Headlines

‘ಭುವಿ’ ಭವಿಷ್ಯದ ಬಗ್ಗೆ ಅಗರ್ಕರ್ ನಿಲುವೇನು? ಅಶ್ವಿನ್ ಪ್ರಶ್ನೆ! – Kannada News | Bhuvi’s Future in Limbo: Ashwin Questions Chief Selector Ajit Agarkar

2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿರುವ ಬೆನ್ನಲ್ಲೇ, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಅಂತರರಾಷ್ಟ್ರೀಯ ಭವಿಷ್ಯದ ಕುರಿತು ದೊಡ್ಡ ಚರ್ಚೆ ಮುಂಚೂಣಿಗೆ ಬಂದಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಭುವನೇಶ್ವರ್ ಕುಮಾರ್ ಅವರೊಂದಿಗೆ ತಕ್ಷಣವೇ ‘ಸ್ಪಷ್ಟ ಸಂವಹನ’ ನಡೆಸಬೇಕು ಎಂದು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒತ್ತಾಯಿಸಿದ್ದಾರೆ. ಮೊಹಮ್ಮದ್ ಶಮಿ ಅವರ ಪುನರಾಗಮನದ ಚರ್ಚೆಗಳ ನಡುವೆಯೇ, ಅಶ್ವಿನ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ….

Read More

ವಿಜಯನಗರಂನಲ್ಲಿ ಜಿಎಂಆರ್ ನಿರ್ಮಾಣದ ಹೊಸ ಗ್ರೀನ್​ಫೀಲ್ಡ್ ಏರ್ಪೋರ್ಟ್ ಉದ್ಘಾಟಿಸಿದ ಪಿಎಂ ಮೋದಿ – Kannada News | Narendra Modi inaugurates new greenfield ASR Airport at Vizianagaram in Andhra Pradesh

ವಿಜಯನಗರಂನಲ್ಲಿ ಭೋಗಪುರಂ ಏರ್ಪೋರ್ಟ್ ಉದ್ಘಾಟಿಸಿದ ನರೇಂದ್ರ ಮೋದಿImage Credit source: PTI ವಿಜಯನಗರಂ, ಆಗಸ್ಟ್ 1: ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಅಲ್ಲುರಿ ಸೀತಾರಾಮ ರಾಜು (ASR) ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ವನ್ನು ಉದ್ಘಾಟಿಸಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ…

Read More

Jyotirlinga Darshan: ಜ್ಯೋತಿರ್ಲಿಂಗ ದರ್ಶನದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾಗುವುದೇಕೆ? ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣ ಇಲ್ಲಿದೆ – Kannada News | Why Do You Feel Tired After Jyotirlinga Darshan? Spiritual and Scientific Reasons Explained

ಜ್ಯೋತಿರ್ಲಿಂಗ ದರ್ಶನದ ನಂತರ ಆರೋಗ್ಯದಲ್ಲಿ ವ್ಯತ್ಯಾಸImage Credit source: triptotemples ಸನಾತನ ಧರ್ಮದಲ್ಲಿ 12 ಜ್ಯೋತಿರ್ಲಿಂಗಗಳಿಗೆ ಅತ್ಯಂತ ಪವಿತ್ರ ಹಾಗೂ ವಿಶೇಷ ಮಹತ್ವವಿದೆ. ಇದೇ ಕಾರಣಕ್ಕಾಗಿ ವರ್ಷವಿಡೀ ಭಕ್ತರು ಮಧ್ಯಪ್ರದೇಶದ ಓಂಕಾರೇಶ್ವರ, ಆಂಧ್ರಪ್ರದೇಶದ ಮಲ್ಲಿಕಾರ್ಜುನ, ಮಹಾರಾಷ್ಟ್ರದ ತ್ರ್ಯಂಬಕೇಶ್ವರ, ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಹಾಗೂ ಉಜ್ಜಯಿನಿಯ ಮಹಾಕಾಳೇಶ್ವರದಂತಹ ಪ್ರಸಿದ್ದ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಉತ್ಸವದಿಂದ ಆಗಮಿಸುತ್ತಾರೆ. ಆದರೆ, ಅನೇಕ ಭಕ್ತರಿಗೆ ದರ್ಶನದ ನಂತರ ಇದ್ದಕ್ಕಿದ್ದಂತೆ ದೇಹ ಭಾರವಾಗುವುದು, ತೀವ್ರ ಆಯಾಸ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಾದ ಅನುಭವವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿಯೂ…

Read More

ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಡಿಕೆ – Kannada News | Dinesh Karthik’s picks India’s squad for the World Cup 2027

ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಜಂಟಿಯಾಗಿ ಆಯೋಜನೆಯಾಗಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಹೇಗಿರಬೇಕೆಂದು ತಿಳಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್. ಆರ್‌ಸಿಬಿ ತಂಡದ ಮೆಂಟರ್ ಡಿಕೆ ಮುಂಬರುವ ವಿಶ್ವಕಪ್​ಗೆ 15 ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ… ಆರಂಭಿಕ ಆಟಗಾರರು: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ…

Read More

ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ ಎಂ.ಕೆ. ಪ್ರಾಣೇಶ್: ರಾಜೀನಾಮೆ ಘೋಷಣೆ, ಗಾಯತ್ರಿ ಶಾಂತೇಗೌಡಗೆ ಶುಭಾಶಯ! – Kannada News | Gayathri Shantegowda Wins MLC Dispute: MK Pranesh Resigns Respecting High Court Order

ಹೈಕೋರ್ಟ್ ಆದೇಶಕ್ಕೆ ತಲೆಬಾಗಿದ ಎಂ.ಕೆ. ಪ್ರಾಣೇಶ್ ಚಿಕ್ಕಮಗಳೂರು, ಆಗಸ್ಟ್ 01: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಹೈಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ತಿಳಿಸಿರುವ ಅವರು, ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ಮೂಲಕ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ‘ಅಧಿಕಾರ ಹೋದರೂ ನಿಮ್ಮೊಂದಿಗಿರುವೆ’: ಪ್ರಾಣೇಶ್ ಭಾವನಾತ್ಮಕ ಪತ್ರ…

Read More

Mercury Transit: ಬುಧನ ಸಂಚಾರ; ಆ.09 ರಿಂದ ಈ 4 ರಾಶಿಗಳಿಗೆ ಸುವರ್ಣ ಕಾಲ, ಸಾಲು ಸಾಲು ಅದೃಷ್ಟ! – Kannada News | Mercury Transit August 2026: Direct Movement to Bring Financial Gains for 4 Zodiac Signs

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಧಿಪತಿ ಹಾಗೂ ಬುದ್ಧಿಮತ್ತೆಯ ಕಾರಕನಾದ ಬುಧ ಗ್ರಹದ ಚಲನೆ ಅಥವಾ ದಿಕ್ಕಿನ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆಗಸ್ಟ್ ತಿಂಗಳಿನಲ್ಲಿ ಬುಧನು ತನ್ನ ಸಾಮಾನ್ಯ ಮಾರ್ಗವನ್ನು ಬದಲಾಯಿಸಿ ಉತ್ತರದ ಕಡೆಗೆ ಕ್ರಾಂತಿ ಮಾಡಲಿದ್ದಾನೆ. ಆಗಸ್ಟ್ 9ರ ಭಾನುವಾರ ರಾತ್ರಿ 10:40 ಕ್ಕೆ ಬುಧನ ಈ ದಿಕ್ಕಿನ ಬದಲಾವಣೆ ಸಂಭವಿಸಲಿದೆ. ಬುಧನ ಚಲನೆಯಲ್ಲಿನ ಈ ಬದಲಾವಣೆಯಿಂದಾಗಿ ವಿಶೇಷವಾಗಿ 4 ರಾಶಿಯವರ ಮಾತಿನಲ್ಲಿ ಮಾಧುರ್ಯ ಹೆಚ್ಚಾಗಲಿದ್ದು,…

Read More

ಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್ ರಿಲೀಸ್; ಅಧಿಕೃತ ಘೋಷಣೆ ಮಾಡಿದ ಯಶ್ – Kannada News | Toxic Trailer Release Date Announced: Yash Starrer to Unveil  Trailer  on August 8 in Bengaluru

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ (Toxic Movie) ದೊಡ್ಡ ಅಪ್ಡೇಟ್‌ಗಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿತ್ತು. ಈಗ ಆ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡವು ಯಶ್ ಅವರ ಖಡಕ್ ಲುಕ್ ಇರುವ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ರಾಕಿ ಭಾಯ್ ಅಭಿಮಾನಿಗಳಲ್ಲಿ ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿನಲ್ಲೇ ಟ್ರೇಲರ್ ರಿಲೀಸ್ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್…

Read More

Cauvery Water Dispute: ‘ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ, ಆದರೆ ಡ್ಯಾಂ ತುಂಬುವ ಹಂತದಲ್ಲಿದೆ’ ಎಂದ ಡಿ.ಕೆ ಶಿವಕುಮಾರ್ – Kannada News | Dams Reaching Full Capacity, Water Discharge Inevitable: DCM DK Shivakumar on Cauvery Water Dispute

ಬೆಂಗಳೂರು, ಆಗಸ್ಟ್ 01:  ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆಯ ಕಾವು ಏರುತ್ತಿರುವಾಗಲೇ, ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.  ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್, ನಾವು ಇನ್ನು ತಮಿಳುನಾಡಿಗೆ ಪ್ರತ್ಯೇಕವಾಗಿ ನೀರು ಹರಿಸಿಲ್ಲ. ಡ್ಯಾಂ ಸಂಪೂರ್ಣವಾಗಿ ತುಂಬುವ ಹಂತಕ್ಕೆ ತಲುಪಿದೆ. ಡ್ಯಾಂ ಭರ್ತಿಯಾದರೆ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹರಿಬಿಡುವುದು ಅನಿವಾರ್ಯವಾಗುತ್ತದೆ. ನೀರು ಜಲಾಶಯದ ಸಾಮರ್ಥ್ಯ ಮೀರಿ ಹರಿಯುವಾಗ ಅದನ್ನು ತಡೆದು ಹಿಡಿದಿಟ್ಟುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್‌ಗೆ ಹೋಗಲು…

Read More

ಕಾವೇರಿ ವಿವಾದದ ನಡುವೆಯೇ ಗುಡ್ ನ್ಯೂಸ್: ಏಕಾಏಕಿ ಹೆಚ್ಚಿದ ಒಳಹರಿವು, ಭರ್ತಿಯಾಗುವ ಹಂತದಲ್ಲಿ ಕಬಿನಿ ಜಲಾಶಯ – Kannada News | Kabini Dam Water Inflow Rises Amid Cauvery Water Dispute; Flood Warning Issued

ಮೈಸೂರು, ಆಗಸ್ಟ್ 1: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದ (Cauvery Water Dispute) ಮುಂದುವರಿದಿರುವ ನಡುವೆಯೇ, ಮೈಸೂರು (Mysuru) ಭಾಗದಿಂದ ಕೊಂಚ ನೆಮ್ಮದಿಯ ಸುದ್ದಿಯೊಂದು ಬಂದಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಏಕಾಏಕಿ ಹೆಚ್ಚಾಗಿದೆ. ಸದ್ಯ ಕಬಿನಿ ಜಲಾಶಯ (Kabini Dam) ಭರ್ತಿಯಾಗುವ ಹಂತ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ಮಾಹಿತಿ ಪ್ರಕಾರ, ಆಗಸ್ಟ್ 1ರಂದು…

Read More

ಷೇರು ಮಾರುಕಟ್ಟೆಯ ಟ್ರೇಡಿಂಗ್ ಸಮಯದಲ್ಲಿ ಸಣ್ಣ ಪುಟ್ಟ ಬದಲಾವಣೆ; ಇಲ್ಲಿದೆ ಹೊಸ ವೇಳಾಪಟ್ಟಿ – Kannada News | Stock market trading timings change from 2026 August 1st, here the details

ನವದೆಹಲಿ, ಆಗಸ್ಟ್ 1: ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ SEBI ಮತ್ತು NSE ಆಗಸ್ಟ್ 3, ಸೋಮವಾರದಿಂದ ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವಿಭಾಗದ ಷೇರುಗಳಿಗೆ ಹೊಸ ವಹಿವಾಟು ಸಮಯ ಹಾಗೂ ಕ್ಲೋಸಿಂಗ್ ಆಕ್ಷನ್ ಸೆಷನ್ (CAS) ಸಿಸ್ಟಂ ಅನ್ನು ಜಾರಿಗೆ ತರುತ್ತಿವೆ. ಈ ಹೊಸ ನಿಯಮದ ಪ್ರಕಾರ, ಮಾರುಕಟ್ಟೆಗೆ (Stock Market) ಒಂದೇ ಮುಕ್ತಾಯ ಸಮಯ ಇರುವುದಿಲ್ಲ. ರೆಗ್ಯುಲರ್ ಟ್ರೇಡಿಂಗ್ ಸಮಯದಲ್ಲಿ ಬದಲಾವಣೆ ಇಲ್ಲ. ಡಿರೈವೇಟಿವ್ಸ್, ಫ್ಯೂಚರ್ಸ್, ಆಪ್ಷನ್ಸ್ ಟ್ರೇಡಿಂಗ್ ಮತ್ತಿತರ ವಿವಿಧ ವಿಭಾಗಗಳಿಗೆ ಬೇರೆ…

Read More