‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನ ಬರಲಿದೆ ರಾಮಾಯಣ್ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ – Kannada News | Documentary on Making of Ramanand Sagar Ramayan without VFX and Green Screen

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ (Ramayana) ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ಅವರು ಶ್ರೀರಾಮನಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಬೃಹತ್ ಸೆಟ್‌ಗಳು ಹಾಗೂ 8 ಬಾರಿ ಆಸ್ಕರ್ ಪ್ರಶಸ್ತಿ ಗೆದ್ದ ‘DNEG’ ಸಂಸ್ಥೆ ನೀಡುತ್ತಿರುವ ಗ್ರಾಫಿಕ್ಸ್ ಬಗ್ಗೆ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, ಸುಮಾರು 40 ವರ್ಷಗಳ ಹಿಂದೆ ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ ರಾಮಾಯಣ ಮಹಾಕಾವ್ಯವನ್ನು ಪ್ರೇಕ್ಷಕರ ಮುಂದೆ ತಂದು ಇತಿಹಾಸ ನಿರ್ಮಿಸಿದ ರಾಮಾನಂದ್ ಸಾಗರ್ (Ramanand Sagar) ಅವರ ಸಾಹಸಗಾಥೆಯನ್ನು ನೆನಪಿಸುವ ಹೊಸ ಸಾಕ್ಷ್ಯಚಿತ್ರವೊಂದು ಸಿದ್ಧವಾಗುತ್ತಿದೆ.

1987-88ರಲ್ಲಿ ‘ದೂರದರ್ಶನ’ ವಾಹಿನಿಯಲ್ಲಿ ಪ್ರಸಾರವಾದ ರಾಮಾನಂದ್ ಸಾಗರ್ ಅವರ ‘ರಾಮಾಯಣ್’ ಧಾರಾವಾಹಿ ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ಶೋ ಆಗಿದೆ. 2020ರ ಲಾಕ್‌ಡೌನ್ ಸಮಯದಲ್ಲಿ ಮರುಪ್ರಸಾರವಾದಾಗಲೂ ಇದು ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆದಿತ್ತು. ಇದೀಗ ರಾಮಾನಂದ್ ಸಾಗರ್ ಅವರ ಮೊಮ್ಮಗ ಶಿವ್ ಸಾಗರ್ ಅವರು, ಈ ಐತಿಹಾಸಿಕ ಧಾರಾವಾಹಿಯ ತೆರೆಹಿಂದಿನ ಕಥೆಯನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.

ವಿಎಫ್‌ಎಕ್ಸ್ ಇಲ್ಲದೆ ಮೂಡಿಬಂದಿತ್ತು ಧಾರಾವಾಹಿ:

ಈ ಕುರಿತು ಮಾತನಾಡಿದ ಶಿವ್ ಸಾಗರ್, ‘36 ವರ್ಷಗಳ ನಂತರವೂ ನನ್ನ ಅಜ್ಜನ ರಾಮಾಯಣದ ಬಗ್ಗೆ ಜನರಲ್ಲಿ ಅಪಾರ ಕುತೂಹಲವಿದೆ. ಆ ಕಾಲದಲ್ಲಿ ಯಾವುದೇ ಕಂಪ್ಯೂಟರ್ ವಿಎಫ್‌ಎಕ್ಸ್, ಬ್ಲೂ ಅಥವಾ ಗ್ರೀನ್ ಸ್ಕ್ರೀನ್ ತಂತ್ರಜ್ಞಾನ ಇರಲಿಲ್ಲ. ಕ್ರೋಮಾ ತಂತ್ರಜ್ಞಾನ ತೀರಾ ಹೊಸದಾಗಿತ್ತು. ಲೀನಿಯರ್ ಎಡಿಟಿಂಗ್ ಮೆಷಿನ್‌ಗಳು ಹಾಗೂ ಹಳೆಯ ಯು-ಮ್ಯಾಟಿಕ್ ವೀಡಿಯೊ ಕ್ಯಾಮೆರಾಗಳನ್ನು ಬಳಸಿ ಇಡೀ ಧಾರಾವಾಹಿಯನ್ನು ಚಿತ್ರೀಕರಿಸಲಾಗಿತ್ತು. ಈ ಸಾಹಸವನ್ನು ಇಂದಿನ ಪೀಳಿಗೆಗೆ ತಿಳಿಸುವುದೇ ನಮ್ಮ ಉದ್ದೇಶ’ ಎಂದಿದ್ದಾರೆ.

ತೆರೆಮರೆಯ ಕಲಾವಿದರು ಮತ್ತು ತಂತ್ರಜ್ಞರ ಕಥೆ:

ಅರುಣ್ ಗೋವಿಲ್ (ಶ್ರೀರಾಮ), ದೀಪಿಕಾ ಚಿಖ್ಲಿಯಾ (ಸೀತೆ), ಸುನಿಲ್ ಲಾಹ್ರಿ (ಲಕ್ಷ್ಮಣ), ಅರವಿಂದ್ ತ್ರಿವೇದಿ (ರಾವಣ) ಹಾಗೂ ದಾರಾಸಿಂಗ್ (ಹನುಮಂತ) ಅಭಿನಯಿಸಿದ್ದ ‘ರಾಮಾಯಣ್’ ಧಾರಾವಾಹಿ ಪ್ರಸಾರವಾಗುವ ಸಮಯದಲ್ಲಿ ಇಡೀ ದೇಶದ ರಸ್ತೆಗಳು ಖಾಲಿಯಾಗುತ್ತಿದ್ದವು. ಅಷ್ಟರಮಟ್ಟಿಗೆ ಮೋಡಿ ಮಾಡಿದ್ದ ಆ ಧಾರಾವಾಹಿಯ ಹಿಂದಿರುವ ರೋಚಕ ವಿಷಯಗಳು ಈ ಸಾಕ್ಷ್ಯಚಿತ್ರದಲ್ಲಿ ಇರಲಿದೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್: ನಟಿ ಲಾರಾ ದತ್ತಾ ಸ್ಟೈಲಿಶ್ ಲುಕ್‌ ನೋಡಿ ಟ್ರೋಲ್ ಮಾಡಿದ ಜನ

ಈ ಸಾಕ್ಷ್ಯಚಿತ್ರದಲ್ಲಿ ಧಾರಾವಾಹಿಯ ಪ್ರಮುಖ ನಟರು, ತಂತ್ರಜ್ಞರು ಹಾಗೂ ಅವರ ಕುಟುಂಬದ ಸದಸ್ಯರ ಸಂದರ್ಶನಗಳು ಇರಲಿವೆ. ‘ಅನೇಕ ಹಿರಿಯ ನಟರು ಇಂದು ನಮ್ಮೊಂದಿಗಿಲ್ಲ. ರಾವಣನ ಪಾತ್ರ ಮಾಡಿದ್ದ ಅರವಿಂದ್ ತ್ರಿವೇದಿ ಅವರ ಮಗಳು ಹಾಗೂ ದಾರಾಸಿಂಗ್ ಅವರ ಪುತ್ರ ವಿಂದು ದಾರಾಸಿಂಗ್ ಈ ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಿದ್ದಾರೆ. ಈ ಅಪರೂಪದ ನೆನಪುಗಳನ್ನು ಭವಿಷ್ಯದ ಪೀಳಿಗೆಗಾಗಿ ಕಾಯ್ದಿರಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಶಿವ್ ಸಾಗರ್ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ! – Kannada News | Hardik Pandya Flaunts Bold New Avatar

ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇಂದು (ಭಾನುವಾರ, ಆಗಸ್ಟ್ 2, 2026) ಆಂಧ್ರಪ್ರದೇಶದ ಪವಿತ್ರ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಈ ಹಿಂದೆ ಅತ್ಯಂತ ವಿಶಿಷ್ಟವಾದ  ‘ಪ್ಲಾಟಿನಂ ಬ್ಲಾಂಡ್ ಬಝ್ ಕಟ್’ ಹೇರ್‌ಸ್ಟೈಲ್​ನೊಂದಿಗೆ ಮಿಂಚಿದ್ದ ಹಾರ್ದಿಕ್ ಪಾಂಡ್ಯ, ಈ ಬಾರಿ ಕೇಶ ಮುಂಡನದೊಂದಿಗೆ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಬೋಳು ತಲೆ ಲುಕ್​ನಲ್ಲಿರುವ ಪಾಂಡ್ಯ ಅವರ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಜಾನೆಯ ವಿಶೇಷ ದರ್ಶನ:

ಹಾರ್ದಿಕ್ ಪಾಂಡ್ಯ ಅವರು ಮುಂಜಾನೆ ನಡೆದ ಪವಿತ್ರ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು, ಶ್ರೀವಾರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಿರುಮಲ ಬೆಟ್ಟಕ್ಕೆ ಆಗಮಿಸಿದ ಕ್ರಿಕೆಟಿಗನನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಮತ್ತು ಅರ್ಚಕರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡು ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ಈ ಆಧ್ಯಾತ್ಮಿಕ ಭೇಟಿಯ ವೇಳೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಅವರ ಆಪ್ತ ಗೆಳತಿ ಮಹಿಕಾ ಶರ್ಮಾ ಕೂಡ ಜೊತೆಯಲ್ಲಿದ್ದರು.

ದರ್ಶನದ ನಂತರ ದೇವಸ್ಥಾನದ ರಂಗನಾಯಕುಲ ಮಂಟಪದಲ್ಲಿ ಅರ್ಚಕರು ಇವರಿಗೆ ವೇದ ಆಶೀರ್ವಚನ ನೀಡಿ, ತೀರ್ಥ ಪ್ರಸಾದಗಳನ್ನು ವಿತರಿಸಿದರು.

ಪಾಂಡ್ಯ ಕಂಬ್ಯಾಕ್ ಯಾವಾಗ?

ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲವು ಸರಣಿಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ಮಂಡಳಿ ಖಚಿತಪಡಿಸಿದೆ. ಹೀಗಾಗಿ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಪಾಂಡ್ಯ ಆಯ್ಕೆಗೆ ಲಭ್ಯರಾಗಲಿದ್ದಾರೆ.

ಪಾಂಡ್ಯ ಮುಂದಿದೆ ಮಹಾ ಗುರಿ:

ಹಾರ್ದಿಕ್ ಪಾಂಡ್ಯ ಈಗಾಗಲೇ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಇದಾಗ್ಯೂ ಏಕದಿನ ವಿಶ್ವಕಪ್ ಎಂಬುದು ಅವರ ಬಹುದೊಡ್ಡ ಕನಸು. ಈ ಕನಸನ್ನು ನನಸು ಮಾಡಿಕೊಳ್ಳಲು ಸಿದ್ಧತೆಗಳನ್ನು ಶುರು ಮಾಡಿದ್ದಾರೆ. ಅಂದರೆ 2027ರ ಏಕದಿನ ವಿಶ್ವಕಪ್ ಹಾಗೂ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ಅವರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಬರೆದ ಭಾರತೀಯ ಯೋಧ!

ಇದಕ್ಕಾಗಿ ಸಂಪೂರ್ಣ ಫಿಟ್​ನೆಸ್ ಸಾಧಿಸಲು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಅಭ್ಯಾಸದ ಭಾಗವಾಗಿ ಪ್ರತಿದಿನ  12 ಓವರ್‌ಗಳವರೆಗೆ ಬೌಲಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಏಕದಿನ ಪಂದ್ಯಗಳಲ್ಲಿ ಪೂರ್ಣ 10 ಓವರ್​ಗಳನ್ನು ಎಸೆಯಲು ಸಿದ್ಧತೆಗಳನ್ನು ಶುರು ಮಾಡಿದ್ದಾರೆ.

Source link

SIR: ಮತದಾರರ ಪಟ್ಟಿ ಪರಿಷ್ಕರಣೆ; 4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು! – Kannada News | Karnataka Govt to Distribute 4.8 Crore Free Caste Certificates for SIR Drive

4.8 ಕೋಟಿ ಉಚಿತ ಜಾತಿ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರ ಮುಂದು!

ಬೆಂಗಳೂರು, ಆಗಸ್ಟ್ 02: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಉಚಿತವಾಗಿ ಜಾತಿ ಪ್ರಮಾಣಪತ್ರ ವಿತರಣೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ, ರಾಜ್ಯಾದ್ಯಂತ ಸುಮಾರು 4.8 ಕೋಟಿಗೂ ಹೆಚ್ಚು ಉಚಿತ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.

ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ

ಈ ಬೃಹತ್ ಅಭಿಯಾನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್ ಸಿ.ಎನ್. ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯದ ಬಳಿ ಲಭ್ಯವಿರುವ 4.8 ಕೋಟಿಗೂ ಹೆಚ್ಚು ಜಾತಿ ಪ್ರಮಾಣಪತ್ರಗಳ ಪಿಡಿಎಫ್ (PDF) ಪ್ರತಿಗಳನ್ನು ಜಿಲ್ಲೆ, ತಾಲೂಕು ಮತ್ತು ಗ್ರಾಮವಾರು ವಿಂಗಡಿಸಿ ಒದಗಿಸಲಾಗುತ್ತದೆ.

ಜಿಲ್ಲಾಧಿಕಾರಿಗಳು ತಾಲೂಕು ಅಥವಾ ಹೋಬಳಿ ಮಟ್ಟದ ಅಧಿಕೃತ ಸಂಸ್ಥೆಗಳ ಮೂಲಕ ಇವುಗಳನ್ನು ಮುದ್ರಿಸಿ ವಿತರಿಸಲಿದ್ದಾರೆ. ಪ್ರತಿ ಸೆಟ್ ಮುದ್ರಣ ವೆಚ್ಚವನ್ನು ಗರಿಷ್ಠ 2.25 ರೂ.ಗೆ ನಿಗದಿಪಡಿಸಲಾಗಿದೆ. ಫಲಾನುಭವಿಗಳ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ (SMS) ಹಾಗೂ ವಾಟ್ಸಾಪ್ (WhatsApp) ಮೂಲಕವೂ ಪ್ರಮಾಣಪತ್ರ ಡೌನ್‌ಲೋಡ್ ಮಾಡುವ ಲಿಂಕ್ ಕಳುಹಿಸಲಾಗುವುದು.

ಪಾರದರ್ಶಕತೆಗೆ ಮೊಬೈಲ್ ಆ್ಯಪ್

ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಅನುಮೋದಿಸಿರುವ 11 ಪ್ರಮುಖ ದಾಖಲೆಗಳಲ್ಲಿ ಜಾತಿ ಪ್ರಮಾಣಪತ್ರ ಹಾಗೂ ಖಾಯಂ ನಿವಾಸಿ ಪ್ರಮಾಣಪತ್ರವೂ ಸೇರಿದೆ. ದಾಖಲೆಗಳ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಅಧಿಕಾರಿಗಳು ಮನೆ ಮನೆಗೆ ತೆರಳಿ ಪ್ರಮಾಣಪತ್ರ ತಲುಪಿಸಿದಾಗ ಫಲಾನುಭವಿಗಳ ಆಧಾರ್ ಅಥವಾ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಆಧಾರದ ಮೇಲೆ ತಲುಪಿಸಿರುವುದನ್ನು ಆ್ಯಪ್‌ನಲ್ಲಿ ದಾಖಲಿಸಬೇಕಾಗುತ್ತದೆ.

ಜಾತಿ ಪ್ರಮಾಣಪತ್ರದ ಜೊತೆಗೆ ಮುಖ್ಯಮಂತ್ರಿಗಳ ಜಾಗೃತಿ ಸಂದೇಶವನ್ನು ಬಣ್ಣದ ಮುದ್ರಣದಲ್ಲಿ ಹಾಗೂ ಹಿಂಭಾಗದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ತಲುಪಿಸಲಾಗುವುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Achamana Ritual: ಪೂಜೆಗೂ ಮುನ್ನ ‘ಆಚಮನ’ ಏಕೆ ಮುಖ್ಯ? ಅದರ ಶಾಸ್ತ್ರೋಕ್ತ ವಿಧಾನ ಮತ್ತು ಮಂತ್ರಗಳ ವಿವರ ಇಲ್ಲಿದೆ – Kannada News | Achamana Ritual Before Puja: Meaning, Method, Mantras and Significance according to Scriptures

ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ, ಜಪ, ಹವನ ಅಥವಾ ಧಾರ್ಮಿಕ ಆಚರಣೆಯನ್ನು ಪ್ರಾರಂಭಿಸುವ ಮೊದಲು ‘ಆಚಮನ’ ಮಾಡುವ ಸಂಪ್ರದಾಯವಿದೆ. ಆದರೆ ಈ ಆಚರಣೆಯ ಹಿಂದೆ ಇರುವ ನೈಜ ಮಹತ್ವದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆಚಮನದ ಮುಖ್ಯ ಉದ್ದೇಶ ಮತ್ತು ಅದರ ವಿಧಿ-ವಿಧಾನಗಳನ್ನು ಮನುಸ್ಮೃತಿ ಹಾಗೂ ಭವಿಷ್ಯ ಪುರಾಣಗಳಲ್ಲಿ ಅತ್ಯಂತ ವಿಸ್ತಾರವಾಗಿ ವಿವರಿಸಲಾಗಿದೆ. ಮನುಸ್ಮೃತಿಯ ಎರಡನೇ ಅಧ್ಯಾಯದ 60ನೇ ಶ್ಲೋಕದಲ್ಲಿ “ತ್ರಿರಚಮೇದಪಃ ಪೂರ್ವಮ್” ಎಂದು ಹೇಳಲಾಗಿದೆ. ಅಂದರೆ ಯಾವುದೇ ಧಾರ್ಮಿಕ ಕಾರ್ಯದ ಮುನ್ನ ಮೂರು ಬಾರಿ ಆಚಮನ ಮಾಡುವುದರಿಂದ ವ್ಯಕ್ತಿಯ ದೇಹ, ಮಾತು (ವಾಕ್) ಮತ್ತು ಮನಸ್ಸು ಪವಿತ್ರಗೊಳ್ಳುತ್ತದೆ. ಬಾಯಿಯನ್ನು ಆಂತರಿಕ ಹಾಗೂ ಬಾಹ್ಯವಾಗಿ ಶುದ್ಧೀಕರಿಸಿ, ಈಶ್ವರನ ಪೂಜೆಗೆ ನಮ್ಮನ್ನು ಸಿದ್ಧಗೊಳಿಸುವುದೇ ಈ ಆಚಮನ.

ಆಚಮನ ಎಂದರೆ ಏನು?

ಆಚಮನ ಎಂಬುದು ಅತ್ಯಂತ ಪವಿತ್ರವಾದ ಶುದ್ಧೀಕರಣದ ಒಂದು ಅಂಗವಾಗಿದೆ. ಇದರಲ್ಲಿ ಶುದ್ಧ ನೀರನ್ನು ಮಂತ್ರೋಚ್ಚಾರಣೆಯೊಂದಿಗೆ ಗ್ರಹಿಸಲಾಗುತ್ತದೆ ಮತ್ತು ನಂತರ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸಲಾಗುತ್ತದೆ. ಇದು ವ್ಯಕ್ತಿಯಲ್ಲಿ ಆಲೋಚನೆ, ಮಾತು ಹಾಗೂ ಕ್ರಿಯೆಗಳ ಶುದ್ಧತೆಯನ್ನು ಹೆಚ್ಚಿಸುತ್ತದೆ. ಪ್ರತಿಯೊಂದು ಪೂಜೆ ಅಥವಾ ಯಜ್ಞ-ಯಾಗಾದಿಗಳಿಗೆ ಮೊದಲು ಆಚಮನ ಮಾಡುವುದು ಅತ್ಯಂತ ಶುಭ ಹಾಗೂ ಕಡ್ಡಾಯವೆಂದು ಧರ್ಮಶಾಸ್ತ್ರಗಳು ಹೇಳುತ್ತವೆ.

ಆಚಮನ ಮಾಡಲು ಬೇಕಾಗುವ ಮುಖ್ಯ ಪದಾರ್ಥಗಳು:

ಆಚಮನದ ಆಚರಣೆಗೆ ಹೆಚ್ಚಿನ ವಸ್ತುಗಳ ಅಗತ್ಯವಿಲ್ಲ, ಕೇವಲ ಐದು ಮುಖ್ಯ ವಸ್ತುಗಳಿಂದ ಇದನ್ನು ನೆರವೇರಿಸಬಹುದು. ಶುದ್ಧ ನೀರು, ಸಣ್ಣ ತಾಮ್ರದ ಪಾತ್ರೆ (ಪಂಚಪಾತ್ರೆ), ಚಮಚ (ಉದ್ಧರಣೆ), ಕುಶ (ದರ್ಭೆ) ಮತ್ತು ಸ್ವಚ್ಛವಾದ ಆಸನ – ಇವು ಆಚಮನಕ್ಕೆ ಬೇಕಾಗುವ ಪದಾರ್ಥಗಳು. ಒಂದು ವೇಳೆ ನಿಮ್ಮ ಬಳಿ ಚಮಚ ಅಥವಾ ಕುಶ ಲಭ್ಯವಿಲ್ಲದಿದ್ದರೆ, ನಿಮ್ಮ ಕೈಗಳ ಸಹಾಯದಿಂದಲೇ ಆಚಮನ ವಿಧಿಯನ್ನು ಪೂರೈಸಬಹುದು.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಆಚಮನ ಮಾಡುವ ಸರಿಯಾದ ವಿಧಾನ ಮತ್ತು ಮಂತ್ರಗಳು:

ಆಚಮನ ಮಾಡುವ ಮುನ್ನ ಶುಚಿರ್ಭೂತರಾಗಿ ಸ್ನಾನ ಮಾಡಿ ಅಥವಾ ಕೈಕಾಲುಗಳನ್ನು ಚೆನ್ನಾಗಿ ತೊಳೆದು ಶುಭ್ರವಾದ ಉಡುಪನ್ನು ಧರಿಸಬೇಕು. ನಂತರ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸ್ವಚ್ಛವಾದ ಆಸನದ ಮೇಲೆ ಕುಳಿತು, ಮನಸ್ಸನ್ನು ಶಾಂತಗೊಳಿಸಿ ದೇವಸ್ಮರಣೆ ಮಾಡಬೇಕು. ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಈ ಕೆಳಗಿನ ಮಂತ್ರಗಳನ್ನು ಪಠಿಸುತ್ತಾ ಮೂರು ಬಾರಿ ಸ್ವೀಕರಿಸಬೇಕು:

  • ಮೊದಲ ಬಾರಿಗೆ ನೀರು ಕುಡಿಯುವಾಗ: “ಓಂ ಕೇಶವಾಯ ಸ್ವಾಹಾ”
  • ಎರಡನೇ ಬಾರಿಗೆ ನೀರು ಕುಡಿಯುವಾಗ: “ಓಂ ನಾರಾಯಣಾಯ ಸ್ವಾಹಾ”
  • ಮೂರನೇ ಬಾರಿಗೆ ನೀರು ಕುಡಿಯುವಾಗ: “ಓಂ ಮಾಧವಾಯ ಸ್ವಾಹಾ”

ಆಚಮನದ ನಂತರ ಮಾಡುವ ಸ್ಪರ್ಶ ವಿಧಿ:

ಮೂರು ಬಾರಿ ನೀರನ್ನು ಸ್ವೀಕರಿಸಿದ ನಂತರ, ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಎರಡೂ ಕೈಗಳ ಹೆಬ್ಬೆರಳು ಮತ್ತು ತೋರುಬೆರಳಿನ ಬುಡವನ್ನು ಸ್ಪರ್ಶಿಸಬೇಕು. ತದನಂತರ ಮತ್ತೆ ನೀರನ್ನು ತೆಗೆದುಕೊಂಡು ಬೆರಳುಗಳ ತುದಿಗಳನ್ನು ಮುಟ್ಟುತ್ತಾ “ಓಂ ವಿಷ್ಣುವೇ ನಮಃ” ಎಂದು ಜಪಿಸಬೇಕು. ಇದಾದ ನಂತರ ಎರಡೂ ಅಂಗೈಗಳನ್ನು ಸ್ಪರ್ಶಿಸಿ “ಓಂ ಮಧುಸೂದನಾಯ ನಮಃ” ಎಂದು ಸ್ಮರಿಸಬೇಕು. ಕೊನೆಯದಾಗಿ, ಸ್ವಲ್ಪ ನೀರನ್ನು ತಲೆಯ ಮೇಲ್ಭಾಗ ಅಥವಾ ಹಣೆಗೆ ಪ್ರೋಕ್ಷಿಸಿಕೊಂಡು, ಉಳಿದ ನೀರನ್ನು ನೆಲದ ಮೇಲೆ ಬಿಟ್ಟು ಪೂಜೆಯನ್ನು ಪ್ರಾರಂಭಿಸಬೇಕು.

ಆಚಮನ ಮಾಡುವುದರಿಂದ ಸಿಗುವ ಶುಭ ಫಲಗಳು:

ಧಾರ್ಮಿಕ ನಂಬಿಕೆಗಳ ಪ್ರಕಾರ ಪೂಜೆಗೂ ಮುನ್ನ ಆಚಮನ ಮಾಡುವುದರಿಂದ ನಾವು ಮಾಡುವ ಪೂಜೆಯ ಸಂಪೂರ್ಣ ಫಲ ನಮಗೆ ಲಭಿಸುತ್ತದೆ. ಇದು ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿ, ಸಕಾರಾತ್ಮಕ ಆಲೋಚನೆಗಳನ್ನು ವೃದ್ಧಿಸುತ್ತದೆ. ಆಚಮನ ಮಾಡಿದ ನಂತರ ಪೂಜೆಯಲ್ಲಿ ಸಂಪೂರ್ಣ ಏಕಾಗ್ರತೆ ಮತ್ತು ಭಕ್ತಿ ಮೂಡುತ್ತದೆ. ಹೀಗಾಗಿ ಆಚಮನ ಎಂಬುದು ಬರಿ ನೀರು ಕುಡಿಯುವ ಆಚರಣೆಯಲ್ಲ; ಅದು ನಮ್ಮ ಕಾಯ, ವಾಚಾ, ಮಾನಸಗಳನ್ನು ಈಶ್ವರಾರ್ಪಣೆ ಮಾಡಲು ಸಿದ್ಧಗೊಳಿಸುವ ಪವಿತ್ರ ಮಾರ್ಗವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇವಲ 85 ರನ್‌ಗಳಿಗೆ ಆಲೌಟ್ ಆದರೂ ಚಾಂಪಿಯನ್ಸ್!  – Kannada News | The Guyana Amazon Warriors are champions of the Global Super League 2026

ಕ್ರಿಕೆಟ್ ಇತಿಹಾಸದಲ್ಲಿ ನಂಬಲಸಾಧ್ಯವಾದ ಪಂದ್ಯಗಳು ಹಲವು ನಡೆದಿವೆ. ಆದರೆ, 2026ರ ಗ್ಲೋಬಲ್ ಸೂಪರ್ ಲೀಗ್ (GSL) ಫೈನಲ್ ಪಂದ್ಯದಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡ ತೋರಿದ ಪ್ರದರ್ಶನವು ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಅತ್ಯುತ್ತಮ ರೋಚಕ ಪಂದ್ಯಗಳಲ್ಲಿ ಒಂದಾಗಿ ದಾಖಲಾಗಿದೆ. ಕೇವಲ 85 ರನ್‌ಗಳಿಗೆ ಆಲೌಟ್ ಆದ ಹೊರತಾಗಿಯೂ, ಗಯಾನಾ ವಾರಿಯರ್ಸ್ ತಂಡ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.

ಬೌಲರ್​ಗಳ ಪರಾಕ್ರಮ:

ತಮ್ಮದೇ ತವರು ಮೈದಾನವಾದ ಪ್ರಾವಿಡೆನ್ಸ್‌ನ ಗಯಾನಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಈ ನಿರ್ಧಾರವು ಆರಂಭದಲ್ಲೇ ದುರಂತವಾಗಿ ಪರಿಣಮಿಸಿತು.

ಸ್ಯಾನ್ ಫ್ರಾನ್ಸಿಸ್ಕೋ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ಕೇವಲ 29 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿತ್ತು. ಇದಾಗ್ಯೂ ಕೊನೆಯ ಹಂತದಲ್ಲಿ ಡ್ವೈನ್ ಪ್ರಿಟೋರಿಯಸ್ (17 ರನ್) ಅವರ ಹೋರಾಟದ ನೆರವಿನಿಂದ ತಂಡವು ಗಯಾನಾ ಅಮೆಝಾನ್ ವಾರಿಯರ್ಸ್ 18.5 ಓವರ್‌ಗಳಲ್ಲಿ ಕೇವಲ 85 ರನ್‌ಗಳಿಸಿ ಆಲೌಟ್ ಆಯಿತು.

‘ವಾರಿಯರ್ಸ್’ ಹೋರಾಟ:

86 ರನ್‌ಗಳ ಅತ್ಯಂತ ಸುಲಭ ಗುರಿಯನ್ನು ಬೆನ್ನಟ್ಟಿದ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಮತ್ತು ಅವರ ಬೌಲಿಂಗ್ ಪಡೆ ಮೈದಾನದಲ್ಲಿ ಬೇರೆಯದೇ ಇತಿಹಾಸ ಬರೆಯಲು ಸಜ್ಜಾಗಿತ್ತು.

ಗಯಾನಾ ಬೌಲರ್‌ಗಳು ಆರಂಭದಿಂದಲೇ ಎದುರಾಳಿ ಬ್ಯಾಟರ್‌ಗಳ ಮೇಲೆ ತೀವ್ರ ಒತ್ತಡ ಹೇರಿದರು. ಇದರಿಂದ ರನ್ ಗಳಿಸಲು ಪರದಾಡಿದ ಸ್ಯಾನ್ ಫ್ರಾನ್ಸಿಸ್ಕೋ ಬ್ಯಾಟರ್‌ಗಳು ನಿಯಮಿತವಾಗಿ ವಿಕೆಟ್ ಒಪ್ಪಿಸುತ್ತಾ ಸಾಗಿದರು.

ಇದಾಗ್ಯೂ ಕೊನೆಯ 2 ಓವರ್​ಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡಕ್ಕೆ ಬೇಕಿದದ್ದು ಕೇವಲ 7 ರನ್​ಗಳು ಮಾತ್ರ. ಇತ್ತ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಕ್ಕೆ ಒಂದು ವಿಕೆಟ್​ನ ಅವಶ್ಯಕತೆಯಿತ್ತು.

19ನೇ ಓವರ್‌ನ 3ನೇ ಎಸೆತದಲ್ಲಿ ರನ್ ಕದಿಯುವ ಯತ್ನದಲ್ಲಿ  ಕ್ಯಾಲಮ್ ಸ್ಟೋವ್ ರನೌಟ್ ಆದರು. ಈ ರನೌಟ್​ನೊಂದಿಗೆ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 6 ರನ್​ಗಳ ರೋಚಕ ಜಯ ಸಾಧಿಸಿತು.

ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಸಂಭ್ರಮ:

ತಮ್ಮ ನೆಚ್ಚಿನ ತಂಡ ಇಷ್ಟು ಕಡಿಮೆ ಮೊತ್ತಕ್ಕೆ ಔಟ್ ಆದಾಗ ನಿರಾಶರಾಗಿದ್ದ ಗಯಾನಾ ಅಮೆಝಾನ್ ವಾರಿಯರ್ಸ್ ಅಭಿಮಾನಿಗಳು, ಬೌಲರ್‌ಗಳ ಈ ಮಂತ್ರಮುಗ್ಧ ಪ್ರದರ್ಶನದಿಂದ ರೋಮಾಂಚನಗೊಂಡರು. ಪಂದ್ಯ ಮುಗಿಯುತ್ತಿದ್ದಂತೆ ಗಯಾನಾ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಇಮ್ರಾನ್ ತಾಹಿರ್ ನೇತೃತ್ವದ ವಾರಿಯರ್ಸ್ ಪಡೆ ಈ ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಗ್ಲೋಬಲ್ ಟಿ20 ಲೀಗ್​ನಲ್ಲಿ ನಾವೇ ಬಲಿಷ್ಠ ಪಡೆ ಎಂಬುದನ್ನು ಸಾಬೀತುಪಡಿಸಿದೆ.

Source link

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಬರೆದ ಭಾರತೀಯ ಯೋಧ! – Kannada News | Indian Soldier Scripts History At Commonwealth Games

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಇತಿಹಾಸ ನಿರ್ಮಿಸಿದ್ದು ಮತ್ಯಾರೂ ಅಲ್ಲ, ಭಾರತೀಯ ಯೋಧ ಗುಲ್ವೀರ್ ಸಿಂಗ್. ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಾಂಗ್ ಡಿಸ್ಟೆನ್ಸ್ ರನ್ನರ್ ಆಗಿ ಕಣಕ್ಕಿಳಿದಿದ್ದ ಗುಲ್ವೀರ್ ಸಿಂಗ್ ಎರಡು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಟ್ರ್ಯಾಕ್ ಆಂಡ್ ಫೀಲ್ಡ್​ನಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯನ್ನು ಗುಲ್ವೀರ್ ಸಿಂಗ್ ತಮ್ಮದಾಗಿಸಿಕೊಂಡಿದ್ದಾರೆ.

10,000 ಮೀಟರ್ ಓಟದಲ್ಲಿ ಬೆಳ್ಳಿ ಪದಕ:

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಗುಲ್ವೀರ್ ಸಿಂಗ್ ಅವರ ಪದಕದ ಬೇಟೆ ಆರಂಭವಾಗಿದ್ದು ಪುರುಷರ 10,000 ಮೀಟರ್ ಓಟದ ಸ್ಪರ್ಧೆಯ ಮೂಲಕ. ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ರೇಸ್ ಅನ್ನು ಗುಲ್ವೀರ್ ಕೇವಲ 27:49.78 ನಿಮಿಷಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ 10,000 ಮೀಟರ್ ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ.

5,000 ಮೀಟರ್ ಓಟದಲ್ಲಿ ಕಂಚಿನ ಪದಕ:

10,000 ಮೀಟರ್ ಓಟದ ಬಳಿಕವೂ ಗುಲ್ವೀರ್ ಸಿಂಗ್ ಅವರ ಪದಕದ ಹಸಿವು ಕಡಿಮೆಯಾಗಲಿಲ್ಲ. ಕೆಲವೇ ದಿನಗಳ ಅಂತರದಲ್ಲಿ, ಅಂದರೆ ಆಗಸ್ಟ್ 1ರಂದು ನಡೆದ ಪುರುಷರ 5,000 ಮೀಟರ್ ಓಟದ ಸ್ಪರ್ಧೆಯಲ್ಲೂ ಕಣಕ್ಕಿಳಿದ ಭಾರತೀಯ ಯೋಧ, 13:24.95 ನಿಮಿಷಗಳಲ್ಲಿ ರೇಸ್ ಮುಗಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಕಾಮನ್‌ವೆಲ್ತ್‌ ಗೇಮ್ಸ್​ನ 5,000 ಮೀಟರ್ ವಿಭಾಗದಲ್ಲೂ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕೀರ್ತಿ ಗುಲ್ವೀರ್ ಸಿಂಗ್ ಪಾಲಾಯಿತು.

ಭಾರತೀಯ ಸೇನೆಯ ಸುಬೇದಾರ್!

ಭಾರತೀಯ ಸೇನೆಯಲ್ಲಿ ನಾಯಬ್ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಗುಲ್ವೀರ್ ಸಿಂಗ್, ಕ್ರೀಡಾಂಗಣದಲ್ಲೂ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. 2023ರ ರಾಷ್ಟ್ರೀಯ ಕ್ರೀಡಾಕೂಟದ 10,000 ಮೀಟರ್ ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇವರು ಮೊದಲ ಬಾರಿಗೆ ಗಮನ ಸೆಳೆದಿದ್ದರು.

ಅಲ್ಲಿಂದ ಕೇವಲ ಮೂರೇ ವರ್ಷಗಳಲ್ಲಿ, ಅಂದರೆ 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 5,000 ಮೀ ಹಾಗೂ 10,000 ಮೀ ಎರಡರಲ್ಲೂ ಚಿನ್ನದ ಪದಕ ಗೆದ್ದು ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಅಷ್ಟೇ ಅಲ್ಲದೆ, ಇಂಡೋರ್ 5,000 ಮೀಟರ್ ಓಟವನ್ನು 13 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಮುಗಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಇವರಿಗಿದೆ. ಈಗ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಬಲ್ ಪದಕ ಗೆದ್ದು ಜಾಗತಿಕ ಮಟ್ಟದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿದಿದ್ದಾರೆ.

ಇದನ್ನೂ ಓದಿ: ಕೇವಲ 85 ರನ್‌ಗಳಿಗೆ ಆಲೌಟ್ ಆದರೂ ಚಾಂಪಿಯನ್ಸ್! 

ಒಟ್ಟಾರೆಯಾಗಿ, ತಮ್ಮ ಅಪ್ರತಿಮ ವೇಗ ಮತ್ತು ಬದ್ಧತೆಯ ಮೂಲಕ ಇತಿಹಾಸ ಸೃಷ್ಟಿಸಿರುವ ಗುಲ್ವೀರ್ ಸಿಂಗ್ ಅವರ ಈ ಸಾಧನೆ ದೇಶದ ಕೋಟ್ಯಂತರ ಯುವ ಅಥ್ಲೀಟ್‌ಗಳಿಗೆ ಪ್ರೇರಣೆಯಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Source link

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: ಬೆಂಗಳೂರಿನ ಆಸ್ಪತ್ರೆಯಲ್ಲಿ 3,000 ರೋಬೋಟಿಕ್ ಶಸ್ತ್ರಚಿಕಿತ್ಸೆ ಪೂರ್ಣ! – Kannada News | Bengaluru Fortis Hospital Completes 3000 Robotic Surgeries Landmark Achievement

ಬೆಂಗಳೂರು, ಆಗಸ್ಟ್ 02: ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರು ಮತ್ತೊಮ್ಮೆ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ‘ಡಾ ವಿಂಚಿ ಎಕ್ಸ್‌ಐ’ (Da Vinci Xi) ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಬಳಸಿ ಯಶಸ್ವಿಯಾಗಿ 3,000 ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು (Robotic Surgeries) ಪೂರ್ಣಗೊಳಿಸುವ ಮೂಲಕ ದೇಶದಲ್ಲೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

12 ವೈದ್ಯಕೀಯ ವಿಭಾಗಗಳಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಕೆ

2018ರಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸಾ ಯೋಜನೆಯನ್ನು ಪ್ರಾರಂಭಿಸಿದ ಆಸ್ಪತ್ರೆಯು, ಕಳೆದ ಎಂಟು ವರ್ಷಗಳಲ್ಲಿ ವಿವಿಧ 12 ಪ್ರಮುಖ ವೈದ್ಯಕೀಯ ವಿಭಾಗಗಳಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಯುರಾಲಜಿ (ಮೂತ್ರಶಾಸ್ತ್ರ), ಕಿಡ್ನಿ ಕಸಿ, ಸ್ತ್ರೀರೋಗ ಶಾಸ್ತ್ರ, ಸರ್ಜಿಕಲ್ ಆಂಕಾಲಜಿ (ಕ್ಯಾನ್ಸರ್ ಶಸ್ತ್ರಚಿಕಿತ್ಸೆ), ಗ್ಯಾಸ್ಟ್ರೋಇಂಟಸ್ಟೈನಲ್, ಗ್ಯಾಸ್ಟ್ರಿಕ್ ಬೈಪಾಸ್ ಹಾಗೂ ಹೃದ್ರೋಗ ಶಸ್ತ್ರಚಿಕಿತ್ಸೆಗಳಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಲಾಗಿದೆ.

ಒಂದೇ ಸೂರಿನಡಿ ಎರಡು ‘ಡಾ ವಿಂಚಿ ಎಕ್ಸ್‌ಐ’ ರೋಬೋಟಿಕ್ ಸಿಸ್ಟಮ್‌ಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಫೋರ್ಟಿಸ್ ಒಂದಾಗಿದೆ. ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ಮೂತ್ರಪಿಂಡ ಕಸಿಗಾಗಿ ‘ಟ್ರೀಟ್’ (TREAT – Total Robot Enabled and Assisted Transplant) ಕಾರ್ಯಕ್ರಮವನ್ನು ಇದು ಪ್ರಾರಂಭಿಸಿದೆ.

ಸುರಕ್ಷಿತ ಮತ್ತು ನಿಖರ ಚಿಕಿತ್ಸೆಗೆ ಆದ್ಯತೆ

ಈ ಸಾಧನೆಯ ಕುರಿತು ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, “ಕರ್ನಾಟಕವು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನವು ರೋಗಿಗಳಿಗೆ ಹೆಚ್ಚು ಸುರಕ್ಷಿತವಾದ ಚಿಕಿತ್ಸೆ, ಸುಲಭ ಲಭ್ಯತೆ ಹಾಗೂ ಉತ್ತಮ ಫಲಿತಾಂಶವನ್ನು ನೀಡುವಂತಾಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pooja Room: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ – Kannada News | Pooja Room Cleaning Rules: Right Time, Days, and Vastu Tips You Must Know

ಹಿಂದೂ ಧರ್ಮದಲ್ಲಿ ಮನೆಯ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಅದು ದೇವರ ಕೋಣೆ. ಇದು ಬರಿ ಪೂಜೆ ಮಾಡುವ ಜಾಗ ಮಾತ್ರವಲ್ಲ, ಸಾಕ್ಷಾತ್ ಈಶ್ವರನ ವಾಸಸ್ಥಾನವೂ ಆಗಿದೆ. ಗರುಡ ಪುರಾಣದ ‘ಆಚಾರ ಖಂಡ’ ಮತ್ತು ‘ಪೂಜಾ ವಿಧಿ’ ಅಧ್ಯಾಯಗಳಲ್ಲಿ ದೇವರ ಕೋಣೆಯ ನೈರ್ಮಲ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಹಾಗೂ ಪೂಜೆಯ ಸಂಪೂರ್ಣ ಫಲವನ್ನು ಪಡೆಯಲು ದೇವರ ಕೋಣೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿಡುವುದು ಅಗತ್ಯವಾಗಿದೆ.

ಬೆಳಗಿನ ಜಾವದ ಶುಚಿಗೊಳಿಸುವಿಕೆ ಮತ್ತು ಅದರ ಮಹತ್ವ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಬೆಳಿಗ್ಗೆ ಸ್ನಾನ ಮಾಡಿದ ನಂತರ ಹಾಗೂ ಪೂಜೆಯನ್ನು ಪ್ರಾರಂಭಿಸುವ ಮೊದಲು ದೇವರ ಕೋಣೆಯನ್ನು ಸ್ವಚ್ಛಗೊಳಿಸುವುದು ಅತ್ಯಂತ ಶ್ರೇಷ್ಠ. ಬೆಳಿಗ್ಗೆ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ದೇವರ ಮೂರ್ತಿಯನ್ನು ಶುದ್ಧೀಕರಿಸಿ, ದೀಪ ಹಚ್ಚಿ, ಹೂವುಗಳನ್ನು ಅರ್ಪಿಸಿ ಪೂಜೆ ಮಾಡುವುದರಿಂದ ಮನೆಯ ಸುತ್ತಮುತ್ತಲಿನ ಪರಿಸರ ಶುದ್ಧೀಕರಣಗೊಳ್ಳುತ್ತದೆ. ಆದರೆ, ಬ್ರಹ್ಮ ಮುಹೂರ್ತವು ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕೆ ಮೀಸಲಾಗಿರುವುದರಿಂದ, ಬ್ರಹ್ಮ ಮುಹೂರ್ತದ ನಂತರದ ಮುಂಜಾನೆಯ ವೇಳೆಯಲ್ಲಿ ಈ ಸ್ವಚ್ಛತೆಯನ್ನು ಮಾಡುವುದು ಉತ್ತಮ.

ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸ್ವಚ್ಛಗೊಳಿಸಬಹುದೇ?

ಶಾಸ್ತ್ರಗಳ ಪ್ರಕಾರ ಮುಸ್ಸಂಜೆಯ ನಂತರ ಅಥವಾ ರಾತ್ರಿಯ ವೇಳೆಯಲ್ಲಿ ದೇವರ ಕೋಣೆಯ ಶುಚಿಗೊಳಿಸುವಿಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು. ವಿಶೇಷವಾಗಿ, ರಾತ್ರಿಯಲ್ಲಿ ಗುಡಿಸುವುದು, ನೆಲ ಒರೆಸುವುದು ಅಥವಾ ದೇವಾಲಯದ ಸಂಪೂರ್ಣ ಅಲಂಕಾರವನ್ನು ಬದಲಾಯಿಸುವಂತಹ ಕೆಲಸಗಳನ್ನು ಮಾಡಬಾರದು. ಆದಾಗ್ಯೂ, ಸಂಜೆ ಆರತಿ ಮಾಡುವ ಮೊದಲು ಅಥವಾ ದೀಪಗಳನ್ನು ಬೆಳಗಿಸುವ ಮುನ್ನ, ದೇವರ ಪೀಠವನ್ನು ಒಂದು ಸ್ವಚ್ಛವಾದ ಒಣ ಬಟ್ಟೆಯಿಂದ ಲಘುವಾಗಿ ಒರೆಸುವುದರಲ್ಲಿ ಯಾವುದೇ ಅಡಚಣೆ ಇಲ್ಲ.

ದೇವರ ಕೋಣೆ ಸ್ವಚ್ಛಗೊಳಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ದೇವರ ಕೋಣೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುವ ಮೊದಲು ಕೈಕಾಲುಗಳನ್ನು ಚೆನ್ನಾಗಿ ತೊಳೆಯಬೇಕು ಹಾಗೂ ಸಾಧ್ಯವಾದಷ್ಟು ಸ್ನಾನ ಮಾಡಿದ ನಂತರವೇ ಸ್ವಚ್ಛಗೊಳಿಸುವುದು ಸೂಕ್ತ. ದೇವರ ಕೋಣೆಯನ್ನು ಶುದ್ಧೀಕರಿಸಿದ ನಂತರ ಅಲ್ಲಿ ಸ್ವಲ್ಪ ಪ್ರಮಾಣದ ಗಂಗಾಜಲವನ್ನು ಸಿಂಪಡಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಇದು ಆ ಸ್ಥಳದ ಪಾವಿತ್ರ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಒರೆಸಲು ಯಾವಾಗಲೂ ಪ್ರತ್ಯೇಕವಾದ, ಸ್ವಚ್ಛವಾದ ಬಟ್ಟೆಯನ್ನೇ ಬಳಸಬೇಕು.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಸ್ವಚ್ಛಗೊಳಿಸಲು ಸೂಕ್ತ ದಿನಗಳು ಮತ್ತು ನಿಯಮಗಳು:

ಪ್ರತಿದಿನ ಬೆಳಿಗ್ಗೆ ಪೂಜೆಗೂ ಮುನ್ನ ಲಘುವಾದ ಸ್ವಚ್ಛತೆಯನ್ನು ಮಾಡಬಹುದು, ಆದರೆ ಇಡೀ ದೇವರ ಕೋಣೆಯ ಆಳವಾದ ಹಾಗೂ ವಿವರವಾದ (Deep Cleaning) ಸ್ವಚ್ಛತೆಗೆ ಶನಿವಾರ ಅತ್ಯಂತ ಸೂಕ್ತವಾದ ದಿನವಾಗಿದೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುವಾರ ಮತ್ತು ಏಕಾದಶಿಯ ದಿನಗಳಂದು ದೇವರ ಕೋಣೆಯನ್ನು ಆಳವಾಗಿ ಸ್ವಚ್ಛಗೊಳಿಸುವುದನ್ನು ತಪ್ಪಿಸಬೇಕು.

ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕೆಂದರೆ ಬೆಳಗಿನ ಜಾವ ಸ್ನಾನದ ನಂತರ ಮತ್ತು ಪೂಜೆಗೆ ಮೊದಲು ದೇವರ ಕೋಣೆಯನ್ನು ಸ್ವಚ್ಛಗೊಳಿಸುವುದೇ ಸೂಕ್ತವಾದ ಮಾರ್ಗವಾಗಿದೆ. ಧರ್ಮಶಾಸ್ತ್ರದ ಈ ಸರಳ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲದಲ್ಲಿ ಸ್ನಾನಘಟ್ಟ, ತ್ರಿವೇಣಿ ಸಂಗಮ, ಉದ್ಯಾನವನ ಮುಳುಗಡೆ – Kannada News | Heavy Rains Lead to Widespread Flooding in Bhagamandala, Madikeri

ಮಡಿಕೇರಿ, ಆಗಸ್ಟ್​​ 02: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಡಿಕೇರಿ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಭಾಗಮಂಡಲ ಗ್ರಾಮ ಕೇಂದ್ರ ಸಂಪೂರ್ಣವಾಗಿ ಜಲಾವೃತವಾಗಿದೆ. ತ್ರಿವೇಣಿ ಸಂಗಮವು ಸಂಪೂರ್ಣವಾಗಿ ನೀರಿನಿಂದ ಆವೃತಗೊಂಡಿದ್ದು, ಸಂಗಮದ ಪಕ್ಕದಲ್ಲಿರುವ ಸ್ನಾನಘಟ್ಟಗಳು ಹಾಗೂ ಉದ್ಯಾನವನಗಳು ಸಹ ಮುಳುಗಡೆಯಾಗಿವೆ. ಮಳೆಯ ತೀವ್ರತೆಗೆ ಭಾಗಮಂಡಲ-ತಲಕಾವೇರಿ ಮಾರ್ಗದ ರಸ್ತೆಯು ಸಹ ನೀರಿನಿಂದ ಆವರಿಸಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಫ್ಲೈ ಓವರ್ ಮೂಲಕ ಓಡಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಜಗತ್ತಿನ ಭವಿಷ್ಯದ ಹಿತಕ್ಕಾಗಿ ಇರಾನ್ ಮೇಲಿನ ದಾಳಿ ರದ್ದು: ಡೊನಾಲ್ಡ್ ಟ್ರಂಪ್ ಘೋಷಣೆ, ಹಾರ್ಮುಜ್ ಜಲಸಂಧಿ ತೆರೆಯಲು ಸಮ್ಮತಿ – Kannada News | Trump Halts Iran Attack for Global Peace; Strait of Hormuz Opens

ವಾಷಿಂಗ್ಟನ್, ಆಗಸ್ಟ್​ 02: ಇರಾನ್ ಹಾಗೂ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳ ಸತತ ಕೋರಿಕೆಯ ಮೇರೆಗೆ, ಇರಾನ್ ವಿರುದ್ಧ ಯೋಜಿಸಲಾಗಿದ್ದ ಸರಣಿ ಮಿಲಿಟರಿ ದಾಳಿಗಳನ್ನು ಅಮೆರಿಕ ಮತ್ತು ಇಸ್ರೇಲ್ ತಡೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)  ಪ್ರಕಟಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದಾರೆ. ನೂತನ ಒಪ್ಪಂದದಂತೆ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ಸಂಪೂರ್ಣವಾಗಿ ತೆರೆಯಲಾಗುವುದು ಮತ್ತು ಇರಾನ್‌ನ ಪರಮಾಣು ಬೆದರಿಕೆಗೆ ಶಾಶ್ವತ ತೆರೆ ಎಳೆಯಲಾಗುವುದು.

ಎರಡನೇ ಮಹಾಯುದ್ಧದ ನಂತರ ಜಗತ್ತು ಕಂಡರಿಯದ ಶಕ್ತಿಶಾಲಿ ಮಿಲಿಟರಿ ಬಲದೊಂದಿಗೆ ಅಮೆರಿಕ ಇರಾನ್ ವಿರುದ್ಧ ದಾಳಿಗೆ ಸಿದ್ಧವಾಗಿತ್ತು. ಆದರೆ ಜಾಗತಿಕ ಶಾಂತಿ, ಭವಿಷ್ಯದ ಒಳಿತು ಹಾಗೂ ಸಮೃದ್ಧ ಇರಾನ್‌ನ ಉಳಿವಿಗಾಗಿ, ದಾಳಿ ರದ್ದುಗೊಳಿಸಲು ನಾನು ಸಮ್ಮತಿಸಿದ್ದೇನೆ. ಈ ಬದ್ಧತೆಯಲ್ಲಿ ಇಸ್ರೇಲ್ ಕೂಡ ನಮ್ಮೊಂದಿಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹಾರ್ಮುಜ್ ಜಲಸಂಧಿಯ ಗಂಭೀರತೆ: ಜಗತ್ತಿನ ಸುಮಾರು ಶೇ. 20 ರಷ್ಟು ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ತಡೆಹಿಡಿದಿದ್ದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಏರಿಕೆ ಉಂಟಾಗಿತ್ತು.

ಮತ್ತಷ್ಟು ಓದಿ: ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ

ಮಧ್ಯವರ್ತಿಗಳ ಪಾತ್ರ: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಭಾರಿ ದಾಳಿ-ಪ್ರತಿದಾಳಿಗಳು ನಡೆದಿದ್ದವು. ಓಮನ್, ಕತಾರ್ ಹಾಗೂ ಟರ್ಕಿ ದೇಶಗಳು ನಡೆಸಿದ ರಹಸ್ಯ ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಈ ಸಂಘರ್ಷ ಶಮನದ ಹಾದಿ ಸುಗಮಗೊಂಡಿದೆ.

ಆರ್ಥಿಕತೆ ಮತ್ತು ಶಾಂತಿ: ಈ ನಿರ್ಧಾರದಿಂದಾಗಿ ಏಷ್ಯನ್ ಹಾಗೂ ಯುರೋಪಿಯನ್ ಮಾರುಕಟ್ಟೆಗಳಲ್ಲಿ ತೈಲ ಸರಬರಾಜು ಸುಗಮಗೊಳ್ಳಲಿದ್ದು, ಜಾಗತಿಕ ಆರ್ಥಿಕತೆಯ ಮೇಲಿದ್ದ ಭಾರಿ ಒತ್ತಡ ಕಡಿಮೆಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version