ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಯಲ್ಲಿ ಭಾಗಿ: ರಾಮ್ ಚರಣ್ ವಿರುದ್ಧ ಟೀಕೆ – Kannada News | Did Ram Charan attend party while wearing Ayyappa Mala

ಅಲ್ಲು ಅರ್ಜುನ್ (Allu Arjun) ಅವರ ಸಹೋದರ ಅಲ್ಲು ಸಿರೀಶ್ ಮದುವೆ ಆಗುತ್ತಿದ್ದಾರೆ. ಆದರೆ ಮದುವೆಗೆ ಮುನ್ನ ಪಾರ್ಟಿಗಳ ಮೇಲೆ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದಾರೆ ಅಲ್ಲು ಸಿರೀಶ್. ಇತ್ತೀಚೆಗಷ್ಟೆ ವಿದೇಶದಲ್ಲಿ ಕ್ರೂಸ್ ಒಂದರಲ್ಲಿ ಅದ್ಧೂರಿ ಪಾರ್ಟಿ ಮಾಡಿದರು. ಪಾರ್ಟಿಯಲ್ಲಿ ಅಲ್ಲು ಅರ್ಜುನ್ ಸಹ ಭಾಗವಹಿಸಿದ್ದರು. ಅದಾದ ಬಳಿಕ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ಸಹೋದರ ಅಲ್ಲು ಸಿರೀಶ್ ಅವರಿಗಾಗಿ ಪಾರ್ಟಿ ಆಯೋಜಿಸಿದ್ದರು. ಮದ್ಯ, ನೃತ್ಯ ಎಲ್ಲವೂ ಇದ್ದ ಪಾರ್ಟಿ ಇದಾಗಿತ್ತು. ಆದರೆ ಈ ಪಾರ್ಟಿಯಲ್ಲಿ ರಾಮ್ ಚರಣ್ ಭಾಗವಹಿಸಿದ್ದರು. ಅದೂ ಅಯ್ಯಪ್ಪ ಮಾಲಧಾರಿಯಾಗಿ!

ಹೌದು, ಅಲ್ಲು ಅರ್ಜುನ್, ಸಹೋದರನಿಗಾಗಿ ಆಯೋಜಿಸಿದ್ದ ಕಾಕ್​​ಟೇಲ್ ಪಾರ್ಟಿಯಲ್ಲಿ ರಾಮ್ ಚರಣ್ ಭಾಗಿ ಆಗಿದ್ದರು. ರಾಮ್ ಚರಣ್ ಪಾರ್ಟಿಯಲ್ಲಿ ಭಾಗಿ ಆಗಿರುವ ವಿಡಿಯೋವನ್ನು ಸಹ ಅಲ್ಲು ಸಿರೀಶ್ ಹಂಚಿಕೊಂಡಿದ್ದಾರೆ. ಆದರೆ ರಾಮ್ ಚರಣ್, ಅಯ್ಯಪ್ಪ ಮಾಲಧಾರಿಯಾಗಿ ಮದ್ಯದ ಪಾರ್ಟಿಯಲ್ಲಿ ಭಾಗಿ ಆಗಿದ್ದರ ಬಗ್ಗೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾಗಿಯೂ ಅಲ್ಲಿ ನಡೆದಿದ್ದೇನು ಎಂಬುದನ್ನು ಅಲ್ಲು ಸಿರೀಶ್ ವಿವರಿಸಿದ್ದಾರೆ.

ಮಾಲಧಾರಿಯಾಗಿ ರಾಮ್ ಚರಣ್ ಪಾರ್ಟಿಯಲ್ಲಿ ಭಾಗವಹಿಸಿದ ಬಗ್ಗೆ ಪ್ರಶ್ನೆಗಳು ಎದ್ದಂತೆ, ಕಮೆಂಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಲ್ಲು ಸಿರೀಶ್, ‘ಸ್ವಾಮಿಯವರು (ರಾಮ್ ಚರಣ್) ಯಾರೂ ಸಹ ಮದ್ಯವನ್ನು ಮುಟ್ಟುವ ಮೊದಲೇ ಅವರು ಬಂದು ಶುಭ ಹಾರೈಸಿ ಹೊರಟು ಬಿಟ್ಟರು’ ಎಂದಿದ್ದಾರೆ. ಆ ಮೂಲಕ ಪಾರ್ಟಿಯ ಆರಂಭದಲ್ಲೇ ಬಂದ ರಾಮ್ ಚರಣ್ ಎಲ್ಲರಿಗೂ ಶುಭ ಹಾರೈಸಿ ಹೊರಟಿದ್ದಾರೆ ಆ ಮೂಲಕ ಅವರು ಮಾಲಧಾರಿಯಾಗಿ ಯಾವುದೇ ಕೆಟ್ಟ ಚಟುವಟಿಕೆಯ ಭಾಗ ಆಗಿಲ್ಲ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ

ಅಲ್ಲು ಸಿರೀಶ್ ಅವರು ರಾಮ್ ಚರಣ್ ಅವರಿಗೆ ಸ್ವಂತ ಮಾವನ ಮಗ ಇಬ್ಬರದ್ದೂ ಬಹಳ ಹತ್ತಿರದ ಸಂಬಂಧದ ಕುಟುಂಬ. ಅಲ್ಲು ಅರ್ಜುನ್ ಮತ್ತು ಅಲ್ಲು ಸಿರೀಶ್ ಅವರ ತಂದೆ, ರಾಮ್ ಚರಣ್ ತಾಯಿಯ ಸ್ವಂತ ಸಹೋದರ. ಹಾಗಾಗಿ ಮದುವೆ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿ ಆಗುವ ಒತ್ತಡ ಇದ್ದೇ ಇದೆ. ಅಲ್ಲದೆ ರಾಮ್ ಚರಣ್ ಮತ್ತು ಅಲ್ಲು ಸಹೋದರರು ಚಿಕ್ಕಂದಿನಿಂದಲೂ ಬಹಳ ಆಪ್ತರು.

ರಾಮ್ ಚರಣ್ ಮಹಾನ್ ಅಯ್ಯಪ್ಪ ಭಕ್ತರಾಗಿದ್ದಾರೆ. ಪದೇ ಪದೇ ಅವರು ಮಾಲಧಾರಣೆ ಮಾಡುತ್ತಲೇ ಇರುತ್ತಾರೆ. ಮಾಲಧಾರಣೆ ಮಾಡಿದಾಗ ಚಪ್ಪಲಿ ಸಹ ಧರಿಸದೆ ಬಹಳ ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಸಿನಿಮಾ ಪ್ರಚಾರವಿರಲಿ ಏನೇ ಇರಲಿ ನಿಯಮಗಳನ್ನು ತಪ್ಪಿಸುವುದಿಲ್ಲ. ಅಯ್ಯಪ್ಪನ ಮಹಾನ್ ಭಕ್ತರಾಗಿರುವ ರಾಮ್ ಚರಣ್, ಮಾಲೆಗೆ ಅಪಚಾರ ಆಗುವಂತೆ ನಡೆದುಕೊಳ್ಳುತ್ತಾರೆ ಎನ್ನಲಾಗದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:45 am, Wed, 25 February 26

Source link

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ – Kannada News | Babar Azam Sets Unwanted Record in T20 World Cup 2026

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ಈ ಕಳಪೆ ಬ್ಯಾಟಿಂಗ್​ನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಬಾಬರ್ ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ಅದು ಸಹ ಅತೀ ಕಡಿಮೆ ಸ್ಟ್ರೈಕ್ ರೇಟ್​ನೊಂದಿಗೆ..!

Source link

Daily Devotional: ಮೂರು ದಾರಿಯಲ್ಲಿಟ್ಟ ನಿಂಬೆಹಣ್ಣು ದಾಟಿದ್ರೆ ಏನಾಗುತ್ತೆ ಗೊತ್ತಾ? – Kannada News | Daily Devotional: What will Happen if you cross lemon placed in a junction

ಬೆಂಗಳೂರು, ಫೆಬ್ರವರಿ​ 25: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮೂರು ದಾರಿಯಲ್ಲಿಟ್ಟ ನಿಂಬೆಹಣ್ಣು ದಾಟಿದ್ರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ, ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ ರಂಗೋಲಿ, ನಿಂಬೆಹಣ್ಣು, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ಸಣ್ಣ ಮಡಕೆಗಳು ಅಥವಾ ದೀಪಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡುವುದನ್ನು ಗಮನಿಸಿರುತ್ತೇವೆ. ಇವುಗಳ ಹಿಂದಿನ ಉದ್ದೇಶದ ಬಗ್ಗೆ ಅನೇಕರಿಗೆ ಕುತೂಹಲವಿರುತ್ತದೆ.

ಇಂತಹ ಆಚರಣೆಗಳನ್ನು ಪ್ರಮುಖವಾಗಿ ಮೂರು ಕಾರಣಗಳಿಗಾಗಿ ಮಾಡಲಾಗುತ್ತದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ. ಮೊದಲನೆಯದಾಗಿ, ದೃಷ್ಟಿ ತೆಗೆಯಲು. ಕೆಲವರು ಚೊಂಬು, ಸಗಣಿಯ ದೀಪಗಳನ್ನು ಸಹ ಇಡುತ್ತಾರೆ. ಎರಡನೆಯದಾಗಿ, ವಾಹನ ಅಪಘಾತಗಳು ನಡೆದ ಸ್ಥಳಗಳಲ್ಲಿ ಶಾಂತಿ ಮತ್ತು ಶುದ್ಧೀಕರಣಕ್ಕಾಗಿ ಪೂಜೆ ಮಾಡಲಾಗುತ್ತದೆ. ಮೂರನೆಯದಾಗಿ, ದೀರ್ಘಕಾಲದ ಕಾಯಿಲೆಗಳು, ನಿರಾಸಕ್ತಿ, ಬೇಜವಾಬ್ದಾರಿತನ, ನೆನಪಿನ ಶಕ್ತಿ ಕಡಿಮೆಯಾದಾಗ ದೇಹದಿಂದ ಋಣಾತ್ಮಕ ಮತ್ತು ದುಷ್ಟ ಶಕ್ತಿಗಳನ್ನು ಹೊರಹಾಕಲು ಈ ರೀತಿಯ ಪೂಜೆಗಳನ್ನು ಮಾಡುತ್ತಾರೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

ನಾಯಿ ಕಚ್ಚಿತ್ತು, ರೇಬಿಸ್ ಬರಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡು ಬ್ಯಾಂಕ್ ನೌಕರ – Kannada News | Rabies Fear Suicide: Kalyan Bank Employee Dies After Dog Bite Prevention and Facts

ಕಲ್ಯಾಣ್, ಫೆಬ್ರವರಿ 25: ನಾಯಿ ಕಚ್ಚಿದ್ದಕ್ಕೆ ರೇಬಿಸ್(Rabies) ಬರಬಹುದೆಂದು ಹೆದರಿ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​​ನಲ್ಲಿ ನಡೆದಿದೆ. ಮೃತರನ್ನು 30 ವರ್ಷದ ಆಯುಷ್ ವಿಶ್ವನಾಥ್ ಅಮೀನ್. ಕಲ್ಯಾಣ್ ಪೂರ್ವದ ಟಿಸ್ಗಾಂವ್ ನಾಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವರು ಸಹಜೀವನ್ ಸೊಸೈಟಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಅವರು ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕಿನ ಥಾಣೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ಹಿಂದೆ ಟಿಸ್ಗಾಂವ್ ನಾಕಾ ಪ್ರದೇಶದಲ್ಲಿ ಅಮೀನ್ ಅವರ ಕಾಲಿಗೆ ಬೀದಿ ನಾಯಿ ಕಚ್ಚಿತ್ತು, ಘಟನೆಯ ನಂತರ ಅವರು ಕೇವಲ ಒಂದು ರೇಬಿಸ್ ನಿರೋಧಕ ಇಂಜೆಕ್ಷನ್ ತೆಗೆದುಕೊಂಡಿದ್ದರು.ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕುಟುಂಬ ಸದಸ್ಯರು ಗಮನಿಸಿದ್ದರು. ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳದಿಂದ ಒಂದು ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಅವರು ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿರುವ ಬಗ್ಗೆ ಬರೆದಿದ್ದರು.

ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗುರವ್ ದೃಢಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ರೇಬಿಸ್ ಖಂಡಿತವಾಗಿಯೂ ಮಾರಕ ಹೌದು, ಆದರೆ ಸರಿಯಾದ ಪಿಇಪಿ ಲಸಿಕೆ ತೆಗೆದುಕೊಳ್ಳುವ ಮೂಲಕ ಅದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಬಹುದು, ಆದ್ದರಿಂದ ಅಂತಹ ಸಂದರ್ಭಗಳಲ್ಲಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ.

ಸೋಂಕಿನ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು ಒಂದರಿಂದ ಮೂರು ತಿಂಗಳುಗಳು ತೆಗೆದುಕೊಳ್ಳಬಹುದು. ಒಮ್ಮೆ ಲಕ್ಷಣಗಳು ಕಾಣಿಸಿಕೊಂಡರೆ, ರೋಗವು ಗಂಭೀರವಾಗಬಹುದು. ಈ ರೋಗವು ಮೆದುಳು ಮತ್ತು ಬೆನ್ನುಹುರಿಯ ಮೇಲೆ ನೇರವಾಗಿ ದಾಳಿ ಮಾಡುತ್ತದೆ.

ಮತ್ತಷ್ಟು ಓದಿ: Video: ತಾನು ರಕ್ಷಿಸಿದ ನಾಯಿಯಿಂದಲೇ ಪ್ರಾಣಬಿಟ್ಟ ಕಬಡ್ಡಿ ಆಟಗಾರ ಬ್ರಿಜೇಶ್

ಈ ರೋಗದ ಪ್ರಮುಖ ಆರಂಭಿಕ ಲಕ್ಷಣಗಳೆಂದರೆ ಕಚ್ಚಿದ ಸ್ಥಳದಲ್ಲಿ ತುರಿಕೆ, ಸುಡುವಿಕೆ ಅಥವಾ ಮರಗಟ್ಟುವಿಕೆಯ ಅನುಭವ, ಸೌಮ್ಯ ಜ್ವರ ಮತ್ತು ತಲೆನೋವು ಉಂಟಾಗಬಹುದು. ಹಸಿವು ಕಡಿಮೆಯಾಗುವುದು ಅಥವಾ ಗಂಟಲು ನೋವು, ಆಯಾಸ ಮತ್ತು ಸ್ನಾಯು ನೋವುಗಳು ಸಹ ಆರಂಭಿಕ ಲಕ್ಷಣಗಳಾಗಿರಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:13 am, Wed, 25 February 26

Source link

ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು: ಒಟ್ಟೊಟ್ಟಿಗೇ ಹಲವು ಮಹತ್ವದ ಬೆಳವಣಿಗೆ! ಮಂಗಳವಾರ ಏನೇನಾಯ್ತು ಗೊತ್ತೇ? – Kannada News | Karnataka Congress Power Sharing Row Intensifies: Key Developments on KPCC Chief Post and Dalit CM Demand

ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಫೆಬ್ರವರಿ 25: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಅಧಿಕಾರ ಹಂಚಿಕೆ ಜಟಾಪಟಿ ದಿನದಿಂದ ದಿನಕ್ಕೆ ಒಂದೊಂದು ಆಯಾಮ ಪಡೆದುಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ಬಣಗಳ ನಡುವಣ ವಾಕ್ಸಮರ ಒಂದು ಕಡೆಯಾದರೆ, ಮತ್ತೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್​ದಾರೆ. ಏತನ್ಮಧ್ಯೆ, ಹೊಸದಾಗಿ ಶಾಸಕರಾದವರು ಸಚಿವ ಸ್ಥಾನಕ್ಕಾಗಿ ಹೈಕಮಾಂಡ್​​ಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಜತೆ ಮಂಗಳವಾರ ನಡೆದ ಪ್ರಮುಖ ರಾಜಕೀಯ ವಿದ್ಯಮಾನಗಳ ಲಿಸ್ಟ್ ಇಲ್ಲಿದೆ.

ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಸತೀಶ್‌ ಜಾರಕಿಹೊಳಿ ಕಣ್ಣು

ಹೈಕಮಾಂಡ್ ಮುಂದೆ ಕೆಪಿಸಿಸಿ ಪಟ್ಟಕ್ಕಾಗಿ ಸಚಿವ ಸತೀಶ್ ಜಾರಕಿಹೊಳಿ ಒತ್ತಡ ಹಾಕಿದ್ದಾರೆ. ಸೋಮವಾರ ಬೆಂಬಲಿಗ ಶಾಸಕರು, 12 ಜಿಲ್ಲಾಧ್ಯಕ್ಷರನ್ನು ದೆಹಲಿಗೆ ಕರೆದೊಯ್ದಿದ್ದ ಸತೀಶ್, ಸಿದ್ದರಾಮಯ್ಯ ನಂತರ 2ನೇ ಹಂತದ ಅಹಿಂದ ನಾಯಕರು ಬೆಳೆಯಬೇಕಿದೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನಿಸಲಿ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಣ್ಣ, ಸತೀಶ್‌ಗೆ ನಮ್ಮ ಬೆಂಬಲ ಇದೆ ಎಂದಿದ್ದಾರೆ. ಸತೀಶ್ ನಮ್ಮ ಲೀಡರ್ ಅವರಿಗೂ ಪಕ್ಷದ ಬಗ್ಗೆ ಅಪಾರ ಚಿಂತನೆ ಇದೆ ಅಂತಾ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ದಲಿತ ಸಿಎಂ ಕೂಗು

ಅತ್ತ ಸತೀಶ್ ಅಹಿಂದ ಉತ್ತರಾಧಿಕಾರಿಗೆ ಹಕ್ಕು ಮಂಡಿಸಿದರೆ, ಇತ್ತ ರಾಜ್ಯದಲ್ಲಿ ದಲಿತ ಸಿಎಂ ಕೂಗು ಜೋರಾಗಿದೆ. ದಲಿತ ಸಿಎಂ ಬಗ್ಗೆ ಚರ್ಚೆಯಾಗಲಿ ಎಂದು ಪರಮೇಶ್ವರ್ ಹೇಳಿದರೆ, ಡಿಕೆಶಿಗಿಂತ ಸಾಮರ್ಥ್ಯ ಇರುವವರು ಆಗಲಿ ಎಂದು ಉದಯ್ ಕದಲೂರು ಹೇಳಿದ್ದಾರೆ.

ದಲಿತರನ್ನು ಸಿಎಂ ಮಾಡಿ ಎಂದ ಆರ್‌ ಅಶೋಕ್‌

ನಾಯಕತ್ವ ಬದಲಾವಣೆ, ಮಂತ್ರಿ ಸ್ಥಾನಕ್ಕಾಗಿ ಶಾಸಕರ ಪತ್ರ, ದಲಿತ ಸಿಎಂ ಕೂಗಿನ ನಡುವೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ಕಿತ್ತಾಟವೂ ಮುನ್ನಲೆಗೆ ಬರುತ್ತಿದೆ. ಕಾಂಗ್ರೆಸ್‌ ಮನೆಯೊಳಗಿನ ಬೆಂಕಿಗೆ ವಿಪಕ್ಷ ನಾಯಕ ಆರ್‌.ಅಶೋಕ್ ತುಪ್ಪ ಸುರಿದಿದ್ದಾರೆ. ದಲಿತರ ಪರ ಎನ್ನುತ್ತೀರಿ, ದಲಿತರನ್ನೇ ಸಿಎಂ ಮಾಡಿ ಎಂದಿದ್ದಾರೆ.

ಹೆಚ್ಚಿದ ಡಿಸಿಎಂ ಡಿಕೆಶಿ ಬೆಂಬಲಿಗರ ಒತ್ತಡ

ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಜ್ವಾಲೆ ನಿಗಿನಿಗಿ ಎನ್ನುತ್ತಿರುವುದು ದೂರದಿಂದಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಂದೆಡೆ ಬಜೆಟ್‌ಗೂ ಮುಂಚೆಯೇ ನಾಯಕತ್ವ ವಿಚಾರ ಇತ್ಯರ್ಥ ಆಗ್ಬೇಕು ಎಂದು ಡಿಕೆಶಿ ಪಟ್ಟು ಹಿಡಿದು ಕುಳಿತಿದ್ದಾರೆ. ಮತ್ತೊಂದೆಡೆ ಮಾರ್ಚ್ 6ಕ್ಕೆ ಬಜೆಟ್ ಮಂಡಿಸಲು ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ದಲಿತಾಸ್ತ್ರ, ಅಹಿಂದಸ್ತ್ರಗಳೂ ಪ್ರಯೋಗವಾಗುತ್ತಿವೆ. ಹೀಗಾಗಿ ಡಿಕೆಶಿ ಬೆಂಬಲಿತ ಶಾಸಕರು ನೇರಾನೇರವಾಗಿ ಹೈಕಮಾಂಡ್‌ಗೆ ಡೆಡ್​ಲೈನ್ ಕೊಡುವ ಕೆಲಸ ಮಾಡುತ್ತಿದ್ದಾರೆ.

ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡೋಣ: ಪರಮೇಶ್ವರ್‌

ಒಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕನ ವಿರುದ್ಧ ನಿತ್ಯವೂ ಒಂದಿಲ್ಲ ಒಂದು ರೀತಿ ಬ್ಯಾಟ್‌ ಬೀಸುತ್ತಿದ್ದಾರೆ. ಇದರ ಮಧ್ಯೆಯೇ ಗೃಹ ಸಚಿವ ಡಾ. ಜಿ ಪರಮೇಶ್ವರ್‌, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ: ಕದಲೂರು

ನಾಯಕತ್ವ ಬದಲಾವಣೆ ಗೊಂದಲದಿಂದಾಗಿ ಸಂಪುಟ ಪುನಾರಚನೆಗೂ ಗ್ರಹಣ ಹಿಡಿದಿದೆ. ಡಜನ್‌ಗೂ ಹೆಚ್ಚು ಸಚಿವಾಕಾಂಕ್ಷಿಗಳು ಮಂತ್ರಿ ಆಗಬೇಕು ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಮೊದಲ ಬಾರಿ ಗೆದ್ದ 31 ಶಾಸಕರು ನಮ್ಮಲ್ಲಿ ಐವರಿಗೆ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಶಾಸಕ ಕದಲೂರು ಉದಯ್, ಕೆಲ ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಹೊಟ್ಟೆ ತುಂಬಿದವರಿಗೆ ಅಗತ್ಯವಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಹೊಸಬರನ್ನು ನಿರ್ಲಕ್ಷಿಸಬೇಡಿ: ರವಿ ಗಣಿಗ

ಇತ್ತ ಶಾಸಕ ರವಿ ಗಣಿಗ ನಾನೂ ಪತ್ರಕ್ಕೆ ಸಹಿ ಹಾಕಿದ್ದೇನೆ. ಹೊಸದಾಗಿ ಗೆದ್ದಿದ್ದೇವೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಬೇಡಿ. ಪ್ರತಿಭಾವಂತರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

‘ಮೊದಲ ಬಾರಿಗ ಗೆದ್ದವರೆಲ್ಲರೂ ಅರ್ಹರೇ’

ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ನೀಡಬೇಕು ಎಂಬ ಕೂಗಿಗೆ ಮಧುಗಿರಿ ಕಾಂಗ್ರೆಸ್ ಶಾಸಕ ಕೆಎನ್‌ ರಾಜಣ್ಣ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಅತ್ತ ಗೃಹ ಸಚಿವ ಪರಮೇಶ್ವರ್ ಸಹ ಗೆದ್ದವರೆಲ್ಲರೂ ಅರ್ಹರೇ ಎಂದು ಹೇಳಿದ್ದಾರೆ.

ನಾನು ಮಂತ್ರಿ ಮಂಡಲ ಮಾಡುತ್ತೇನೆ ಎಂದಿಲ್ಲ: ಡಿಕೆಶಿ

ಹೊಸ ಪೀಳಿಗೆ ಬೆಳೆಯಬೇಕು ಎಂದಿರುವ ಡಿಕೆ ಶಿವಕುಮಾರ್, ನಾನು ಮಂತ್ರಿಮಂಡಲ ಮಾಡುತ್ತೇನೆ ಎಂದು ಹೇಳಿಲ್ಲ. ಸಿಎಂ ರಚನೆ ಮಾಡುತ್ತಾರೆ. ಲಾಬಿ ಮಾಡುವವರು ಮಾಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ಸಂಖ್ಯೆ ಹೆಚ್ಚಳ: ಹೊರ ರಾಜ್ಯದ ಹಳೇ ಕಾರುಗಳಿಂದಲೇ ವಾಯುಮಾಲಿನ್ಯ! – Kannada News | Bengaluru Turning into Dumping Yard for Old Luxury Cars? Rise in Out of State Vehicles Fuels Pollution Concerns

ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನಲ್ಲಿ (Bangalore) ಹೊರ ರಾಜ್ಯದ ಕಾರುಗಳ (Cars) ಸಂಖ್ಯೆ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ (Dehli) 10 ವರ್ಷ ಹಳೆಯ ಡಿಸೇಲ್ ಕಾರು, 15 ವರ್ಷ ಹಳೆಯ ಪೆಟ್ರೋಲ್ ಕಾರಿಗೆ ನಿಷೇಧ ಹೇರಲಾಗಿದೆ. ಅಂಥಾ ಕಾರುಗಳನ್ನು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ 20 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿಯಮ ಜಾರಿಯಲ್ಲಿದೆ. ಹಾಗಾಗಿ, ಹೊರ ರಾಜ್ಯದ ಐಷಾರಾಮಿ ಕಾರುಗಳನ್ನು ಇಲ್ಲಿಗೆ ತಂದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ವಾಹನ ಸವಾರರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ದೆಹಲಿಯಲ್ಲಿ 10 ವರ್ಷ ಬಳಸಿರುವ ಬೆಲೆ ಬಾಳುವ ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು, ಜಾಗ್ವಾರ್, ಸ್ಕಾರ್ಪಿಯೋ, ಫಾರ್ಚುನರ್, ರೋಲ್ಸ್ ರಾಯ್ಸ್, ರೇಂಜ್ ರೋವರ್, ಬೆಂಟ್ಲಿ ಕಾಂಟಿನೆಂಟಲ್, ಲ್ಯಾಂಡ್ ರೋವರ್ ಡಿಸ್ಕವರಿ, ಲೆಕ್ಸಸ್, ಮಾಸೆರೋಟಿ ಲೆವಾಂಟೆ, ಮಿನಿ ಕೂಪರ್ ನಂತಹ ಐಷಾರಾಮಿ ಕಾರುಗಳಿಗೆ ಬೆಂಗಳೂರು ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ. 15 ವರ್ಷ ಬಳಸಿರುವ ನಾರ್ಮಲ್ ಕಾರುಗಳಾದ ಇನ್ನೋವಾ, ಮಾರುತಿ ಸುಜುಕಿ, ಹುಂಡೈ ಸಂಸ್ಥೆಗಳ ವಿವಿಧ ಮಾದರಿಯ ಕಾರುಗಳ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ.

ಹೊರ ರಾಜ್ಯದ ಕಾರು ಮಾರಾಟದ ಹಬ್ ಆದ ಬೆಂಗಳೂರು!

ಬೆಂಗಳೂರು ಹೊರ ರಾಜ್ಯದ ಕಾರು ಮಾರಾಟದ ಹಬ್ ಆಗಿದೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಸರ್ಕಾರ ಮತ್ತು ಸಾರಿಗೆ ಇಲಾಖೆ ಕಡಿವಾಣ ಹಾಕಬೇಕು ಎಂದು ಪರಿಸರ ತಜ್ಞರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಕೆನರಾ, HDFC ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ!

ಬೇರೆ ರಾಜ್ಯದಲ್ಲಿ ಗುಜರಿಗೆ ಹಾಕುವ ಕಾರುಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂದು, ನಗರಕ್ಕೆ ತಂದು ವಾಯುಮಾಲಿನ್ಯಕ್ಕೆ ಆಹ್ವಾನ ಕೊಡುತ್ತಿದ್ದಾರೆ. ಸಾರಿಗೆ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 25ರ ದಿನಭವಿಷ್ಯ

ಮೇಧಾ ಸೂಕ್ತದ ಶ್ರವಣ ಅಥವಾ ಪಠಣವನ್ನು ಮಾಡಿ. ಅದರಲ್ಲಿಯೂ ಪರೀಕ್ಷೆಗಳಿಗೆ, ಉದ್ಯೋಗದ ಸಲುವಾಗಿ ಇಂಟರ್ ವ್ಯೂಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾ ಇರುವವರಿಗೆ ಹೆಚ್ಚು ಅನುಕೂಲ. ಜೊತೆಗೆ ಜ್ಞಾನ- ನೆನಪಿನಶಕ್ತಿ ಅಗತ್ಯ ಇರುವವರಿಗಂತೂ ಇನ್ನೂ ಹೆಚ್ಚು ಬಲ ದೊರೆಯುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಆಲೋಚನೆ- ಚಿಂತನೆಗಳು ಸ್ಪಷ್ಟವಾಗಿ ಇರುತ್ತವೆ. ಅದೇ ರೀತಿ ಗಟ್ಟಿಯಾದ ನಿರ್ಣಯ ಸಹ ತೆಗೆದುಕೊಳ್ಳುತ್ತೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವ ಗುಣ ಮೆಚ್ಚುಗೆಗೆ ಪಾತ್ರ ಆಗುತ್ತದೆ. ನೀವು ಅಂದುಕೊಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸೂಕ್ತ ದಿನವಿದು. ಹೊಸ ಸಂಪಾದನೆ ಮಾರ್ಗೋಪಾಯ ಗೋಚರಿಸುತ್ತದೆ ಅಥವಾ ಬಾಕಿ ಬರಬೇಕಾದ ಹಣ ಲಭಿಸಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪ್ರೀತಿಯಲ್ಲಿ ಇರುವವರು ನೀವು ಮಾತನಾಡುವಾಗ ಆಯ್ಕೆ ಮಾಡಿಕೊಳ್ಳುವ ಪದಗಳ ಬಗ್ಗೆ ಗಮನ ಕೊಡಿ. ಸ್ತ್ರೀರೋಗಗಳು ಅಥವಾ ತೂಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು, ನಿಯಮಿತ ವ್ಯಾಯಾಮ ಸಹಾಯಕವಾಗುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ಸಾಹ ಮೂಡುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುವ ದಿನ ಇದಾಗಿರಲಿದೆ, ಆದರೆ ಅತಿಯಾದ ಅವಲಂಬನೆ ಬೇಡ. ಸರಳತೆ ಮತ್ತು ಸಮಾಧಾನ ಇಂದು ನಿಮ್ಮ ಶಕ್ತಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಕೆಲಸಗಳಲ್ಲಿ ಶಿಸ್ತು ಮತ್ತು ವೇಗ ಎರಡೂ ಈ ದಿನದ ಅಗತ್ಯ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದರಿಂದ ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ತೀರ್ಮಾನಗಳಿಗೆ ಸಹೋದ್ಯೋಗಿಗಳ ಬೆಂಬಲ ಇದ್ದರೂ ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವಾಗ ಅಳೆದು ತೂಗಿ ಬಳಸಿ. ಹಣಕಾಸಿನಲ್ಲಿ ಬಾಕಿ ಉಳಿದ ವಿಷಯಗಳ ಪರಿಹಾರ ಕಂಡುಬರುವುದು. ಕುಟುಂಬದ ಸದಸ್ಯರ ಜತೆ ವ್ಯವಹರಿಸುವಾಗ- ಮಾತುಕತೆಯಾಡುವಾಗ ಅತಿಯಾದ ಭಾವುಕತೆ ಬೇಡ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 25ರ ದಿನಭವಿಷ್ಯ

ಭಗವದ್ಗೀತೆಯ ಒಂದು ಅಧ್ಯಾಯವನ್ನಾದರೂ ಸಂಜೆಯ ಹೊತ್ತಿಗೆ ಓದುವುದಕ್ಕೆ ಪ್ರಯತ್ನಿಸಿ. ಅಥವಾ ಕೇಳಿಸಿಕೊಳ್ಳಿ. ಯಾರಿಗೆ ಉದ್ಯೋಗ, ದಾಂಪತ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿ ತೀವ್ರವಾದ ಒತ್ತಡ- ಗೊಂದಲ ಇದೆಯೋ ಅಂಥವರಿಗೆ ಇದರಿಂದ ಹೊರಗೆ ಬರುವ ಮಾರ್ಗ ಗೋಚರ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ದಿನ ಬಹುತೇಕ ಕೆಲಸಗಳಿಂದಲೇ ತುಂಬಿ ಹೋಗಲಿದೆ. ಜಾಣ್ಮೆಯ ಮತ್ತು ಮಿತವಾದ ಮಾತು ಗೌರವ ತರುತ್ತದೆ. ಇನ್ನು ಕೆಲವು ಕಡೆ ಮಾತನಾಡುವುದಕ್ಕಿಂತ ನಿಮ್ಮ ಕಾರ್ಯವೇ ಮುಖ್ಯವೆನ್ನಿಸುತ್ತದೆ. ಅಂದುಕೊಂಡಂತೆ ನಿಮಗೆ ಬರಬೇಕಾದ ಆದಾಯ ಬಾರದೆ ತಡವಾಗಲಿದೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ, ಅಗತ್ಯವಿರುವಷ್ಟನ್ನು ಮಾತ್ರ ಖರ್ಚು ಮಾಡಿ. ಕುಟುಂಬದಲ್ಲಿ ಹಿರಿಯರ ಸಲಹೆ ನಿಮಗೆ ಬೆಂಬಲವಾಗಿ ಇರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪ್ರೀತಿಯಲ್ಲಿ ನಂಬಿಕೆ ಅತ್ಯಂತ ಮುಖ್ಯ, ಅನುಮಾನದಿಂದ ನೆಮ್ಮದಿ ಹಾಳಾಗುತ್ತದೆ. ತಲೆನೋವು ಅಥವಾ ಮಾನಸಿಕ ದಣಿವು ಕಾಣಲಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸ್ಪಷ್ಟ ಮಾಡಿಕೊಳ್ಳಿ. ಏಕಾಗ್ರತೆ ಸಾಧಿಸುವುದಕ್ಕೆ ಹರಸಾಹಸ ಪಡುತ್ತಿದ್ದಲ್ಲಿ ಮೊದಲಿಗೆ ಮನಸ್ಸನ್ನು ನಿಯಂತ್ರಿಸಿ. ಸ್ನೇಹಿತರೊಂದಿಗೆ ಹೆಚ್ಚಾಗಿ ವಾಗ್ವಾದ ಬೇಡ, ನೀವು ಹೇಳಬೇಕಾದ ವಿಷಯಗಳನ್ನು ಸರಳವಾಗಿ ತಿಳಿಸಿ. ದೈವಸ್ಮರಣೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ನೆಮ್ಮದಿಯೂ ಸಿಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಹೊಸ ಅವಕಾಶಗಳೊಂದಿಗೆ ನಿಮಗೆ ಈ ದಿನ ಆರಂಭವಾಗಲಿದೆ. ಕೆಲಸದಲ್ಲಿ ನಿಮಗೆ ಸಿಗುವಂಥ ಅವಕಾಶಗಳು ನಿಮ್ಮ ಕೌಶಲಕ್ಕೆ ಸರಿಯಾಗಿ ಹೊಂದಾಣಿಕೆ ಆಗಲಿವೆ. ಅನಗತ್ಯವಾಗಿ ಯಾವುದರಲ್ಲಿಯೂ ತಡ ಆಗುವುದನ್ನು ತಪ್ಪಿಸಿ, ಕೆಸ್ಪಷ್ಟ ಯೋಜನೆ ಇರಿಸಿಕೊಳ್ಳಿ. ಹೊಸದಾಗಿ ಹೂಡಿಕೆ ಮಾಡುವರಿಗೆ ಜಾಗ್ರತೆ ಅಗತ್ಯ. ಇನ್ನು ಇತರರ ಬಲವಂತಕ್ಕೋ ಅಥವಾ ಒತ್ತಡಕ್ಕೋ ಹಣದ ಹೂಡಿಕೆ ಮಾಡಬೇಡಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 25ರ ದಿನಭವಿಷ್ಯ

ಧನ್ವಂತರಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯುವುದು ಉತ್ತಮ. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಧನ್ವಂತರಿಯ ಸ್ಮರಣೆ ಮಾಡಿಕೊಳ್ಳಿ. ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದರಿಂದ ನಿವಾರಣೆ ಕಾಣುವ ಮಾರ್ಗೋಪಾಯ ದೊರೆಯುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಪ್ರೀತಿಯಲ್ಲಿ ಇರುವವರು- ದಂಪತಿ ಮಧ್ಯೆ ಪರಸ್ಪರ ಗೌರವ ಹೆಚ್ಚಾಗಿ, ಸಂಬಂಧ ಗಾಢವಾಗಲಿದೆ. ಹೆಚ್ಚು ಖಾರದ ಪದಾರ್ಥಗಳ ಆಹಾರ ಸೇವನೆಯಿಂದ ದೂರ ಇರುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸಿ, ಕೋರ್ಸ್ ಗಳಿಗೆ ಸೇರುವ ಸಾಧ್ಯತೆ ಇದೆ. ಇನ್ನು ಓದಿನ ಜೊತೆಗೆ ಪಾರ್ಟ್ ಟೈಂ ಉದ್ಯೋಗ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಬಗೆಗಿನ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಆಲೋಚನೆ ಮತ್ತು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ರೀತಿ ಮೆಚ್ಚುಗೆ ಪಡೆಯುತ್ತವೆ. ಒತ್ತಡವನ್ನು ಗೆಲ್ಲಲಿದ್ದೀರಿ. ಈ ಹಿಂದೆ ನೀವು ಮಾಡಿದಂಥ ದೊಡ್ಡ ಖರ್ಚುಗಳಿಗೆ ಹೇಗೆ ಹಣ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದರೆ ಅದಕ್ಕೆ ಪರಿಹಾರ ದೊರೆಯಲಿದೆ. ನಿಮ್ಮ ಮಾತಿನಿಂದ ಕುಟುಂಬದಲ್ಲಿ ಸಾಮರಸ್ಯ, ಒಗ್ಗಟ್ಟು ತರುವಲ್ಲಿ ಯಶಸ್ಸು ಕಾಣುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪ ಉಂಟಾದಲ್ಲಿ ಮೃದುವಾದ ಮಾತುಗಳನ್ನಾಡಿ, ಅದನ್ನು ಪರಿಹರಿಸುವ ಕಡೆಗೆ ಗಮನ ನೀಡಿ. ಇನ್ನು ಪ್ರೀತಿಯಲ್ಲಿ ಇರುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಜಠರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳಬಹುದು. ನಿಯಮಿತ ಆಹಾರ ಸೇವನೆ ಮತ್ತು ವಿಶ್ರಾಂತಿಗೆ ಪ್ರಾಮುಖ್ಯ ನೀಡಿ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜತೆ ಒಳ್ಳೆಯ ಸಮಯ ಕಳೆಯುವ ಅವಕಾಶ ದೊರಕುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಬೇಕಾದುದು ಸಮಯಕ್ಕೆ ಸಿಗದು – Kannada News | Horoscope 25 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಅಪನಂಬಿಕೆಯಿಂದ ಮನಸ್ಸು ಕುಗ್ಗುವುದು. ಯಾರ ಮೇಲೂ ನಂಬಿಕೆ ಇಡುವುದು ಕಷ್ಟವಾದೀತು. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಏಕಮುಖವಾದ ನಿರ್ಧಾರದಿಂದ ಸಫಲತೆಯು ಇರದು. ಸಣ್ಣ ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿ. ಯಾರಿಂದಲೂ ಏನನ್ನೂ ಪಡೆಯುವ ಮನಸ್ಸಾಗದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು.

ವೃಷಭ ರಾಶಿ:

ಇಂದು ನಿಮ್ಮ ಕೆಲವು ನಿರೀಕ್ಷೆಯು ಹುಸಿಯಾಗಬಹುದು. ಧನಸಂಪಾದನೆಯ ಚಿಂತೆ ನಿಮಗೆ ಕಾಡಲು ಆರಂಭವಾಗಲಿದೆ. ಅಪರಿಚಿತರಿಂದ ಬಾಂಧವ್ಯ ಹುಟ್ಟಿಕೊಳ್ಳಬಹುದು. ಆಲಸ್ಯದಿಂದ ನಿಮ್ಮ ಸಾಮರ್ಥ್ಯವು ಕಡಿಮೆ ಆಗಲಿದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಸರ್ಕಾರದಿಂದ ಆಗಬೇಕಾದ ಕಾರ್ಯಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರದಿಂದ ಲಾಭವಿಲ್ಲದಿದ್ದರೂ ಅದನ್ನೇ ನಡೆಸಲು ಇಷ್ಟಪಡುವಿರಿ.

ಮಿಥುನ ರಾಶಿ:

ನೀವು ಇಂದು ಸ್ವಂತ ವಾಹನವನ್ನು ಬಾಡಿಗೆ ಕೊಡುವಿರಿ. ದೈಹಿಕ ಕಾರ್ಯವು ಅಧಿಕವಾಗಲಿದೆ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಹಣಕಾಸಿನ ವ್ಯವಸ್ಥೆಯನ್ನು ಸರಿ ಮಾಡಿಕೊಳ್ಳುವುದು ಸೂಕ್ತ. ವಾಹನ ಚಾಲನೆಯಲ್ಲಿ ಉದ್ವೇಗ ಬೇಡ. ಇರುವ ಸಾಲವನ್ನು ತೀರಿಸಿಕೊಳ್ಳಲುಬೇಕಾದ ಯೋಜನೆ ಮಾಡಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ.

ಕರ್ಕಾಟಕ ರಾಶಿ:

ಸ್ತ್ರೀಯರು ಇಂದಿನ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಗಳಿಸುವರು. ಅವಿವಾಹಿತರು ವಿವಾಹದ ಬಯಕೆಯನ್ನು ತಾಯಿಯ ಜೊತೆ ಹಂಚಿಕೊಳ್ಳುವರು. ಸಂಗಾತಿಯ ಮಾತಿಗೆ ಏನಾದರೂ ಪ್ರತಿಕ್ರಿಯೆಯನ್ನು ನೀಡಿ. ಸಿಗಬೇಕಾದ ಹಣವು ವಿಳಂಬವಾಗಿ ಸಿಗುವುದು. ಎಲ್ಲರೆದುರು ಸಭ್ಯರಂತೆ ತೋರುವಿರಿ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು.

ಸಿಂಹ ರಾಶಿ:

ಪರೋಪಕಾರವೂ ಇವತ್ತಿನ ಮುಖ್ಯ ಕಾರ್ಯಗಳಲ್ಲಿ ಒಂದಾಗಬಹುದು. ಹೊಸ ಗೃಹವನ್ನು ಖರೀದಿಸುವ ವಿಚಾರವನ್ನು ದಂಪತಿಗಳು ಚರ್ಚಿಸುವರು. ಮಾತಿನಿಂದ ನಿಮಗೆ ಆದಾಯ ಬರಬಹುದು. ಉದ್ಯೋಗಕ್ಕಾಗಿ ನೀವು ವಿದೇಶಕ್ಕೆ ತೆರಳುವ ಆಸೆ ಇರಲಿದೆ. ದೊರೆತದ್ದನ್ನು ದೊರೆತಂತೆ ಹಿಂದಿರುಗಿಸುವಿರಿ. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಏರಿಳಿತವಾಗಬಹುದು.

ಕನ್ಯಾ ರಾಶಿ:

ಹತಾಶೆಯಿಂದ ಅಧ್ಯಾತ್ಮದ ಕಡೆ ಒಲವು ಹೆಚ್ಚಬಹುದು. ಆಪ್ತರಿಂದ ನಿರೀಕ್ಷಿತ ಸಹಾಯ ಸಿಗದೇ ಬೇಸರ. ಆದರೆ ಅದನ್ನು ಹೇಳಲೂ ಭಯ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ಅಧಃಪತನದ ಬಗ್ಗೆ ಅಂದಾಜು ಸಿಗಲಿದೆ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು.

ತುಲಾ ರಾಶಿ:

ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ಮನೆಯವರಿಗೆ ಹಣವನ್ನು ನೀಡಲಾಗದೇ ಅನ್ಯರಿಗೆ ನೀಡುವಿರಿ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಾಲಿಗೆಯನ್ನು ಹರಿಬಿಡುವಾಗ ಅದು ಎಷ್ಟು ದೂರವೂ ಹೋಗಬಹುದು.

ವೃಶ್ಚಿಕ ರಾಶಿ:

ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ನಿಮ್ಮ ಸಹನೆಯ ಮಿತಿ ಮೀರುವ ಸಾಧ್ಯತೆ ಇದೆ. ಇಂದು ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವಿರಿ. ಅನಂತರ ದುಃಖಿಸಿದರೆ ಪ್ರಯೋಜನವಾಗದು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.

ಧನು ರಾಶಿ:

ಪ್ರೀತಿಯನ್ನು ನೀವು ಬಹಳ ಸೂಕ್ಷ್ಮವಾಗಿ ಮುಂದುವರಿಸಬೇಕಾಗುವುದು. ವ್ಯಾವಹಾರಿಕ ಜಾಣ್ಮೆಯನ್ನು ನೀವು ಇಟ್ಟುಕೊಂಡು ಲಾಭವನ್ನು ಪಡೆಯುವಿರಿ. ನಿಮಗೆ ವಿದ್ಯೆಯನ್ನು ನೀಡಿದವರು ಅನೇಕ ವರ್ಷಗಳ ಅನಂತರ ಸಿಗಬಹುದು. ಅತ್ಯಂತ ಸಂಭ್ರಮ ಪಡುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು.

ಮಕರ ರಾಶಿ:

ನಿಮ್ಮ ಕೆಲಸದಿಂದ ಉತ್ತಮ ಹೆಸರು ಕುಟುಂಬಕ್ಕೆ ಸಿಗುವುದು. ಕೊಟ್ಟ ಹಣವನ್ನು ಪುನಃ ಕೇಳಲು ಮುಜುಗರವಾದೀತು. ಸಹೋದರಿಗೆ ನಿಮ್ಮಂದ ಅಪೇಕ್ಷಿತ ಸಹಾಯವು ಸಿಗಲಿದೆ. ಹಳೆಯ ವಾಹನದ ಮಾರಾಟ ಮಾಡಿ ಹೊಸ ವಾಹನವನ್ನು ಖರೀದಿಸುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ. ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಮಾಡಿ. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು.

ಕುಂಭ ರಾಶಿ:

ನಿಮ್ಮೆದುರೇ ನಿಮ್ಮ ಸಹೋದರರನ್ನು ಹೊಗಳುವುದು ನಿಮಗೆ ಆಗದು. ಯಾರ ಜೊತೆಗಾದರೂ ವೈಮನಸ್ಯವಿದ್ದರೆ ಕುಳಿತು ಮಾತನಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರಬಹುದು. ನಿರಾಕರಿಸುವುದು ಉತ್ತಮ. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಸಲಹೆಯಿಂದ ನೀವು ಅಂದುಕೊಂಡ ದಾರಿಯು ಸುಗಮವಾಗುವುದು.

ಮೀನ ರಾಶಿ:

ವ್ಯಾಪಾರವು ಕೆಲವು ತಿರುವನ್ನು ಪಡೆಯಬಹುದು. ಪರರ ಮೇಲಿನ ಅನುಮಾನದಿಂದ ಸಮಯ ಹಾಳು. ಆತ್ಮೀಯರ ಬಗ್ಗೆ ಕಾಳಜಿ ಹೆಚ್ಚಿರುವುದು. ಚರಾಸ್ತಿಯ ನಷ್ಟಕ್ಕೆ ನೀವೇ ಕಾರಣವಾಗುವಿರಿ. ಕಛೇರಿಗೆ ವಿರಾಮವಿದ್ದರೂ ತುರ್ತು ಮೀಟಿಂಗ್ ಗೆ ಹಾಜಾರಾಗಬೇಕಾದೀತು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಡಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವೈಧೃತಿ, ಕರಣ : ಬವ ಸೂರ್ಯೋದಯ – 06 – 44 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:06, ಯಮಗಂಡ ಕಾಲ 08:13 – 09:41, ಗುಳಿಕ ಕಾಲ 11:09 – 12:38

-ಲೋಹಿತ ಹೆಬ್ಬಾರ್ – 8762924271 (what’s app only)

Source link

Exit mobile version