ಭಾರತದಲ್ಲಿ ಚೀನೀ ಸ್ಮಾರ್ಟ್ಫೋನ್ಗಳ ಆದಾಯ ಮೊದಲ ಬಾರಿಗೆ ಕುಸಿತ; ಐಫೋನ್, ಸ್ಯಾಮ್ಸುಂಗ್ಗೆ ಧಕ್ಕೆ ಇಲ್ಲ – Kannada News | Chinese smartphone companies see first ever revenue drop in India
ನವದೆಹಲಿ, ಫೆಬ್ರುವರಿ 26: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯನ್ನು ಹಲವಾರು ವರ್ಷಗಳಿಂದ ತಮ್ಮ ಬಿಗಿಮುಷ್ಟಿಗಳಲ್ಲಿ ಇಟ್ಟುಕೊಂಡಿದ್ದ ಚೀನೀ ಕಂಪನಿಗಳ (chinese smarphone companies) ಪಾರಮ್ಯ ಮೊದಲ ಬಾರಿಗೆ ದುರ್ಬಲಗೊಂಡಿದೆ. ಭಾರತದಲ್ಲಿ ಅದು ನಿರ್ಮಿಸಿಕೊಂಡಿದ್ದ ಭದ್ರಕೋಟೆಯಲ್ಲಿ ಬಿರುಕು ಮೂಡಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ (2024-25) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಚೀನೀ ಬ್ರ್ಯಾಂಡ್ ಸ್ಮಾರ್ಟ್ಫೋನ್ ಕಂಪನಿಗಳ ಆದಾಯದಲ್ಲಿ ಕುಸಿತವಾಗಿದೆ. ಶವೋಮಿ, ಓಪ್ಪೋ, ಒನ್ಪ್ಲಸ್ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಮುಖವಾಗಿದೆ. ಭಾರತದಲ್ಲಿ ಚೀನೀ ಕಂಪನಿಗಳು ವಾರ್ಷಿಕ ಆದಾಯದಲ್ಲಿ…