CWG 2026: ಭಾರತೀಯ ಬಾಕ್ಸರ್​ಗಳ ಪಂಚ್​​ಗೆ 7 ಚಿನ್ನದ ಪದಕ! – Kannada News | 7 Gold Medals: Indian Boxers Dominate in Commonwealth Games

ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ (ಆಗಸ್ಟ್ 1) ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಒಂದೇ ದಿನ ಗೆದ್ದ ಪದಕಗಳ ಸಂಖ್ಯೆ ಬರೋಬ್ಬರಿ 16. ಈ ಹದಿನಾರು ಪದಕಗಳಲ್ಲಿ 8 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಮೆಡಲ್​ಗಳು ಇರುವುದು ವಿಶೇಷ.

ಚಿನ್ನಕ್ಕೆ ಬಾಕ್ಸರ್​ಗಳ ಪಂಚ್:

ಶನಿವಾರ ನಡೆದ ಬಾಕ್ಸಿಂಗ್ ಫೈನಲ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 7 ಚಿನ್ನದ ಪದಕ ಗೆದ್ದಿದ್ದಾರೆ. ಇದರಲ್ಲಿ ಐದು ಚಿನ್ನದ ಪದಕ ತಂದುಕೊಟ್ಟಿರುವುದು ಮಹಿಳಾ ಬಾಕ್ಸರ್​ಗಳು ಎಂಬುದು ಹೆಮ್ಮೆಯ ವಿಷಯ.

  • ಪ್ರೀತಿ ಪವಾರ್ (54 ಕೆಜಿ)
  • ಜೈಸ್ಮಿನ್ ಲ್ಯಾಂಬೋರಿಯಾ (60 ಕೆಜಿ)
  • ಸಾಕ್ಷಿ ಚೌಧರಿ (51 ಕೆಜಿ)
  • ಪ್ರಿಯಾ ಘಂಘಾಸ್ (60 ಕೆಜಿ)
  • ಅರುಂಧತಿ ಚೌಧರಿ (70 ಕೆಜಿ)

ಇನ್ನು ಪುರುಷರ ವಿಭಾಗದ ಬಾಕ್ಸಿಂಗ್​ನಲ್ಲೂ ಎರಡು ಪದಕಗಳು ದೊರೆತಿವೆ. ಈ ಪದಕಗಳನ್ನು ತಂದುಕೊಟ್ಟಿರುವುದು…

  • ಸಚಿನ್ ಸಿವಾಚ್  (ಪುರುಷರ 60 ಕೆಜಿ ವಿಭಾಗ)
  • ಅಂಕುಶ್ ಪಂಘಾಲ್  (ಪುರುಷರ 80 ಕೆಜಿ ವಿಭಾಗ)

ಮೂವರಿಗೆ ಬೆಳ್ಳಿ ಪದಕ:

ಬಾಕ್ಸಿಂಗ್ ರಿಂಗ್​ನಲ್ಲಿ ಏಳು ಮಂದಿ ಚಿನ್ನದ ಪದಕ ಗೆದ್ದರೆ, ಮೂವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

  • ಲವ್ಲಿನಾ ಬೊರ್ಗೊಹೈನ್ (ಮಹಿಳೆಯ 70 ಕೆ.ಜಿ)
  • ಜಾದುಮಣಿ ಸಿಂಗ್ (ಪುರುಷರ 55 ಕೆಜಿ)
  • ನರೇಂದರ್ ಬರ್ವಾಲ್ (ಪುರುಷರ 90 ಕೆಜಿ)

ಸೋಮನ್ ರಾಣಾಗೆ ಚಿನ್ನ:

ಬಾಕ್ಸಿಂಗ್ ಮಾತ್ರವಲ್ಲದೆ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲೂ ಭಾರತೀಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪುರುಷರ ಶಾಟ್‌ಪುಟ್ F57 (ಪ್ಯಾರಾ ಅಥ್ಲೆಟಿಕ್ಸ್) ಸ್ಪರ್ಧೆಯಲ್ಲಿ ಭಾರತದ ಸೋಮನ್ ರಾಣಾ ಚಿನ್ನದ ಪದಕ ಗೆದ್ದರೆ, ಸಹ ಆಟಗಾರ ಶುಭಂ ಜುಯಲ್ ಬೆಳ್ಳಿ ಪದಕ ಗೆದ್ದು ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಎರಡು ಭಾರತದ ಧ್ವಜಗಳು ಹಾರಾಡುವಂತೆ ಮಾಡಿದರು.

ಟ್ರಿಪಲ್ ಜಂಪ್‌ನಲ್ಲಿ ಎರಡು ಪದಕ:

ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

ದಾಖಲೆ ಬರೆದ ಗುಲ್ವೀರ್ ಸಿಂಗ್:

ಪುರುಷರ 5000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದರು. ಇದರೊಂದಿಗೆ, ಗ್ಲಾಸ್ಗೋ 2026ರ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಗುಲ್ವೀರ್ 10,000 ಮೀಟರ್ ಓಟದ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1

ಜೂಡೋದಲ್ಲಿ ಪದಕ:

ಮಹಿಳೆಯರ 63 ಕೆಜಿ ಜೂಡೋ ವಿಭಾಗದಲ್ಲಿ ಉನ್ನತಿ ಶರ್ಮಾ ಕಂಚಿನ ಪದಕ ಗೆದ್ದು ಭಾರತದ ಪದಕದ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದರು. ಈ ಭರ್ಜರಿ ಪದಕದ ಬೇಟೆಯೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 39 ಕ್ಕೇರಿದೆ.

Published On – 7:33 am, Sun, 2 August 26

Source link

ಧ್ರುವ್ ವಿಕ್ರಮ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್ – Kannada News | Crazy Kalyanam Actress Anupama Parameswaran reacts to Breakup rumour with Dhruv Vikram

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿರುವ ತಮ್ಮ ಬ್ರೇಕಪ್ (Breakup) ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಕಳೆದ ಒಂದು ವರ್ಷ ತಮಗೆ ಭಾವನಾತ್ಮಕವಾಗಿ ಅತ್ಯಂತ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅನುಪಮಾ ಪರಮೇಶ್ವರನ್ ಅವರು ‘ಕ್ರೇಜಿ ಕಲ್ಯಾಣಂ’ (Crazy Kalyanam) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದರು.

‘ನನಗಾಗಿ ಜೀವಿಸಲು ನಿರ್ಧರಿಸಿದ್ದೇನೆ’

ತಮ್ಮ ವೈಯಕ್ತಿಕ ಜೀವನದ ಮೇಲಿನ ವದಂತಿಗಳನ್ನು ನೇರವಾಗಿ ಖಚಿತಪಡಿಸದ ಅಥವಾ ನಿರಾಕರಿಸದ ಅನುಪಮಾ, ‘ಕಳೆದ ಒಂದು ವರ್ಷ ಬಹಳ ಸವಾಲಿನಿಂದ ಕೂಡಿತ್ತು. ಈ ಹಂತದಲ್ಲಿ ನಾನು ನನ್ನನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದೆ. ಇಷ್ಟು ದಿನ ಬೇರೆಯವರಿಗಾಗಿ ಬದುಕುತ್ತಿದ್ದ ನಾನು, ಈಗ ನನಗಾಗಿ ಜೀವಿಸಲು ಮತ್ತು ನನ್ನ ಜೀವನದ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಲು ಆರಂಭಿಸಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಸ್ತುತ ತಾವು ನೆಮ್ಮದಿಯ ಜೀವನ ನಡೆಸುತ್ತಿದ್ದು, ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುವ ಬದಲು ಭವಿಷ್ಯದತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ವಿಚಾರವನ್ನೂ ಸಾರ್ವಜನಿಕವಾಗಿ ವಿವರಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಅನುಪಮಾ ಅವರು ಈಗ ಖುಷಿಯಾಗಿದ್ದಾರೆ ಎಂಬ ವಿಷಯವು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

ಧ್ರುವ್ ವಿಕ್ರಮ್ ಜೊತೆಗಿನ ವದಂತಿ:

‘ಬೈಸನ್’ ಸಿನಿಮಾದಲ್ಲಿ ತಮಿಳು ನಟ ಧ್ರುವ್ ವಿಕ್ರಮ್ ಅವರೊಂದಿಗೆ ಅನುಪಮಾ ನಟಿಸಿದ ನಂತರ ಇಬ್ಬರ ನಡುವೆ ಪ್ರೇಮಸಂಬಂಧವಿದೆ ಎಂಬ ವದಂತಿಗಳು ಬಲವಾಗಿದ್ದವು. ಇತ್ತೀಚೆಗೆ ಅನುಪಮಾ ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ್ ಅವರನ್ನು ಅನ್‌ಫಾಲೋ ಮಾಡಿದ್ದು ಹಾಗೂ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು. ಆದರೆ, ಈ ಜೋಡಿ ಈವರೆಗೆ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್​​ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

ಸಿನಿಮಾ ರಂಗದಲ್ಲೂ ಸವಾಲು:

ಅನುಪಮಾ ಕಳೆದ ವರ್ಷ ತೆಲುಗಿನಲ್ಲಿ ನಟಿಸಿದ್ದ ‘ಪರದಾ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತ್ತು. ಪ್ರಸ್ತುತ ಅವರು ‘ಕ್ರೇಜಿ ಕಲ್ಯಾಣಂ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ತರುಣ್ ಭಾಸ್ಕರ್, ನರೇಶ್, ಅಖಿಲ್ ರಾಜ್, ಕಿರೀಟಿ ಮುಂತಾದವರು ಅಭಿನಯಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾಸ್ಕೋ ರೆಸ್ಟೋರೆಂಟ್ ಬಳಿ ಬಾಂಬ್ ಸ್ಫೋಟ, ಬಾಂಬ್ ತಂದಿದ್ದ ಮಹಿಳೆ ಸೇರಿ ಮೂವರು ಸಾವು, 21 ಜನರಿಗೆ ಗಾಯ – Kannada News | Moscow Restaurant Bomb Blast: 3 Dead, 21 Injured in IED Attack

ಮಾಸ್ಕೋ, ಆಗಸ್ಟ್​ 02: ರಷ್ಯಾದ ರಾಜಧಾನಿ ಮಾಸ್ಕೋದ ಮಧ್ಯಭಾಗದಲ್ಲಿರುವ ಕುದ್ರಿನ್ಸ್ಕಾಯಾ ಚೌಕದ ಪ್ರಸಿದ್ಧ ‘ಬಾಲ್ಜಿ ರೊಸ್ಸಿ’ ರೆಸ್ಟೋರೆಂಟ್ ಹೊರಭಾಗದಲ್ಲಿ ಶನಿವಾರ ರಾತ್ರಿ  ಬಾಂಬ್ ಸ್ಫೋಟ(Bomb Blast) ಸಂಭವಿಸಿದೆ. ಸುಧಾರಿತ ಸ್ಫೋಟಕ ಸಾಧನ (IED) ಹೊತ್ತು ತಂದಿದ್ದ ಅಪರಿಚಿತ ಮಹಿಳೆ, ಆಕೆಯನ್ನು ತಡೆದ ಭದ್ರತಾ ಸಿಬ್ಬಂದಿ ಹಾಗೂ ಒಬ್ಬ ಗ್ರಾಹಕ ಸೇರಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು 21 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿ ತಿಳಿಸಿದೆ.

ಸ್ಫೋಟ ನಡೆದಿದ್ದು ಹೇಗೆ?

ಅಪರಿಚಿತ ಮಹಿಳೆಯೊಬ್ಬಳು ಕೈಯಲ್ಲಿ ಐಇಡಿ ಸ್ಫೋಟಕ ಸಾಧನವನ್ನು ಹಿಡಿದು ರೆಸ್ಟೋರೆಂಟ್ ಪ್ರವೇಶಿಸಲು ಯತ್ನಿಸಿದ್ದಾಳೆ. ಆ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಖಾಸಗಿ ಔತಣಕೂಟ ನಡೆಯುತ್ತಿದ್ದರಿಂದ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದು ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ರೆಸ್ಟೋರೆಂಟ್‌ನ ಪ್ರವೇಶದ್ವಾರದ ಹೊರಾಂಗಣ ಟೆರೇಸ್ ಬಳಿ ಸ್ಥಳೀಯ ಸಮಯ ರಾತ್ರಿ 8.10 ಕ್ಕೆ ಸ್ಫೋಟಕ ಅಕಾಲಿಕವಾಗಿ ಸ್ಫೋಟಗೊಂಡಿದೆ. ಸ್ಫೋಟವನ್ನು ಮಹಿಳೆ ಉದ್ದೇಶಪೂರ್ವಕವಾಗಿ ತಾನೇ ನಡೆಸಿದಳೇ ಅಥವಾ ಆಕಸ್ಮಿಕವಾಗಿ ಸ್ಫೋಟಗೊಂಡಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಮಹಿಳೆಯ ಗುರುತು ಹಾಗೂ ಈ ದಾಳಿಯ ಹಿಂದಿನ ನೈಜ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಮಾಸ್ಕೋ ತನಿಖಾ ಸಮಿತಿಯು ಘಟನಾ ಸ್ಥಳವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ವಿಧಿವಿಜ್ಞಾನ ತನಿಖೆ ಕೈಗೊಂಡಿದೆ.

ಮತ್ತಷ್ಟು ಓದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್: ದಾವಣಗೆರೆಯಲ್ಲಿ ಪೊಲೀಸರ ಕೈಗೆ ಸಿಕ್ಕ ಶಂಕಿತ ಉಗ್ರನಿಂದ ಸ್ಫೋಟಕ ಮಾಹಿತಿ

ಉಕ್ರೇನ್ ಯುದ್ಧ ಮತ್ತು ಮಾಸ್ಕೋ ಭದ್ರತೆ: ರಷ್ಯಾ-ಉಕ್ರೇನ್ ನಡುವೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಸ್ಕೋ ನಗರದಾದ್ಯಂತ ಡ್ರೋನ್ ದಾಳಿಗಳು ಹಾಗೂ ಆತ್ಮಾಹುತಿ ಸಂಚುಗಳ ಭೀತಿ ಹೆಚ್ಚಾಗಿತ್ತು. ಈ ಸ್ಫೋಟದ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಪಾಕಿಸ್ತಾನದ ತಂಗಮ ಜಿಲ್ಲೆಯಲ್ಲಿ ಉಗ್ರ ದಾಳಿ: ಇನ್ನೊಂದೆಡೆ, ಜುಲೈ 24ರಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಟ್ಯಾಂಕ್ ಜಿಲ್ಲೆಯ ಭದ್ರತಾ ಚೆಕ್‌ಪೋಸ್ಟ್ ಮೇಲೆ ಉಗ್ರರು ಸ್ಫೋಟಕ ತುಂಬಿದ ವಾಹನದಿಂದ ದಾಳಿ ನಡೆಸಿದ್ದರು. ಈ ಭೀಕರ ಆತ್ಮಾಹುತಿ ದಾಳಿಯಲ್ಲಿ 12 ಸೈನಿಕರು, ಇಬ್ಬರು ಪೊಲೀಸರು ಹಾಗೂ ಒಬ್ಬ ಸರ್ಕಾರಿ ಅಧಿಕಾರಿ ಸೇರಿ ಕನಿಷ್ಠ 15 ಜನರು ಮೃತಪಟ್ಟಿದ್ದರು. ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು 12 ಉಗ್ರರನ್ನು ಹೊಡೆದುರುಳಿಸಿದ್ದವು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather Forecast: ರಾಜ್ಯದಲ್ಲಿ ಹೆಚ್ಚಿದ ವರುಣಾರ್ಭಟ; ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್! – Kannada News | Karnataka Weather Update: Red Alert Issued for Heavy Rainfall Across State

ಬೆಂಗಳೂರು, ಆಗಸ್ಟ್ 02: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಭಾರೀ ಯಿಂದ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಪ್ರಚಂಡ ಮಳೆಯಾಗುವ ಮುನ್ಸೂಚನೆ ಇದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ.

ಎಲ್ಲೆಲ್ಲಿ ಯಾವ ಅಲರ್ಟ್?

  • ರೆಡ್ ಅಲರ್ಟ್: ಅತ್ಯಂತ ತೀವ್ರ ಸ್ವರೂಪದ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. ಈ ಭಾಗಗಳಲ್ಲಿ ನದಿಗಳು ಉಕ್ಕಿ ಹರಿಯುವ ಮತ್ತು ಗುಡ್ಡ ಕುಸಿಯುವ ಭೀತಿಯಿರುವುದರಿಂದ ಸಾರ್ವಜನಿಕರು ಎಚ್ಚರವಹಿಸುವಂತೆ ಸೂಚಿಸಲಾಗಿದೆ.
  • ಆರೆಂಜ್ ಅಲರ್ಟ್: ಕರಾವಳಿಯ ಉತ್ತರ ಕನ್ನಡ, ಉಡುಪಿ ಸೇರಿದಂತೆ ಬೆಳಗಾವಿ, ಧಾರವಾಡ, ಹಾವೇರಿ, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಜಾರಿಯಲ್ಲಿದೆ. ಇಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ನಿರಂತರ ಮಳೆಯಾಗಲಿದೆ.
  • ಯೆಲ್ಲೋ ಅಲರ್ಟ್: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಹಾಗೂ ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಗಾಳಿ

ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ.

ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳ ನಿವಾಸಿಗಳು ಹಾಗೂ ಮಲೆನಾಡಿನ ಪ್ರಯಾಣಿಕರು ಗರಿಷ್ಠ ಎಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ: ಕರಾವಳಿ-ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರ ವ್ಯತ್ಯಯ – Kannada News | Ghat Section Landslide: Several Bengaluru–Coastal Trains Cancelled After Track Blockage Near Yadakumari

ಬೆಂಗಳೂರು, ಆಗಸ್ಟ್​​ 02: ತೀವ್ರ ಮಳೆಯ ಪರಿಣಾಮ ಮೈಸೂರು ವಿಭಾಗದ ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ ಸುಮಾರು 8.45ರ ವೇಳೆಗೆ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಕರಾವಳಿ ಮತ್ತು ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ತಿಳಿಸಿದೆ. ಹಲವು ರೈಲುಗಳ ಸಂಚಾರ ರದ್ದಾಗಿ, ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಯಾವೆಲ್ಲ ರೈಲುಗಳ ಸಂಚಾರ ವ್ಯತ್ಯಯ?

  • ಆಗಸ್ಟ್​​ 01ರಂದು ಬೆಂಗಳೂರಿನಿಂದ ಹೊರಟಿದ್ದ ರೈಲು ಸಂಖ್ಯೆ 16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಹಾಸನದಲ್ಲಿ ಭಾಗಶಃ ರದ್ದಾಗಿದೆ.
  • ರೈಲು ಸಂಖ್ಯೆ 16511 KSR ಬೆಂಗಳೂರು – ಕೋಝಿಕ್ಕೋಡ್ ಎಕ್ಸ್‌ಪ್ರೆಸ್ ಪ್ರಯಾಣ ಕೂಡ ಹಾಸನದಲ್ಲಿ ಭಾಗಶಃ ರದ್ದಾಗಿದೆ.ನಿನ್ನೆ ವಿಜಯಪುರದಿಂದ ಆರಂಭವಾಗಿದ್ದ ರೈಲು ಸಂಖ್ಯೆ 17377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದಲ್ಲಿಯೂ ವ್ಯತ್ಯಯವಾಗಿದೆ.
  • ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸಕಲೇಶಪುರದಿಂದ ಕಾರವಾರ ನಡುವೆ ಭಾಗಶಃ ರದ್ದಾಗಿದೆ.
  • ರೈಲು ಸಂಖ್ಯೆ 16586 ಮುರುಡೇಶ್ವರ – SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಕೂಡ ಸುಬ್ರಹ್ಮಣ್ಯ ರಸ್ತೆ ಮತ್ತು SMVT ಬೆಂಗಳೂರಿನ ನಡುವೆ ಭಾಗಶಃ ರದ್ದಾಗಿದೆ.
  • ಆಗಸ್ಟ್​​ 01ರಂದು ಕೋಝಿಕ್ಕೋಡ್​​ನಿಂದ ಆರಂಭವಾದ ರೈಲು ಸಂಖ್ಯೆ 16512 ಕೋಝಿಕ್ಕೋಡ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವು ಬೆಂಗಳೂರು ನಿಲ್ದಾಣದ ಬದಲಿಗೆ ಕಬಕ ಪುತ್ತೂರಿನಲ್ಲಿ ಭಾಗಶಃ ರದ್ದಾಗಿದೆ.
  • ಮಂಗಳೂರು ಸೆಂಟ್ರಲ್ ನಿಂದ ಆರಂಭವಾದ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ಪ್ರಯಾಣವು ವಿಜಯಪುರ ನಿಲ್ದಾಣದ ಬದಲಿಗೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಭಾಗಶಃ ರದ್ದಾಗಿದೆ.
  • ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್​​ನ ಸಂಚಾರ ಕೂಡ ರದ್ದಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಭಾರಿ ಮಳೆ: ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ

ಭಾರೀ ಮಳೆಯಿಂದಾಗಿ ಪದೇ ಪದೇ ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ತೆರವು ಕೆಲಸ ನಡೆಯುತ್ತಿದ್ದು, ಹೆಚ್ಚುವರಿ ಹಿಟಾಚಿ ಯಂತ್ರಗಳನ್ನು ನಿಯೋಜಿಸಲಾಗಿದೆ. ನೈಋತ್ಯ ರೈಲ್ವೆ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದು, ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದ್ದಕ್ಕೆ ತೀವ್ರವಾಗಿ ವಿಷಾದಿಸುತ್ತೇವೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಸಂಕಷ್ಟ ಚತುರ್ಥಿಯ ವಿಶೇಷ ದಿನ! – Kannada News | Horoscope Today 2nd August​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 02, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚೌತಿ, ಪೂರ್ವಾಭಾದ್ರ ನಕ್ಷತ್ರ, ಅತಿಗಂಡ ಯೋಗ, ಭವಕರಣ ಇರ್ತಕ್ಕಂತ ಈ ದಿನವು ಸಂಕಷ್ಟ ಚತುರ್ಥಿಯಾಗಿ ವಿಶೇಷ ಮಹತ್ವವನ್ನು ಪಡೆದಿದೆ. ಸಂಕಷ್ಟ ಚತುರ್ಥಿಯಂದು ಆರೋಗ್ಯ, ಐಶ್ವರ್ಯ ಮತ್ತು ಸಾಲಬಾಧೆಗಳಂತಹ ಕಷ್ಟಗಳನ್ನು ಎದುರಿಸುವ ಶಕ್ತಿಗಾಗಿ ಪ್ರಾರ್ಥಿಸುವುದು ಶುಭವೆಂದು ಗುರೂಜಿ ತಿಳಿಸಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು… – Kannada News | Daily Horoscope for August 02, 2026: Dakshinayana Greeshma season, Ashada Masa Krishna Paksha Sunday astrology

ಮೇಷ ರಾಶಿ:

ಇಷ್ಟವಿಲ್ಲದ ಲೆಕ್ಕಾಚಾರವು ನಿಮ್ಮನ್ನೇ ಬಂಧು ಸುತ್ತಿಕೊಳ್ಳುವುದು. ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ಮಾನಸಿಕ ದ್ವಂದ್ವಗಳು ನಿಮ್ಮನ್ನು ಕಟ್ಟಿಹಾಕಬಹುದು. ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಯಾರನ್ನೂ ಅವಲಂಬಿಸಿರುವುದು ಇಷ್ಟವಾಗದು. ಬೇಕಾದವರನ್ನು ಮಾತ್ರ ಹತ್ತಿರ ಕರೆಯುವಿರಿ. ಬಿಡಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು.

ವೃಷಭ ರಾಶಿ:

ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವೂ ಲಭ್ಯವಾಗುವುದು. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಒತ್ತಡವನ್ನು ಕಳೆದುಕೊಳ್ಳುವ ಬಗ್ಗೆ ನಿಮಗೆ ಬೇಸರವಿರುವುದು. ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕಳೆದುಕೊಂಡ ವಸ್ತುವನ್ನು ಮರಳಿಪಡೆಯಲು ಶ್ರಮವಹಿಸುವಿರಿ.

ಮಿಥುನ ರಾಶಿ:

ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ ಮುಗಿಸಿ.‌ ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ತಂದೆಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಚರ್ವಿತಚರ್ವಣ ಎಂದು ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನ‌ಗೌರವದಿಂದ ಕೇಳಬೇಕಾಗಬಹುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ.

ಕರ್ಕಾಟಕ ರಾಶಿ:

ನೀವು ದುಶ್ಚಟದಿಂದ ದೂರವಿರಲು ಮನಸ್ಸು ಮಾಡುವಿರಿ. ಉದ್ಯೋಗದಲ್ಲಿ ಭಡ್ತಿಯನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಸಂತೋಷ ನೀಡುವ ವಾರ್ತೆ ಇರುತ್ತದೆ. ಸ್ನೇಹಿತರಿಗೋಸ್ಕರ ಖರ್ಚುಮಾಡಬೇಕಾಗಿ ಬರಬಹುದು. ಯಾರದೋ ಮೂಲಕ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತವಾದೀತು.

ಸಿಂಹ ರಾಶಿ:

ದೊಡ್ಡ ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ಬುದ್ಧಿವಂತಿಕೆಯ ಕಾರ್ಯವು ನಿಮ್ಮನ್ನು ರಕ್ಷಿಸುವುದು. ಇಂದು ಸಾಲ ಕೊಡುವುದೇ ಹೆಚ್ಚಾದೀತು. ಪುರುಷರಿಂದ ಏನಾದರೂ ತೊಂದರೆಗಳು ಬರಬಹುದು. ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಮನೆಯನ್ನು, ಮಕ್ಕಳನ್ನು ಮರೆಯಬಹುದು. ಉದರ ಬಾಧೆಯಿಂದ ಸಂಕಟಪಡಬೇಕಾಗುವುದು.

ಕನ್ಯಾ ರಾಶಿ:

ನಿಮ್ಮದಲ್ಲದ‌ ವಸ್ತುವನ್ನು ಪಡೆದಾಗ ಜೋಪಾನ‌ ಮಾಡುವುದು ಅವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ನಿಮಗೆ ಕೂಡಿಟ್ಟ ಹಣವು ಬರಲಿದ್ದು, ಅದನ್ನು ಸದುಪಯೋಗ ಮಾಡುವಿರಿ. ಕುಟುಂಬದಲ್ಲಿ ಹಿರಿಯರ ಮಾತನ್ನು ಅಲ್ಲಗಳೆಯಬಹುದು. ಕೃತಜ್ಞತೆಯು ನಿಮ್ಮ ಉನ್ನತ ಸ್ಥಾನಕ್ಕೆ ಕಾರಣವಾಗುವುದು.

ತುಲಾ ರಾಶಿ:

ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನೀವಾಡಿದ ಮಾತುಗಳು ಸತ್ಯಕ್ಕೆ ದೂರಾದುದಾಗಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ನಿಮ್ಮ ಮಾತನ್ನು ಇಂದು ಪೂರ್ಣ ನಂಬಲಾರರು. ಪಾಪಕೃತ್ಯದ ಬಗ್ಗೆ ನಿಮಗೆ ಭಯವು ಬರಬಹುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ನಿಮ್ಮನ್ನು ನೀವು ವಿಶೇಷವೆಂದು ಭಾವಿಸುವಿರಿ.

ವೃಶ್ಚಿಕ ರಾಶಿ:

ನಿಮ್ಮ ಬಳಿ ಇರುವ ಸಂಪತ್ತನ್ನು ಸಹಾಯಕ್ಕಾಗಿ ಕೊಟ್ಟು ಕಳೆದುಕೊಳ್ಳುವಿರಿ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ಯಾರನ್ನೂ ನೀವು ನೇರವಾಗಿ ಹೊಣೆಗಾರಿಕೆ ಮಾಡಲಾರಿರಿ. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.

ಧನು ರಾಶಿ:

ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯ ರಿಪೇರಿ ಮಾಡಿಸಲಿದ್ದೀರಿ. ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಅಹಂಕಾರ ಬೇಡ. ವೇಗದ ಕಾರ್ಯವನ್ನು ಮಾಡಿ ಎಲ್ಲವನ್ನೂ ಹಾಳುಮಾಡಿಕೊಳ್ಳುವಿರಿ. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.

ಮಕರ ರಾಶಿ:

ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಯಾರನ್ನೂ ಸಾಧರಣ‌ ಮನುಷ್ಯ ತಿಳಿದುಕೊಳ್ಳಬೇಡಿ. ವಿವಾಹದ ಮಾತುಕತೆಯಲ್ಲಿ ನಿಮ್ಮ ಅನರ್ಥದ ಮಾತು ವಿಘ್ನವನ್ನು ತಂದೀತು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.

ಕುಂಭ ರಾಶಿ:

ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ನಿಮ್ಮ ಏಳ್ಗೆಯನ್ನು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಚರಾಸ್ತಿಯನ್ನು ಸ್ಥಿರಾಸ್ತಿ ಮಾಡುವ ಯೋಚನೆ ಮಾಡುವಿರಿ. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ವಾತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ.

ಮೀನ ರಾಶಿ:

ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬಹುದು.‌ ಸಜ್ಜನರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕು ಎಂಬ ದೃಢನಿರ್ಧಾರದಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಧೃತಿ, ಕರಣ : ಕೌಲವ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:10 – 18:45, ಯಮಗಂಡ ಕಾಲ 12:26 – 14:01, ಗುಳಿಕ ಕಾಲ 15:36 – 17:10

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

40 ವರ್ಷಕ್ಕಿಂತ ಮೊದಲು ಮೆನೋಪಾಸ್ ಆದರೆ ಹೈ ಬಿಪಿ ಅಪಾಯ ಹೆಚ್ಚುತ್ತದೆಯೇ? ತಜ್ಞರು ಹೇಳಿರುವ ಸತ್ಯ ಸಂಗತಿ ಇಲ್ಲಿದೆ – Kannada News | High Blood Pressure After Early Menopause: Prevention Tips for Women

ಮಹಿಳೆಯರ ಜೀವನದಲ್ಲಿ ಮೆನೋಪಾಸ್ (Menopause) ಒಂದು ಸಹಜ ಜೈವಿಕ ಹಂತವಾಗಿದೆ. ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವೆ ಋತುಸ್ರಾವ ಶಾಶ್ವತವಾಗಿ ನಿಲ್ಲುವುದನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ. ಆದರೆ ಕೆಲ ಮಹಿಳೆಯರಲ್ಲಿ 40 ವರ್ಷಕ್ಕೂ ಮುನ್ನವೇ ಮೆನೋಪಾಸ್ ಸಂಭವಿಸಬಹುದು. ಇದನ್ನು ಅಕಾಲಿಕ ಅಥವಾ ಪ್ರೀಮ್ಯಾಚೂರ್ ಮೆನೋಪಾಸ್ (Premature Menopause) ಎಂದು ಕರೆಯುತ್ತಾರೆ. ತಜ್ಞರ ಪ್ರಕಾರ, ಅಕಾಲಿಕ ಮೆನೋಪಾಸ್ ಕೇವಲ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯಕ್ಕೂ ಪರಿಣಾಮ ಬೀರಬಹುದು. ವಿಶೇಷವಾಗಿ ಅಧಿಕ ರಕ್ತದೊತ್ತಡ (High Blood Pressure) ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

ಮೆನೋಪಾಸ್ ಎಂದರೇನು?

ಒಬ್ಬ ಮಹಿಳೆಗೆ 12 ತಿಂಗಳುಗಳ ಕಾಲ ನಿರಂತರವಾಗಿ ಋತುಸ್ರಾವ ಆಗದೇ ಇದ್ದರೆ ಹಾಗೂ ಅದಕ್ಕೆ ಬೇರೆ ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ ಅದನ್ನು ಮೆನೋಪಾಸ್ ಎಂದು ಪರಿಗಣಿಸಲಾಗುತ್ತದೆ. ಮೆನೋಪಾಸ್ ನಂತರ ದೇಹದಲ್ಲಿ ಹಲವು ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ವಿಶೇಷವಾಗಿ ಈಸ್ಟ್ರೋಜನ್ (Estrogen) ಹಾರ್ಮೋನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಅಕಾಲಿಕ ಮೆನೋಪಾಸ್ ಮತ್ತು ಹೈ ಬಿಪಿ ನಡುವೆ ಇರುವ ಸಂಬಂಧವೇನು?

ಸ್ತ್ರೀರೋಗ ತಜ್ಞರ ಪ್ರಕಾರ, ಸಾಮಾನ್ಯ ವಯಸ್ಸಿಗಿಂತ ಮುಂಚಿತವಾಗಿ ಮೆನೋಪಾಸ್ ಆದ ಮಹಿಳೆಯರಲ್ಲಿ ಮುಂದಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್, ಹೃದಯ ಕಾಯಿಲೆ, ಸ್ಟ್ರೋಕ್ ಮೊದಲಾದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಇದಕ್ಕೆ ಪ್ರಮುಖ ಕಾರಣಗಳು, ಈಸ್ಟ್ರೋಜನ್ ಹಾರ್ಮೋನ್ ಪ್ರಮಾಣ ಕಡಿಮೆಯಾಗುವುದು, ರಕ್ತನಾಳಗಳ ಲವಚಿಕತೆ ಕಡಿಮೆಯಾಗುವುದು, ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ, ಹೃದಯದ ರಕ್ಷಣಾತ್ಮಕ ಪರಿಣಾಮ ಕಡಿಮೆಯಾಗುವುದು.

ಅಪಾಯವನ್ನು ಹೆಚ್ಚಿಸುವ ಇತರೆ ಕಾರಣಗಳು

ಮೆನೋಪಾಸ್ ನಂತರ ಈ ಕೆಳಗಿನ ಅಂಶಗಳೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

  • ಅಧಿಕ ತೂಕ ಮತ್ತು ಹೊಟ್ಟೆ ಸುತ್ತ ಕೊಬ್ಬು ಹೆಚ್ಚಾಗುವುದು
  • ವ್ಯಾಯಾಮದ ಕೊರತೆ
  • ಅನಾರೋಗ್ಯಕರ ಆಹಾರ ಪದ್ಧತಿ
  • ಧೂಮಪಾನ ಮತ್ತು ಮದ್ಯಪಾನ
  • ಮಾನಸಿಕ ಒತ್ತಡ
  • ಸಮರ್ಪಕ ನಿದ್ರೆಯ ಕೊರತೆ
  • ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್

ಹೈ ಬಿಪಿ ತಡೆಗಟ್ಟಲು ಮಹಿಳೆಯರು ಪಾಲಿಸಬೇಕಾದ ಸಲಹೆಗಳು

ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಿ: ವಿಶೇಷವಾಗಿ 40 ವರ್ಷಗಳ ನಂತರ ಅಥವಾ ಅಕಾಲಿಕ ಮೆನೋಪಾಸ್ ಆಗಿದ್ದರೆ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ.

ಆರೋಗ್ಯಕರ ಆಹಾರ ಸೇವಿಸಿ: ಆಹಾರದಲ್ಲಿ ಹೆಚ್ಚು ಸೇರಿಸಬೇಕಾದವು ಹಸಿರು ಸೊಪ್ಪುಗಳು, ಹಣ್ಣು, ಧಾನ್ಯಗಳು, ಬೇಳೆಕಾಳುಗಳು, ಕಡಿಮೆ ಉಪ್ಪಿನ ಆಹಾರ, ಆರೋಗ್ಯಕರ ಕೊಬ್ಬು (ನಟ್ಸ್, ಬೀಜಗಳು)

ತಪ್ಪಿಸಬೇಕಾದ ಆಹಾರಗಳು: ಹೆಚ್ಚು ಉಪ್ಪು, ಜಂಕ್ ಫುಡ್, ಪ್ಯಾಕೇಜ್ಡ್ ಆಹಾರ, ಸಕ್ಕರೆ ಹೆಚ್ಚಿರುವ ಪಾನೀಯಗಳು

ಪ್ರತಿದಿನ ವ್ಯಾಯಾಮ ಮಾಡಿ: ಪ್ರತಿದಿನ ಕನಿಷ್ಠ 30 ನಿಮಿಷಗಳ ವೇಗದ ನಡಿಗೆ, ಯೋಗ, ಸೈಕ್ಲಿಂಗ್ ಅಥವಾ ಈಜು ಉತ್ತಮ.

ಒತ್ತಡ ನಿಯಂತ್ರಿಸಿ: ಧ್ಯಾನ, ಪ್ರಾಣಾಯಾಮ, ಯೋಗ ಹಾಗೂ ಉತ್ತಮ ನಿದ್ರೆ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ.

ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ: ಇವು ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ಹದಗೆಡಿಸುತ್ತವೆ.

ಮೆನೋಪಾಸ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು

  • ಋತುಚಕ್ರದಲ್ಲಿ ಅನಿಯಮಿತತೆ
  • ಹಠಾತ್ ದೇಹ ಬಿಸಿಯಾಗುವುದು
  • ರಾತ್ರಿ ವೇಳೆ ಹೆಚ್ಚು ಬೆವರುವುದು
  • ಮನಸ್ಥಿತಿ ಬದಲಾವಣೆ
  • ನಿದ್ರಾಹೀನತೆ
  • ಯೋನಿ ಒಣಗುವಿಕೆ
  • ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು
  • ನೆನಪಿನ ಶಕ್ತಿ ಮತ್ತು ಏಕಾಗ್ರತೆ ಕುಂಠಿತವಾಗುವುದು

ಈ ಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಮೆನೋಪಾಸ್ ಒಂದು ಸಹಜ ಪ್ರಕ್ರಿಯೆಯಾಗಿದ್ದರೂ, ಅಕಾಲಿಕ ಮೆನೋಪಾಸ್ ಆಗಿದ್ದರೆ ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ವೈದ್ಯರ ಸಲಹೆ ಅತ್ಯಂತ ಮುಖ್ಯ. ಸರಿಯಾದ ಆಹಾರ, ವ್ಯಾಯಾಮ ಹಾಗೂ ನಿಯಮಿತ ಪರೀಕ್ಷೆಗಳ ಮೂಲಕ ಹೈ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಬಹುತೇಕ ಕಡಿಮೆ ಮಾಡಬಹುದು.

ಗಮನಿಸಿ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ವೈಯಕ್ತಿಕ ಆರೋಗ್ಯ ಸಮಸ್ಯೆಗಳಿದ್ದರೆ ಸ್ತ್ರೀರೋಗ ತಜ್ಞರು ಅಥವಾ ಹೃದಯ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ – Kannada News | Cauvery Water Dispute DMK Moves Supreme Court Seeking Directions To Karnataka Government For Urgent Water Release

ಚೆನ್ನೈ, ಆಗಸ್ಟ್ 1: ತಮಿಳುನಾಡಿಗೆ ತಕ್ಷಣ ಕಾವೇರಿ (Cauvery Water Dispute) ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ 2018ರ ಅಂತಿಮ ತೀರ್ಪು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನಗಳನ್ನು ಕರ್ನಾಟಕ ಪಾಲಿಸಬೇಕು ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಿದೆ. ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದು, ನೀರು ಹರಿಯದೇ ಸಂಕಷ್ಟಕ್ಕೆ ಈಡಾಗಿರುವ ತಿರು ಎಕೆಎಸ್ ವಿಜಯನ್ ಅವರು ಡಿಎಂಕೆ ಪರವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

CWRC ನಿರ್ದೇಶನವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಜುಲೈ 30, 2026ರಂದು ಅನುಮೋದಿಸಿತು. ನ್ಯಾಯಾಲಯದ ಆದೇಶದ ದಿನಾಂಕದಿಂದ ಮುಂದಿನ 15 ದಿನಗಳವರೆಗೆ ಬಿಳಿಗುಂಡ್ಲುವಿಗೆ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕೆಂದು ಮತ್ತು ಜುಲೈ 29, 2026ರಿಂದ ಉಂಟಾದ ಕೊರತೆಯನ್ನು ಸರಿದೂಗಿಸಬೇಕೆಂದು ಇದು ಆದೇಶಿಸಿತು.

ಕರ್ನಾಟಕವು ಈ ತೀರ್ಪನ್ನು ಸಿಡಬ್ಲ್ಯೂಎಂಎ (CWMA) ಮುಂದೆ ಪ್ರಶ್ನಿಸಿ, ಈ ನಿರ್ದೇಶನವನ್ನು 15 ದಿನಗಳ ಕಾಲ ಮುಂದೂಡುವಂತೆ ಕೋರಿತ್ತು. ಆದರೆ, ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿರುವುದನ್ನು ಪರಿಗಣಿಸಿದ ಸಿಡಬ್ಲ್ಯೂಎಂಎ, ಸಿಡಬ್ಲ್ಯೂಆರ್‌ಸಿ ನಿರ್ದೇಶನವನ್ನು ಎತ್ತಿಹಿಡಿಯಿತು ಮತ್ತು ಇದರಿಂದ ಕರ್ನಾಟಕದ ಕುಡಿಯುವ ನೀರಿನ ಅಗತ್ಯಕ್ಕೆ ಯಾವುದೇ ಭಂಗ ಉಂಟಾಗುವುದಿಲ್ಲ ಎಂದು ದಾಖಲಿಸಿತು.

ಇದನ್ನೂ ಓದಿ: ಕಾವೇರಿ ಜಲ ವಿವಾದ: ಆ.13ರಂದು ಅಖಂಡ ಕರ್ನಾಟಕ ಬಂದ್​​ಗೆ ಕರೆ ನೀಡಿದ ಕನ್ನಡಪರ ಸಂಘಟನೆಗಳು

ಜುಲೈ 26ರೊಳಗೆ ಬಿಳಿಗುಂಡ್ಲುವಿನಲ್ಲಿ ಸುಮಾರು 9.46 ಟಿಎಂಸಿ ನೀರಿನ ಕೊರತೆಯನ್ನು ಪರಿಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಇದಕ್ಕಾಗಿ ಮುಂದಿನ 15 ದಿನಗಳವರೆಗೆ ಪ್ರತಿದಿನ ಸುಮಾರು 7,000 ಕ್ಯೂಸೆಕ್ ನೀರು ಹರಿಸಬೇಕು. ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಮತ್ತು ಬಿಳಿಗುಂಡ್ಲು ತಲುಪುವ ನೀರನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿದಿನ ಮೇಲ್ವಿಚಾರಣೆ ಮಾಡಬೇಕು ಮತ್ತು ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.

ಮೆಟ್ಟೂರು ಜಲಾಶಯದ ನೀರನ್ನು ನಂಬಿಕೊಂಡು ಸುಮಾರು 14.913 ಲಕ್ಷ ಎಕರೆ ಕೃಷಿ ಭೂಮಿ, 40 ಲಕ್ಷ (4 ಮಿಲಿಯನ್) ರೈತರು ಮತ್ತು 1 ಕೋಟಿ (10 ಮಿಲಿಯನ್) ಕೃಷಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಆದರೆ, ಮೆಟ್ಟೂರು ಜಲಾಶಯವು ಕರ್ನಾಟಕವು ಬಿಳಿಗುಂಡ್ಲುವಿಗೆ ಬಿಡುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ: CWRC ಆದೇಶ ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಹಿನ್ನಡೆ

ಕಾವೇರಿ ಜಲ ವಿವಾದ ಬಗೆಹರಿಸಲು CWMA ರಚನೆ:

ಗುರುವಾರ CWMA ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನು ಎತ್ತಿಹಿಡಿದಿದೆ. ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ನಡುವಿನ ಕಾವೇರಿ ನೀರು ಹಂಚಿಕೆ ವಿವಾದವನ್ನು ಪರಿಹರಿಸಲು ಕೇಂದ್ರ ಸರ್ಕಾರವು 2018ರಲ್ಲಿ CWMA ಅನ್ನು ರಚಿಸಿತು. ಈ ಪ್ರಾಧಿಕಾರವು ನದಿ ಹರಿಯುವ ರಾಜ್ಯಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಾಮನಿರ್ದೇಶಿತರನ್ನು ಒಳಗೊಂಡಿದೆ.

ಕಾವೇರಿ ವಿವಾದದ ಹಿನ್ನೆಲೆ:

ಕಾವೇರಿ ನೀರು ಹಂಚಿಕೆ ವಿವಾದವು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸುದೀರ್ಘ ಸಂಘರ್ಷವಾಗಿದೆ. 1974ರಲ್ಲಿ ಮೇಲ್ಭಾಗದ ರಾಜ್ಯವಾದ ಕರ್ನಾಟಕವು ತಮಿಳುನಾಡಿನ ಒಪ್ಪಿಗೆಯಿಲ್ಲದೆ ನೀರನ್ನು ಬೇರೆಡೆಗೆ ತಿರುಗಿಸಲು ಪ್ರಾರಂಭಿಸಿದಾಗ ಈ ವಿವಾದ ಆರಂಭವಾಯಿತು. 2007ರಲ್ಲಿ ಕಾವೇರಿ ನೀರು ವಿವಾದಗಳ ನ್ಯಾಯಾಧಿಕರಣವು ನೀರು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿದ ನಂತರ ಈ ವಿಷಯ ಸುಪ್ರೀಂ ಕೋರ್ಟ್‌ ತಲುಪಿತು. ನ್ಯಾಯಾಧಿಕರಣದ ತೀರ್ಪು 2007ರ ಫೆಬ್ರವರಿ 5ರಂದು ಹೊರಬಿದ್ದಿದ್ದು, 2013ರ ಫೆಬ್ರವರಿ 19ರಂದು ಕೇಂದ್ರ ಸರ್ಕಾರವು ಇದನ್ನು ಗೆಜೆಟ್‌ನಲ್ಲಿ ಪ್ರಕಟಿಸಿತು. ನೀರು ಹಂಚಿಕೆಯನ್ನು ನಿರ್ಧರಿಸುವುದರ ಜೊತೆಗೆ, ಕಾವೇರಿ ನೀರು ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯನ್ನು ಸ್ಥಾಪಿಸಲು ನ್ಯಾಯಾಧಿಕರಣವು ಶಿಫಾರಸು ಮಾಡಿತ್ತು. 2018ರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಕರ್ನಾಟಕಕ್ಕೆ ತಮಿಳುನಾಡಿಗೆ 192 ಟಿಎಂಸಿಗೆ ಬದಲಾಗಿ 177.25 ಟಿಎಂಸಿ ನೀರನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ಹರಿಸುವಂತೆ ನಿರ್ದೇಶಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CWG 2026: ದಿಗ್ಗಜರನ್ನು ಮಣಿಸಿ ಬಾಕ್ಸಿಂಗ್​ನಲ್ಲಿ ಚಿನ್ನ ಗೆದ್ದ ಅರುಂಧತಿ ಚೌಧರಿ – Kannada News | Arundhati Choudhary Wins Boxing Gold for India at CWG 2026!

ರಾಜಸ್ಥಾನದ ಕೋಟಾದಲ್ಲಿ ಜನಿಸಿದ ಅರುಂಧತಿ ಚೌಧರಿ ಪ್ರಸ್ತುತ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದಾರೆ. ಅವರ ತಂದೆ ಸುರೇಶ್ ಚೌಧರಿ ಅವರಿಗೆ ಮಗಳನ್ನು ಐಐಟಿಗೆ ಕಳುಹಿಸಬೇಕೆಂಬ ಬಯಕೆ ಇತ್ತು. ಆದಾಗ್ಯೂ, ಅರುಂಧತಿ ಅವರಿಗೆ ಕ್ರೀಡೆಯ ಮೇಲೆ ಹೆಚ್ಚು ಒಲವಿತ್ತು. ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದ ಅರುಂಧತಿ ತಂಡದ ನಾಯಕಿಯೂ ಆಗಿದ್ದರು, ಆದರೆ 15 ನೇ ವಯಸ್ಸಿನಲ್ಲಿ, ಅವರು ಬಾಕ್ಸಿಂಗ್ ಆಡಲು ಶುರು ಮಾಡಿದರು. ಇದೀಗ ದೇಶಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರ ಗೆದ್ದುಕೊಟ್ಟಿದ್ದಾರೆ(PC-PTI).

Source link

Exit mobile version