Lunar Eclipse 2026: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ! – Kannada News | Lunar Eclipse 2026: Astrological Predictions for Virgo by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣದ ಕನ್ಯಾ ರಾಶಿಯವರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಕನ್ಯಾ ರಾಶ್ಯಾಧಿಪತಿ ಬುಧ ಗ್ರಹಣವನ್ನು ವೀಕ್ಷಿಸುತ್ತಿದ್ದಾನೆ. ಉತ್ತರ, ಹಸ್ತಾ, ಚಿತ್ತಾ ನಕ್ಷತ್ರದವರಿಗೆ ಇದು ಅನ್ವಯಿಸುತ್ತದೆ. ಗ್ರಹಣವು 12ನೇ ಮನೆ, ದುಃಸ್ಥಾನದಲ್ಲಿ ಸಂಭವಿಸುವುದರಿಂದ ಕನ್ಯಾ ರಾಶಿಯವರು ಬಹಳಷ್ಟು ಜಾಗ್ರತೆಯಿಂದ ಇರಬೇಕು. ಅಧಿಕ ಖರ್ಚು, ಕಣ್ಣಿನ ಸಮಸ್ಯೆ, ರಕ್ತದೊತ್ತಡದ ಸಮಸ್ಯೆ, ನಿದ್ರಾಹೀನತೆ, ಆತಂಕ, ಮತ್ತು ಆತುರದ ನಿರ್ಧಾರಗಳಿಂದ ದೂರವಿರುವುದು ಉತ್ತಮ.

ಆದರೆ, ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗಲಿದೆ. ಸಿಕ್ಕಿಬಿದ್ದ ಹಣ ವಾಪಸ್ ಬರುತ್ತದೆ ಮತ್ತು ವಿದೇಶದಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಸಾಲದ ಆತಂಕವೂ ನಿವಾರಣೆಯಾಗಲಿದೆ. ಹೊಸ ಸಂಸ್ಥೆಗಳನ್ನು ಸ್ಥಾಪಿಸಲು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು. ಸರ್ಕಾರಿ ನೌಕರರು, ಕ್ರೀಡಾಪಟುಗಳು ಮತ್ತು ರೈತಾಪಿ ವರ್ಗದವರಿಗೆ ಶುಭ ಫಲಗಳಿವೆ. ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಣೆಯ ಸಾಧ್ಯತೆಯಿದೆ. ಗ್ರಹಣ ಕಾಲದಲ್ಲಿ ನರಸಿಂಹ ದೇವರನ್ನು ಆರಾಧಿಸುವುದು ಮತ್ತು ಗ್ರಹಣದ ನಂತರ ಪಾರ್ವತಿ ದರ್ಶನ ಮಾಡಿ ಕುಂಕುಮಾರ್ಚನೆ ಮಾಡಿಸುವುದು ಶುಭಕರ. ವಿಶೇಷವಾಗಿ ವೃದ್ಧರು, ಅನಾರೋಗ್ಯ ಪೀಡಿತರು, ಮತ್ತು ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ತಡೆ: ಹೈಕೋರ್ಟ್ ನೀಡಿದ ಕಾರಣವೇನು? – Kannada News | This is the reason why High Court stayed the release of The Kerala Story 2

ಲವ್ ಜಿಹಾದ್ ಕುರಿತ ಕಥೆ ಹೊಂದಿರುವ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಈ ವಾರ ಬಿಡುಗಡೆ ಆಗುತ್ತಿಲ್ಲ. ಫೆಬ್ರವರಿ 27ರಂದು ರಿಲೀಸ್ ಮಾಡಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಈ ಸಿನಿಮಾದ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಇದರಿಂದಾಗಿ ಚಿತ್ರತಂಡಕ್ಕೆ ಆಘಾತ ಆಗಿದೆ. ಚಿತ್ರದ ಟೀಸರ್ ಬಿಡುಗಡೆ ಆದ ಬಳಿಕ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವರು ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್ (Kerala High Court) ಈ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಈ ತೀರ್ಪಿಗೆ ಕಾರಣ ಇಲ್ಲಿದೆ.

ಜಸ್ಟೀಸ್ ಬೇಚು ಕುರಿಯನ್ ಥಾಮಸ್ ಅವರು ಈ ತೀರ್ಪು ನೀಡಿದ್ದಾರೆ. ಸೆನ್ಸಾರ್ ಮಂಡಳಿಯು ನಿಯಮಗಳನ್ನು ಕಡೆಗಣಿಸಿದಂತಿದೆ. ಆದ್ದರಿಂದ ಪ್ರಮಾಣಪತ್ರ ನೀಡಿರುವ ನಿರ್ಧಾರವನ್ನು ಪರಿಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ. ಸಿನಿಮಾದ ಟೀಸರ್​ನಲ್ಲಿ ಇರುವ ಅಂಶಗಳ ಬಗ್ಗೆ ಕೇರಳ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

‘ಸಿನಿಮಾದ ಭಾಗವಾಗಿರುವ ಈ ಟೀಸರ್​​ನಲ್ಲಿ ಜನರ ನಂಬಿಕೆಯನ್ನು ತಿರುಚುವಂತಹ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಅಂಶಗಳು ಇವೆ’ ಎಂಬ ಕಾರಣವನ್ನು ನೀಡಿ ಕೇರಳ ಹೈಕೋರ್ಟ್ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಈ ಸಿನಿಮಾದಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

2023ರಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಸಿನಿಮಾ ಸಿದ್ಧವಾಗಿದೆ. ಟೀಸರ್ ಬಿಡುಗಡೆ ಆದ ಬಳಿಕ ವಿವಾದ ಸೃಷ್ಟಿ ಆಯಿತು. ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಸೆನ್ಸಾರ್ ಮಂಡಳಿಯ ಕ್ರಮವನ್ನು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ, ಐಶ್ವರ್ಯಾ ಊಜಾ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಲವ್ ಜಿಹಾದ್ ಕುರಿತಾದ ಕಥೆ ಈ ಸಿನಿಮಾದಲ್ಲಿ ಇದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಕಲಿ ಪ್ರಶ್ನೆಪತ್ರಿಕೆ ಹಾವಳಿ: ವಿದ್ಯಾರ್ಥಿಗಳೇ ನಂಬಿ ಮೋಸ ಹೋಗದಿರಿ ಎಂದ KSEAB – Kannada News | KSEAB Alerts Students Against Fake 2nd PUC Question Papers

ಬೆಂಗಳೂರು, ಫೆಬ್ರವರಿ 26: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಕೌಂಟ್​​ಡೌನ್​​ ನಡುವೆ ಕೆಲವು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚುತ್ತಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಪ್ರಶ್ನೆಪತ್ರಿಕೆ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟವರನ್ನು ಪತ್ತೆಹಚ್ಚಲು ಸೈಬರ್ ಪೊಲೀಸರಿಗೆ ದೂರು ನೀಡೋದಾಗಿಯೂ ತಿಳಿಸಿದ್ದಾರೆ.

ಕರ್ನಾಟಕ ಬೋರ್ಡ್ SSLC ಪರೀಕ್ಷೆಗಳು ಮಾರ್ಚ್ 18ರಿಂದ ಆರಂಭವಾಗಲಿದ್ದರೆ, ಪಿಯುಸಿ ಪರೀಕ್ಷೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿಯಿದ್ದು ಫೆಬ್ರವರಿ 28ರಿಂದ ಪ್ರಾರಂಭವಾಗಲಿವೆ. ಈ ಹಿನ್ನೆಲೆ ನಕಲಿ ಪ್ರಶ್ನೆ ಪತ್ರಿಕೆಗಳ ಹರಿದಾಟ ಆರೋಪ ಕೇಳಿಬಂದ ಕಾರಣ SSLC ಮತ್ತು PU ಪರೀಕ್ಷೆಗಳ ವೇಳೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಪೂರ್ವಭಾವಿ ಪರೀಕ್ಷೆಗಳ ವೇಳೆಯೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದಿರುವುದರಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯ ಪರೀಕ್ಷೆಗಳ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೇಲಿನ ನಿಗಾವನ್ನು ಮತ್ತಷ್ಟು ಕಠಿಣಗೊಳಿಸಲು ನಿರ್ಧರಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಸಂಬಂಧ ಅದಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ನಕಲಿ ಪ್ರಶ್ನೆ ಪತ್ರಿಕೆ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗೆ 5,174 ಪಿಯು ಕಾಲೇಜುಗಳಿಂದ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 2,92,645 ಮಂದಿ ವಿಜ್ಞಾನ ವಿಭಾಗದವರು, 2,11,174 ಮಂದಿ ವಾಣಿಜ್ಯ ಹಾಗೂ 1,42,982 ಮಂದಿ ಕಲಾ ವಿಭಾಗದ ವಿದ್ಯಾರ್ಥಿಗಳಿದ್ದಾರೆ. ರಾಜ್ಯದಾದ್ಯಂತ 1,217 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಹಾಗೆಯೇ SSLC ಪರೀಕ್ಷೆಗಳು 2,871 ಕೇಂದ್ರಗಳಲ್ಲಿ ನಡೆಯಲಿದ್ದು, 15,941 ಶಾಲೆಗಳಿಂದ ದಾಖಲೆ ಪ್ರಮಾಣದ 9,02,889 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆಯಲಿದ್ದಾರೆ ಎಂದು ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:27 pm, Thu, 26 February 26

Source link

ಮತ್ತೆ ಕಾಡಾನೆ ಕಿರಿಕ್: ರಸ್ತೆ ಮಧ್ಯೆ ಸಾರಿಗೆ ಬಸ್​​ಗಳನ್ನ ತಡೆದು ನಿಲ್ಲಿಸಿದ ಒಂಟಿ ಸಲಗ – Kannada News | Wild elephant Stops Buses in Ambikanagar And bommanahalli Road at Uttara Kananda

ಕಾರವಾರ, (ಫೆಬ್ರವರಿ 26): ಚಾಮರಾಜನಗರ ಮಾತ್ರವಲ್ಲ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಕಾಡಾನೆ (Wild elephant) ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಾಡಾನೆವೊಂದು ಪ್ರತ್ಯಕ್ಷವಾಗಿದ್ದು, ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆದ ನಿಲ್ಲಿಸಿದೆ. ಹೌದು..ಉತ್ತರ ಕನ್ನಡ ಜಿಲ್ಲೆಯ ಅಂಬಿಕಾನಗರ–ಬೊಮ್ಮನಹಳ್ಳಿ ಮಾರ್ಗದಲ್ಲಿ ಒಂಟಿ ಸಲಗ ರಸ್ತೆಯಲ್ಲಿ ನಿಂತು ಸಾರಿಗೆ ಬಸ್ ಅನ್ನ​ ಅಡ್ಡಹಾಕಿ ತಡೆದು ನಿಲ್ಲಿಸಿದೆ. ಇದರಿಂದ ಬಸ್​​ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ. ಬಳಿಕ ಬಸ್​​ ಚಾಲಕ ಮೇಲಿಂದ ಮೇಲೆ ಹಾರ್ನ್ ಮಾಡಿದ್ದರಿಮದ ಕಾಡಾನೆ ರಸ್ತೆ ಬಿಟ್ಟು ಸೈಡಿಗೆ ತೆರಳಿದ್ದು, ಬಳಿಕ ಬಸ್​​ಗಳು ಅಲ್ಲಿಂದ ತೆರಳಿವೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral News: ಶಾಲೆಯಲ್ಲಿ ಆಟವಾಡುತ್ತಿದ್ದಾಗಲೇ ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾವು! – Kannada News | 9 Year Old Girl Dies Of Heart Attack in Rajasthan School During Playtime

ಜೈಪುರ, ಫೆಬ್ರವರಿ 26: ರಾಜಸ್ಥಾನದ ಗೋಟನ್‌ನಲ್ಲಿರುವ ಖಾಸಗಿ ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದಾಗ 9 ವರ್ಷದ ಬಾಲಕಿ ಹೃದಯಾಘಾತದಿಂದ (Heart Attack) ಕುಸಿದುಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಆಕೆ ಆಡುವಾಗ ಕುಸಿದುಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ಮಗುವನ್ನು 5ನೇ ತರಗತಿಯ ವಿದ್ಯಾರ್ಥಿನಿ ದಿವ್ಯಾ ಎಂದು ಗುರುತಿಸಲಾಗಿದೆ.

ಫೆಬ್ರವರಿ 23ರಂದು ಬೆಳಿಗ್ಗೆ 7.48ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಳಗಿನ ಪ್ರಾರ್ಥನೆಗೆ ಇನ್ನೂ ಸಮಯವಿತ್ತು. ಹೀಗಾಗಿ ಹಲವಾರು ಮಕ್ಕಳು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದರು. ದಿವ್ಯಾ ಬೇರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಆಕೆ ಇದ್ದಕ್ಕಿದ್ದಂತೆ ಮೂರ್ಛೆ ತಪ್ಪಿ ಬಿದ್ದಿದ್ದಳು. ಶಾಲಾ ಸಿಬ್ಬಂದಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆಕೆಯ ಕುಟುಂಬದ ಒಪ್ಪಿಗೆಯೊಂದಿಗೆ, ಮರಣೋತ್ತರ ಪರೀಕ್ಷೆಯಿಲ್ಲದೆ ಬಾಲಕಿಯ ಅಂತ್ಯಕ್ರಿಯೆ ನಡೆಸಲಾಯಿತು.

ಇದನ್ನೂ ಓದಿ: ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ; ವಿಡಿಯೋ ವೈರಲ್

ವಿಚಿತ್ರವೆಂದರೆ, ದಿವ್ಯಾಳ ಅಣ್ಣ ಅಭಿಷೇಕ್ ಸುಮಾರು 4 ತಿಂಗಳ ಹಿಂದೆ ಇದೇ ರೀತಿ ಸಾವನ್ನಪ್ಪಿದ್ದ. ಸೆಪ್ಟೆಂಬರ್ 9, 2025ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ಅವನು ಮೂರ್ಛೆ ತಪ್ಪಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದರು. ಇದೀಗ ಮತ್ತೊಬ್ಬಳು ಮಗಳು ಕೂಡ ಅದೇ ರೀತಿ ಮೃತಪಟ್ಟಿರುವುದು ಅವರ ಕುಟುಂಬಕ್ಕೆ ಆಘಾತ ಉಂಟುಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮಲ್ಲಿಕಾರ್ಜುನ ಮುತ್ಯಾನ ಬಗ್ಗೆ ಹೇಳಿದ್ದಿಷ್ಟು – Kannada News | Mallikarjuna Mutya POCSO Case: Video statement released by girl’s parents

ಯಾದಗಿರಿ, ಫೆಬ್ರವರಿ 26: ಮಲ್ಲಿಕಾರ್ಜುನ ಮುತ್ಯಾ (Mallikarjun Mutya) ವಿರುದ್ಧ ಪೋಕ್ಸೋ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಾರಿಯಾಗಿರುವ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಬೆನ್ನಲ್ಲೇ ಇತ್ತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಪ್ರಾಪ್ತ ಬಾಲಕಿ‌ ಪೋಷಕರಿಂದು ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಲಾಗಿದೆ. ನಮ್ಮ ಕುಟುಂಬ ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರೇ ಇದ್ದೇವೆ. ಸುಮಾರು ಮೂರು ನಾಲ್ಕು ವರ್ಷದಿಂದ ಮಲ್ಲಿಕಾರ್ಜುನ ದರ್ಶನಾಶೀರ್ವಾದ ಪಡೆಯಲು ಹೋಗುತ್ತೇವೆ. ಮಗಳ ಹುಟ್ಟುಹಬ್ಬಕ್ಕೆ ಆಶೀರ್ವಾದ ಪಡೆಯಲು ಕುಟುಂಬಸ್ಥರು ಅಪ್ಪಾಜಿ‌ ಮಠಕ್ಕೆ ಹೋಗಿದ್ದೇವು. ಆಶೀರ್ವಾದ ಕೊಟ್ಟರು. ನಾವು ಅದನ್ನು ಖುಷಿಯಾಗಿ ವಿಡಿಯೋ ಮಾಡಿದ್ದೇವೆ. ನಮ್ಮ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆಶೀರ್ವಾದ ಅಂತ ಹಾಕಿದ್ದೇವೆ. ಆದರೆ ಕಿಡಿಗೇಡಿಗಳು ವಿಡಿಯೋ ತಿರುಚಿ ವೈರಲ್ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೇರಿ ಎಲ್ಲಿ ಕರೆದಿದ್ದರೂ ನಾವು ಎಲ್ಲಾ ಕಡೆಗೆ ಹೋಗಿದ್ದೇವೆ. ಅಪ್ಪಾ ಅವರದ್ದೂ ಏನೂ ತಪ್ಪಿಲ್ಲ, ದೇವರ ಸಮಾನ ಎಂದು ಹೇಳಿದ್ದೇವೆ. ವಿಡಿಯೋ ತಿರುಚಿದವರ ಮೇಲೆ ಕ್ರಮಆಗಬೇಕು ಎಂದು ಬಾಲಕಿ ಪೋಷಕರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು – Kannada News | Anil Ambani faces fresh charges, as CBI files case based on complaint by Bank of Baroda

ನವದೆಹಲಿ, ಫೆಬ್ರುವರಿ 26: ರಿಲಾಯನ್ಸ್ ಗ್ರೂಪ್​ನ ಮುಖ್ಯಸ್ಥ ಅನಿಲ್ ಅಂಬಾನಿ (Anil Ambani) ಅವರ ಸಂಕಷ್ಟ ನಿಲ್ಲುತ್ತಿಲ್ಲ. ಬುಧವಾರ ಅನಿಲ್ ಅಂಬಾನಿ ಅವರ ಮುಂಬೈ ನಿವಾಸವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದ ಬೆನ್ನಲ್ಲೇ ಇವತ್ತು ಸಿಬಿಐನಿಂದ ಅವರ ವಿರುದ್ಧ ಹೊಸ ಪ್ರಕರಣ ದಾಖಲಾಗಿದೆ. 2013ರಿಂದ 2017ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾಗೆ 2,223.17 ಕೋಟಿ ರೂ ವಂಚನೆ ಎಸಗಿದ ಆರೋಪದಲ್ಲಿ ಅನಿಲ್ ಅಂಬಾನಿ ಹಾಗು ಆರ್​ಕಾಂ ಕಂಪನಿ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ.

ಆದರೆ, ಬ್ಯಾಂಕ್ ಆಫ್ ಬರೋಡಾಗೆ ಆರ್​ಕಾಂ ವತಿಯಿಂದ ಏನು ವಂಚನೆ ಆಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಗೊತ್ತಾಗಿಲ್ಲ. ಬ್ಯಾಂಕ್​ಗೆ ನಷ್ಟ ತರಲಾಗಿದೆ ಎಂದು ಅನಿಲ್ ಅಂಬಾನಿ, ಆರ್​ಕಾಂ, ಸರ್ಕಾರಿ ಅಧಿಕಾರಿಗಳು ಮತ್ತಿತರರ ವಿರುದ್ಧ ಸ್ವತಃ ಬ್ಯಾಂಕ್​ನಿಂದಲೇ ಎಫ್​ಐಆರ್ ದೂರು ದಾಖಲಾಗಿತ್ತು. ವಂಚನೆ, ಅಪರಾಧ ಸಂಚು ಇತ್ಯಾದಿಗೆ ಸಂಬಂಧಿಸಿದ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ಬರುತ್ತದೆ. ಇದರ ಆಧಾರದ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ

ಅನಿಲ್ ಅಂಬಾನಿಯ ಮುಂಬೈ ನಿವಾಸ ಮುಟ್ಟುಗೋಲು

ರಿಲಾಯನ್ಸ್ ಕಮ್ಯೂನಿಕೇಶನ್ (ಆರ್​ಕಾಂ) ವಿರುದ್ಧದ ವಂಚನೆ ಪ್ರಕರಣ ಸಂಬಂಧ ಅನಿಲ್ ಅಂಬಾನಿ ಅವರ ಪಾಲಿ ಹಿಲ್ ಮನೆಯನ್ನು ಜಾರಿ ನಿರ್ದೇಶನಾಲಯ ಫೆ. 25, ಬುಧವಾರದಂದು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್​ನಲ್ಲಿರುವ ಅಂಬಾನಿಯ ಈ ಮನೆಯ ಮೌಲ್ಯ 3,716.83 ಕೋಟಿ ರೂ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಮುಂಬೈನಲ್ಲೇ ಇರುವ ಅಂಬಾನಿಯ 473.17 ಕೋಟಿ ರು ಮೌಲ್ಯದ ಇನ್ನೊಂದು ಪ್ರಾಪರ್ಟಿಯನ್ನೂ ಇಡಿ ಅಟ್ಯಾಚ್ ಮಾಡಿತ್ತು. ಇದರೊಂದಿಗೆ ಮುಟ್ಟುಗೋಲು ಹಾಕಿಕೊಳ್ಳಲಾದ ರಿಲಾಯನ್ಸ್ ಗ್ರೂಪ್ ಹಾಗೂ ಅನಿಲ್ ಅಂಬಾನಿಯವರ ಒಟ್ಟು ಆಸ್ತಿ ಮೌಲ್ಯ 15,700 ಕೋಟಿ ರೂ ಆಗಿದೆ.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

ಅನಿಲ್ ಅಂಬಾನಿ ಅವರ ರಿಲಾಯನ್ಸ್ ಗ್ರೂಪ್​ನ ಆರ್​ಕಾಂ ಹಾಗೂ ಇತರ ಕಂಪನಿಗಳು ಹಲವು ವರ್ಷಗಳ ಅವಧಿಯಲ್ಲಿ ಬ್ಯಾಂಕುಗಳಿಂದ ಸಾಕಷ್ಟು ಸಾಲಗಳನ್ನು ತೆಗೆದುಕೊಂಡಿವೆ. ಇದರಲ್ಲಿ 40,185 ಕೋಟಿ ರೂ ಸಾಲ ಬಾಕಿ ಉಳಿದಿದೆ. ಸಾಲ ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿರುವುದು ಇತ್ಯಾದಿ ಹಲವು ಆರೋಪಗಳು ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. ರಿಲಾಯನ್ಸ್ ಕಮ್ಯೂನಿಕೇಶನ್ ಸಂಸ್ಥೆ ಸಾಲ ತೀರಿಸಲು ಕಾಲಾವಕಾಶ ಕೋರಿದೆ. ಈ ಮಧ್ಯೆ ಪ್ರಕರಣಗಳ ಮೇಲೆ ಪ್ರಕರಣಗಳು ಅಂಬಾನಿಯನ್ನು ಸುತ್ತುವರಿಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Event Calendar March 2026: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು – Kannada News | Event Calendar March 2026: What are the national and international days celebrated in the month of March?

ಮಾರ್ಚ್‌ ಈವೆಂಟ್‌ ಕ್ಯಾಲೆಂಡರ್Image Credit source: Pinterest

ಪ್ರತಿ ತಿಂಗಳಲ್ಲೂಸಹ  ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದಷ್ಟು ವಿಶೇಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ.  ಹೌದು ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವಂತಹ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ಮಾರ್ಚ್‌ (March)  ತಿಂಗಳು ಆರಂಭವಾಗುತ್ತಿದ್ದು, ವರ್ಷದ ಈ ಮೂರನೇ ತಿಂಗಳಲ್ಲಿ ನಿದ್ರಾ ದಿನದಿಂದ ಹಿಡಿದು ವಿಶ್ವ ಅರಣ್ಯ ದಿನದವರೆಗೆ ಯಾವೆಲ್ಲಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತವೆ ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.

ಮಾರ್ಚ್‌ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಮಾರ್ಚ್ 1 – ವಿಶ್ವ ನಾಗರಿಕ ರಕ್ಷಣಾ ದಿನ
  • ಮಾರ್ಚ್‌ 1 – ವಿಶ್ವ ಅಭಿನಂದನಾ ದಿನ
  • ಮಾರ್ಚ್‌ 3 – ವಿಶ್ವ ವನ್ಯಜೀವಿ ದಿನ
  • ಮಾರ್ಚ್ 3 – ವಿಶ್ವ ಶ್ರವಣ ದಿನ
  • ಮಾರ್ಚ್‌ 4 – ಹೋಳಿ
  • ಮಾರ್ಚ್‌ 4 -ರಾಷ್ಟ್ರೀಯ ಸುರಕ್ಷತಾ ದಿನ
  • ಮಾರ್ಚ್‌ 8 – ಅಂತಾರಾಷ್ಟ್ರೀಯ ಮಹಿಳಾ ದಿನ
  • ಮಾರ್ಚ್ 11 – ಧೂಮಪಾನ ನಿಷೇಧ ದಿನ
  • ಮಾರ್ಚ್‌ 15 – ವಿಶ್ವ ಗ್ರಾಹಕರ ಹಕ್ಕುಗಳ ದಿನ
  • ಮಾರ್ಚ್ 15 – ವಿಶ್ವ ನಿದ್ರಾ ದಿನ
  • ಮಾರ್ಚ್‌ 16 – ರಾಷ್ಟ್ರೀಯ ಲಸಿಕೆ ದಿನ
  • ಮಾರ್ಚ್‌ 20 – ಅಂತಾರಾಷ್ಟ್ರೀಯ ಸಂತೋಷ ದಿನ
  • ಮಾರ್ಚ್‌ 20 – ವಿಶ್ವ ಗುಬ್ಬಚ್ಚಿ ದಿನ
  • ಮಾರ್ಚ್ 20 – ವಿಶ್ವ ಮೌಖಿಕ ಆರೋಗ್ಯ ದಿನ
  • ಮಾರ್ಚ್‌ 21 – ವಿಶ್ವ ಅರಣ್ಯ ದಿನ
  • ಮಾರ್ಚ್ 21 – ವಿಶ್ವ ಡೌನ್‌ ಸಿಂಡ್ರೋಮ್‌ ದಿನ
  • ಮಾರ್ಚ್‌ 22 – ವಿಶ್ವ ಜಲ ದಿನ
  • ಮಾರ್ಚ್‌ 23 – ವಿಶ್ವ ಹವಾಮಾನ ದಿನ
  • ಮಾರ್ಚ್‌ 23 – ಹುತಾತ್ಮರ ದಿನ
  • ಮಾರ್ಚ್‌ 24 – ವಿಶ್ವ ಕ್ಷಯರೋಗ ದಿನ
  • ಮಾರ್ಚ್ 26 – ನೇರಳೆ ದಿನ
  • ಮಾರ್ಚ್ 27 – ವಿಶ್ವ ರಂಗಭೂಮಿ ದಿನ
  • ಮಾರ್ಚ್ 28 – ವಿಶ್ವ ಪಿಯಾನೋ ದಿನ
  • ಮಾರ್ಚ್‌ 31 – ಮಹಾವೀರ ಜಯಂತಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ – Kannada News | Bengaluru: 38 lakh annual offer in Bengaluru, Rs 5 lakh monthly salary in Dubai: Techie seeks advice on career choice

ಬೆಂಗಳೂರು, ಫೆಬ್ರವರಿ 26: ಉದ್ಯೋಗ (job) ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಕೆಲಸವಿದ್ದರೆ ಮಾತ್ರ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಎರಡು ಉದ್ಯೋಗ ಅವಕಾಶಗಳು ಬಂದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ ಮೂಡುತ್ತದೆ. ಇದೀಗ 27 ವರ್ಷದ ಬೆಂಗಳೂರಿನ (Bengaluru) ಟೆಕ್ಕಿಗೆ ಇದೇ ರೀತಿ ಆಗಿದ್ದು, ಹೀಗಾಗಿ ಅವರು ನೆಟ್ಟಿಗರ ಸಲಹೆ ಕೇಳಿದ್ದಾರೆ. 38 ಲಕ್ಷ ರೂ ಆಫರ್‌ನೊಂದಿಗೆ ಭಾರತದಲ್ಲಿಯೇ ಇರಬೇಕೇ ಅಥವಾ ತಿಂಗಳಿಗೆ ಸರಿಸುಮಾರು 5.19 ಲಕ್ಷ ರೂ ಸಂಬಳಕ್ಕೆ ದುಬೈಗೆ ಹೋಗಬೇಕೇ ಎಂದು ಕೇಳಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.

DubaiCentral ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಗೆ ಬೆಂಗಳೂರಿನಲ್ಲಿ 38 ಲಕ್ಷ ರೂ ಹಾಗೂ ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ – ದುಬೈ ಯೋಗ್ಯವಾಗಿದೆಯೇ?’ ಎಂಬ ಶೀರ್ಷಿಕೆ ನೀಡಲಾಗಿದೆ. ಎರಡು ಆಫರ್‌ಗಳಿವೆ. ಒಂದು ಭಾರತದ ಬ್ರ್ಯಾಂಡೆಡ್ ಹಾಗೂ ದೀರ್ಘಾವಧಿಯ ಬೆಳವಣಿಗೆಯುಳ್ಳ “ದೊಡ್ಡ ಬ್ಯಾಂಕ್” ಹಾಗೂ ಇನ್ನೊಂದು ಉದ್ಯೋಗವಕಾಶ ದುಬೈನಲ್ಲಿ. ಎರಡು ಕೆಲಸವು ಉತ್ತಮ ಕ್ಲೈಂಟ್‌ಗಳು, ಅತ್ಯುತ್ತಮ ಪ್ರಯೋಜನಗಳಿಂದ ಕೂಡಿದೆ ಎಂದು ಬರೆದಿದ್ದಾರೆ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

ಒಬ್ಬ ವ್ಯಕ್ತಿಗೆ ತಿಂಗಳಿಗೆ 21,000 ಎಇಡಿ ಒಂದು ಉತ್ತಮ ಸಂಬಳವೆಂದು ಪರಿಗಣಿಸಲಾಗಿದೆಯೇ. ಈ ಸಂಬಳದಲ್ಲಿ ಯಾವ ರೀತಿ ಜೀವನಶೈಲಿಯನ್ನು ನಿರೀಕ್ಷಿಸಬಹುದು. ಎಷ್ಟು ಹಣ ಉಳಿಸಬಹುದು ಎಂದು ಕೇಳಿರುವುದನ್ನು ನೋಡಬಹುದು. ಈ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯದೇ. ದುಬೈ ಟ್ಯಾಗ್‌ಗಾಗಿ ವಿದೇಶಕ್ಕೆ ಸ್ಥಳಾಂತರಗೊಳ್ಳಲು ಬಯಸುವುದಿಲ್ಲ ಎಂದು ಹೇಳಿರುವುದನ್ನು ಗಮನಿಸಬಹುದು.

ಇದನ್ನೂ ಓದಿ: 2.9 ಕೋಟಿ ರೂ ಸಂಬಳದ ಉದ್ಯೋಗ ತೊರೆದು ಅಮೆರಿಕದಿಂದ ಭಾರತಕ್ಕೆ ಬರಲು ನಿರ್ಧರಿಸಿದ ಅನಿವಾಸಿ ಭಾರತೀಯ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮಗೆ ಯಾವುದು ಸರಿ ಎನಿಸುತ್ತದೆ ಅದನ್ನು ಮಾಡಿ ಎಂದು ಹೇಳಿದ್ದಾರೆ. ಇನ್ನೊಬ್ಬರು ನಿಮ್ಮ ಉತ್ತಮ ಕೌಶಲ್ಯವಿದ್ದರೆ ಈಗಾಗಲೇ ಸಾಕಷ್ಟು ಅನುಭವವನ್ನು ಹೊಂದಿದ್ದರೆ, ಈ ರಿಸ್ಕ್ ತೆಗೆದುಕೊಳ್ಳಬಹುದು. ಕನಿಷ್ಠ 1 ವರ್ಷಕ್ಕೆ ದುಬೈಗೆ ಬಂದು ಜೀವನ ನಡೆಸಿ. ನಿಮಗೆ ಯಾವ ಆಯ್ಕೆ ಒಳ್ಳೆಯದು ಎಂದು ನೋಡಿ ಎಂದು ಕಾಮೆಂಟ್ ನಲ್ಲಿ ಸಲಹೆ ನೀಡಿದ್ದಾರೆ. ಮತ್ತೊಬ್ಬರು, ನೀವು ಒಂಟಿಯಾಗಿದ್ದರೆ, ದುಬೈಗೆ ತೆರಳುವುದು ಉತ್ತಮ ಆಯ್ಕೆ. ಖರ್ಚುಗಳನ್ನು ಕಳೆದು ತಿಂಗಳಿಗೆ 3 ಲಕ್ಷ ರೂ ಉಳಿಸಬಹುದು. ಕೆಲ ವರ್ಷಗಳ ಕಾಲ ದುಬೈನಲ್ಲಿ ಉಳಿದು ಆ ಬಳಿಕ ಹಿಂತಿರುಗಲು ಯೋಜಿಸಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ranji Final: ಗಂಡು ಮೆಟ್ಟಿದ ನಾಡಿನಲ್ಲಿ ಕೆಚ್ಚೆದೆಯ ಶತಕ ಬಾರಿಸಿದ ಮಯಾಂಕ್ ಅಗರ್ವಾಲ್ – Kannada News | Mayank Agarwal’s Ranji Trophy Century: Karnataka’s Lone Warrior in Hubballi Final

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಜಮ್ಮು ಮತ್ತು ಕಾಶ್ಮೀರ ವಿರುದ್ಧ ಸ್ಮರಣೀಯ ಶತಕ ಬಾರಿಸಿ ತಂಡದ ಪರ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. 153 ಎಸೆತಗಳಲ್ಲಿ ಮಯಾಂಕ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 21ನೇ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ತಂಡವನ್ನು ಕೂಡ 150 ರನ್​ಗಳ ಗಡಿ ದಾಟಿಸಿದರು.

ಮೊದಲ ಇನ್ನಿಂಗ್ಸ್​ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 584 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ಕೇವಲ 57 ರನ್​ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಅನುಭವಿ ಕೆಎಲ್ ರಾಹುಲ್ 13 ರನ್​ಗಳಿಗೆ ಔಟಾದರೆ, ನಾಯಕ ದೇವದತ್ ಪಡಿಕ್ಕಲ್ ಇನ್ನಿಂಗ್ಸ್ 11 ರನ್​ಗಳಿಗೆ ಅಂತ್ಯವಾಯಿತು. ಆ ಬಳಿಕ ಬಂದ ಇಬ್ಬರು ಬ್ಯಾಟ್ಸ್‌ಮನ್​ಗಳಾದ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್​ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ.

ಈ ಹಂತದಲ್ಲಿ ಎಂದಿನಂತೆ ತಮ್ಮ ಬ್ಯಾಟಿಂಗ್‌ ಮುಂದುವರೆಸಿದ ಮಯಾಂಕ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಇದರಲ್ಲಿ ಶ್ರೇಯಸ್ 27 ರನ್​ಗಳ ಕಾಣಿಕೆ ನೀಡಿದರೆ, ಉಳಿದ ರನ್​ಗಳು ಮಯಾಂಕ್ ಬ್ಯಾಟ್​​ನಿಂದ ಸಿಡಿದವು. ಈ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಬೇಕೆಂದರೆ ಮಯಾಂಕ್ ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡಿಬರಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version