CWG 2026: ಭಾರತೀಯ ಬಾಕ್ಸರ್ಗಳ ಪಂಚ್ಗೆ 7 ಚಿನ್ನದ ಪದಕ! – Kannada News | 7 Gold Medals: Indian Boxers Dominate in Commonwealth Games
ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ (ಆಗಸ್ಟ್ 1) ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಒಂದೇ ದಿನ ಗೆದ್ದ ಪದಕಗಳ ಸಂಖ್ಯೆ ಬರೋಬ್ಬರಿ 16. ಈ ಹದಿನಾರು ಪದಕಗಳಲ್ಲಿ 8 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಮೆಡಲ್ಗಳು ಇರುವುದು ವಿಶೇಷ. ಚಿನ್ನಕ್ಕೆ ಬಾಕ್ಸರ್ಗಳ ಪಂಚ್: ಶನಿವಾರ ನಡೆದ ಬಾಕ್ಸಿಂಗ್ ಫೈನಲ್ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 7 ಚಿನ್ನದ ಪದಕ ಗೆದ್ದಿದ್ದಾರೆ. ಇದರಲ್ಲಿ ಐದು ಚಿನ್ನದ ಪದಕ ತಂದುಕೊಟ್ಟಿರುವುದು ಮಹಿಳಾ…