Headlines

ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಬ್ರಹ್ಮ ಕಮಲ’ ಶೀಘ್ರವೇ ಬಿಡುಗಡೆ; ಬಂತು ಟ್ರೇಲರ್ – Kannada News | Kannada Movie Brahma Kamala Trailer released ft Advithi Shetty Siddu Poornachandra

ಅದ್ವಿತಿ ಶೆಟ್ಟಿ (Advithi Shetty) ಅವರು ಪ್ರಮುಖ ಪಾತ್ರ ಮಾಡಿರುವ ‘ಬ್ರಹ್ಮ ಕಮಲ’ (Brahma Kamala) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಸಿದ್ದು ಪೂರ್ಣಚಂದ್ರ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ತಾವು ಆಯ್ಕೆ ಮಾಡಿಕೊಳ್ಳುವ ಕಥೆಗಳು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸಿದ್ದರು. ಈಗ ಸಿದ್ದು ಪೂರ್ಣಚಂದ್ರ ಅವರು ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ತಳಮಳಕ್ಕೆ…

Read More

ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಅಡ್ಡಿಪಡಿಸಲು ಜೆಇಎಂ ಶಂಕಿತ ಉಗ್ರನ ಸಂಚು: ಪೊಲೀಸರ ಸಮವಸ್ತ್ರ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ – Kannada News | JeM Terror Plot to Disrupt Jantar Mantar Protest: Police Uniform Used for Violence

ಕೋಲ್ಕತ್ತಾ, ಆಗಸ್ಟ್ 02: ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್(NEET)’ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ‘ಜೈಶ್-ಎ-ಮೊಹಮ್ಮದ್’ (JeM) ಸಂಘಟನೆಯ ಶಂಕಿತ ಭಯೋತ್ಪಾದಕ ಮೊಹಮ್ಮದ್ ಹಮೀಮ್ ಮೊಂಡಲ್ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಲ್ಲಿ ಮೊಂಡಲ್‌ನನ್ನು ಬಂಧಿಸಿದ್ದು, ತನಿಖೆಯ ವೇಳೆ ಈ ಸ್ಫೋಟಕ ಸತ್ಯಗಳು ಹೊರಬಂದಿವೆ. ಪ್ರತಿಭಟನೆಯ ವೇಳೆ ಸಾರ್ವಜನಿಕರ…

Read More

Video: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್, ಬಿಗಿ ಭದ್ರತಾ ವ್ಯವಸ್ಥೆ – Kannada News | Bengaluru on High Alert for Civil Police Constable Written Exam Amidst Strict Security

ಬೆಂಗಳೂರು: ಸಿವಿಲ್ ಪೊಲೀಸ್ ಪೇದೆ ನೇಮಕಾತಿಗಾಗಿ ಲಿಖಿತ ಪರೀಕ್ಷೆಯು ಇಂದು ಬೆಂಗಳೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ನಡೆಯುತ್ತಿದೆ. 3,991 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಈ ಪರೀಕ್ಷೆಗೆ ಸುಮಾರು 4.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜಾಜಿನಗರದ ಸಂಯುಕ್ತ ಪದವಿಪೂರ್ವ ಕಾಲೇಜು ಸೇರಿದಂತೆ ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಆಗಮಿಸಿದ್ದಾರೆ. ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ವರದಿಯಾಗಿದ್ದರಿಂದ, ಈ ಬಾರಿ ಪರೀಕ್ಷಾ ಪ್ರಾಧಿಕಾರವು ಅತೀವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಕ್ರಮಗಳು ನಡೆಯದಂತೆ ಬಿಗಿ…

Read More

ಹೂಡಿಕೆದಾರರೇ ಎಚ್ಚರ! ಫೇಸ್‌ಬುಕ್ ಜಾಹೀರಾತು ನಂಬಿ 16.2 ಲಕ್ಷ ರೂ. ಕಳೆದುಕೊಂಡ ಮಹಿಳೆ – Kannada News | Mangaluru Cyber Crime: Senior Citizen Loses Rs 16.2 Lakh in Online Investment Fraud

ಮಂಗಳೂರು, ಆಗಸ್ಟ್ 02: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆಗೆ ಮಂಗಳೂರಿನ 61 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದು, ಬರೋಬ್ಬರಿ 16.2 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ಮಹಿಳೆ, ಕೊನೆಗೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ವಂಚನೆ ನಡೆದಿದ್ದು ಹೇಗೆ? ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಏಪ್ರಿಲ್‌ನಲ್ಲಿ ಮಹಿಳೆ ಫೇಸ್‌ಬುಕ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತೊಂದರ ಲಿಂಕ್…

Read More

ಭೂಕುಸಿತದಿಂದ ರೈಲು ಸಂಚಾರ ಸ್ಥಗಿತ: ತೀವ್ರ ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು – Kannada News | Landslide Disrupts Rail Services Between Hassan and Mangaluru; PC Exam Aspirants Stranded

ಹಾಸನ, ಆಗಸ್ಟ್​​ 02: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾಸನ ಮತ್ತು ಮಂಗಳೂರು ನಡುವಿನ ರೈಲ್ವೆ ಹಳಿಯಲ್ಲಿ ಭೂಕುಸಿತ ಉಂಟಾಗಿದೆ. ಯೆಡಕುಮಾರಿ ಹಾಗೂ ಶ್ರೀವಾಗಿಲು ನಿಲ್ದಾಣಗಳ ನಡುವೆ ಗುಡ್ಡ ಕುಸಿದ ಪರಿಣಾಮ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ಮಾಹಿತಿ ಪ್ರಕಾರ, ಏಳು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಎರಡು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಈ ಘಟನೆಯಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿಯೂ ಇಂದು…

Read More

Happy Friendship Day 2026: ನೋವು-ನಲಿವಿನಲ್ಲಿ ಸದಾ ನಿಮ್ಮೊಂದಿಗಿರುವ ಬೆಸ್ಟ್‌ಫ್ರೆಂಡ್‌ಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ – Kannada News | Happy Friendship Day 2026: Here Are Best Friendship Quotes To Wish Your Friends

ಸ್ನೇಹಿತರ ದಿನದ ಶುಭಾಶಯಗಳುImage Credit source: Getty Images ಪ್ರತಿಯೊಬ್ಬರ ಬದುಕಿನಲ್ಲೂ ಬೆಲೆಯೇ ಕಟ್ಟಲಾಗದ ಸಂಬಂಧ ಎಂದರೆ ಅದು ಸ್ನೇಹ (Friendship).  ಸ್ನೇಹಕ್ಕೆ ಬಡವ, ಶ್ರೀಮಂತ ಎಂಬ ಭೇದವಿಲ್ಲ. ಜಾತಿ, ವಯಸ್ಸಿನ ಹಂಗಿಲ್ಲ. ನಿಸ್ವಾರ್ಥ ಪ್ರೀತಿಯ ಬಾಂಧವ್ಯವಿದ್ದರೆ ಅದು ಫ್ರೆಂಡ್‌ಶಿಪ್‌ ಮಾತ್ರ ಎಂದು ಹೇಳಬಹುದು. ಆದ್ದರಿಂದಲೇ ಸ್ನೇಹ ಸಂಬಂಧವನ್ನು ರಕ್ತ ಸಂಬಂಧಗಳಿಗೂ ಮೀರಿದ ಬಂಧವೆಂದು ಹೇಳುವುದು. ಫ್ರೆಂಡ್‌ಶಿಪ್‌ನ ಈ ಮಹತ್ವವನ್ನು ಸಾರಲು, ಸ್ನೇಹ ಸಂಬಂಧವನ್ನು ಸಂಭ್ರಮಿಸಲು ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ ಮೊದಲ ಭಾನುವಾರವನ್ನು ಫ್ರೆಂಡ್‌ಶಿಪ್‌ ಡೇ ಯನ್ನು…

Read More

Weekly Horoscope: ಆಗಸ್ಟ್ 3 ರಿಂದ 9ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ – Kannada News | Zodiac Fortunes: Aries, Taurus, Gemini, Cancer Weekly Astrology

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು ಆಗಸ್ಟ್ 3 ರಿಂದ ಆಗಸ್ಟ್ 9 ವರೆಗಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ವಿವರಿಸಿದ್ದಾರೆ. ಈ ವಾರವು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು ಮತ್ತು ಕೃಷ್ಣ ಪಕ್ಷವನ್ನು ಒಳಗೊಂಡಿದೆ. ಈ ವಾರದಲ್ಲಿ ಮೇಲುಕೋಟೆ ರಾಜಮುಡಿ ಉತ್ಸವ, ಗಂಗಾವತಿ ಶಿವಯೋಗಿಗಳ ವರ್ಧಂತ್ಯೋತ್ಸವ, ಬಾಲಗಂಗಾಧರ ತಿಲಕರ ಆರಾಧನಾ ಮಹೋತ್ಸವ ಮತ್ತು ಚಾಮುಂಡೇಶ್ವರಿ ವರ್ಧಂತ್ಯೋತ್ಸವದಂತಹ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಗ್ರಹಗಳ ಗೋಚಾರದ ಪ್ರಕಾರ,…

Read More

ಧೋನಿಯ ವಿಶ್ವ ದಾಖಲೆ ಮುರಿದ ಇಮ್ರಾನ್ ತಾಹಿರ್ – Kannada News | Imran Tahir Breaks MS Dhoni’s All Time World Record

ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಮಹೇಂದ್ರ ಸಿಂಗ್ ಧೋನಿಯ ಹೆಸರಿನಲ್ಲಿತ್ತು. 2023 ರಲ್ಲಿ ಧೋನಿ ಐಪಿಎಲ್ ಟ್ರೋಫಿ ಗೆದ್ದಾಗ ಅವರಿಗೆ 41 ವರ್ಷ, 325 ದಿನಗಳಾಗಿತ್ತು. ಈ ಮೂಲಕ ಟಿ20 ಟ್ರೋಫಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ವಿಶ್ವ ದಾಖಲೆ ಬರೆದಿದ್ದರು. (PC: IPL) Source link

Read More

ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ‘ಸೂತ್ರ’ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ ಪೊಲೀಸರ ವಶಕ್ಕೆ – Kannada News | Ayodhya Medical College Bomb Formula: Student Sarfaraz Khan Arrested, UP ATS Probe

ಅಯೋಧ್ಯೆ, ಆಗಸ್ಟ್​ 02: : ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿವರಗಳಿದ್ದ ಕೈಬರಹದ ಟಿಪ್ಪಣಿ ಸಿಕ್ಕ ಬೆನ್ನಲ್ಲೇ, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಬಲರಾಂಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ 2025 ರ ಎಕ್ಸ್-ರೇ ಟೆಕ್ನಾಲಜಿ ಬ್ಯಾಚ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕಾಗದದ ಟಿಪ್ಪಣಿಯೊಂದು ಸಿಕ್ಕಿದೆ. ಶುಕ್ರವಾರ ರಾತ್ರಿ ಇದೇ…

Read More

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಅಬ್ಬರ: ಪ್ರಮುಖ ಡ್ಯಾಂಗಳಿಗೆ ಹೆಚ್ಚಿದ ನೀರಿನ ಒಳಹರಿವು – Kannada News | Monsoon Boom: Heavy Rain Lashes Cauvery Basin; Massive Inflows to KRS, Kabini & Major Karnataka Dams

ಕಬಿನಿ ಜಲಾಶಯದ ನೀರಿನ ಪ್ರಮಾಣImage Credit source: Tv9 Kannada ಮೈಸೂರು, ಆಗಸ್ಟ್​​ 02: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ (KRS) ಹಾಗೂ ಕಬಿನಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ಸಂಕಷ್ಟದಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಕಳೆದ 24 ಗಂಟೆಗಳಲ್ಲಿ ಕೊಡಗು, ಕೇರಳದ ವಯನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಿದೆ….

Read More