ಬಹಳ ಹಿಂದೆಯೇ ನಿವೃತ್ತಿಯ ಮನಸ್ಸು ಮಾಡಿದ್ದರು ಅಣ್ಣಾವ್ರು ಆದರೆ ಸಾಧ್ಯವಾಗಲಿಲ್ಲ – Kannada News | Dr Rajkumar thought about retirement but it did not happen
ಐದು ದಶಕಗಳ ಕಾಲ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ, ಈಗಲೂ ಸಹ ಕನ್ನಡಿಗರ ಮನಸ್ಸುಗಳಲ್ಲಿ ಅಚ್ಚಳಿಯದೆ ನೆಲೆಸಿರುವ ನಟ ಡಾ ರಾಜ್ಕುಮಾರ್ (Dr Rajkumar). 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ ರಾಜ್ಕುಮಾರ್ ಅವರು 2000 ರಲ್ಲಿ ಬಿಡುಗಡೆ ಆದ ‘ಶಬ್ದವೇಧಿ’ ಸಿನಿಮಾದ ವರೆಗೂ ಸಹ ಸ್ಟಾರ್ ನಟನಾಗಿಯೇ ಉಳಿದುಕೊಂಡಿದ್ದರು. ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದರು. ಆದರೆ ಡಾ ರಾಜ್ಕುಮಾರ್ ಅವರಿಗೆ ಒಂದು ಹಂತದಲ್ಲಿ ನಿವೃತ್ತಿಯ ಮನಸ್ಸಾಗಿತ್ತು. ಅವರು ಬಹುವಾಗಿ ಪ್ರೀತಿಸುತ್ತಿದ್ದ…