಕಡಲೆಕಾಳು, ಬಾಳೆಹಣ್ಣು, ಪಪ್ಪಾಯಿ ಮುಂತಾದ ಹಳದಿ ವಸ್ತುಗಳನ್ನು ದಾನ ಮಾಡುವುದು ಶುಭಕರ. ಇದಲ್ಲದೇ ಲಕ್ಷ್ಮೀ–ನಾರಾಯಣರ ಪೂಜೆ ಮಾಡುವುದು ಉತ್ತಮ ಫಲ ನೀಡುತ್ತದೆ. ಪೂಜೆಯ ಸಮಯದಲ್ಲಿ ವಿಷ್ಣುವಿಗೆ ಕೇಸರಿ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಬಹುದು. ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವುದು ಹಾಗೂ ಬಾಳೆ ಗಿಡಕ್ಕೆ ಅರಿಶಿನ ಬೆರೆಸಿದ ನೀರು ಹಾಕುವುದು ಶುಭಕರವೆಂದು ನಂಬಲಾಗಿದೆ.

ಈ ರೀತಿಯ ಪೂಜೆ ಹಾಗೂ ದಾನಧರ್ಮಗಳನ್ನು ಶ್ರದ್ಧೆಯಿಂದ ಮಾಡಿದರೆ ಗುರು ದೇವರ ಕೃಪೆ ದೊರೆಯುತ್ತದೆ ಮತ್ತು ಜೀವನದಲ್ಲಿ ಜ್ಞಾನ, ಗೌರವ ಹಾಗೂ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version