ಬರೋಬ್ಬರಿ 584 ರನ್ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ – Kannada News | Jammu and Kashmir Hammered 584 Runs Against Karnataka in The Ranji Final
ಹುಬ್ಬಳ್ಳಿಯ ಕೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 584 ರನ್ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್ ಗಳಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61…