ಇರಾನ್ ಸಹಾಯದಿಂದ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆಗೆ ಭೇಟಿ ನೀಡಿದ್ದ ಖಮೇನಿ – Kannada News | Iran And Israel War: Ali Khamenei visited in 1981 for alipur Village hospital

ಚಿಕ್ಕಬಳ್ಳಾಪುರ, (ಮಾರ್ಚ್​ 1): ಇಸ್ರೆಲ್ ಹಾಗೂ ಅಮೆರಿಕಾ ನಡೆದಿಸ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ( Ali Khamenei) ಹತ್ಯೆಯಾಗಿದ್ದು, ಈ ಸುದ್ದಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ಆಳವಾದ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ಹೊರಬಂದ ಬಳಿಕ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದರು. ಅಲಿಪುರ ಗ್ರಾಮವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ.

ಇನ್ನು ಇರಾನ್ ಸಹಾಯದಿಂದ ಅಲಿಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು, ಈ ಆಸ್ಪತ್ರೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕೆ  1981ರಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರು ಅಲಿಪುರ ಗ್ರಾಮಕ್ಕೆ ಆಗಮಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ನೆನಪು ಇನ್ನೂ ಹಸಿರಾಗಿದೆ. ಗ್ರಾಮದಲ್ಲಿರುವ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದನ್ನು ಹಿರಿಯರು ಸ್ಮರಿಸುತ್ತಿದ್ದಾರೆ. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ. ಇನ್ನು ಅಲಿಪುರದ ಖಮೇನಿ ನಿರ್ಮಿಸಿದ್ದ ಆಸ್ಪತ್ರೆ ಇದೆ ನೋಡಿ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

Source link

ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah Condemns US Israel Action on Iran, Criticises Trumps Dual Policy

ಶಿವಮೊಗ್ಗ, ಮಾರ್ಚ್​ 01: ಈ ಯುದ್ಧ ಅಗತ್ಯ ಇರಲಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇರಾನ್​ ಮೇಲೆ ಇಸ್ರೇಲ್​-ಅಮೆರಿಕದಿಂದ ಜಂಟಿ ದಾಳಿ ವಿಚಾರವಾಗಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಮಾತನಾಡಿದ ಅವರು, ಒಂದೆಡೆ ಶಾಂತಿ ಮಂತ್ರ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ದಾಳಿ ವೇಳೆ ಇರಾನ್ ಪರಮೋಚ್ಛ ನಾಯಕ ಖಮನೈ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಖಮೇನಿ ಹತ್ಯೆ ಮಾಡಿದ್ದು ಖಂಡನೀಯ ಎಂದಿದ್ದಾರೆ. ಇನ್ನು ಯುದ್ಧ ಆರಂಭವಾದ ಮೇಲೆ ಕನ್ನಡಿಗರು ಸಿಲುಕಿಕೊಂಡಿದ್ದಾರೆ, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Holi 2026: ಭಾರತದಂತೆಯೇ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ದೇಶಗಳಿವು – Kannada News | Holi 2026: These are the countries that celebrate Holi festival like India

ನಮ್ಮ ಭಾರತದಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬಗಲ್ಲಿ ಹೋಳಿ (Holi)ಹಬ್ಬವೂ ಒಂದು. ಈ ಬಾರಿ ಮಾರ್ಚ್‌ 3 ಮತ್ತು 4 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಂಭ್ರಮದ ಕ್ಷಣಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ವರ್ಣರಂಜಿತವಾದ ಈ ಹಬ್ಬದಲ್ಲಿ ಪರಸ್ಪರ ಬಣ್ಣಗಳನ್ನು ಮೈಮೇಲೆ ಎರಚಿಕೊಳ್ಳುತ್ತಾ  ಸಂತೋಷವನ್ನು ಹಂಚಿಕೊಳ್ಳುತ್ತಾರೆ, ಯಾವುದೇ ಜಾತಿ ಮತಗಳ ಭೇದವಿಲ್ಲದೆ ಜನ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ.  ಭಾರತದಂತೆ ವಿಶ್ವದ ನಾನಾ ಭಾಗಗಳಲ್ಲೂ ಹೋಳಿ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಆ ದೇಶಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಭಾರತದಂತೆಯೇ ಈ ದೇಶಗಳಲ್ಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ:

ನೇಪಾಳ: ನೇಪಾಳದಲ್ಲಿ, ಹೋಳಿಯನ್ನು ಫಾಗು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಇಲ್ಲಿ ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ, ಹೋಳಿಕಾ ದಹನ್ ಆಚರಿಸಲಾಗುತ್ತದೆ, ಮತ್ತು ಎರಡನೇ ದಿನ, ಜನರು ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಸಾಂಪ್ರದಾಯಿಕ ಹಾಡು ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ, ಈ ಹಬ್ಬವನ್ನು ಹಿಂದೂ ಮತ್ತು ಬೌದ್ಧ ಸಮುದಾಯಗಳು  ಆಚರಿಸುತ್ತವೆ.

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿಯೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಹೋಳಿಯನ್ನು ಡೋಲ್ ಪೂರ್ಣಿಮಾ ಅಥವಾ ವಸಂತ ಹಬ್ಬ ಎಂದು ಆಚರಿಸಲಾಗುತ್ತದೆ. ಇಲ್ಲಿ, ಹಿಂದೂ ಸಮುದಾಯದವರು ಬಣ್ಣಗಳೊಂದಿಗೆ ಓಕುಳಿಯಾಡುತ್ತಾರೆ ಮತ್ತು  ಶ್ರೀಕೃಷ್ಣನನ್ನು ಪೂಜಿಸುತ್ತಾರೆ, ರಾಧಾ-ಕೃಷ್ಣ ಮೆರವಣಿಗೆಗಳನ್ನು ನಡೆಸುತ್ತಾರೆ.  ಬಾಂಗ್ಲಾದೇಶದಲ್ಲಿ ಹೋಳಿ ಹಬ್ಬವು ಧಾರ್ಮಿಕ ಮತ್ತು ಸಾಂಸ್ಕೃತಿಕ ಏಕತೆಯನ್ನು ಸಂಕೇತಿಸುತ್ತದೆ.

ಪಾಕಿಸ್ತಾನ: ಭಾರತದ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೂ ಹೋಳಿಯನ್ನು ಆಚರಿಸಲಾಗುತ್ತದೆ. ಪಾಕಿಸ್ತಾನದಲ್ಲಿ, ಹಿಂದೂ ಸಮುದಾಯ, ಮುಖ್ಯವಾಗಿ ಸಿಂಧ್ ಪ್ರಾಂತ್ಯದಲ್ಲಿ, ದೇವಾಲಯಗಳಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳೊಂದಿಗೆ ಹೋಳಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಜನರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಸಿಹಿತಿಂಡಿಗಳನ್ನು ವಿತರಿಸುತ್ತಾರೆ. ಪಾಕಿಸ್ತಾನದಲ್ಲಿ ಹೋಳಿ ಹಬ್ಬವು ಧಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ.

ಮಾರಿಷಸ್: ಹಿಂದೂ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಮಾರಿಷಸ್‌ನಲ್ಲಿ ಹೋಳಿ ಹಬ್ಬವನ್ನು ಸಹ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಮಾರಿಷಸ್‌ನಲ್ಲಿರುವ ಭಾರತೀಯ ಮೂಲದ ಜನರು ಹೋಳಿ ಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಾರೆ. ಇದು ಇಲ್ಲಿನ ರಾಷ್ಟ್ರೀಯ ಹಬ್ಬವಾಗಿದ್ದು, ಇಲ್ಲಿ “ಹೋಳಿ ಮೇಳ”ವನ್ನು ಆಯೋಜಿಸಲಾಗುತ್ತದೆ, ಇದು ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಹಾಡುಗಳು, ನೃತ್ಯಗಳು ಮತ್ತು ಸಾಂಪ್ರದಾಯಿಕ ಪಾಕಪದ್ಧತಿಗಳು ಸೇರಿದಂತೆ ವಿವಿಧ ವರ್ಣರಂಜಿತ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

ಫಿಜಿ: ಪೆಸಿಫಿಕ್ ಮಹಾಸಾಗರದಲ್ಲಿರುವ ದ್ವೀಪ ರಾಷ್ಟ್ರವಾದ ಫಿಜಿಯಲ್ಲಿಯೂ ಹೋಳಿಯನ್ನು ಆಚರಿಸಲಾಗುತ್ತದೆ. ಫಿಜಿಯಲ್ಲಿ ಹೋಳಿಯನ್ನು “ಫಾಗ್ವಾ” ಅಥವಾ “ಹೋಳಿ” ಎಂದು ಕರೆಯಲಾಗುತ್ತದೆ.  ಇಂಡೋ-ಫಿಜಿಯನ್ ಸಮುದಾಯದವರು ಸಾಂಪ್ರದಾಯಿಕ ಹಾಡುಗಳು, ನೃತ್ಯಗಳು ಮತ್ತು ಬಣ್ಣಗಳೊಂದಿಗೆ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

ಟ್ರಿನಿಡಾಡ್ ಮತ್ತು ಟೊಬಾಗೋ: ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಹೋಳಿಯನ್ನು ಫಾಗ್ವಾ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಇಲ್ಲಿ, ಹಬ್ಬವನ್ನು ಸಾಂಪ್ರದಾಯಿಕ ಚೌಟಲ್ ಹಾಡುಗಳು ಮತ್ತು ಬಣ್ಣಗಳ ಓಕುಳಿಯಾಟದೊಂದಿಗೆ ಆಚರಿಸಲಾಗುತ್ತದೆ.

ಇದನ್ನೂ ಓದಿ: ಮೈಮೇಲೆ ಅಂಟಿದ ಹೋಳಿ ಬಣ್ಣವನ್ನು ತೆಗೆದು ಹಾಕಲು ಸಲಹೆಯನ್ನು ಪಾಲಿಸಿ

ಯುನೈಟೆಡ್ ಕಿಂಗ್‌ಡಮ್: ಬಣ್ಣಗಳ ಹಬ್ಬವಾದ ಹೋಳಿಯನ್ನು ಪ್ರತಿ ವರ್ಷ ಲಂಡನ್‌ನಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಲಂಡನ್ ಮತ್ತು ಲೀಸೆಸ್ಟರ್‌ನಂತಹ ನಗರಗಳಲ್ಲಿ ದೊಡ್ಡ ಪ್ರಮಾಣದ ಹೋಳಿ ಹಬ್ಬಗಳನ್ನು ಆಯೋಜಿಸಲಾಗುತ್ತದೆ, ಭಾರತೀಯ ಆಹಾರ, ನೃತ್ಯ ಮತ್ತು ಸಂಗೀತ ಹಬ್ಬದ ಪ್ರಮುಖ ಆಕರ್ಷಣೆಗಳಾಗಿವೆ. ಈ ಕಾರ್ಯಕ್ರಮಗಳಲ್ಲಿ ಭಾರತೀಯ ಮೂಲದವರು  ಮತ್ತು ಅಲ್ಲಿನ ಸ್ಥಳೀಯರು ಉತ್ಸಾಹದಿಂದ ಭಾಗವಹಿಸುತ್ತಾರೆ.

ಅಮೆರಿಕ ಮತ್ತು ಕೆನಡಾ:  ಅಮೆರಿಕ ಮತ್ತು ಕೆನಡಾದಲ್ಲಿಯೂ  ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅನೇಕ ನಗರಗಳಲ್ಲಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಮೆರಿಕದ ಉತಾಹ್‌ನ ಸ್ಪ್ಯಾನಿಷ್ ಫೋರ್ಕ್‌ನಲ್ಲಿರುವ ಶ್ರೀ ಶ್ರೀ ರಾಧಾ ಕೃಷ್ಣ ದೇವಾಲಯವು ದೊಡ್ಡ ಪ್ರಮಾಣದ ಹೋಳಿ ಆಚರಣೆಯನ್ನು ಆಯೋಜಿಸುತ್ತದೆ.ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಂತಹ ನಗರಗಳು ಸಹ ಓಕುಳಿಯಾಟ ಮತ್ತು ಮೆರವಣಿಗೆಗಳೊಂದಿಗೆ ಹೋಳಿಯನ್ನು ಆಚರಿಸುತ್ತವೆ.

ಇದರ ಜೊತೆಗೆ, ಆಸ್ಟ್ರೇಲಿಯಾದ ಸಿಡ್ನಿ ಮತ್ತು ಮೆಲ್ಬೋರ್ನ್ ಕೂಡ  ಹೋಳಿ ಆಚರಣೆಗಳನ್ನು ಆಯೋಜಿಸುತ್ತವೆ. ದಕ್ಷಿಣ ಆಫ್ರಿಕಾ, ಡರ್ಬನ್ ಮತ್ತು ಜೋಹಾನ್ಸ್‌ಬರ್ಗ್‌ನಂತಹ ನಗರಗಳಲ್ಲಿ, ಭಾರತೀಯ ಸಮುದಾಯಗಳು ಹೋಳಿಯನ್ನು ಸಡಗರದಿಂದ ಆಚರಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indian Railways Quota: ಭಾರತೀಯ ರೈಲ್ವೆ ನೇಮಕಾತಿಯಲ್ಲಿ ಅಗ್ನಿವೀರ್ ಮತ್ತು ಮಾಜಿ ಸೈನಿಕರಿಗೆ ವಿಶೇಷ ಮೀಸಲಾತಿ ಘೋಷಣೆ – Kannada News | Indian Railways Quota: Agniveers and Ex Servicemen Get Special Reservation in Recruitment

ಭಾರತೀಯ ರೈಲ್ವೆಯು ಅಗ್ನಿವೀರರು ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಿಗೆ ಮಹತ್ವದ ಉಡುಗೊರೆಯನ್ನು ಘೋಷಿಸಿದೆ. ಇನ್ನು ಮುಂದೆ ಅಗ್ನಿವೀರರು ಮತ್ತು ನಿವೃತ್ತ ಸೈನಿಕರು ರೈಲ್ವೆ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಪಡೆಯಲಿದ್ದಾರೆ. ಈ ಕುರಿತು ಭಾರತೀಯ ರೈಲ್ವೆ ಮತ್ತು ಭಾರತೀಯ ಸೇನೆಯ ನಡುವೆ ಸಹಕಾರ ಚೌಕಟ್ಟು ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಈ ಒಪ್ಪಂದದ ಮೂಲಕ ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಗ್ನಿವೀರರು ಹಾಗೂ ಮಾಜಿ ಸೈನಿಕರಿಗೆ ರೈಲ್ವೆ ಉದ್ಯೋಗಗಳಲ್ಲಿ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪುಗೊಳ್ಳಲಿದೆ.

ರೈಲ್ವೆ ನೇಮಕಾತಿಯಲ್ಲಿ ಹಂತ-1 ಹುದ್ದೆಗಳಿಗೆ ಮಾಜಿ ಸೈನಿಕರಿಗೆ ಶೇಕಡಾ 20 ರಷ್ಟು ಮತ್ತು ನಿವೃತ್ತ ಅಗ್ನಿವೀರರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗುತ್ತದೆ. ಲೆವೆಲ್-2 ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇಕಡಾ 10 ರಷ್ಟು ಹಾಗೂ ಅಗ್ನಿವೀರರಿಗೆ ಶೇಕಡಾ 5 ರಷ್ಟು ಮೀಸಲಾತಿ ಒದಗಿಸಲಾಗುತ್ತದೆ. ಈ ಕ್ರಮವು ದೇಶ ಸೇವೆ ಮಾಡಿದ ಯೋಧರಿಗೆ ನಾಗರಿಕ ಉದ್ಯೋಗದಲ್ಲಿ ಭದ್ರ ಭವಿಷ್ಯ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಇದೇ ವೇಳೆ, ಭಾರತೀಯ ರೈಲ್ವೆ ಶೀಘ್ರದಲ್ಲೇ 5,000ಕ್ಕೂ ಹೆಚ್ಚು ಪಾಯಿಂಟ್ಸ್‌ಮನ್ ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆಸಿದೆ. ಈ ಹುದ್ದೆಗಳನ್ನು ಪ್ರಮುಖವಾಗಿ ನಿವೃತ್ತ ಅಗ್ನಿವೀರರು ಮತ್ತು ಮಾಜಿ ಸೈನಿಕರಿಂದಲೇ ಭರ್ತಿ ಮಾಡಲು ನಿರ್ಧರಿಸಲಾಗಿದೆ. ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ರೈಲ್ವೆಯ ಒಂಬತ್ತು ವಲಯಗಳು ಭಾರತೀಯ ಸೇನೆಯೊಂದಿಗೆ ಈಗಾಗಲೇ ಸಮನ್ವಯ ಸಾಧಿಸಿವೆ.

ಅಗ್ನಿಪಥ ಯೋಜನೆ 2022ರಲ್ಲಿ ಪ್ರಾರಂಭವಾಗಿದ್ದು, ಅಗ್ನಿವೀರರು ನಾಲ್ಕು ವರ್ಷಗಳ ಸೇವೆಯ ನಂತರ ನಿವೃತ್ತರಾಗುತ್ತಾರೆ. ಮೊದಲ ಬ್ಯಾಚ್ 2026ರ ಅಂತ್ಯದ ವೇಳೆಗೆ ನಿವೃತ್ತಿಯಾಗಲಿದ್ದು, ಅವರ ಪುನರ್ ನೇಮಕಾತಿಗಾಗಿ ಈ ಯೋಜನೆ ಮಹತ್ವದ ಅವಕಾಶಗಳನ್ನು ಒದಗಿಸಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನಿಂತ ಒಕ್ಕಲಿಗರ ಸಂಘ – Kannada News | Amid the Israel–Iran conflict, Dubai Vokkaligara Sangha steps up to help Kannadigas affected by disruptions

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಯತೀಶ್ ಗೌಡ

ಹಾಸನ, ಮಾರ್ಚ್​​​ 01: ಇರಾನ್​ನಾದ್ಯಂತ ಅಮೆರಿಕ ಮತ್ತು ಇಸ್ರೇಲ್​​ ದಾಳಿ ಮುಂದುವರಿಸಿದೆ. ಯುದ್ಧದ (Middle East Conflict) ಎಫೆಕ್ಟ್​​ ಭಾರತೀಯರಿಗೂ ತಟ್ಟಿದೆ. ಫ್ಲೈಟ್ ಇಲ್ಲದೇ ಪರದಾಟ ನಡೆಸಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ನೂರಾರು ಕನ್ನಡಿಗರು ಸಿಲುಕಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಹೀಗಾಗಿ ದುಬೈನಲ್ಲಿ ಸಿಲುಕಿದ ಕನ್ನಡಿಗರಿಗೆ ದುಬೈ ಒಕ್ಕಲಿಗರ ಸಂಘ ನೆರವಿಗೆ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕ‌ ಮಾಡುವಂತೆ ಮನವಿ ಮಾಡಲಾಗಿದೆ.

ಕನ್ನಡಿಗರ ಸಹಾಯಕ್ಕೆ ಮುಂದಾದ ದುಬೈ ಒಕ್ಕಲಿಗರ ಸಂಘ

ದುಬೈ, ಅಬುಧಾಬಿ ಮೇಲೆ ಇರಾನ್​ ದಾಳಿ ಹಿನ್ನೆಲೆ ವಿಮಾನಗಳು ರದ್ದಾಗಿವೆ. ಫ್ಲೈಟ್ ಇಲ್ಲದೇ ಭಾರತೀಯರು ಪರದಾಟ ನಡೆಸಿದ್ದಾರೆ. ಇದಲ್ದೇ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲೇ ಸಿಲುಕಿದ್ದು, ಸಹಾಸ ಹಸ್ತ ಚಾಚಿದ್ದಾರೆ. ದುಬೈನಲ್ಲಿ ಸಿಲುಕಿದ ಕನ್ನಡಿಗರ ಸಹಾಯಕ್ಕೆ ದುಬೈ ಒಕ್ಕಲಿಗರ ಸಂಘ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕ‌ ಮಾಡುವಂತೆ ಟಿವಿ9 ಮೂಲಕ ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಯತೀಶ್ ಮನವಿ ಮಾಡಿದ್ದಾರೆ. ದುಬೈನಲ್ಲಿರುವ ಕನ್ನಡಿಗರು​ +971555114205 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.

ದುಬೈನಲ್ಲಿ ಸಿಲುಕಿದ ದಾವಣಗೆರೆ, ಬಳ್ಳಾರಿ ಜನ 

ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಜನ ಪ್ರವಾಸಕ್ಕೆ ತೆರಳಿದ್ದರು. ನಿನ್ನೆ ಅವರೆಲ್ಲರೂ ಭಾರತಕ್ಕೆ ವಾಪಸ್ಸಾಗಬೇಕಿತ್ತು. ಆದರೆ ಯುದ್ಧ ಆರಂಭವಾದ ಹಿನ್ನೆಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರವಾಸಕ್ಕೆ ತೆರಳಿದ್ದ 20 ಜನ ಮಹಿಳೆ 30 ಜನ ಪುರುಷರು ಫೆಬ್ರವರಿ 28ಕ್ಕೆ ಹಿಂದಿರುಗಬೇಕಿತ್ತು. ಆದರೆ ಇದೀಗ ಯುದ್ಧದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದುಬೈನಲ್ಲಿ ಸಿಲುಕಿದ ರಾಜ್ಯದ ಟೆಕ್ಕಿ 

ದುಬೈ ಮಾರ್ಗವಾಗಿ ಪ್ಯಾರಿಸ್​ಗೆ ತೆರಳುತ್ತಿದ್ದ ಬಾಗಲಕೋಟೆಯ ಬೀಳಗಿ ಪಟ್ಟಣದ ಗಿರೀಶ್ ಕೆರೂರು ಯುದ್ಧದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಯಾರಿಸ್​ಗೆ ಹೋಗಲು ವಿಮಾನವಿಲ್ಲದೇ ದುಬೈನ ಅಬುಧಾಬಿಯಲ್ಲೇ ಗಿರೀಶ್ ಸಿಲುಕಿಕೊಂಡಿದ್ದಾರೆ. ಸೆಲ್ಪಿ ವಿಡಿಯೋ ಮೂಲಕ ಗಿರೀಶ್ ಮಾಹಿತಿ ನೀಡಿದ್ದಾರೆ.

ಸಿಎಂ ಕಾರ್ಯದರ್ಶಿಗೆ ದುಬೈ ಕನ್ನಡಿಗರ ಮಾಹಿತಿ 

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿಎಂ ಕಾರ್ಯದರ್ಶಿ ಅಂಜುಂ ಪರ್ವೇಜ್​ ಜತೆ ಮಾತಾಡಿ, ದುಬೈನಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ನೀಡಿದ್ದಾರೆ. ಏರ್ ಸ್ಟ್ರೈಕ್ ಕಾರಣ, ಎಲ್ಲಾ ವಿಮಾನಗಳ ಹಾರಾಟ ರದ್ದಾಗಿದೆ. ಮಾರ್ಚ್ 2ರವರೆಗೆ ಯಾವುದೇ ವಿಮಾನ‌ ಹಾರಾಟವಿಲ್ಲ ಅಂತಾ ಹೇಳುತ್ತಿದ್ದಾರೆ. ಅಲ್ಲದೇ ಬಳ್ಳಾರಿ ನಗರ ಶಾಸಕ ನಾರಾ.ಭರತ್ ರೆಡ್ಡಿ ದುಬೈನಲ್ಲಿ ಸಿಲುಕಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು? – Kannada News | Iran And Israel War: Why alipur Village People condolences to Ayatollah Khamenei death? What relationship?

ಚಿಕ್ಕಬಳ್ಳಾಪುರ, (ಮಾರ್ಚ್ 01): ಅಮೆರಿಕ – ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ (Ayatollah Khamenei) ಸಾವಿನಪ್ಪಿರುವ ಸುದ್ದಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲ (Alipura Village) ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. 3 ದಿನಗಳ ಕಾಲ ʻಬ್ಲಾಕ್ ಡೇʼ (ಕರಾಳ ದಿನ) ಆಚರಣೆ ಮಾಡಲು ತೀರ್ಮಾನಿಸಲಾಗಿದೆ.

ಬೇಬಿ ಅಪ್ ಇರಾನ್ ಅoತಲೇ ಕರೆಸಿಕೊಳ್ಳುವ ಅಲೀಪುರ ಗ್ರಾಮಕ್ಕೆ 1986 ರಲ್ಲಿ ಖಮೇನಿ ಭೇಟಿ ನೀಡಿದ್ದರು. ಇವರ ಹೆಸ್ರಲ್ಲಿ ಆಸ್ಪತ್ರೆ ಸಹ ಈ ಗ್ರಾಮದಲ್ಲಿದೆ. ಖಮೇನಿ ಅಂದ್ರೆ ಇಲ್ಲಿನ ಜನರಿಗೆ ಪೂಜ್ಯ ಮತ್ತು ಗೌರವ ಭಾವ. ಹಾಗಾಗಿ ಅವರ ಸಾವಿನ ಸುದ್ದಿಯಿಂದ ಅಲೀಪುರ ಸ್ತಬ್ಧವಾಗಿದೆ. ಇನ್ನೂ ಅಲೀಪುರದ ಕೆಲವರು ಧಾರ್ಮಿಕ ಶಿಕ್ಷಣ ಪಡೆಯುವ ಸಲುವಾಗಿ ಇರಾನ್ ನಲ್ಲಿ ನೆಲೆಸಿದ್ದಾರೆ. ಕೆಲ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಇರಾನ್‌ನಲ್ಲಿ ಯುದ್ಧ (War In Iran) ಸಂಭವಿಸಿದಾಗಲೆಲ್ಲಾ ಇಲ್ಲಿನ ಜನರ ಹೃದಯ ಕಲುಕುತ್ತೆ. ತಮ್ಮವರಿಗೆ ಏನಾಯ್ತೋ ಅನ್ನೋ ಆತಂಕ ಮನೆ ಮಾಡುತ್ತೆ. ಸದ್ಯ ಅಲೀಪುರ ಗ್ರಾಮ ಮೌನಕ್ಕೆ ಜಾರಿದ್ದು, ಇಲ್ಲಿನ ಜನ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

Source link

ವಿಚ್ಛೇದನಕ್ಕೆ ಅರ್ಜಿ: ವಿಜಯ್ ಪತ್ನಿ ಇಟ್ಟಿರುವ ಬೇಡಿಕೆಗಳೇನು? – Kannada News | Thalapathy Vijay wife Sangeetha divorce alimony demands details

ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ವಿಜಯ್ ಅವರು ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದೇ ಸಮಯದಲ್ಲಿ ವಿಜಯ್ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದು ವಿಜಯ್​​ಗೆ ರಾಜಕೀಯವಾಗಿ ಸಣ್ಣ ಹಿನ್ನಡೆ ಮೂಡಿಸಿದೆ. ವಿಚ್ಚೇದನಕ್ಕೆ ಅರ್ಜಿ ಹಾಕಿರುವ ಸಂಗೀತ, ವಿಜಯ್ ಎದುರು ಭಾರಿ ಬೇಡಿಕೆಗಳನ್ನು ಇರಿಸಿದ್ದಾರೆ. ವಿಚ್ಛೇದನಕ್ಕಾಗಿ ಭಾರಿ ಮೊತ್ತವನ್ನೇ ವಿಜಯ್ ಅವರು ಪತ್ನಿಗೆ ನೀಡಬೇಕಿದೆ.

ವಿಚ್ಚೇದನಕ್ಕೆ ಕಳೆದ ವರ್ಷ ಡಿಸೆಂಬರ್​​ನಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯಲ್ಲಿ ಸಂಗೀತ ವಿವರಿಸಿರುವಂತೆ ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದ್ದು, ಆ ಮಾಹಿತಿ ಸಂಗೀತಾ ಅವರಿಗೆ 2021ರಲ್ಲಿ ತಿಳಿದು ಬಂತಂತೆ. ಪತಿಗೆ ವಿವಾಹೇತರ ಸಂಬಂಧ ಇರುವ ಕಾರಣವನ್ನು ಪರಿಗಣಿಸಿ ತಮಗೆ ವಿಚ್ಛೇದನ ಕೊಡಿಸುವಂತೆ ಸಂಗೀತ ಬೇಡಿಕೆ ಇರಿಸಿದ್ದು, ಜೊತೆಗೆ ಜಿವನಾಂಶ ಹಾಗೂ ಇತರೆ ಬೇಡಿಕೆಗಳನ್ನು ಸಹ ಇರಿಸಿದ್ದಾರೆ.

ವಿಜಯ್ ಪತ್ನಿ, ತಮ್ಮ ಹಾಗೂ ತಮ್ಮ ಮಕ್ಕಳ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಜೀವನಾಂಶ ಕೊಡಿಸುವಂತೆ ಬೇಡಿಕೆ ಇರಿಸಿದ್ದಾರೆ. ತಮ್ಮ ಪ್ರಸ್ತುತ ಸಾಮಾಜಿಕ ಸ್ಟೇಟಸ್​​ಗೆ ತಕ್ಕಂತೆ ಜೀವನ ನಿರ್ವಹಿಸುವುದನ್ನು ಪರಿಗಣಿಸಿ ಜೀವನಾಂಶ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ ವಿಚ್ಚೇದನ ಪ್ರಕ್ರಿಯೆ ಪೂರ್ಣ ಆಗುವವರೆಗೆ ತಮಗೆ ಈಗಿರುವ ಮನೆಯಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದಾರೆ. ಜೊತೆಗೆ ಮಗ ಮತ್ತು ಮಗಳ ಭವಿಷ್ಯದ ದೃಷ್ಟಿಯಿಂದ (ಶಿಕ್ಷಣ, ಮದುವೆ ಇತ್ಯಾದಿ) ಹಣದ ಭವಿಷ್ಯ ನಿಧಿ ಮಾಡಿಸಿಕೊಡಬೇಕು ಎಂದು ಸಹ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?

ವಿಜಯ್ ಹಾಗೂ ಸಂಗೀತ ಅವರು 1999 ರಲ್ಲಿ ವಿವಾಹವಾಗಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇವರಿಗಿದೆ. ಮಗ ಈಗಾಗಲೇ ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇದೀಗ ಬರೋಬ್ಬರಿ 27 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಪತ್ನಿ ಸಂಗೀತ ನಿರ್ಧರಿಸಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇರುವ ಬಗ್ಗೆ ಈ ಹಿಂದೆಯೂ ಸುದ್ದಿಗಳು ಹರಿದಾಡಿದ್ದವು. ವಿಜಯ್ ಅವರಿಗೆ ನಟಿ ತ್ರಿಷಾ ಜೊತೆಗೆ ಸಂಬಂಧ ಇದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್ – Kannada News | Actor Vinay Rajkumar takes part in Karnataka State Police run in Mysore

ನಟ ವಿನಯ್ ರಾಜ್​ಕುಮಾರ್ (Vinay Rajkumar) ಅವರು ಮೈಸೂರಿನಲ್ಲಿ ನಡೆದ ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್​ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಇದರಲ್ಲಿ ಭಾಗವಹಿಸಿದ್ದಕ್ಕೆ ಖುಷಿ ಆಗುತ್ತಿದೆ. ನಮ್ಮ ಪೊಲೀಸ್, ನಮ್ಮ ಹೆಮ್ಮೆ ಎಂಬ ಟ್ಯಾಗ್ ಲೈನ್ ಕೇಳಲು ಬಹಳ ಖುಷಿ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಇತ್ತೀಚೆಗೆ ಮೈಸೂರಲ್ಲಿ ಪೊಲೀಸರು ದೊಡ್ಡ ಡ್ರಗ್ಸ್ (Drugs) ಜಾಲ ಪತ್ತೆ ಮಾಡಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಕೆಲವರು ಮನರಂಜನೆಗೆ, ಕೆಲವರು ನೋವಿಗೆ ಡ್ರಗ್ಸ್ ಸೇವಿಸುತ್ತಾರೆ. ಅಂಥವರನ್ನು ರಿಹ್ಯಾಬ್ ಸೆಂಟರ್​​ಗೆ ಕಳಿಸಬೇಕು’ ಎಂದಿದ್ದಾರೆ ವಿನಯ್ ರಾಜ್​ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಖಮೇನಿ ಹತ್ಯೆ ಖಂಡಿಸಿ ಕರಾಚಿಯಲ್ಲಿ ಹಿಂಸಾಚಾರ, ಅಮೆರಿಕ ರಾಯಭಾರಿ ಕಚೇರಿ ಮೇಲೆ ದಾಳಿ, 10 ಮಂದಿ ಸಾವು – Kannada News | US Israel Strike Kills Khamenei: Karachi Embassy Attacked Amidst Iran Vows Retaliation

ಕರಾಚಿ, ಮಾರ್ಚ್​ 01: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್(Iran) ಮೇಲೆ ವೈಮಾನಿಕ ದಾಳಿ ನಡೆಸಿದ ಪರಿಣಾಮ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಈ ಹತ್ಯೆಯನ್ನು ಖಂಡಿಸಿ, ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕರಾಚಿಯಲ್ಲಿರುವ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೈಯಲ್ಲಿ ಕೋಲು ಹಾಗೂ ಕಲ್ಲುಗಳನ್ನು ಹಿಡಿದಿದ್ದ ನೂರಾರು ಜನರ ಗುಂಪು ರಾಯಭಾರಿ ಕಚೇರಿಯತ್ತ ನುಗ್ಗಿ ಕಲ್ಲು ತೂರಾಟ ನಡೆಸಿತು.

ಇರಾನ್ ನಾಯಕನ ಹತ್ಯೆಗೆ ಅಮೆರಿಕವೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಭದ್ರತಾ ಪಡೆಗಳು ಓಪನ್ ಫೈರಿಂಗ್ ಮಾಡಿದ್ದಾರೆ. ಅಮೆರಿಕ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಟ್ರಂಪ್ ಈ ಕುರಿತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಿದರೆ ನೀವು ಎಂದೂ ಕಂಡರಿಯದ ರೀತಿಯಲ್ಲಿ ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಹಲವೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರಾಚಿಯಲ್ಲಿ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಪ್ರದೇಶವನ್ನು ಅಸ್ಥಿರಗೊಳಿಸಲು ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅಮೆರಿಕ-ಇಸ್ರೇಲ್ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Video: ಇರಾನ್ ಸರ್ವೋಚ್ಚ ನಾಯಕ ಖಮೇನಿಯ ಸಾವು ಘೋಷಿಸುವಾಗ ಕಣ್ಣೀರು ಹಾಕಿದ ಇರಾನ್ ಟಿವಿ ನಿರೂಪಕ

ಈಗ, ಇರಾನ್ ಈ ದಾಳಿಗಳಿಗೆ ಬಲವಾದ ಪ್ರತ್ಯುತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಇದು ಈ ಪ್ರದೇಶದಲ್ಲಿನ ಅನೇಕ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ, ಈ ಕ್ರಮವು ಹೆಚ್ಚಿನ ಗಲ್ಫ್ ರಾಷ್ಟ್ರಗಳನ್ನು ಕೆರಳಿಸಿದೆ, ಅವರು ಈ ಕೃತ್ಯವನ್ನು ಖಂಡಿಸಿದ್ದಾರೆ.

ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಸುಪ್ರೀಂ ಲೀಡರ್ ಅವರ ಎರಡನೇ ಮಗ ಮೊಜ್ತಬಾ ಖಮೇನಿ ಅವರು ಅತ್ಯಂತ ಸಂಭಾವ್ಯ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. 1969 ರಲ್ಲಿ ಜನಿಸಿದ ಮೊಜ್ತಬಾ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮತ್ತು ಇರಾನ್‌ನ ಕ್ಲೆರಿಕಲ್ ಸ್ಥಾಪನೆ ಎರಡರೊಂದಿಗೂ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಇರಾನ್-ಇರಾಕ್ ಯುದ್ಧದ ಅಂತಿಮ ಹಂತಗಳಲ್ಲಿ ಸೇವೆ ಸಲ್ಲಿಸಿದರು ಮತ್ತು ಈಗ ತೆರೆಮರೆಯಲ್ಲಿ ಬಲವಾದ ಪ್ರಭಾವ ಹೊಂದಿರುವ ಮಧ್ಯಮ ಶ್ರೇಣಿಯ ಧರ್ಮಗುರುವಾಗಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ! – Kannada News | D.K. Shivakumar Expresses Concern Over Kannadigas Stranded Amidst Middle East Conflict

ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಡಿಸಿಎಂ ಮಾತು; ಶಾಸಕರೇ ಕಾಂಟ್ಯಾಕ್ಟ್​ಗೆ ಸಿಗ್ತಿಲ್ಲ ಅಂದ್ರೆ ಏನು ಗತಿ!

ಬೆಂಗಳೂರು, ಮಾರ್ಚ್ 01: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದುಬೈ ಹಾಗೂ ಇರಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar) ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಸಿಲುಕಿಕೊಂಡಿರುವವರೊಂದಿಗೆ ಸ್ವತಃ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲವೆಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಇಬ್ಬರು ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ ಕೂಡ ದುಬೈನಲ್ಲಿ ಇದ್ದಾರೆ. ನಾನು ಸಂಪರ್ಕಕ್ಕೆ ಪ್ರಯತ್ನಪಡುತ್ತಿದ್ದೇನೆ. ಆದರೆ ಕಾಂಟ್ಯಾಕ್ಟ್‌ಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ದೆಹಲಿ ರೆಸಿಡೆಂಟ್ ಕಮಿಷನರ್ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲ ನಾಗರಿಕರ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.ಅಲ್ಲಿ ಲಕ್ಷಾಂತರ ಭಾರತೀಯರು ಇದ್ದಾರೆ. ಕರ್ನಾಟಕ ಮತ್ತು ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?

ನಡೆಯುತ್ತಿರುವ ದಾಳಿಗಳನ್ನು ಖಂಡಿಸಿದ ಡಿಸಿಎಂ, ಮಕ್ಕಳ ಶಾಲೆಗಳ ಮೇಲಿನ ದಾಳಿಗಳು ಖಂಡನೀಯ ಎಂದು ಹೇಳಿದರು. ನಮ್ಮ ದೇಶ ಶಾಂತಿಯನ್ನು ನಂಬುತ್ತದೆ. ಇಂತಹ ದಾಳಿಗಳು ಸರಿಯಲ್ಲ. ಆದರೆ ನಾವು ಆತಂಕಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹೇರಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರದಿಂದ ಪ್ರತ್ಯೇಕ ಹೆಲ್ಪ್‌ಲೈನ್ ಆರಂಭಿಸುವ ಸಾಧ್ಯತೆ ಇಲ್ಲ, ಏನೇ ಮಾಹಿತಿ ಬಂದರೂ ವಿದೇಶಾಂಗ ಇಲಾಖೆಯಿಂದಲೇ ಬರಬೇಕು ಎಂದ ಅವರು, ಕನ್ನಡ ಸಂಘಟನೆಗಳು ಸಿಲುಕಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version