IND vs SL: ಅಭ್ಯಾಸ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ – Kannada News | India vs Sri Lanka Test Series: Practice Match Schedule Changed to 3 Days

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ. ಇದೀಗ ಈ ಅಭ್ಯಾಸ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಮೊದಲು ಟೀಂ ಇಂಡಿಯಾ ಹಾಗೂ ಶ್ರೀಲಂಕಾ ಸ್ಥಳೀಯ 11 ನಡುವೆ 4 ದಿನಗಳ ಅಭ್ಯಾಸ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಈ ಅಭ್ಯಾಸ ಪಂದ್ಯದಲ್ಲಿ ಒಂದು ದಿನವನ್ನು ಖಡಿತಗೊಳಿಸಲಾಗಿದೆ. ಅಂದರೆ ಈ ಅಭ್ಯಾಸ ಪಂದ್ಯ 4 ದಿನಗಳ ಬದಲಿಗೆ ಮೂರು ದಿನ ನಡೆಯಲಿದೆ.

ಅದರಂತೆ ಇದೀಗ ಈ ಅಭ್ಯಾಸ ಪಂದ್ಯವು ಆಗಸ್ಟ್ 7 ರಿಂದ 9 ರವರೆಗೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿರುವ SSC ಕ್ರೀಡಾಂಗಣದ ಬಳಿ ಇರುವ ಕೊಲಂಬೊದ NCC ಮೈದಾನದಲ್ಲಿ ನಡೆಯಲಿದೆ. ಈ ಪ್ರವಾಸಕ್ಕಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದ್ದು, ಈ ಸರಣಿಗಾಗಿ ಟೀಂ ಇಂಡಿಯಾ ಆಗಸ್ಟ್ 4 ರಂದು ಕೊಲಂಬೊಗೆ ತೆರಳಲಿದೆ.

4 ದಿನಗಳ ಬದಲಿಗೆ 3 ದಿನ

ತಂಡದ ಆಯ್ಕೆಯ ಸಮಯದಲ್ಲಿ ಬಿಸಿಸಿಐ ನಾಲ್ಕು ದಿನಗಳ ಅಭ್ಯಾಸ ಪಂದ್ಯದ ಬಗ್ಗೆ ಮಾಹಿತಿ ನೀಡಿತ್ತು. ಆದರೀಗ ಈ ಅಭ್ಯಾಸ ಪಂದ್ಯದಲ್ಲಾಗಿರುವ ಬದಲಾವಣೆಯ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ ಒಂದು ದಿನವನ್ನು ಕಡಿಮೆ ಮಾಡಲು ನಿಖರವಾದ ಕಾರಣ ಬಹಿರಂಗವಾಗಿಲ್ಲವಾದರೂ, ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿಯ ಮೂಲಗಳು ಈ ಬದಲಾವಣೆಯನ್ನು ದೃಢಪಡಿಸಿವೆ. ಜೂನ್‌ನಿಂದ ಭಾರತ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ, ಆದ್ದರಿಂದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ನ ಪ್ರಸ್ತುತ ಆವೃತ್ತಿಯ ಭಾಗವಾಗಿ ಆಡಲಾಗುತ್ತಿರುವ ಈ ಸರಣಿಗೆ ಮುಂಚಿತವಾಗಿ ತಯಾರಿಯ ವಿಷಯದಲ್ಲಿ ಶುಭ್​ಮನ್ ಗಿಲ್ ನೇತೃತ್ವದ ತಂಡಕ್ಕೆ ಈ ಪಂದ್ಯವು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಏನೆಂದರೆ ಈ ಅಭ್ಯಾಸ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತದೆ.

ಟೆಸ್ಟ್ ಸರಣಿಯ ವೇಳಾಪಟ್ಟಿ

  • 3 ದಿನಗಳ ಅಭ್ಯಾಸ ಪಂದ್ಯ: ಆಗಸ್ಟ್ 7 ರಿಂದ 9 (ಎನ್‌ಸಿಸಿ ಮೈದಾನ, ಕೊಲಂಬೊ)
  • ಮೊದಲ ಟೆಸ್ಟ್: ಆಗಸ್ಟ್ 15 ರಿಂದ ಆರಂಭ (ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣ)
  • ಎರಡನೇ ಟೆಸ್ಟ್: ಆಗಸ್ಟ್ 23 ರಿಂದ ಆರಂಭ (SSC ಕ್ರೀಡಾಂಗಣ, ಕೊಲಂಬೊ)

IND vs SL: ಲಂಕಾ ವಿರುದ್ಧ ಟೆಸ್ಟ್ ಸರಣಿ ಆಡ್ತಾರಾ ಬುಮ್ರಾ? ಫಿಟ್ನೆಸ್ ವರದಿಯಲ್ಲಿ ಏನಿದೆ?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಸರನ್ಶ್ ಜೈನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Sat, 1 August 26

Source link

ಭರ್ತಿಯತ್ತ ಕಬಿನಿ ಜಲಾಶಯ, 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – Kannada News | Mysore Kabini Dam Overflow: Water Release Increases Due to Heavy Wayanad Rains

ಮೈಸೂರು, ಆ.1: ನೆರೆ ರಾಜ್ಯ ಕೇರಳದ ವಯನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯವು (Kabini Reservoir) ಭರ್ತಿಯಾಗುವ ಹಂತ ತಲುಪಿದೆ. ಜಲಾಶಯದ ಭದ್ರತೆ ಹಾಗೂ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಬಿನಿ ಡ್ಯಾಂನಿಂದ ನದಿಗೆ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ನದಿಗೆ ಹರಿಸಲಾದ ಈ ನೀರು ಕಪಿಲಾ (ಕಬಿನಿ) ನದಿಯ ಮೂಲಕ ತಮಿಳುನಾಡಿಗೆ ಹರಿದು ಹೋಗಲಿದೆ. ವಯನಾಡು ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಕಬಿನಿ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪರಿಣಾಮವಾಗಿ ಹಂತ ಹಂತವಾಗಿ ಕಬಿನಿ ಡ್ಯಾಂನಿಂದ ನೀರು ಬಿಡುಗಡೆಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಕಪಿಲಾ ನದಿಯ ಎರಡೂ ದಂಡೆಗಳ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿ ನೀರು ಯಾವುದೇ ಕ್ಷಣದಲ್ಲೂ ಉಕ್ಕಿ ಹರಿಯುವ ಸಾಧ್ಯತೆಯಿರುವುದರಿಂದ ನದಿ ಪಾತ್ರದ ನಿವಾಸಿಗಳು ತಮ್ಮ ಮನೆ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾಗಿ ಮನವಿ ಮಾಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ಗಾಗಿ ರವಿ ಬಸ್ರೂರು ಪ್ಲ್ಯಾನ್; 100 ಮಂದಿಯ ಆರ್ಕೆಸ್ಟ್ರಾ ಕಣಕ್ಕಿಳಿಸಿದ ಸಂಗೀತ ನಿರ್ದೇಶಕ – Kannada News | Ravi Basrur Shares Toxic Movie Update: Composes Music with a 100 Piece Orchestra For Yash Starrer  

ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದ ಮೇಲಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿವೆ. ಚಿತ್ರತಂಡವು ದೊಡ್ಡ ಪರದೆಯ ಮೇಲೆ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲು ಬ್ಯಾಕ್-ಟು-ಬ್ಯಾಕ್ ಕೆಲಸ ಮಾಡುತ್ತಿದೆ. ಸದ್ಯ ಚಿತ್ರದ ಸಂಗೀತ ನಿರ್ದೇಶಕರಲ್ಲೊಬ್ಬರಾದ ರವಿ ಬಸ್ರೂರು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಈಗ ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಚಿತ್ರಕ್ಕಾಗಿ ಅವರು ಬೃಹತ್ ಪ್ರಮಾಣದಲ್ಲಿ ಏನನ್ನೋ ಸಿದ್ಧಪಡಿಸುತ್ತಿದ್ದಾರೆ ಎಂಬುದು ಈ ಫೋಟೋದಿಂದ ಸ್ಪಷ್ಟವಾಗಿದೆ.

100 ಜನರ ಆರ್ಕೆಸ್ಟ್ರಾ ತಂಡದೊಂದಿಗೆ ರವಿ ಬಸ್ರೂರು ಅಬ್ಬರ

ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಬೃಹತ್ ಮ್ಯೂಸಿಕ್ ಸ್ಟುಡಿಯೋದಲ್ಲಿ ತಮ್ಮ ಇಡೀ ತಂಡದೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು 100 ಜನರ ಆರ್ಕೆಸ್ಟ್ರಾ. ದೊಡ್ಡ ಪರದೆಯ ಮೇಲೆ ಗರಿಷ್ಠ ಪ್ರಭಾವ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡಲು ರವಿ ಬಸ್ರೂರು ಅವರು ಭಾರಿ ದೊಡ್ಡ ಮಟ್ಟದ ಆರ್ಕೆಸ್ಟ್ರಾ ಬಳಸುತ್ತಿದ್ದಾರೆ. ಇದು ಹಿನ್ನೆಲೆ ಸಂಗೀತಕ್ಕೋ ಅಥವಾ ಹಾಡಿಗೋ ಎಂಬ ಕುತೂಹಲ ಮೂಡಿದೆ.

‘ಟಾಕ್ಸಿಕ್’ ಚಿತ್ರದಲ್ಲಿದೆ ಒಟ್ಟು 6 ಹಾಡುಗಳು

‘ಟಾಕ್ಸಿಕ್’ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿರಲಿವೆ ಎನ್ನಲಾಗಿದೆ. ಈ ಆರು ಹಾಡುಗಳ ಪೈಕಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಒಂದು ವಿಶೇಷ ಹಾಡನ್ನು ಕಂಪೋಸ್ ಮಾಡಿದ್ದಾರೆ. ಉಳಿದಂತೆ ಚಿತ್ರದ ಬ್ಯಾಕ್‌ಗ್ರೌಂಡ್ ಸ್ಕೋರ್ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಭಾರಿ ಪ್ರಮಾಣದಲ್ಲಿ ಸದ್ದು ಮಾಡಿವೆ. ಯೂಟ್ಯೂಬ್‌ನಲ್ಲಿ ಈ ಹಾಡುಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿವೆ.

ಇದನ್ನೂ ಓದಿ: ಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್ ರಿಲೀಸ್; ಅಧಿಕೃತ ಘೋಷಣೆ ಮಾಡಿದ ಯಶ್

ಆಗಸ್ಟ್ 8ರ ಮೆಗಾ ಈವೆಂಟ್‌ಗೆ ಬೆಂಗಳೂರು ಸಜ್ಜು

ಇದೇ ಆಗಸ್ಟ್ 8 ರಂದು ‘ಟಾಕ್ಸಿಕ್’ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡವು ಯಶ್ ಅವರ ತವರು ನೆಲವಾದ ಬೆಂಗಳೂರಿನಲ್ಲೇ ಬೃಹತ್ ಈವೆಂಟ್ ಒಂದನ್ನು ಆಯೋಜಿಸಲು ಭರ್ಜರಿ ಪ್ಲ್ಯಾನ್ ಮಾಡಿದೆ. ಭಾರತೀಯ ಚಿತ್ರರಂಗದ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಟಾಮಿ ಗನ್ ಹಿಡಿದಿರುವ ಯಶ್ ಅವರ ನೆರಳಿನ ಪೋಸ್ಟರ್ ವೈರಲ್ ಆಗಿದ್ದು, ಆಗಸ್ಟ್ 8ರ ಟ್ರೇಲರ್ ಧಮಾಕಾ ನೋಡಲು ಇಡೀ ದೇಶವೇ ಕಾಯುತ್ತಿದೆ. ಚಿತ್ರವು ಆಗಸ್ಟ್ 26 ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಜಿರೆ-ಬೆಳ್ತಂಗಡಿ ಮಾರ್ಗ ಜಲಾವೃತ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ – Kannada News | Dakshina Kannada Rains Cause Netravati Flood at Dharmasthala, Roads Waterlogged

ದಕ್ಷಿಣ ಕನ್ನಡ, ಆ.1: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ತನ್ನ ಆರ್ಭಟವನ್ನು ಮುಂದುವರಿಸಿದೆ. ಈ ತೀವ್ರ ಮಳೆಯ ಪರಿಣಾಮವಾಗಿ, ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯು ಅಪಾಯಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನದಿಯು ತನ್ನ ಇಕ್ಕೆಲಗಳನ್ನು ಮೀರಿ ಪ್ರವಾಹ ಸೃಷ್ಟಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ. ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾದ ಕಾರಣ, ಧರ್ಮಸ್ಥಳದಲ್ಲಿರುವ ನೇತ್ರಾವತಿ ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಸ್ನಾನಘಟ್ಟದ ಮೆಟ್ಟಿಲುಗಳು ಸಹ ನೀರಿನ ಅಡಿಯಲ್ಲಿ ಸಿಲುಕಿದ್ದು, ಸಂಪೂರ್ಣವಾಗಿ ಕಾಣದಂತಾಗಿವೆ. ಆದಾಗ್ಯೂ, ಭಕ್ತಾದಿಗಳು ತಮ್ಮ ನಂಬಿಕೆಯನ್ನು ಅಚಲವಾಗಿ ಕಾಪಾಡಿಕೊಂಡು, ಮುಳುಗಡೆಯಾದ ಸ್ನಾನಘಟ್ಟದ ಮೆಟ್ಟಿಲುಗಳ ಬಳಿಯೇ ನೇತ್ರಾವತಿ ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದಾರೆ. ಈ ದೃಶ್ಯವು ಪ್ರವಾಹದ ನಡುವೆಯೂ ಭಕ್ತರ ಧಾರ್ಮಿಕ ಶ್ರದ್ಧೆಯನ್ನು ಎತ್ತಿ ಹಿಡಿದಿದೆ. ನೇತ್ರಾವತಿ ನದಿಯ ಪ್ರವಾಹದಿಂದಾಗಿ ಧರ್ಮಸ್ಥಳದ ಪರಿಸರದ ಜನಜೀವನಕ್ಕೂ ಅಡಚಣೆಯಾಗಿದೆ. ಧರ್ಮಸ್ಥಳದ ಮಣ್ಣಸಂಕ ಬಳಿಯ ರಸ್ತೆಯು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇದಲ್ಲದೆ, ಉಜಿರೆ ಮತ್ತು ಬೆಳ್ತಂಗಡಿ ನಡುವಿನ ಪ್ರಮುಖ ಮಾರ್ಗವಾದ ರಸ್ತೆಯೂ ಸಹ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Narendra Modi Mysuru Visit Live: ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿವೇಕಾನಂದ ಯುವ ಕೇಂದ್ರ ಲೋಕಾರ್ಪಣೆ – Kannada News | PM Modi in Mysuru: Mandakalli arrival for Viveka Smaraka inauguration LIVE

Swami Vivekananda Cultural Youth Centre Inauguration Live Streaming: ಸಾಂಸ್ಕೃತಿಕ ನಗರಿ ಮೈಸೂರಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಐತಿಹಾಸಿಕ ‘ವಿವೇಕ ಸ್ಮಾರಕ’ವನ್ನು (ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ) ಲೋಕಾರ್ಪಣೆಗೊಳಿಸುವ ಸಲುವಾಗಿ ಪ್ರಧಾನಿಯವರು ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಲೈವ್​​​ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ – Kannada News | GST collections in July cross Rs 2 lakh crore with increase of over 15pc

ನವದೆಹಲಿ, ಆಗಸ್ಟ್ 1: ಜುಲೈ ತಿಂಗಳ ಭಾರತದ ಜಿಎಸ್‌ಟಿ (GST) ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು. ಒಟ್ಟು ಜಿಎಸ್​ಟಿ ಸಂಗ್ರಹ (Gross GST) ಜುಲೈನಲ್ಲಿ ಶೇ. 15.4ರಷ್ಟು ಹೆಚ್ಚಳವಾಗಿ ₹2.11 ಲಕ್ಷ ಕೋಟಿ ದಾಟಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್​ಟಿ (Net GST) ಆದಾಯವೂ ಶೇ. 15.8ರಷ್ಟು ಏರಿಕೆಯಾಗಿ ₹1.81 ಲಕ್ಷ ಕೋಟಿ ತಲುಪಿದೆ. ಇಲ್ಲಿ ಶೇಕಡಾವಾರು ಏರಿಕೆಯು ವಾರ್ಷಿಕ ಲೆಕ್ಕಾಚಾರದಲ್ಲಿ ಇದೆ. ಅಂದರೆ, ಕಳೆದ ವರ್ಷದ ಜುಲೈನಲ್ಲಿ ಸಂಗ್ರಹಣೆ ಆಗಿದ್ದ ಜಿಎಸ್​ಟಿಗೆ ಹೋಲಿಸಿದರೆ ಈ ಜುಲೈನಲ್ಲಿ ಆಗಿರುವ ತೆರಿಗೆ ಸಂಗ್ರಹದ ಹೆಚ್ಚಳ ಇದು.

ಜುಲೈ ತಿಂಗಳಲ್ಲಿ ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಸಂಗ್ರಹವು 10.1% ಹೆಚ್ಚಿ ₹1.44 ಲಕ್ಷ ಕೋಟಿ ಆಗಿದೆ. ಆಮದು ಮಾಡಿಕೊಂಡ ಸರಕುಗಳ ಮೇಲಿನ ಜಿಎಸ್‌ಟಿ ಸಂಗ್ರಹವಂತೂ 28.8% ನಷ್ಟು ಭಾರಿ ಏರಿಕೆ ಕಂಡು ₹66,511 ಕೋಟಿಗೆ ತಲುಪಿದೆ.

ಇದನ್ನೂ ಓದಿ: ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ

ಪ್ರಮುಖ ರಾಜ್ಯಗಳ ಜಿಎಸ್‌ಟಿ ವೃದ್ಧಿ ದರ

ದೇಶದ ಪ್ರಮುಖ ರಾಜ್ಯಗಳಲ್ಲಿ ಹರಿಯಾಣ ಅತ್ಯಂತ ವೇಗದ ಬೆಳವಣಿಗೆ ಕಂಡರೆ, ಮಹಾರಾಷ್ಟ್ರ ಮತ್ತು ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿವೆ:

  1. ಮಹಾರಾಷ್ಟ್ರ: ₹32,210 ಕೋಟಿ (13% ಹೆಚ್ಚಳ)
  2. ಕರ್ನಾಟಕ: ₹13,854 ಕೋಟಿ (12% ಹೆಚ್ಚಳ)
  3. ಗುಜರಾತ್: ₹12,923 ಕೋಟಿ (19% ಹೆಚ್ಚಳ)
  4. ಹರಿಯಾಣ: ₹11,892 ಕೋಟಿ (25% ಹೆಚ್ಚಳ)
  5. ಉತ್ತರ ಪ್ರದೇಶ: ₹9,651 ಕೋಟಿ (15% ಹೆಚ್ಚಳ)
  6. ದೆಹಲಿ: ₹6,460 ಕೋಟಿ (8% ಹೆಚ್ಚಳ)

ಹಿನ್ನಡೆ ಕಂಡ ರಾಜ್ಯಗಳು: ಹಿಮಾಚಲ ಪ್ರದೇಶ (-22%), ಉತ್ತರಾಖಂಡ್ (-18%), ಆಂಧ್ರಪ್ರದೇಶ (-5%) ಮತ್ತು ತಮಿಳುನಾಡು (-1%) ರಾಜ್ಯಗಳು ಜಿಎಸ್‌ಟಿ ಸಂಗ್ರಹಣೆಯಲ್ಲಿ ಹಿಂದಿನ ವರ್ಷದಕ್ಕಿಂತ ಇಳಿಕೆ ದಾಖಲಿಸಿವೆ.

ಇದನ್ನೂ ಓದಿ: ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ

ಪ್ರಸಕ್ತ ಹಣಕಾಸು ವರ್ಷದ ಒಟ್ಟು ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ (April – July) ಒಟ್ಟು ಜಿಎಸ್‌ಟಿ ಸಂಗ್ರಹ 10.1% ಹೆಚ್ಚಾಗಿ ₹8.42 ಲಕ್ಷ ಕೋಟಿ ತಲುಪಿದೆ. ನಿವ್ವಳ ಜಿಎಸ್‌ಟಿ ಸಂಗ್ರಹ 9.2% ಹೆಚ್ಚಾಗಿ ₹7.21 ಲಕ್ಷ ಕೋಟಿ ತಲುಪಿದೆ.

ದೇಶೀಯ ಬೇಡಿಕೆ ಉತ್ತಮವಾಗಿರುವುದು ಮತ್ತು ಆಮದು ಚಟುವಟಿಕೆಗಳು ಚುರುಕಾಗಿರುವುದು ಈ ಭಾರಿ ಜಿಎಸ್‌ಟಿ ಸಂಗ್ರಹಣೆಗೆ ಪ್ರಮುಖ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಡಗಿನಲ್ಲಿ ಭಾರೀ‌ ಮಳೆ: ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಭಾಗಶಃ ಕುಸಿತ – Kannada News | Kodagu Heavy Rain: House Ready for Housewarming Ceremony Partially Collapses

ಕೊಡಗು, ಆಗಸ್ಟ್​​ 01: ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಮಡಿಕೇರಿ ನಗರದ ಎಫ್‌ಎಂಸಿ ಕಾಲೇಜಿನ ಹಿಂಭಾಗದಲ್ಲಿರುವ ಖಾಸಗಿ ಲೇಔಟ್‌ನಲ್ಲಿ ನಿವೃತ್ತ ಎಎಸ್​ಐ ಬಿದ್ದಪ್ಪ ಅವರಿಗೆ ಸೇರಿದ ನಿರ್ಮಾಣ ಹಂತದ ಮನೆಯೊಂದು ಭಾಗಶಃ ಕುಸಿದುಬಿದ್ದಿದೆ. ಮನೆಯ ತಡೆಗೋಡೆ ಕುಸಿದಿದ್ದು, ಇಡೀ ಮನೆಗೆ ಅಪಾಯ ಎದುರಾಗಿದೆ. ಗೃಹಪ್ರವೇಶಕ್ಕೆ ಇನ್ನೆರಡು ತಿಂಗಳು ಬಾಕಿ ಇರುವಾಗಲೇ ದುರಂತರ ಸಂಭವಿಸಿದ್ದು, ಕನಸಿನ ಮನೆ ಕುಸಿದು ಹೋಗಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಕೆಳಭಾಗದ ಮಣ್ಣು ಕುಸಿಯಲಾರಂಭಿಸಿದೆ. ಸ್ಥಳೀಯರು ಮಣ್ಣು ಕುಸಿಯುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ಮೂರರಿಂದ ನಾಲ್ಕು ಅಡಿಯ ಬೃಹತ್ ತಡೆಗೋಡೆ ಕೂಡ ಮಣ್ಣಿನ ಒತ್ತಡಕ್ಕೆ ಕುಸಿದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ವಾರ ಒಟಿಟಿಗೆ ಬಂದಿವೆ ಸೂಪರ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

Source link

Video: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ – Kannada News | Chief Minister D.K. Shivakumar Offers Special Puja at Mysores Chamundi Temple

ಮೈಸೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕವಾಗಿ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಕಲ ಜನರ ಅಭಿವೃದ್ಧಿ, ಸಮೃದ್ಧಿ ಹಾಗೂ ತಮ್ಮ ಸಾರ್ವಜನಿಕ ಜೀವನದ ಯಶಸ್ಸಿಗಾಗಿ ಪ್ರಾರ್ಥಿಸಿದರು. ದೇಗುಲದ ಆಡಳಿತ ಮಂಡಳಿಯಿಂದ ಗೌರವ ಹಾಗೂ ಆತ್ಮೀಯ ಸ್ವಾಗತವನ್ನು ಸ್ವೀಕರಿಸಿದ ಸಿಎಂ, ದೇವಿಯ ಚರಣಗಳಿಗೆ ನಮಿಸಿ ಆಯುಷ್ಯ, ಕೀರ್ತಿ ಮತ್ತು ನಾಡಿಗೆ ಸಕಲ ಸೌಭಾಗ್ಯಗಳು ಲಭಿಸಲೆಂದು ಮಹಾಮಂಗಳಾರತಿಯಲ್ಲಿ ಭಾಗಿಯಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಹರೀಶ್ ಗೌಡ, ಅನಿಲ್ ಚಿಕ್ಕಮಾದು ಹಾಗೂ ರವಿಶಂಕರ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Asian Legends League 2026: ಬಾಂಗ್ಲಾ ಟೈಗರ್ಸ್ ಮಣಿಸಿ ಶುಭಾರಂಭ ಮಾಡಿದ ಇಂಡಿಯಾ ರಾಯಲ್ಸ್ – Kannada News | Naman Ojha Leads India Royals to Victory in Asian Legends League Opener vs Bangladesh

ಜಾಂಬಿಯಾದಲ್ಲಿ ನಡೆಯುತ್ತಿರುವ 2026 ರ ಏಷ್ಯನ್ ಲೆಜೆಂಡ್ಸ್ ಲೀಗ್​ನ ಮೊದಲ ಪಂದ್ಯದಲ್ಲಿ ಇಂಡಿಯಾ ರಾಯಲ್ಸ್ ತಂಡವು ಬಾಂಗ್ಲಾದೇಶ ಟೈಗರ್ಸ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಇಂಡಿಯಾ ರಾಯಲ್ಸ್ ಪರ ದಿಗ್ಗಜ ಕ್ರಿಕೆಟಿಗರಾದ ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಹರ್ಭಜನ್ ಸಿಂಗ್ ಯಾರೂ ಭಾಗವಹಿಸುತ್ತಿಲ್ಲ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಮನ್ ಓಜಾ ತಂಡದ ನಾಯಕತ್ವ ವಹಿಸಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಡಿಯಾ ರಾಯಲ್ಸ್ ತಂಡ 135 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಟೈಗರ್ಸ್ 116 ರನ್ ಕಲೆಹಾಕಲಷ್ಟೇ ಶಕ್ತವಾಗಿ 19 ರನ್​ಗಳಿಂದ ಸೋಲೊಪ್ಪಿಕೊಂಡಿತು.

135 ರನ್​ಗಳ ಅಲ್ಪ ಗುರಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ರಾಯಲ್ಸ್ ತಂಡದ ನಾಯಕ ನಮನ್ ಓಜಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರ್ಧಾರವನ್ನು ಬ್ಯಾಟರ್​ಗಳು ಸಮರ್ಥಿಸಿಕೊಳ್ಳಲಿಲ್ಲ. ಸ್ವತಃ ನಾಯಕ ನಮನ್ ಕೂಡ 8 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ ಔಟಾದರು. ಅವರ ನಂತರ ಅಭಿಷೇಕ್ ಜಲೋಟಾ 26 ರನ್ ಮತ್ತು ಅಸದ್ ಪಠಾಣ್ 22 ರನ್ ಗಳಿಸಿದರು. ಅಂತಿಮವಾಗಿ, ಸರುಲ್ ಕನ್ವರ್ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ಇಂಡಿಯಾ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 135 ರನ್​ಗಳ ಅಲ್ಪ ಗುರಿ ನೀಡಿತು.

19 ರನ್​ಗಳಿಂದ ಸೋತ ಬಾಂಗ್ಲಾ

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಟೈಗರ್ಸ್ ತಂಡಕ್ಕೆ ಇಂಡಿಯಾ ರಾಯಲ್ಸ್ ತಂಡದ ವೇಗಿಗಳು ಮುಕ್ತವಾಗಿ ಬ್ಯಾಟ್ ಬೀಸಲು ಅವಕಾಶ ನೀಡಲಿಲ್ಲ. ಆದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ ಅಲೋಕ್ ಕಪಾಲಿ 59 ರನ್ ಮತ್ತು ಮುಕ್ತಾರ್ ಅಲಿ 23 ರನ್​ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಇತ್ತ ಇಂಡಿಯಾ ರಾಯಲ್ಸ್ ಪರ ಶದಾಬ್ ಜಕಾತಿ ನಾಲ್ಕು ಓವರ್‌ಗಳಲ್ಲಿ 25 ರನ್‌ಗಳನ್ನು ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಅವರ ಜೊತೆಗೆ ಅನುರೀತ್ ಸಿಂಗ್ ಕೂಡ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್‌ಗಳನ್ನು ಬಿಟ್ಟುಕೊಟ್ಟು ಎರಡು ವಿಕೆಟ್‌ಗಳನ್ನು ಪಡೆದರು. ಅಭಿಷೇಕ್ ಜಲೋಟಾ ಕೂಡ ಮೂರು ಓವರ್‌ಗಳಲ್ಲಿ 11 ರನ್‌ ನೀಡಿ ಒಂದು ವಿಕೆಟ್ ಪಡೆದರು. ಅಂತಿಮವಾಗಿ ಬಾಂಗ್ಲಾದೇಶ ಟೈಗರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 116 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪಾಯಿಂಟ್ ಪಟ್ಟಿಯಲ್ಲಿ ಪಾಕ್​ಗೆ ಕೊನೆಯ ಸ್ಥಾನ

ಈ ಗೆಲುವಿನೊಂದಿಗೆ ಇಂಡಿಯಾ ರಾಯಲ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದರೆ, ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಪ್ಯಾಂಥರ್ಸ್ ತಂಡವನ್ನು ಸೋಲಿಸಿದ ಏಷ್ಯನ್ ಸ್ಟಾರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮ್ಮ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಪಠಾಣ್ಸ್ ವಿರುದ್ಧ ಜಯಗಳಿಸಿ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಲಯನ್ಸ್ ತಂಡವು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಪಾಕಿಸ್ತಾನ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version