ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ – Kannada News | Madras High Court upholds acquittal of Veerappan associates in Dr Rajkumar abduction case

ಕನ್ನಡದ ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್‌ನ (Veerappan) ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ (ಫೆಬ್ರವರಿ 26) ವಜಾಗೊಳಿಸಿದೆ. ಇದರೊಂದಿಗೆ, 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ (Madras High Court) ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ.

2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಇರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ಸುಮಾರು 108 ದಿನಗಳ ಕಾಲ ಅವರನ್ನು ಅರಣ್ಯದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಈ ಘಟನೆಯು ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಈ ಪ್ರಕರಣದಲ್ಲಿ ವೀರಪ್ಪನ್ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, 2004ರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ಮತ್ತೊಬ್ಬ ಆರೋಪಿ ರಮೇಶ್ ಎಂಬಾತ ಇದುವರೆಗೂ ಪತ್ತೆಯಾಗಿಲ್ಲ. ಉಳಿದ 9 ಮಂದಿಯಾದ ಗೋವಿಂದರಾಜ್, ಅಂದ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಾಲ್ಮಂದಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ವಿರುದ್ಧ ಸುದೀರ್ಘ 18 ವರ್ಷಗಳ ಕಾಲ ವಿಚಾರಣೆ ನಡೆದಿತ್ತು.

ಇದನ್ನೂ ಓದಿ: ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್

ಸುಮಾರು 10 ನ್ಯಾಯಮೂರ್ತಿಗಳು ಬದಲಾದ ಈ ಸುದೀರ್ಘ ಕಾನೂನು ಹೋರಾಟವು 2018ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಅಂದು ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪಿನಿಂದ ಅತೃಪ್ತಗೊಂಡಿದ್ದ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಐದು ವರ್ಷಗಳ ನಂತರ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಅಂತಿಮಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನ್ನಡಿಗನಿಗೆ ಡಿಚ್ಚಿ ಹೊಡೆದಿದ್ದ ಜೆಕೆ ನಾಯಕನಿಗೆ ಭಾರಿ ಮೊತ್ತದ ದಂಡ ವಿಧಿಸಿದ ಬಿಸಿಸಿಐ – Kannada News | Ranji Final Shocker: J&K Captain Paras Dogra Fined for Headbutt on Karnataka Fielder

ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Karnataka vs J&K) ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದೆ. ಒಂದೆಡೆ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ (Ranji Trophy Final) ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಪಂದ್ಯದಲ್ಲಿ ಆಟದ ನಿಯಮದ ವಿರುದ್ಧ ನಡೆದುಕೊಂಡ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದ್ದು, ಪಂದ್ಯ ಶುಲ್ಕದ ಶೇ. 50 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ.

ನಿಯಮ ಮುರಿದ ಪರಾಸ್ ಡೋಗ್ರಾ

ವಾಸ್ತವವಾಗಿ ರಣಜಿ ಫೈನಲ್ ಪಂದ್ಯದ ಎರಡನೇ ದಿನದಾಟದಂದು ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಮತ್ತು ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತೆರಳಿ, ಜೆಕೆ ನಾಯಕ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಪರಾಸ್ ಡೋಗ್ರಾ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಇದನ್ನು ಗಮನಿಸಿದ ಅಂಪೈರ್​ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಮಾತಿನ ಚಕಮಕಿ

ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್‌ನ 100 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಪ್ರಸಿದ್ಧ್ ಕೃಷ್ಣ ಎಸೆತವನ್ನು ಪರಾಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಆಡಿದರು. ಅಲ್ಲಿದ್ದ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ತಡೆಯಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಂಡರಿ ಗೆರೆ ದಾಟಿತು. ಈ ನಡುವೆ ಸಿಲ್ಲಿ ಪಾಯಿಂಟ್‌ನಲ್ಲಿ ಫಿಲ್ಡಿಂಗ್ ಮಾಡುತ್ತಿದ್ದ ಕರ್ನಾಟಕದ ಕೆವಿ ಅನೀಶ್ ಹಾಗೂ ಪರಾಸ್ ಡೋಗ್ರಾ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದೆ. ಇದೇ ವೇಳೆ ಪರಾಸ್ ಡೋಗ್ರಾ, ಅನೀಶ್ ತಲೆಗೆ ಡಿಕ್ಕಿ ಹೊಡೆದಿದ್ದಾರೆ.

Ranji Trophy Final: 1 ಶತಕ, 5 ಅರ್ಧಶತಕ; 2ನೇ ದಿನವೂ ಜೆಕೆ ತಂಡದ್ದೇ ಮೇಲುಗೈ

ಈ ಹಂತದಲ್ಲಿ, ಮಾಯಾಂಕ್ ಅಗರ್ವಾಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೆ, ಸ್ವಲ್ಪ ಸಮಯದವರೆಗೆ ವಾದ ಮುಂದುವರೆಯಿತು. ಕೊನೆಗೆ, ಅಂಪೈರ್‌ಗಳು ಮಧ್ಯಪ್ರವೇಶಿಸಿ ಡೋಗ್ರಾ ಮತ್ತು ಅನೀಶ್ ಅವರನ್ನು ಬೇರ್ಪಡಿಸಿದರು. ನಂತರ, ಪರಾಸ್ ಡೋಗ್ರಾ ಅನೀಶ್ ಕೆವಿ ಅವರ ಬಳಿ ಕ್ಷಮೆಯಾಚಿಸಲು ಪ್ರಯತ್ನಿಸಿದರು. ಆದರೆ ಬದಲಿ ಫೀಲ್ಡರ್ ಅನೀಶ್ ಕ್ಷಮೆಯಾಚನೆಯನ್ನು ಸ್ವೀಕರಿಸಲು ಆಸಕ್ತಿ ತೋರಲಿಲ್ಲ. ಅಂಪೈರ್ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ದೇವೇಗೌಡರ ಅಚ್ಚರಿಯ ಹೇಳಿಕೆ: ಜೆಡಿಎಸ್​​ ಮುಂದಿನ ನಡೆ ಏನು? – Kannada News | H.D. Deve Gowda Favors Contesting All Upcoming Elections Along with NDA

ಬೆಂಗಳೂರು, ಫೆಬ್ರವರಿ 25: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯ ಕುರಿತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಬೆಂಗಳೂರಿನಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಎನ್​ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ, ಮುಂಬರುವ ಕಾರ್ಪೊರೇಷನ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎನ್​ಡಿಎ ಜೊತೆಗೇ ಎದುರಿಸಲು ತಮ್ಮ ಪಕ್ಷಕ್ಕೆ ಆಕಾಂಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮತ್ತು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ನಡುವಿನ ನಿರ್ಧಾರವಾಗಿದ್ದು, ಅಂತಿಮ ತೀರ್ಮಾನವನ್ನು ಬಿಜೆಪಿ ತೆಗೆದುಕೊಳ್ಳಬೇಕು. ಬಿಜೆಪಿಯವರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಮತ್ತು ಯಾವ ಭಾವನೆ ವ್ಯಕ್ತಪಡಿಸುತ್ತಾರೆ ಎಂಬುದರ ಮೇಲೆ ಜೆಡಿಎಸ್ ತನ್ನ ಮುಂದಿನ ಹೆಜ್ಜೆ ಇಡಲಿದೆ. ಸಂಸತ್ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ಎನ್​ಡಿಎ ಜೊತೆಗೇ ಹೋಗೋದಾಗಿಯೂ ಅವರು ಈ ವೇಳೆ ತಿಳಿಸಿದ್ದಾರೆ.

ಕೇಂದ್ರ ನಾಯಕರೊಂದಿಗೆ ಚರ್ಚಿಸಲು ಹೆಚ್.ಡಿ.ಕುಮಾರಸ್ವಾಮಿಯವರು ದೆಹಲಿಗೆ ತೆರಳಿದ್ದಾರೆ. ಅವರು ವಾಪಸ್ ಬಂದ ನಂತರ ನಿಖಿಲ್ ಕುಮಾರಸ್ವಾಮಿ, ತಿಪ್ಪೇಸ್ವಾಮಿ, ಬಾಬು ಹಾಗೂ ಇತರ ನಾಯಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವೇಗೌಡರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಊಟ ಮಾಡಿದ ತಕ್ಷಣ ವಾಕಿಂಗ್ ಮಾಡುವುದು ಸರಿಯೋ ತಪ್ಪೋ? ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Is Walking After Eating Good or Bad?

ಅನೇಕರು ಊಟ ಮಾಡಿದ ತಕ್ಷಣ ವಾಕಿಂಗ್ ಮಾಡಲು ಹೋಗುತ್ತಾರೆ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆ ಭಾರವಾಗುವುದನ್ನು ತಡೆಯುತ್ತದೆ ಎಂಬುದು ಅವರು ನಂಬಿಕೆಯಾಗಿರುತ್ತದೆ. ಇನ್ನು ಕೆಲವರು ತೂಕವನ್ನು ನಿಯಂತ್ರಿಸಲು, ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಅಥವಾ ಆಲಸ್ಯವನ್ನು ಹೋಗಲಾಡಿಸಲು ಈ ರೀತಿ ಮಾಡುತ್ತಾರೆ. ಆಫೀಸ್ ಅಥವಾ ಮನೆಯಲ್ಲಿ ದೀರ್ಘಕಾಲ ಕುಳಿತು ಕೆಲಸ ಮಾಡುವವರು ಊಟದ ನಂತರ ಸ್ವಲ್ಪ ನಡೆಯುವುದು ಅಗತ್ಯವೆಂದು ಭಾವಿಸುತ್ತಾರೆ. ಗ್ಯಾಸ್, ಆಮ್ಲೀಯತೆ ಅಥವಾ ಮಲಬದ್ಧತೆಯನ್ನು (Constipation) ತಪ್ಪಿಸಲು ಅನೇಕರು ಈ ಅಭ್ಯಾಸವನ್ನು ಅಳವಡಿಸಿಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಜೀರ್ಣಕ್ರಿಯೆಯ ಸಾಮರ್ಥ್ಯವಿಭಿನ್ನವಾಗಿರುತ್ತದೆ ಮತ್ತು ದೇಹದ ಅಗತ್ಯತೆಗಳು ಸಹ ಬದಲಾಗಬಹುದು. ಇತ್ತೀಚಿನ ದಿನಗಳಲ್ಲಿ, ಈ ಫಿಟ್ನೆಸ್ ಪ್ರವೃತ್ತಿಗಳಿಂದಾಗಿ, ಜನ ಇಂತಹ ಅಭ್ಯಾಸವನ್ನು ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಸರಿಯಾದ ಮಾಹಿತಿಯಿಲ್ಲದೆ ಯಾವುದೇ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದಲ್ಲ. ಆದ್ದರಿಂದ, ವಾಕಿಂಗ್ ಮಾಡಲು ಸರಿಯಾದ ಸಮಯ ತಿಳಿದುಕೊಳ್ಳುವುದು ಬಹಳ ಮುಖ್ಯ.

ಊಟ ಮಾಡಿದ ತಕ್ಷಣ ನಡೆಯುವುದು ಸರಿಯೋ ತಪ್ಪೋ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಊಟ ಮಾಡಿದ ತಕ್ಷಣ ಚುರುಕಾದ ನಡಿಗೆ ಸಾಮಾನ್ಯವಾಗಿ ಸೂಕ್ತವಲ್ಲ. ಊಟದ ನಂತರ, ದೇಹದಲ್ಲಿನ ಹೆಚ್ಚಿನ ರಕ್ತದ ಹರಿವು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡಲು ಜೀರ್ಣಾಂಗ ವ್ಯವಸ್ಥೆಯ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಅಂತಹ ಸಂದರ್ಭಗಳಲ್ಲಿ, ಊಟ ಮಾಡಿದ ತಕ್ಷಣ ವೇಗವಾಗಿ ನಡೆಯುವುದು ಅಥವಾ ಭಾರೀ ಚಟುವಟಿಕೆಯಲ್ಲಿ ತೊಡಗುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಕೆಲವರಿಗೆ ಹೊಟ್ಟೆ ನೋವು, ಭಾರ ಅಥವಾ ಆಮ್ಲೀಯತೆ ಉಂಟಾಗಬಹುದು. ಆದರೆ ಕೆಲವು ನಿಮಿಷ ನಿಧಾನವಾಗಿ ನಡೆಯುವುದು ಹಾನಿಕಾರಕವಲ್ಲ. ಅದರಲ್ಲಿಯೂ ಊಟ ಮಾಡಿದ 10 ರಿಂದ 15 ನಿಮಿಷಗಳ ನಂತರ ಆರಾಮದಾಯಕ ನಿಧಾನ ನಡಿಗೆ ಮಾಡುವುದು ಬಹಳ ಉತ್ತಮ.

ಇದನ್ನೂ ಓದಿ: ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ?

ಎಷ್ಟು ಹೊತ್ತು ನಡೆಯಬೇಕು?

ಊಟದ ನಂತರ 10 ರಿಂದ 20 ನಿಮಿಷಗಳ ಕಾಲ ಲಘು ನಡಿಗೆ ಮಾಡಿ. ತುಂಬಾ ವೇಗವಾಗಿ ಅಥವಾ ದೂರ ನಡೆಯುವ ಅಗತ್ಯವಿಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರದಂತೆ ನಿಧಾನವಾಗಿ ನಡೆಯುವುದು ಉತ್ತಮ. ಊಟ ಭಾರವಾಗಿದ್ದರೆ, ಮೊದಲ 10- 15 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ ಮತ್ತು ನಂತರ ನಿಧಾನಗತಿಯಲ್ಲಿ ನಡೆಯಿರಿ. ನಿಯಮಿತ ಮತ್ತು ಸಮತೋಲಿತ ದೈನಂದಿನ ನಡಿಗೆ ಹೆಚ್ಚು ಪ್ರಯೋಜನಕಾರಿ.

ಊಟದ ನಂತರ ನಡೆಯುವುದರಿಂದಾಗುವ ಪ್ರಯೋಜನಗಳು:

ಸಾಮಾನ್ಯವಾಗಿ ಊಟದ ನಂತರ ಲಘುವಾಗಿ ನಡೆಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಗ್ಯಾಸ್ ಅಥವಾ ಉಬ್ಬುವುದು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ನಿಧಾನ ವೇಗದಲ್ಲಿ ನಡೆಯುವುದರಿಂದ ದೇಹವು ಸಕ್ರಿಯವಾಗಿರುತ್ತದೆ ಮತ್ತು ಸೋಮಾರಿತನ ಕಡಿಮೆಯಾಗುತ್ತದೆ. ನಿಯಮಿತ ಅಭ್ಯಾಸದಿಂದ, ಇದು ತೂಕವನ್ನು ನಿಯಂತ್ರಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ 28 ವರ್ಷದ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಸಾಮೂಹಿಕ ಅತ್ಯಾಚಾರ – Kannada News | 28 Year Old Woman gangraped infront of lover Made To Transfer Rs 10000 In Assam

ಗುವಾಹಟಿ, ಫೆಬ್ರವರಿ 25: ಅಸ್ಸಾಂನ (Assam) ಸಿಲ್ಚಾರ್ ಬೈಪಾಸ್‌ನಲ್ಲಿ ರಾತ್ರಿ ತನ್ನ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ 28 ವರ್ಷದ ಯುವತಿಗೆ ಆ ರಾತ್ರಿ ದುಃಸ್ವಪ್ನವಾಗಿ ಮಾರ್ಪಟ್ಟಿತು. ಆಕೆಯ ಜೊತೆ ನಿಶ್ಚಿತಾರ್ಥವಾದ ಹುಡುಗನ ಮುಂದೆ ಯುವಕರ ಗುಂಪೊಂದು ಆಕೆಯನ್ನು ಕಾರಿನಿಂದ ಹೊರಗೆ ಎಳೆದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಅಲ್ಲದೆ, 10,000 ರೂ. ಹಣ ನೀಡುವಂತೆ ಆಕೆಯನ್ನು ಒತ್ತಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಯುವತಿಯ ಹೇಳಿಕೆಯ ಪ್ರಕಾರ, ಈ ಘಟನೆ ಫೆಬ್ರವರಿ 19ರ ರಾತ್ರಿ ನಡೆದಿದೆ. ಆಕೆ ಮತ್ತು ಆಕೆಯ ಭಾವಿ ಪತಿ ಸಿಲ್ಚಾರ್‌ನ ರಾಮನಗರ ಬೈಪಾಸ್ ರಸ್ತೆಯ ಮೂಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ. 7 ಜನರು ಒಬ್ಬರಾದ ನಂತರ ಒಬ್ಬರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ 10,000 ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಡ್ರಗ್ಸ್, ಅತ್ಯಾಚಾರ, ಮತಾಂತರ; ಭೋಪಾಲ್​​ನ ಅಕ್ಕ-ತಂಗಿಯರ ಲೈಂಗಿಕ ಜಾಲ ಪತ್ತೆ

ಪೊಲೀಸರ ಪ್ರಕಾರ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಕೆಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ. ಸಾವಿರಾರು ಸ್ಥಳೀಯರು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ಸೇರಿದಂತೆ ರಾಜಕೀಯ ನಾಯಕರು ಸಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು – Kannada News | Child Rights Commission Files Complaint Against Godman Mallikarjuna Mutya After Viral Video

ಮಲ್ಲಿಕಾರ್ಜುನ ಮುತ್ಯಾImage Credit source: Tv9 Kannada

ಯಾದಗಿರಿ, ಫೆಬ್ರವರಿ 25: ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಹಿನ್ನೆಲೆ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್​ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಪೊಲೀಸ್​​ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ಆಯೊಗದ ಅಧ್ಯಕ್ಷ ಶಶಿಧರ್ ಕೋಸುಂಬೆ ತಿಳಿಸಿದ್ದಾರೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ಅಪ್ರಾಪ್ತ ಬಾಲಕಿಯೋರ್ವಳ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು ಸೇರಿದಂತೆ ಆಕೆಗೆ ಚಿವುಟುವದರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಕ್ಲಿಪ್​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದೇ ತಡ ಮುತ್ಯಾ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಅಭಿಪ್ರಾಯಗಳು ಕೇಳಿಬಂದಿದ್ದವು. ಆ ಬೆನ್ನಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ.

ಇದನ್ನೂ ಓದಿ: ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ; ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ಗೆ ಶಾಕ್​​ ಕೊಟ್ಟ ಖಾಕಿ

ಯಾರೀ ಮಲ್ಲಿಕಾರ್ಜುನ ಮುತ್ಯಾ?

ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಮಹೆಲ್ ಗ್ರಾಮದಲ್ಲಿ ವಾಸವಿರುವ 26 ವರ್ಷ ಆಸುಪಾಸಿನ ಈ ವ್ಯಕ್ತಿ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಉತ್ತರ ಕರ್ನಾಟಕದ ಅನೇಕ ಭಕ್ತರು ಇವರನ್ನು ಅಪ್ಪಾಜಿ ಅಥವಾ ನಡೆದಾಡುವ ದೇವರು ಎಂದು ನಂಬಿ ಗೌರವಿಸುತ್ತಾರೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮುತ್ಯಾ, ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ. ಸ್ವಯಂ ಘೋಷಿತ ಈ ದೇವಮಾನವನ ವಿಡಿಯೋಗಳು ಆಗಾಗ ವೈರಲ್​​ ಆಗುತ್ತಲೇ ಇರುತ್ತವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:32 pm, Wed, 25 February 26

Source link

ಅಪ್ಪುಗೆ, ನಗು, ತಮಾಷೆ; ಇಸ್ರೇಲ್​ ಪ್ರಧಾನಿಯಿಂದ ಮೋದಿಗೆ ಆತ್ಮೀಯ ಸ್ವಾಗತ – Kannada News | Israel PM Netanyahu warmly welcomes PM Narendra Modi in Tel Aviv

ಟೆಲ್ ಅವಿವ್, ಫೆಬ್ರವರಿ 25: ಪ್ರಧಾನಿ ಮೋದಿ (PM Modi in Israel) ಇಸ್ರೇಲ್​ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 4.15ರ ಸುಮಾರಿಗೆ ಇಸ್ರೇಲ್​ನ ಟೆಲ್ ಅವಿವ್‌ಗೆ ತಲುಪಿದ್ದಾರೆ. 6 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೇಲ್​ಗೆ ತೆರಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿದರು. ವಿಮಾನದಿಂದ ಇಳಿಯುತ್ತಿದ್ದಂತೆ ನೆತನ್ಯಾಹು ಪ್ರಧಾನಿ ಮೋದಿಯನ್ನು ಅಪ್ಪುಗೆ ಮೂಲಕ ಸ್ವಾಗತಿಸಿದರು. ಈ ವೇಳೆ ನೆತನ್ಯಾಹು ಅವರ ಪತ್ನಿ ಬೆನ್ ಗುರಿಯನ್ ಕೂಡ ಹಾಜರಿದ್ದರು.

ಇಸ್ರೇಲ್​ಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರ 2ನೇ ಭೇಟಿ ಇದಾಗಿದೆ. ಈ ಹಿಂದೆ 2017ರಲ್ಲಿ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಜೈಲಿನಿಂದ ಹೊರಬರುತ್ತಿದ್ದಂತೆಯೇ ಶಾಕಿಂಗ್ ವಿಚಾರ ಬಿಚ್ಚಿಟ್ಟ ಮ್ಯೂಸಿಕ್ ಮೈಲಾರಿ – Kannada News | Pocso case: Singer music mailari first Reaction after Released From Jail

ಬಾಗಲಕೋಟೆ, (ಫೆಬ್ರವರಿ 25): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣದಲ್ಲಿ (pocso case)  ಜೈಲು ಪಾಲಾಗಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ಗೆ (Singer music mailari )  ಜಾಮೀನು ಸಿಕ್ಕಿದೆ. 2025ರ ಡಿಸೆಂಬರ್ 17ರಂದು ಜೈಲು ಸೇರಿದ್ದ ಮ್ಯೂಸಿಕ್ ಮೈಲಾರಿ ಇಂದು (ಫೆಬ್ರವರಿ 25) ಜಾಮೀನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಟಿವಿ9ಗೆ ಪ್ರತಿಕ್ರಿಯಿಸಿರುವ ಮೈಲಾರಿ, ಡಾ ಅಂಬೇಡ್ಕರ್ ಅವರ ಸಂವಿಧಾನದೊಳಗೆ ನಾವು ಕಾನೂನಾತ್ಮಕವಾಗಿಯೇ ಹೋರಾಟ ‌ಮಾಡುತ್ತಿದ್ದೇವೆ‌. ಯಾವುದು ಸರಿ ಯಾವುದು ತಪ್ಪು ಎಂದು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ತೀರ್ಪಿಗೆ,ಕಾನೂನಿಗೆ ನಾನು ತಲೆ ಬಾಗುತ್ತೇನೆ. ಕೋರ್ಟ್ ತೀರ್ಮಾನಕ್ಕೆ ನಾನು ಬದ್ದವಾಗಿರುತ್ತೇನೆ‌ ಎಂದರು.

ಇನ್ನು ಇದೇ ವೇಳೆ ತಮ್ಮ ಆರ್ಕೆಸ್ಟ್ರಾ ಬಗ್ಗೆ ಮಾತನಾಡಿದ ಮೈಲಾರಿ, ಸದ್ಯಕ್ಕೆ ಏನು‌ ನಿರ್ಧಾರ ಇಲ್ಲ.ಪತ್ನಿಗೆ ಹೆರಿಗೆಯಾಗಿದೆ. ನನ್ನ ತಾಯಿಗೆ ಹುಷಾರಿಲ್ಲ. ಸ್ವಲ್ಪ ಮಾನಸಿಕವಾಗಿ ಬೇಸರವಾಗಿದೆ. ಹೀಗಾಗಿ ಸದ್ಯಕ್ಕೆ ಕಾರ್ಯಕ್ರಮದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲ. ಸ್ವಲ್ಪ ದಿನ ಆದ ಮೇಲೆ ನೋಡೋಣ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸ್​​ನಲ್ಲಿ ಜೈಲು ಪಾಲಾಗಿದ್ದ ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್

Source link

ವಿದ್ಯುತ್​ ಬಿಲ್ ಪಾವತಿಸದಷ್ಟು ಬಡವಾಯ್ತಾ ಬೀದರ್​​​​​​ ಬ್ರಿಮ್ಸ್ ಆಸ್ಪತ್ರೆ? ಬಾಕಿ ಮೊತ್ತ ಕೇಳಿದ್ರೆ ಶಾಕ್​​​ ಆಗ್ತೀರಾ – Kannada News | Bidar BRIMS Hospital Owes GESCOM 1.70 Cr Electricity Bill: Public Outcry

ಬೀದರ್​​, ಫೆಬ್ರವರಿ 25: ಜನಸಾಮಾನ್ಯರು ಕರೆಂಟ್ ಬಿಲ್ (Current Bill) ಕಟ್ಟುವುದು ತಡವಾದರೆ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಆದರೆ ಬೀದರ್​ನ ಬ್ರಿಮ್ಸ್ ಆಸ್ಪತ್ರೆ 1.70 ಕೋಟಿ ರೂ ಜೆಸ್ಕಾಂಗೆ ಹಣ ಕಟ್ಟಿಲ್ಲ. ಹಣ ಕಟ್ಟಿ ಅಂತಾ ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಬ್ರಿಮ್ಸ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಜೆಸ್ಕಾಂ ಇಲಾಖೆಯ ಈ ತಾರತಮ್ಯ ನೀತಿಗೆ ಗಡೀ ಜಿಲ್ಲೆಯ ಬೀದರ್​ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

1 ಕೋಟಿ 70 ಲಕ್ಷ 80 ಸಾವಿರ ರೂ ಬಿಲ್ ಬಾಕಿ

ಬೀದರ್​ನ ಪ್ರತಿಷ್ಠಿತ ಬ್ರಿಮ್ಸ್ ಆಸ್ಪತ್ರೆಯ ಕರೆಂಟ್ ಬಿಲ್ ಬಾಕಿ ಇಟ್ಟುಕೊಂಡಿರುವ ಮೊತ್ತ ಕೇಳಿದರೆ, ನೀವು ಶಾಕ್ ಆಗುವುದು ಗ್ಯಾರಂಟಿ. ಬರೋಬ್ಬರಿ 1 ಕೋಟಿ 70 ಲಕ್ಷ 80 ಸಾವಿರ ರೂ ಕರೆಂಟ್ ಬಿಲ್ ಬಾಕಿ ಇದೆ. ಸುಮಾರು 10 ವರ್ಷದಿಂದ ಕರೆಂಟ್ ಬಿಲ್ ಬಾಕಿ ಇದ್ದು, ಹಣ ಕಟ್ಟಿ ಎಂದು ಜೆಸ್ಕಾಂನವರು ನೋಟಿಸ್​ ನೀಡಿದರು ಕೂಡ ಕರೆಂಟ್ ಬಿಲ್ ಮಾತ್ರ ಕಟ್ಟುತ್ತಿಲ್ಲ.

ಇದನ್ನೂ ಓದಿ: ಫುಟ್​ಪಾತ್ ಮೇಲೆಯೇ ಟ್ರಾನ್ಸ್​ಫಾರ್ಮರ್​​ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ಇನ್ನು ಜೆಸ್ಕಾಂನವರು ಹೆಸರಿಗೆ ಮಾತ್ರ ನೋಟಿಸ್ ಕೊಟ್ಟು ನಮಗೂ ಆ ಹಣಕ್ಕೂ ಸಂಬಂಧವೇ ಇಲ್ಲದವರಂತೆ ವರ್ತನೆ ಮಾಡುತ್ತಿದ್ದಾರೆ. ಜನ ಸಾಮಾನ್ಯರು ಒಂದು ತಿಂಗಳು ಕರೆಂಟ್ ಬಿಲ್ ಕಟ್ಟದೆ ಹೋದರೆ ಅವರ ಮನೆಯ ಕರೆಂಟ್ ಕಟ್ ಮಾಡುತ್ತಾರೆ, ಆದರೆ ಒಂದು ದಶಕದಿಂದ ಬ್ರಿಮ್ಸ್, ಜೆಸ್ಕಾಂಗೆ ಕರೆಂಟ್ ಬಿಲ್ ಕಟ್ಟಿಲ್ಲ. ಹಣ ವಸೂಲಿ ಮಾಡುವಂತೆ ಅಂಬ್ರೇಷ್ ಕೆಂಚಾ ಎಂಬ ನಿವಾಸಿ ಜೆಸ್ಕಾಂಗೆ ಒತ್ತಾಯಿಸಿದ್ದಾರೆ.

ಕೋಟ್ಯಂತರ ರೂ ವಿದ್ಯುತ್‌ ಬಿಲ್‌ ಬಾಕಿ ಉಳಿದಿದ್ದು, ವಸೂಲಿಗಾಗಿ ಜೆಸ್ಕಾಂ ಸರಣಿ ನೋಟಿಸ್ ನೀಡಿದೆ. ಆದರೂ ಬಿಲ್‌ ಮೊತ್ತ ಪಾವತಿಯಾಗದಿರುವುದು ಜೆಸ್ಕಾಂ ಆಡಳಿತವನ್ನು ಹೈರಾಣಾಗಿಸಿದೆ. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಇಲ್ಲಿನ ಜನರು ಕೂಡ ಜೆಸ್ಕಾಂ ಇಲಾಖೆಯ ಇಬ್ಬಗೆ ನೀತಿಯಿಂದ ಜನರು ಆಕ್ರೋಶ ಹೊರಹಾಕುತ್ತಿದ್ದು, ಬಾಕಿ ಮೊತ್ತವನ್ನ ವಸೂಲಿ ಮಾಡಿ ಸರಕಾರದ ಬೊಕ್ಕಸವನ್ನು ತುಂಬಿಸಿ ಎಂದು ಇಲ್ಲಿನ ಜನರು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಲೋಡ್ ಶೆಡ್ಡಿಂಗ್​​ನಿಂದ ಜನತೆ ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಜೆಸ್ಕಾಂಗೆ ಬಾಕಿ ಬರಬೇಕಿರುವ ಹಣ ಪಾವತಿಯಾದರೆ ವಿದ್ಯುತ್ ಖರೀದಿಗೆ ಅನುಕೂಲವಾಗಲಿದೆ. ಈಗಲಾದರೂ ಇತ್ತ ಗಮನ ಹರಿಸಿ ಕ್ರಮಕೈಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.

ಮಾತನಾಡಲು ಅಧಿಕಾರಿಗಳು ಹಿಂದೇಟು

ಜೆಸ್ಕಾಂಗೆ ಈಗ ಬರಬೇಕಿರುವ ಹಣದಲ್ಲಿ ಸದ್ಯಕ್ಕೆ ಅರ್ಧ ಹಣ ಪಾವತಿ ಆದರೂ ಸಾಕು ಎನ್ನಲಾಗುತ್ತಿದೆ. ಇದರಿಂದ ವಿದ್ಯುತ್ ಖರೀದಿ ಮತ್ತು ಸಮರ್ಪಕ ಪೂರೈಕೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಮಾತನಾಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಬ್ರಿಮ್ಸ್ ಆಸ್ಪತ್ರೆಯಿಂದ ಬರಬೇಕಾಗಿರುವ ಲಕ್ಷಾಂತರ ರೂ ಹಣವನ್ನ ಬ್ರಿಮ್ಸ್​, ಜೆಸ್ಕಾಂಗೆ ಪಾವತಿ ಮಾಡಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ – Kannada News | Rashmika Mandanna Vijay Deverakonda haldi ceremony begins Ashika Ranganath shares photo

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ. ಬುಧವಾರ (ಫೆಬ್ರವರಿ 25) ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ.

ಕನ್ನಡ ಚಿತ್ರರಂಗದ ಕೆಲವೇ ಮಂದಿಗೆ ಮಾತ್ರ ರಶ್ಮಿಕಾ ಮಂದಣ್ಣ ಅವರು ಮದುವೆಯ ಆಹ್ವಾನ ನೀಡಿದ್ದಾರೆ. ವೃತ್ತಿಜೀವನದ ಆರಂಭದ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ಆಶಿಕಾ ರಂಗನಾಥ್ ಅವರು ಸ್ನೇಹ ಹೊಂದಿದ್ದಾರೆ. ಹಾಗಾಗಿ ಆಶಿಕಾ ರಂಗನಾಥ್ ಅವರನ್ನು ಆಹ್ವಾನಿಸಲಾಗಿದೆ. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿದ ಆಶಿಕಾ ಅವರು ಗೆಳತಿಯ ಮದುವೆಗಾಗಿ ಉದಯಪುರಕ್ಕೆ ತೆರಳಿದ್ದಾರೆ.

ಹಳದಿ ಶಾಸ್ತ್ರಕ್ಕೆ ಯಾವ ರೀತಿ ತಯಾರಿ ನಡೆದಿದೆ ಎಂಬುದನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಫೋಟೋಗಳ ಮೂಲಕ ತಿಳಿಸಿದ್ದಾರೆ. ಆಶಿಕಾ ರಂಗನಾಥ್ ಕೂಡ ತಾವು ಹಳದಿ ಶಾಸ್ತ್ರಕ್ಕೆ ಸಜ್ಜಾಗಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆ ಬಗ್ಗೆ ಕ್ಷಣಕ್ಷಣದ ಅಪ್​ಡೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ತಮ್ಮ ಮದುವೆಗೆ ಕೇವಲ 100 ಜನರಿಗೆ ಮಾತ್ರ ಅವರು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ಬುಧವಾರ (ಫೆ.25) ರಾತ್ರಿಯೇ ಹಳದಿ ಶಾಸ್ತ್ರದ ನಂತರ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳೆಲ್ಲರೂ ಹಾಡಿ, ಕುಣಿದು ಸಂಭ್ರಮಿಸಲಿದ್ದಾರೆ. ಫೆಬ್ರವರಿ 26ರಂದು ಮದುವೆ ನಡೆಯಲಿದೆ. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version