74,000 ಹುದ್ದೆಗಳ ಭರ್ತಿಗೆ ಹೈಟೆಕ್ ಭದ್ರತೆ: ಅಕ್ರಮ ತಡೆಗೆ ರಾಜ್ಯ ಸರ್ಕಾರದಿಂದ ‘ಡಿಜಿಟಲ್ ಕೋಟೆ’! – Kannada News | Karnataka Recruitment Exams: Govt Introduces High Tech Security to Stop Cheating

ಬೆಂಗಳೂರು, ಆಗಸ್ಟ್ 02: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 74,000 ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ಅಕ್ರಮ-ರಹಿತವಾಗಿ ನಡೆಸಲು ಕರ್ನಾಟಕ ಸರ್ಕಾರವು ಹೈಟೆಕ್ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪಶ್ನೆಪತ್ರಿಕೆ ಸೋರಿಕೆ ಮತ್ತು ನಕಲು ತಡೆಯಲು ತಂತ್ರಜ್ಞಾನ ಆಧಾರಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸ್ಮಾರ್ಟ್ ಸೆಕ್ಯೂರಿಟಿ ಟ್ರಂಕ್ ಹಾಗೂ 5 ಹಂತದ ಪ್ಯಾಕಿಂಗ್

ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಈ ಬಾರಿ ಅತ್ಯಾಧುನಿಕ ಭದ್ರತಾ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ಸಾಗಿಸಲು ‘ಒನ್-ಟೈಮ್ ಲಾಕಬಲ್ ಸೆಕ್ಯೂರಿಟಿ ಟ್ರಂಕ್‌’ಗಳನ್ನು ಬಳಸಲಾಗುತ್ತಿದ್ದು, ಅನಧಿಕೃತವಾಗಿ ತೆರೆಯಲು ಯತ್ನಿಸಿದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಆಟೋಮ್ಯಾಟಿಕ್ ಅಲರ್ಟ್ ರವಾನೆಯಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು 5 ಹಂತದ ಟ್ಯಾಂಪರ್-ಪ್ರೂಫ್ ಪ್ಯಾಕಿಂಗ್‌ನಲ್ಲಿ ಸಾಗಿಸಲಾಗುತ್ತಿದ್ದು, ರಾಜ್ಯದ ಹೊರಗಿನ ಹೈ-ಸೆಕ್ಯೂರಿಟಿ ಪ್ರಿಂಟಿಂಗ್ ಪ್ರೆಸ್‌ಗಳಲ್ಲಿ ಮುದ್ರಿಸಲಾಗುತ್ತಿದೆ.

ಪರೀಕ್ಷಾ ಕೊಠಡಿಗಳಲ್ಲೇ ಜ್ಯಾಮರ್, ಸಿಸಿಟಿವಿ ಕಣ್ಗಾವಲು

ಇಡೀ ಸೆಂಟರ್ ಬದಲಾಗಿ, ಈ ಬಾರಿ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಹೈ-ಟೆಕ್ ಜ್ಯಾಮರ್‌ಗಳನ್ನು ಅಳವಡಿಸಲಾಗುತ್ತಿದೆ. ಒಂದೇ ಕೊಠಡಿಯಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಶ್ನೆಗಳು ಮತ್ತು ಉತ್ತರಗಳ ಕ್ರಮಸಂಖ್ಯೆ (Option Sequence) ಬೇರೆ ಬೇರೆಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು 24 ಗಂಟೆ ಮುಂಚಿತವಾಗಿ ತಪಾಸಣೆ ನಡೆಸಿ, ಸಿಸಿಟಿವಿ ಕ್ಯಾಮೆರಾ ಹಾಗೂ ಫ್ಲೈಯಿಂಗ್ ಸ್ಕ್ವಾಡ್​ಗಳ ಮೂಲಕ ನಿರಂತರ ಕಣ್ಗಾವಲಿನಲ್ಲಿ ಇಡಲಾಗುತ್ತದೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ

ವಾಟ್ಸಾಪ್, ಟೆಲಿಗ್ರಾಂ, ಬಿಟ್‌ಚಾಟ್ ಹಾಗೂ ಸ್ನ್ಯಾಪ್‌ಚಾಟ್‌ಗಳ ಮೂಲಕ ಸುಳ್ಳು ಸುದ್ದಿ ಅಥವಾ ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಲಿದ್ದಾರೆ. ಪರೀಕ್ಷೆ ಮುಗಿದ 24 ಗಂಟೆಯೊಳಗೆ ಒಎಂಆರ್ (OMR) ಶೀಟ್‌ಗಳನ್ನು ಮೌಲ್ಯಮಾಪನಕ್ಕೂ ಮುನ್ನವೇ ಕೆಇಎ (KEA) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.

ಇದನ್ನೂ ಓದಿ ನಾಳೆ ಪೊಲೀಸ್​​ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದ ಶಂಕಿತರ ಮೇಲೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿದ್ದು, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡದ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಅಕ್ರಮ ಎಸಗುವವರ ವಿರುದ್ಧ ದೂರು ನೀಡಲು 112 ಸಹಾಯವಾಣಿ ಹಾಗೂ ಪರೀಕ್ಷಾ ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು (9480800308, 9480800106) ಬಿಡುಗಡೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐದು ವರ್ಷಗಳೊಳಗೆ ಮನೆ ನಿರ್ಮಿಸದ ಖಾಲಿ ಸೈಟ್​​ ವಾಪಸ್ ಪಡೆಯುವ ಸರ್ಕಾರದ ಪ್ರಸ್ತಾಪಕ್ಕೆ ತೀವ್ರ ವಿರೋಧ – Kannada News | Site Reclaiming Row: Landowners and BJP Slam Karnataka Government’s Proposal to Reclaim Vacant Plots or Double Property Tax

ಬೆಂಗಳೂರು, ಆಗಸ್ಟ್​​ 02: ಐದು ವರ್ಷಗಳೊಳಗೆ ಮನೆ ನಿರ್ಮಿಸದ ಖಾಲಿ ನಿವೇಶನಗಳನ್ನು ವಾಪಸ್ ಪಡೆಯುವ ಅಥವಾ ಅಂತಹ ನಿವೇಶನಗಳಿಗೆ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿರೋದಾಗಿ ರಾಜ್ಯ ಸರ್ಕಾರ ಹೇಳಿರೋದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಸರ್ಕಾರದ ಪ್ರಸ್ತಾಪಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳ ನಿವೇಶನ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದು, ಮೂಲ ಸೌಕರ್ಯಗಳೇ ಇಲ್ಲದ ಜಾಗದಲ್ಲಿ ಮನೆ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ನಿವೇಶನ ಮಾಲೀಕರು ಹೇಳೋದೇನು?

ನಾಡಪ್ರಭು ಕೆಂಪೇಗೌಡ ಬಡಾವಣೆ)ಯ (NPKL) ನಿವೇಶನದಾರರೊಬ್ಬರು, 2016ರಲ್ಲೇ ನಿವೇಶನ ಹಂಚಿಕೆಯಾಗಿದೆ. ಆದರೆ ಇಂದಿಗೂ ಶೇ.75ರಷ್ಟು ರಸ್ತೆ ಮಾತ್ರ ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಕಾಮಗಾರಿ ಕಳೆದ ಎರಡು-ಮೂರು ವರ್ಷಗಳ ಹಿಂದೆ ವೇಗ ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಕಟ್ಟುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಆರ್ಕಾವತಿ ಬಡಾವಣೆಯ ಮತ್ತೊಬ್ಬ ನಿವೇಶನ ಮಾಲೀಕರು, ಕಾನೂನು ತೊಡಕುಗಳು ಹಾಗೂ ಮೂಲಸೌಕರ್ಯದ ಕೊರತೆಯಿಂದ ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸಿದ್ದೇವೆ. ಮೊದಲು ಬಡಾವಣೆಗಳಲ್ಲಿ ರಸ್ತೆ, ವಿದ್ಯುತ್, ನೀರಿನಂತಹ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸಬೇಕು. ನಂತರ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು, ಇಲ್ಲಾಂದ್ರೆ ಡಬ್ಬಲ್ ಆಸ್ತಿ ತೆರಿಗೆ: ಸಿಎಂ ಖಡಕ್ ಸೂಚನೆ

ಬಿಜೆಪಿಯಿಂದಲೂ ವಿರೋಧ

ಸಇರ್ಕಾರದ ಪ್ರಸ್ತಾಪಕ್ಕೆ ವಿಪಕ್ಷ ಬಿಜೆಪಿaಯಿಂದಲೂ ವಿರೋಧ ಕೇಳಿಬಂದಿದೆ. ಸಾಲ ಮಾಡಿ ಸೈಟ್ ಖರೀದಿ ಮಾಡಿರ್ತಾರೆ. ಅವರಿಗೆ ಲೋನ್ ಆಗದಕ್ಕೆ ಮನೆ ಕಟ್ಟಲು ಸಾಧ್ಯವಿರಲ್ಲ. ದುಡಿದ್ದೋರು ಮನೆ ಕಟ್ತಾರೆ, ಇಲ್ಲದರಿಗೆ ಮನೆಕಟ್ಟಲು 10-15 ವರ್ಷ ಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಖಾಲಿ ನಿವೇಶನಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಅಥವಾ ಇತರ ಅಪಾಯಗಳಿಗೆ ಸರ್ಕಾರ ಜವಾಬ್ದಾರಿಯಲ್ಲ. ಅದು ನಿಮ್ಮ ಆಸ್ತಿ, ಅದರ ನಿರ್ವಹಣೆ ನಿಮ್ಮ ಹೊಣೆ. ನಿವೇಶನ ಹಂಚಿಕೆಗೊಂಡು ಐದು ವರ್ಷ ಕಳೆದರೂ ಮನೆ ನಿರ್ಮಿಸದಿದ್ದರೆ, ಆ ನಿವೇಶನವನ್ನು ವಾಪಸ್ ಪಡೆಯುವ ಅಥವಾ ದುಪ್ಪಟ್ಟು ಆಸ್ತಿ ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ನಿನ್ನೆಯಷ್ಟೇ ಸಿಎಂ ಡಿಕೆ ಶಿವಕುಮಾರ್​​ ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ – Kannada News | Weekly Horoscope, August 2 to August 8, 2026

ಮೇಷ ರಾಶಿ:

ಈ ವಾರ ತೃತೀಯದ ಮಂಗಳ ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದ್ದಾನೆ. ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕುಟುಂಬದ ಬೆಂಬಲ ಮತ್ತು ಸಣ್ಣ ಪ್ರಮಾಣದ ಪ್ರಯಾಣಗಳು ಯಶಸ್ಸು ತರಲಿವೆ. ಹಣಕಾಸಿನ ವಹಿವಾಟಿನಲ್ಲಿ ಜಾಗ್ರತೆ ವಹಿಸಿ.

​ವೃಷಭ ರಾಶಿ:

ರಾಶಿಯಲ್ಲಿ ಉಚ್ಚ ಚಂದ್ರನ ಸಂಚಾರದಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಆತ್ಮವಿಶ್ವಾಸ ವೃದ್ಧಿಸಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದ್ದು, ಹೂಡಿಕೆಗಳಿಗೆ ಇದು ಸಕ್ತ ಸಮಯ. ಕೌಟುಂಬಿಕವಾಗಿ ಹರ್ಷದಾಯಕ ವಾತಾವರಣವಿರುತ್ತದೆ.

​ಮಿಥುನ ರಾಶಿ:

ಧನ ಸ್ಥಾನದ ಮೇಲಿನ ಶುಭ ಗ್ರಹಗಳ ದೃಷ್ಟಿಯಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದರೆ ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕೋಪ ನಿಯಂತ್ರಣ ಅಗತ್ಯ. ಮಾತುಗಳಲ್ಲಿ ಮೃದುತ್ವವಿದ್ದರೆ ಎಲ್ಲ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರುಗಳ ಸಮಾಗಮವಿದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಶೈಕ್ಷಣಿಕ ಹಾಗೂ ಬೌದ್ಧಿಕ ರಂಗದಲ್ಲಿರುವವರಿಗೆ ಅತ್ಯುತ್ತಮ ಸಫಲತೆ ಸಿಗಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನವಿರಲಿ.

​ಸಿಂಹ ರಾಶಿ:

ರಾಶಿಯಲ್ಲಿ ಕೇತುವಿನ ಉಪಸ್ಥಿತಿ ಹಾಗೂ ವ್ಯಯ ಸ್ಥಾನದ ಗ್ರಹಕೂಟದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು. ಧಾರ್ಮಿಕ ಹಾಗೂ ಸಾತ್ವಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ನಿರೀಕ್ಷಿತ ಕಾರ್ಯಗಳು ಕೊಂಚ ತಡವಾಗಿ ನೆರವೇರಬಹುದು.

​ಕನ್ಯಾ ರಾಶಿ:

ಲಾಭ ಸ್ಥಾನದ ಶುಭಫಲಗಳಿಂದ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ರಾಶಿಯಲ್ಲಿ ಶುಕ್ರನಿದ್ದರೂ ಶುಭ ಗ್ರಹಗಳ ದೃಷ್ಟಿ ಉತ್ತಮ ಫಲ ನೀಡಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಹಾದಿ ಸುಗಮವಾಗಲಿದೆ.

​ತುಲಾ ರಾಶಿ:

ದಶಮ ಸ್ಥಾನ ಬಲವಾಗಿರುವುದರಿಂದ ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ.

ಇದನ್ನೂ ಓದಿ: ಆಗಸ್ಟ್‌ನಲ್ಲಿ ಈ 4 ರಾಶಿಗೆ ಸ್ವಂತ ಮನೆ ಯೋಗ ಮತ್ತು ಅನಿರೀಕ್ಷಿತ ಧನಲಾಭ!

​ವೃಶ್ಚಿಕ ರಾಶಿ:

ಭಾಗ್ಯ ಸ್ಥಾನದಲ್ಲಿ ಗುರುವಿನ ಅನುಗ್ರಹವಿರುವುದರಿಂದ ದೈವಿಕ ಚಿಂತನೆ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದೂರದ ಪ್ರಯಾಣ ಲಾಭದಾಯಕವಾಗಲಿದೆ. ಕೆಲಸ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ.

​ಧನುಸ್ಸು ರಾಶಿ:

ಅಷ್ಟಮ ಸ್ಥಾನದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಆರೋಗ್ಯ ಹಾಗೂ ವಾಹನ ಚಾಲನೆಯಲ್ಲಿ ಜಾಗರೂಕತೆ ಅಗತ್ಯ. ಇದ್ದಕ್ಕಿದ್ದಂತೆ ಶುಭ ಸುದ್ಧಿಯೊಂದು ಬರಲಿದ್ದು, ತಾಳ್ಮೆಯಿಂದ ವ್ಯವಹರಿಸುವುದು ಒಳಿತು.

​ಮಕರ ರಾಶಿ:

ಸಪ್ತಮ ಸ್ಥಾನದಲ್ಲಿ ಗ್ರಹಗಳ ಬಲವಿರುವುದರಿಂದ ಪಾಲುದಾರಿಕೆ ಉದ್ಯಮದಲ್ಲಿ ನಿಕಟ ಬಾಂಧವ್ಯ ಬೆಳೆಯಲಿದೆ. ದಾಂಪತ್ಯ ಜೀವನದಲ್ಲಿದ್ದ ಭಿನ್ನಾಭಿಪ್ರಾಯಗಳು ತಿಳಿಯಾಗಿ ಸುಖ-ಶಾಂತಿ ನೆಲೆಸಲಿದೆ.

​ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹು ಹಾಗೂ ಷಷ್ಠ ಸ್ಥಾನದಲ್ಲಿ ಸೂರ್ಯ, ಬುಧ, ಗುರುಗಳಿರುವುದರಿಂದ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಸ್ಪರ್ಧಾತ್ಮಕ ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕಠಿಣ ಶ್ರಮಕ್ಕೆ ತಕ್ಕ ಫಲ ನಿಶ್ಚಿತ.

​ಮೀನ ರಾಶಿ:

ರಾಶಿಯಲ್ಲಿ ವಕ್ರ ಶನಿ ಹಾಗೂ ಪಂಚಮದಲ್ಲಿ ಗುರು, ಆದಿತ್ಯ ಯೋಗವಿರುವುದರಿಂದ ಸಂತಾನ ಹಾಗೂ ಶಿಕ್ಷಣದ ವಿಷಯದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಹೂಡಿಕೆಗಳಿಂದ ನಿರೀಕ್ಷಿತ ಲಾಭ ದೊರೆಯಲಿದೆ.

​ಈ ವಾರ ವಿಷ್ಣು ಸಹಸ್ರನಾಮ ಅಥವಾ ಶಿವಪೂಜೆ ಮಾಡುವುದರಿಂದ ಮನಸ್ಸಿಗೆ ಹೆಚ್ಚಿನ ಸ್ಥಿರತೆ ಮತ್ತು ಸರ್ವ ಕಾರ್ಯಗಳಲ್ಲಿ ಸಿದ್ಧಿಯೂ ಲಭಿಸಲಿದೆ.

-ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲಾ-ಕಾಲೇಜುಗಳಲ್ಲಿ ಪ್ರತಿಜ್ಞಾವಿಧಿ, ಡ್ರಗ್ಸ್ ಮಾಫಿಯಾಗೆ ತಡೆ: ನಶಾ ಮುಕ್ತ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ – Kannada News | PM Modi Launches Nasha Mukt Bharat Campaign for Viksit Bharat Future

ನವದೆಹಲಿ, ಜುಲೈ 02: ಭಾರತೀಯ ಯುವಕರನ್ನು ಮಾದಕದ್ರವ್ಯಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ರಾಷ್ಟ್ರವ್ಯಾಪಿ ‘ವಿಕಸಿತ ಭಾರತಕ್ಕಾಗಿ ಮಾದಕದ್ರವ್ಯ ಮುಕ್ತ ಯುವ ಸಂಕಲ್ಪ ಅಭಿಯಾನ’ಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಭಾರತೀಯ ಯುವಜನತೆಯನ್ನು ಮಾದಕದ್ರವ್ಯಗಳ ಜಾಲದಿಂದ ದೂರವಿಟ್ಟು, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ಮೋದಿ ಈ ಅಭಿಯಾನ ಶುರು ಮಾಡಿದ್ದಾರೆ. ನಾವು ನೋಡುತ್ತಿರುವ ಅಭಿಯಾನವು ವ್ಯಕ್ತಿ, ಕುಟುಂಬ, ಸಮಾಜಕ್ಕಾಗಿ ಮತ್ತು ಮುಖ್ಯವಾಗಿ ರಾಷ್ಟ್ರಕ್ಕಾಗಿ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಮಾದಕ ದ್ರವ್ಯ ಮುಕ್ತ ಯುವಕರು ಅತ್ಯಗತ್ಯ ಎಂದರು.

ದೇಶದ ಪ್ರಗತಿಗೆ ಯುವಶಕ್ತಿಯೇ ಅಡಿಪಾಯ. ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ದೇಶದ ಯುವಜನರು ಯಾವುದೇ ರೀತಿಯ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು. ದೇಶದ ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾದಕದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳು ಮತ್ತು ‘ಸಂಕಲ್ಪ ಪ್ರಮಾಣ ವಚನ’ ಸ್ವೀಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಯುವಜನರು ಮಾದಕದ್ರವ್ಯಗಳ ದುಷ್ಪರಿಣಾಮಗಳ ವಿರುದ್ಧ ಜಾಗೃತಿ ಮೂಡಿಸಲು ‘ಮೈ ಭಾರತ್’ ಪೋರ್ಟಲ್ ಮೂಲಕ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಮಾದಕದ್ರವ್ಯ ಪೂರೈಕೆ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಹಾಗೂ ಡ್ರಗ್ಸ್ ಜಾಲದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ಸ್ಥಳೀಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮತ್ತಷ್ಟು ಓದಿ: PM Modi Speech in Mysuru: ಮೈಸೂರಿನ ಪ್ರತಿ ಮೂಲೆಯಲ್ಲೂ ಭಾರತದ ಪರಂಪರೆ ಹಾಸುಹೊಕ್ಕಿದೆ; ಪ್ರಧಾನಿ ಮೋದಿ ಬಣ್ಣನೆ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಯುವ ಆಧ್ಯಾತ್ಮಿಕ ಶೃಂಗಸಭೆ’ಯಲ್ಲಿ 120 ಕ್ಕೂ ಹೆಚ್ಚು ಸಂಸ್ಥೆಗಳ 600 ಪ್ರಮುಖ ಯುವ ನಾಯಕರು ಭಾಗವಹಿಸಿ, ಮುಂದಿನ 5 ವರ್ಷಗಳಲ್ಲಿ ಭಾರತವನ್ನು ಸಂಪೂರ್ಣ ನಶೆಮುಕ್ತಗೊಳಿಸಲು ಬ್ಲೂಪ್ರಿಂಟ್ ಸಿದ್ಧಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ಕನಸು

ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಲು ಮಾದಕದ್ರವ್ಯ ಮುಕ್ತ ಯುವಶಕ್ತಿ ಅತ್ಯಗತ್ಯ. ಪ್ರತಿಯೊಬ್ಬ ಯುವ ನಾಗರಿಕನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತನಾಗಿರಬೇಕು. ವ್ಯಸನಗಳಿಂದ ದೂರವಿದ್ದು ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದು ನಮ್ಮ ಆಶಯ ಎಂದು ಪ್ರಧಾನಿ ಹೇಳಿದರು.

ಕ್ರೀಡಾಕೂಟಗಳು, ವಾಕಥಾನ್‌ಗಳು, ಧ್ಯಾನ ಶಿಬಿರಗಳು, ಸಾಂಸ್ಕೃತಿಕ ಪ್ರದರ್ಶನಗಳು, ಬೀದಿ ನಾಟಕಗಳು (ನುಕ್ಕಡ್ ನಾಟಕ), ಚರ್ಚಾ ಸ್ಪರ್ಧೆಗಳು, ಕಲಾ ಸ್ಪರ್ಧೆಗಳು ಮತ್ತು ಸಮುದಾಯ ಜಾಗೃತಿ ಅಭಿಯಾನಗಳು ನಡೆಯಲಿವೆ.

ಮಾದಕದ್ರವ್ಯ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲ, ಇಡೀ ಕುಟುಂಬ ಮತ್ತು ದೇಶದ ಭವಿಷ್ಯವನ್ನೇ ನಾಶಪಡಿಸುತ್ತದೆ. ನಮ್ಮ ಯುವಜನರಲ್ಲಿ ದೇಶ ಕಟ್ಟುವ ಅಗಾಧ ಶಕ್ತಿಯಿದೆ. ಅವರನ್ನು ತಪ್ಪು ಹಾದಿಯಿಂದ ತಡೆದು ಸಾಹಸ, ಕ್ರೀಡೆ ಮತ್ತು ತಂತ್ರಜ್ಞಾನದತ್ತ ಕೊಂಡೊಯ್ಯುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಈ ಬೃಹತ್ ಆಂದೋಲನವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗೃಹ ಸಚಿವಾಲಯದ ಸಹಯೋಗದೊಂದಿಗೆ ದೇಶಾದ್ಯಂತ ಜಾರಿಗೆ ತರುತ್ತಿದೆ. 2047 ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಯುವಜನತೆಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಸರ್ಕಾರ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಿವೃತ್ತಿ ಘೋಷಿಸಿರುವ ರಹಾನೆಗೆ ಸಿಗಲಿರುವ ಪಿಂಚಣಿ ಮೊತ್ತ ಎಷ್ಟು ಗೊತ್ತಾ? – Kannada News | Ajinkya Rahane to Receive 70,000 rs Monthly Pension from BCCI

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗಷ್ಟೇ ವಿದಾಯ ಹೇಳಿದ ಭಾರತದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರತಿ ತಿಂಗಳು ₹70,000 ನಿಶ್ಚಿತ ಪಿಂಚಣಿ ನೀಡಲಿದೆ. ಬಿಸಿಸಿಐನ ‘ಆಟಗಾರರ ಪಿಂಚಣಿ ಯೋಜನೆ’ಯ  ಅಡಿಯಲ್ಲಿ ರಹಾನೆ ಈ ಗರಿಷ್ಠ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ರಹಾನೆಗೆ ಗರಿಷ್ಠ ಮೊತ್ತ ಸಿಗುತ್ತಿರುವುದು ಏಕೆ?

ಬಿಸಿಸಿಐ ನಿಯಮಗಳ ಪ್ರಕಾರ, ದೇಶದ ಪರವಾಗಿ 25 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಮಾಜಿ ಆಟಗಾರರನ್ನು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಪರಿಗಣಿಸಲಾಗುತ್ತದೆ.

  • ಪಂದ್ಯಗಳ ವಿವರ: ರಹಾನೆ ಭಾರತದ ಪರ 12 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 85 ಟೆಸ್ಟ್, 90 ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ.
  • ದಿಗ್ಗಜರ ಸಾಲು: ಅಜಿಂಕ್ಯ ರಹಾನೆ 25 ಟೆಸ್ಟ್‌ಗಳ ಮೈಲಿಗಲ್ಲನ್ನು ಸುಲಭವಾಗಿ ದಾಟಿರುವುದರಿಂದ, ಸಚಿನ್ ತೆಂಡೂಲ್ಕರ್ ಮತ್ತು ಎಂ.ಎಸ್. ಧೋನಿ ಅವರಂತಹ ದಿಗ್ಗಜರಂತೆಯೇ ಪ್ರತಿ ತಿಂಗಳು ₹70,000 ಜೀವಿತಾವಧಿ ಪಿಂಚಣಿ ಪಡೆಯಲಿದ್ದಾರೆ.
  • ಇತರರಿಗೆ ಕಡಿಮೆ ಮೊತ್ತ: ಟೀಮ್ ಇಂಡಿಯಾ ಪರ 25ಕ್ಕಿಂತ ಕಡಿಮೆ ಟೆಸ್ಟ್ ಆಡಿದವರಿಗೆ ಮಾಸಿಕ ₹60,000 ಸಿಗುತ್ತದೆ.

ಬಿಸಿಸಿಐ ನಿಯಮಗಳು ಮತ್ತು ಷರತ್ತುಗಳು:

ಅಜಿಂಕ್ಯ ರಹಾನೆ ಅವರ ಪಿಂಚಣಿಯು ಬಿಸಿಸಿಐನ ಅಧಿಕೃತ ತರಬೇತುದಾರ ಅಥವಾ ಆಡಳಿತಾತ್ಮಕ ಹುದ್ದೆಯನ್ನು ವಹಿಸಿಕೊಳ್ಳದ ಹೊರತು ಮುಂದುವರಿಯುತ್ತದೆ ಎಂದು ಎನ್​ಡಿಟಿವಿ ಸ್ಪೋರ್ಟ್ಸ್​ ವರದಿ ಮಾಡಿದೆ.

ಅಂದರೆ ಭಾರತೀಯ ಮಂಡಳಿಯಲ್ಲಿ ಯಾವುದೇ ಸಂಬಳ ಬರುವ ಹುದ್ದೆ ವಹಿಸಿಕೊಂಡರೆ ಅಥವಾ ಟೀಮ್ ಇಂಡಿಯಾದ ಕೋಚ್ ಅಥವಾ ಇನ್ನಿತರೆ ಹುದ್ದೆಗಳಲ್ಲಿ ಕಾಣಿಸಿಕೊಂಡರೆ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ಹುದ್ದೆಯಿಂದ ಕೆಳಗಿಳಿದ ನಂತರ ಮತ್ತೆ ಆರಂಭವಾಗುತ್ತದೆ.

ಏಕಕಾಲದ ಪಿಂಚಣಿ ಇಲ್ಲ!

ಅಜಿಂಕ್ಯ ರಹಾನೆ ಮುಂಬೈ ದೇಶಿ ತಂಡದ ಪರ ಆಡಿದ್ದರೂ, ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಮತ್ತು ಬಿಸಿಸಿಐ ಎರಡರಿಂದಲೂ ಏಕಕಾಲದಲ್ಲಿ ಪಿಂಚಣಿ ಪಡೆಯಲು ಬರುವುದಿಲ್ಲ. ನಿಯಮದ ಪ್ರಕಾರ ಆಟಗಾರರು ಹೆಚ್ಚಿನ ಮೊತ್ತವಿರುವ ರಾಷ್ಟ್ರೀಯ ಪಿಂಚಣಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಧೋನಿಯ ವಿಶ್ವ ದಾಖಲೆ ಮುರಿದ ಇಮ್ರಾನ್ ತಾಹಿರ್

₹10 ಲಕ್ಷದವರೆಗೆ ಉಚಿತ ವೈದ್ಯಕೀಯ ವಿಮೆ:

ಪಿಂಚಣಿ ಮಾತ್ರವಲ್ಲದೆ, ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ICA) ಜಂಟಿ ವೈದ್ಯಕೀಯ ವಿಮಾ ಯೋಜನೆಯಡಿ ಅಜಿಂಕ್ಯ ರಹಾನೆ, ಅವರ ಸಂಗಾತಿ ಮತ್ತು 25 ವರ್ಷದೊಳಗಿನ ಅವಿವಾಹಿತ ಮಕ್ಕಳಿಗೆ ₹10 ಲಕ್ಷದವರೆಗೆ ವೈದ್ಯಕೀಯ ವಿಮಾ ಸೌಲಭ್ಯ ಸಿಗಲಿದೆ. ತುರ್ತು ಅಥವಾ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಬಿಸಿಸಿಐನ ಕಲ್ಯಾಣ ನಿಧಿಯಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನೂ ಕೋರಬಹುದಾಗಿದೆ.

Source link

ಭಾರತ-ಟಿಬೆಟ್ ಪುರಾತನ ರೇಷ್ಮೆ ಮಾರ್ಗಕ್ಕೆ ಮರುಜೀವ; ಇಲ್ಲಿ ವ್ಯಾಪಾರಕ್ಕೆ ಹಣ ಅಲ್ಲ, ಬಾರ್ಟರ್ ಸಿಸ್ಟಂ – Kannada News | India China historical silk route Shipki La trade corridor restart after 6 years

2025ರಲ್ಲಿ ಶಿಪ್ಕಿ ಲಾ ಪಾಸ್ ಬಳಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಮತ್ತಿತರರುImage Credit source: PTI

ನವದೆಹಲಿ, ಆಗಸ್ಟ್ 2: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿರುವ ಐತಿಹಾಸಿಕ ಶಿಪ್ಕಿ ಲಾ (Shipki La) ಕಣಿವೆ ಮೂಲಕ ಭಾರತ ಮತ್ತು ಚೀನಾ (ಟಿಬೆಟ್) ನಡುವಿನ ಗಡಿ ವ್ಯಾಪಾರವು 6 ವರ್ಷಗಳ ವಿರಾಮದ ನಂತರ ಪುನರಾರಂಭಗೊಂಡಿದೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಗಡಿಭಾಗದಲ್ಲಿ ಉಂಟಾದ ಮಿಲಿಟರಿ ಉದ್ವಿಗ್ನತೆಯಿಂದಾಗಿ ಈ ವಿಶಿಷ್ಟ ವ್ಯಾಪಾರ ಮಾರ್ಗವನ್ನು ಮುಚ್ಚಲಾಗಿತ್ತು. ಈಗ ಭಾರತ-ಚೀನಾ ನಡುವಿನ ಗಡಿ ವ್ಯಾಪಾರ ಪುನರಾರಂಭಗೊಂಡಿರುವುದು ಪ್ರಾಚೀನ ‘ರೇಷ್ಮೆ ಮಾರ್ಗ’ಕ್ಕೆ (Silk Route) ಮರುಜೀವ ನೀಡಿದೆ.

ಹಿಮಾಚಲ ಪ್ರದೇಶದ ಕಂದಾಯ ಮತ್ತು ತೋಟಗಾರಿಕೆ ಸಚಿವ ಜಗತ್ ಸಿಂಗ್ ನೇಗಿ ಅವರು ಸಾಂಪ್ರದಾಯಿಕ ಖತಾಕ್ (ಗೌರವದ ಶಾಲು) ನೀಡಿ 16 ನೋಂದಾಯಿತ ಭಾರತೀಯ ವ್ಯಾಪಾರಿಗಳ ಮೊದಲ ತಂಡವನ್ನು ಟಿಬೆಟ್‌ನ ಶಿಪ್ಕಿ ಗ್ರಾಮದ ಕಡೆಗೆ ಬೀಳ್ಕೊಟ್ಟರು.

ಛುಪ್ಪನ್ ಟ್ರೇಡ್ ಮಾರ್ಟ್ ಉದ್ಘಾಟನೆ: ಗಡಿ ವ್ಯಾಪಾರ ನಿರ್ವಹಣೆ, ಕಸ್ಟಮ್ಸ್ ಪ್ರಕ್ರಿಯೆ ಮತ್ತು ವ್ಯಾಪಾರಿಗಳ ನೋಂದಣಿಗೆ ಅನುಕೂಲವಾಗುವಂತೆ ಕಿನ್ನೌರ್‌ನ ನಾಮ್ಗ್ಯಾ ಪಂಚಾಯತ್ ವ್ಯಾಪ್ತಿಯಲ್ಲಿ ₹1.70 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಛುಪ್ಪನ್ ಟ್ರೇಡ್ ಮಾರ್ಟ್ (Chhuppan Trade Mart) ಅನ್ನು ಸಚಿವರು ಉದ್ಘಾಟಿಸಿದರು.

ಇಲ್ಲಿ ಹಣ ಇಲ್ಲ, ಬಾರ್ಟರ್ ಸಿಸ್ಟಂ

ಶಿಪ್ಕಿ ಲಾ ಮಾರ್ಗದ ವ್ಯಾಪಾರವು ಹಣದ ವಹಿವಾಟಿನ ಬದಲು ಸಾಂಪ್ರದಾಯಿಕ ‘ವಸ್ತು ವಿನಿಮಯ’ ಅಥವಾ ಬಾರ್ಟರ್ ಸಿಸ್ಟಂ (Barter System) ಮೂಲಕ ನಡೆಯುತ್ತದೆ. ಇಲ್ಲಿ ಬಾರ್ಟರ್ ಸಿಸ್ಟಂ ಹಲವು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ವ್ಯಾಪಾರ ಪದ್ಧತಿಯಾಗಿದೆ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಭಾರತದಲ್ಲಿರುವ ವ್ಯಾಪಾರಿಗಳು ತಮ್ಮ ಸರಕುಗಳನ್ನು ಮೊದಲು ರಸ್ತೆ ಮೂಲಕ ಗಡಿಭಾಗಕ್ಕೆ ಸಾಗಿಸುತ್ತಾರೆ. ಗುಡ್ಡಗಾಡು ಜಾಗವಾದ್ದರಿಂದ ಸರಕುಗಳನ್ನು ಅಲ್ಲಿಂದ ಪ್ರಾಣಿಗಳ ಮೇಲೆ ಹೊರಿಸಿ ನಿಗದಿತ ವಿನಿಮಯ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಟಿಬೆಟ್​ನಿಂದ ಎರಡು ಕಿಮೀ ಒಳಗೆ ಈ ಕೇಂದ್ರ ಇರುತ್ತದೆ.

ಈ ಸೀಸನ್‌ನಲ್ಲಿ ಗಡಿ ವ್ಯಾಪಾರಕ್ಕಾಗಿ 88 ಅರ್ಜಿದಾರರ ಪೈಕಿ 53 ವ್ಯಾಪಾರಿಗಳಿಗೆ ಗೃಹ ಇಲಾಖೆಯಿಂದ ಭದ್ರತಾ ತಪಾಸಣೆ ನಡೆಸಿ ಅನುಮತಿ ನೀಡಲಾಗಿದೆ.

72 ಗಂಟೆಗಳ ಸಮಯ ಮಿತಿ: ನಿಯಮಾವಳಿಗಳ ಪ್ರಕಾರ, ಟಿಬೆಟ್ ಪ್ರದೇಶಕ್ಕೆ ಪ್ರವೇಶಿಸುವ ಭಾರತೀಯ ವ್ಯಾಪಾರಿಗಳು ಗರಿಷ್ಠ 72 ಗಂಟೆಗಳ ಒಳಗಾಗಿ ಭಾರತಕ್ಕೆ ಹಿಂತಿರುಗಬೇಕಾಗುತ್ತದೆ.

ಪ್ರಮುಖ ರಫ್ತು ಮತ್ತು ಆಮದು ವಸ್ತುಗಳು

ಕೇಂದ್ರ ವಾಣಿಜ್ಯ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಾರತ ಮತ್ತು ಟಿಬೆಟ್ (ಚೀನಾ) ನಡುವೆ ವಿನಿಮಯ ಮಾಡಿಕೊಳ್ಳಬಹುದಾದ ಪ್ರಮುಖ ವಸ್ತುಗಳು ಈ ಕೆಳಕಂಡಂತಿವೆ:

ಭಾರತದಿಂದ ರಫ್ತಾಗುವ ವಸ್ತುಗಳು

  • ಡ್ರೈಫ್ರೂಟ್ಸ್ ಮತ್ತು ಮಸಾಲೆ ಪದಾರ್ಥಗಳು
  • ಚಹಾ, ಕಾಫಿ ಮತ್ತು ಧಾನ್ಯಗಳು
  • ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳು
  • ತಾಮ್ರದ ಪಾತ್ರೆಗಳು
  • ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಸಂಸ್ಕರಿಸಿದ ಆಹಾರ

ಟಿಬೆಟ್​ನಿಂದ ಪೂರೈಕೆಯಾಗುವ ಸರಕುಗಳು

  • ಪಶ್ಮೀನಾ ಉಣ್ಣೆ
  • ಕಚ್ಚಾ ಉಣ್ಣೆ ಮತ್ತು ಯಾಕ್ (ಹಿಮಾಲಯನ್ ಹಸು) ಕೂದಲು
  • ಜಮಖಾನ (Carpets) ಮತ್ತು ಕುರಿ ಚರ್ಮ
  • ಚೈನಾ ಕ್ಲೇ (China Clay)
  • ಸಾಂಪ್ರದಾಯಿಕ ಚೈನೀಸ್ ಗಿಡಮೂಲಿಕೆ ಉತ್ಪನ್ನಗಳು

ಜೀವಂತ ಪ್ರಾಣಿಗಳ (ಕುರಿ, ಮೇಕೆ, ಕುದುರೆ) ವ್ಯಾಪಾರಕ್ಕೆ ಕ್ವಾರಂಟೈನ್ ಕೇಂದ್ರದ ಕೊರತೆಯಿಂದಾಗಿ ಈ ಬಾರಿ ಅನುಮತಿ ನೀಡಿಲ್ಲ.

ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ

ಪ್ರಾದೇಶಿಕ ಆರ್ಥಿಕತೆಗೆ ನೆರವು

ನವೆಂಬರ್ 30ರವರೆಗೆ ನಡೆಯಲಿರುವ ಈ ಗಡಿ ವ್ಯಾಪಾರ ಕಾರಿಡಾರ್‌ ಪುನರಾರಂಭದಿಂದ ಹಿಮಾಚಲ ಪ್ರದೇಶದ ಗಡಿ ಭಾಗದ ನಿವಾಸಿಗಳಿಗೆ, ಸಾರಿಗೆ ಕ್ಷೇತ್ರಕ್ಕೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು – Kannada News | Nasha Mukt Bharat: PM Modi Addresses Students Virtually; Governor Gehlot Inaugurates Campaign in Bengaluru

ಬೆಂಗಳೂರು, ಆಗಸ್ಟ್​​ 02: ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಶಾಮುಕ್ತ ಭಾರತ ಕಾರ್ಯಕ್ರಮ ನಡೆದಿದ್ದು, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ವರ್ಚುವಲ್​ ಮೂಲಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಡ್ರಗ್ಸ್ ಸೇರಿ ಅನೇಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳನ್ನ ಕುರಿತು ಮಾತನಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Kabini Dam: ಕಬಿನಿ ಜಲಾಶಯ ಸಂಪೂರ್ಣ ಭರ್ತಿ; ಡ್ಯಾಂನ 4 ಗೇಟ್​ಗಳಿಂದ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ! – Kannada News | Kabini Dam Fully Filled: Four Gates Opened Releasing Massive Water Amidst Cauvery Water Developments

ಮೈಸೂರು, ಆಗಸ್ಟ್ 02: ಕಬಿನಿ ಜಲಾಶಯಕ್ಕೆ ಭಾರಿ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 4 ಗೇಟ್‌ಗಳನ್ನು ತೆರೆದು ನದಿಗೆ 25,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಕೇರಳದ ವಯನಾಡ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯೇ ಈ ಒಳಹರಿವಿಗೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ಪ್ರಸ್ತುತ 82 ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ 84 ಅಡಿ ಸಾಮರ್ಥ್ಯ ಹೊಂದಿದೆ.

ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ ಕಬಿನಿ ಈ ವರ್ಷ ಮಳೆಯ ಕೊರತೆಯಿಂದ ಖಾಲಿಯಾಗಿ ಆತಂಕ ಮೂಡಿಸಿತ್ತು. ಇದೀಗ ಜಲಾಶಯ ಭರ್ತಿಯಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎಂಬ ಆದೇಶದ ನಡುವೆಯೇ ನದಿ ಪಾತ್ರಕ್ಕೆ ನೀರನ್ನು ಹರಿಸಲಾಗುತ್ತಿದೆ. ಈ ನೀರು ಮೈಸೂರು ಜಿಲ್ಲೆಯ ತಿರುಮಕೂಡಲು ಸಂಗಮದ ಮೂಲಕ ತಮಿಳುನಾಡನ್ನು ಸೇರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ‘ಬ್ರಹ್ಮ ಕಮಲ’ ಶೀಘ್ರವೇ ಬಿಡುಗಡೆ; ಬಂತು ಟ್ರೇಲರ್ – Kannada News | Kannada Movie Brahma Kamala Trailer released ft Advithi Shetty Siddu Poornachandra

ಅದ್ವಿತಿ ಶೆಟ್ಟಿ (Advithi Shetty) ಅವರು ಪ್ರಮುಖ ಪಾತ್ರ ಮಾಡಿರುವ ‘ಬ್ರಹ್ಮ ಕಮಲ’ (Brahma Kamala) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಸಿದ್ದು ಪೂರ್ಣಚಂದ್ರ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ‘ದಾರಿ ಯಾವುದಯ್ಯ ವೈಕುಂಠಕೆ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಅವರು, ತಾವು ಆಯ್ಕೆ ಮಾಡಿಕೊಳ್ಳುವ ಕಥೆಗಳು ಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸಿದ್ದರು. ಈಗ ಸಿದ್ದು ಪೂರ್ಣಚಂದ್ರ ಅವರು ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ.

ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ತಳಮಳಕ್ಕೆ ಕಣ್ಣಾದ ಕಥೆ ‘ಬ್ರಹ್ಮ ಕಮಲ’ ಸಿನಿಮಾದಲ್ಲಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಸಿನಿಮಾದ ಕಥೆ ಏನು ಎಂಬುದನ್ನು ಟ್ರೇಲರ್ ಮೂಲಕ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಕೌಟುಂಬಿಕ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಸುಳಿವು ಸಿಕ್ಕಿದೆ.

ಚಿತ್ರರಂಗದಲ್ಲಿ ಸಾಮಾನ್ಯವಾಗಿ ಜನಪ್ರಿಯವಾದ ಕಮರ್ಷಿಯಲ್ ಕಥಾಹಂದರದ ಸಿನಿಮಾಗಳನ್ನೇ ಬಹುತೇಕ ನಿರ್ಮಾಪಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳ ನಡುವೆ ಭಿನ್ನ ಕಥಾಹಂದರ ಸಿನಿಮಾಗಳು ಕೂಡ ಚಿತ್ರರಂಗಕ್ಕೆ ಅವಶ್ಯಕ. ಆ ನಿಟ್ಟಿನಲ್ಲಿ ‘ಬ್ರಹ್ಮ ಕಮಲ’ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿದೆ. ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಮಹಿಳೆಯ ನೋವಿನ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.

‘ಬ್ರಹ್ಮ ಕಮಲ’ ಸಿನಿಮಾ ಟ್ರೇಲರ್:

‘ಬ್ರಹ್ಮ ಕಮಲ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಿದೆ. ಈಗಾಗಲೇ ಬೆಂಗಳೂರು ಅಂತಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಸಿನಿಮಾಗೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಮೂರು ಪ್ರದರ್ಶನಗಳನ್ನು ಕಂಡಿತ್ತು ಎಂದು ಚಿತ್ರತಂಡ ಹೇಳಿದೆ. ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಬಳಿಕ ‘ಅಣ್ಣ ಫ್ರಮ್‌ ಮೆಕ್ಸಿಕೋ’ ಸಿನಿಮಾ ರಿಲೀಸ್​​ಗೆ ರೆಡಿ ಆದ ಡಾಲಿ ಧನಂಜಯ್

ನಿರ್ದೇಶನದ ಜೊತೆಗೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಪೂರ್ಣ ಚಂದ್ರ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣಗೊಂಡಿದೆ. ಅದ್ವಿತಿ ಶೆಟ್ಟಿ, ಋತು ಚೈತ್ರಾ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾವುತ್, ಪ್ರಮೀಳಾ ಸುಬ್ರಮಣ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕೇಂದ್ರ ಸೂರ್ಯ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ, ದೀಪು ಅವರ ಸಂಕಲನ ಈ ಸಿನಿಮಾಗಿದೆ. ನಾಗರತ್ನ ಕೆ.ಹೆಚ್. ಅವರು ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಂತರ್ ಮಂತರ್​ನಲ್ಲಿ ಪ್ರತಿಭಟನೆ ಅಡ್ಡಿಪಡಿಸಲು ಜೆಇಎಂ ಶಂಕಿತ ಉಗ್ರನ ಸಂಚು: ಪೊಲೀಸರ ಸಮವಸ್ತ್ರ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ – Kannada News | JeM Terror Plot to Disrupt Jantar Mantar Protest: Police Uniform Used for Violence

ಕೋಲ್ಕತ್ತಾ, ಆಗಸ್ಟ್ 02: ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್(NEET)’ ಪರೀಕ್ಷಾ ಅಕ್ರಮ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ‘ಜೈಶ್-ಎ-ಮೊಹಮ್ಮದ್’ (JeM) ಸಂಘಟನೆಯ ಶಂಕಿತ ಭಯೋತ್ಪಾದಕ ಮೊಹಮ್ಮದ್ ಹಮೀಮ್ ಮೊಂಡಲ್ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಲ್ಲಿ ಮೊಂಡಲ್‌ನನ್ನು ಬಂಧಿಸಿದ್ದು, ತನಿಖೆಯ ವೇಳೆ ಈ ಸ್ಫೋಟಕ ಸತ್ಯಗಳು ಹೊರಬಂದಿವೆ.

ಪ್ರತಿಭಟನೆಯ ವೇಳೆ ಸಾರ್ವಜನಿಕರ ಹಾಗೂ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ಪ್ರತಿಭಟನಾನಿರತರ ಮಧ್ಯೆ ತೂರಿಬಂದು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸಂಚು ರೂಪಿಸಲಾಗಿತ್ತು. ಜಂತರ್ ಮಂತರ್ ಪ್ರತಿಭಟನೆಯನ್ನು ಅಡ್ಡಿಪಡಿಸುವುದಲ್ಲದೆ, ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯೋಜಿಸಲಾಗಿತ್ತು ಎಂದು ಎಸ್‌ಟಿಎಫ್ ಐಜಿಪಿ ಗೌರವ್ ಶರ್ಮಾ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಮೊಂಡಲ್ ಯೋಜಿಸಿದ್ದ. ಜಾರ್ಖಂಡ್‌ನ ಸಾಹಿಬ್‌ಗಂಜ್‌ನಿಂದ ಬಂಧಿತಳಾದ ಅರ್ಪಿತಾ ಸರ್ಕಾರ್ ಜೊತೆ ಸೇರಿ ಹೌರಾದ ಹಿರಿಯ ರಾಜಕಾರಣಿಯೊಬ್ಬರ ಮಗನನ್ನು ‘ಹನಿಟ್ರ್ಯಾಪ್’ ಮಾಡಿ ಅಪಹರಿಸಲು ಹಾಗೂ ಭಾರಿ ಹಣ ಸುಲಿಗೆ ಮಾಡಲು ಯೋಜಿಸಲಾಗಿತ್ತು.

ಮತ್ತಷ್ಟು ಓದಿ: ನೋಂದಣಿ ಆಯ್ತು ‘ದಿ ಆಕ್ಸಿಡೆಂಟಲ್ ಕಾಕ್ರೋಚ್ ಪಾರ್ಟಿ’ ಸಿನಿಮಾ ಟೈಟಲ್

ಮೊಂಡಲ್ ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ತನ್ನ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಿ, ನಂತರ ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಎನ್‌ಕ್ರಿಪ್ಟೆಡ್ ಆಪ್‌ಗಳ ಮೂಲಕ ಸಂಭಾಷಣೆ ಮುಂದುವರೆಸಿದ್ದ. ಈತನ ಮೊಬೈಲ್ ಚಾಟ್ ಇತಿಹಾಸವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ (ISI) ಮತ್ತು ಶಹಜಾದ್ ಭಟ್ಟಿ ಗ್ಯಾಂಗ್‌ನ ರಾಣಾ, ಉಜೈರ್, ಅಬಿದ್ ಜಟ್ 333 ಮತ್ತು ಹಮದ್ ಎಂಬ ರಹಸ್ಯ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿರುವುದು ದೃಢಪಟ್ಟಿದೆ.

ಜುಲೈ 25ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆಯು ದಿಢೀರ್ ಹಿಂಸಾರೂಪಕ್ಕೆ ತಿರುಗಿ, ದೆಹಲಿ ಪೊಲೀಸ್ ಅಧಿಕಾರಿಗಳ ಮೇಲೆ ರೊಚ್ಚಿಗೆದ್ದ ಗುಂಪು ದಾಳಿ ನಡೆಸಿತ್ತು. ಇದೀಗ ಈ ಉಗ್ರ ಜಾಲದ ಪ್ಲಾನ್ ಬೆಳಕಿಗೆ ಬಂದಿರುವುದು, ಅಂದಿನ ಹಿಂಸಾಚಾರದಲ್ಲಿ ಸಮಾಜಘಾತಕ ಶಕ್ತಿಗಳು ಭಾಗಿಯಾಗಿದ್ದವು ಎಂಬ ಶಂಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಈ ಭಯೋತ್ಪಾದನಾ ಜಾಲದಇತರ ಶಂಕಿತ ಸದಸ್ಯರನ್ನು ಗುರುತಿಸಲು ಹಾಗೂ ಪೂರ್ವ ಭಾರತದಲ್ಲಿ ಇವರ ರಹಸ್ಯ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಎಸ್‌ಟಿಎಫ್ ಪಡೆಗಳು ತನಿಖೆ ತೀವ್ರಗೊಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version