Headlines

ಶುಲ್ಕ ಬಾಕಿ ಆರೋಪ: ವಿದ್ಯಾರ್ಥಿನಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಲ್ ಟಿಕೆಟ್ ನಿರಾಕರಿಸಿದ ಕಾಲೇಜು – Kannada News | BAGSS College Denies 2nd PUC Exam Hall Ticket Over Unpaid Fees in Ranebennur

ಹಾವೇರಿ, ಫೆಬ್ರವರಿ 28: ಶುಲ್ಕ ಬಾಕಿ ಇರುವ ಕಾರಣ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಿಎಜಿಎಸ್ಎಸ್ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿರುವ ಆರೋಪ ಕೇಳಿಬಂದಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಸಾರಾ, 30 ಸಾವಿರ ರೂಪಾಯಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಶುಲ್ಕ ಪಾವತಿಸಿದರೆ ಮಾತ್ರ ಹಾಲ್ ಟಿಕೆಟ್ ನೀಡುವುದಾಗಿ ಕಾಲೇಜು ಆಡಳಿತ ಮಂಡಳಿ ಹೇಳಿದೆ. ಈ ನಿರ್ಧಾರದಿಂದ ವಿದ್ಯಾರ್ಥಿನಿಯ ಭವಿಷ್ಯ ಅತಂತ್ರಗೊಂಡಿದ್ದು, ಒಂದು ವರ್ಷ ನಷ್ಟವಾಗುವ ಭೀತಿ ಎದುರಾಗಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ…

Read More

ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ! ಪತ್ನಿಯೇ ಕೊಂದಿರುವ ಶಂಕೆ – Kannada News | Chikkaballapur:Man’s Body found Hanging, Wife suspected of murder

ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ! ಪತ್ನಿಯೇ ಕೊಂದಿರುವ ಶಂಕೆ ಚಿಕ್ಕಬಳ್ಳಾಪುರ, ಫೆಬ್ರವರಿ 28: ಜಿಲ್ಲೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕಿದ್ದು, ಸಾಕಷ್ಟು ಅನುಮಾನ ಹುಟ್ಟಿಹಾಕಿದೆ. ಪತ್ನಿಯ ಅಕ್ರಮ ಸಂಬಂಧದಿಂತ (Affair) ಬೇಸತ್ತಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಆತನ ಪತ್ನಿಯೇ ಅವನ ಕೊಲೆ ಮಾಡಿದ್ದಾಳೋ ಎಂಬೆಲ್ಲಾ ಅನುಮಾನಗಳು ಉದ್ಭವವಾಗಿದ್ದು, ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಪತಿ ಚಿಕ್ಕಬಳ್ಳಾಪುರ…

Read More

Lunar Eclipse 2026: ಮಾ.03 ಚಂದ್ರಗ್ರಹಣ; ಮಕರ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Effects on Capricorn by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರಲ್ಲಿ ಸಂಭವಿಸಲಿರುವ ಗ್ರಸ್ತೋದಯ ಪಾಕ್ಷಿಕ ಕೇತುಗ್ರಸ್ತ ಚಂದ್ರಗ್ರಹಣದ ಕುರಿತು ಮಕರ ರಾಶಿಯವರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಉತ್ತರಾಷಾಢ, ಶ್ರವಣ, ಧನಿಷ್ಠ ನಕ್ಷತ್ರದವರು ಈ ರಾಶಿಗೆ ಸೇರುತ್ತಾರೆ. ಮಕರ ರಾಶಿಯವರಿಗೆ ಈ ಗ್ರಹಣವು ಎಂಟನೇ ಮನೆಯಲ್ಲಿ (ಅಷ್ಟಮ ಸ್ಥಾನ) ಸಂಭವಿಸುತ್ತಿರುವುದರಿಂದ ಕೆಲವು ಜಾಗ್ರತೆಗಳನ್ನು ವಹಿಸುವುದು ಅನಿವಾರ್ಯ. ವಾಹನ ಚಾಲನೆ, ಸಂಭಾಷಣೆ ಮತ್ತು ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರದಿಂದಿರಬೇಕು. ಆತುರದ ನಿರ್ಧಾರಗಳಿಂದ ತೊಂದರೆಗಳು ಎದುರಾಗಬಹುದು. ಗ್ರಹಣದ…

Read More

ದರ್ಶನ್ ವಿರುದ್ದ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ; ನಡೆಯಲಿದೆ ಬೃಹತ್ ಪ್ರತಿಭಟನೆ – Kannada News | A big Protest to Take Place against fake document created against Darshan

ಎಸಿಪಿ ಚಂದನ್ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ಅಮಾನತಿಗೆ ಆಗ್ರಹ ಕೇಳಿ ಬಂದಿದೆ. ರೇಣುಕಾಸ್ವಾಮಿ‌ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಇವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 11ರಂದು ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ನಟರಾಜ್ ಬೊಮ್ಮಸಂದ್ರ ಮಾಹಿತಿ ನೀಡಿದ್ದಾರೆ. ಅವರು ನೀಡಿದ ವಿವರಣೆ ಮೇಲಿನ…

Read More

ಇರಾನ್ ರಾಜಧಾನಿ ಟೆಹರಾನ್​ ಮೇಲೆ ಇಸ್ರೇಲ್​​ನಿಂದ ಕ್ಷಿಪ್ಪಣಿ ದಾಳಿ: – Kannada News | ​Israel Strikes Tehran: Missile Attacks Escalate Iran Israel Conflict

ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ದಾಳಿImage Credit source: Google ಟೆಹರಾನ್​, ಫೆಬ್ರವರಿ 28: ಇರಾನ್​​ ಮತ್ತು ಇಸ್ರೇಲ್​​ ನಡುವೆ ಯುದ್ಧದ ಕಾರ್ಮೋಡ ಹೆಚ್ಚಿದ್ದು, ಇರಾನ್ ರಾಜಧಾನಿ ಟೆಹರಾನ್​ ನಗರದ ಮೇಲೆ ಇಸ್ರೇಲ್​​ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಭವನ ಗುರಿಯಾಗಿಸಿ ಈ ಅಟ್ಯಾಕ್​​ ನಡೆದಿದ್ದು, ಟೆಹರಾನ್​ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿವೆ. ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್…

Read More

ಅಭಿಮಾನಿಯಾಗಿ ಬಂದು ಸಂಗೀತಾ, ವಿಜಯ್​​ನ ಮದುವೆ ಆಗಿದ್ದು ಹೇಗೆ? ಯಾವ ಸಿನಿಮಾಗೂ ಕಡಿಮೆ ಇಲ್ಲ – Kannada News | Thalapathy Vijay Divorce: A Cute love story Of Sangeetha and Thalapathy Vijay

ತಮಿಳು ನಟ ಮತ್ತು ರಾಜಕಾರಣಿ ವಿಜಯ್ ಅವರ ವೈಯಕ್ತಿಕ ಜೀವನವು ಪ್ರಸ್ತುತ ಸುದ್ದಿಯಲ್ಲಿದೆ. ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ವರದಿಗಳ ಪ್ರಕಾರ, ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ತಮಿಳುನಾಡಿನ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 26 ವರ್ಷಗಳ ನಂತರ, ವಿಜಯ್ ಅವರ ಸಂಸಾರ ಕೊನೆ ಆಗುತ್ತಿದೆ. ಇವರ ಲವ್​​ಸ್ಟೋರಿ ವಿಚಿತ್ರವಾಗಿ ಆರಂಭ ಆಯಿತು. ಆ ಬಗ್ಗೆ ಇಲ್ಲಿದೆ ವಿವರ. ವಿಜಯ್ ಮತ್ತು ಸಂಗೀತಾ ಆಗಸ್ಟ್ 25, 1999 ರಂದು ವಿವಾಹವಾದರು ಮತ್ತು ಅವರಿಗೆ ಜೇಸನ್…

Read More

13 ಓವರ್​ಗಳ ಲೆಕ್ಕಾಚಾರ ಪಾಕ್ ಪಾಲಿಗೆ ಕಷ್ಟಸಾಧ್ಯ! – Kannada News | Pakistan cannot chase a big score within 13 overs

T20 World Cup 2026: ಟಿ20 ವಿಶ್ವಕಪ್​ನ 50ನೇ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ. ಲಂಕಾದ ಪಲ್ಲೆಕೆಲೆಯಲ್ಲಿ ನಡೆಯಲಿರುವ ಈ ಪಂದ್ಯವು ಪಾಕಿಸ್ತಾನ್ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಪಾಕ್ ತಂಡ ಸೆಮಿಫೈನಲ್​ಗೇರಲಿದೆ. ಇಲ್ಲಿ ಅಮೋಘ ಗೆಲುವಂದರೆ ಶ್ರೀಲಂಕಾ ವಿರುದ್ಧ ಕನಿಷ್ಠ 64 ರನ್​ಗಳ ಜಯ ಸಾಧಿಸಲೇಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ ಕನಿಷ್ಠ 40 ಎಸೆತಗಳು ಬಾಕಿಯಿರುವಂತೆ ಪಂದ್ಯ ಮುಗಿಸಬೇಕು. ಅಂದರೆ 13 ಓವರ್​ಗಳಲ್ಲಿ ಚೇಸ್ ಮಾಡುವುದು…

Read More

ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ! – Kannada News | Belagavi Shocker: Equitas Finance Seizes Home, Family with Infant Forced to Street

ಫೈನಾನ್ಸ್ ಕಿರುಕುಳಕ್ಕೆ ಮೂರು ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದ ಕುಟುಂಬ! ಬೆಳಗಾವಿ, ಫೆಬ್ರವರಿ 28: ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ (Finance Company) ಕಿರುಕುಳದಿಂದ ಒಂದು ಕುಟುಂಬ ಬೀದಿಗೆ ಬಿದ್ದ ಘಟನೆ ನಡೆದಿದೆ. ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಮನೆ ಸೀಜ್ ಮಾಡಲಾಗಿದ್ದು, ಮೂರು ತಿಂಗಳ ಹಸುಗೂಸು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ. ತಂದೆಯ ಚಿಕಿತ್ಸೆಗಾಗಿ ಸಾಲ ಹನುಮಂತ ಪಾಟೀಲ್ ಎಂಬುವವರು…

Read More

ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಅವಧಿ ವಿಸ್ತರಣೆ: ಮಹತ್ವದ ಆದೇಶ – Kannada News | Karnataka: Boards, Corporations, Authorities Chairmen’s Tenure Extended by Govt Order

ಬೆಂಗಳೂರು, ಫೆಬ್ರವರಿ 28: ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನಾಮನಿರ್ದೇಶನಗೊಂಡಿದ್ದ ಅಧ್ಯಕ್ಷರ ಅವಧಿ ವಿಸ್ತರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಆದೇಶ ಮಾಡಲಾಗಿದೆ. ಈಗಾಗಲೇ ಅವಧಿ ಮುಕ್ತಾಯಗೊಂಡ ಮತ್ತು ಮುಕ್ತಾಯಗೊಳ್ಳಲಿರುವ ಪ್ರಾಧಿಕಾರಗಳ ಅಧ್ಯಕ್ಷರುಗಳ ಇದು ಅನ್ವಯವಾಗಲಿದ್ದು, ಅಧ್ಯಕ್ಷರು ಕಾರ್ಯನಿರ್ವಹಿಸಲು ಅಧಿಸೂಚನೆ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ಆದೇಶದಲ್ಲಿ ಏನಿದೆ? ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನಾಮನಿರ್ದೇಶನಗೊಂಡ ಅಧ್ಯಕ್ಷರುಗಳ ಮುಕ್ತಾಯಗೊಂಡ/ಮುಕ್ತಾಯಗೊಳ್ಳಲಿರುವ ಅವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರಿಸಲಾಗಿದೆ. ಈ ಆದೇಶದ ಅನ್ವಯ…

Read More

ದ್ವೇಷದ ಮಧ್ಯೆಯೂ ದಾಖಲೆ ಬರೆದ ರಶ್ಮಿಕಾ-ವಿಜಯ್ ವಿವಾಹ – Kannada News | Rashmika Vijay Deverakonda Wedding: Instagram Record Shattered, Fan Love Triumphs

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಒಂದು ವರ್ಗದ ಜನರು ರಶ್ಮಿಕಾನ ಟೀಕಿಸಲು ಆರಂಭಿಸಿದರು. ರಶ್ಮಿಕಾ ಅವರು ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ರದ್ದು ಮಾಡಿಕೊಂಡಿದ್ದನ್ನು ನೆನಪಿಸಿಕೊಂಡು ತಕರಾರು ತೆಗೆದಿದ್ದರು. ದ್ವೇಷದ ಸಂದೇಶಗಳನ್ನು ಹಬ್ಬಿಸಿದ್ದರು. ಇದರ ಮಧ್ಯೆಯೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇನ್​​ಸ್ಟಾಗ್ರಾಮ್ ಪೋಸ್ಟ್ ಹೊಸ ದಾಖಲೆಯನ್ನೇ ಬರೆದಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಿತು. ರಾಜರ…

Read More