ಬ್ರೇಕ್ ಫೇಲ್​ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ: ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ – Kannada News | Brake Fail Lorry Hits Multiple Vehicles in Bagaluru, North Bengaluru

ದೇವನಹಳ್ಳಿ, ಫೆಬ್ರವರಿ 26: ಬ್ರೇಕ್​​ ಫೇಲ್​​ ಆದ ಪರಿಣಾಮ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಲಾರಿಯೊಂದು ಸಿಕ್ಕಿ ಸಿಕ್ಕ ವಾಹನಗಳಿಗೆ ಗುದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನಲ್ಲಿ ನಡೆದಿದೆ. ಎದುರು ಬರುತ್ತಿದ್ದ ಕಾರುಗಳು, ದ್ವಿಚಕ್ರ ವಾಹನಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಲಾರಿ ನಿಂತಿದ್ದು, ಘಟನೆಯ ದೃಶ್ಯ ಕಾರೊಂದರ ಡ್ಯಾಶ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾರಿ‌ ನುಗ್ಗಿದ ರಭಸಕ್ಕೆ ಎರಡು ಕಾರುಗಳು, 3 ಬೈಕ್​ಗಳು ಜಖಂ ಆಗಿದ್ದು, ವಾಹನಗಳಲ್ಲಿದ್ದ ಎಲ್ಲರೂ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್​ಪೋರ್ಟ್​ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಲೋಡ್ ತುಂಬಿಕೊಂಡು ಬರುತ್ತಿದ್ದಾಗ ಏಕಾಏಕಿ ಲಾರಿಯ ಬ್ರೇಕ್ ಫೇಲ್​ ಆಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಬಗ್ಗೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಂಕ್ ಲೈನ್ ಮೆಟ್ರೋ: ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ – Kannada News | Pink Line Metro Progress: Testing Begins as Third BEML Train Set Joins Fleet

ಬೆಂಗಳೂರಿನ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ. ಬಿಇಎಂಎಲ್ ಸಂಸ್ಥೆಯು ತಯಾರಿಸಿರುವ ಮೂರನೇ ಡ್ರೈವರ್​ಲೆಸ್​ ರೈಲು ಸೆಟ್ ಯಶಸ್ವಿಯಾಗಿ ಕೋತ್ತನೂರು ಡಿಪೋವನ್ನು ತಲುಪಿದೆ. ಈ ರೈಲು ಬೋಗಿಗಳು ಪಿಂಕ್ ಲೈನ್ ಯೋಜನೆಯ ಕಾರ್ಯಗತಿಯನ್ನು ಮತ್ತಷ್ಟು ವೇಗಗೊಳಿಸಲಿವೆ. ಈಗಾಗಲೇ ಪಿಂಕ್ ಲೈನ್​ಗೆ ಎರಡು ಡ್ರೈವರ್​ಲೆಸ್​ ರೈಲುಗಳು ಬಂದಿದ್ದು, ಅವುಗಳಲ್ಲಿ ಮೊದಲನೆಯ ರೈಲು ಸೆಟ್‌ನ ಪರೀಕ್ಷಾರ್ಥ ಸಂಚಾರ ಈಗಾಗಲೇ ಆರಂಭವಾಗಿದೆ. ಇದು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸುವಲ್ಲಿ ಒಂದು ಪ್ರಮುಖ ಹಂತವಾಗಿದೆ. ಪಿಂಕ್ ಲೈನ್ ಮೆಟ್ರೋ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.25 ಕಿಲೋಮೀಟರ್ ದೂರವನ್ನು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಒಟ್ಟು 18 ಮೆಟ್ರೋ ನಿಲ್ದಾಣಗಳು ಬರಲಿದ್ದು, ಇದರಲ್ಲಿ 12 ನಿಲ್ದಾಣಗಳು ಭೂಗತವಾಗಿ ಮತ್ತು 6 ನಿಲ್ದಾಣಗಳು ಎಲಿವೇಟೆಡ್ ಆಗಿರುತ್ತವೆ. ಮೂರನೇ ರೈಲು ಸೆಟ್‌ನ ಆಗಮನವು ಪಿಂಕ್ ಲೈನ್ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ, ಇದರಿಂದ ನಗರದ ಸಾರ್ವಜನಿಕ ಸಾರಿಗೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಇದನ್ನು ಇಲ್ಲಿಗೆ ಬಿಡುವುದಿಲ್ಲ, ಎನ್​ಸಿಇಆರ್​ಟಿಯನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ – Kannada News | Supreme Court Slams NCERT Over Judiciary Corruption Chapter: Seeks Accountability

ನವದೆಹಲಿ, ಫೆಬ್ರವರಿ 26: ಎಂಟನೇ ತರಗತಿಯ ವಿದ್ಯಾರ್ಥಿಗಳ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ಅಧ್ಯಾಯನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್(Supreme Court), ಗುರುವಾರ ಉತ್ತರದಾಯಿತ್ವವನ್ನು ಕೋರಿದೆ. ನಾವು ಆಳವಾದ ತನಿಖೆ ನಡೆಸಲು ಬಯಸುತ್ತೇವೆ. ಯಾರು ಹೊಣೆಗಾರರು ಎಂಬುದನ್ನು ನಾವು ಕಂಡುಹಿಡಿಯಬೇಕು ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದೆ.

32 ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ ಆದರೆ ಈಗ ಅವುಗಳನ್ನು ಹಿಂಪಡೆಯಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.ಅವರು ಗುಂಡು ಹಾರಿಸಿದರು ಇಂದು ನ್ಯಾಯಾಂಗ ರಕ್ತಸಿಕ್ತವಾಗಿದೆ ಇದನ್ನು ಇಲ್ಲಿಯೇ ಬಿಡಲು ಸಾಧ್ಯವಿಲ್ಲ ಇದು ಪಿತೂರಿಯಂತೆ ಕಾಣುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ.

ನಿನ್ನೆಯಷ್ಟೇ ಎನ್‌ಸಿಇಆರ್‌ಟಿಯ 8 ನೇ ತರಗತಿಯ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಅಧ್ಯಾಯದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ, ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮತ್ತಷ್ಟು ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ

ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನಗೊಂಡಿದ್ದಾರೆ. ನಾನು ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತೇನೆ. ಸಂಸ್ಥೆಯನ್ನು ಕೆಣಕಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದರು.
ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ಹೊಸ ಪುಸ್ತಕವು ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುತ್ತದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ.

ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಎತ್ತಿ ತೋರಿಸುತ್ತದೆ.

ಹೊಸ ಪುಸ್ತಕವು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿಅಂಶಗಳನ್ನು ಸಹ ಒದಗಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಏತನ್ಮಧ್ಯೆ, ಭಾರತದ ಹೈಕೋರ್ಟ್‌ಗಳಲ್ಲಿ ಸುಮಾರು 6,240,000 ಪ್ರಕರಣಗಳು ಬಾಕಿ ಉಳಿದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:02 pm, Thu, 26 February 26

Source link

ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳೇನು? ಇಲ್ಲಿದೆ ಮಾಹಿತಿ – Kannada News | Karnataka Job Recruitment: Government Faces Hurdles in Filling 2.84 Lakh Vacant Posts

ಖಾಲಿ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರದ ಮುಂದಿವೆ ಹಲವು ಸವಾಲುImage Credit source: Google

ಬೆಂಗಳೂರು, ಫೆಬ್ರವರಿ 26: ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್​​ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇಮಕಾತಿ ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಶೀಘ್ರ ನಡೆಸುವ ಭರವಸೆ ಕೊಟ್ಟಿದ್ದಾರೆ. ಕಾಂಗ್ರೆಸ್​​ ನೇತೃತ್ವದ ಸರ್ಕಾರದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 2.5 ವರ್ಷಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ವಿವಿಧ ಇಲಾಖೆಗಳಲ್ಲಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಹುದ್ದೆಗಳು ಖಾಲಿಯಾಗಿವೆ ಎಂದು ಅವರು ಆರೋಪಿಸಿದ್ದರು. ಅವರ ಈ ಹೇಳಿಕೆ ರಾಜಕೀಯ ಕಚ್ಚಾಟಕ್ಕೂ ಕಾರಣವಾಗಿತ್ತು. ಅಸಲಿಗೆ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸರ್ಕಾರದ ಮುಂದೀಗ ಸಾಲು ಸವಾಲುಗಳಿವೆ.

ಸರ್ಕಾರದ ಮುಂದಿರುವ ಸವಾಲುಗಳೇನು?

43 ಇಲಾಖೆಗಳಲ್ಲಿ ಸುಮಾರು 2.84 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ ಇದ್ದರೆ, ನಿಗಮ ಮತ್ತು ಮಂಡಳಿಗಳನ್ನು ಸೇರಿಸಿದರೆ ಇವುಗಳ ಸಂಖ್ಯೆ 4 ಲಕ್ಷಕ್ಕೂ ಹೆಚ್ಚು. ಆದರೆ ಇವುಗಳ ಭರ್ತಿಗೆ ಅನೇಕ ತೊಡಕುಗಳು ಸರ್ಕಾರಕ್ಕೆ ಇವೆ. ಪರಿಶಿಷ್ಟ ಜಾತಿ ಆಂತರಿಕ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಒಳ ಮೀಸಲಾತಿ ಬಿಲ್ ಪಾಸ್ ಮಾಡಿದ್ರೂ ರಾಜ್ಯಪಾಲರಿಂದ ಒಪ್ಪಿಗೆ ಸಿಕ್ಕಿಲ್ಲ. ಕೆಲ ಅಂಶಗಳ ಕುರಿತು ಸ್ಪಷ್ಟನೆ ಕೋರಿ ಅವರು ವಾಪಸ್ ಕಳುಹಿಸಿದ್ದಾರೆ. ಇದರಿಂದ ಒಳ ಮೀಸಲಾತಿ ಇತ್ಯರ್ಥವಾಗದೆ ನೇಮಕಾತಿ ಮಾಡುವುದು ಸವಾಲಾಗಾಗಿದೆ. PSI ಹಗರಣದಂತಹ ದೊಡ್ಡ ಅಕ್ರಮ ವ್ಯವಸ್ಥೆ ಮೇಲಿನ ನಂಬಿಕೆ ಕುಗ್ಗಿಸಿರುವ ಜೊತೆಗೆ ಗ್ಯಾರಂಟಿ ಯೋಜನೆ ಅನುಷ್ಠಾನದ ನಡುವೆ ನೇಮಕಾತಿಯಿಂದ ಉಂಟಾಗುವ ವೇತನದ ಹೊರೆ ಭರಿಸುವ ತಲೆಬಿಸಿಯೂ ಎದುರಾಗಲಿದೆ. ಕೊವಿಡ್​ನಿಂದ ನೇಮಕಾತಿ ವಿಳಂಬ ಕಾರಣ ವಯೋಮಿತಿ‌ ಮೀರಿರುವ ಕಾರಣ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿಯನ್ನ ಸರ್ಕಾರ ಸಡಿಲಿಕೆ ಮಾಡಿದ್ದರೂ ನೇಮಕಾತಿ ವಿಚಾರದಲ್ಲಿನ ಸಮಸ್ಯೆಗಳು ಬಗೆಹರಿದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಸಿಎಂ ಸ್ಪಂದನೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ ಸಿದ್ದರಾಮಯ್ಯ

ಹೋರಾಟ ನಡೆಸಿದವರಿಗೆ ಶಾಕ್​​?

ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಹಿನ್ನೆಲೆ ವಿದ್ಯಾರ್ಥಿ ಸಂಘಟನೆ ಮುಖಂಡರ ಮೇಲೆ ಕೇಸು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರೊಟೆಸ್ಟ್​​ ಹಿನ್ನೆಲೆ ಧಾರವಾಡದ ಜುಬಿಲಿ ವೃತ್ತದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೆ ಪ್ರತಿಭಟನಾ ಮೆರವಣಿಗೆ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ. ಕೆಲ ಯುವಕರು ಪೊಲೀಸರ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಸಂಘಟನೆ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವೀರ ಕಂಬಳ’ ಸಿನಿಮಾನಲ್ಲಿ ವೀರೇಂದ್ರ ಹೆಗ್ಗಡೆ ನಟನೆ: ಬೆದರಿಕೆ ಕರೆಗಳು ಬಂದಿದ್ದವು ಎಂದ ನಿರ್ದೇಶಕ ಬಾಬು – Kannada News | Director said he got threat calls because Veerendra Heggade acted in his movie

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಕಂಬಳ ಕ್ರೀಡೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಆದಿತ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ನಟಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಕ್ಲೈಮ್ಯಾಕ್ಸ್​​ನಲ್ಲಿ ಸಂದೇಶ ನೀಡುವ ಪಾತ್ರವೊಂದು ಬೇಕಾಗಿತ್ತು, ಆ ಪಾತ್ರ ಬಹಳ ಘನವಾದ ಪಾತ್ರ ಆಗಿರಬೇಕಿತ್ತು, ನನಗೆ ಹೆಗ್ಗಡೆ ಅವರು ಚಿಕ್ಕದ್ದಿನಿಂದ ಪರಿಚಯ, ಒಟ್ಟಿಗೆ ಕ್ರಿಕೆಟ್ ಆಡಿದ್ದೆವು, ಹಾಗಾಗಿ ನಾನು ಕೇಳಿದೆ ಅವರೂ ಸಹ ಒಪ್ಪಿಕೊಂಡರು. ಆದರೆ ಕೆಲ ತಿಂಗಳ ಹಿಂದೆ ಕೆಲವರು ಕರೆ ಮಾಡಿ, ಹೆಗ್ಗಡೆ ಅವರು ನಟಿಸಿರುವ ಸೀನ್ ಅನ್ನು ತೆಗೆದು ಹಾಕಬೇಕು ಎಂದು ಬೆದರಿಕೆ ಹಾಕಿದರು. ಆದರೆ ನಾನು ಯಾವುದಕ್ಕೂ ಮಣಿಯಲಿಲ್ಲ’ ಎಂದಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:44 am, Thu, 26 February 26

Source link

ಬರೋಬ್ಬರಿ 584 ರನ್​ಗಳಿಸಿದ ಜಮ್ಮು-ಕಾಶ್ಮೀರ: ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ – Kannada News | Jammu and Kashmir Hammered 584 Runs Against Karnataka in The Ranji Final

ಹುಬ್ಬಳ್ಳಿಯ ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು-ಕಾಶ್ಮೀರ ಪರ ಆರಂಭಿಕನಾಗಿ ಕಣಕ್ಕಿಳಿದ ಯಾವರ್ ಹಸನ್ 88 ರನ್ ಬಾರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭಂ ಪುಂಡಿರ್ 121 ರನ್​ ಗಳಿಸಿದ್ದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಪರಸ್ ಡೋಗ್ರಾ 70 ರನ್​ಗಳ ಇನಿಂಗ್ಸ್ ಆಡಿದರು. ಮತ್ತೊಂದೆಡೆ ಅಬ್ದುಲ್ ಸಮದ್ 61 ರನ್​ಗಳ ಕೊಡುಗೆ ನೀಡಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಕನ್ಹಯ್ಯಾ 70 ರನ್ ಬಾರಿಸಿದರೆ, ಸಾಹಿಲ್ ಲೋಟ್ರಾ 78 ರನ್​ಗಳ ಇನಿಂಗ್ಸ್ ಆಡಿದರು.

ಈ ಮೂಲಕ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್​ಗಳಿಸಿ ಆಲೌಟ್ ಆಗಿದೆ. ಕರ್ನಾಟಕ ಪರ ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣ 34.1 ಓವರ್​ಗಳಲ್ಲಿ 98 ರನ್​ ನೀಡಿ 5 ವಿಕೆಟ್ ಕಬಳಿಸಿದ್ದಾರೆ.

ಕರ್ನಾಟಕದ ಗೆಲುವಿಗೆ ಇದೊಂದೇ ದಾರಿ:

ಜಮ್ಮು-ಕಾಶ್ಮೀರದ ಇನಿಂಗ್ಸ್ ಮುಕ್ತಾಯದ ಬೆನ್ನಲ್ಲೇ ಕರ್ನಾಟಕ ತಂಡ ಮೊದಲ ಇನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ಮೂರನೇ ದಿನದಾಟ ನಡೆಯುತ್ತಿರುವುದರಿಂದ ಪ್ರಥಮ ಇನಿಂಗ್ಸ್ ಕರ್ನಾಟಕ ತಂಡಕ್ಕೆ ನಿರ್ಣಾಯಕ. ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದರೆ ಮಾತ್ರ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಗೆಲುವು ದಕ್ಕಬಹುದು.

ಅದಕ್ಕೂ ಮುನ್ನ ಕರ್ನಾಟಕ ತಂಡವು ಆಲೌಟ್ ಆದರೆ ಈ ಪಂದ್ಯವನ್ನು ಜಮ್ಮು-ಕಾಶ್ಮೀರ ಡ್ರಾನಲ್ಲಿ ಅಂತ್ಯಗೊಳಿಸಲಿದೆ. ಏಕೆಂದರೆ ರಣಜಿ ಟೂರ್ನಿಯ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

ಹೀಗಾಗಿ ಕರ್ನಾಟಕ ತಂಡವು ಮೂರನೇ ಮತ್ತು ನಾಲ್ಕನೇ ದಿನದಾಟಗಳಲ್ಲಿ ಬ್ಯಾಟಿಂಗ್ ಕಾಯ್ದುಕೊಳ್ಳುವ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸಲೇಬೇಕು. ಏಕೆಂದರೆ ಮೂರನೇ ದಿನದಾಟದಲ್ಲಿ ಮೊದಲ ಇನಿಂಗ್ಸ್ ಶುರುವಾಗಿರುವ ಕಾರಣ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು.

ಹೀಗಾಗಿ ಕರ್ನಾಟಕ ತಂಡವು ಇನ್ನೆರಡು ದಿನದಾಟಗಳ ಕಾಲ ಬ್ಯಾಟಿಂಗ್ ಮುಂದುವರೆಸುವ ಮೂಲಕ 585 ರನ್​ಗಳಿಸುವುದು ಅನಿವಾರ್ಯ. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟಕ್ಕೇರಬಹುದು. ಇಲ್ಲದಿದ್ದರೆ ಜಮ್ಮು-ಕಾಶ್ಮೀರ ತಂಡವು ಶತಾಯಗತಾಯ ಈ ಮ್ಯಾಚ್​ ಅನ್ನು ಡ್ರಾನಲ್ಲಿ ಅಂತ್ಯಗೊಳಿಸಲು ಪ್ರಯತ್ನಿಸಲಿದೆ.

ಜಮ್ಮು ಮತ್ತು ಕಾಶ್ಮೀರ ಪ್ಲೇಯಿಂಗ್ XI: ಕಮ್ರಾನ್ ಇಕ್ಬಾಲ್, ಯಾವರ್ ಹಸನ್, ಶುಭಂ ಪುಂಡೀರ್, ಪರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್), ಅಬಿದ್ ಮುಷ್ತಾಕ್, ಆಖಿಬ್ ನಬಿ ದಾರ್, ಯುದ್ವೀರ್ ಸಿಂಗ್ ಚರಕ್, ಸಾಹಿಲ್ ಲೋತ್ರಾ, ಸುನೀಲ್ ಕುಮಾರ್.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಬ್ರಿಯಾನ್ ಬೆನ್ನೆಟ್

ಕರ್ನಾಟಕ ಪ್ಲೇಯಿಂಗ್ XI: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ (ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.

Source link

ಸರ್ಕಾರಿ ಹುದ್ದೆಗಳ ಭರ್ತಿಗೆ ಬಿಜೆಪಿ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಫೋಟೊಗೆ ಕೋಕ್, ಶುರುವಾಯ್ತು ರಾಜಕೀಯ ಚರ್ಚೆ – Kannada News | Dharwad BJP Protest Over Vacant Government Posts Sparks Row as BY Vijayendra’s Photo Missing from Banners

ಧಾರವಾಡ, ಫೆಬ್ರವರಿ 26: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗಾಗಿ ಫೆಬ್ರವರಿ 24ರಂದು ಧಾರವಾಡದಲ್ಲಿ (Dharwad) ಬಿಜೆಪಿ (BJP) ಆಯೋಜಿಸಿದ್ದ ಪ್ರತಿಭಟನೆ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಉದ್ಯೋಗಾಕಾಂಕ್ಷಿಗಳ ಪರವಾಗಿ ಕರೆ ನೀಡಿದ್ದ ಈ ಹೋರಾಟ ಶ್ರೀನಗರ ವೃತ್ತದಿಂದ ಜಯನಗರ ಮಾರ್ಗವಾಗಿ ಮಿಚಗಿನ್ ಕಂಪೌಂಡ್‌ ವರೆಗೆ ಜಾಥಾ ರೂಪದಲ್ಲಿ ನಡೆದಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಫೋಟೊಗಳೇ ಇರಲಿಲ್ಲ ಎಂಬುದು ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಬ್ಯಾನರ್‌ಗಳ ಮೇಲ್ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು.

ಬ್ಯಾನರ್​​ಗಳ ಕೆಳಭಾಗದಲ್ಲಿ ಎಡಗಡೆ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಚಿತ್ರಗಳನ್ನು ಬಳಸಲಾಗಿತ್ತು. ಆದರೆ ಯಾವುದೇ ಬ್ಯಾನರ್‌ನಲ್ಲೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರ ಕಾಣಿಸದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದ ಅಧಿಕೃತ ಹೋರಾಟದ ಬ್ಯಾನರ್‌ಗಳಲ್ಲಿ ರಾಜ್ಯಾಧ್ಯಕ್ಷರ ಚಿತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಸಕ ಅರವಿಂದ ಬೆಲ್ಲದ ಉದ್ದೇಶಪೂರ್ವಕವಾಗಿಯೇ ವಿಜಯೇಂದ್ರ ಫೋಟೊ ಕೈಬಿಟ್ಟಿದ್ದಾರೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ 

ಈ ಘಟನೆ ಬಿಜೆಪಿ ಒಳಜಗಳವನ್ನು ಬಿಂಬಿಸುತ್ತಿದೆಯಾ? ಅಥವಾ ಸ್ಥಳೀಯ ಮಟ್ಟದ ಆಯೋಜನಾ ನಿರ್ಲಕ್ಷ್ಯವೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು? – Kannada News | British borrowed Rs 35,000 from Indian businessman in 1917, now that family wants money back

ಭೋಪಾಲ್, ಫೆಬ್ರುವರಿ 26: ಮೊದಲ ವಿಶ್ವ ಮಹಾಯುದ್ಧದ (World War I) ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬ್ರಿಟಿಷ್ ಸರ್ಕಾರಕ್ಕೆ ಭಾರತೀಯ ಉದ್ಯಮಿಯೊಬ್ಬರು ಕೊಟ್ಟಿದ್ದ 35,000 ರೂ ಸಾಲದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮಧ್ಯಪ್ರದೇಶದ ಸೀಹೋರ್​ನ (Sehore, Madhya Pradesh) ಈ ಕುಟುಂಬವು 35,000 ರೂ ಸಾಲವನ್ನು ವಾಪಸ್ ಕೇಳಲು ಕಾನೂನು ಮಾರ್ಗಗಳನ್ನು ಅವಲೋಕಿಸುತ್ತಿದ್ದಾರೆ.

1917ರಲ್ಲಿ ಸೇಠ್ ಜುಮ್ಮಾ ಲಾಲ್ ರುದಿಯಾ (Seth Jumma Lal Ruthia) ಅವರು ಸ್ಥಳೀಯ ಬ್ರಿಟಿಷ್ ಆಡಳಿತಕ್ಕೆ 35,000 ರೂ ಹಣವನ್ನು ಸಾಲವಾಗಿ ನೀಡಿದ್ದರು. ಈ ಅವರ ಮೊಮ್ಮಗ ವಿವೇಕ್ ರುದಿಯಾ (Vivek Ruthia) ಅವರು ಆ ಸಾಲವನ್ನು ಮರುಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಲೀಗಲ್ ನೋಟೀಸ್ ಕಳುಹಿಸಲು ಸಜ್ಜಾಗಿದ್ದಾರೆ.

1917, ಮೊದಲ ವಿಶ್ವ ಮಹಾಯುದ್ಧದ ಕಾಲ. ಯುದ್ಧದ ವೆಚ್ಚ ಭರಿಸಲು ಬ್ರಿಟಿಷ್ ಸರ್ಕಾರವು ಸಾಲಪತ್ರಗಳನ್ನು (Debt instruments) ಮಾರುತ್ತಿತ್ತು. ಆಗ ಸಾಲಕ್ಕೆ ಶೇ. 5.5 ಬಡ್ಡಿ ನಿಗದಿಯಾಗಿತ್ತು. ಸೇಠ್ ರಾಮಕಿಶನ್ ಜಸ್​ಕರಣ್ ರುದಿಯಾ ಎನ್ನುವ ಹೆಸರಿನ ಆಗಿನ ಪ್ರಖ್ಯಾತ ಕಂಪನಿ ಮಾಲೀಕರಾಗಿದ್ದ ಸೇಠ್ ಜುಮ್ಮಾ ಲಾಲ್ ಅವರು 1917ರ ಜೂನ್ 4ರಂದು 35,000 ರೂ ಸಾಲ ಕೊಟ್ಟಿರುವುದರ ದಾಖಲೆ ಇದೆ. ಜುಮ್ಮಾ ಲಾಲ್ ನಿಧನರಾದ ಬಳಿಕ ಅವರ ಕುಟುಂಬಸ್ಥರಿಗೆ ಈ ದಾಖಲೆ ಸಿಕ್ಕಿದೆ.

ಇದನ್ನೂ ಓದಿ: ಕ್ಯಾಷ್ ಪೆಮೆಂಟ್​ನಿಂದ ಹಿಡಿದು ವಿತ್​ಡ್ರಾಯಲ್​ವರೆಗೆ, ಆದಾಯ ತೆರಿಗೆ ಇಲಾಖೆಯ ಕಣ್ಣಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳಿವು…

ಅಂದಿನ ಕಾಲಕ್ಕೆ 35,000 ರೂ ಬಹಳ ದೊಡ್ಡ ಹಣ. ಅದನ್ನು ಹಾಗೆ ಸುಮ್ಮನೆ ಬಿಡುವುದು ಯಾಕೆ ಎಂದು ಅವರ ಕುಟುಂಬ ಸದಸ್ಯರು ಆಲೋಚಿಸಿ, ಅದನ್ನು ವಸೂಲಿ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

1917ರಲ್ಲಿ ಕೊಟ್ಟ 35,000 ರೂ ಸಾಲದ ಮೌಲ್ಯ ಈಗ ಎಷ್ಟು?

1917, ಎಂದರೆ ಸುಮಾರು 108-109 ವರ್ಷದ ಹಿಂದೆ. ಆಗ ಆ ಸಾಲಕ್ಕೆ ಶೇ. 5.5 ಬಡ್ಡಿಯಂತೆ ಲೆಕ್ಕ ಹಾಕಿದರೆ 35,000 ರೂ ಹಣ ಇವತ್ತು 10-11 ಕೋಟಿ ರೂ ಆಗಿರುತ್ತಿತ್ತು.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸೇಠ್ ಜುಮ್ಮಾ ಲಾಲ್ ದೊಡ್ಡ ಉದ್ಯಮಿಯಾಗಿದ್ದವರು…

ಭೋಪಾಲ್ ಪ್ರಾಂತ್ಯದಲ್ಲಿ ಮತ್ತು ಸೀಹೋರ್ ಭಾಗದಲ್ಲಿ ರೂದಿಯಾ ಕುಟುಂಬ ಬಹಳ ಶ್ರೀಮಂತಿಕೆ ಹೊಂದಿತ್ತು. ಅಪಾರವಾದ ಭೂಮಿ ಮತ್ತು ಉದ್ಯಮಗಳನ್ನು ಹೊಂದಿತ್ತು. ಸೇಠ್ ಜುಮ್ಮಾ ಲಾಲ್ ರೂದಿಯಾ ಅವರು ಅಂದಿನ ಕಾಲದ ದೊಡ್ಡ ಬ್ಯುಸಿನೆಸ್ ಎನಿಸಿದ್ದ ಬಟ್ಟೆ ಹಾಗೂ ಆಹಾರಧಾನ್ಯಗಳ ಪ್ರಮುಖ ವರ್ತಕರೆನಿಸಿದ್ದರು. ಹೀಗಾಗಿ, ಬ್ರಿಟಿಷ್ ಆಡಳಿತಕ್ಕೆ ಅವರು ಅಷ್ಟು ದೊಡ್ಡ ಮೊತ್ತದ ಸಾಲ ಕೊಡಲು ಸಾಧ್ಯವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಮೋದಿ ಜಾಕೆಟ್ ತೊಟ್ಟು ಪ್ರಧಾನಿ ಮೋದಿಗೆ ಸರ್​ಪ್ರೈಸ್​ ಕೊಟ್ಟ ಇಸ್ರೇಲ್ ಪ್ರಧಾನಿ ನೆತನ್ಯಾಹು – Kannada News | Netanyahu’s Modi Jacket Moment Steals Spotlight at Bilateral Dinner

ಇಸ್ರೇಲ್, ಫೆಬ್ರವರಿ 26: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತೀಯ ಉಡುಗೆ ತೊಟ್ಟು ಪ್ರಧಾನಿ ನರೇಂದ್ರ ಮೋದಿಯವರನ್ನು ಅಚ್ಚರಿಗೊಳಿಸಿರುವ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​​ಗೆ ಬುಧವಾರ ಹೋಗಿದ್ದು, ಇಂದು ಕೂಡ ಅಲ್ಲೇ ಇರಲಿದ್ದಾರೆ. ಇಸ್ರೇಲ್‌ಗೆ ಆಗಮಿಸಿದ ಮೋದಿ ಅವರು ವಿಮಾನ ಇಳಿದು ಬರುತ್ತಿದ್ದಂತೆ ನೆತನ್ಯಾಹು ನಗುನಗುತ್ತಾ ಕೈ ಹಿಡಿದು ಅಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಪತ್ನಿ ಸಾರಾ ಅವರು ಜೊತೆಗಿದ್ದು ಮೋದಿ ಅವರನ್ನು ಸ್ವಾಗತಿಸಿದ್ದರು.

ಬುಧವಾರ ಜೆರುಸಲೇಂನಲ್ಲಿ ನಡೆದ ಜಂಟಿ ಭೋಜನಕೂಟಕ್ಕೂ ಮುನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸುವ ಮೂಲಕ ಪ್ರಧಾನಿ ಮೋದಿಗೆ ಸರ್​ಪ್ರೈಸ್ ಕೊಟ್ಟಿದ್ದಾರೆ.ಇಸ್ರೇಲಿ ಪ್ರಧಾನಿ ಮೋದಿ ಜಾಕೆಟ್ ಎಂದೂ ಕರೆಯಲ್ಪಡುವ ಕಲ್ಲಿನ ಬಣ್ಣದ ನೆಹರೂ ಜಾಕೆಟ್ ಅನ್ನು ಆಯ್ಕೆ ಮಾಡಿಕೊಂಡಿದ್ದರು.

ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪ್ರತಿಕ್ರಿಯಿಸಿದ್ದು, ನಿಜಕ್ಕೂ ಅದ್ಭುತ, ಭಾರತೀಯ ಉಡುಪಿನ ಮೇಲಿನ ನಿಮ್ಮ ಒಲವು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲಿನ ನಿಮ್ಮ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿಗೆ ಜಲಾಘಾತದ ಭೀತಿ: 142 ಕೆರೆಗಳ ನೀರು ಕುಡಿಯಲು ಅಯೋಗ್ಯ ಎಂದ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ – Kannada News | Bengalurus Water Crisis Deepens: 142 Lakes Unfit for Drinking, Pollution Board Reveals

ಬೆಂಗಳೂರು, ಫೆಬ್ರವರಿ 26: ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿಗೆ ಜಲಾಘಾತದ ಭೀತಿ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ, ನಗರದ 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಈ ಕೆರೆಗಳಲ್ಲಿ 50 ಕೆರೆಗಳು ಡಿ ವರ್ಗದಲ್ಲಿದ್ದರೆ, ಉಳಿದ 92 ಕೆರೆಗಳು ಇ ವರ್ಗದಲ್ಲಿವೆ. ಇ ವರ್ಗವೆಂದರೆ ಅತ್ಯಂತ ಕಳಪೆ ಗುಣಮಟ್ಟದ ನೀರನ್ನು ಹೊಂದಿದ್ದು, ಸಂಸ್ಕರಿಸಿದ ನಂತರವೂ ಕುಡಿಯಲು ಯೋಗ್ಯವಲ್ಲ. ಮೋರಿ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಕೆರೆಗಳ ಒಡಲು ಸೇರುತ್ತಿರುವುದೇ ಈ ಕಲುಷಿತಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಅಂತರ್ಜಲ ಮಟ್ಟವೂ ಕಲುಷಿತಗೊಂಡು, ಜಲಚರಗಳ ಜೀವಕ್ಕೂ ಕುತ್ತು ಬಂದಿದೆ. ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version